ಛಾನೆಲ್ ಗಳು ಮತ್ತು ತೆರೆದ ಕೊಳವೆ ಬಾವಿ ರಹಿತ ಸಮಾಜದ ಕನಸು

KIDS

 ಸಾಪ್ತಾಹಿಕ ಪ್ರಭದಲ್ಲಿ(ಸೆಪ್ಟೆಂಬರ್ 6)  ಡಾವೆಂಕಿ ಬರೆದ ಈ ಸಾವು ಮಾರಾಟಕ್ಕಿದೆ-ಕೊಳವೆ ಬಾವಿಯಿಂದ ನೇರ ಪ್ರಸಾರ ಓದಿ ಮನಸ್ಸು ಭಾರವಾಯಿತು.ಕೊಳವೆ ಬಾವಿ ತೋಡಿದ ಬಳಿಕ ತಮ್ಮ ಕೆಲಸ ಮುಗಿಯಿತೆಂದುಕೊಳ್ಳುವ ಬೇಜವಾಬ್ದಾರಿಯ ಜನರು ಒಂದು ಕಡೆಯಾದರೆ, ಕೊಳವೆ ಬಾವಿಗೆ ಯಾವುದಾದರೂ ಮಗು ಬೀಳುತ್ತೋ ಎಂದು ಕಾಯುತ್ತ ನಿಂತವರ ರೀತಿಯಲ್ಲಿ ಅಸಹ್ಯವಾಗಿ 24 ಘಂಟೆ ಚೀರಾಡುವ ನ್ಯೂಸ್ ಚಾನೆಲ್ ಗಳು ಮತ್ತೊಂದು ಕಡೆ.ಈ ಮಧ್ಯೆ ಮೊನ್ನೆ ಸಿಕ್ಕು ಬಿದ್ದ ಆ ಮಗು ನನ್ನನ್ನು ಪದೇಪದೇ ಕಾಡತೊಡಗಿತು.

ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಓಡುವಾಗ ತನ್ನೆದುರಿಗೆ ಸಾವು ಕಾಯುತ್ತ ಕುಳಿತಿರುವುದು ಅದಕ್ಕೆಲ್ಲಿ ಗೊತ್ತಿತ್ತು? ಆಯತಪ್ಪಿ ಬಿದ್ದಾಗ ಎಂಥಹ ನೋವು ಅನುಭವಿಸಿರಬಹುದು..ಆ ಕತ್ತಲೆಯಲ್ಲಿ ಯಾರೂ ಕಾಣದಿದ್ದಾಗ ಅದೆಷ್ಟು ಅತ್ತಿತೋ?,.ಹೊಟ್ಟೆ ಹಸಿದು ಹೆತ್ತಮ್ಮನಿಗಾಗಿ ಎಷ್ಡು ಕೂಗಿತೋ..ದೇಹ ಮುದುರಿ ರಾತ್ರಿಯಿಡೀ ಎಷ್ಟು ಬೆಚ್ಚಿಬಿತ್ತೋ?..ಅಲ್ಲಿ ಮನೆಯಲ್ಲಿ ಆ ಹೆತ್ತೊಡಲು  ತನ್ನ ಕರುಳಕುಡಿಗಾಗಿ ಅದೆಷ್ಟು ಹಂಬಲಿಸಿತೋ? ಹೀಗೆ ಮನಸ್ಸಿನ ತುಂಬಾ ನೂರಾರು ಪ್ರಶ್ನೆಗಳು.

 ಅಂದು  ಇದನ್ನೆಲ್ಲ ಒಂದೇ ಸಮ ಮೈಮೇಲೆ ಬಂದವರಂತೆ ವರದಿ ಮಾಡುತ್ತಿದ್ದ ಚಾನೆಲ್ ವೊಂದು ಇದ್ದಕ್ಕಿದ್ದಂತೆ ಮತ್ತೊಂದು ಸುದ್ದಿಗೆ  ಹಾರಿತ್ತು.ವೈಎಸ್ ಆರ್ ರೆಡ್ಡಿ ಕಾಣೆಯಾಗಿದ್ದಾರೆ ಅಂತ. ಅಷ್ಟು ಹೊತ್ತು ತನಗೆ ಮಾತ್ರ ಆ ಮಗುವಿನ ಬಗ್ಗೆ ಕಾಳಜಿ ಇರುವ ರೀತಿಯಲ್ಲಿ ವರ್ತಿಸಿದ್ದ ಆ ಚಾನೆಲ್ ಕ್ಷಣ ಮಾತ್ರದಲ್ಲಿ ಆ ಮಗುವನ್ನು ಮರೆತಿತ್ತು.. ಮಾರನೆ ದಿನ ಆ ಮಗುವಿನ ಸುದ್ದಿಗಾಗಿ ಹುಡುಕಾಡಿದೆ. ಎಲ್ಲರೂ ಹೆಚ್ಚು ಕಡಿಮೆ ಮರೆತಂತೆ ಕಂಡಿತ್ತು. ಎಲ್ಲೋ ಒಂದು ಪತ್ರಿಕೆಯ ಮುಖಪುಟದಲ್ಲಿ ಮಾತ್ರ ಆ ಸುದ್ದಿ ಇನ್ನು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿತ್ತು. ಆದರೆ ಸುದ್ದಿ ಓದಿದ ನಂತರ ಉಸಿರುಕಟ್ಟಿ ಮಗು ಇನ್ನೂ ಸತ್ತೇ ಬಿಡುತ್ತಲ್ಲಾ ಎಂದುಕೊಂಡು ಮನಸ್ಸು ನೊಂದಿತು.

ಪ್ರತಿ ಸಲ ಕೊಳವೆ ಬಾವಿಗೆ ಮಗುವೊಂದು ಬಿದ್ದಾಗಲೆಲ್ಲ ನನ್ನ ಮನಸ್ಸು ಕಾಣದ ದೇವರನ್ನು ಪ್ರಾರ್ಥಿಸುತ್ತಿರುತ್ತದೆ. ಅಂದು ಪ್ರಿನ್ಸ್ ಎನ್ನೋ ಹುಡುಗ ಇಂಥಹುದೇ ಅವಘಡಕ್ಕೆ ಸಿಕ್ಕಿ, ಜೀವಂತ ಹೊರಬಂದಾಗ ಮನಸ್ಸಿಗೆ ನಿರಾಳ ಎನಿಸಿತ್ತೇನೋ ನಿಜ. ಇಡೀ ದಿನ ಕುಳಿತು ಟಿವಿಯಲ್ಲಿ ಈ ಸುದ್ದಿ ವೀಕ್ಷಿಸಿದ್ದೆ. ಆದರೆ ರಾಷ್ಟ್ರೀಯ ನ್ಯೂಸ್ ಚಾನೆಲ್ ಗಳು ಪ್ರಿನ್ಸ್ ಬಿದ್ದಿರುವುದನ್ನು 24 ಘಂಟೆಗಳ ಕಾಲ ತೋರಿಸಿ ಟಿಆರ್ ಪಿ ಹೇಗೆ ಗಳಿಸಬಹುದು ಎಂಬುದನ್ನು ಸ್ಥಳೀಯ ಚಾನೆಲ್ ಗಳಿಗೆ ಕಲಿಸಿಕೊಟ್ಟಿವೆ ಎಂಬುದು ಅಂದು ಅರ್ಥವಾಗಿರಲಿಲ್ಲ, ಮುಂಬರುವ ದಿನಗಳಲ್ಲಿ ಕೊಳವೆ ಬಾವಿಗಳಿಗೆ ಕಂದಮ್ಮಗಳು ಬೀಳುವ ವಿಚಾರ ಚಾನೆಲ್ ಗಳಿಗೆ ಈ ಪರಿಯ ಮೇವು ಒದಿಸಬಲ್ಲುದು ಎಂದು ಜನರು ಕೂಡ ಲೆಕ್ಕ ಹಾಕಿರಲಿಕ್ಕಿಲ್ಲವೇನೋ.

ಮುಖ್ಯಮಂತ್ರಿ ಕಾಣೆಯಾದ ವಿಷಯ ಖಂಡಿತ ಮಹತ್ವದ ವಿಷಯ.ಆದರೆ ಅವರ ಜೊತೆ ಬೆಂದುಹೋದ ಉಳಿದ ನಾಲ್ಕು ಜನರು ನಮಗೆ ಮರೆತೇ ಹೋಗುತ್ತದೆ. ಬಾವಿಗೆ ಬಿದ್ದು ನರಳಿದ ಕಂದಮ್ಮನ ಕೂಗು ನಮಗೆ ಕೇಳುವುದಿಲ್ಲ.ಇದು ವಾಸ್ತವ.ತಮ್ಮ  ಟಿಆರ್ ಪಿಗಾಗಿ ನಡುಬೀದಿಯಲ್ಲಿ ಬೆತ್ತಲೆ ನಿಂತಿರುವ ಛಾನೆಲ್ ಗಳನ್ನೆಲ್ಲ ಸದ್ಯ ಮರೆತೇ ಬಿಡೋಣ. ಒಂದು ಖುಷಿ ವಿಷಯವೆಂದರೆ ಈ ಘಟನೆಯ ಬಳಿಕ  ಸಚಿವ ಗೋವಿಂದ ಕಾರಜೋಳ ಇನ್ನೂ ಮುಂದೆ ಇಂಥ ಪ್ರಕರಣಗಳು  ಮರುಕಳಿಸದಂತೆ ಅತ್ಯಂತ ಕಠಿಣ ಕಾನೂನು ತರುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಗಮನಿಸದ್ದನ್ನು ಕನಿಷ್ಟಪಕ್ಷ ಅವರದ್ದೇ ಸಚಿವರು ಇದನ್ನು ಮನಗಂಡಿದ್ದು, ಶ್ಲಾಘನೀಯ.ಆದಷ್ಟು ಬೇಗನೆ ಅಂಥಹ ಒಂದು ಕಾನೂನು ಬರಲಿ. ಅಲ್ಲಿಯವರೆಗೆ ಕನಿಷ್ಟಪಕ್ಷ ಆಯಾಯ ಗ್ರಾಮ ಪಂಚಾಯತ ಅಥವಾ ಸಂಬಂಧಿಸಿದ ಪ್ರದೇಶಗಳಲ್ಲಿ ಈ ರೀತಿ ತೆರೆದ ಬಾವಿಗಳು ಕಂಡುಬಂದಲ್ಲಿ ತಕ್ಷಣ ಪತ್ತೆ ಹಚ್ಚಿ ಅವುಗಳನ್ನು ಮುಚ್ಚುವ ಮೂಲಕ ಇಂಥಹ ಅನಾಹುತಗಳು ಆಗುವುದನ್ನು ತಪ್ಪಿಸಲು ಎಲ್ಲ ಪ್ರಜ್ಞಾವಂತ ನಾಗರಿಕರು ಮುಂದಾಗಬೇಕಿದೆ.

-ಶಾರದಾ ನಾಯ್ಕ

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಸೆಪ್ಟೆಂಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಗಸ್ಟ್   ಆಕ್ಟೋ »
   12345
  6789101112
  13141516171819
  20212223242526
  27282930  
 • ವಿಭಾಗಗಳು