ಬಿಜಿ ಬೆಂಗಳೂರು ಮತ್ತು ಗಾಲ್ಪ್ ಕ್ಲಬ್

Sharada in Chinaಈಟಿವಿ ಬಿಟ್ಟ ಮೇಲೆ ಮನಸ್ಸಿಗೆ ಸಾಕಷ್ಟು ಹಗುರ ಎನಿಸಿತ್ತು.. ಇನ್ನು ಮುಂದೆ ನಮ್ಮ ಜೀವನವನ್ನು ಹಾಯಾಗಿ ಕಳೆಯಬಹುದು. ಯಾವುದೇ ಒತ್ತಡವಿಲ್ಲದ ಬದುಕು.

ಈ ಬೈಟ್ ಯಾಕೆ ಮಿಸ್ ಆಯ್ತು …ಆ ಸ್ಟೋರಿ ಯಾಕೆ ನಮಗೆ ಸಿಗಲಿಲ್ಲ..ಇವ್ಯಾವುದರ ರಗಳೆಯೇ ಇಲ್ಲ. ರಾತ್ರಿ ಹನ್ನೊಂದು ಘಂಟೆಯ ನಂತರ ಆ ಕಡೆಗೆ ಕ್ಯಾಮರಾಮೆನ್ ಕಳುಹಿಸು ಈ ಕಡೆಗೆ ರಿಪೋರ್ಟರ್ ಕಳುಹಿಸು ಎನ್ನೋ ತಲೆನೋವಿಲ್ಲ.

ರೆಸ್ಟ್ ಅಂತೂ ಬೇಕೆ ಬೇಕು ಎಂದು ನಾನು ಮತ್ತು ಚಂದ್ರೇಗೌಡರಿಬ್ಬರೂ ತೀರ್ಮಾನಿಸಿದ್ವಿ. ಬೇರೆಯವರಿಗಾಗಿ ನಮ್ಮ ಅಮೂಲ್ಯ ಸಮಯವನ್ನು ಕಳೆದುಕೊಳ್ಳುವ, ಹಗಲು ರಾತ್ರಿ ದುಡಿಯುವ ಅವಶ್ಯಕತೆ ಇರಲಿಲ್ಲ. ಆದರೂ ಇಷ್ಟು ವರ್ಷ ಪತ್ರಿಕೋದ್ಯಮದ ಬಗೆಗಿರುವ ಒಲವು ನಮ್ಮಿಬ್ಬರನ್ನು ಇಷ್ಟು ದಿನ ಇಲ್ಲಿ ಉಳಿಯುವಂತೆ ಮಾಡಿತ್ತೇನೋ.

ಇನ್ನು ಮುಂದೆ ಏನಿದ್ದರೂ ಆರೋಗ್ಯಕ್ಕೆ ಪ್ರಾಧಾನ್ಯತೆ ಕೊಡಬೇಕು ಎಂದು ನಾನು ತೀರ್ಮಾನಿಸಿದ್ದೆ. ಇನ್ನು ಮುಂದೆ ಹೆಚ್ಚು ಹೆಚ್ಚು ವಿದೇಶ ಪ್ರವಾಸ ಮಾಡಬೇಕು ಎಂದು ಚಂದ್ರೇಗೌಡರು ಹೇಳಿದ್ದರು.ಎಲ್ಲಕ್ಕೂ ಮಿಗಿಲಾಗಿ ಇನ್ನು ಮುಂದೆ ಸುಮ್ಮನೆ ಕಿರಿಕ್ಕು ಮಾಡುವ ಜನರಿಂದ,  ಅದರಲ್ಲೂ ಗಾಸಿಫ್ ಎನ್ನುವ ಅಸಹ್ಯ ಪರಿಸರದಿಂದ  ದೂರ ಇರಲೇಬೇಕು  ಎಂದು ನಿರ್ಧರಿಸಿ ಆಗಿತ್ತು. ಇದಕ್ಕಾಗಿ ನಾವಿಬ್ಬರು  ಮೊದಲು ಮಾಡಿದ ಕೆಲಸ ಎಂದರೆ ಬೆಂಗಳೂರು ಗಾಲ್ಪ್ ಕ್ಲಬ್ ಸೇರಿದ್ದು.

ಗಾಲ್ಪ್ ಆಡಬೇಕು. ಸಾಧ್ಯವಾದರೆ ದಿನವಿಡೀ ಗಾಲ್ಪ್ ಕ್ಲಬ್ ನಲ್ಲಿ ಕುಳಿತು ಬೆಂಗಳೂರಿನ ಟ್ರಾಫಿಕ್ಕು, ಧೂಳಿನಿಂದ ದೂರವಿರಬೇಕು ಎಂದು ಬಹುದಿನದಿಂದ ಅಂದುಕೊಳ್ಳುತ್ತಿದ್ದವಳಿಗೆ ಗಾಲ್ಪ್ ಖುಷಿ ನೀಡಿತ್ತು..

ಇಲ್ಲಿ ಯಾರೂ ಮತ್ತೊಬ್ಬರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. 18 ಹೋಲ್ ಗಳಿವೆ. ತಮ್ಮ ತಮ್ಮ ದೃಷ್ಟಿಯನ್ನು ಅವುಗಳತ್ತ ನೆಟ್ಟು ಗಾಲ್ಪನ್ನು ಲಯಬದ್ಧವಾಗಿ ತಿರುಗಿಸುವುದರಲ್ಲಿ ಅವರು ಮಗ್ನರಾಗಿರುತ್ತಾರೆ. ಆಯಾಸವಾದರೆ ದೂರದೂರದವೆರೆಗೆ ನೆಟ್ಟಿರುವ ಹಸಿರು ಹುಲ್ಲಿನ ಸೊಬಗನ್ನು ನೋಡುತ್ತ ಗುಂಡು ಹೀರುತ್ತಾರೆ.

ಸಾಯಂಕಾಲ ಆಯಿತೆಂದರೆ ಇಲ್ಲಿ ಹೊಸಜೀವನ. ಉದ್ಯಮಿಗಳು, ಅಧಿಕಾರಿಗಳು ಅವರ ಕುಟುಂಬ ವರ್ಗದವರು, ಗೆಳೆಯ ಗೆಳತಿಯರು-ಹೀಗೆ ಎಲ್ಲ ಸೇರುತ್ತಾರೆ. ರಾತ್ರಿ ಎಷ್ಟೊತ್ತಾದರೂ ಸರಿ. ಮಾತಿಗೆ ಕೊನೆಯಿಲ್ಲ. ನಗುವಿಗೆ ಬರವಿಲ್ಲ.ಸಂಗೀತ ಪ್ರಿಯರಿಗಾಗಿ ಚೆಂದದ ಸಂಗೀತ. ಲತಾ,ಆಶಾ,ಮಹಮ್ಮದ್ ರಫಿ ಇಷ್ಟವಾದಲ್ಲಿ ಅವರ ಹಾಡುಗಳನ್ನೇ ಹಾಡಿ ರಂಜಿಸುವ ಸಂಗೀತ ಕಚೇರಿ.ಗಂಡಸರು ಅವರ ಬಿಜಿನೆಸ್ಸು ವಿಚಾರದಲ್ಲಿ ಮಗ್ನರಾದರೆ ಹೆಂಗಳೆಯರು ಫ್ಯಾಶನ್, ಪಾರ್ಲರ್ -ಚರ್ಚೆಯಲ್ಲಿ  ಬಿಜಿ. ಮುಖಕ್ಕೆ ಹಾಗೆ ಕಚಗುಳಿ ಇಡುವ ಆ ತಂಗಾಳಿಯಲ್ಲಿ ಹೊತ್ತು ಹೋದದ್ದು ತಿಳಿಯುವುದಿಲ್ಲ.

ಖುಷಿ ವಿಚಾರ ವೆಂದರೆ ನನ್ನ ಕಛೇರಿ ಎದುರೇ ಗಾಲ್ಪ್. ಸಂಜೆಯಾಗುತ್ತಿದ್ದಂತೆ ನಾವೆಲ್ಲ ಅಲ್ಲಿ ಸೇರುತ್ತೇವೆ. ಬೇಜಾರಾದರೆ ಟೀ ಕಾಫಿಯೂ ಗಾಲ್ಪ್ ನಲ್ಲಿಯೇ. ನನಗೀಗ ಗಾಲ್ಪ್ ನಲ್ಲಿ ಕಾಲೇಜು ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಇಬ್ಬರೂ ಸಿರಿಯಸ್ ಆಗಿ ನಮ್ಮ ನಮ್ಮ ಗಂಡಂದಿರಿಗಿಂತ ಚೆನ್ನಾಗಿ ಗಾಲ್ಫ್ ಆಡಬೇಕು ಎಂದು ತೀರ್ಮಾನಿಸಿದ್ದೇವೆ. ಕಛೇರಿಯಲ್ಲಿಯೂ ಉತ್ತಮ ಸ್ನೇಹಿತೆ ಇದ್ದಾಳೆ. ಒಬ್ಬಳು ಫ್ಯಾಶನ್ ಡಿಸೈನರ್ ಮತ್ತೊಬ್ಬಳು ಡಾಕ್ಟರ್. ಅವರಿಬ್ಬರ ಬಗ್ಗೆ ಹೇಳಲೇಬೇಕು.ಮತ್ತೊಮ್ಮೆ ಟೈಮ್ ಸಿಕ್ಕಾಗ.

. ಆದಷ್ಟು ಬೇಗನೆ ರಿಕ್ಕಿಗೂ ಗಾಲ್ಪ್ ಕಲಿಸಬೇಕು ಎಂದುಕೊಂಡಿದ್ದೇನೆ. ಸಾಧ್ಯವಾದರೆ ಬರವಣಿಗೆ ಆರಂಭಿಸಬೇಕು ಎಂದು ನಾನು ತೀರ್ಮಾನಿಸಿದ್ದೇನೆ.

ಮೊದಲೆಲ್ಲ ನನ್ನೂರು ಕಾರವಾರ  ಮತ್ತು ಅದಕ್ಕಂಟಿಕೊಂಡಿರುವ ಗೋವಾದ ಬೀಚುಗಳು ನೆನಪಾಗಿ ಎಷ್ಟೋ ಸಾರಿ ಬೇಸರವಾಗುತ್ತಿತ್ತು. ಗಾಲ್ಪ್ ಸೇರಿದ ಮೇಲೆ ಬೇಸರ ಸ್ವಲ್ಪ ಕಡಿಮೆ.ಇಲ್ಲಿಯೇ ಕುಳಿತು ಹೊಸ ಪೀಳಿಗೆಯ ಪತ್ರಕರ್ತರು ಬರೆಯುವ ಬ್ಲಾಗ್ ಗಳನ್ನು ಆಗಾಗ ಓದುತ್ತ ಇರುತ್ತೇನೆ. ನಿಜಕ್ಕೂ ಖುಷಿಯಾಗುತ್ತದೆ. ನಾವೆಲ್ಲ ಹಳೇ ಕಾಲದವರಾಗಿಬಿಟ್ವಲ್ಲಾ ಅನ್ನಿಸುತ್ತದೆ. ಅವರನ್ನೆಲ್ಲ ಅವಧಿ ಪ್ರೋತ್ಸಾಹಿಸುವ ರೀತಿಯೂ ಖುಷಿ ನೀಡುತ್ತದೆ.

ಶಾರದಾ ನಾಯ್ಕ್

Leave a comment

No comments yet.

Comments RSS TrackBack Identifier URI

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

  • Pages

  • Flickr Photos

    Rainy Day

    In the city

    Armadillo

    Silent Killers

    More Photos
  • September 2009
    S M T W T F S
    « Aug   Oct »
     12345
    6789101112
    13141516171819
    20212223242526
    27282930  
  • Categories