ಲೇಖಕನನ್ನು ನಾಯಕನಾಗಿ ಮಾಡಲು ವಿಶ್ವೇಶ್ವರ ಭಟ್ ಕರೆ

IMG_5231IMG_5224IMG_5175IMG_5182IMG_5144

IMG_5227

IMG_5225

 IMG_5250

 

ಬೆಂಗಳೂರು: ಕನ್ನಡ ಸಾಹಿತ್ಯ ಲೋಕದಲ್ಲಿ ಲೇಖಕನನ್ನು ನಾಯಕನನ್ನಾಗಿ ಮೆರಸುವಂತಹ ವಾತಾವರಣ ನಿಮರ್ಾಣ ಮಾಡಬೇಕೆಂದು ವಿಜಯ ಕನರ್ಾಟಕ ಸಂಪಾದಕ ವಿಶ್ವೇಶ್ವರ ಭಟ್ ಕರೆ ನೀಡಿದ್ದಾರೆ. ಬೆಂಗಳೂರಿನ ಮೇ ಫ್ಲವರ್ ಮೀಡಿಯಾ ಹೌಸ್ನಲ್ಲಿ ಪತ್ರಕರ್ತ ಎಂ.ಎನ್. ಚಂದ್ರೇಗೌಡ, ಮೇ ಫ್ಲವರ್ ಮೀಡಿಯಾ ಹೌಸ್ ಜತೆ ಪುಸ್ತಕಗಳ ಪ್ರಕಟಣೆಗಾಗಿ ಒಡಂಬಡಿಕೆಗೆ ಸಹಿ ಹಾಕಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಲ್ಮಾನ್ ರಶ್ದಿಯ ಪುಸ್ತಕಗಳಿಗೆ ನಾಲ್ಕು ತಿಂಗಳು ಮುನ್ನವೇ ಬೇಡಿಕೆ ಆರಂಭವಾಗುತ್ತದೆ. ಆದರೆ ಕನರ್ಾಟಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂತರ್ಿ ಪುಸ್ತಕಗಳೇ ಇತ್ತೀಚಿನ ದಿನಗಳಲ್ಲಿ ಸಾವಿರಕ್ಕಿಂತ ಹೆಚ್ಚು ಅಚ್ಚಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಓದುಗನಿಗೆ ಪುಸ್ತಕಗಳು ಲಭ್ಯವಾಗುವ ವ್ಯವಸ್ಥೆಯನ್ನು ನಾವುಗಳು ಕಲ್ಪಿಸಲು ಇದುವರೆಗೂ ಸಾಧ್ಯವಾಗಿಲ್ಲ. ಇಂಥಹ ಕಾಲದಲ್ಲಿ ಒಬ್ಬ ಲೇಖಕನನ್ನು ನಾಯಕನನ್ನಾಗಿ ಮಾಡುವ ಕೆಲಸವನ್ನು ಪ್ರಕಾಶಕರು, ಓದುಗರಿಬ್ಬರೂ ಮಾಡಬೇಕಾಗಿದೆ. ಅಂಥಹ ವಾತಾವರಣವನ್ನು ನಿಮರ್ಿಸುವ ಕೆಲಸ ಆಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಒಬ್ಬ ಲೇಖಕನಿನೆ ಕೈ ತುಂಬಾ ಸಂಭಾವನೆ ಕೊಟ್ಟಾಗ, ಬರೀ ಬರವಣಿಗೆಯಿಂದ ಒಬ್ಬ ಲೇಖಕ ಜೀವನ ಮಾಡಬಹುದಾದ ವಾತಾವರಣ ಸೃಷ್ಟಿಯಾದಾಗ ಒಬ್ಬ ಲೇಖಕ ನಾಯಕನಾಗಬಲ್ಲ. ಅಂಥಹ ವಾತಾವರಣ ನಿಮರ್ಾಣವಾಗಬೇಕು. ಲೇಖಕನಿಗೆ ಮುಂಗಡ ಕೊಡುವ ಪ್ರೌವೃತ್ತಿ ಬೆಳೆದರೆ ಮಾತ್ರ ಇದು ಸಾಧ್ಯ ಎಂದು ಅವರು ವಿವರಿಸಿದರು.
ಕನ್ನಡದಲ್ಲಿ ಲೇಖಕರ ಸಂಖ್ಯೆ ಕಡಿಮೆಯಾಗಲು ಪ್ರಕಾಶಕರೂ ಸಹ ಕಾರಣ. ಕೆಲವೊಮ್ಮೆ ಪ್ರಕಾಶಕರ ಮಾರುಕಟ್ಟೆ ಪುಸ್ತಕಗಳ ಮಾರಾಟಗಾರರ ಮನೋಧರ್ಮವೂ ಬದಲಾಗಬೇಕು. ಪುಸ್ತಕಗಳನ್ನು ನೇರ ಮಾರಾಟಮಾಡಲು ಬರುವವರಿಗೆ ಉತ್ತೇಜನ ನೀಡುವುದನ್ನು ಮಾರಾಟಗಾರರು ಮಾಡಬೇಕು. ಇಲ್ಲವಾದಲ್ಲಿ ಕನ್ನಡದಲ್ಲಿ ಲೇಖಕರೂ ಹೆಚ್ಚಾಗುವುದಿಲ್ಲ. ಮಾರಾಟವೂ ನಡೆಯುವುದಿಲ್ಲ. ಸಾಹಿತ್ಯವೂ ಬೆಳೆಯುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂಜೆ ಪತ್ರಿಕೆ ಮಾಲೀಕರಾದ ನಾಗರಾಜ್, ಉದಯ ಟಿವಿ ಸತ್ಯನಾರಾಯಣ, ಡಾ. ರತ್ನ, ಪತ್ರಕತರ್ೆ ಆರತಿ ಈ ಸಂದರ್ಭದಲ್ಲಿ ಹಾಜರಿದ್ದರು. ಮುಂದಿನ ಮಾರ್ಚವರಗೆ ಸುಮಾರು 12 ಪುಸ್ತಕಗಳನ್ನು ಪ್ರಕಟಿಸಲು ಒಡಂಬಡಿಕೆಗೆ ಮಾಡಿಕೊಳ್ಳಲಾಗಿದೆ ಎಂದು ಜಿ.ಎನ್. ಮೋಹನ್ ತಿಳಿಸಿದರು.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಅಕ್ಟೋಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಸೆಪ್ಟೆಂ   ನವೆಂ »
   123
  45678910
  11121314151617
  18192021222324
  25262728293031
 • ವಿಭಾಗಗಳು