1. ಕನ್ನಡಪ್ರಭದ ಗೀತೆ: 2. ಹೆಗಡೆ ಪಗಡೆ:

1.ಕನ್ನಡಪ್ರಭದ ಗೀತೆ:
ವಸಂತು ಈಗ ಸಂತನಲ್ಲ
ಸಂತಾನೋತ್ಪತಿಗಾಗಿ ಸತಿಯನ್ನು ಸಂತೈಸುತ್ತಿರುವ ಕನ್ನಡಪ್ರಭ ಸುತ.

(ವಿಜಯ ಕನರ್ಾಟಕದಲ್ಲಿರುವ ವಸಂತ್ ನಾಡಿಗೇರ್ ಆಗತಾನೆ ಮದುವೆಯಾಗಿದ್ದರು. ಕನ್ನಡಪ್ರಭ ಕಚೇರಿಯಲ್ಲಿ ನಾವು ನಾಡಿಗೇರ್ ದಂಪತಿಗೆ ಸತ್ಕಾರ ಕೂಟ ಏರ್ಪಡಿಸಿದ್ದೆವು. ಆಗ ನಾನು ಆ ಕಾರ್ಯಕ್ರಮದಲ್ಲಿ ತಕ್ಷಣವೇ ಬರೆದ ಕವಿತೆ. ಕನ್ನಡಪ್ರಭ ಗೀತೆ. ಇದಕ್ಕೆ 13 ವರ್ಷ ತುಂಬಿದೆ ಎಂದೇ ಹೇಳಬಹುದು.) 
2. ಹೆಗಡೆ ಪಗಡೆ:
ಹೆಗಡೆ ಈಗ ಪಗಡೆಯಾಡಿದರೆ ಆಗುವುದು ಗ್ಯಾರಂಟಿ ನೆಗಡಿ
ಪೋಖ್ರಾನ್ ಧೂಳು ದೆಹಲಿ ಸೇರಿದ್ದು
ವಾಜಪೇಯಿಗಂತೂ ಕಚಗುಳಿ
ಸೋನಿಯಾಗದು ಕಳಕಳಿ
ಕಮ್ಮಿನಿಷ್ಠರಿಗೆ ಹುಳಿ ಹುಳಿ
ಸಂಯುನಿಷ್ಠರಿಗೆ ಓಹೋ ರೀ
ಪಾಕಿಷ್ಠರಿಗೆ ಕೋಪಾರೀ
ಹಿಂದಿಷ್ಠರಿಗೆ ದೀಪಾವಳಿ ರೀ
ರಷ್ಯನ್ನರಿಗೆ ಆಹಾರೀ
ಪರಂಗಿಗಳಿಗೆ ಇರಲಿರೀ
ಸಾಮಾನ್ಯರಿಗೆ ಏನೆನೋ ರೀ
ಚೀನಿಯರಿಗೆ ಮುನಿಸು ರೀ
ಸ್ತ್ರೀ ಭುಟ್ಟೋಗೆ ಮುಟ್ಟಲ್ಲ ರೀ
ಜಪಾನಿಗೆಕೋ ಅಳು ರೀ
ಚಂದ್ರಿಕಾಗಂತೂ ಖುಷಿ ರೀ
ಕೆನಡಿಗಳಿಗೆ ಕಣ್ಣುರಿ
ಕಿವಿಗಳಿಗೆ ಕಾಲುರಿ
ಕಾಂಗೊರೊಗೆ ಗೊತ್ತಿಲ್ಲ ರೀ
ವಿಹೆಚ್ಪಿಗೆ ಭಕ್ತಿ ರೀ
ಆಫ್ರಿಕನ್ನರು ಆಕಳಿಸಿದರು ರೀ
ಅಮೆರಿಕನ್ನರಿಗೇ ಇಷ್ಟೆನಾ ಬಿಡ್ರಿ
ಆದರೂ ಬಾಯಿ ಬಡಿದುಕೊಂಡವರು ಅವರೇ ರೀ

ಆದರೂ ಹೆಗಡೆಗೆ ಪರವಾಗಿಲ್ಲ ಬಿಡ್ರೀ..
—ಎಂ.ಎನ್. ಚಂದ್ರೇಗೌಡ, ಉಪ ಸಂಪಾದಕ ಕನ್ನಡಪ್ರಭ

ಅಟಲ್ ಬಿಹಾರಿ ವಾಜಪೇಯಿ ಆಗಿದ್ದಾಗ ಪೊಖ್ರಾನ್ ಅಣುಬಾಂಬ್ ಪರೀಕ್ಷೆ ನಡೆಸಿದ್ದು. ಆಗ ಹೆಗಡೆ ಇದ್ದರು. ಅವರೊಂದು ಹೇಳಿಕೆ ನೀಡಿದ್ದರು. ಆಗ ಬರೆದ ಹೆಗಡೆ ಪಗಡೆ ಗೀತೆಗೂ 13 ವರ್ಷ ತುಂಬಿದೆ. ಇವುಗಳೆಲ್ಲಾ ಮನೆಯಲ್ಲಿ ಪೇಪರ್ ಖಾಲಿ ಮಾಡುವಾಗ ಸಿಕ್ಕಿವೆ. ಅವುಗಳನ್ನು ಇಲ್ಲಿ ಹಾಕಿದ್ದೇನೆ.

Advertisements

ಹೈಕಮಾಂಡ್ಗೆ ರೆಡ್ಡಿ ಪಾಳೇಯ ದೊಡ್ಡ ಮೊತ್ತದ ನಿಧಿಯೊಂದನ್ನು ಕಾಣಿಕೆಯಾಗಿ ನೀಡಿ ಯಡಿಯೂರಪ್ಪನವರ ನಾಯಕತ್ವವನ್ನು ಬಲಿ ಪಡೆಯಲು ಸಂಪೂರ್ಣ ಕಾರ್ಯನಿರತವಾಗಿದೆ

DSCN6504

DSCN6505

DSCN6508

ಜೆಡಿಎಸ್ ಬೆಂಬಲಯಾಚಿಸಿ ನಾಯಕರ ಮನೆ ತಿರುಗಿದ ಜಿಜೆಪಿ ನಾಯಕರು:
ಬೆಂಗಳೂರು: ರೆಡ್ಡಿ ಬ್ರದಸರ್್ಗಳ ಬಲ ಪ್ರದರ್ಶನದಿಂದ ಕಂಗೆಟ್ಟಿರುವ ಯಡಿಯೂರಪ್ಪ ಪಾಳೇಯ, ವಗರ್ಾವಣೆ ಬಿಟ್ಟು ಮತ್ತೇನನ್ನೂ ಮಾಡದ ಸ್ಥಿತಿ ತಲುಪಿದ್ದು ಕಡೇ ಪ್ರಯತ್ನವೆಂಬಂತೆ ಜೆಡಿಎಸ್ ನಾಯಕರ ಬೆಂಬಲ ಕೋರಿ ಆ ಪಕ್ಷದ ನಾಯಕರ ಮನೆ ಬಾಗಿಲಿಗೆ ಹೋಗಿ ನಿಂತಿದೆ. ಈ ಮೂಲಕ ತನ್ನ ಬಳಿ ಬೇರೆ ಆಪ್ಷನ್ಗಳಿವೆ ಎಂಬುದನ್ನು ಯಡಿಯೂರಪ್ಪ ಬಣ ವಿರೋಧಿಗಳಿಗೆ ರವಾನಿಸಲು ಪ್ರಯತ್ನಪಟ್ಟಿದೆ. ಮುಖ್ಯಮಂತ್ರಿ ಯಡಿಯೂರಪ್ಪವನರಿಗೆ ಆಪ್ತರಾದ ಸಚಿವರೊಬ್ಬರು ನಿನ್ನೆ ಜೆಡಿಎಸ್ ನಾಯಕರ ಮನೆಗೆ ಸರಿಹೊತ್ತಿನಲ್ಲಿ ತೆರಳಿ ಬಹಿರಂಗ ಬೆಂಬಲ ಘೋಷಿಸುವಂತೆ ದುಂಬಾಲು ಬಿದ್ದಿದ್ದಾರೆ. ಆದರೆ ಎಂದಿನಂತೆ ದೇವೇಗೌಡರಿಗೆ ಆ ಪಕ್ಷದ ಶಾಸಕರೆಲ್ಲಾ ಅಂತಿಮ ತೀಮರ್ಾನ ತೆಗೆದುಕೊಳ್ಳಲು ಜವಾಬ್ದಾರಿ ನೀಡಿರುವುದರಿಂದ ಗೌಡರು ಏನು ಮಾಡುತ್ತಾರೆಂದು ಯಾರಿಗೂ ತಿಳಿಯುತ್ತಿಲ್ಲ.
ಇತ್ತ ರೆಡ್ಡಿ ಬ್ರದರ್ಸ ಪಾಳೇಯದಲ್ಲೇ ಚಟುವಟಿಕೆಗಳು ತೀವ್ರಗೊಂಡಿದ್ದು ಪಕ್ಷ ಉಳಿಯಬೇಕೋ ಅಥವಾ ಯಡಿಯೂರಪ್ಪ ಬೇಕಾ ನೀವೆ ತೀಮರ್ಾನಿಸಿ ಎಂದು ಹೈಕಮಾಂಡ್ಗೆ ತಾಕೀತು ಮಾಡಲು ರೆಡ್ಡಿ ಬ್ರದರ್ಸ ಸಜ್ಜಾಗುತ್ತಿದ್ದಾರೆ. ಬಳ್ಳಾರಿಯಲ್ಲಿ ಒಂದೇ ಒಂದು ಸೀಟು ಬಿಜೆಪಿದು ಇರಲಿಲ್ಲ. ರಾಯಚೂರಿನಲ್ಲಿ ಎಂಪಿ ಸೀಟನ್ನು ಬಿಜೆಪಿ ಎಂದೂ ಗೆದ್ದಿರಲಿಲ್ಲ. ಇನ್ನು ಗದಗದಲ್ಲಿ ಎಚ್. ಕೆ. ಪಾಟೇಲ್ ರಾಜಕೀಯ ಪಾಳೇಗಾರಿಕೆಯನ್ನು ಮುರಿಯಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಮಾಜಿ ಪ್ರಧಾನಿಗಳ ಉಪಟಳ ಅಡಗಿಸಲು ಆಗಿರಲಿಲ್ಲ. ಇದನ್ನೆಲ್ಲಾ ಮಾಡಿದ್ದು ನಾವು. ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಮಾಡಿದ್ದೇನು? ವಗರ್ಾವಣೆ ವಿಷಯದಲ್ಲಿ ಯಡಿಯೂರಪ್ಪ ನಡೆದುಕೊಂಡಿದ್ದು ಹೇಗೆ? ಯಡಿಯೂರಪ್ಪನವರಿಗೆ ಇನ್ನೂ ಪಕ್ಷದ ಕೆಲವು ಶಾಸಕರ ಹೆಸರೇ ಗೊತ್ತಿಲ್ಲ. ಹೀಗೆ ಹೈಕಮಾಂಡ್ ಮುಂದೆ ತಮ್ಮ ವಕಾಲತ್ತು ಮಂಡಿಸಲು ರೆಡ್ಡಿ ಬ್ರದಸರ್್ಗಳು ಸಿದ್ಧವಾಗಿದ್ದಾರೆ. ಒಂದು ವೇಳೆ ಹೈಕಮಾಂಡ್ ಯಡಿಯೂರಪ್ಪ ಅವರನ್ನೇ ಮುಂದುವರೆಸಲು ತೀಮರ್ಾನಿಸಿದರೆ ರೆಡ್ಡಿ ಬ್ರದರ್ಸ ಗುಂಪಿನ 56 ಮಂದಿ ಶಾಸಕರೆಲ್ಲಾ ರಾಜೀನಾಮೆ ನೀಡಿ ಅತಂತ್ರ ಸ್ಥಿತಿ ಸೃಷ್ಟಿ ಮಾಡಲು ಮತ್ತೊಂದು ದಾಳವನ್ನು ಸಹ ಸಿದ್ಧಮಾಡಿಕೊಂಡಿದ್ದಾರೆ. ಮೂಲವೊಂದರ ಪ್ರಕಾರ, ಈಗಾಗಲೇ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ರಾಜೀನಾಮೆ ಸಲ್ಲಿಸಲು ಸೂಚಿಸಿದೆ ಎಂಬ ಸುದ್ದಿ ನಿನ್ನೆ ರಾತ್ರಿಯೇ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಮಠಾಧೀಶರೆಲ್ಲಾ ಪೋನಾಯಿಸಿ ಕೇಳಲು ಶುರು ಮಾಡಿದ್ದಾರೆ. ಮುಖ್ಯಮಂತ್ರಿ ಕಚೇರಿಯಿಂದಲೇ ನಿನ್ನೆ ಹಲವಾರು ಮಠಗಳಿಗೆ ಕರೆಗಳು ಹೋಗಿವೆ. ತಕ್ಷಣವೇ ವಿಶ್ವಾಸ ಮತಯಾಚನೆಗೆ ಕೈಹಾಕಬಾರದೆಂದು ಯಡಿಯೂರಪ್ಪ ಪಾಳೇಯ ತನ್ನ ಹಳೆಯ ಪ್ಲಾನನ್ನು ಈಗ ಕೈಬಿಟ್ಟಂತಿದೆ. ಈಗ ಯಡಿಯೂರಪ್ಪಗೆ ಹೈಕಮಾಂಡ್ನಲ್ಲಿ ಅಂಥಹ ವಿಶ್ವಾಸವಿರುವ ಯಾವುದೇ ವ್ಯಕ್ತಿಗಳಿಲ್ಲ. ಅಲ್ಲಿರುವುದೆಲ್ಲ ಅನಂತಕುಮಾರ್ ಪಾಳೇಯದ ಜನರೇ. ಒಂದು ಕಡೆ ಈಗಾಗಲೇ ಹಲವಾರು ಹಿನ್ನಡೆಗಳಿಂದ ಸೊರಗಿ ಹೋಗಿರುವ ಹೈಕಮಾಂಡ್ಗೆ ರೆಡ್ಡಿ ಪಾಳೇಯ ದೊಡ್ಡ ಮೊತ್ತದ ನಿಧಿಯೊಂದನ್ನು ಕಾಣಿಕೆಯಾಗಿ ನೀಡಿ ಯಡಿಯೂರಪ್ಪನವರ ನಾಯಕತ್ವವನ್ನು ಬಲಿ ಪಡೆಯಲು ಸಂಪೂರ್ಣ ಕಾರ್ಯನಿರತವಾಗಿದೆ. ಇನ್ನೆನಿದ್ದರೂ ಯಡಿಯೂರಪ್ಪ ತಾನು ಕಟ್ಟಿ ಬೆಳೆಸಿದ ಬಿಜೆಪಿ ನಾಯಕರ ವಿರುದ್ಧವೇ ಹೋರಾಡುವ ಸ್ಥಿತಿ ತಲುಪುವುದೊಂದೆ ಬಾಕಿ ಇದೆ.
–ಎಂ.ಎನ್. ಚಂದ್ರೇಗೌಡ

ನಮ್ಮೂರ ಕಂಬದ ಲಕ್ಷೀ ನರಸಿಂಹಸ್ವಾಮಿ….ನಿನಗಿದೋ ವಂದನೆ

DSCN5967DSCN5997

DSCN5992

Around the Orlando, disney world, America, America ಪಡ್ಡೆ ಹುಡುಗ, ಹುಡಿಗಿಯರಿಗಂತೂ ಈ ಜಾಗ ಕಚಗುಳಿ ಇಡುತ್ತದೆ.

ಫ್ಲೋರಿಡಾ ರಾಜ್ಯದಲ್ಲಿರುವ ಅಲರ್ಾಂಡೋನಲ್ಲಿದೆ ಡಿಸ್ನಿ ವಲ್ರ್ಡ:
ಇದೊಂದು ಮಕ್ಕಳ ಸ್ವರ್ಗ, ದೊಡ್ಡವರ ಖುಷಿಯ ತಾಣ. ಎಲ್ಲ ವಯಸ್ಸಿನವರಿಗೂ ಇಲ್ಲಿ ಆಟಗಳಿವೆ. ಪಡ್ಡೆ ಹುಡುಗ, ಹುಡಿಗಿಯರಿಗಂತೂ ಈ ಜಾಗ ಕಚಗುಳಿ ಇಡುತ್ತದೆ. ಆದರೆ ಒಬ್ಬಂಟಿಯಾಗಿ ನನ್ನಂತೆ ನೋಡಲು ಹೋದವರಿಗೆ ಈ ಜಾಗ, ಹೆಂಡತಿ, ಮಕ್ಕಳನ್ನು ನೆನಪಿಸುತ್ತದೆ. ಅವರಿಲ್ಲದೇ ನಾನೇನು ಖುಷಿಪಡಲಿ ಎನಿಸುತ್ತದೆ.

IMGP1621IMGP1538

IMGP1602IMGP1505IMGP1757

IMGP1573

IMGP1498

IMGP1499

IMGP1506

IMGP1503

IMGP1575

IMGP1586

IMGP1597

IMGP1599

IMGP1614

IMGP1775

IMGP1766

IMGP1764

IMGP1715

IMGP1663

ಜಗದೀಶ್ ಶೆಟ್ಟರ್ಗೆ ನೀರಿಳಿಸಿದ ಪೇಜಾವರ ಶ್ರೀ….ವಿ.ಪಿ. ಬಳಿಗಾರ್ ಎತ್ತಂಗಡಿಗೆ ನಿಧರ್ಾರ?

ಜಗದೀಶ್ ಶೆಟ್ಟರ್ಗೆ ನೀರಿಳಿಸಿದ ಪೇಜಾವರ ಶ್ರೀ….ವಿ.ಪಿ. ಬಳಿಗಾರ್ ಎತ್ತಂಗಡಿಗೆ ನಿಧರ್ಾರ? ಬೆಂಗಳೂರು: ಮುಖ್ಯಮಂತ್ರಿ ಆಗುವ ಕನಸು ಹೊತ್ತುಕೊಂಡು ಪೇಜಾವರ ಶ್ರೀಗಳ ಆಶೀರ್ವಚನ ಕೇಳಲು ಹೋಗಿದ್ದ ಜಗದೀಶ್ ಶೆಟ್ಟರ್ಗೆ ಪೇಜಾವರ ಶ್ರೀಗಳು ಬೆವರಿಳಿಸಿ ಕಳುಹಿಸಿದ ಘಟನೆ ನಡೆದಿದೆ. ರೆಡ್ಡಿ ಬ್ರದರ್ಸಗಳ ಬೆಂಬಲದಿಂದ ಮುಖ್ಯಮಂತ್ರಿಯಾಗುವ ಆಸೆಯೊಂದಿಗೆ ನಿನ್ನೆ ಜಗದೀಶ್ ಶೆಟ್ಟರ್ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಆಶೀವರ್ಾದ ಯಾಚಿಸಿದ್ದಾರೆ. ಆದರೆ ಶೆಟ್ಟರ್ ಮುಖ್ಯಮಂತ್ರಿಯಾಗಲು ಆಶೀವರ್ಾದ ಮಾಡಿರೆಂದು ಕೇಳುತ್ತಿದ್ದಂತೆಯೇ, ಪೇಜಾವರ ಶ್ರೀಗಳು, ನೀನಿನ್ನು ಏ ಮಟ್ಟಕ್ಕೆ ಬೆಳೆದಿಲ್ಲ ಶೆಟ್ಟರ್, ಮೊದಲು ಪಾಟರ್ಿ ಉಳಿಸಿ ಬೆಳೆಸುವುದನ್ನು ನೋಡಿ. ಈಗಾಗಲೇ ಬಿಜೆಪಿ ಎಲ್ಲ ಕಡೆ ನೆಲಕಚ್ಚಿದೆ ಈಗ ಇಲ್ಲೂ ಕಲ್ಲು ಹಾಕಬೇಡಿ. ಸುಮ್ಮನೆ ಮಂತ್ರಿಯಾಗಿ ಕಾರ್ಯನಿರ್ವಹಿಸಿರೆಂದು ಕಿವಿ ಮಾತು ಹೇಳಿದರೆಂದು ಮೂಲಗಳು ತಿಳಿಸಿವೆ. ಪೇಜಾವರ ಶ್ರೀಗಳ ಸೂತ್ರದ ಪ್ರಕಾರ, ಜಗದೀಶ್ ಶೆಟ್ಟರ್ಗೆ ಬೃಹತ್ ನೀರಾವರಿ ಸಚಿವ ಖಾತೆ ದೊರೆಯಲಿದೆ. ಬಿಕ್ಕಟ್ಟು ಶಮನಗೊಳಿಸಲು ಸಿ.ಎಂ. ಉದಾಸಿ ಅವರನ್ನು ಸಭಾಕ್ಷರನ್ನಾಗಿ ನೇಮಿಸಿ, ಬಸವರಾಜ ಬೊಮ್ಮಾಯಿಗೆ ಲೋಕೋಪಯೋಗಿ ಖಾತೆ ನೀಡಲು ನಿರ್ಧರಿಸಲಾಗಿದೆ ಜತೆಗೆ ಹಿರಿಯ ಐಎಎಸ್ ಅಧಿಕಾರಿ ವಿ.ಪಿ. ಬಳಿಗಾರ್ರನ್ನು ಎತ್ತಂಗಡಿ ಮಾಡಲು ನಿರ್ಧರಿಸಲಾಗಿದೆಯಂತೆ. ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ಸೇವೆಗೆ ಬಳಸಿಕೊಳ್ಳಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ. ಕರುಣಾಕರ ರೆಡ್ಡಿಯನ್ನು ಗೃಹ ಸಚಿವರನ್ನಾಗಿ ಮಾಡಲು ಅರುಣ್ ಜೈಟ್ಲಿಯೇ ಒಪ್ಪಲಿಲ್ಲವೆಂದು ಆಂತರಿಕ ಮೂಲಗಳು ತಿಳಿಸಿವೆ.

ಅಮ್ಮ neenu matte nenapaade, ನೀನು ಮಾಡಿದ ಅತಿ ದೊಡ್ಡ ತಪ್ಪೆಂದರೆ ಮನೆಯ ಮುಂದೆ ಹಾಗೆ ಬಿದ್ದಿದ್ದು………..

DSCN6129

ಅಮ್ಮ : ನೀನು ಮಾಡಿದ ಅತಿ ದೊಡ್ಡ ತಪ್ಪೆಂದರೆ ಮನೆಯ ಮುಂದೆ ಹಾಗೆ ಬಿದ್ದಿದ್ದು. ನೀನು ಬಿದ್ದ ನಂತರ ನಿನ್ನ ಜತೆ ನನ್ನ ಬದುಕು ನರಕ ಆಯಿತು. ಒಮ್ಮೆಯೂ ಅಸೂಯೆ ಪಡದ,ಯಾರೊಬ್ಬರಿಗೂ ಕೆಡಕು ಬಯಸದ ನಿನ್ನನ್ನು ಆ ದೇವರು ಹೀಗೆ ಬೀಳಿಸುವ ಮೂಲಕ ಯಾಕೆ ಶಿಕ್ಷೆಗೆ ಗುರಿಪಡಿಸಿದನೋ ಎಂದೆನಿಸುತ್ತದೆ. ಹಾಗೆ ಬಿದ್ದ ನಿನ್ನನ್ನು ಸಾವಿನ ದವಡೆಯಿಂದ ಪಾರುಮಾಡಿಸಲು ಸಾಧ್ಯವಿಲ್ಲದ ನಾಲಾಯಕ್ ಮಗನಾದೆನಲ್ಲ ಎಂದು ಸದಾ ಗೋಳಿಡುತ್ತದೆ ಮನಸ್ಸು. ರಾತ್ರಿ 12 ಗಂಟೆ, 1 ಗಂಟೆಗೆ ಬಂದರೂ ಚಂದ್ರಪ್ಪ ಊಟ ಮಾಡಿದೆಯಾ ಎಂದು ನಿನ್ನ ಕೂಗೊಂದು ಇರುತ್ತಿತ್ತು. ಅದಿನ್ನು ಕನಸು. ಒಮ್ಮೆಯೂ ನನ್ನನ್ನು ಶಂಕಿಸದ, ಗದರಿಸದ, ಮೂದಲಿಸದ ನಿನ್ನ ಸಾವು, ನನಗೆ ಹಲವಾರು ಸತ್ಯಗಳ ದರ್ಶನಗಳನ್ನು ಮಾಡಿಸಿದೆ. ಬದುಕಿನ ಮತ್ತೊಂದು ಮಗ್ಗುಲಿನ ದರ್ಶನವನ್ನು ಮಾಡಿಸಿದೆ.
ಎಲ್ಲರೂ ನಿನ್ನ ಸಾವಿಗೆ ಕಾದು ಕುಳಿತ್ತಿದ್ದರೆನೋ ಎಂದೆನಿಸುತ್ತದೆ. ಅಷ್ಟೊಂದು ಜನರಿಗೆ ಊಟ ಹಾಕಿದ, ನೂರಾರು ಜನರ ಸಂಕಷ್ಟಗಳಿಗೆ ಸ್ಪಂದಿಸಿದ ನಿನಗೆ ಯಾರೊಬ್ಬರೂ ಕಡೆಗಾಲದಲ್ಲಿ ಖುಷಿಯಿಂದ ನೋಡಿಕೊಳ್ಳುವವರು ಸಿಗಲಿಲ್ಲವಲ್ಲ. ನನ್ನಲ್ಲಿ ಏನಿರಲಿಲ್ಲ ಹೇಳು, ಎಲ್ಲವೂ ಇತ್ತು. ಹಣ, ಸಂಪರ್ಕ, ಬುದ್ಧಿವಂತಿಕೆ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಹಪಾಹಪಿಕೆ ಇತ್ತು. ಆದರೆ ಬಿಡುವಾಗಿ ನಿನ್ನ ಬಳಿ ಕುಳಿತುಕೊಂಡು ನಿನ್ನ ಕಷ್ಟ ಸುಖಗಳನ್ನು ಕಡೆಗಾಲದಲ್ಲಿ ಕೇಳಲಾಗಲಿಲ್ಲ ನನಗೆ. ನಿನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವ ಒಬ್ಬಳೇ ಒಬ್ಬಳು ಸಾಮಾನ್ಯ ನಸರ್್ನ್ನು ನಿನಗೆ ಒದಗಿದಲಾಗಲಿಲ್ಲ ನನಗೆ.
ಅದೆಷ್ಟು ಮಂದಿಯನ್ನು ಕರೆ ತಂದೆ ನಾನು. ಕೇರಳದಿಂದ, ಮಡಿಕೇರಿಯಿಂದ ಎಷ್ಟೆಲ್ಲಾ ಜನ ಬಂದರು. ಅಕ್ಕ, ಮಾವ ಸೇರಿದಂತೆ ಎಷ್ಟೆಲ್ಲಾ ಜನ ನೋಡಿಕೊಂಡರು ನಿನ್ನನ್ನು. ಆದರೆ ಯಾರೂ ನಿನಗೆ ಪ್ರೀತಿಕೊಡಲಿಲ್ಲ. ವಿಶ್ವಾಸ ತುಂಬಲಿಲ್ಲ. ನೀನು ಬದುಕಬಲ್ಲೆ ಎಂದು ಹುರಿದುಂಬಿಸಲಿಲ್ಲ. ನಿನಗೇನೂ ಕ್ಯಾನ್ಸರ್ ಇರಲಿಲ್ಲ. ಕ್ಷಯ, ಏಡ್ಸ್ನಂಥಹ ಜೀವ ತಿನ್ನುವ ಕಾಯಿಲೆಗಳಿರಲಿಲ್ಲ. ಕಣ್ಣು, ಹೃದಯ, ಕಿಡ್ನಿ, ಫ್ಯಾಂಕ್ರಿಯಾ ಎಲ್ಲವೂ ಚೆನ್ನಾಗಿತ್ತಲ್ಲವೇ? ಸಾಮಾನ್ಯವಾದ ಸಕ್ಕರೆ ಕಾಯಿಲೆ ಇತ್ತು ನಿನಗಷ್ಟೇ. ಬಿದ್ದಿದಷ್ಟೇ ನೀನು ಮಾಡಿದ ಮಹಾಪಾಪ. 77 ವರ್ಷವಾದರೂ ಅಡುಗೆ ಮಾಡುತ್ತಿದ್ದ, ಬಟ್ಟೆ ಒಗೆದುಕೊಳ್ಳುತ್ತಿದ್ದ, ಊಟ ಬಡಿಸುತ್ತಿದ್ದ, ಮನೆ ಗುಡಿಸುತ್ತಿದ್ದ, ವಾಕಿಂಗ್ ಹೋಗುತ್ತಿದ್ದ ನಿನ್ನನ್ನು ಬೀಳಿಸಿ ಬಲಿ ತೆಗೆದುಕೊಳ್ಳುವ ಮನಸ್ಸನ್ನು ಆ ದೇವರು ಏಕೆ ಮಾಡಿದನೋ ಎಂದೆನಿಸುತ್ತದೆ.
ನಿನಗೆ ಪ್ರಶಸ್ತಿಗಳನ್ನು ಕೊಡುವುದಿದ್ದರೆ ನಮ್ಮ ಮನೆಯೆಲ್ಲಾ ತುಂಬಿ ತುಳುಕುತ್ತಿದ್ದವೇನೋ…ಏಕೆಂದರೆ ಯಾವುದೇ ಪ್ರತಿಫಲಾಪೇಕ್ಷೆಪಡದೆ ಏನೆಲ್ಲಾ ಮಾಡಿದೆ ನೀನು. ಸಾಲು ಮರದ ತಿಮ್ಮಕ್ಕ ಅವಳ ಜಾಗದಲ್ಲಿ ಮರ ನೆಟ್ಟು ಬೆಳೆಸಿದರೆ ನೀನು ರೈಲು ರಸ್ತೆ, ರಾಷ್ಟ್ರೀಯ ಹೆದ್ದಾರಿಯ ಹತ್ತಾರು ಮೈಲಿ ಎರಡು ಬದಿಯ ಮರಗಳನ್ನು ತಲೆಯ ಮೇಲೆ ನೀರು ಹೊತ್ತೊಯ್ದು ಉಯ್ದು ಬೆಳೆಸಿದೆ. ನೂರಾರು ಮಂದಿ ಇಂದು ನೇರಳೆ, ಮಾವಿನ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದರೆ ಅದರ ಹಿಂದೆ ನಿನ್ನ ಬೆವರಿನ ಹನಿಗಳಿವೆ ಎಂಬುದು ಖುಷಿಕೊಡುತ್ತದೆ. ಊರಲ್ಲೊಂದು ಕಟ್ಟೆಯ ಕಟ್ಟಿ ನೂರಾರು ದನ ಕರುಗಳು ನೀರಿಗಾಗಿ ಅಲೆಯದಂತೆ ಮಾಡಿದೆ. ಬರ ಬಂದಾಗ ಬೆಳಿಗ್ಗೆ ಹಚ್ಚಿದ ಮನೆ ಒಲೆಯನ್ನು ರಾತ್ರಿಯಾದರೂ ಆರಿಸದೆ ಜಾತಿ ನೋಡದೆ ಸುತ್ತಲಿನ ಹತ್ತಾರು ಹಳ್ಳಿಗಳ ಜನರನ್ನು ಸಾಕಲಿಲ್ಲವೇ ನೀನು. ಅದೆಷ್ಟು ಮಂದಿ ರೋಗಿಗಳನ್ನು, ನಿರ್ವಸಗತಿರನ್ನ, ಊರು, ಮನೆ ಮಠ ಬಿಟ್ಟು ಬಂದವರನ್ನ ಸಾಕಲಿಲ್ಲ ನೀನು. ರಾಮ, ಹನುಮಂತ, ಸುದರ್ಶನ, ರಂಗ, ಕುಪ್ಪ, ಚೆನ್ನಮಾರ, ಶಂಭ, ನಿಂಗ, ಲಕ್ಷ್ಮ, ಸೀನ ಓ ಅದೆಷ್ಟು ಮಂದಿ ನೆನಪಿಲ್ಲ ನನಗೆ…..ಅವರನ್ನೆಲ್ಲಾ ನಿನ್ನ ಮಕ್ಕಳಂತೆ ಕಂಡೆ. ಆಳುಗಳೆಂದು ಅವರುಗಳನ್ನೆಂದೂ ನಿಂದಿಸಲಿಲ್ಲ. ಅದೆಷ್ಟು ಮಂದಿ ದಾರಿಯಲ್ಲಿ ಹೋಗುವ ಜನರನ್ನು ಕರೆ ತಂದು ಸಾಕು ಸಲಹಲಿಲ್ಲ ನೀನು. ಅದೆಷ್ಟು ಹಬ್ಬಗಳ ಅವರೊಂದಿಗೆ ಮಮಾಡಲಿಲ್ಲ ನೀನು. ಒಬ್ಬಟ್ಟು, ಕಡಬು, ಚಿತ್ರಾನ್ನ, ಪಾಯಸ ಬಡಿಸಿ ಅವರೆಲ್ಲಾ ನಿನ್ನ ಮಕ್ಕಳಂತೆ ಕಂಡು ಬಡಿಸಿ ನಲಿಯಲಿಲ್ಲ ನೀನು. ಎಂದೂ ಯಾರ ಜಾತಿ ಕೇಳದ, ಇನ್ನೊಬ್ಬರ ಮೇಲೆ ದೂರು ಹೇಳದ, ಇನ್ನೊಬ್ಬರ ಕಂಡು ಹಲುಬದ ನಿನ್ನಂಥವರು ಇನ್ನೊಬ್ಬರಿದ್ದಾರೆಯೇ ಎಂದು ಇಂದು ಹುಡುಕಾಟದಲ್ಲಿದ್ದೇನೆ.

DSCN5739

DSCN8364

DSCN8365

DSCN8368

DSCN8366

DSCN8329

ಅಮ್ಮ 2: ನಾನು ದೊಡ್ಡ ತಪ್ಪು ಮಾಡಿದೆ, ನಿನ್ನನ್ನು ಈ ಪಟ್ಟಣಕ್ಕೆ ಕರೆ ತರಲೇಬಾರದಿತ್ತು. ಆ ನಿನ್ನ ತೋಟ, ಹೊಲ, ಗದ್ದೆ, ಕೈತೋಟಗಳ ಮಡಿಲಿನಲ್ಲಿ ನಲಿಯಲು ಬಿಡಬೇಕಾಗಿತ್ತು. ಆಗ ನಿನಗೆ ವಯಸ್ಸೇ ಆಗುತ್ತಿರಲಿಲ್ಲ ! ಏಕೆಂದರೆ ನೀನು ಅಲ್ಲಿದ್ದಿದ್ದರೆ ಎಲ್ಲವನ್ನೂ ಮರೆಯುತ್ತಿದ್ದೆ, ಯಾವ ಕಾಯಿಲೆಗಳು ನಿನ್ನ ಬಳಿ ಸುಳಿಯುತ್ತಿರಲಿಲ್ಲ. ಈ ಪಟ್ಟಣದ ಯಾಂತ್ರೀಕೃತ ಬದುಕು ನಿನ್ನನ್ನು, ನಿನ್ನ ಕ್ರಿಯಾಶೀಲತೆಯನ್ನು ಕಟ್ಟು ಹಾಕುತ್ತಿರಲಿಲ್ಲ. ಬೇಳೆ, ಅವರೆ, ಹುರುಳಿ, ಹೊಂಗೆ, ಬೇವು, ರಾಗಿ, ಭತ್ತ, ಹಿಪ್ಪೆ, ಸಗಣಿ, ಬಣವೆ, ಗಾಡಿ, ಕಣ, ಹರಳು, ಬೇಲಿ, ಕಳೆ, ಸೊಪ್ಪು, ಎಣ್ಣೆ, ಅಲಸುಂಡೆ, ದಂಟು ಇವುಗಳ ನಡುವೆ ಅದೆಷ್ಟು ನಲಿಯುತ್ತಿದ್ದೋ ನೀನು. ಅವುಗಳ ಒಡನಾಟದಲ್ಲಿ ಎಲ್ಲವನ್ನೂ, ಪ್ರಪಂಚವನ್ನು ಮರೆತೇ ಬಿಡುತ್ತಿದ್ದೆಯೆನೋ….ಬಿತ್ತನೆ ಕಾಲ ಬಂತೆಂದರೆ ಊರಿನವರಿಗೆಲ್ಲಾ ಬಿತ್ತನೆ ಬೀಜಗಳ ಹಂಚಿ ಹಿರಿ ಹಿರಿ ಹಿಗ್ಗುತ್ತಿದ್ದ ನಿನಗೆ ಅಂಥದ್ದೊಂದು ಖುಷಿಪಡುವ ಸನ್ನಿವೇಶ ಸೃಷ್ಟಿಸಲಾಗಲಿಲ್ಲ ನನಗೆ. ಅದ್ಯಾವಾಗ ಬಿತ್ತನೆ ಬೀಜಗಳ ಮಾಡಿಡುತ್ತಿದ್ದೆ ನೀನು. ಮನೆಯ ಮಾಳಿಗೆಯ ಮೇಲೆ, ಸಿಕ್ಕ ಸಿಕ್ಕ ಮೂಲೆಗಳಲ್ಲಿ, ಜಂತೆಯ ಸಂದುಗಳಲ್ಲಿ ಅದೇಗೆ ಅಷ್ಟೊಂದು ಬಗೆಯ ಬಿತ್ತನೆ ಬೀಜಗಳ ಗಂಟುಗಳ…ಕೂಡಿಡುತ್ತಿದ್ದೆ….ನೂರಾರು ಬಗೆಯ ಕಾಳುಗಳ ಬೀಜಗಳು, ನನಗಂತೂ ಆ ಎಲ್ಲವುಗಳ ಹೆಸರುಗಳು ನನಪಿಗೆ ಬರುತ್ತಿಲ್ಲ. ನನಗೆ ಬುದ್ಧಿ ಬಂದಾಗಿನಿಂದ ನಮ್ಮ ಮನೆಯಲ್ಲಿ ಪೇಟೆಯಿಂದ ಬಿತ್ತನೆ ಬೀಜ, ರಸ ಗೊಬ್ಬರವನ್ನು ತಂದಿದ್ದನ್ನು ನೋಡಲಿಲ್ಲ ನಾನು. ಅಂಥಹ ಅದ್ಭುತ ಕೈ ಗುಣ ನಿನ್ನದು. ನನಗೆ ಗೊತ್ತಿದೆ ನೀನೆಂದೂ ಕೈ ಎತ್ತಿಕೊಟ್ಟ ಬಿತ್ತನೆ ಬೀಜಗಳಿಗೆ ಪ್ರತಿಯಾಗಿ ಏನೆನ್ನೂ ಪಡೆಯುತ್ತಿರಲಿಲ್ಲ. ಗಿರಿಯವ್ವ ಫಸಲು ಚೆನ್ನಾಗಿ ಬಂತು ಎಂದರೆ ಎಂಥಹ ಖುಷಿಯ ಚಿತ್ತಾರ ನಿನ್ನ ಮೊಗದಲ್ಲಿ. ಅಬ್ಬಾ ನೀನೊಬ್ಬಳು ಅದ್ಭುತ ಗ್ರಾಮೀಣ ಕೃಷಿ ವಿಜ್ಞಾನಿ ! ಆದರೂ ನಿನ್ನ ಕ್ರಿಯಾಶೀಲತೆಯನ್ನು ಬೆಂಗಳೂರಿನಲ್ಲಿ ಇದ್ದ ಮುವತ್ತು, ನವವತ್ತಡಿ ಸೈಟಿನ ಅಂಚಿನಲ್ಲಿ ಬಿಟ್ಟಿದ್ದ ಮುರಡಿ ಅಗಲ, ಮುವತ್ತಡಿ ಜಾಗದಲ್ಲಿಯೇ ಮುಂದುವರೆಸಿದೆಯಲ್ಲಾ ನೀನು. ಅಲ್ಲೆ ಕೊತಂಬರಿ ಸೊಪ್ಪು ಬೆಳೆದೆ. ದಾಳಿಂಬೆ, ಪರಂಗಿ, ಸೀಬೆ, ಬಾಳೆ…….ಎಷ್ಟೆಲ್ಲಾ ಗಿಡಿಗಳ ಬೆಳೆಸಿದೆ, ಅವುಗಳ ಫಸಲನ್ನು ಕಿತ್ತು ತಿನ್ನಬೇಕಾದರೆ ನೀನು ಕಣ್ಣ ಮುಂದೆ ಬಂದು ನಿಲ್ಲುತ್ತೀಯಾ..! ಕೈಲಾಗದ ಕಾಲದಲ್ಲೂ ಎಷ್ಟು ಕ್ರಿಯಾಶೀಲವಾಗಿರಲು ಬಯಸಿದೆ ನೀನು….ನಿನಗೊಂದು ಕಡೆ ಪಕ್ಷ ಬೆಂಗಳುರಿನಲ್ಲಿ ಮುವತ್ತು ನಲವತ್ತಡಿ ಜಾಗವನ್ನು ಕೃಷಿ ಮಾಡಲು ಕೊಡಿಸಬೇಕಾಗಿತ್ತು ನಾನು. ಆ ಕೆಲಸ ಮಾಡಿದ್ದರೆ ಬಹುಷ: ಸಾವು ನಿನ್ನ ಬಳಿ ಸುಳಿಯಲು ಭಯಪಡುತ್ತಿತ್ತೇನೋ……..ಆದರೆ ಅಂಥದ್ದೊಂದು ಒಳ್ಳೆಯ ಕೆಲಸ ಮಾಡಲಾಗಲಿಲ್ಲ ನನಗೆ. ನೀನು ಬಯಸಿದಾಗಲೆಲ್ಲಾ ಊರಿಗಾದರೂ ಕಳುಹಿಸಬೇಕಾಗಿತ್ತು. ಹಾಗೆ ಮಾಡಲಿಲ್ಲ ನಾನು, ನನ್ನ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿದೆ. ಪ್ರತಿ ಬಾರಿ ನೀನು ಕೇಳಿದಾಗಲೆಲ್ಲಾ ಮಗುವನ್ನು ತೋರಿಸಿ, ನಿನ್ನ ಸುಮ್ಮನಿರಿಸಿದೆ. ಆ ವಿಷಯದಲ್ಲಿ ನಾನೊಬ್ಬ ಮಹಾನ್ ಸ್ವಾಥರ್ಿಯಾಗಿದ್ದೆ ಎಂದೆನಿಸುತ್ತದೆ. ನಿನಗೊಂದು ಕಾರುಕೊಡಿಸಬೇಕು, ಅದಕ್ಕೊಬ್ಬ ಚಾಲಕನನ್ನು ನೇಮಕಮಾಡಿ, ನಿನ್ನೆಲ್ಲಾ ಸಾವಿರಾರು ಮಂದಿ ಬಂಧು, ಬಳಗ, ನೆಂಟರು, ಸ್ನೇಹಿತರನ್ನು ನೋಡಿಕೊಂಡು ಬರಲು ಕಳುಹಿಸಬೇಕು. ಎಲ್ಲಾ ದೇವಸ್ಥಾನಗಳಿಗೂ ಯಾತ್ರೆ ಕಳುಹಿಸಿ ನೀನು ಹಿರಿ ಹಿರಿ ಹಿಗ್ಗುವುದನ್ನು ನೋಡಬೇಕೆಂದು ಕೊಂಡಿದ್ದೆ. ಅದಾಗಲಿಲ್ಲ ಅಮ್ಮ….
(ಮುಂದುವರೆಯುವುದು)

Golden gate bridge, always inspires everyone, Alcatraz island prison, Ferry boat, Fishermen bay

IMGP2483

IMGP2426

IMGP2446

IMGP2468

IMGP2412

IMGP2468

IMGP2538

IMGP2503

IMGP2497

IMGP2456

IMGP2452

IMGP2412

IMGP2330

IMGP2361

IMGP2384

IMGP2597

IMGP2598

IMGP2599

IMGP2600

IMGP2601

IMGP2637

Alcatraz island prison in Sanfrancisco Bay:

This island is located in the San Francisco Bay, 1.5 miles (2.4 km) offshore from San Francisco, California. Often referred to as The Rock, the small island early-on served as a lighthouse, a military fortification, a military prison, and a federal prison until 1963.Later, in 1972, Alcatraz became a national recreation area and received landmarking designations in 1976 and 1986.

Today, the island is a historic site operated by the National Park Service as part of the Golden Gate National Recreation Area and is open to tours. Visitors can reach the island by ferry ride from Pier 33, near Fisherman’s Wharf in San Francisco. Alcatraz has been featured in many movies, TV shows, cartoons, books, comics, and games.

IMGP2393

IMGP2539

IMGP2548

IMGP2549

IMGP2558

IMGP2579

IMGP2582

IMGP2584

IMGP2589

 • ಪುಟಗಳು

 • Flickr Photos

 • ಅಕ್ಟೋಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಸೆಪ್ಟೆಂ   ನವೆಂ »
   123
  45678910
  11121314151617
  18192021222324
  25262728293031
 • ವಿಭಾಗಗಳು