Shohba Karandlaje’s web site inauguration on Feb 25 evening at goldfinch hotel ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಿದ್ದಾರೆ….. ಕಡೆಗೂ ಗೆದ್ದಿದ್ದಾರೆ

DSC_8576DSC_8564

ಕಡೆಗೂ ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಿದ್ದಾರೆ……

ಎಂಥಹ ಅದ್ಭತ ಸುದ್ದಿ ಅಲ್ಲವೆ. ಎಂಥಹ ಖುಷಿ ಎ. ರಾಮದಾಸ್ ಗೆ, ರೇಣುಕಾಚಾರ್ಯರಿಗೆ, ರೆಡ್ಡಿ ಬ್ರದರ್ಸಗೆ ಹಾಗೂ ಮತ್ಯಾರಿಗೋ….

ಒಬ್ಬ ಮಹಿಳೆಯ ಹಕ್ಕು ಕಿತ್ತುಕೊಂಡ, ಆಕೆಯನ್ನು ಅಧಿಕಾರದಿಂದ ಕೆಳಗಿಳಿಸಿದ, ಒಬ್ಬ ಕ್ರಿಯಾಶೀಲ ಮಂತ್ರಿಯೊಬ್ಬರ ಸ್ಥಾನ ಮಾನಗಳನ್ನು ಕಸಿದುಕೊಂಡ ತೃಪ್ತಿ ಇವರಿಗೆಲ್ಲಾ.
ಶೋಭಾ ಇವರಿಗೆಲ್ಲಾ ನೀಡಿದ ಕಿರುಕುಳ, ಮಾಡಿದ ಹಸ್ತಕ್ಷೇಪದ ಬಗ್ಗೆ ಒಂದೇ ಒಂದು ಉದಾಹರಣೆಯನ್ನು ಬಹಿರಂಗವಾಗಿ ಹೇಳದ ಇವರುಗಳನ್ನು ಮತ್ತೆ ಪ್ರಶ್ನಿಸುವ ಅವಶ್ಯಕತೆಯೇ ಇಲ್ಲಾ ಎಂದೆನಿಸುತ್ತದೆ. ಒಬ್ಬ ಮಹಿಳೆ ಅತ್ಯಂತ ಪ್ರಾಮಾಣಿಕವಾಗಿ, ಕ್ರಿಯಾಶೀಲವಾಗಿ ಕೆಲಸ ಮಾಡುವುದು ತಪ್ಪೆಂದು ಈಗ ಅರ್ಥವಾಗಿದೆ.

ಶೋಭಾ ಪ್ರಕರಣ ಆ ಕಡೆಗಿರಲಿ. ಇದೇ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರಕಾರವಿದ್ದಾಗ, ಮಾಜಿ ಪ್ರಧಾನಿ ಪುತ್ರ ಹೆಚ್.ಡಿ. ರೇವಣ್ಣ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆಗಳ ಎಲ್ಲಾ ವರ್ಗಾವಣೆಗಳಲ್ಲಿ  ತಮ್ಮದೇ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ನೀಡಿ ಮಾಡಿಸುತ್ತಿದ್ದರು. ಅಲ್ಲಿ ಹೆಸರಿಗೆ ಮಾತ್ರ ಎಂ. ಪಿ. ಪ್ರಕಾಶ್ ಗೃಹ ಮಂತ್ರಿಯಾಗಿದ್ದರು. ಚೆಲುವರಾಯಸ್ವಾಮಿ ಸಾರಿಗೆ ಸಚಿವರಾಗಿದ್ದರು. ಉಳಿದ ಆಡಳಿತವೆಲ್ಲಾ ಮಾಜಿ ಪ್ರಧಾನಿಗಳ ಕುಟುಂಬದ ವ್ಯವಹಾರದಂತೆ ನಡೆಯುತ್ತಿತ್ತು. ಎಸ್.ಎಂ. ಕೃಷ್ಣ ಸರಕಾರವಿದ್ದಾಗ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ನಿಯಂತ್ರಿಸುವ ಶಕ್ತಿ ಯಾರಿಗೂ ಇರಲಿಲ್ಲ.  ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೂ ಆಗ ಶಾಸಕರಾಗಿದ್ದ ಹೆಚ್.ಡಿ. ಕುಮಾರಸ್ವಾಮಿಯವರ ಮಾತೇ ಅಂತಿಮವಾಗಿತ್ತೆಂಬುದನ್ನು ಯಾರೂ ಮರೆಯಬಾರದು.
ಇಷ್ಟೆಲ್ಲಾ ಉದಾಹರಣೆಗಳಿರುವಾಗ, ಮಹಿಳೆಯೊಬ್ಬರು ಮುಖ್ಯಮಂತ್ರಿಗಳಿಗೆ ಆಪ್ತರಾಗಿದ್ದಾರೆಂಬ ಕಾರಣವನ್ನೇ ಮುಂದಾಗಿಟ್ಟುಕೊಂಡು ಇದ್ದ ಏಕೈಕ ಮಹಿಳಾ ಮಂತ್ರಿಯೊಬ್ಬರನ್ನು ಅಧಿಕಾರದಿಂದ ಕೆಳಗಿಳಿಸಿದ ಮಹಾತ್ಕಾರ್ಯವನ್ನು ಮಾಡಿದೆ ರೆಡ್ಡಿ ಗ್ಯಾಂಗ್. ಆ ಮೂಲಕ ಹಣ ಬಲ ಒಬ್ಬ ಪ್ರಾಮಾಣಿಕ ಸಚಿವೆಯೊಬ್ಬರನ್ನು ಬಲಿ ತೆಗೆದುಕೊಂಡಿದೆ. ಸಿಬಿಐ ಪ್ರಕರಣಗಳಿದ್ದ ಡಿ. ಸುಧಾಕರ್, ಕೃಷ್ಣಯ್ಯ ಶೆಟ್ಟಿ ಅಂಥವರನ್ನು ಸಹಿಸಿಕೊಂಡಿದ್ದ ಆಡಳಿತ ಪಕ್ಷಕ್ಕೆ ಒಬ್ಬ ಭ್ರಷ್ಟೆಯಲ್ಲದ, ಅಪ್ರಾಮಾಣಿಕಳಲ್ಲದ ಸಚಿವೆಯೊಬ್ಬರನ್ನು ನೋಡಿ ಸಹಿಸಿಕೊಳ್ಳಲಾಗಲಿಲ್ಲ ಎಂದೆನಿಸುತ್ತದೆ.

ಬೆಳಗಾವಿಯ ಅಧಿವೇಶನದಲ್ಲಿ ಮಾತಿಗೆ ಸಿಕ್ಕಿದ್ದ ಶೋಭಾ ಕರಂದ್ಲಾಜೆ ಮನಸ್ಸಲ್ಲಿ ಅಬ್ದುಲ್ ನಜೀರ್ ಸಾಬ್ ಅವರ ಗ್ರಾಮೀಣಾಭಿವೃದ್ಧಿ ಕನಸುಗಳಿದ್ದವು. ಇಡೀ ರಾಜ್ಯದ ಅಭಿವೃದ್ಧಿಯ ಬೆನ್ನೆಲುಬಾಗಿರುವ ಗ್ರಾಮೀಣಾಭಿವೃದ್ಧಿಗೆ ಹೊಸ ದಿಕ್ಕು ದಿಸೆ ನೀಡಲು ಅಹರ್ನಿಶಿ ದುಡಿಯಬೇಕೆಂಬ ಹಪಹಪಿಕೆ ಅವರಲ್ಲಿದ್ದುದು ಉಂಟು. ಅದಕ್ಕಾಗಿಯೇ ಆಕೆ ಹಲವಾರು ಯೋಜನೆಗಳನ್ನು ರೂಪಿಸಲು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರು. ಇದಕ್ಕಾಗಿ ವಿಶ್ವಬ್ಯಾಂಕ್ ನೆರವನ್ನು ಪಡೆಯಲು ಅವರು ಯೋಜಿಸಿದ್ದರು. ಬಂಜೆತನ ನಿವಾರಿಸುವ ದೇಶದಲ್ಲೇ ಪ್ರಥಮ ಎನ್ನಬಹುದಾದ ವಿನೂತನ ಯೋಜನೆಯೊಂದನ್ನು ಪ್ರಕಟಿಸಲು  ಶೋಭಾ ಸಿದ್ಧತೆ ನಡೆಸಿದ್ದರು.

ನೀವು ಪ್ರತಿಪಕ್ಷದವರ ಜತೆ ಚರ್ಚಿಸಿದಾಗಲೂ ಅವರೆಂದೂ ಶೋಭಾ ಒಬ್ಬಳು ಕರೆಪ್ಟ್ ಎಂದು ಮೂದಲಿಸುತ್ತಿರಲಿಲ್ಲ. ಎಲ್ಲೇ ಹೋಗಿ ಯಾರ ಜೊತೆಯೂ ಮಾತನಾಡಿ ಶೋಭಾ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಮಾತು ಕೇಳಿಬರುತ್ತಿರಲಿಲ್ಲ. ಪರವಾಗಿಲ್ಲ ಆಕೆ ಕೆಲಸ ಮಾಡುತ್ತಾಳೆ ಎನ್ನುತ್ತಿದ್ದರು. ಹೇಳಿದ ಕೆಲಸವನ್ನು ಚಾಚು ತಪ್ಪದೇ ಮಾಡುತ್ತಿದ್ದ, ಆಗದ ಕೆಲಸವನ್ನು ಆಗುವುದಿಲ್ಲ ಎಂದು ನೇರವಾಗಿ ಹೇಳುತ್ತಿದ್ದ ಶೋಭಾ ಸದ್ಯಕ್ಕೆ ಸೋತಿದ್ದಾರೆ. ಆದರೆ ನಾಡಿನ ಜನತೆಯ ಎದುರು ಆಕೆ ಗೆದ್ದಿದ್ದಾಳೆ. ಇಡೀ ಮಹಿಳಾ ಸಮೂಹದ ಏಕೈಕ ಪ್ರತಿನಿಧಿಯಾಗಿದ್ದ ಆಕೆಗೆ ಎಲ್ಲರ ಪ್ರೀತಿ,ಅನುಕಂಪವಿದೆ. ಇನ್ನು ಮೂರುವರೆ ವರ್ಷ ಈ ಸರಕಾರದ ಅಧಿಕಾರಾವಧಿ ಇದೆ. ಈ ಸೋಲನ್ನು ಗೆಲುವಾಗಿ ಪರಿವರ್ತಿಸುವ ತಾಕತ್ತು ಶೋಭಾರಿಗಿದೆ ಎಂದುಕೊಳ್ಳೋಣ.

—ಎಂ. ಎನ್. ಚಂದ್ರೇಗೌಡ

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ನವೆಂಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಕ್ಟೋ   ಡಿಸೆ »
  1234567
  891011121314
  15161718192021
  22232425262728
  2930  
 • ವಿಭಾಗಗಳು