Suvarnadalli telecasted MNC at NIAGARA story, one of the wonders of the world, US

ಸ್ಲಗ್: ನಯಾಗರ ನಯನ ಮನೋಹರ
ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಡೇಟ್: 24 – 03 – 09
ಬೆಂಗಳೂರು
ಆಂಕರ್: ವೀಕ್ಷಕರೇ ಈ ವಾರ ನಿಮಗೆ ವಿಶ್ವದ ಅದ್ಭುತಗಳಲ್ಲಿ ಒಂದಾದ ನಯಾಗರ ಜಲಪಾತವನ್ನು ಪರಿಚಯ ಮಾಡಿಕೊಡುತ್ತಿದ್ದೇವೆ. ನೂರಾರು ಅಡಿ ಎತ್ತರದಿಂದ, ಸಾವಿರಾರು ಅಡಿ ಅಗಲವಾಗಿ ಧುಮ್ಮಿಕ್ಕುವ ನಯಾಗರ ಜಲಧಾರೆಯನ್ನು ನೋಡಲು ಎರಡು ನಯನಗಳು ಸಾಲದು. ಸಾಕಾಗದು. ನಯಾಗರದ ವೈಭವ, ಒನಪು, ವಯ್ಯಾರ, ಬಳುಕು, ಕುಣಿತ, ರಭಸ, ಭೋರ್ಗರತವೇ ಅಂಥಹದು. ಈ ಜಲಪಾತದ ನೀರ ಹೊಗೆ ಮೈ ಮನಗಳಿಗೆ ತಾಕಿದರೆ ಸಾಕು ಅದೊಂದು ವಣರ್ಿಸಲಸದಳವಾದ ಅನುಭವ. ಅನಿರ್ವಚನೀಯ ಖುಷಿ. ಬನ್ನಿ ಈಗ ನಯಾಗರವನ್ನು ಪರಿಚಯ ಮಾಡಿಕೊಡುತ್ತೇನೆ ತಾನು.
ಫ್ಯಾಕೇಜ್ ಫಾಲೋಸ್………………
ವಾಯ್ಸ್ ಓವರ್ 1:
ಐರಿ ಪೆನ್ಸಿಲ್ವೆನಿಯಾದಲ್ಲಿ ಆಯಿಲ್ ಕ್ರಾಂತಿ ನಡೆದ ಘಟ್ಟ ಪ್ರದೇಶ ಹಾಗೂ ಆಮಿಷ್ ಜನರನ್ನು ನೋಡಿದ ನಂತರ, ಸತ್ಯ ಲಿಂಗರಾಜು- ಸ್ಟೀವ್ ತನ್ನನ್ನು ಐರಿ ಬಸ್ ನಿಲ್ದಾಣದಲ್ಲಿ ಇಳಿಸಿ ಹೊರಟು ಹೋದರು. ಮನಸ್ಸಿನಲ್ಲಿ ಅದೆಂಥದೋ ಆನಂದ, ಖುಷಿ, ಸಂತೋಷ…..ತವಕ, ತುಡಿತ, ರೋಮಾಂಚನ ಭೋರ್ಗರೆಯ ಹತ್ತಿತು. ನಯಾಗರಕ್ಕೆ ಹೋಗುವ ಬಫೆಲೋ ಬಸ್ ಏರಿ ಕುಳಿತಾಗಲಂತೂ ಆನಂದ ತುಂದಿಲನಾಗಿದ್ದೆ, ಮನಸ್ಸಿನ ತುಂಬೆಲ್ಲಾ ಖುಷಿಯ ನದಿ ಹರಿಯಲು ಶುರುವಾಗಿತ್ತು. ಅದೊಂದು ಚಿಕ್ಕಂದಿನಿಂದ ಕಲ್ಪಿಸಿಕೊಂಡಿದ್ದ, ಚಿತ್ರಗಳಲ್ಲಿ ನೋಡಿ, ಅವರಿವರಿಂದ ಕೇಳಿ ಖುಷಿಪಟ್ಟಿದ್ದ ವಿಶ್ವದ ಅದ್ಭುತಗಳಲ್ಲಿ ಒಂದಾದ ನಯಾಗರ ನೋಡುವ ಕನಸು ನನಸಾಗುವ ಅವಕಾಶ ಹತ್ತಿರ ಬರತೊಡಗಿತ್ತು. ಮನಸ್ಸು ಪ್ರಪುಲ್ಲವಾಗಿತ್ತು. ಬಸ್ ಐರಿ ಲೇಕ್ ದಾಟಿ ಮುನ್ನಡೆಯುತ್ತಿದ್ದರೆ ಅಮೆರಿಕಾ ರಸ್ತೆಗಳ ದರ್ಶನವಾಗುತ್ತಿತ್ತು. ತುಂತುರು ಮಳೆ, ಹಸಿರು ಸಿರಿಯ ನಡುವೆ ಬಸ್ ಸಾಗುತ್ತಿದ್ದರೆ ಮನಸ್ಸು ಸಂಭ್ರಮಪಡಿತ್ತಿತ್ತು. ಎಲ್ಲವನ್ನು ಚಿತ್ರಿಸಿಕೊಳ್ಳುವ ತವಕ ತನಗೆ. ಸಿಕ್ಕಿ ಸಿಕ್ಕಿದಷ್ಟನ್ನು ಕಣ್ಣಲ್ಲಿ ತುಂಬಿಕೊಂಡಿತು ತನ್ನ ಹ್ಯಾಂಡಿ ಕ್ಯಾಮ್. ಅಮೆರಿಕಾ ರಸ್ತೆಗಳು ಎಷ್ಟು ಅಚ್ಚುಕಟ್ಟಾಗಿರುತ್ತವೆ, ವಿಶಾಲವಾಗಿರುತ್ತವೆ ಎಂಬುದಕ್ಕೆ ನಯಾಗರ ರಸ್ತೆ ಸಾಕ್ಷಿಯಾಯಿತು.
ಅಮೆರಿಕಾ ರಸ್ತೆಗಳಲ್ಲಿ ಸೂಲನಾ ಫಲಕಗಳು ಎಷ್ಟು ಸ್ಪಷ್ಟವಾಗಿರುತ್ತವೆ ಎಂದರೆ ಪ್ರಯಾಣಿಕರು ನಡು ರಾತ್ರಿಯಲ್ಲೂ ಯಾರನ್ನೂ ಕೇಳದೇ ಕೇವಲ ಬೋಡರ್್ಗಳನ್ನು ನೋಡಿಕೊಂಡು ಮುಂದಕ್ಕೆ ಪ್ರಮಾಣ ಬೆಳೆಸಬಹುದು. ಅಮೆರಿಕಾ ರಸ್ತೆಗಳ ಇಕ್ಕೆಲಗಳಲ್ಲಿ ಯಾವುದೇ ರೀತಿಯ ಕಟ್ಟಡಗಳಾಗಲಿ, ಚಟುವಟಿಕೆಗಳಾಗಲಿ ಇರುವುದಿಲ್ಲ. ಇದರಿಂದ ರಸ್ತೆ ವಿಸ್ತರಣೆ ಮಾಡಬೇಕಾದಾಗ ಭೂಸ್ವಾಧೀನ ಪಡಿಸಿಕೊಳ್ಳಲು ಯಾರ ಅನುಮತಿಗೂ ಸಕರ್ಾರ ಕಾಯಬೇಕಾಗಿರುವುದಿಲ್ಲ. ನಮ್ಮಲ್ಲಿನ ರಸ್ತೆಗಳು ಕಣ್ಣ ಮುಂದೆ ಬಂದವು. ನಮ್ಮ ಪೀಣ್ಯದಲ್ಲಿ ಅಂಗಡಿ ಮುಂಗಟ್ಟುಗಳನ್ನು ರಸ್ತೆಗೆ ಅಂಟಿಕೊಂಡಂತೆ ಕಟ್ಟಿದ್ದ ದೃಶ್ಯಗಳು ಹಾದು ಹೋದವು. ಸಕರ್ಾರ ಭೂಸ್ವಾಧೀನ ಪಡಿಸಿಕೊಳ್ಳಲು ವರ್ಷಗಟ್ಟಲೆ ಕೋಟರ್ಿಗೆ ಅಲೆಯಬೇಕಾಗಿರುವ ಸಂದರ್ಭಗಳು ನೆನಪಿಗೆ ಬಂದವು. ಅಮೆರಿಕಾದಲ್ಲಿ ಹೆದ್ದಾರಿಗಳ ಇಕ್ಕೆಲಗಳಲ್ಲಿ ಯಾವುದೇ ರೀತಿಯ ಆಥರ್ಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಹೆದ್ದಾರಿಗಳಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಮ್ಯಾಕ್ ಡೊನಾಲ್ಡ್ ಕೇಂದ್ರಗಳನ್ನು ತೆರೆಯಲು ಅನುಮತಿ ಇರುತ್ತದೆ. ಇಲ್ಲಿಗೆ ಹೋಗಲು ಪ್ರತ್ಯೇಕ ರಸ್ತೆಗಳನ್ನು ನಿಮರ್ಾಣ ಮಾಡಲಾಗಿರುತ್ತದೆ. ಎಲ್ಲಿಯ ಅಮೆರಿಕಾದ ಪ್ಲಾನಿಂಗ್, ಎಲ್ಲಿಯ ಭಾರತದ ಪ್ಲಾನಿಂಗ್ ಎಂದು ಯೋಚಿಸುತ್ತಿರುವಾಗಲೇ…………ನಯಾಗರಕ್ಕೆ ಸಮೀಪವಿರುವ ಬಫೆಲೋದ ಸೂಚನಾ ಫಲಕ ಕಣ್ಣಿಗೆ ಬಿತ್ತು. ಬಸ್ಸು ಬಲಕ್ಕೆ ತಿರುಗುತ್ತಿದ್ದಂತೆಯೇ……….ನಯಾಗರ ನೋಡುವ ರೋಮಾಂಚನ ಹೆಚ್ಚಾಗತೊಡಗಿತು. ಇಂಥಹ ಸಂದರ್ಭದಲ್ಲಿ ತನ್ನ ಮಗ ರಿಕಿ, ಪತ್ನಿ ಶಾರದಾ ಜತೆಗಿದ್ದರೆ ಮತ್ತಷ್ಟು ಖುಷಿಪಡುತ್ತಿದ್ದರಲ್ಲ ಎಂದೆನ್ನಿಸತೊಡಗಿತು………
 
ಸುಮಾರು 30 ಸಾವಿರ ವರ್ಷಗಳ ಹಿಂದೆ ನಯಾಗರ ಜಲಪಾತ ಸೃಷ್ಟಿಯಾಯಿತೆಂದು ಇತಿಹಾಸ ಹೇಳುತ್ತದೆ. 58 ಕಿಲೋ ಮೀಟರ್ ದೂರದ ಐರಿ ಕೊಳದ ಮೂಲಕ ಹಾದು ಬರುವ ನಯಾಗರ ನದಿ ಇತಿಹಾಸದಲ್ಲಿ ಎಂದೂ ಬತ್ತಿದ ನೆನೆಪು ಯಾರಿಗೂ ಇಲ್ಲ. 1987 ರಲ್ಲಿ ಆಲ್ಮ್ಸ್ಟಡ್ ಹಾಗೂ ಕಾಲ್ವಟರ್್ ವಾಕ್ಸ್ ಈ ನಯಾಗರಕ್ಕೆ ಆಧುನಿಕ ಮೆರಗು ನೀಡಿದರಂತೆ. ಜಲಪಾತದ ದಂಡೆಯಲ್ಲಿ ರಸ್ತೆ, ಉದ್ಯಾನ ವನವನ್ನು ನಿಮರ್ಾಣ ಮಾಡಿದರಂತೆ. 1959 ರಲ್ಲಿ ನಯಾಗರ ನೋಡಲು ಗೋಪುರ, ಲಿಫ್ಟ್ ಸೌಲಭ್ಯವನ್ನು ಕಲ್ಪಿಸಲಾಯಿತಂತೆ. ಗಾತ್ರದಲ್ಲಿ ಕೃಷ್ಣ, ಕಾವೇರಿಗಿಂತ ನೂರಾರು ಪಟ್ಟು ದೊಡ್ಡದಾಗಿರುವ ನಯಾಗರ ನದಿಯಲ್ಲಿ ಒಂದು ನಿಮಿಚಕ್ಕೆ 6 ದಶ ಲಕ್ಷ ಕ್ಯೂಬಿಕ್ ಫೀಟ್ ನೀರು ಧುಮ್ಮಿಕ್ಕಿ ಮುಂದಕ್ಕೆ ಹರಿದು ಹೋಗುತ್ತದೆ. ಕೆನಡಾ – ಅಮೆರಿಕಾ ಗಡಿಯಲ್ಲಿ ಸೃಷ್ಟಿಯಾಗಿರುವ ಈ ನಯಾಗರ ಜಲಪಾತದಿಂದ ಇದುವರೆಗೆ ಉಭಯ ದೇಶಗಳ ನಡುವೆ ಯಾವುದೇ ಅಂತಾರಾಷ್ಡ್ರೀಯ ನದಿ ವಿವಾದ ಸೃಷ್ಟಿಯಾಗಿಲ್ಲ. 1950 ರಲ್ಲಿ ಉಭಯ ದೇಶಗಳು ನೀರಿನ ಒಪ್ಪಂದ ಮಾಡಿಕೊಂಡು ವಿದ್ಯುತ್ ಉತ್ಪಾದನೆಯನ್ನು ಹಂಚಿಕೊಳ್ಳಲು ತೀಮರ್ಾನ ತೆಗೆದುಕೊಂಡಿವೆ ಇಲ್ಲಿ.
ಬಸ್ಸು ನಯಾಗರ ತಲುಪಿ ನಿಲ್ಲುತ್ತಿದ್ದಂತೆಯೇ ನಯಾಗರ ಧುಮ್ಮಿಕ್ಕುವ ಆರ್ಭಟ ಕಿವಿಗೆ ಬಿತ್ತು. ಆನಂದಕ್ಕೆ ಪಾರವೇ ಇಲ್ಲದಾಯಿತು. ನಯಾಗರೆಯಂತೇ ಅಲ್ಲಿನ ನಗರವೂ ಸ್ವಚ್ಛ, ಶುಭ್ರವಾಗಿತ್ತು.  ಹಸಿರು ಕಣ್ಕುಕ್ಕುತ್ತಿತ್ತು. ಯಮಭಾರದ ಲಗ್ಗೇಜನ್ನು ಅಲ್ಲಿನ ಕಂಫರ್ಟ ಇನ್ ಹೊಟೇಲ್ನಲ್ಲಿ ಎಸೆದು ಕ್ಯಾಮರಾ ಸಿಕ್ಕಿಸಿಕೊಂಡು ಒಂದೇ ಕ್ಷಣದಲ್ಲಿ ಅಲ್ಲಿಂದ ಹೊರಬಿದ್ದೆ ತಾನು. “ಮೇಡ್ ಆಫ್ ಮಿಸ್ಟ್” ಕ್ರೂಸ್ನಲ್ಲಿ ಧುಮ್ಮಿಕ್ಕುವ ನಯಾಗರವನ್ನು ಕೆಳಭಾಗದಿಂದ ನೋಡಲು ಹೋಗುವ ಮುನ್ನ, ನಯಾಗರೆ ಮೇಲಿನಿಂದ ಹರಿದರಿದು ಓಡಿ ಬರುವುದನ್ನು ಸೆರೆಹಿಡಿದೆ ತಾನು. 
ಮೊದಲ ಸಲ ನಯಾಗರೆ ತನ್ನ ಕಣ್ಣುಗಳಿಗೆ ಬಿದ್ದ ಕ್ಷಣ ಮನಸ್ಸು ಕವಿಯಾಗಿ ಹೋಯಿತು. ಅದೊಂದು ರಾಶಿ ರಾಶಿ ಜಲಧಾರೆ. ಜಲಲ….ಜಲಧಾರೆ. ಮೊದಲ ಬಾರಿ ನಯಾಗರೆಯ ಮೋಹಕ ರಭಸ, ಒನಪು ವಯ್ಯಾರ ಕಂಡು ದಿಗ್ಮೂಢನಾದೆ. ನಾನೆಲ್ಲೂ ನಿಲ್ಲಲಾರೆ, ನೀವ್ಯಾರೂ ನನ್ನನ್ನು ತಡೆಹಿಡಿಯಲಾರಿರಿ ಎಂದು ಹೇಳುತ್ತಾ ನಯಾಗರೆ ಓಡುತ್ತಿರುವಳಂತೆ ಭಾಸವಾದಳು. ಮನಸ್ಸು ಹಾರಾಡತೊಡಗಿತು. ಹಾಡು ಗುನುಗಲು ಶುರುಮಾಡಿತು. ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡೆ, ಸಾಯೊದ್ರೋಳಗೆ ಒಮ್ಮೆ ನೋಡಿ ಜೋಗದ ಗುಂಡಿ…………ಹೀಗೆನ್ನುತ್ತಲೇ…..ಬದುಕಿರುವುದರೊಳಗೆ ಒಮ್ಮೆ ನೋಡು ನಯಾಗರದ ಗುಂಡಿ………..ಎಂದು ಹಾಡ ತೊಡಗಿದೆ. ಸಿಕ್ಕ ಸಿಕ್ಕಲ್ಲೆಲ್ಲಾ ಪೋಟೋ ಕ್ಲಿಕ್ಕಿಸಿದೆ. ಮನಸ್ಸು ನದಿಯಾಯಿತು. ನಯಾಗರೆ ಧುಮ್ಮಿಕ್ಕಿ ಹರಿದು ಹೋಗುವ ಮುನ್ನ ಇಳಿಜಾರಾದ ಜಾಗದಿಂದ ಓಡೋಡಿ ಹೋಗುತ್ತಾಳೆ. ಸಿಕ್ಕಿಸಿಕ್ಕಿದೆಲ್ಲವನ್ನು ಹೊತ್ತುಕೊಂಡು ಹೋಗುತ್ತಾಳೆ. ಎಂಥಹ ಸಂತಸ, ಸಡಗರ, ಸಂಭ್ರಮ ಅವಳ ನಡೆಯಲ್ಲಿ. ತನಗಾರು ಸರಿಸಾಟಿ ಎಂದು ಬೀಗಿದಂತಿರುತ್ತದೆ ಅವಳ ರಭಸ. ಅವಳು ಓಡಿ ಹೋಗುವ ರಭಸವನ್ನು ಗಮನಿಸಿದರೆ ಒಮ್ಮೆ ಧುಮ್ಮಿಕ್ಕಿ ಮತ್ತೆ ಎದ್ದು ಬರುತ್ತೇನೆ ಎನ್ನುವಂತಿರುತ್ತದೆ. ಆದರೆ ಒಮ್ಮೆ ಧುಮುಕಿದರೆ ಅವಳೆಂದೂ ವಾಪಸ್ ಬರಲಾರಳೆಂಬುದು ಆಕೆಗೆ ತಿಳಿದಿರುವುದಿಲ್ಲ. ಮೇಲ್ಸೆತುವೆಯಿಂದ ಕೆಳಗಿನ ವರೆಗೂ ನಯಾಗರೆಯ ಸೊಬಗನ್ನು ಚಿತ್ರಿಸುತ್ತಾ ಬಂದೆ. ನಯಾಗರೆ ಧುಮ್ಮಿಕ್ಕುವುದನ್ನು ಕಂಡಾಗ ಮೂಕವಿಸ್ಮಿತನಾದೆ. ಅದೆಂಥಹ ಮೂಹಕ ಆರ್ಭಟ, ವೈಭವ……..ಆಕೆ ಬೀಳುವುದರಲ್ಲಿ…………………ರುದ್ರ ರಮಣೀಯ ಎನ್ನಿಸಿತು……. ವಾರೆವ್ಹಾ………… ಎಂದು ಉದ್ಘರಿಸಿತು ಮನಸ್ಸು. ಆ ಚೆಲುವ ನೋಡಲು ಎರಡು ಕಣ್ಣುಗಳು ಸಾಲದೆನ್ನಿಸಿತು ಒಂದು ಕ್ಷಣ. ಜೋಗದ ಗುಂಡಿ ಕಣ್ಮುಂದೆ ಬಂತು…..ಜೋಗದಷ್ಟು ಎತ್ತರದಿಂದ ಬೀಳದಿದ್ದರೂ ನಯಾಗರದ ವಿಶಾಲ ಅದ್ಭುತ…..ಅತ್ಯದ್ಭುತ ಎನಿಸಿತು…………….. 
ಆಂಕರ್: ಈಗ ಒಂದು ಬ್ರೇಕ್ ತೆಗೆದುಕೊಳ್ಳೋಣ……..
ಆಂಕರ್: ವೆಲ್ಕಮ್ ಬ್ಯಾಕ್ ವೀಕ್ಷಕರೇ……..

ವಾಯ್ಸ್ ಓವರ್ 2:
 
ನಯಾಗರೆ ಅಮೆರಿಕಾದಲ್ಲಿ ಹುಟ್ಟಿದರೂ, ಹರಿದು ಹೋಗುವುದು ಕೆನಡಾಕ್ಕೆ. ಈ ನದಿ ಅಮೆರಿಕಾ ದಾಟುವ ಮುನ್ನ ಕವಲೊಡೆದು ಎರಡು ಜಲಪಾತವಾಗಿ ಮಾರ್ಪಡುತ್ತದೆ. ಒಂದು ಅಮೆರಿಕಾ ಭಾಗದಲ್ಲಿ ಧುಮ್ಮಿಕ್ಕಿದರೆ ಮತ್ತೊಂದು ಕೆನಡಾ ಭಾಗದಲ್ಲಿ. ಶೇ. 90 ರಷ್ಟು ನೀರು ಕೆನಡಾದ ಕುದುರೆ ಮುಖದ ಜಲಪಾತದಲ್ಲಿ ಜಿಗಿದರೆ ಕೇವಲ ಶೇ 10 ರಷ್ಟು ನೀರು ಮಾತ್ರ ಅಮೆರಿಕಾದ ಭಾಗದಲ್ಲಿ      ಧುಮ್ಮಿಕ್ಕುತ್ತದೆ. ಆದ್ದರಿಂದ ಗಾತ್ರದಲ್ಲಿ ಅಮೆರಿಕಾ ಜಲಪಾತಕ್ಕಿಂತ ಕೆನಡಾ ಜಲಪಾತವೇ ದೊಡ್ಡದು ಮತ್ತು ಹೆಚ್ಚು ಸೊಗಸು. ಅಮೆರಿಕಾ ಜಲಪಾತ ನ್ಯೂಯಾಕರ್್ ರಾಜ್ಯದಲ್ಲಿದ್ದರೆ ಕೆನಡಾ ಜಲಪಾತ ಆಂಟಾರಿಯೋ ರಾಜ್ಯದಲ್ಲಿದೆ. ಕೆನಡಾದ ಹಾಸರ್್ ಷೂ ಜಲಪಾತ 2600 ಅಗಲವಿದ್ದು 173 ಅಡಿ ಎತ್ತರದಿಂದ ಧುಮ್ಮಿಕ್ಕಿದರೆ ಅಮೆರಿಕಾ ಜಲಪಾತ 1060 ಅಡಿಗಳಷ್ಟು ಅಗಲವಿದ್ದು ಅದೂ ಸಹ ಅಷ್ಟೇ ಎತ್ತರದಿಂದ ಕೆಳಗೆ ಬೀಳುತ್ತದೆ. ಅಮೆರಿಕಾ ಜಲಪಾತ “ಗೋಟ್ ಐಲ್ಯಾಂಡ್” ನಮ್ಮ ಮೇಕೆ ದಾಟಿನಂತಹುದು ಹಾಗೂ ಬ್ರೈಡಲ್ ವೇಲ್ ಎಂಬ ಎರಡು ಸಣ್ಣ ಜಲಪಾತಗಳನ್ನೂ ಸೃಷ್ಟಿಮಾಡಿದೆ. ನಯಾಗರವನ್ನು ಅಮೆರಿಕಾ ನೆಲದಲ್ಲಿ ನಿಂತು ನೊಡುವುದಕ್ಕಿಂತ ಕೆನಡಾ ನೆಲದಲ್ಲಿ ಅಂದರೆ ಅದರ ದಂಡೆಯಲ್ಲಿ ನಿಂತು ನೋಡಿದರೇನೇ ಚೆಂದ. ಕೆನಡಾ ಕಡೆಯಿಂದ ನಯಾಗರ ನೋಡಲು ತೆರಳುವಂತೆ ಎಲ್ಲರೂ ಸಲಹೆ ನೀಡಿದರೂ ನನಗೆ ವೀಸಾ ಸಿಗದ ಕಾರಣ ಕೆನಡಾ ಕಡೆಗೆ ತೆರಳಲಾಗಲಿಲ್ಲ. ಸ್ವಲ್ಪ ನಿರಾಸೆಯಾದರೂ “ಮೇಡ್ ಆಫ್ ಮಿಸ್ಟ್” ಮುಸುಕು ಕನ್ಯೆಯನ್ನು ಏರಿ ನಯಾಗರದ ಬುಡಕ್ಕೆ ಹೋಗಿ ಬರಲು, ಟಿಕೆಟ್ ಖರೀದಿಸಿ ಲಿಫ್ಟ್ ಮೂಲಕ ತಳಕ್ಕೆ ಇಳಿದೇ ಬಿಟ್ಟೆ. ಡೆಟ್ರಾಯಿಟ್ನಂತೆ ಇಲ್ಲೂ ಕೆನಡಾ ಮತ್ತೊಂದು ದಂಡೆಯಲ್ಲಿ ಕಾಣಿಸುತ್ತದೆ. ಅಮೆರಿಕಾದಿಂದ ಕೆನಡಾಗೇ ತೆರಳುವ ರೇನ್ಬೋ ಬ್ರಿಡ್ಜ್ ಸ್ಪಷ್ಟವಾಗಿ ಕಣ್ಣಿಗೆ ಕಾಣಿಸುತ್ತದೆ. ಕೆನಡಾ ದಂಡೆಯ ಹೊಟೇಲ್ಗಳು, ಬಸ್ ನಿಲ್ದಾಣಗಳು ಕ್ಯಾಮರಾಗೆ ಸುಲಭವಾಗಿ ಸೆರೆ ಸಿಕ್ಕುತ್ತವೆ.
 
ನಯಾಗರ ನೋಡಲು ಸಾಮಾನ್ಯವಾಗಿ ಜೋಡಿಗಳೇ ಬರುತ್ತಾರೆ. ಪ್ರೇಮಿಗಳಿಗಂತೂ ಇದು ಹೇಳಿ ಮಾಡಿಸಿದ ಸ್ಥಳ. ಹನಿಮೂನ್ಗೆ ಹೋದರಂತೂ ಸ್ವರ್ಗ. ಅಮೆರಿಕಾದಲ್ಲಿರುವ ಮಕ್ಕಳು ಅಪ್ಪ ಅಮ್ಮಂದಿರನ್ನು ಅಮೆರಿಕಾಗೆ ಕರೆಸಿಕೊಂಡಾಗ ನಯಾಗರಕ್ಕೆ ಕರೆತಂದು ತೋರಿಸುತ್ತಾರೆ. ಮನಸ್ಸಿನಲ್ಲಿ ಎಂಥಹುದೇ ನೋವಿದ್ದರೂ ನಿರಾಸೆಯಿದ್ದರೂ ನಯಾಗರ ನೋಡಿದ ನಂತರ ಎಲ್ಲವೂ ಮಾಯವಾಗುತ್ತದೆ. ಅಂಥಹ ಮಾಂತ್ರಿಕ ಶಕ್ತಿ ಈ ಜಲಧಾರೆಗಿದೆ. ನಯಾಗರದ ನೀರ ಹೊಗೆ ಮುಖಕ್ಕೆ ಮುತ್ತಿಟ್ಟರೆ ಅದೆಂಥದೋ ರೋಮಾಂಚನ, ಸುಖದ ಅನುಭವವಾಗುತ್ತದೆ. ಒಂದು ಕ್ಷಣ ಎಲ್ಲವೂ ಮರೆತು ಹೋಗುತ್ತದೆ.

“ಮೇಡ್ ಆಫ್ ಮಿಸ್ಟ್”ನಲ್ಲಿ ತೆರಳುವ ಮುನ್ನ ಬಟ್ಟೆ ಒದ್ದೆಯಾಗದಿರಲೆಂದು ಪ್ರತಿಯೊಬ್ಬರಿಗೂ ಒಂದು ಪ್ಲಾಸ್ಟಿಕ್ ಗೌನ್ನನ್ನು ಉಚಿತವಾಗಿ ನೀಡುತ್ತಾರೆ. ಅದನ್ನು ತೊಟ್ಟು ಮೇಡ್ ಆಫ್ ಮಿಸ್ಟ್ ಏರಿ ನಿಂತು ಮುಂದೆ ಸಾಗಿದರೆ ನಯಾಗರದ ಭೋರ್ಗರೆತ ಹತ್ತಿರ ಹತ್ತಿರವಾಗುತ್ತದೆ. ಮುಸುಕು ಕನ್ಯೆ ಮೇಡ್ ಆಫ್ ಮಿಷ್ಟ್ನಲ್ಲಿ ನಿಂತ ಪ್ರೇಮಿಗಳು ಮತ್ತಷ್ಟು ಹತ್ತಿರವಾಗುತ್ತಾರೆ. ಮೇಡ್ ಆಫ್ ಮಿಸ್ಟ್, ಫಾಲ್ಸ್ ಬುಡಕ್ಕೆ ಹೋದಂತೆಲ್ಲಾ ನಯಾಗರದ ನೀರಿನ ಹೊಗೆ ಕ್ಯಾಮರಾಗಳಿಗೆ ಕಾಟ ಕೊಡಲು ಶುರು ಮಾಡುತ್ತದೆ. ಕ್ಯಾಮರಾ ಲೆನ್ಸ್ಗೆ ನೀರಿನ ಹೊಗೆ ತುಂಬಿಕೊಂಡು ಫಾಲ್ಸ್ನ ಸೊಬಗನ್ನು ತೀರ ಸನಿಹದಿಂದ ಸೆರೆಹಿಡಿಯದಂತೆ ತಡೆಹಿಡಿಯುತ್ತದೆ. ತನ್ನ ಹ್ಯಾಂಡಿ ಕ್ಯಾಮ್ಗೆ ನಯಾಗರದ ನೀರಿನ ಹೊಗೆ ಎಷ್ಟೇ ಕಾಟ ಕೊಟ್ಟರೂ ಶೂಟ್ ಮಾಡಲು ಪ್ರಯತ್ನಿಸಿದೆ. ಲೆನ್ಸ್ನ್ನು ಇಂಡಿಯಾನದ ಓವರ್ ಕೋಟ್ನಿಂದ ಒರೆಸಿ ಅಮೆರಿಕಾ ನಯಾಗರ, ಕೆನಡಾ ಹಾಸರ್್ ಷೂ ಫಾಲ್ಸ್ಗಳನ್ನು ಸೆರೆಹಿಸಿಯಲು ಸರ್ವ ಪ್ರಯತ್ನಗಳನ್ನು ಮಾಡಿದೆ, ಆದರೆ ಆಗಲಿಲ್ಲ ಕೈಚೆಲ್ಲಿದೆ. ಒಂದಷ್ಟು ಪೋಟೋಗಳನ್ನಷ್ಟೇ ಕ್ಲಿಕ್ಕಿಸಿದೆ. ನಯಾಗರದ ಬುಡಕ್ಕೆ ಹೋದ ಕ್ಷಣ ಕ್ರೂಸ್ನಲ್ಲಿ ನಿಂತಿದ್ದವರೆಲ್ಲಾ ಓ……………ಎಂದು ಕೂಗಿದರು. ಕಿರುಚಾಡಿದರು. ಹಾಸರ್್ ಷೂ ನ ಬುಡಕ್ಕೆ ಹೋದಾಗ ಜನರ ಚೀತ್ಕಾರ ಮುಗಿಲು ಮುಟ್ಟಿತು. ಏನೂ ಕಾಣಿಸದಾಯಿತು. ನಾವುಗಳು ಮಾತ್ರ ನೀರಿನ ಹೊಗೆಗೆ ಸಿಕ್ಕಿ ತೊಯ್ದು ಹೋದೆವು. ನೀರಿನ ರಭಸಕ್ಕೆ ಅಲುಗಾಡಿದ ಮುಸುಕು ಕನ್ಯೆ, ಪ್ರೇಮಿಗಳನ್ನು ಮತ್ತಷ್ಟು ಹತ್ತಿವಾಗುವಂತೆ ಮಾಡಿತ್ತು. ಹಲವಾರು ದಶಕಗಳಿಂದ ನಯಾಗರದ ಬುಡದಲ್ಲಿ ಸೇವೆ ಸಲ್ಲಿಸುತ್ತಿರುವ ಮೇಡ್ ಆಫ್ ಮಿಸ್ಟ್ ಅದೆಷ್ಟು ಲಕ್ಷ ಜನರನ್ನು ಹೀಗೆ ಹೊತ್ತಿ ತಿರುಗಿರಬಹುದೆಂದು ಯೋಚಿಸಿತು ಮನಸ್ಸು….. ರಾಜರು, ರಾಣಿಯರು, ಅಧ್ಯಕ್ಷರು, ಪ್ರಧಾನ ಮಂತ್ರಿಗಳು, ಸಿನಿಮಾ ಸ್ಟಾರ್ಗಳು ಹೀಗೆ ಪ್ರತಿಯೊಬ್ಬರಿಗೂ ನಯಾಗರದ ರೋಮಾಂಚನದ ಸ್ಪರ್ಶವನ್ನು, ಮೇಡ್ ಆಫ್ ಮಿಸ್ಟ್ ದೊರಕಿಸಿಕೊಟ್ಟಿದೆಯಲ್ಲ ಎಂದು ಅಭಿಮಾನದ ಭಾವ ತೆಗೆದುಕೊಂಡಿತು ಮನಸ್ಸು.  ಹಾರ್ಸ ಷೂ ಫಾಲ್ಸ್ನಡೆಗೆ ತೆರಳಿ ವಾಪಸ್ ಆಗುವಾಗ ಅಮೆರಿಕಾ ನಯಾಗರನ್ನು ಸಿಕ್ಕಷ್ಟು ಕಣ್ಣಲ್ಲಿ ತುಂಬಿಕೊಂಡಿತು ತನ್ನ ಹ್ಯಾಂಡಿ ಕ್ಯಾಮ್………ಧುಮ್ಮಿಕ್ಕಿದ ನೀರು ಗಂಭೀರವಾಗಿ ಕೆನಡಾ ಕಡೆಗೆ ನಕ್ಕು ಹೋದಂತೆ ಭಾಸವಾಯಿತು ತನಗೆ……
ಆಂಕರ್:

ವಾಯ್ಸ್ ಓವರ್ 3:
ನಯಾಗರದ ಮೋಹಕ್ಕೆ ಸಿಕ್ಕಿವರು, ಈ ಫಾಲ್ಸ್ನಿಂದ ಸ್ಫೂತರ್ಿ ಪಡೆದವರು, ಪ್ರೇರೆಪಿತರಾದವರು ನೂರಾರು ಮಂದಿ. ಸಾಹಿತಿಗಳು, ಸಿನಿಮಾ ನಿದರ್ೇಶಕರು, ನಟರು ಈ ಸ್ಥಳಕ್ಕೆ ನೂರಾರು ಬಾರಿ ಭೇಟಿ ನೀಡಿ ಸ್ಫೂತರ್ಿ ಪಡೆದಿದ್ದಾರೆ. ಹಾಗೆಯೇ ನೂರಾರು ಮಂದಿ ನಯಾಗರ ಫಾಲ್ಸ್ನಿಂದ ಧುಮುಕಲು ಪ್ರಯತ್ನಿಸಿ ಜೀವ ಕಳೆದುಕೊಂಡಿದ್ದಾರೆ, ಗಾಯಗೊಂಡಿದ್ದಾರೆ ಹಾಗೆಯೇ ಜಯಶಾಲಿಗಳೂ ಆಗಿದ್ದಾರೆ. 1829 ರಿಂದಲೂ ಈ ಫಾಲ್ಸ್ನಿಂದ ಜಿಗಿಯಲು ನೂರಾರು ಮಂದಿ ಪ್ರಯತ್ನಿಸಿದ್ದಾರೆ. ಅವರಲ್ಲಿ ಸ್ಯಾಮ್ ಫಾಚ್ ನಯಾಗರ ಫಾಲ್ಸ್ನಿಂದ ಜಿಗಿದ ಮೊಟ್ಟ ಮೊದಲ ಅಮೆರಿಕಾ ಪ್ರಜೆ. ಆನಂತರ ಹಲವಾರು ಮಂದಿ ಈ ಫಾಲ್ಸ್ನಿಂದ ಡ್ರಮ್ಗಳಲ್ಲಿ ತಲೆ ಹೊರಹಾಕಿ ಕುಳಿತು ಜಿಗಿದು ಯಶಸ್ವಿಯೂ ಆಗಿದ್ದಾರೆ. ಕೆಲವರು ಜೀವ ಕಳೆದುಕೊಂಡಿದ್ದಾರೆ. ಆದ್ದರಿಂದಲೇ ಅಮೆರಿಕಾ ಸಕರ್ಾರ ನಯಾಗರದಲ್ಲಿ ಜನರು ಯಾವುದೇ ರೀತಿಯ ಸ್ಟಂಟ್ ಮಾಡುವುದನ್ನು ನಿಷೇಧಿಸಿದೆ. ಆಯತಪ್ಪಿ ಬಿದ್ದು ಈ ಫಾಲ್ಸ್ ಬಳಿ ಸಾವನ್ನಪ್ಪಿದವರ ಸಂಖ್ಯೆ ಕಡಿಮೆ.

ಮಲರ್ಿನ್ ಮನ್ರೋ ಹಾಗೂ ಜೋಸೆಫ್ ಕಾಟನ್ ಜೋಡಿಯ ನಯಾಗರ ಸಿನೆಮಾ 1853 ರಲ್ಲಿ ತೆರೆ ಕಂಡ ನಂತರ ನಯಾಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಈಗ ಪ್ರತಿ ವರ್ಷ ಸುಮಾರು 3 ಕೋಟಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ನಯಾಗರಕ್ಕೆ ವಿಶ್ವದ ನಾನಾ ಭಾಗದ ಭಾರತೀಯ ಪ್ರವಾಸಿಗರು ಭೇಟಿ ನೀಡುತ್ತಾರೆ. ನಿಮಿಷಕ್ಕೊಬ್ಬರಂತೆ ಕನರ್ಾಟಕದವರೂ ಇಲ್ಲಿ ಸಿಗುತ್ತಾರೆ. ಸೂಪರ್ ಮ್ಯಾನ್ ಸೆಕೆಂಡ್ ಸಿನೆಮಾದಲ್ಲೂ ನಯಾಗರ ಫಾಲ್ಸ್ ಕಾಣಿಸಿಕೊಂಡಿದೆ. 2006 ರಲ್ಲಿ ಫೈರೇಟ್ಸ್ ಆಫ್ ಕೆರೆಬಿಯನ್ ಸಿನಿಮಾದಲ್ಲೂ ನಯಾಗರವನ್ನು ಬಳಸಿಕೊಳ್ಳಲಾಗಿದೆ.
ನಯಾಗರಕ್ಕೆ ಬೇಸಿಗೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು.
ರಾತ್ರಿ ವೇಳೆಯೂ ನಯಾಗರವನ್ನು ನೋಡಿ ಆನಂದಿಸಲು ಬಣ್ಣದ ಬೆಳಕಿನ ವ್ಯವಸ್ಥೆ ಇಲ್ಲಿದೆ. ಕೆನಡಾ ದಂಡೆಯಿಂದ ಫಾಲ್ಸ್ನ ಮೇಲೆ ಹರಿಸಲಾಗುವ ಫ್ಲಡ್ ಲೈಟ್ನಲ್ಲಿ ನಯಾಗರ ನೋಡಲು ಸಾಧ್ಯವಾಗಲಿಲ್ಲ ತನಗೆ. ಆಗ ಅಲ್ಲಿ ಬಿದ್ದ ಮಳೆಯೇ ಇದಕ್ಕೆ ಕಾರಣ. ಹಾಗೆಯೇ ಅಲ್ಲಿ ಪಟಾಕಿ ಸಿಡಿಸುವುದನ್ನು ಕಾಣಲಾಗಲಿಲ್ಲ. ಆದರೆ ನಯಾಗರದಲ್ಲಿರುವ ಕ್ಯಾಸಿನೋಗೆ ಹೋಗಿದ್ದೆ. ಅಲ್ಲಿ ಎಲ್ಲ ವಯಸ್ಸಿನವರೂ ಒಟ್ಟಿಗೆ ಕುಳಿತು ಕ್ಯಾಸಿನೋ ಜೂಜಾನ್ನು ಆಡುವುದನ್ನು ಗಮನಿಸಿದೆ. ಆನಂತರ ಮುಗಿಬಿದ್ದ ಮಳೆಯಲ್ಲಿಯೇ ಲಗ್ಗೇಜು ಎಳೆದುಕೊಂಡು ಬಸ್ ಹತ್ತಿದೆ ತಾನು. ಅಲ್ಲಿಂದ ವಾಷಿಂಗ್ಟನ್ಗೆ ಪ್ರಯಾಣ ಬೆಳೆಸಿದೆ…………………
 

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಸೆಪ್ಟೆಂಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಗಸ್ಟ್   ಆಕ್ಟೋ »
   12345
  6789101112
  13141516171819
  20212223242526
  27282930  
 • ವಿಭಾಗಗಳು