ಪ್ರತಿ ದಿನವೂ ಅಗ್ನಿ ದಿವ್ಯವನ್ನು ದಾಟಬೇಕಾಗುತ್ತದೆ ; ಪ್ರೊಫೆಸರ್ ವಿವೇಕ್ ರೈ, ಮನುಷ್ಯನಿಗೆ ಆಕರ್ಷಣೆ, ಸೆಳೆತಗಳನ್ನು ಮೀರಲು ಏಕೆ ಸಾಧ್ಯವಾಗುವುದಿಲ್ಲ?

NPS_0621

NPS_0629

ಗಾಲ್ಫ್ ಕ್ಲಬ್ನ ಹಸಿರು ಹಾಸಿನ ಮೇಲೆ ವಿವೇಕ್ ರೈ ವಾಕ್ ದ ಟಾಕ್ ಕಾರ್ಯಕ್ರಮ ಚಿತ್ರೀಕರಣ ನಡೆಯಿತು. ಜರ್ಮನಿಗೆ ಹೊರಡುವ ಆತುರ, ಮಂಗಳೂರಿಗೆ ತೆರಳುವ ಅವಸರದಲ್ಲಿದ್ದ ರೈ ಮಾತನಾಡಿದರು.  ಜರ್ಮನಿಯಲ್ಲಿ ಅವರು ಇಂಡಾಲಜಿ ವಿಭಾಗದಲ್ಲಿ ಮಾಡಬೇಕೆಂದುಕೊಂಡಿರುವ ಕೆಲಸದ ಬಗ್ಗೆ, ಕುವೆಂಪು ಕಾರಾಂತಜ್ಜನ ಒಡನಾಟ, ಕಿಶೋರಾವಸ್ತೆಯಲ್ಲಿದ್ದಾಗ ಅವರುಗಳ ಲೇಖನಗಳಿಂದಾದ ಪ್ರಭಾವ, ಕಾರಾಂತಜ್ಜನ ಧೀ ಶಕ್ತಿ, ಮನುಜಮತ ವಿಶ್ವಪಥ, ಮಸೀದಿ, ಚಚರ್್, ದೇವಸ್ಥಾನಗಳಲ್ಲಿ ಸಿಕ್ಕಿಬಿದ್ದು ಬೌದ್ಧಿಕ ಚಿಂತನೆಯ ಪರಿಧಿಯನ್ನು ಹೆಚ್ಚಸಿಕೊಳ್ಳಲಾಗದ ಜನರ ನಡವಳಿಕೆಗಳು, ಇನ್ನೊಬ್ಬರ ತಪ್ಪನ್ನು ಪ್ರಶ್ನಿಸದಿರುವ, ಒಬ್ಬ ವ್ಯಕ್ತಿಯನ್ನು ಪೂವರ್ಾ ಗ್ರಹಿತವಾಗಿ ನೋಡದಿರುವ ದೊಡ್ಡ ಮನಸ್ಥಿತಿ, ಹೀಗೆ ಹಲವಾರು ವಿಷಯಗಳ ಬಗ್ಗೆ ರೈ ಮನಬಿಚ್ಚಿ ಮಾತನಾಡಿದರು. ಮಧ್ಯದಲ್ಲಿ ವೀಣಾ ಬನ್ನಂಜೆಯವರ ವಿಷಯ ಸಹ ಬಂದು ಹೋಯಿತು. ಆದರೆ ಗಾಲ್ಘ್ ಕ್ಲಬ್ನ ಟೀ ಆಫ್ ಬಳಿಯೇ ನಮ್ಮ ವಾಕ್ ದಿ ಟಾಕ್ ನಡೆಯುತ್ತಿದ್ದರಿಂದ, ಎಲ್ಲಿ ನಮಗೆ ಬಾಲ್ ಬಡಿದು ಪ್ರಾಣಾಪಾಯ ಆಗುವುದೋ ಎಂದು ಹೆದರಿ “ಮನುಷ್ಯನ ಸೆಳೆತ, ಆಕರ್ಷಣೆ” ಬಗ್ಗೆ ಮನಸಾರೆ ರೈ ಬಳಿ ಚಚರ್ಿಸಬೇಕೆಂದುಕೊಂಡಿದ್ದ ನನಗೆ ವಿಷಯ ಹಾಗೆ ಮರೆತು ಹೋಯಿತು. ಮನುಷ್ಯನಿಗೆ ಆಕರ್ಷಣೆ, ಸೆಳೆತಗಳನ್ನು ಮೀರಲು ಏಕೆ ಸಾಧ್ಯವಾಗುವುದಿಲ್ಲ? ಆಕರ್ಷಣೆ, ಸೆಳೆತಗಳ ಹಿಂದಿನ ರಸಗಳು, ಸಾಮಾಜಿಕ ಚೌಕಟ್ಟಿಗೆ ಸದಾ ಡಿಕ್ಕಿ ಹೊಡೆಯುವ “ಆಕರ್ಷಣ”ೆಯ ಬಗ್ಗೆ ಚಚರ್ಿಸಲು ಸಾಧ್ಯವಾಗಲಿಲ್ಲ.  
ಆದರೆ ರೈ, ಅವರನ್ನು ಅರಿವಿನ ಪರಿಧಿಯೊಳಗೆ ಗಟ್ಟಿಗೊಳಿಸಿದ ಘಟನೆಗಳು, ವ್ಯಕ್ತಿಗಳ ಬಗ್ಗೆ ಮಾತನಾಡಿದರು. ಹೇಗೆ ಅವರಿಗೆ ಏಕ ವಚನದಲ್ಲಿ ಮಾತನಾಡಲು ಯಾವುದೇ ಒಬ್ಬ ಸ್ನೇಹಿತ ಸಿಗಲಿಲ್ಲ ಎಂದು ಹೇಳಿಕೊಂಡರು. ಬಾಲ್ಯದ ದಿನಗಳು, ಯೌವ್ವನದ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಬಹಳ ಮಖ್ಯವಾಗಿ ವಿವಿಗಳ ಬಗ್ಗೆ ರೈ ಮನಬಿಚ್ಚಿ ಮಾತನಾಡಿದರು. ಅವರಿಗೆ ನಾನು ಕೇಳಿದ ಪ್ರಶ್ನೆ, ವಿವಿಗಳನ್ನು ನರಕ ಎಂದು ಕರೆದಿದ್ದೀರಲ್ಲಾ? ರೈ ಉತ್ತರ -ನರಕವನ್ನು ಒಂದು ರುಪಕವಾಗಷ್ಟೇ ನಾನು ಬಳಸಿದ್ದೇನೆ- ಕಳೆದ ಐದಾರು ವರ್ಷಳಿಂದ ನಾನು ಗಮನಿಸಿದಂತೆ ವಿವಿಗಳಲ್ಲಿ ಶೈಕ್ಷಣಿಕೇತರ ಆಸಕ್ತಿಗಳು, ಚಟುವಟಿಕೆಗಳೇ ಹೆಚ್ಚಾಗುತ್ತಿವೆ. ವಿವಿಗಳು ಹೊರಗಿನ ರಾಜಕೀಯಕ್ಕಿಂತ ಒಳಗಿನ ರಾಜಕೀಯ ತಾಣಗಳಾಗುತ್ತಿವೆ. ಸದ್ಯಕ್ಕೆ ಅವುಗಳು ಜಾತಿ, ಭ್ರಷ್ಟಾಚಾರ, ಅಸೂಯೆ, ಅಸಮಾಧಾನದ ಕೇಂದ್ರಗಳಾಗಿವೆ. ದ್ವೇಷ, ನಿಂದನೆ, ಅಸೂಯೆ, ಸ್ವಜನ ಪಕ್ಷಪಾತ ಅವುಗಳಲ್ಲಿ ತಾಂಡವವಾಡುತ್ತಿದೆ. ಪ್ರತಿ ದಿನ ವಿವಿಯೊಂದರ ಕುಲಪತಿಗಳು ಕನಿಷ್ಠ 40 ರಿಂದ 50 ಸಮಸ್ಯೆಗಳನ್ನು ಆಹ್ವಾನಿಸಿಕೊಂಡು ಶೇ 75 ರಷ್ಟನ್ನು ಬಗೆಹರಿಸಿದರೆ ಅಲ್ಲಿ ಬದುಕುಳಿಯಬಹುದಾಗಿದೆ. ಪ್ರತಿದಿನವೂ ಉಪ ಕುಲಪತಿಗಳು ಒಂದೊಂದು ಅಗ್ನಿ ದಿವ್ಯವನ್ನು ದಾಟಿಕೊಂಡೇ ಬದುಕಬೇಕಾಗುತ್ತದೆ. ವಿವಿಗಳಲ್ಲಿ ಮೇಲು ನೋಟಕ್ಕೆ ಕಾಣುಸುವುದೇ ಬೇರೆ. ಒಳಗೆ ನಡೆಯುವುದೇ ಬೇರೆ. ಶೈಕ್ಷಣಿಕ ಚಟುವಟಿಕೆಗಳಿಗಿಂತ ಶೈಕ್ಷಣಿಕೇತರ ಚಟುವಟಿಕೆಗಳೇ ಈಗ ವಿವಿಗಳಲ್ಲಿ ಕಾಲಾಹರಣವಾಗುತ್ತಿದೆ. ಕಳೆದ 10 ವರ್ಷದಲ್ಲಿ ಯಾವುದೇ ವಿವಿಗಳಲ್ಲಿ ದೊಡ್ಡ ಮಟ್ಟದ ಶೈಕ್ಷಣಿಕ ಸಾಧನೆಗಳು ಆಗಿಲ್ಲ. ಭಾರಿ ಶೈಕ್ಷಣಿಕ ಚಟುವಟಿಕಗಳು ನಡೆಯುತ್ತಿವೆ ಎಂದು ಹೊರ ಪ್ರಪಂಚಕ್ಕೆ ಕಂಡರೂ ಒಳಗಡೆ ಅಂಥಹ ಚಟುವಟಿಕೆಗಳು ನಡೆಯುತ್ತಿಲ್ಲ. ಅಧಿಕಾರ, ಹುದ್ದೆ, ತಾನು ಮೇಲು ಕೀಳುಗಳೆಂಬ ಶೀತಲ ಸಮರಗಳಲ್ಲೇ ವಿವಿಗಳಲ್ಲಿ ಸಮಯ ಹಾಳಾಗುತ್ತಿದೆ. ವಿವಿಗಳಲ್ಲಿ ಸಾಮಾಜಿಕ ಬದ್ದತೆ ಹಾಗೂ ಶೈಕ್ಷಣಿಕ ಶ್ರೇಷ್ಠತೆಯನ್ನು ಹೇಗೆ ಹೊಂದಾಣಿಕೆ ಮಾಡುವುದು ಎಂಬುದೇ ಈಗ ನಮ್ಮ ಮುಂದಿರುವ ಪ್ರಶ್ನೆಯಾಗಿದೆ.
ಮನುಷ್ಯ ಏಕೆ ಸದಾ ಅಸೂಯೆ ಪಡುತ್ತಾನೆ? ಏಕೆ ಇನ್ನೊಬ್ಬರ ಪ್ರಗತಿಯನ್ನು ಕಂಡು ಸಹಿಸುವುದಿಲ್ಲ?
ಉತ್ತರ: ಮನುಷ್ಯ ಮನಸ್ಸಿನಲ್ಲಿ ಕುಬ್ಜನಾದಂತೆಲ್ಲಾ ಇಂಥಹ ಭಾವನೆಗಳು ಮೈದಳೆಯುತ್ತವೆ. ಇಂಥಹ ಭಾವನೆಗಳನ್ನು ಮೀರಿದಂಥಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾಗಿರುವುದೇ ಎಲ್ಲರ ಮುಂದಿರುವ ಸವಾಲಾಗಿದೆ.
ಕಡೆಯಲ್ಲಿ ರೈ ಹೇಳಿದರು, ಮನುಷ್ಯನ ತಿಳಿವಳಿಕೆಯ ಪರಿಧಿ ಗಟ್ಟಿಯಾಗುವುದು ಪ್ರಶ್ನೆಗಳನ್ನು ಎದುರಿಸಿದಾಗಲೇ, ಪ್ರಶ್ನೆಗಳಿಂದಲೇ ಪ್ರತಿಯೊಬ್ಬರೂ ತಮ್ಮ ಭಾವನೆಗಳಲ್ಲಿ ಸ್ಪಷ್ಟವಾಗುತ್ತಾ ಹೋಗುತ್ತಾರೆ, ತಿದ್ದಿ ಕೊಳ್ಳುತ್ತಾರೆ. ಪ್ರಶ್ನೆ ಕೇಳುವವರು ಇದ್ದಾರೆ ಎಂಬ ಭಾವವೇ ಸದಾ ನನ್ನನ್ನು ಎಚ್ಚರವಾಗಿರಿಸಿದೆ. ಅಂಥಹ ತಲ್ಲಣದ ಭಾವ ಸದಾ ನನ್ನಲ್ಲಿ ಜಾಗೃತವಾಗಿರುತ್ತದೆ….
———–ಎಂ.ಎನ್. ಚಂದ್ರೇಗೌಡ, ಸೀಫಾರ್.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಅಕ್ಟೋಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಸೆಪ್ಟೆಂ   ನವೆಂ »
   123
  45678910
  11121314151617
  18192021222324
  25262728293031
 • ವಿಭಾಗಗಳು