Inside the Universal studio’s, USA, Los Angeles

ಸ್ಲಗ್: ಯೂನಿವರ್ಸಲ್ ಸ್ಟುಡಿಯೋಸ್
ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಡೇಟ್: 02- 02- 09
ಬೆಂಗಳೂರು
ಆಂಕರ್: ಈ ವಾರ ನೀವು ಭೇಟಿ ನೀಡುತ್ತಿರುವುದು ಅಮೆರಿಕಾದ ಲಾಸ್ ಏಂಜಲೀಸ್ ನಗರದಲ್ಲಿರುವ ಯೂನಿವರ್ಸಲ್ ಸ್ಟುಡಿಯೋಗೆ. ಇಂಥಹ ಸ್ಟುಡಿಯೋಸ್  ಅಲರ್ಾಂಡೋದಲ್ಲೂ ಇವೆ. ಆದರೆ ಹಾಲಿವುಡ್ನ ಸಿನಿಮಾ ಸ್ಟಾರ್ಗಳೆಲ್ಲಾ ಲಾಸ್ ಏಂಜಲೀಸ್ನ ಬೆವಲರ್ಿ ಹಿಲ್ಸ್ನಲ್ಲಿ ವಾಸಿಸುತ್ತಿರುವುದರಿಂದ ಜತೆಗೆ ಸಿನಿಮಾಗೆ ಸಂಬಂಧಿಸಿದ ಚಟುವಟಿಕೆಗಳೆಲ್ಲಾ ಇಲ್ಲೇ ನಡೆಯುವುದರಿಂದ ಇಲ್ಲಿನ ಸ್ಟುಡಿಯೋಗಳಿಗೆ ಗ್ಲಾಮರ್ ಹೆಚ್ಚು. ಇಡೀ ಒಂದು ದಿನ ಬೇಕಾಗುತ್ತದೆ ಈ ಸ್ಟುಡಿಯೋ ಟೂರ್ ಮಾಡಲು. ಬನ್ನಿ ಈಗ ಚಂದ್ರೇಗೌಡ ಸ್ಟುಡಿಯೋ ಟೂರ್ ಮಾಡ್ತಾರೆ, ಏನೇನು ವಿವರ ಕೊಡ್ತಾರೆ ನೋಡೋಣ ಬನ್ನಿ…..

ಫ್ಯಾಕೇಜ್ ಫಾಲೋಸ್…………..

ವಾಯ್ಸ್ ಓವರ್ 1:
ಲಾಸ್ ಏಂಜಲೀಸ್ ನಗರದ ಹೃದಯಭಾಗದಿಂದ ಸುಮಾರು 40 ಕಿಲೋಮೀಟರ್ ಪ್ರಯಾಣಿಸಿದರೆ ಎದುರಾಗುತ್ತದೆ ಹಾಲಿವುಡ್ ಎಂಬ ಬೃಹತ್ ಗಾತ್ರದ ಬೋರ್ಡ. ಈ ಬೋರ್ಡ ಅಲ್ಲೆಲ್ಲೋ ಗುಡ್ಡದ ಮೇಲಿದ್ದರೆ ಕೆಳಗೆ ಸೃಷ್ಟಿಯಾಗಿದೆ ಯೂನಿವರ್ಸಲ್ ಸ್ಟುಡಿಯೋಸ್ ಮಾಯಾನಗರಿ. ಅದೊಂದು ಅತ್ಯಂತ ಖುಷಿಕೊಡುವ, ಎಲ್ಲರೂ ನಿಬ್ಬೆರಗಾಗಿ ನೋಡುವಂಥಹ, ಅತ್ಯಂತ ದುಬಾರಿ ಸಿನೆಮಾಗಳನ್ನು ನಿಮರ್ಿಸುವ ನಗರಿ ಅದು. ಜುರಾಸಿಕ್ ಪಾರ್ಕ, ಮಮ್ಮಿಯಂಥಹ ಹೊಸ ಪ್ರಯೋಗಗಳ ಸಿನಿಮಾಗಳು ಸೃಷ್ಟಿಯಾಗಿದ್ದೇ ಇಲ್ಲಿನ ಸ್ಪೆಷಲ್ ಎಫೆಕ್ಟ್ ಸ್ಟುಡಿಯೋಗಳಲ್ಲಿ. ಅಲರ್ಾಂಡೊದಲ್ಲೂ ಇಂಥಹ ಯೂನಿವರ್ಸಲ್ ಸ್ಟುಡಿಯೋ ಇದೆ. ಅದಕ್ಕಿಂತ ಹೆಚ್ಚು ಪ್ರಸಿದ್ಧಿಯಾಗಿರುವುದು ಲಾಸ್ ಏಂಜಲೀಸ್ ಸ್ಟುಡಿಯೋಸ್ಗಳೇ. ಯುನಿವರ್ಸಲ್ನ ಪ್ರವೇಶ ದ್ವಾರದಲ್ಲೇ ನಮ್ಮನ್ನು ಸ್ವಾಗತಿಸುತ್ತವೆ ಆಕ್ಟರ್, ಡೈರೆಡಕ್ಟರ್, ಕ್ಯಾಮರಾಮನ್ ಹಾಗೂ ಸೌಂಡ್ ರೆಕಾಡರ್ಿಸ್ಟ್ಗಳ ಕಲಾಕೃತಿಗಳು. ಹೊರಗೆ ಒಳಗೆ ಎಲ್ಲಾ ಕಡೆ……. ಇಲ್ಲಿ ಅದ್ಭುತ ಸೃಷ್ಟಿಗಳೇ……………….ದಿ ಸಿಂಪ್ಸನ್ ರೈಡ್, ರಿವೆಂಜ್ ಆಫ್ ಮಮ್ಮಿ, ಜುರಾಸಿಕ್ ಪಾಕರ್್, ಟಮರ್ಿನೆಟರ್- 2, ವಾಟರ್ ವಡರ್್, ಸ್ಪೆಷಲ್ ಎಫೆಕ್ಟ್ಸ್ ಸ್ಟೇಜಸ್, ಯೂನಿವರ್ಸಲ್ ಅನಿಮಲ್ ಆಕ್ಟರ್ಸ್…… ಹೀಗೆ ನಾನಾ ವಿಭಾಗಗಳಿವೆ ಯೂಸಿವರ್ಸಲ್ ಸ್ಟುಡಿಯೋನಲ್ಲಿ…..ನಾನು ಮೊದಲಿಗೆ ದಡಬಡಿಸಿ ಹೊರಟಿದ್ದು ಸ್ಟುಡಿಯೋ ಟುರ್ಗೆ. ಈ ರೈಡ್ನಲ್ಲಿ ಹೋಗಲು ನೂಕು ನುಗ್ಗಲಿರುತ್ತದೆ ಅಲ್ಲಿ. ಏಕೆಂದರೆ ಯಾರೊಬ್ಬರೂ ಈ ರೈಡನ್ನು ಮಿಸ್ ಮಾಡಿಕೊಳ್ಳುವುದಿಲ್ಲ ಇಲ್ಲಿ. ಉದ್ದನೆ ಕ್ಯೂನಲ್ಲಿ ನಿಂತರೆ ವಿಶೇಷ ಟ್ರೇನ್ಗಳಲ್ಲಿ ಜನರನ್ನು ಒಳಗೆ ಕರೆದೊಯ್ಯುತ್ತಾರೆ…. ಈ ಟ್ರೇನ್ಗಳು ರಸ್ತೆ ಮೇಲೆ ನೆಲದ ಮೇಲೆ ಎರಡೂ ಕಡೆ ಚಲಿಸಬಲ್ಲವು.

ಪ್ರತಿದಿನ ಇಲ್ಲಿನ ಸ್ಟುಡಿಯೋಗಳಲ್ಲಿ ಶೂಟಿಂಗ್ ನಡೆಯುತ್ತಲೇ ಇರುತ್ತದೆ. ಶೂಟಿಂಗ್ನಲ್ಲಿ ನಿರತರಾದವರಿಗೆ ಯಾವುದೇ ತೊಂದರೆಯಾಗದಂತೆ ಗೈಡ್ಗಳು ಸ್ಟುಡಿಯೋ ಟೂರ್ ಮಾಡಿಸುತ್ತಾರೆ. ನಾನು ಇದುವರೆಗೆ ನೋಡಿದ್ದುದು ಹೈದ್ರಾಬಾದ್ನಲ್ಲಿದ್ದ ರಾಮೋಜಿರಾವ್ ಸ್ಟುಡಿಯೋ ಮಾತ್ರ. ಆದರೆ ಇಲ್ಲಿನ ಸ್ಟುಡಿಯೋಗಳಿಗೂ ರಾಮೋಜಿ ಫಿಲಂ ಸಿಟಿಗೂ ಅಜಗಜಾಂತರ ವ್ಯತ್ಯಾಸ. ಕೇವಲ ಗಾತ್ರದಲ್ಲಷ್ಟೇ ಅಲ್ಲ, ವಿಸ್ತಾರ, ವಿವರ ಅಗಾಧತೆ ಎಲ್ಲದರಲ್ಲೂ. ಇಲ್ಲಿನ ಸ್ಪೆಷಲ್ ಎಫೆಕ್ಟ್ಸ್ನ ಸೌಲಭ್ಯಗಳು ರಾಮೋಜಿಯಲ್ಲಿಲ್ಲ………

ಮೊದಲಿಗೆ ಭೂಕಂಪನದ ಅನುಭವ ನೀಡುವ ಮರದ ಬ್ರಿಡ್ಜ್ ಮೇಲೆ ಸಾಗುತ್ತದೆ ನಮ್ಮ ಮಿನಿ ಟ್ರೇನ್. ಬ್ರಿಡ್ಜ್ ಕುಸಿದ ಅನುಭವವಾಗುತ್ತದೆ ಜನ ಕಿಟ್ಟನೆ ಕಿರುಚಿಕೊಳ್ಳುತ್ತಾರೆ……ಆದರೆ ಟ್ರೇನ್ ಬೀಳದೇ ಮುಂದೆ ಸಾಗುತ್ತದೆ…………… ಅಲ್ಲಿಂದ ಹಾದು ಮುಂದೆ ಹೋದರೆ “ಬಿಗ್ ಫ್ಯಾಟ್ ಲಯರ್” ಮೆಕ್ಸಿಕನ್ ಚಲನಚಿತ್ರದಲ್ಲಿ ಬಳಸಿರುವ ಪ್ರವಾಹದ ಸ್ಟಂಟನ್ನು ನೆನಪಿಸುವ ಸ್ಥಳಕ್ಕೆ ಬಂದು ನಿಲ್ಲುತ್ತದೆ ನಮ್ಮ ಟ್ರೇನ್………..ಫ್ಲೋ…. ನೋಡು ನೋಡುತ್ತಿದ್ದಂತೆಯೇ ಅಲ್ಲೊಂದು ಕೃತಕ ಮಳೆ, ಪ್ರವಾಹ ಸೃಷ್ಟಿಯಾಗುತ್ತದೆ ಅಲ್ಲಿ……ಟ್ರೇನ್ ಕೊಚ್ಚಿ ಹೋಗಬಹುದೆಂದು ಗಾಬರಿಪಡುವಷ್ಟರಲ್ಲಿ ನೀರು ನಿಂತು ಹೋಗುತ್ತದೆ ಅಲ್ಲಿ.
  
ಅಲ್ಲಿಂದ ಮುಂದೆ ಸಾಗಿದರೆ ಸ್ಪೆಷಲ್ ಎಫೆಕ್ಟ್ ತೋರಿಸುವ ಕಾರುಗಳ ಪ್ರದರ್ಶನ………….ಕಾರುಗಳಿಂದ ಡ್ಯಾನ್ಸ್ ಮಾಡಿಸುತ್ತಾರೆ ಇಲ್ಲಿ….ಮ್ಯಾಸಿಕ್ಗೆ ಕಾರ್ಗಳು ಡ್ಯಾನ್ಸ್ ಮಾಡುತ್ತವೆ ಇಲ್ಲಿ……….ಸ್ಪೆಷಲ್ ಎಫೆಕ್ಟ್ ಕಣ್ಣ ಮುಂದೆ ಕಾಣುತ್ತದೆ. ಫ್ಲೋ……. ಅಲ್ಲಿಂದ ಮುಂದೆ ಬಂದರೆ ಶೂಟಿಂಗ್ ಸ್ಟಂಟ್ನ ದೃಶ್ಯ ಕಣ್ಮುಂದೆ ಬರುತ್ತದೆ. ವ್ಯಕ್ತಿಯೊಬ್ಬನನ್ನು ಶೂಟ್ ಮಾಡಲಾಗುತ್ತದೆ. ಪಿಸ್ತೂಲ್ಗಳು ಮಾತನಾಡುತ್ತವೆ. ಹೆಣ ಬೀಳುತ್ತದೆ. ಶೂಟಿಂಗ್ ಸ್ಟಂಟ್ ಮುಕ್ತಾಯವಾಗುತ್ತದೆ.
ಡೆಸ್ಪರೇಟ್ ಹೌಸ್ವೈಫ್ ಸಿನಿಮಾಕ್ಕೆ ಹಾಕಿದ್ದ ವಿಸ್ಟಿರಿಯಾ ಲೇನ್ನ ಸೆಟ್ಟನಲ್ಲಿ ಸಾಗಿ ಮುಂದೆ ಬಂದರೆ ವಿಮಾನವೊಂದು ಉರುಳಿ ಬಿದ್ದಿರುವ ದೃಶ್ಯ ಕಂಡು ಬರುತ್ತದೆ. ಅದು ಉರುಳಿ ಬೀಳುವ ಮುನ್ನ ಐದಾರು ಕಟ್ಟಡಗಳಿಗೆ ಢಿಕ್ಕಿ ಹೊಡೆದಿರುತ್ತದೆ. ಎಲ್ಲ ಕಡೆ ಚೆಲ್ಲಾಪಿಲ್ಲಿಯಾಗಿ ಮೃತದೇಹಗಳು ಬಿದ್ದಿರುತ್ತವೆ ಅಲ್ಲಿ. ಅದೊಂದು ಭಯಾನಕ ದೃಶ್ಯದಂತೆ ಕಂಡುಬರುತ್ತದೆ. ವಿಮಾನದ ಎಂಜಿನ್ ಒಂದು ಕಡೆ ಪುಡಿ ಪುಡಿಯಾಗಿ ಬಿದ್ದಿದ್ದರೆ ವಿಮಾನ ಒಡೆದು ಮೂರು ಹೋಳಾಗಿರುತ್ತದೆ. ಬೆಂಕಿ, ಹೊಗೆ ಅಲ್ಲಲ್ಲಿ ಭುಗಿಲೇಳುತ್ತಿರುತ್ತದೆ. ಇದೇನಿದು ವಿಮಾನ ಅಪಘಾತ ಯಾವಾಗ ಆಯಿತೆಂದು ಆತಂಕ ಪಡುವಷ್ಟರಲ್ಲಿ ಇದೆಲ್ಲಾ ಸೆಟ್ ಅಲ್ಲವಾ ಎಂದು ನಿರಾಳವಾಗುತ್ತದೆ…….. ಅಷ್ಟೊಂದು ನೈಜವಾಗಿ ಕಾಣುತ್ತದೆ ಆ ಸೆಟ್. ಅದ್ಭುತ ಎನಿಸುತ್ತದೆ. ಟ್ರೇನ್ ಮುಂದೆ ಸಾಗುತ್ತದೆ……

ಅಲ್ಲಿಂದ ಮುಂದೆ ಬಂದರೆ ಸ್ಪéೆಷಲ್ ಎಫೆಕ್ಟ್ ಸ್ಟುಡಿಯೋದಲ್ಲಿ ಟಮರ್ಿನೇಟರ್ ಸಿನಿಮಾದಲ್ಲಿ ಕಂಡು ಬರುವ ಬೆಂಕಿ ಭುಗಿಲೇಳುವ, ನೀರು ಧುಮ್ಮಿಕ್ಕುವ ದೃಶ್ಯಗಳು ನಮ್ಮ ಕಣ್ಮುಂದೆ ಬರುತ್ತವೆ. ಕರೆಂಟ್ ಶಾಕ್ ಹೊಡೆಯುತ್ತದೆ ಅಲ್ಲಿ. ನೀರು ಧುಮ್ಮಿಕ್ಕುತ್ತದೆ…….ನೀರಿನಲ್ಲಿ ಟ್ರೇನ್ ಮುಳುಗಿ ಹೋಗಬಹುದೆಂದು ಆತಂಕ ಪಡುವಷ್ಟರಲ್ಲಿ ಟ್ರೇನ್ ಹೊರಬರುತ್ತದೆ………………….

ಆನಂತರ ಮತ್ತೊಮದು ಸ್ಟುಡಿಯೋದಲ್ಲಿ ಪೈರೋಟೆಕ್ನಿಕ್ ಬಳಸಿ ಸೃಷ್ಟಿಸಲಾದ ಬೆಂಕಿಯ ಕೆನ್ನಾಲೆಗಳ ದೃಶ್ಯಗಳನ್ನು ಸ್ಪೆಷಲ್ ಎಫೆಕ್ಟ್ ಸ್ಟುಡಿಯೋದಲ್ಲಿ ಕಾಣಬಹುದಾಗಿದೆ……………ಹಾಲ್ನ ತುಂಬೆಲ್ಲಾ ಬೆಂಕಿಯ ಕೆನ್ನಾಲಿಗೆಗಳು…………..ನಾವೆಲ್ಲಾ ಎಲ್ಲಿ ಸುಟ್ಟು ಕರಕಲಾಗಿಬಿಡಬಹುದೆಂಬ ಆತಂಕ ಅಲ್ಲಿ………….ಜನ ಕಿರುಚಾಡುತ್ತಾರೆ. ಶಾಖ ಹೆಚ್ಚಾಗುತ್ತದೆ. ಬೆಂಕಿ ನಮ್ಮನ್ನೆಲ್ಲಾ ಆವರಿಸಿಕೊಂಡು ಬಿಟ್ಟಿತೇನೋ ಎಂದು ಭಯ ಶುರುವಾಗುವಷ್ಟರಲ್ಲಿ ನಮ್ಮ ಟ್ರೇನ್ ಹೊರಬರುತ್ತದೆ…….ನಿರಾಳವಾಗುತ್ತದೆ ಮನಸ್ಸಿಗೆ.
ನಂತರ ಕೊಳವೊಂದರಲ್ಲಿ ಸ್ಟಂಟ್ ನಡೆಯುತ್ತದೆ. ಅಲ್ಲೂ ಬೆಂಕಿ ಚಿಮ್ಮುತ್ತದೆ. ನೀರಿನಲ್ಲಿ ಅಡಗಿದ್ದ ಕೃತಕ ವೈಟ್ ಫಿಷ್ ನಮ್ಮ ಮೇಲೆ ನುಗ್ಗಿ ಬರುತ್ತದೆ. ಮಕ್ಕಳು ಕಿರಿಚಾಡುತ್ತದೆ. ಟ್ರೇನ್ ಮುಂದಕ್ಕೆ ಹೋಗುತ್ತದೆ. ಅಲ್ಲಿಗೆ ನಮ್ಮ ಸ್ಟುಡಿಯೋ ಟೂರ್ ಮುಗಿಯುತ್ತದೆ.
ಆಂಕರ್: ಯೂನಿವರ್ಸಲ್ ಸ್ಟುಡಿಯೋಸ್ನಲ್ಲಿರುವ ಮಮ್ಮಿ ಹಾಗೂ ಜುರಾಸಿಕ್ ಪಾರ್ಕಗಳನ್ನು ಶೂಟ್ ಮಾಡಲು ಇಲ್ಲಿ ಅವಕಾಶ ಇಲ್ಲ. ಮಮ್ಮಿ ಹಾಗೂ ಜುರಾಸಿಕ್ ಪಾಕರ್್ ಸಿನಿಮಾವನ್ನು ಶೂಟ್ ಮಾಡಿದ ಸೆಟ್ಗಳನ್ನು ಹಾಗೆಯೇ ಉಳಿಸಿಕೊಂಡು ಪ್ರವಾಸಿಗರು ನೋಡಲು ಅವಕಾಶ ಮಾಡಿಕೊಡಲಾಗಿದೆ. ಜುರಾಸಿಕ್ ಪಾಕರ್್ನಲ್ಲಿ ಡೈಯಾನೋಸರ್ ಹಾಗೂ ಮಮ್ಮಿ ಕ್ಯಾರಕ್ಟರ್ಗಳ ಪ್ರಮುಖ ಸೆಟ್ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಮಮ್ಮಿ ರೈಡ್ನಲ್ಲಿ ಜನರು ಕುಳಿತುಕೊಳ್ಳುವ ಟ್ರೇನ್ ಎಷ್ಟು ವೇಗವಾಗಿ ತೆರಳುತ್ತದೆಂದರೆ ಕಣ್ಣು ಮುಚ್ಚದೆ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ ಎನಿಸುತ್ತದೆ. ಮಮ್ಮಿ ಸಿನೆಮಾದಲ್ಲಿ ಮನುಷ್ಯರನ್ನು ತಿನ್ನುವ ಕಪ್ಪು ಹುಳುಗಳ ಸ್ಟಂಟನ್ನು ನಾವು ಒಳಗೆ ನೋಡಬಹುದಾಗಿದೆ. ಈಗ ಒಂದು ಬ್ರೇಕ್ ತೆಗೆದುಕೊಳ್ಳೋಣ. ಮುಂದಿನ ಭಾಗದಲ್ಲಿ ಸ್ಕೈ ಡೈವಿಂಗ್ ಟ್ರೇನಿಂಗ್, ಸ್ಪೆಷಲ್ ಎಫೆಕ್ಟ್ ಪ್ರಾತ್ಯಕ್ಷಿಕೆಗಳನ್ನು ನೋಡೋಣ….

ಆಂಕರ್; ಸೆಷಲ್ ಎಫೆಕ್ಟ್ ಸ್ಟುಡಿಯೋ ನೋಡಲು ದೊಡ್ಡ ಕ್ಯೂಗಳಲ್ಲಿ ನಿಲ್ಲಬೇಕಾಗುತ್ತದೆ ಅಲ್ಲಿ. ಬನ್ನಿ ಸ್ಪೆಷಲ್ ಎಫೆಕ್ಟ್ನ ಬಗ್ಗೆ ಚಂದ್ರೇಗೌಡ ಮತ್ತಷ್ಟು ಮಾಹಿತಿ ನೀಡುತ್ತಾರೆ, ನೋಡೋಣ ಬನ್ನಿ.

ವಾಯ್ಸ್ ಓವರ್ 2: ಸ್ಪೆಷಲ್ ಎಫೆಕ್ಟ್ ಸ್ಟುಡಿಯೋ ನೋಡಲು ಮೂವಿಂಗ್ ಸ್ಟೆಪ್ಸ್ ಬಳಸಿ ಪಾತಾಳದಷ್ಟು ಕೆಳಗೆ ಇಳಿಯಬೇಕಾಗುತ್ತದೆ. ಮೂವಿಂಗ್ ಸ್ಟೇರ್ಗಳನ್ನು ಬಳಸಿ ಇಳಿಯುವುದೇ ಮಜಾ ಇಲ್ಲಿ. ದೊಡ್ಡವರು ಮಕ್ಕಳಂತಾಡುತ್ತಾರೆ. ಮಕ್ಕಳು ಮಗುವಾಗುತ್ತಾರೆ ಈ ಮೂನಿಂಗ್ ಸ್ಟೇರ್ಸ್ಗಳ ಮೇಲೆ.
ಕೆಳಗೆ ಇಳಿದರೆ ಜುರಾಸಿಕ್ ಪಾಕರ್್ನಲ್ಲಿ ಡೈಯಾನೋಸರ್ ಹಾಗೂ ಮಮ್ಮಿ ಕ್ಯಾರಕ್ಟರ್ಗಳ ಪ್ರಮುಖ ಸೆಟ್ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ ಶೂಟಿಂಗ್ ಅವಕಾಶ ಇಲ್ಲಾ ಇಲ್ಲಿ. ಆದರೂ ಜುರಾಸಿಕ್ ಪಾಕರ್್ನ ಹೊರಗಡೆ 80 ಅಡಿ ಆಳಕ್ಕೆ ಮೂವಿಂಗ್ ಟ್ರೇನ್ ಬೀಳುವ, ಜನ ಕಿಟ್ಟನೆ ಕಿರುಚಾಡುವ ದೃಶ್ಯ ಸೆರೆಹಿಡಿದೆ ನಾನು. ಜುರಾಸಿಕ್ ಪಾರ್ಕನಲ್ಲಿ ಪೋಟೋಗ್ರಫಿಗೆ ನಿಷೇಧವಿದ್ದರೂ ಕದ್ದು ಮುಚ್ಚಿ ಒಂದಷ್ಟು ಚಿತ್ರಗಳನ್ನು ಕ್ಲಿಕ್ ಮಾಡಿದೆ ನಾನು.

ಮುಂದೆ ಸ್ಪೆಷಲ್ ಎಫೆಕ್ಟ್ ಸ್ಟುಡಿಯೋದಲ್ಲಿ ಘಾಡ್ಜಿಲ್ಲಾ, ಡೈಯಾನೋಸೋರ್ ಸೇರಿದಂತೆ ಚಿತ್ರ ವಿಚಿತ್ರ ಕ್ಯಾರಕ್ಟಗಳನ್ನು ಹೇಗೆ ಸೃಷ್ಟಿಸಲಾಗುತ್ತದೆ,  ಈ ಕ್ಯಾರೆಕ್ಟರ್ಗಳನ್ನು ಇಟ್ಟುಕೊಂಡು ನೈಜವೆಂಬಂತೆ ಹೇಗೆ ಶೂಟಿಂಗ್ ಮಾಡಲಾಗುತ್ತದೆ, ಮನುಷ್ಯನ ಜತೆ ಪ್ರಾಣಿಗಳು ಮಾತನಾಡುವ, ಫೈಟ್ ಮಾಡುವ ಸೀನ್ಗಳನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ಎಂಬ ಪ್ರಾತ್ಯಕ್ಷಿಕೆ ತೋರಿಸಲಾಗುತ್ತದೆ. ನೋಡಲು ಬರುವ ಮಕ್ಕಳನ್ನು ಸ್ಟೇಜ್ ಮೇಲೆ ಕರೆದು ಅಲ್ಲಿನ ಮಾಡಿರೇಟರುಗಳು ತಮಾಷೆ ಮಾಡುತ್ತಾ ಇಲ್ಲವನ್ನೂ ತೋರಿಸುತ್ತಾರೆ. ತಿಳಿಸುತ್ತಾರೆ. ಅಲ್ಲಿದ್ದ ಮನುಷ್ಯನನ್ನು ಸ್ಕೆಲಿಟನ್ ಮಾಡಿ ತೋರಿಸಿ ಮಕ್ಕಳನ್ನು ಬೆಚ್ಚಿಬೀಳುವಂತೆ ಮಾಡುತ್ತಾರೆ. 

ಯೂನಿವರ್ಸಲ್ ಸ್ಟುಡಿಯೋಸ್ನ ಸ್ಟ್ರೀಟ್ ವಾಕ್ನಲ್ಲಿ ಮೈನವಿರೇಳಿಸುವ ಸ್ಕೈ ಡೈವಿಂಗ್ ತರಬೇತಿ ಕೇಂದ್ರವಿದೆ. ನಾವೆಲ್ಲಾ ಭಂಗಿ ಜಂಪ್ ನೋಡಿದ್ದೇವೆ. ಆದರೆ ಭಂಗಿ ಜಂಪ್ನಂಥಲ್ಲ ಸ್ಕೈಡೈವಿಂಗ್. ಅಲ್ಲಿ ಹಗ್ಗ ಕಟ್ಟಿಕೊಂಡು ಎತ್ತರದಿಂದ ಜಿಗಿದರೆ ಇಲ್ಲಿ ಕೆಳಗಿನಿಂದ ನುಗ್ಗುವ ರಭಸದ ಗಾಳಿಗೆ ಮನುಷ್ಯ ಮೇಲಕ್ಕೆ ಹಾರುತ್ತಾನೆ. ಆಕಾಶದಲ್ಲಿ ಹಾರಾಡಿದಾಗ ಮನುಷ್ಯ ಗಾಳಿಯ ಜತೆ ಹೇಗೆ ಸಮತೋಲನ ಕಾಯ್ದುಕೊಳ್ಳಬೇಕು ಎಂಬುದನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ನನ್ನ ಸ್ನೇಹಿತ ಎಡ್ವರ್ಡ ಸ್ಕೈಡೈವಿಂಗ್ ತರಬೇತಿ ಪಡೆದ. ಆತನಿಗೆ ಆ ಕೇಂದ್ರದ ಟ್ರೇನರ್ ತರಬೇತಿ ನೀಡಿದ. ಗಾಳಿಯ ರಭಸ ಹೆಚ್ಚಿರುವಾಗ ಹೇಗೆ ಕೈಕಾಲನ್ನು ಆಗಸದಲ್ಲಿ ಚಾಚಬೇಕು ಎಂಬುದನ್ನು ತೋರಿಸಿಕೊಟ್ಟ. ತಲೆಕೆಳಗೆ ಮಾಡಿ ಬ್ಯಾಲೆನ್ಸ್ ಮಾಡುವುದನ್ನು ಆತ ಹೇಳಿಕೊಟ್ಟ. ನನ್ನ ಬೀಜಿಂಗ್ ಸ್ನೇಹಿತೆ ಸಹ ಇದನ್ನು ಖುಷಿ, ಖುಷಿಯಿಂದ ನೋಡಿದಳು.

ಆಂಕರ್: ಮುಂದಿನ ಭಾಗದಲ್ಲಿ ನೀವು ನೋಡಲಿರುವುದು ವಾಟರ್ ವಡರ್್ನ ಷೋ…..ಈ ಷೋನಲ್ಲಿ ಏನೆಲ್ಲಾ ಸ್ಟಂಟ್ಗಳಿರುತ್ತವೆ ಎಂಬುದನ್ನು ನೀವೆ ನೋಡಿ……ಈಗ ಮತ್ತೊಂದು ಬ್ರೇಕ್.

ಆಂಕರ್: ವಾಟರ್ ವಡರ್್ನಲ್ಲಿ ನಡೆಯುವುದು ಜಲಚರಗಳ ಸ್ಟಂಟ್ ಅಲ್ಲ. ಅಲ್ಲಿ ನಡೆಯುವುದೆಲ್ಲಾ ಮನುಷ್ಯರು ಮಾಡಿ ತೋರಿಸುವ ಸ್ಟಂಟ್ಗಳು. ಹಾಲಿವುಡ್ ಸಿನಿಮಾದಂತೆ ನಡೆಯುತ್ತದೆ ಈ ವಾಟರ್ ವಡರ್್ನ ಸ್ಟಂಟ್ ಷೋ……………..

ವಾಯ್ಸ್ ಓವರ್ 3: ಹಳೆ ತಗಡುಗಳು, ಷೀಟ್ಗಳಿಂದ ನಿಮರ್ಿಸಲಾಗಿರುವ ಮಿನಿ ಸ್ಟೇಡಿಯಂನಲ್ಲಿ ಇನ್ಯಾವ ರೀತಿಯ ಷೋ ನಡೆಯಬಹುದೆಂದು ಉದಾಸೀನತೆ ತಂದುಕೊಳ್ಳುವಷ್ಟರಲ್ಲಿ ವಾಟರ್ ವಡರ್್ನ ಸ್ಟಂಟ್ ಷೋ ಶುರುವಾಗುತ್ತದೆ. ವಾಟರ್ ಸ್ಕೂಟರ್ಗಳು, ಬೋಟ್ಗಳು ಭೋರ್ಗರೆಯುತ್ತವೆ ಅಲ್ಲಿ. ಸ್ಟಂಟ್ ಮಾಸ್ಟರ್ ಒಬ್ಬ ಬಕೆಟ್ನಲ್ಲಿ ನೀರು ತುಂಬಿಕೊಂಡು ಪ್ರೇಕ್ಷಕರತ್ತ ಚಿಮ್ಮುತ್ತಾನೆ………………ಮತ್ತೊಂದು ಹೊಸ ಲೋಕ ಸೃಷ್ಟಿಯಾಗುತ್ತದೆ. ಆ ಷೋನಲ್ಲಿ ನಾಯಕ, ನಾಯಕಿ ಇರುತ್ತಾರೆ. ಇವರಿಬ್ಬರಿಗೆ ತೊಂದರೆ ನೀಡಲು ವಿಲನ್ ಸಹ ಇರುತ್ತಾನೆ. ನಾಯಕ, ಖಳನಾಯಕನ ತಂಡಗಳ ನಡುವೆ ದೊಡ್ಡ ಕಾಳಗವೇ ನಡೆಯುತ್ತದೆ ಅಲ್ಲಿ. ಮೆಷಿನ್ ಗನ್ಗಳು ಭೋರ್ಗರೆಯುತ್ತವೆ. ಪಟಾಕಿಗಳು ಗಗನಕ್ಕೆ ಚಿಮ್ಮುತ್ತವೆ. ಎಲ್ಲಾ ಕಡೆ ಸ್ಟಂಟ್ಗಳ ಪ್ರದರ್ಶನವಾಗುತ್ತದೆ. ಜೋಕರ್ಗಳು ನೀರಿನ ಕೊಳದ ಹೊರಗಡೆ ಜಿಗಿದು ಕುತೂಹಲ ಮೂಡಿಸುತ್ತಾರೆ. ಮರದ ವಿಮಾನವೊಂದು ಎಲ್ಲಿಂದಲೋ ಹಾರಿ ಬಂದು ಕೊಳಕ್ಕೆ ಬೀಳುತ್ತದೆ. ಖಳನಾಯಕನ ವಿರುದ್ಧ ನಾಯಕ ಜಯ ಸಾಧಿಸುವುದರೊಂದಿಗೆ ಈ ಷೋ ಮುಕ್ತಾಯವಾಗುತ್ತದೆ. ಸ್ಟಂಟ್ ಮಾಸ್ಟರ್ಗಳು ಕರತಾಡನಕ್ಕೆ ತಲೆ ಬಾಗುತ್ತಾರೆ.

ಆಂಕರ್: ಸಾರಿ ವೀಕ್ಷಕರೆ ಕಾಲದ ಅಭಾವ. ಈ ವಾರ ನಾವು ತಿಳಿಸಿದಂತೆ ಬೆವಲರ್ಿ ಹಿಲ್ಸ್ನಲ್ಲಿರುವ ಹಾಲಿವುಡ್ ಸ್ಟಾರ್ಗಳ ಐಷಾರಾಮಿ ಭಂಗಲೆಗಳನ್ನು ನಿಮಗೆ ತೋರಿಸಲು ಸಾಧ್ಯವಾಗಿಲ್ಲ ನಮಗೆ. ಮುಂದಿನ ವಾರ ಖಮಡಿತವಾಗಿಯೂ ಬೆವಲರ್ಿ ಹಿಲ್ಸ್ನ ಭಂಗಲೆಗಳ ಜತೆ, ಕೊಡೆಕ್ ಥಿಯೇಟರ್ ಮುಂದಿರುವ ಸ್ಟಾರ್ ಫೇಮ್ ವಾಕ್ ಬಗ್ಗೆಯೂ ನಿಮಗೆ ಮಾಹಿತಿ ನೀಡುತ್ತೇವೆ. ಅದ್ಭುತ ಕಲಾವಿದನೊಬ್ಬನ ಕೈಚಳಕ, ಯೂನಿವರ್ಸಲ್ ಸ್ಟುಡಿಯೋದಲ್ಲಿರುವ ಅನಿಮಲ್ ಆಕ್ಟರ್ಗಲನ್ನು ನಿಮಗೆ ಪರಿಚಯ ಮಾಡಿಕೊಡಲಿದ್ದೇವೆ. ಅಲ್ಲಿಯವರೆಗೂ ಗುಡ್ ಬೈ.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ನವೆಂಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಕ್ಟೋ   ಡಿಸೆ »
  1234567
  891011121314
  15161718192021
  22232425262728
  2930  
 • ವಿಭಾಗಗಳು