ಹೈಕಮಾಂಡ್ಗೆ ರೆಡ್ಡಿ ಪಾಳೇಯ ದೊಡ್ಡ ಮೊತ್ತದ ನಿಧಿಯೊಂದನ್ನು ಕಾಣಿಕೆಯಾಗಿ ನೀಡಿ ಯಡಿಯೂರಪ್ಪನವರ ನಾಯಕತ್ವವನ್ನು ಬಲಿ ಪಡೆಯಲು ಸಂಪೂರ್ಣ ಕಾರ್ಯನಿರತವಾಗಿದೆ

DSCN6504

DSCN6505

DSCN6508

ಜೆಡಿಎಸ್ ಬೆಂಬಲಯಾಚಿಸಿ ನಾಯಕರ ಮನೆ ತಿರುಗಿದ ಜಿಜೆಪಿ ನಾಯಕರು:
ಬೆಂಗಳೂರು: ರೆಡ್ಡಿ ಬ್ರದಸರ್್ಗಳ ಬಲ ಪ್ರದರ್ಶನದಿಂದ ಕಂಗೆಟ್ಟಿರುವ ಯಡಿಯೂರಪ್ಪ ಪಾಳೇಯ, ವಗರ್ಾವಣೆ ಬಿಟ್ಟು ಮತ್ತೇನನ್ನೂ ಮಾಡದ ಸ್ಥಿತಿ ತಲುಪಿದ್ದು ಕಡೇ ಪ್ರಯತ್ನವೆಂಬಂತೆ ಜೆಡಿಎಸ್ ನಾಯಕರ ಬೆಂಬಲ ಕೋರಿ ಆ ಪಕ್ಷದ ನಾಯಕರ ಮನೆ ಬಾಗಿಲಿಗೆ ಹೋಗಿ ನಿಂತಿದೆ. ಈ ಮೂಲಕ ತನ್ನ ಬಳಿ ಬೇರೆ ಆಪ್ಷನ್ಗಳಿವೆ ಎಂಬುದನ್ನು ಯಡಿಯೂರಪ್ಪ ಬಣ ವಿರೋಧಿಗಳಿಗೆ ರವಾನಿಸಲು ಪ್ರಯತ್ನಪಟ್ಟಿದೆ. ಮುಖ್ಯಮಂತ್ರಿ ಯಡಿಯೂರಪ್ಪವನರಿಗೆ ಆಪ್ತರಾದ ಸಚಿವರೊಬ್ಬರು ನಿನ್ನೆ ಜೆಡಿಎಸ್ ನಾಯಕರ ಮನೆಗೆ ಸರಿಹೊತ್ತಿನಲ್ಲಿ ತೆರಳಿ ಬಹಿರಂಗ ಬೆಂಬಲ ಘೋಷಿಸುವಂತೆ ದುಂಬಾಲು ಬಿದ್ದಿದ್ದಾರೆ. ಆದರೆ ಎಂದಿನಂತೆ ದೇವೇಗೌಡರಿಗೆ ಆ ಪಕ್ಷದ ಶಾಸಕರೆಲ್ಲಾ ಅಂತಿಮ ತೀಮರ್ಾನ ತೆಗೆದುಕೊಳ್ಳಲು ಜವಾಬ್ದಾರಿ ನೀಡಿರುವುದರಿಂದ ಗೌಡರು ಏನು ಮಾಡುತ್ತಾರೆಂದು ಯಾರಿಗೂ ತಿಳಿಯುತ್ತಿಲ್ಲ.
ಇತ್ತ ರೆಡ್ಡಿ ಬ್ರದರ್ಸ ಪಾಳೇಯದಲ್ಲೇ ಚಟುವಟಿಕೆಗಳು ತೀವ್ರಗೊಂಡಿದ್ದು ಪಕ್ಷ ಉಳಿಯಬೇಕೋ ಅಥವಾ ಯಡಿಯೂರಪ್ಪ ಬೇಕಾ ನೀವೆ ತೀಮರ್ಾನಿಸಿ ಎಂದು ಹೈಕಮಾಂಡ್ಗೆ ತಾಕೀತು ಮಾಡಲು ರೆಡ್ಡಿ ಬ್ರದರ್ಸ ಸಜ್ಜಾಗುತ್ತಿದ್ದಾರೆ. ಬಳ್ಳಾರಿಯಲ್ಲಿ ಒಂದೇ ಒಂದು ಸೀಟು ಬಿಜೆಪಿದು ಇರಲಿಲ್ಲ. ರಾಯಚೂರಿನಲ್ಲಿ ಎಂಪಿ ಸೀಟನ್ನು ಬಿಜೆಪಿ ಎಂದೂ ಗೆದ್ದಿರಲಿಲ್ಲ. ಇನ್ನು ಗದಗದಲ್ಲಿ ಎಚ್. ಕೆ. ಪಾಟೇಲ್ ರಾಜಕೀಯ ಪಾಳೇಗಾರಿಕೆಯನ್ನು ಮುರಿಯಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಮಾಜಿ ಪ್ರಧಾನಿಗಳ ಉಪಟಳ ಅಡಗಿಸಲು ಆಗಿರಲಿಲ್ಲ. ಇದನ್ನೆಲ್ಲಾ ಮಾಡಿದ್ದು ನಾವು. ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಮಾಡಿದ್ದೇನು? ವಗರ್ಾವಣೆ ವಿಷಯದಲ್ಲಿ ಯಡಿಯೂರಪ್ಪ ನಡೆದುಕೊಂಡಿದ್ದು ಹೇಗೆ? ಯಡಿಯೂರಪ್ಪನವರಿಗೆ ಇನ್ನೂ ಪಕ್ಷದ ಕೆಲವು ಶಾಸಕರ ಹೆಸರೇ ಗೊತ್ತಿಲ್ಲ. ಹೀಗೆ ಹೈಕಮಾಂಡ್ ಮುಂದೆ ತಮ್ಮ ವಕಾಲತ್ತು ಮಂಡಿಸಲು ರೆಡ್ಡಿ ಬ್ರದಸರ್್ಗಳು ಸಿದ್ಧವಾಗಿದ್ದಾರೆ. ಒಂದು ವೇಳೆ ಹೈಕಮಾಂಡ್ ಯಡಿಯೂರಪ್ಪ ಅವರನ್ನೇ ಮುಂದುವರೆಸಲು ತೀಮರ್ಾನಿಸಿದರೆ ರೆಡ್ಡಿ ಬ್ರದರ್ಸ ಗುಂಪಿನ 56 ಮಂದಿ ಶಾಸಕರೆಲ್ಲಾ ರಾಜೀನಾಮೆ ನೀಡಿ ಅತಂತ್ರ ಸ್ಥಿತಿ ಸೃಷ್ಟಿ ಮಾಡಲು ಮತ್ತೊಂದು ದಾಳವನ್ನು ಸಹ ಸಿದ್ಧಮಾಡಿಕೊಂಡಿದ್ದಾರೆ. ಮೂಲವೊಂದರ ಪ್ರಕಾರ, ಈಗಾಗಲೇ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ರಾಜೀನಾಮೆ ಸಲ್ಲಿಸಲು ಸೂಚಿಸಿದೆ ಎಂಬ ಸುದ್ದಿ ನಿನ್ನೆ ರಾತ್ರಿಯೇ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಮಠಾಧೀಶರೆಲ್ಲಾ ಪೋನಾಯಿಸಿ ಕೇಳಲು ಶುರು ಮಾಡಿದ್ದಾರೆ. ಮುಖ್ಯಮಂತ್ರಿ ಕಚೇರಿಯಿಂದಲೇ ನಿನ್ನೆ ಹಲವಾರು ಮಠಗಳಿಗೆ ಕರೆಗಳು ಹೋಗಿವೆ. ತಕ್ಷಣವೇ ವಿಶ್ವಾಸ ಮತಯಾಚನೆಗೆ ಕೈಹಾಕಬಾರದೆಂದು ಯಡಿಯೂರಪ್ಪ ಪಾಳೇಯ ತನ್ನ ಹಳೆಯ ಪ್ಲಾನನ್ನು ಈಗ ಕೈಬಿಟ್ಟಂತಿದೆ. ಈಗ ಯಡಿಯೂರಪ್ಪಗೆ ಹೈಕಮಾಂಡ್ನಲ್ಲಿ ಅಂಥಹ ವಿಶ್ವಾಸವಿರುವ ಯಾವುದೇ ವ್ಯಕ್ತಿಗಳಿಲ್ಲ. ಅಲ್ಲಿರುವುದೆಲ್ಲ ಅನಂತಕುಮಾರ್ ಪಾಳೇಯದ ಜನರೇ. ಒಂದು ಕಡೆ ಈಗಾಗಲೇ ಹಲವಾರು ಹಿನ್ನಡೆಗಳಿಂದ ಸೊರಗಿ ಹೋಗಿರುವ ಹೈಕಮಾಂಡ್ಗೆ ರೆಡ್ಡಿ ಪಾಳೇಯ ದೊಡ್ಡ ಮೊತ್ತದ ನಿಧಿಯೊಂದನ್ನು ಕಾಣಿಕೆಯಾಗಿ ನೀಡಿ ಯಡಿಯೂರಪ್ಪನವರ ನಾಯಕತ್ವವನ್ನು ಬಲಿ ಪಡೆಯಲು ಸಂಪೂರ್ಣ ಕಾರ್ಯನಿರತವಾಗಿದೆ. ಇನ್ನೆನಿದ್ದರೂ ಯಡಿಯೂರಪ್ಪ ತಾನು ಕಟ್ಟಿ ಬೆಳೆಸಿದ ಬಿಜೆಪಿ ನಾಯಕರ ವಿರುದ್ಧವೇ ಹೋರಾಡುವ ಸ್ಥಿತಿ ತಲುಪುವುದೊಂದೆ ಬಾಕಿ ಇದೆ.
–ಎಂ.ಎನ್. ಚಂದ್ರೇಗೌಡ

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಅಕ್ಟೋಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಸೆಪ್ಟೆಂ   ನವೆಂ »
   123
  45678910
  11121314151617
  18192021222324
  25262728293031
 • ವಿಭಾಗಗಳು