ಅಮ್ಮ neenu matte nenapaade, ನೀನು ಮಾಡಿದ ಅತಿ ದೊಡ್ಡ ತಪ್ಪೆಂದರೆ ಮನೆಯ ಮುಂದೆ ಹಾಗೆ ಬಿದ್ದಿದ್ದು………..

DSCN6129

ಅಮ್ಮ : ನೀನು ಮಾಡಿದ ಅತಿ ದೊಡ್ಡ ತಪ್ಪೆಂದರೆ ಮನೆಯ ಮುಂದೆ ಹಾಗೆ ಬಿದ್ದಿದ್ದು. ನೀನು ಬಿದ್ದ ನಂತರ ನಿನ್ನ ಜತೆ ನನ್ನ ಬದುಕು ನರಕ ಆಯಿತು. ಒಮ್ಮೆಯೂ ಅಸೂಯೆ ಪಡದ,ಯಾರೊಬ್ಬರಿಗೂ ಕೆಡಕು ಬಯಸದ ನಿನ್ನನ್ನು ಆ ದೇವರು ಹೀಗೆ ಬೀಳಿಸುವ ಮೂಲಕ ಯಾಕೆ ಶಿಕ್ಷೆಗೆ ಗುರಿಪಡಿಸಿದನೋ ಎಂದೆನಿಸುತ್ತದೆ. ಹಾಗೆ ಬಿದ್ದ ನಿನ್ನನ್ನು ಸಾವಿನ ದವಡೆಯಿಂದ ಪಾರುಮಾಡಿಸಲು ಸಾಧ್ಯವಿಲ್ಲದ ನಾಲಾಯಕ್ ಮಗನಾದೆನಲ್ಲ ಎಂದು ಸದಾ ಗೋಳಿಡುತ್ತದೆ ಮನಸ್ಸು. ರಾತ್ರಿ 12 ಗಂಟೆ, 1 ಗಂಟೆಗೆ ಬಂದರೂ ಚಂದ್ರಪ್ಪ ಊಟ ಮಾಡಿದೆಯಾ ಎಂದು ನಿನ್ನ ಕೂಗೊಂದು ಇರುತ್ತಿತ್ತು. ಅದಿನ್ನು ಕನಸು. ಒಮ್ಮೆಯೂ ನನ್ನನ್ನು ಶಂಕಿಸದ, ಗದರಿಸದ, ಮೂದಲಿಸದ ನಿನ್ನ ಸಾವು, ನನಗೆ ಹಲವಾರು ಸತ್ಯಗಳ ದರ್ಶನಗಳನ್ನು ಮಾಡಿಸಿದೆ. ಬದುಕಿನ ಮತ್ತೊಂದು ಮಗ್ಗುಲಿನ ದರ್ಶನವನ್ನು ಮಾಡಿಸಿದೆ.
ಎಲ್ಲರೂ ನಿನ್ನ ಸಾವಿಗೆ ಕಾದು ಕುಳಿತ್ತಿದ್ದರೆನೋ ಎಂದೆನಿಸುತ್ತದೆ. ಅಷ್ಟೊಂದು ಜನರಿಗೆ ಊಟ ಹಾಕಿದ, ನೂರಾರು ಜನರ ಸಂಕಷ್ಟಗಳಿಗೆ ಸ್ಪಂದಿಸಿದ ನಿನಗೆ ಯಾರೊಬ್ಬರೂ ಕಡೆಗಾಲದಲ್ಲಿ ಖುಷಿಯಿಂದ ನೋಡಿಕೊಳ್ಳುವವರು ಸಿಗಲಿಲ್ಲವಲ್ಲ. ನನ್ನಲ್ಲಿ ಏನಿರಲಿಲ್ಲ ಹೇಳು, ಎಲ್ಲವೂ ಇತ್ತು. ಹಣ, ಸಂಪರ್ಕ, ಬುದ್ಧಿವಂತಿಕೆ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಹಪಾಹಪಿಕೆ ಇತ್ತು. ಆದರೆ ಬಿಡುವಾಗಿ ನಿನ್ನ ಬಳಿ ಕುಳಿತುಕೊಂಡು ನಿನ್ನ ಕಷ್ಟ ಸುಖಗಳನ್ನು ಕಡೆಗಾಲದಲ್ಲಿ ಕೇಳಲಾಗಲಿಲ್ಲ ನನಗೆ. ನಿನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವ ಒಬ್ಬಳೇ ಒಬ್ಬಳು ಸಾಮಾನ್ಯ ನಸರ್್ನ್ನು ನಿನಗೆ ಒದಗಿದಲಾಗಲಿಲ್ಲ ನನಗೆ.
ಅದೆಷ್ಟು ಮಂದಿಯನ್ನು ಕರೆ ತಂದೆ ನಾನು. ಕೇರಳದಿಂದ, ಮಡಿಕೇರಿಯಿಂದ ಎಷ್ಟೆಲ್ಲಾ ಜನ ಬಂದರು. ಅಕ್ಕ, ಮಾವ ಸೇರಿದಂತೆ ಎಷ್ಟೆಲ್ಲಾ ಜನ ನೋಡಿಕೊಂಡರು ನಿನ್ನನ್ನು. ಆದರೆ ಯಾರೂ ನಿನಗೆ ಪ್ರೀತಿಕೊಡಲಿಲ್ಲ. ವಿಶ್ವಾಸ ತುಂಬಲಿಲ್ಲ. ನೀನು ಬದುಕಬಲ್ಲೆ ಎಂದು ಹುರಿದುಂಬಿಸಲಿಲ್ಲ. ನಿನಗೇನೂ ಕ್ಯಾನ್ಸರ್ ಇರಲಿಲ್ಲ. ಕ್ಷಯ, ಏಡ್ಸ್ನಂಥಹ ಜೀವ ತಿನ್ನುವ ಕಾಯಿಲೆಗಳಿರಲಿಲ್ಲ. ಕಣ್ಣು, ಹೃದಯ, ಕಿಡ್ನಿ, ಫ್ಯಾಂಕ್ರಿಯಾ ಎಲ್ಲವೂ ಚೆನ್ನಾಗಿತ್ತಲ್ಲವೇ? ಸಾಮಾನ್ಯವಾದ ಸಕ್ಕರೆ ಕಾಯಿಲೆ ಇತ್ತು ನಿನಗಷ್ಟೇ. ಬಿದ್ದಿದಷ್ಟೇ ನೀನು ಮಾಡಿದ ಮಹಾಪಾಪ. 77 ವರ್ಷವಾದರೂ ಅಡುಗೆ ಮಾಡುತ್ತಿದ್ದ, ಬಟ್ಟೆ ಒಗೆದುಕೊಳ್ಳುತ್ತಿದ್ದ, ಊಟ ಬಡಿಸುತ್ತಿದ್ದ, ಮನೆ ಗುಡಿಸುತ್ತಿದ್ದ, ವಾಕಿಂಗ್ ಹೋಗುತ್ತಿದ್ದ ನಿನ್ನನ್ನು ಬೀಳಿಸಿ ಬಲಿ ತೆಗೆದುಕೊಳ್ಳುವ ಮನಸ್ಸನ್ನು ಆ ದೇವರು ಏಕೆ ಮಾಡಿದನೋ ಎಂದೆನಿಸುತ್ತದೆ.
ನಿನಗೆ ಪ್ರಶಸ್ತಿಗಳನ್ನು ಕೊಡುವುದಿದ್ದರೆ ನಮ್ಮ ಮನೆಯೆಲ್ಲಾ ತುಂಬಿ ತುಳುಕುತ್ತಿದ್ದವೇನೋ…ಏಕೆಂದರೆ ಯಾವುದೇ ಪ್ರತಿಫಲಾಪೇಕ್ಷೆಪಡದೆ ಏನೆಲ್ಲಾ ಮಾಡಿದೆ ನೀನು. ಸಾಲು ಮರದ ತಿಮ್ಮಕ್ಕ ಅವಳ ಜಾಗದಲ್ಲಿ ಮರ ನೆಟ್ಟು ಬೆಳೆಸಿದರೆ ನೀನು ರೈಲು ರಸ್ತೆ, ರಾಷ್ಟ್ರೀಯ ಹೆದ್ದಾರಿಯ ಹತ್ತಾರು ಮೈಲಿ ಎರಡು ಬದಿಯ ಮರಗಳನ್ನು ತಲೆಯ ಮೇಲೆ ನೀರು ಹೊತ್ತೊಯ್ದು ಉಯ್ದು ಬೆಳೆಸಿದೆ. ನೂರಾರು ಮಂದಿ ಇಂದು ನೇರಳೆ, ಮಾವಿನ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದರೆ ಅದರ ಹಿಂದೆ ನಿನ್ನ ಬೆವರಿನ ಹನಿಗಳಿವೆ ಎಂಬುದು ಖುಷಿಕೊಡುತ್ತದೆ. ಊರಲ್ಲೊಂದು ಕಟ್ಟೆಯ ಕಟ್ಟಿ ನೂರಾರು ದನ ಕರುಗಳು ನೀರಿಗಾಗಿ ಅಲೆಯದಂತೆ ಮಾಡಿದೆ. ಬರ ಬಂದಾಗ ಬೆಳಿಗ್ಗೆ ಹಚ್ಚಿದ ಮನೆ ಒಲೆಯನ್ನು ರಾತ್ರಿಯಾದರೂ ಆರಿಸದೆ ಜಾತಿ ನೋಡದೆ ಸುತ್ತಲಿನ ಹತ್ತಾರು ಹಳ್ಳಿಗಳ ಜನರನ್ನು ಸಾಕಲಿಲ್ಲವೇ ನೀನು. ಅದೆಷ್ಟು ಮಂದಿ ರೋಗಿಗಳನ್ನು, ನಿರ್ವಸಗತಿರನ್ನ, ಊರು, ಮನೆ ಮಠ ಬಿಟ್ಟು ಬಂದವರನ್ನ ಸಾಕಲಿಲ್ಲ ನೀನು. ರಾಮ, ಹನುಮಂತ, ಸುದರ್ಶನ, ರಂಗ, ಕುಪ್ಪ, ಚೆನ್ನಮಾರ, ಶಂಭ, ನಿಂಗ, ಲಕ್ಷ್ಮ, ಸೀನ ಓ ಅದೆಷ್ಟು ಮಂದಿ ನೆನಪಿಲ್ಲ ನನಗೆ…..ಅವರನ್ನೆಲ್ಲಾ ನಿನ್ನ ಮಕ್ಕಳಂತೆ ಕಂಡೆ. ಆಳುಗಳೆಂದು ಅವರುಗಳನ್ನೆಂದೂ ನಿಂದಿಸಲಿಲ್ಲ. ಅದೆಷ್ಟು ಮಂದಿ ದಾರಿಯಲ್ಲಿ ಹೋಗುವ ಜನರನ್ನು ಕರೆ ತಂದು ಸಾಕು ಸಲಹಲಿಲ್ಲ ನೀನು. ಅದೆಷ್ಟು ಹಬ್ಬಗಳ ಅವರೊಂದಿಗೆ ಮಮಾಡಲಿಲ್ಲ ನೀನು. ಒಬ್ಬಟ್ಟು, ಕಡಬು, ಚಿತ್ರಾನ್ನ, ಪಾಯಸ ಬಡಿಸಿ ಅವರೆಲ್ಲಾ ನಿನ್ನ ಮಕ್ಕಳಂತೆ ಕಂಡು ಬಡಿಸಿ ನಲಿಯಲಿಲ್ಲ ನೀನು. ಎಂದೂ ಯಾರ ಜಾತಿ ಕೇಳದ, ಇನ್ನೊಬ್ಬರ ಮೇಲೆ ದೂರು ಹೇಳದ, ಇನ್ನೊಬ್ಬರ ಕಂಡು ಹಲುಬದ ನಿನ್ನಂಥವರು ಇನ್ನೊಬ್ಬರಿದ್ದಾರೆಯೇ ಎಂದು ಇಂದು ಹುಡುಕಾಟದಲ್ಲಿದ್ದೇನೆ.

DSCN5739

DSCN8364

DSCN8365

DSCN8368

DSCN8366

DSCN8329

ಅಮ್ಮ 2: ನಾನು ದೊಡ್ಡ ತಪ್ಪು ಮಾಡಿದೆ, ನಿನ್ನನ್ನು ಈ ಪಟ್ಟಣಕ್ಕೆ ಕರೆ ತರಲೇಬಾರದಿತ್ತು. ಆ ನಿನ್ನ ತೋಟ, ಹೊಲ, ಗದ್ದೆ, ಕೈತೋಟಗಳ ಮಡಿಲಿನಲ್ಲಿ ನಲಿಯಲು ಬಿಡಬೇಕಾಗಿತ್ತು. ಆಗ ನಿನಗೆ ವಯಸ್ಸೇ ಆಗುತ್ತಿರಲಿಲ್ಲ ! ಏಕೆಂದರೆ ನೀನು ಅಲ್ಲಿದ್ದಿದ್ದರೆ ಎಲ್ಲವನ್ನೂ ಮರೆಯುತ್ತಿದ್ದೆ, ಯಾವ ಕಾಯಿಲೆಗಳು ನಿನ್ನ ಬಳಿ ಸುಳಿಯುತ್ತಿರಲಿಲ್ಲ. ಈ ಪಟ್ಟಣದ ಯಾಂತ್ರೀಕೃತ ಬದುಕು ನಿನ್ನನ್ನು, ನಿನ್ನ ಕ್ರಿಯಾಶೀಲತೆಯನ್ನು ಕಟ್ಟು ಹಾಕುತ್ತಿರಲಿಲ್ಲ. ಬೇಳೆ, ಅವರೆ, ಹುರುಳಿ, ಹೊಂಗೆ, ಬೇವು, ರಾಗಿ, ಭತ್ತ, ಹಿಪ್ಪೆ, ಸಗಣಿ, ಬಣವೆ, ಗಾಡಿ, ಕಣ, ಹರಳು, ಬೇಲಿ, ಕಳೆ, ಸೊಪ್ಪು, ಎಣ್ಣೆ, ಅಲಸುಂಡೆ, ದಂಟು ಇವುಗಳ ನಡುವೆ ಅದೆಷ್ಟು ನಲಿಯುತ್ತಿದ್ದೋ ನೀನು. ಅವುಗಳ ಒಡನಾಟದಲ್ಲಿ ಎಲ್ಲವನ್ನೂ, ಪ್ರಪಂಚವನ್ನು ಮರೆತೇ ಬಿಡುತ್ತಿದ್ದೆಯೆನೋ….ಬಿತ್ತನೆ ಕಾಲ ಬಂತೆಂದರೆ ಊರಿನವರಿಗೆಲ್ಲಾ ಬಿತ್ತನೆ ಬೀಜಗಳ ಹಂಚಿ ಹಿರಿ ಹಿರಿ ಹಿಗ್ಗುತ್ತಿದ್ದ ನಿನಗೆ ಅಂಥದ್ದೊಂದು ಖುಷಿಪಡುವ ಸನ್ನಿವೇಶ ಸೃಷ್ಟಿಸಲಾಗಲಿಲ್ಲ ನನಗೆ. ಅದ್ಯಾವಾಗ ಬಿತ್ತನೆ ಬೀಜಗಳ ಮಾಡಿಡುತ್ತಿದ್ದೆ ನೀನು. ಮನೆಯ ಮಾಳಿಗೆಯ ಮೇಲೆ, ಸಿಕ್ಕ ಸಿಕ್ಕ ಮೂಲೆಗಳಲ್ಲಿ, ಜಂತೆಯ ಸಂದುಗಳಲ್ಲಿ ಅದೇಗೆ ಅಷ್ಟೊಂದು ಬಗೆಯ ಬಿತ್ತನೆ ಬೀಜಗಳ ಗಂಟುಗಳ…ಕೂಡಿಡುತ್ತಿದ್ದೆ….ನೂರಾರು ಬಗೆಯ ಕಾಳುಗಳ ಬೀಜಗಳು, ನನಗಂತೂ ಆ ಎಲ್ಲವುಗಳ ಹೆಸರುಗಳು ನನಪಿಗೆ ಬರುತ್ತಿಲ್ಲ. ನನಗೆ ಬುದ್ಧಿ ಬಂದಾಗಿನಿಂದ ನಮ್ಮ ಮನೆಯಲ್ಲಿ ಪೇಟೆಯಿಂದ ಬಿತ್ತನೆ ಬೀಜ, ರಸ ಗೊಬ್ಬರವನ್ನು ತಂದಿದ್ದನ್ನು ನೋಡಲಿಲ್ಲ ನಾನು. ಅಂಥಹ ಅದ್ಭುತ ಕೈ ಗುಣ ನಿನ್ನದು. ನನಗೆ ಗೊತ್ತಿದೆ ನೀನೆಂದೂ ಕೈ ಎತ್ತಿಕೊಟ್ಟ ಬಿತ್ತನೆ ಬೀಜಗಳಿಗೆ ಪ್ರತಿಯಾಗಿ ಏನೆನ್ನೂ ಪಡೆಯುತ್ತಿರಲಿಲ್ಲ. ಗಿರಿಯವ್ವ ಫಸಲು ಚೆನ್ನಾಗಿ ಬಂತು ಎಂದರೆ ಎಂಥಹ ಖುಷಿಯ ಚಿತ್ತಾರ ನಿನ್ನ ಮೊಗದಲ್ಲಿ. ಅಬ್ಬಾ ನೀನೊಬ್ಬಳು ಅದ್ಭುತ ಗ್ರಾಮೀಣ ಕೃಷಿ ವಿಜ್ಞಾನಿ ! ಆದರೂ ನಿನ್ನ ಕ್ರಿಯಾಶೀಲತೆಯನ್ನು ಬೆಂಗಳೂರಿನಲ್ಲಿ ಇದ್ದ ಮುವತ್ತು, ನವವತ್ತಡಿ ಸೈಟಿನ ಅಂಚಿನಲ್ಲಿ ಬಿಟ್ಟಿದ್ದ ಮುರಡಿ ಅಗಲ, ಮುವತ್ತಡಿ ಜಾಗದಲ್ಲಿಯೇ ಮುಂದುವರೆಸಿದೆಯಲ್ಲಾ ನೀನು. ಅಲ್ಲೆ ಕೊತಂಬರಿ ಸೊಪ್ಪು ಬೆಳೆದೆ. ದಾಳಿಂಬೆ, ಪರಂಗಿ, ಸೀಬೆ, ಬಾಳೆ…….ಎಷ್ಟೆಲ್ಲಾ ಗಿಡಿಗಳ ಬೆಳೆಸಿದೆ, ಅವುಗಳ ಫಸಲನ್ನು ಕಿತ್ತು ತಿನ್ನಬೇಕಾದರೆ ನೀನು ಕಣ್ಣ ಮುಂದೆ ಬಂದು ನಿಲ್ಲುತ್ತೀಯಾ..! ಕೈಲಾಗದ ಕಾಲದಲ್ಲೂ ಎಷ್ಟು ಕ್ರಿಯಾಶೀಲವಾಗಿರಲು ಬಯಸಿದೆ ನೀನು….ನಿನಗೊಂದು ಕಡೆ ಪಕ್ಷ ಬೆಂಗಳುರಿನಲ್ಲಿ ಮುವತ್ತು ನಲವತ್ತಡಿ ಜಾಗವನ್ನು ಕೃಷಿ ಮಾಡಲು ಕೊಡಿಸಬೇಕಾಗಿತ್ತು ನಾನು. ಆ ಕೆಲಸ ಮಾಡಿದ್ದರೆ ಬಹುಷ: ಸಾವು ನಿನ್ನ ಬಳಿ ಸುಳಿಯಲು ಭಯಪಡುತ್ತಿತ್ತೇನೋ……..ಆದರೆ ಅಂಥದ್ದೊಂದು ಒಳ್ಳೆಯ ಕೆಲಸ ಮಾಡಲಾಗಲಿಲ್ಲ ನನಗೆ. ನೀನು ಬಯಸಿದಾಗಲೆಲ್ಲಾ ಊರಿಗಾದರೂ ಕಳುಹಿಸಬೇಕಾಗಿತ್ತು. ಹಾಗೆ ಮಾಡಲಿಲ್ಲ ನಾನು, ನನ್ನ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿದೆ. ಪ್ರತಿ ಬಾರಿ ನೀನು ಕೇಳಿದಾಗಲೆಲ್ಲಾ ಮಗುವನ್ನು ತೋರಿಸಿ, ನಿನ್ನ ಸುಮ್ಮನಿರಿಸಿದೆ. ಆ ವಿಷಯದಲ್ಲಿ ನಾನೊಬ್ಬ ಮಹಾನ್ ಸ್ವಾಥರ್ಿಯಾಗಿದ್ದೆ ಎಂದೆನಿಸುತ್ತದೆ. ನಿನಗೊಂದು ಕಾರುಕೊಡಿಸಬೇಕು, ಅದಕ್ಕೊಬ್ಬ ಚಾಲಕನನ್ನು ನೇಮಕಮಾಡಿ, ನಿನ್ನೆಲ್ಲಾ ಸಾವಿರಾರು ಮಂದಿ ಬಂಧು, ಬಳಗ, ನೆಂಟರು, ಸ್ನೇಹಿತರನ್ನು ನೋಡಿಕೊಂಡು ಬರಲು ಕಳುಹಿಸಬೇಕು. ಎಲ್ಲಾ ದೇವಸ್ಥಾನಗಳಿಗೂ ಯಾತ್ರೆ ಕಳುಹಿಸಿ ನೀನು ಹಿರಿ ಹಿರಿ ಹಿಗ್ಗುವುದನ್ನು ನೋಡಬೇಕೆಂದು ಕೊಂಡಿದ್ದೆ. ಅದಾಗಲಿಲ್ಲ ಅಮ್ಮ….
(ಮುಂದುವರೆಯುವುದು)

Advertisements

2 ಟಿಪ್ಪಣಿಗಳು

 1. ಮನ ಕಲಕಿ ಹೋಯಿತು
  ಅವರೊಡನೆ ಮಾತನಾಡಿದ, ಅವರ ಕೈನ ಅಡುಗೆ ತಿಂದ ನೆನಪು ಯಾವತ್ತೂ ಜೀವಂತ
  -ಜಿ ಎನ್ ಮೋಹನ್

 2. ಮನ ಕಲಕಿ ಹೋಯಿತು
  ಅವರೊಡನೆ ಮಾತನಾಡಿದ, ಅವರ ಕೈನ ಅಡುಗೆ ತಿಂದ ನೆನಪು ಯಾವತ್ತೂ ಜೀವಂತ
  -ಜಿ ಎನ್ ಮೋಹನ್


Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಅಕ್ಟೋಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಸೆಪ್ಟೆಂ   ನವೆಂ »
   123
  45678910
  11121314151617
  18192021222324
  25262728293031
 • ವಿಭಾಗಗಳು