ಸಾರ್ ಪ್ರತಿ ದಿನವೂ ನಮ್ಮದು ಸಾವಿನೊಂದಿಗಿನ ಸರಸವಾಗಿರುತ್ತದೆ……”, ಮೊನ್ನೆ ಸೆಕ್ಸ್ ವರ್ಕರ್ಗಳ ಕೆಪಾಸಿಟಿ ಬಿಲ್ಡಿಂಗ್ (ಸಾಮಥ್ರ್ಯ ವೃದ್ಧಿ) ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ:

se1

se 2

“ಸಾರ್ ಪ್ರತಿ ದಿನವೂ ನಮ್ಮದು ಸಾವಿನೊಂದಿಗಿನ ಸರಸವಾಗಿರುತ್ತದೆ……”

ಅದೊಂದು ಅದ್ಭುತವಾದ ಅನುಭವ. ಸಮಾಜದ ಕಟ್ಟಕಡೆಯ ಮಹಿಳೆಯರವರು. ಮೈಮಾರಿಕೊಂಡು ಬೇರೆಯವರಿಗೆ ಸುಖ ಕೊಡುತ್ತಾ ತಾವು ಕರಗುತ್ತಾರೆ. ಇವರೇನು ಐಷಾರಾಮಿ ಹೊಟೇಲ್ಗಳಲ್ಲಿ ಬುಕ್ ಆಗಿ ಬಹಳ ಆಧುನಿಕ ಶೈಲಿಯ ವೇಶ್ಯಾವಾಟಿಕೆ ನಡೆಸುವವರಲ್ಲ. ತೀರ ಸಾಮಾನ್ಯವಾಗಿ ರಸ್ತೆ ಪಕ್ಕಗಳಲ್ಲಿ, ಪಾರ್ಕಗಳಲ್ಲಿ, ಸಿನಿಮಾ ಮಂದಿರಗಳಲ್ಲಿ ಗಿರಾಕಿಗಳನ್ನು ಹುಡುಕಿಕೊಂಡು ದಿನಕ್ಕೆ ಇನ್ನುರರಿಂದ ಮುನ್ನೂರು ರುಪಾಯಿ ಸಂಪಾದಿಸುವವರು. ಇಂಥಹ ಮಹಿಳೆಯರನ್ನು ಮಾಧ್ಯಮದ ಮುಂದೆ ಹೇಗೆ ಮಾತನಾಡಬೇಕು, ಏನು ಮಾತನಾಡಬೇಕು, ಹಾವ ಭಾವ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕೆಂದು ಹೇಳಿ ಕೊಡುವ ಕೆಲಸ ಆದಾಗಿತ್ತು. ತರಬೇತಿ ಎಲ್ಲ ಮುಗಿದ ನಂತರ ಅಲ್ಲೆ ಇದ್ದ ಒಂದಿಬ್ಬರು ಲೈಂಗಿಕ ಕಾರ್ಯಕತರ್ೆಯರ ಜತೆ ಕೂತೂಹಲಕ್ಕೆ ಹಾಗೆ ಕೇಳಿದೆ. ಎಷ್ಟು ಸಂಪಾದಿಸುತ್ತೀರಿ? ಹೇಗೆ ಮತ್ತು ಎಲ್ಲಿ ಸಂಪಾದಿಸುತ್ತೀರೆಂದು? ಒಬ್ಬೊಬ್ಬರು ಒಂದೊಂದು ಕಥೆ ಹೇಳಿದರು. ಮನಸ್ಸೆಲ್ಲಾ ಸದಾ ನಾನು ತಿರುಗಾಡುವ ಬಳ್ಳಾರಿ ರಸ್ತೆಯಲ್ಲಿ ಸಾಲು ಸಾಲಾಗಿ ನಿಲ್ಲುವ ಲೈಂಗಿಕ ಕಾರ್ಯಕತರ್ೆಯರ ಬಗ್ಗೆ ಯೋಚಿಸುವಂತೆ ಮಾಡಿತು.
ಅಲ್ಲಿದ್ದ ಮಂಜುಳ ಹೇಳಿದಳು, ನಾನು ನನ್ನ ಗಂಡ ತೀರಿಕೊಂಡ ನಂತರ 8 ತಿಂಗಳ ಮಗುವನ್ನು ಎತ್ತಿಕೊಂಡು ಬೆಂಗಳೂರಿಗೆ ಕೆಲಕ್ಕಾಗಿ ಬಂದೆ. ಹೇಳಿಕೊಳ್ಳುವಂತ ಕೆಲಸ ಸಿಗಲಿಲ್ಲ, ಒಂದು ದಿನ ಮಗುವನ್ನು ಪಕ್ಕದವರ ಮನೆಯಲ್ಲಿ ಮಲಗಿಸಿ ಹೂ ತರುವುದಾಗಿ ತಿಳಿಸಿ ಗಟ್ಟಿ ಮನಸ್ಸು ಮಾಡಿ ದೇಹ ಮಾರಿಕೊಳ್ಳಲು ಹೋದೆ. ಗಿರಾಕಿಯೇನೂ ಸಿಕ್ಕ. ಬೆಂಗಳೂರಿನ ಕಲಾಸಿಪಾಳ್ಯಂ ಬಸ್ ನಿಲ್ದಾಣ ಅದು. ಮೊದಲಿಗೆ ಒಬ್ಬನೇ ಬಂದ. ಆನಂತರ ಮುಂದಿನ ಬಸ್ ನಿಲ್ದಾನದ ಬಳಿ ಇಬ್ಬರಾದರು. ಆನಂತರ ಆಟೋ ರಿಕ್ಷಾ ಬೆಂಗಳೂರಿನ ಸರಹದ್ದು ದಾಟಿ ಆನೇಕಲ್ ಬಳಿಯ ಹಳ್ಳಿಯೊಂದರ ಬಳಿ ಹೋಗುವಷ್ಟರಲ್ಲಿ ಮತ್ತೊಬ್ಬ ಅವರಿಗೆ ಜತೆಯಾದ ಒಟ್ಟು ಮೂವರಾದರು. ಅದ್ಯಾವುದೋ ಊರಿನ ಹೊರಗೆ ಕಣ ಮಾಡುವ ಸ್ಥಳದಲ್ಲಿದ್ದ ಗುಡಿಸಲೊಂದಕ್ಕೆ ಕರೆದೊಯ್ದರು. ಊಟ ಇರಲಿಲ್ಲ. ಬರೀ ಬಿಸ್ಕೆಟ್ ಹಾಗೂ ನೀರನ್ನು ಬಿಟ್ಟು ಏನೇನು ಕೊಡಲಿಲ್ಲ ಅವರು. ರಾತ್ರಿ ಇಡೀ ಮೂವರ ದೇಹದ ತೀಟೆ ತೀರಿಸಿದ ನಂತರ ಬೆಳಗಿನ ಜಾವ ಬಸ್ ಬರುತ್ತದೆ. ಆರು ಗಂಟೆಗೆ ಆ ಹಳ್ಳಿಯಿಂದ ಹೊರಡುತ್ತದೆ ಎಂದು ಹೇಳಿ ಬೆಳಗಿನ ಜಾವ ನನ್ನ ಜತೆ ಅವರು ಅಲ್ಲಿದ್ದ ಬಸ್ ನಿಲ್ದಾಣದ ಬಳಿ ಮಲಗಿದ್ದರು. ಒಬ್ಬನಿಗೆ ಮುನ್ನೂರು ಮಾತನಾಡಿದ್ದೆ ಮೂವರು ಬಂದರು, ಒಂಭೈನೂರು ಎಂದೆ ಎಷ್ಟೋ ಕೊಡುತ್ತೀವಿ ಮೊದಲು ಕೆಲಸ ಆಗಲಿ ಎಂದಿದ್ದರು. ಕಡೆಗೆ ಎಲ್ಲಾ ಮುಗಿದ ನಂತರ ಒಬ್ಬನೇ ಒಬ್ಬ ಐವತ್ತು ರುಪಾಯಿ ಕೊಟ್ಟಿದ್ದ. ಬೆಳಗಿನ ಜಾವ ಧಣಿವಾಗಿದ್ದರಿಂದ ಸ್ವಲ್ಪ ನಿದ್ದೆ ಬಂದಿತ್ತು. ಬಸ್ನ ಶಬ್ದ ಕೇಳಿ ಎಚ್ಚರವಾದಾಗ ಮೂವರೂ ಅಲ್ಲಿರಲಿಲ್ಲ. ದುಡ್ಡು ಸಿಗಲಿಲ್ಲ. ಬಸ್ ಹತ್ತಿ ಮನೆಗೆ ಬಂದಾಗ, ಎಂಟು ತಿಂಗಳ ಕಂದಮ್ಮ ಮಿಣಮಿಣ ಕಣ್ಣು ಬಿಡುತ್ತಾ ಮಲಗಿತ್ತು. ಪಕ್ಕದ ಮನೆಯವರಿಗೆ ಹೂ ತರಲು ಹೋದಾಗ ನನ್ನ ಪರಿಚಯದವರು ಸಿಕ್ಕಿದ್ದರು. ಅವರ ಮನೆಗೆ ಹೋದೆ ಅವರ ಊರಿನಿಂದ ಯಾವುದೇ ಬಸ್ ಸಿಗಲಿಲ್ಲ ಅದಕ್ಕಾಗಿ ಅಲ್ಲೆ ಮಲಗಿದ್ದು ಎದ್ದು ಮೊದಲ ಬಸ್ಸಿಗೆ ಬಂದೆ ಎಂದು ಸುಳ್ಳು ಹೇಳಿದೆ. ಇದು ನನ್ನ ಮೊದಲ ದಿನದ ಲೈಂಗಿಕ ವೃತ್ತಿಯ ಅನುಭವವಾಗಿತ್ತು ಎಂದಳು ಆಕೆ. ಮನಸ್ಸೆಲ್ಲಾ ಹಿಂಡಿದಂತಾಯಿತು. ಆಕೆ ಮುಂದುವರೆಸಿದಳು. ಸಾರ್ ಪ್ರತಿ ದಿನವೂ ನಮ್ಮದು ಸಾವಿನೊಂದಿಗಿನ ಸರಸವಾಗಿರುತ್ತದೆ. ನಮಗೆ ಯಾವ ಗಿರಾಕಿ ಸಿಗುತ್ತಾನೆ ಎನ್ನುವುದರ ಮೇಲೆ ನಮ್ಮ ಆ ದಿನದ ಬದುಕು ನಿಧರ್ಾರವಾಗುತ್ತದೆ. ನಮಗೆ ಸಿಗುವ ಗಿರಾಕಿಗಳೆಲ್ಲಾ ನೂರರಿಂದ ಐದುನೂರು ರುಪಾಯಿ ಗಿರಾಕಿಗಳೇ. ಅವರುಗಳು ನಮ್ಮನ್ನು ಯಾವುದಾದರೂ ಕತ್ತಲಿನ ಪೊದೆಗಳಿಗೋ ಅಥವಾ ಬಯಲಿಗೋ ಕರೆದೊಯ್ಯುತ್ತಾರೆ. ಕೆಲವೊಮ್ಮೆ ಅಲ್ಲೆ ಸಿಗುವ ಮರದ ಸೊಪ್ಪನ್ನು ಕೆಳಗೆ ಹಾಸಿಕೊಂಡು ಮಲಗಬೇಕಾಗುತ್ತದೆ. ಕೆಲವರು ವಿವಸ್ತ್ರಗೊಳಿಸಿ ಓಡಾಡಿಸುತ್ತಾರೆ. ವಿಕೃತ ಕಾಮಿಗಳು ಕೊಡಬಾರದ ಹಿಂಸೆ ಕೊಡುತ್ತಾರೆ. ಮಾಂಸದ ಮುದ್ದೆಯಂತೆ ನಮ್ಮನ್ನು ನಡೆಸಿಕೊಳ್ಳುತ್ತಾರೆ. ಬುದ್ಧಿವಂತಿಕೆ ಉಪಯೋಗಿಸಿ ಮೊದಲೇ ನಾವು ದುಡ್ಡು ಕೇಳಿದರೆ ಮಲಗಿದ್ದಾಗ ಅಥವಾ ಮೈಮರೆತಾಗ ತಾವೇ ಆ ಹಣವನ್ನು ಕದ್ದು ಬಿಡುತ್ತಾರೆ. ಕೆಲವರು ಇಲ್ಲಿ ಮಾತನಾಡುವುದೇ ಒಂದು ಕೆಲಸ ಆದ ನಂತರ ಕೊಡುವಾಗ ಕೊಡುವ ದುಡ್ಡೇ ಬೇರೆ. ನಾನಿಷ್ಟೇ ಮಾತನಾಡಿದ್ದು ಎನ್ನುತ್ತಾರೆ. ನಾವು ಯಾರಿಗೂ ಹೇಳುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ರೌಡಿಗಳ ಜತೆ ಹೋದರಂತೂ ನಮ್ಮ ಬಳಿ ಇರುವ ಉಮಾ ಗೋಲ್ಡ್ ಚೈನ್ ಗಳನ್ನೇ ಕಿತ್ತುಕಂಡು ದುಡ್ಡನ್ನೂ ಕೊಡದೇ ಕಳುಹಿಸುತ್ತಾರೆ. ಹೆಚಿಗೆ ಮಾತನಾಡಿದರೆ ಕುತ್ತಿಗೆ ಹಿಸುಕಲು, ಚಾಕು ಚೂರಿಗಳಿಂದ ಇರಿಯಲೂ ಅವರು ಹೇಸುವುದಿಲ್ಲ. ಕೆಲವೊಮ್ಮೆ ಪೊಲೀಸಿನವರ ಕೈಗೆ ಸಿಕ್ಕರಂತೂ ಠಾಣೆಯಲ್ಲಿ ಇರುವವರೆಲ್ಲಾ ಸರದಿಯಲ್ಲಿ ಮಲಗಿದರೂ ಒಂದು ನಯಾ ಪೈಸೆ ಕೊಡದೇ ಕಳುಹಿಸುತ್ತಾರೆ. ಮನೆ ಬಿಟ್ಟವರು ಮತ್ತೆ ಮನೆ ಕಡೆ ಬಂದಿಳಿದಾಗಲೇ ಬದುಕಿದೆವು ಎಂದೆನಿಸುತ್ತದೆ. ಪ್ರತಿದಿನ ಪ್ರತಿ ಕ್ಷಣ ಸವಾಲಾಗಿರುತ್ತದೆ. ಕೆಲವರು ಮಾತಾಡಿದಷ್ಟು ಪ್ರಾಮಾಣಿಕವಾಗಿ ದುಡ್ಡು ಕೊಡುತ್ತಾರೆ. ಒಟ್ಟಿನಲ್ಲಿ ಪ್ರತಿದಿನವೂ ಅಗ್ನಿ ಪರೀಕ್ಷೆಯಾಗಿರುತ್ತದೆ. ಅದೃಷ್ಟ ಕೆಟ್ಟದಾಗಿದ್ದರೆ ಬದುಕು ಅಲ್ಲೆ ಮುಗಿಯುತ್ತದೆ ಎಂದಳು ಮಂಜುಳ.
ಕುಡಿಯುತ್ತೀರಾ ಎಂದೆ. ಗಂಡನ ಜತೆ ಮಲಗಲು ಒಮ್ಮೆಮ್ಮೆ ಅಸಹ್ಯ ಹುಟ್ಟುತ್ತದೆ. ಹೀಗಿರುವಾಗ ಪ್ರತಿದಿನ ಒಬ್ಬೊಬ್ಬ ಕೆಲವೊಮ್ಮೆ ಇಬ್ಬರು ಮೂವರ ಜತೆ ಮಲಗುವಾಗ ಕುಡಿತವಿಲ್ಲದಿದ್ದರೆ ಆಗುವುದಿಲ್ಲ. ನಮಗೂ ಕೆಲವರು ಮಾಮೂಲಿ ಗಿರಾಕಿಗಳಿರುತ್ತಾರೆ. ಅವರಲ್ಲಿ ಕೆಲವರು ಕಳ್ಳರಿರುತ್ತಾರೆ. ಅವರುಗಳು ನಮ್ಮನ್ನು ಹೆಂಡಂದಿರಂತೆ ನಮ್ಮನ್ನು ನಡೆಸಿಕೊಳ್ಳುತ್ತಾರೆ. ರೆಗ್ಯುಲರ್ ಆಗಿ ಅವರ ಬಳಿಗೆ ನಾವು ಹೋಗುತ್ತ್ತಿರುತ್ತೇವೆ. ಅಪಾಯ ಕಡಿಮೆ ಎಂದಳು ಮಂಜುಳ……..
ಅಯ್ಯೋ ಪ್ರತಿದಿನ ಒಂದೊಂದು ಸ್ಟೋರಿ ಇರುತ್ತದೆ. ಒಬ್ಬೊಬ್ಬರದೂ ಒಂದೊಂದು ಸ್ಟೋರಿ ಇಲ್ಲಿ. ಪ್ರತಿದಿನ ಪ್ರತಿ ಕ್ಷಣ ನಮ್ಮ ಹೋರಾಟವಿರುತ್ತದೆ ಎಂದಳು ಅವರ ಟೀಂ ಲೀಡರ್ ರತ್ನ……..
ಮತ್ತೆ ಮಾತೇ ಹೊರಡಲಿಲ್ಲ ನನಗೆ. ತಕ್ಷಣ ಬಳ್ಳಾರಿ ರಸ್ತೆಯಲ್ಲಿ ಪ್ರತಿದಿನ ಸಾಲು ಸಾಲಾಗಿ ನಿಲ್ಲುವ ಸೆಕ್ಸ್ ವರ್ಕರ್ಗಳು ಕಣ್ಣ ಮುಂದೆ ಬಂದರು. ಕೆಲವೊಮ್ಮೆ ಪೊಲೀಸಿನವ್ರು ಅವರನ್ನು ಓಡಿಸಿಕೊಂಡು ಹೋಗುವುದನ್ನು ಅದರಲ್ಲೂ ಹಿಜಡಾಗಳು ಉಟ್ಟಿರುವ ಸೀರೆಗಳನ್ನು ಮೇಲೆತ್ತಿಕಂಡು ಬಳ್ಳಾರಿ ರಸ್ತೆಗಳಲ್ಲಿ ಓಡುವ ದೃಶ್ಯಗಳು ಕಣ್ಮುಂದೆ ಬಂದವು. ಮನಸ್ಸು ಭಾರವಾಯಿತು…………
ಹೀಗೆ ಪ್ರತಿದಿನ ಮಾನಸಿಕ ದೈಹಿಕ ಹಿಂಸೆಗೀಡಾಗುವ, ಮೈಮಾರಿಕೊಂಡು ಜೀವನ ಸಾಗಿಸುವ ಹೆಂಗಸರಲ್ಲಿ ನೈತಿಕ ಸ್ಥೈರ್ಯವನ್ನು ತುಂಬುವ, ಲೈಂಗಿಕ ಸೋಂಕು ಅದರಲ್ಲೂ ವಿಶೇಷವಾಗಿ ಹೆಚ್ ಐವಿ ಹರಡದಂತೆ ತಡೆಯುವ ಕೆಲಸವನ್ನು ಮಾಡುತ್ತಿವೆ ಸ್ವಸ್ತಿ, ವಿಜಯಾ ಹಾಗೂ ಜ್ಯೋತಿ ಮಹಿಳಾ ಸಂಘಗಳು. ಅದರಲ್ಲೂ ಹೆಚ್ಐವಿ ಪಾಸಿಟೀವ್ ಇರುವ ಲೈಂಗಿಕ ಕಾರ್ಯಕತರ್ೆಯರಿಗೆ ಬದುಕು ಎಂಬ ಯೋಜನೆಯನ್ನು ಈ ಸಂಘಗಳು ಹುಟ್ಟಿಹಾಕಿವೆ. ಈ ಯೋಜನೆಯಡಿ ಹೆಚ್ಐವಿ ಪಾಸಿಟೀವ್ ಇರುವ ಲೈಂಗಿಕ ಕಾರ್ಯಕತರ್ೆಯರು ತಮ್ಮಂತೇ ಬದುಕು ಸಾಗಿಸುತ್ತಿರುವ ಸಾವಿರಾರು ಮಂದಿ ಲೈಂಗಿಕ ಕಾರ್ಯಕತರ್ೆಯರನ್ನು ಒಗ್ಗೊಡಿಸುವ ಜತೆಗೆ ಹೆಚ್ಐವಿ ಹರಡದಂತೆ ತಡೆಯುವ ಕಾರ್ಯಕ್ರಮವನ್ನೂ ಆ ಮೂಲಕ ಜಾರಿಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ವಿಶೇಷವಾಗಿ ಕಳಂಕ ಮತ್ತು ತಾರತಮ್ಯ ಹೋಗಲಾಡಿಸಲು ಬದುಕು ಯೋಜನೆಯಡಿ ಈ ಲೈಂಗಿಕ ಕಾರ್ಯಕತರ್ೆಯರು ಹೋರಾಡುತ್ತಿದ್ದಾರೆ…..
ಅವರ ಹೋರಾಟದ ಬಗ್ಗೆ ಮುಂದೆ ಬರೆಯುತ್ತೇನೆ…….ಇಂಥಹ ಲೈಂಗಿಕ ವೃತ್ತಿನಿರತ ಹೆಚ್ಐವಿ ಪಾಸೀಟಿವ್ ಮಹಿಳೆಯರಿಗೆ ಮಾಧ್ಯಮವನ್ನು ಎದುರಿಸುವ, ಹೇಗೆ ಮಾತನಾಡಬೇಕು, ಯಾವುದನ್ನು ಮಾತನಾಡಬೇಕು, ಹಾವ ಭಾವಗಳು ಹೇಗಿರಬೇಕೆಂದು ತರಬೇತಿ ನೀಡಿದ್ದು, ಅವರುಗಳಿಗೆ ತಮ್ಮ ಹಕ್ಕುಗಳ ಪಡೆದುಕೊಳ್ಳಲು ಹೋರಾಡುವ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದು ನನಗೆ ತೃಪ್ತಿ ನೀಡಿತು………………ಇನ್ನೊಮ್ಮೆ ಬರೆಯುತ್ತೇನೆ……

—-ಎಂ.ಎನ್. ಚಂದ್ರೇಗೌಡ,
ಪತ್ರಕರ್ತ,
ಸೀಫಾರ್,
ಫ್ರಾಜೆಕ್ಟ್ ಕೋಆಡರ್ಿನೇಟರ್,
ಬೆಂಗಳೂರು. 
 

 

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ನವೆಂಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಕ್ಟೋ   ಡಿಸೆ »
  1234567
  891011121314
  15161718192021
  22232425262728
  2930  
 • ವಿಭಾಗಗಳು