ಷಡಕ್ಷರಿಯವರ “ಕ್ಷಣ ಹೊತ್ತು ಆಣಿ ಮುತ್ತು” ಪುಸ್ತಕಗಳು ಒಂದು ಲಕ್ಷ, ಮುವತ್ತು ಸಾವಿರ ಮಾರಾಟವಾದವಂತೆ……..Big smile, keep smiling…..

IMG_5201DSC_0279IMG_5246

IMG_5247

ವಿಶ್ವೇಶ್ವರ ಭಟ್ ಒಂದು ಪ್ರಶ್ನೆ ಕೇಳಿದರು, ನಮ್ಮ ಪತ್ರಿಕೆಯಲ್ಲಿ ಬರೆಯುವ ಷಡಕ್ಷರಿಯವರ ಕ್ಷಣ ಹೊತ್ತು ಆಣಿ ಮುತ್ತು ಬರಹಗಳನ್ನು ಸಂಗ್ರಹಿಸಿ ಹೊರತಂದ ಪುಸ್ತಕಗಳು ಎಷ್ಟು ಮಾರಾಟವಾಗಿವೆ ಹೇಳಿ?  ಉತ್ತರ ಯಾರೂ ಕೊಡಲಿಲ್ಲದ್ದರಿಂದ ಅವರೇ ಹೇಳಿದರು… ಬರೋಬರಿ 1 ಲಕ್ಷದ 20 ಸಾವಿರ ಪುಸ್ತಕಗಳು. ಹೌದಾ ಎಂದು ಎಲ್ಲರು ಉದ್ಘಾರ ತೆಗೆದರು. ನೋಡಿ ಷಡಕ್ಷರಿಯವರ ಪುಸ್ತಕ ಪ್ರಕಟಿಸಲು ನಿರ್ಧರಿಸಿ ನಾವುಗಳು ಪ್ರಕಾಶಕರನ್ನು ಕರೆದಿದ್ದೆವು. ಪ್ರಕಾಶಕರು ಒಂದು, ಗರಿಷ್ಠ ಎರಡು ಸಾವಿರ ಪುಸ್ತಕ ಅಚ್ಚಾಕಬಹುದು ಎಂದರು. ಭಟ್ಟರು ಕನಿಷ್ಠ 50 ಸಾವಿರ ಪುಸ್ತಕಗನ್ನು ಮುದ್ರಿಸಬೇಕೆಂದು ಮನವಿ ಮಾಡಿದರು. ಪ್ರಕಾಶಕರೆಲ್ಲಾ, ನೀವು ಇಷ್ಟೊಂದು ಒತ್ತಾಯ ಮಾಡುತ್ತಿರುವುದರಿಂದ 3 ಸಾವಿರ ಅಚ್ಚು ಮಾಡುತ್ತೇವೆ. ಐವತ್ತು ಸಾವಿರ ಎಂದರೆ ಓಡಿ ಹೋಗುತ್ತೇವೆ ಎಂದರಂತೆ. ಕಡೆಗೆ ಕ್ಷಣ ಹೊತ್ತು ಆಣಿ ಮುತ್ತಿನ 1 ಲಕ್ಷ ಮುವತ್ತು ಸಾವಿರ ಪುಸ್ತಕಗಳು ಮಾರಾಟವಾದವು. ಷಡಕ್ಷರಿಯವರಿಗೆ ಈ ಪುಸ್ತಕಗಳ ಮಾರಾಟ ಒಂದರಿಂದಲೇ ಕನಿಷ್ಠ 50 ಲಕ್ಷ ರುಪಾಯಿ ಲಾಭ ಬಂತು. ನನಗೂ 1997 ರಲ್ಲಿ ಮೊದಲ ಬಾರಿ ಮಾಜಿ ಪ್ರಧಾನಿ ವಾಜಪೇಯಿ ಪುಸ್ತಕ ಬರೆದಾಗ ಒಂದು ಲಕ್ಷದ 80 ಸಾವಿರ ರುಪಾಯಿ ಲಾಭ ಬಂದಿತ್ತೆಂದರು. ಪಕ್ಕದಲ್ಲೇ ಇದ್ದ ದಾಮೋಧರ ಶೆಟ್ಟರು ಅಯ್ಯೋ ಮಾರಾರ್ರೆ ಇಷ್ಟೆಲ್ಲಾ ದುಡ್ಡನ್ನು ಪುಸ್ತಕ ಬರೆದು ಗಳಿಸ ಬಹುದೆಂದು ನಾನೆಮದೂ ಅಂದುಕೊಂಡಿಲ್ಲ ಎಂದರು. ವೈಎನ್ಕೆ ಸಹ ಭಟ್ಟರಿಗೆ ಇಷ್ಟು ದುಡ್ಡು ಬಂತೆಂದು ತಿಳಿದಾಗ, ವಂಡರ್ ಕಣ್ಣಿನ ಇಪ್ಪತ್ತು ಪುಸ್ತಕಗಳನ್ನು ಬರೆದರೂ ಒಟ್ಟಾಗಿ ಇಷ್ಟು ಸಂಭಾವನೆ ಸಿಗಲಿಲ್ಲ ಎಂದಿದ್ದರಂತೆ.
ವಿಶ್ವೇಶ್ವರ ಭಟ್ಟರು ಇಷ್ಟೆಲ್ಲಾ ಉದಾಹರಣೆಗಳನ್ನು ಏಕೆ ನೀಡಿದರೆಂದರೆ, ಕನ್ನಡ ಪುಸ್ತಕಗಳನ್ನು ಬರೆದರೆ ಎಂದೂ ನಷ್ಟ ಆಗುವುದಿಲ್ಲ. ಓದುಗನಿಗೆ ಪುಸ್ತಕ ದೊರಕುವಂತೆ ನೋಡಿಕೊಂಡರೆ ಆತ ಓದಿಯೇ ತಿರುತ್ತಾನೆ. ಪುಸ್ತಕ ಖರೀದಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದರು.
ಷಡಕ್ಷರಿಯವರ ಪುಸ್ತಕ ಖಚರ್ಾಗಲು ವಿಜಯ ಕನರ್ಾಟಕದ 4500 ಏಜೆಂಟರು ತಲಾ ಐದೈದು ಪುಸ್ತಕಗಳನ್ನು ಮೊದಲ ಕಂತಿನಲ್ಲಿ ಮಾರಾಟಮಾಡಿದರು. ಆದ್ದರಿಂದ ಓದುಗನಿಗೆ ಪುಸ್ತಕ ಕೈಗೆ ಸಿಗುವಂತೆ ಮಾಡಿದರೆ ಆತ ಖರೀದಿಸಿ ಓದುತ್ತಾನೆ. ಪುಸ್ತಕ ಮಾರಾಟಗಾರರು, ಮಾರಾಟಗಾರರ ಮನೋಧರ್ಮದಲ್ಲಿ ಬದಲಾವಣೆಯಾಗಬೇಕು. ಕನ್ನಡದಲ್ಲಿ ಬರೆಯುವವರ, ಜತೆಗೆ ಓದುವವರ ಸಂಖ್ಯೆ ಹೆಚ್ಚಾಗಲು ಪ್ರಕಾಶಕರು ಹೆಚ್ಚು ಪುಸ್ತಕಳನ್ನು ಪ್ರಕಟಿಸಬೇಕು. ಹಾಗೆಯೇ ಪುಸ್ತಕ ರಾಜ್ಯ ಎಲ್ಲಾ ತಾಲೂಕುಗಳಲ್ಲಿ ಖರೀದಿಸಲು ಸಿಗುವಂತೆ ನೋಡಿಕೊಳ್ಳಬೇಕು. ಹಾಗಾದಾಗ ಬರಹಗಾರ ಬದುಕುತ್ತಾನೆ. ಕೇವಲ ಬರೆದು  ಬದುಕಬಹುದೆಂದು ಏಗ ಒಬ್ಬ ಬರಹಗಾರ ಕನಸು ಕಾಣಬಹುದೆಂದರು. ಈಗಿನ ಪ್ರಕಾಶಕರು ಇನ್ನೂ ಸಾವಿರ, ಎರಡು ಸಾವಿರ ಪ್ರತಿಗಳನ್ನು ಪ್ರಕಟಿಸುವ ಹ್ಯಾಂಗ್ ಓವರ್ನಿಂದ ಹೊರಬಂದಿಲ್ಲ. ಪ್ರಕಾಶಕರು ಇದರಿಂದ ಹೊರಬರಬೇಕು. ಓದುಗನಿಗೆ ಪುಸ್ತಕ ಸಿಗುವಂತೆ ನೋಡಿಕೊಂಡರೆ ಹತ್ತಲ್ಲ ಇಪ್ಪತ್ತು ಸಾವಿರ ಪುಸ್ತಕಗಳು ಮಾರಾಟವಾಗುವುದರಲ್ಲಿ ಸಂಶಯವಿಲ್ಲ ಎಂದು ಭಟ್ ಅಭಿಪ್ರಾಯಪಟ್ಟರು.
ಕೆಲವೊಂದು ತಾಲೂಕುಗಳಲ್ಲಿ ಕನ್ನಡ ಪುಸ್ತಕ ಮಾರಾಟ ಮಳಿಗೆಗಳೇ ಇಲ್ಲಾ. ಪ್ರತಿಯೊಂದು ತಾಲೂಕುಗಳಲ್ಲಿ ಕನ್ನಡ ಪುಸ್ತಕಗಳು ಸಿಗುವಂತೆ ಮಾಡುವ ಕೆಲಸ ಆಗಬೇಕಾಗಿದೆ. ಆಗ ಮಾತ್ರ ಹೆಚ್ಚು ಪುಸ್ತಕಗಳು ಮಾರಾಟವಾಗುತ್ತವೆ. ಪ್ರಕಾಶಕ ಹಾಗೂ ಬರಹಗಾರನ ಮುಖದಲ್ಲಿ ನಗು ಉಕ್ಕುತ್ತದೆ. ಬರಹಗಾರನಿಗೆ ಕೈ ತುಂಬಾ ಸಂಭಾವನೆ ದೊರೆತಾಗ, ಅಡ್ವಾನ್ಸ್ ಪಡೆದು ಲೇಖಕನೊಬ್ಬ ಕನ್ನಡದಲ್ಲಿ ಬರೆಯಲು ಆರಂಭಿಸಿದಾಗ ಅವನೊಬ್ಬ ಹೀರೋ ಆಗುತ್ತಾನೆ. ಹೆಚ್ಚು ಮಂದಿ ಅಡ್ವಾನ್ಸ್ ತೆಗೆದುಕೊಂಡರೆ ಆಗ ಬಹಳ ಮಂದಿ ನಾಯಕರು ಹುಟ್ಟಿಕೊಳ್ಳುತ್ತಾರೆ ಎಂದರು.
—ಎಂ.ಎನ್. ಚಂದ್ರೇಗೌಡ, ಸೀಫಾರ್.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಅಕ್ಟೋಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಸೆಪ್ಟೆಂ   ನವೆಂ »
   123
  45678910
  11121314151617
  18192021222324
  25262728293031
 • ವಿಭಾಗಗಳು