ಸೀರೆಯುಟ್ಟು ನಾಡದೇವಿಯಂತೆ ಕಂಗೊಳಿಸಿದ ಪ್ರೊ. ಬ್ರೂಕ್ನರ್ ಹಾಗೂ ವಿವೇಕದ ಜತೆ ಎಂಎನ್ಸಿ, ಶಾರದಾ

Advertisements

ವಿವೇಕದ ಜತೆ ಕಪ್ಪಣ್ಣ, ಇದು ತಪ್ಪಣ್ಣಾ…….ಶ್ರೀನಿವಾಸ ಕಪ್ಪಣ್ಣನ ಮನೆಯಲ್ಲೊಂದು ಮುಸ್ಸಂಜೆ ಕೂಟ….

Dr Hemalatha, Green field, Indianapolis Indian doctor, American kid

America Raitha, machinary

Amarnath Gowda’s masala dosa


ಸ್ಲಗ್: ಅಮರನಾಥಗೌಡ
ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಡೇಟ್; 10/ 18- 03- 09
ಬೆಂಗಳೂರು

ಆಂಕರ್: ಅಮೆರಿಕಾಕ್ಕೊಬ್ಬರೇ ಅಮರನಾಥಗೌಡ ಎನ್ನುತ್ತಾರೆ ಅಮೆರಿಕಾ ಕನ್ನಡಿಗರು. ಇದು ಅಕ್ಷರಃ ನಿಜ. ಏಕೆಂದರೆ ಅಟಾನರ್ಿ ಅಮರನಾಥಗೌಡ ಅವರನ್ನು ಯಾರಾದರೂ ಏನನ್ನಾದರೂ ಕೇಳಿದರೆ, ಇಲ್ಲ, ನನ್ನಿಂದ ಆಗುವುದಿಲ್ಲ ಎಂದು ಅವರ ಬಾಯಿಂದ ಹೊರಬರುವುದೇ ಇಲ್ಲ. ಏನಾದರೂ ಪ್ರಯತ್ನ ಪಡೋಣ, ಅವರಿಗೆ ನೆರವಾಗೋಣ ಎನ್ನುತ್ತದೆ ಅವರ ಮನಸ್ಸು. ಗೌಡರು ಅಮೆರಿಕಾ ಕನ್ನಡ ಕೂಟಗಳ “ಅಕ್ಕ” ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು. ವಲಸೆ ಕಾನೂನಿಗೆ ಸಂಬಂಧಿಸಿದಂತೆ ಅಮೆರಿಕಾದಾದ್ಯಂತ ಸುಪ್ರಸಿದ್ಧರು. ಅಮೆರಿಕಾದ ಯಾವುದೇ ಮೂಲೆಗೆ ಹೋದರೂ ಅವರ ಕಕ್ಷಿದಾರರು, ಸ್ನೇಹಿತರು ನಿಮಗೆ ಸಿಗುತ್ತಾರೆಂದರೆ ಅವರ ಜನಪ್ರಿಯತೆಯನ್ನು ನೀವು ಊಹೆ ಮಾಡಿಕೊಳ್ಳಬಹುದು. ಬನ್ನಿ ಡೆಟ್ರಾಯಿಟ್ನಲ್ಲಿ ನೆಲೆಸಿರುವ ಅಮರನಾಥಗೌಡರನ್ನು ಈಗ ಪರಿಚಯ ಮಾಡಿಕೊಡಲಿದ್ದಾರೆ ಎಂ. ಎನ್. ಚಂದ್ರೇಗೌಡ.
ವಾಯ್ಸ್ ಓವರ್ 1;
ಅಮೆರಿಕಾಕ್ಕೊಬ್ಬರೇ ಅಮರನಾಥಗೌಡ ಎನ್ನುವಷ್ಟು ಹೆಸರು ಮಾಡಿರುವ ಗೌಡರು ಹುಟ್ಟಿ ಬೆಳೆದಿದ್ದು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕುಗ್ರಾಮ ಒಂದರಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದ ಅಮರನಾಥಗೌಡರು, ಕಾಲೇಜಿನಲ್ಲಿ ಬಿ. ಎಲ್. ಶಂಕರ್ ಅವರ ಸಹಪಾಠಿ. ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಎಂ. ರೇವಣ್ಣ ಅವರ ಕಾಲೇಜು ರಾಜಕಾರಣದಲ್ಲಿ ಜತೆಗಿದ್ದವರು. ಆನಂತರ ಇದೇ ವಿವಿಯಲ್ಲಿ ಲಾ ಮಾಡಿದ ನಂತರ ಮುಂದೆ ಅವರ ಭಾವಮೈದುನ ಪ್ರಸಿದ್ಧ ವೈದ್ಯರಾದ ಮುನೇಗೌಡರ ಆಣತಿಯಂತೆ 1980 ರಲ್ಲಿ ಡೆಟ್ರಾಯಿಟ್ಗೆ ಕೆಲಸಕ್ಕಾಗಿ ತೆರಳಿದರು. ಇದೇ ಸಂದರ್ಭದಲ್ಲಿ ಅಲ್ಲಿನ ಮಿಚಿಗನ್ ವಿವಿಯಲ್ಲಿ ವಲಸೆ ಕಾನೂನಿಗೆ ಸಂಬಂಧಿಸಿದ ಮತ್ತೊಂದು ಪದವಿ ಪಡೆದ ಗೌಡರು, ಅಮೆರಿಕಾದಲ್ಲಿ 1988 ರಲ್ಲಿ ವಲಸೆ ಕಾನೂನನ್ನು ಪ್ರಾಕ್ಟೀಸ್ ಮಾಡಲು ಮಾನ್ಯತೆ ಪಡೆದುಕೊಂಡ ಮೊದಲ ಭಾರತೀಯ ಅಟಾನರ್ಿ ಎನಿಸಿಕೊಂಡರು. ಉದ್ಯೋಗಿಗಳಿಗೆ ನೀಡುವ ಹೆಚ್ 1 ಬಿ ವೀಸಾ ಕೊಡಿಸುವಲ್ಲಿ ಎತ್ತಿದ ಕೈ ಎನ್ನಿಸಿಕೊಂಡರು. ಇದರಿಂದ ಅಮೆರಿಕಾಕ್ಕೆ ತೆರಳಲು ಬಯಸಿದ ಲಕ್ಷಾಂತರ ಮಂದಿ ಭಾರತೀಯರಿಗೆ ಚಿರಪರಿಚಿತರಾದರು. ಎಲ್ಲಾ ಅಟಾನರ್ಿಗಳು ಹಣ ಕಟ್ಟಿಸಿಕೊಂಡು ಸೇವೆ ನೀಡಿದರೆ ಅಮರನಾಥಗೌಡರು ಸೇವೆ ನೀಡಿ ಕಕ್ಷಿದಾರರು ತೃಪ್ತರಾದ ನಂತರ ಹಣ ಪಡೆದರು. ಹಣ ನೀಡಲು ಅಶಕ್ತರಾಗಿದ್ದರೆ ಬೇಡ ಎಂದರು. ಅಂತರ ಕಂಪನಿ ವಗರ್ಾವಣೆ ವೀಸಾ ಎಲ್ – 1, ಎಂಪ್ಲಾಯ್ಮೆಂಟ್ ಬೇಸಡ್ ಪರ್ಮನೆಂಟ್ ರೆಸಿಡೆಂಸ್ಸ್ ವೀಸಾ (ಇಬಿ), ಸ್ಟುಡೆಂಟ್ ವೀಸಾ (ಎಫ್- 1), ಎಕ್ಸ್ಚೇಂಜ್ ವಿಸಿಟರ್ ವೀಸಾ (ಜೆ-1) ಹೀಗೆ ನಾನಾ ವಿಭಾಗಗಳಲ್ಲಿ ವೀಸಾವನ್ನು ಕೊಡಿಸುವಲ್ಲಿ ಅಮರನಾಥಗೌಡರು ಯಶಸ್ವಿ ಅಟಾನರ್ಿಯಾಗಿದ್ದರು. ಗೌಡರ ಸುದೀರ್ಘ 25 ವರ್ಷಗಳ ತಮ್ಮ ವೃತಿ ಬದುಕಿನುದ್ದಕ್ಕೂ ಯಾವುದೇ ಕಕ್ಷಿದಾರರಿಗೆ ನಿರಾಸೆ ಉಂಟುಮಾಡಿಲ್ಲ. ಯಾವುದೇ ಕಕ್ಷಿದಾರರು ಅವರ ಸೇವೆ ಬಗ್ಗೆ ನಿರಾಸೆ ವ್ಯಕ್ತಪಡಿಸಿಲ್ಲ. ಹಣ ಪಡೆಯದೆಯೂ ಗೌಡರು ನೂರಾರು ಮಂದಿ ಕನ್ನಡಿಗರಿಗೆ ಅವರ ಕೆಲಸ ಮಾಡಿಕೊಟ್ಟಿದ್ದಾರಂತೆ. ಅಮರನಾಥಗೌಡರೇನಾದರೂ ಬೆಂಗಳೂರಿನಲ್ಲಿ ಇದುವರೆಗೆ ಲಾ ಪ್ರಾಕ್ಟೀಸ್ ಮಾಡಿದ್ದರೆ ಯಾವತ್ತೋ ಇಲ್ಲಿ ಹೈಕೋಟರ್್ನ, ದಿಲ್ಲಿಯ ಸುಪ್ರೀಂಕೋಟರ್್ನ ನ್ಯಾಯಾಧೀಶ ರಾಗಿರುತ್ತಿದ್ದರೇನೋ…..

ಬೈಟ್: ಜೆಫ್ ವೈಸ್ಬಗರ್್, ಡೆಟ್ರಾಯಿಟ್ನ ಖ್ಯಾತ ವಕೀಲ
ಟಿಸಿಆರ್:

ನ್ಯೂಜಸರ್ಿಯಿಂದ ಹಿಡಿದು, ಉತ್ತರದ ಹ್ಯೂಸ್ಟನ್, ಪಶ್ವಿಮದ ಸ್ಯಾನ್ ಫ್ರಾನ್ಸಿಸ್ಕೋದವರೆಗೆ ಯಾವುದೇ ಕನ್ನಡಿಗನನ್ನು ಕೇಳಿದರೂ ಅಮರನಾಥಗೌಡರ ಬಗ್ಗೆ ಒಳ್ಳೆಯದನ್ನೇ ಹೇಳುತ್ತಾರೆ. ಮನೆ ಬಿಟ್ಟು ಬದುಕು ಕಟ್ಟಿಕೊಳ್ಳಲು ಸಾವಿರಾರು ಕಿಲೋಮೀಟರ್ ದೂರ ಹೋಗಿರುವ ಪ್ರತಿಯೊಬ್ಬ ಕನ್ನಡಿಗನಿಗೆ ಅಮರನಾಥಗೌಡರೇ ಪ್ರಥಮದಲ್ಲಿ ಒಂದು ರೀತಿಯ ಆಸರೆಯ ಅಕ್ಷಯ ಪಾತ್ರೆ. ಯಾವುದೇ ಸಲಹೆ,  ಸೂಚನೆ, ಸಹಾಯವನ್ನು ಗೌಡರಿಂದ ಯಾಚಿಸಿದರೆ ಅವರಿಂದ ಇಲ್ಲ ಎನ್ನುವ ಪದಗಳು ಹೊರಬೀಳುವುದೇ ಇಲ್ಲ. ಎಲ್ಲದಕ್ಕೂ ನಾನು ಸಹಾಯ ಮಾಡುತ್ತೇನೆ, ನಾನು ಕೊಡಿಸುತ್ತೇನೆ, ನಾನು ನೆರವು ದೊರಕಿಸಿಕೊಡುತ್ತೇನೆ…………..ಹೀಗೆ ಬರೀ ಅನ್ನುವುದಿಲ್ಲ ಹೇಳಿದ ಹಾಗೆ ಮಾಡಿಕೊಡುತ್ತಾರೆ. ಇಂಥಹ ನಡವಳಿಕೆ ಪ್ರದಶರ್ಿಸಿ ಬೆಳೆದ ಅಮರನಾಥಗೌಡರ ವ್ಯಕ್ತಿತ್ವ ಸಾವಿರಾರು ಕಿಲೋಮೀಟರ್ ದೂರ ಹೋಗಿ ನೆಲೆಸಿರುವ ಲಕ್ಷಾಂತರ ಕನ್ನಡಿಗರನ್ನು ಒಗ್ಗೂಡಿಸಲು ಸಾಧ್ಯವಾಗಿದೆ. ಗೌಡರ ಒಂದು ಪೋನ್ ಕರೆ ಐದೇ ನಿಮಿಷದಲ್ಲಿ ಅಮೆರಿಕಾದಾದ್ಯಂತ ಪ್ರತಿಧ್ವನಿಸಬಲ್ಲದು ಏಕೆಂದರೆ ಅಷ್ಟೊಂದು ಅದ್ಭುತವಾಗಿದೆ ಅವರ ಸಂಪರ್ಕ ಜಾಲ. ಸಿಯಾಟಿಲ್ನ ಯಾವುದೋ ಒಂದು ಹಳ್ಳಿಯಿಂದ ಕೆನಡಾದ ಟೊರೊಂಟೋವರೆಗೂ, ಕೊಲಂಬಿಯಾದ ಪ್ರಮುಖ ನಗರಗಳಲ್ಲೂ ಅವರ ಸ್ನೇಹಿತರು, ಕಕ್ಷಿದಾರರು ಇದ್ದಾರೆ. ಕಕ್ಷಿದಾರ ಜತೆ ಗೌಡರು ಕೇವಲ ವ್ಯವಹಾರಿಕ ಸಂಬಂಧವಷ್ಟೇ ಇಟ್ಟುಕೊಂಡಿರುವುದಿಲ್ಲ. ಅವರು ಎಲ್ಲರ ಜತೆ ಒಂದು ಮರೆಯಲಾರದ ಬಾಂಧವ್ಯ ಇಟ್ಟುಕೊಂಡಿರುತ್ತಾರೆ. ಗೌಡರ ಒಂದು ಕರೆ ಕೆಲವು ಗಂಟೆಗಳಲ್ಲಿ ಸಾವಿರ ಮಂದಿ ಕನ್ನಡಿಗ ಯುವಕರ ಪಡೆಯನ್ನು ಒಂದು ಜಾಗದಲ್ಲಿ ಕಲೆ ಹಾಕುವಷ್ಟು ಶಕ್ತವಾಗಿರುತ್ತದೆ. ಗೌಡರ ನಡೆ ನುಡಿಯಲ್ಲಿ ಯಾವುದೇ ಕೃತಕತೆ ಇರುವುದಿಲ್ಲ. ಸದಾ ಸಕಾರಾತ್ಮಕವಾಗಿ ಚಿಂತಿಸುವ ಯೋಚಿಸುವ ಅವರು, ಭಾರತ ಹಾಗೂ ಅಮೆರಿಕಾದಾದ್ಯಂತ ಲಕ್ಷಾಂತರ ಮಂದಿ ಸ್ನೇಹಿತರನ್ನು ಸಂಪಾದಿಸಿದ್ದಾರೆ. ಆದ್ದರಿಂದಲೇ ಗೌಡರು ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ “ಅಕ್ಕ” ವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಾಗಿದೆ. ಇವತ್ತು ಅಮೆರಿಕಾದ ನೆಲೆದಲ್ಲಿ ಕನ್ನಡದ ಮೆರವಣಿಗೆ ನಡೆಯಲು, ಕನ್ನಡ ಉಳಿಯಲು, ಕನ್ನಡಿಗರು ಒಗ್ಗಟ್ಟಾಗಲು ಗೌಡರ ಕಾಣಿಕೆಯೇ ಅಪಾರ. ಕನ್ನಡಿಗರೆಲ್ಲರೂ ಪ್ರತಿ ಎರಡು ವರ್ಷಕ್ಕೊಮ್ಮೆ ಒಂದೆಡೆ ಸೇರಲು, ಕನ್ನಡಿಗರೂ ಅಮೆರಿಕಾದಲ್ಲಿದ್ದಾರೆಂದು ನಾವೆಲ್ಲ ಅಲ್ಲಿಗೆ ಹೋಗಲು ಗೌಡರು ಪಟ್ಟ ಪರಿಶ್ರಮವೇ ಕಾರಣ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಅಮರನಾಥಗೌಡರೊಬ್ಬ ಅಂಥಹ ಅದ್ಭುತ ಸಂಘಟಕ. ಅವರ ಸಂಘಟನಾ ಶಕ್ತಿ ಅಪಾರ. ಕನರ್ಾಟಕದಲ್ಲಿ ಕನ್ನಡಿಗರನ್ನು ಒಗ್ಗೂಡಿಸಲು ನಮಗೇ ಕಷ್ಟವಾಗಿರುವ ಕನರ್ಾಟಕಕ್ಕಿಂತ ನೂರು ಪಟ್ಟು ದೊಡ್ಡದಾಗಿರುವ ಅಮೆರಿಕಾದಲ್ಲಿ ಕನ್ನಡಿಗರನ್ನು ಒಗ್ಗೂಡಿಸಿ, ಕನ್ನಡ ಉಳಿವಿಗೆ ಶ್ರಮಿಸುತ್ತಿರುವ ಗೌಡರ ಬಗ್ಗೆ ಹೆಮ್ಮೆ ಎನಿಸುತ್ತದೆ.

ಅಮೆರಿಕಾದ ಮಿಚಿಗನ್ ರಾಜ್ಯದ ಡೆಟ್ರಾಯಿಟ್ನಲ್ಲಿದೆ ಅಮರನಾಥ ಗೌಡರ ಮನೆ. ಅಮೆರಿಕಾದ ಮೂರನೇ ಅತ್ಯಂತ ದುಬಾರಿ ಬೆಲೆ ಬಾಳುವ ಪ್ರದೇಶ ಇದು. ಜನರಲ್ ಮೋಟರ್ಸ್ ಕಂಪನಿ ಸೇರಿದಂತೆ ಪ್ರಪಂಚದ ಎಲ್ಲ ಅತ್ಯಂತ ದುಬಾರಿ ಕಾರು ತಯಾರಿಕಾ ಕಂಪನಿಗಳೆಲ್ಲಾ ಇಲ್ಲಿ ನೆಲೆಯೂರಿವೆ. ನಾನು ಸಹ ಜನರಲ್ ಮೋಟರ್ಸ್ ಸಂಸ್ಥೆಗೆ ಭೇಟಿ ನೀಡಿದ್ದೆ. ಆದರೆ ಅಲ್ಲಿ ಶೂಟ್ ಮಾಡಲು ಅವಕಾಶ ಇರಲಿಲ್ಲ. ಆದ್ದರಿಂದ ಆ ಕಂಪನಿಯನ್ನು ಪರಿಚಯ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ ನಿಮಗೆ. ಜನರಲ್ ಮೋಟರ್ಸ್ ಕಂಪನಿಯಲ್ಲೇ 5 ನೇ ಅಕ್ಕ ಸಮ್ಮೇಳನದ ಅಧ್ಯಕ್ಷ ರಮೇಶ್ಗೌಡ ಕೆಲಸ ಮಾಡುವುದು. ಈ ಕಂಪನಿಯ ಮುಂದೆ ನಿಂತರೆ ನೀವು ಕೆಲವೇ ನಿಮಿಷಗಳಲ್ಲಿ ನೂರಾರು ಬಗೆಯ ಕಾರುಗಳನ್ನು, ನೂರಾರು ಕಂಪನಿಗಳ ಕಾರುಗಳನ್ನು ನೋಡಬಹುದು. ಹಾಗೆಯೇ ಇಲ್ಲಿನ ಜಿಎಂ ಟವರ್ಗೆ ಹೋದರೂ ಕ್ಷಣಕ್ಕೊಮ್ಮೆ ಭಾರತೀಯರನ್ನು ಎದುರುಗೊಳ್ಳಬಹುದು. ಇದೇ ಸಿಟಿಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಮೆರಿಕಾ ಅಮೆರಿಕಾ ಸಿನಿಮಾದ ಕಾರ್ ಕಾರ್ ಹಾಡಿನ ಶೂಟ್ ನಡೆದಿದ್ದು. ಏಕೆಂದರೆ ಎಲ್ಲಿ ನೋಡಿದರೂ ಬರೀ ಕಾರುಗಳೇ. ಒಂದೊಂದು ಮನೆಯಲ್ಲಿ ಎಂಟು ಹತ್ತು ಕಾರುಗಳು……..ಹಾಗಿದೆ ಡೆಟ್ರಾಯಿಟ್ ಸಿಟಿ………………
 
ನಾನು ಇಂಡಿಯಾನ ಪೊಲೀಸ್ನಿಂದ ಡೆಟ್ರಾಯಿಟ್ಗೆ ಪ್ರಮಾಣ ಬೆಳೆಸಿದಾಗ ನನ್ನನ್ನು ಕರೆದೊಯ್ಯಲು ಬಸ್ ಸ್ಟೇಷನ್ಗೆ ಬರುವವರಿದ್ದರು ಅಮರನಾಥಗೌಡರು. ಆದರೆ ಕೆಲಸದ ಒತ್ತಡದ ಕಾರಣ ತುಮಕೂರು ದಯಾನಂದ್ ನನ್ನನ್ನು ಕರೆದೊಯ್ಯಲು ಬಂದಿದ್ದರು. ಅವರೊಂದಿಗೆ ಅಷ್ಟರಲ್ಲಾಗಲೇ ಅಕ್ಕ ಸಮ್ಮೇಳನ ಮುಗಿಸಿಕೊಂಡು ಅಮರನಾಥಗೌಡರ ಮನೆಗೆ ಬಂದಿದ್ದ ಬೆಂಗಳೂರಿನ ರಾಘವೇಂದ್ರ ರಾಜು, ಕೃಷ್ಣಾನಂದ್ ಇದ್ದರು. ದಯಾನಂದ್ ಜನರಲ್ ಮೋಟರ್ಸ್ ಕಂಪನಿಯಲ್ಲಿ ಕೆಲಸ ಮಾಡುವುದರಿಂದ ನಮ್ಮನ್ನು ಜನರಲ್ ಮೋಟರ್ಸ್ ಸಂಸ್ಥೆಗೆ ಕರೆದೊಯ್ದರು. ಆದರೆ ಅಂದು ರಜಾ ದಿನವಾದ್ದರಿಂದ ಒಳಗೆ ಹೋಗಲು ಅವಕಾಶ ಸಿಗಲಿಲ್ಲ. ಆನಂತರ ಕಂಪನಿಯ ಆವರಣದಲ್ಲಿ ಒಂದು ರೌಂಡ್ ಹಾಕಿ ಆನಂತರ ಅಮರನಾಥಗೌಡರ ಮನೆ ತಲುಪಿದೆವು.
ಅಮರನಾಥಗೌಡರ ಮನೆಯಲ್ಲಿ ಭೇಟಿಯಾದರು ಅವರ ಪತ್ನಿ ಸಾವಿತ್ರಿ. ಅಮರನಾಥಗೌಡರಿಗಿಂತಲೂ ಸಾವಿತ್ರಿ ಅವರಿಗೆ ಸಂಯಮ ಹೆಚ್ಚು. ಗುಣದಲ್ಲಿ ಅವರು ಗೌಡರನ್ನು ಹಿಂದಕ್ಕೆ ಹಾಕುತ್ತಾರೆ.
ಪ್ರತಿ ದಿನ ಗೌಡರ ಮನೆಗೆ ಒಬ್ಬರಲ್ಲ ಒಬ್ಬರು ಅತಿಥಿಗಳು ಬಂದಿರುತ್ತಾರೆ. ಒಂದಿಷ್ಟು ಬೇಜಾರು ಮಾಡಿಕೊಳ್ಳದೇ, ಸಿಡುಕದೇ ಅವರೆಲ್ಲರಿಗೂ ಊಟ ಉಪಚಾರ ನೋಡಿಕೊಳ್ಳುತ್ತಾರೆ ಸಾವಿತ್ರಿಯವರು. ಬೆಳೆದ ಹೆಣ್ಣು ಮಕ್ಕಳಿಗೆ ಅವರ ಕಾಲೇಜುಗಳಿಗೆ ಹೋಗಿ ಊಟ ತಿಂಡಿ ಕೊಟ್ಟು ಬರುತ್ತಾರೆ. ಆನಂತರ ಗೌಡರ ಕಚೇರಿಯಲ್ಲಿ ಕುಳಿತು ಕಚೇರಿ ವ್ಯವಹಾರ ನೋಡಿಕೊಳ್ಳುತ್ತಾರೆ. ಗೌಡರ ಬಗ್ಗೆ ಮಾತನಾಡಲು ನಾಚಿಕೆಪಡುತ್ತಾರೆ. ಅಪ್ಪಟ ಗೌಡರ ಹೆಣ್ಣುಮಕ್ಕಳ ವ್ಯಕ್ತಿತ್ವ ಅವರದು.

ಬೈಟ್: ಸಾವಿತ್ರಿ, ಅಮರನಾಥಗೌಡರ ಪತ್ನಿ
ಟಿಸಿಆರ್:

ಬೈಟ್: ಅಮರನಾಥಗೌಡರು, “ಅಕ್ಕ” ಅಧ್ಯಕ್ಷರು
ಟಿಸಿಆರ್:

ಆಂಕರ್: ಡೆಟ್ರಾಯಿಟ್ನಲ್ಲಿರುವ ಪ್ರತಿಯೊಬ್ಬರ ಮನೆಯಲ್ಲಿ ಬಾರ್ಗಳಿವೆ. ಆ ಬಾರ್ಗಳಲ್ಲಿ ಚಿತ್ರ ವಿಚಿತ್ರ ಮದ್ಯದ ಬಾಟಲಿಗಳು, ತರಾವರಿ ವಿಧಧ ಮದ್ಯದ ಬಾಟಲಿಗಳಿರುತ್ತವೆ ಅಲ್ಲಿ. ರಜಾ ದಿನಗಳಲ್ಲಿ, ವೀಕ್ ಎಂಡ್ನಲ್ಲಿ ಯಾರಾದರೊಬ್ಬರ ಮನೆಯಲ್ಲಿ ಪಾಟರ್ಿ ಮಾಡುವುದು ಇಲ್ಲಿನ ಜನರ ಅಭ್ಯಾಸ. ಅಮರನಾಥಗೌಡರ ಮನೆಯಲ್ಲಿ ವೀಕ್ ಎಂಡ್ ಬಂತೆಂದರೆ ಕನಿಷ್ಠ ಹದಿನೈದರಿಂದ ಇಪ್ಪತ್ತೈದು ಮಂದಿ ಸೇರುತ್ತಾರಂತೆ. ಹೆಚ್ಚಿನ ಮಂದಿ ಬೆಂಗಳೂರಿನಿಂದ ಬಂದವರು ಅಲ್ಲಿರುತ್ತಾರೆ. ಅಮರನಾಥಗೌಡರು ಯಾರೇ ಬೆಂಗಳೂರಿನಿಂದ ಬಂದರೂ ತಮ್ಮ ಬಿಡುವಿಲ್ಲದ ಕೆಲಸದ ವೇಳೆ ಅವರನ್ನು ವಿಮಾನನಿಲ್ದಾಣಕ್ಕೆ ಡ್ರಾಪ್ ಮಾಡಲು ಕರೆದೊಯ್ಯುತ್ತಾರೆ. ಯಾರೇ ಬೆಂಗಳೂರಿನಿಂದ ಡೆಟ್ರಾಯಿಟ್ಗೆ ಬಂದರೂ ಅವರನ್ನು ಪಿಕ್ ಮಾಡಲು ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ. ಅವರ ನಡವಳಿಕೆಯೇ ಹಾಗೆ. ಸದಾ ಪರೋಪಕಾರ ಮಾಡಲು ತುಡಿಯುತ್ತಿರುತ್ತಾರೆ. ಬನ್ನಿ ಈಗ ಒಂದು ಬ್ರೇಕ್ ತೆಗೆದುಕೊಳ್ಳೋಣ. ಮುಂದಿನ ಭಾಗದಲ್ಲಿ ಅಮೆರಿಕಾದಲ್ಲಿ ಮಸಾಲದೋಸೆ ಬೇಯುವುದನ್ನು ನೋಡೋಣ.
ಆಂಕರ್: ಅಮರನಾಥಗೌಡರು ಸದಾ ಬ್ಯುಸಿಯಗಿದ್ದರೂ ಸ್ನೇಹಿತರೆಂದರೆ ಹೇಗಾದರೂ ಮಾಡಿ ಬಿಡುವು ಮಾಡಿಕೊಳ್ಳುತ್ತಾರೆ. ಬೆಂಗಳೂರಿನಿಂದ ಯಾರಾದರೂ ಬಂದರೆ ಅವರನ್ನು ಡೆಟ್ರಾಯಿಟ್ನ ತುಂಬೆಲ್ಲಾ ಓಡಾಡಿಸದೇ ಕಳುಹಿಸುವುದಿಲ್ಲ ಗೌಡರು. ಜತೆಗೆ ವಿಶ್ವ ಒಕ್ಕಲಿಗರ ಪರಿಷತ್ನ ಕಾರ್ಯ ಚಟುವಟಿಕೆಗಳ ಬಗ್ಗೆಯೂ ಗೌಡರು ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಈ ಬಾರಿ ಹ್ಯೂಸ್ಟನ್ನಲ್ಲಿ ಜುಲೈನಲ್ಲಿ ನಡೆಯಲಿರುವ ವಿಶ್ವ ಒಕ್ಕಲಿಗರ ಸಮ್ಮೇಳನದ ಪೂರ್ವ ಸಿದ್ಧತೆ ಬಗ್ಗೆ ಖ್ಯಾತ ವೈದ್ಯ ವಿಶ್ವಾಮಿತ್ರ ಅವರೊಂದಿಗೆ ಜತೆಗೆ ಯಮುನಾ ಶ್ರೀನಿಧಿ ಜತೆ ಸರಿಹೊತ್ತಿನವರೆಗೂ ಅಮರನಾಥಗೌಡರು ಚಚರ್ಿಸುತ್ತಾರೆ. ಅಷ್ಟೊಂದು ಮುತುವಜರ್ಿಯನ್ನು ಯಾವುದೇ ಕಾರ್ಯಕ್ರಮವಾಗಲಿ, ಸಭೆಗಳಾಗಲಿ ಗೌಡರು ತೋರಿಸುತ್ತಾರೆ.   

ವಾಯ್ಸ್ ಓವರ್ 2:

ಅಮರನಾಥಗೌಡರು ಬಿಡುವಾದಾಗ ಅವರೇ ಅಡುಗೆ ಮಾಡುತ್ತಾರೆ. ಪತ್ನಿ ಸಾವಿತ್ರಿ ಅವರನ್ನು ಕುಳಿತುಕೊಳ್ಳಲು ತಿಳಿಸಿ ಮಸಾಲೆ ದೋಸೆ ಹಾಕುತ್ತಾರೆ. ಅಮರನಾಥಗೌಡರ ಮನೆಗೆ ಬಂದಿದ್ದ ಬೆಂಗಳೂರಿನ ರಾಘವೇಂದ್ರರಾಜು ಮಸಾಲ ದೋಸೆ ತಿಂದ ನಂತರ ಸಾವಿತ್ರಿ ಅವರಿಗಿಂತ ಅಮರನಾಥಗೌಡರೇ ಒಳ್ಳೆಯ ಮಸಾಲದೋಸೆ ಮಾಡುತ್ತಾರೆಂದು ಛೇಡಿಸಿದ್ದರು. ರಾಜು ಅವರ ಮಾತಿನಿಂದ ಕೋಪಗೊಂಡಿದ್ದ ಸಾವಿತ್ರಿ ಅವರು, ರಾಜು ಅವರು ಮತ್ತೊಮ್ಮೆ ಕಾಫಿ ಕೇಳಿದಾಗ ನಾನು ಚೆನ್ನಾಗಿ ಮಾಡುವುದಿಲ್ಲ ಗೌಡರನ್ನೇ ಕೇಳಿ ಮಾಡಿಸಿಕೊಂಡು ಕುಡಿಯಿರಿ ಎಂದು ಚುಡಾಯಿಸಿದ್ದರು. ಆಗ ಕೃಷ್ಣಾನಂದ್ ಮಧ್ಯಪ್ರವೇಶಿಸಿ ರಾಜಿ ಮಾಡಿಸಿದ್ದರು. ಬನ್ನಿ ಈಗ ಗೌಡರು ಹೇಗೆ ಮಸಾಲೆದೋಸೆ ಹೇಗೆ ಮಾಡುತ್ತಾರೆ ಎಂಬುದನ್ನು ನೋಡೋಣ……

ವಾಯ್ಸ್ ಓವರ್ 2:

ಫ್ಲೋ…………………
ಅಮರನಾಥಗೌಡರು ಮಸಾಲೆ ದೋಸೆ ಹಾಕುವುದನ್ನು ಕಂಡಾಗ ಛೇ ನಮ್ಮ ಮನೆಯಲ್ಲಿ ಅಂಥಹ ಓವೆನ್ ಸೌಲಭ್ಯ ಇದ್ದಿದ್ದರೆ ನಾನು ಸಹ ಮಸಾಲ ದೋಸೆ ಹಾಕಬಹುದಿತ್ತು. ಎಲ್ಲರನ್ನು ಖುಷಿಪಡಿಸಬಹುದಿತ್ತಲ್ಲಾ ಎಂದೆನಿಸುತ್ತದೆ. ಅಡುಗೆ ಮನೆಯ ಮಧ್ಯದಲ್ಲಿ, ಮೂರು ಅಡಿ ಎತ್ತರದಲ್ಲಿ ಎಲ್ಲರ ಮನೆಯಲ್ಲಿ ಓವನ್ ಇದ್ದಿದ್ದರೆ ಅವರವರ ಪತ್ನಿಯರುಗಳಿಗೆ ಕೆಲಸವೇ ಇರುತ್ತಿರಲಿಲ್ಲವೇನೋ ಎನಿಸುತ್ತದೆ. ನಮ್ಮಲ್ಲಿ ಆ ರೀತಿ ವಿಶಾಲವಾದ ಕಿಚನ್ಗಳನ್ನು ನಿಮರ್ಿಸುವುದಿಲ್ಲ.  ಆದ್ದರಿಂದ ನಮ್ಮಲ್ಲಿ ಗಂಡಸರು ಅಡುಗೆ ಮನೆಯತ್ತ ತಿರುಗಿ ನೋಡುವುದೂ ಇಲ್ಲ ಎಂದು ಕೊಂಡು ಸುಮ್ಮನಾದೆ.
ಅಮರನಾಥಗೌಡರು ನನ್ನನ್ನು ಅವರ ಭಾವಮೈದುನ ಮುನೇಗೌಡರ ಮನೆಗೆ ಕರೆದುಕೊಂಡು ಹೋಗಿದ್ದರು. ಅದೊಂದು ಅದ್ಭುತವಾದ ಸ್ಥಳ. ಮಧ್ಯದಲ್ಲಿ ಕೊಳ. ಕೊಳದ ಸುತ್ತೆಲ್ಲಾ ಭಂಗಲೆಗಳು. ಅಂಥಹ ಭರ್ಜರಿ ಭಂಗಲೆಗಳಲ್ಲಿ ಮುನೇಗೌಡರದೂ ಒಂದು. ಕೊಳದಲ್ಲಿಯೇ ಕಟ್ಟಿದಂತಿಗೆ ಆ ಭಂಗಲೆ. ಕೊಳಕ್ಕೆ ಮುಖಮಾಡಿದ ಗಾಜಿನ ವರಾಂಡದಲ್ಲಿ ಒಂದು ವಿಶಾಲವಾದ ಹಾಲ್. ಅಲ್ಲೊಂದು ಮೂಲೆಯಲ್ಲಿ ಬಾರ್…..ಇತ್ತು ಆ ಭಂಗಲೆಯಲ್ಲಿ. ಆ ಭಂಗಲೆಯ ಗೋಡೆಗಳ ಮೇಲೆ ಮುನೇಗೌಡರ ಪತ್ನಿ ಶಾರದ ರಚಿಸಿರುವ ಅದ್ಭುತವಾದ ಕಲಾಕೃತಿಗಳಿದ್ದವು. ಮನೆಯ ಬೇಸ್ಮೆಂಟ್ನಲ್ಲೊಂದು ಈಜು ಕೊಳ. ಮನೆಗೆ ಹೊಂದಿಕೊಂಡಂತೆ ನಿಮರ್ಿಸಲಾಗಿದ್ದ ಬಾಜರ್್ಗೆ ಆತುಕೊಂಡು ನಿಂತಿಗೆ ಒಂದು 10 ಸೀಟರ್ ಬೋಟ್…………..ವಾ ಏನಿಸಿತು ನನಗೆ. ಕನರ್ಾಟಕದ ಕುಗ್ರಾಮವೊಂದರಲ್ಲಿ ಹುಟ್ಡಿ ಬೆಳೆದು ಅಮೆರಿಕಾಕ್ಕೆ ಕೆಲಸ ಅರಸಿ ಹೋದ ವ್ಯಕ್ತಿಯೊಬ್ಬ ಇಷ್ಟೊಂದು ಭರ್ಜರಿಯಾಗಿ ಬದುಕು ಕಟ್ಟಿಕೊಂಡಿದ್ದಾರಲ್ಲ ಎಂದು ಮುನೇಗೌಡರ ಬಗ್ಗೆ ಮನದಲ್ಲಿ ಅಭಿಮಾನ ಮೂಡಿತು. ಸುಮಾರು 39 ವರ್ಷಗಳ ಹಿಂದೆ ಹೀಗೆ ಸೊಗಸಾಗಿ ಬದುಕಬೇಕೆಂದು ಮುನೇಗೌಡರಂಥವರು ಇಂಥಹ ತಣ್ಣನೆಯ, ಕಣ್ಣು ಕುಕ್ಕುವ ಭಂಗಲೆ ನಿಮರ್ಿಸಿಕೊಂಡಿದ್ದರಲ್ಲ ಭೇಷ್ ಎಂದು ಮನಸ್ಸು ಖುಷಿಪಟ್ಟಿತು. ಅಮರನಾಥಗೌಡರು ಮುನೇಗೌಡರ ಮಗನನ್ನು ಕರೆದು ಕೊಳದಲ್ಲಿರುವ ಬೋಟ್ ಹೊರತೆಗೆದು ರೌಂಡ್ ಹೋಗಲು ಸಿದ್ಧಪಡಿಸುವಂತೆ ತಿಳಿಸಿದರು. ರಾಘವೇಂದ್ರ ರಾಜು, ಕೃಷ್ಣಾನಂದ್ ಅಷ್ಟರಲ್ಲಾಗಲೇ ಮುನೇಗೌಡರ ಮನೆಯಲ್ಲಿದ್ದ ವಿದೇಶಿ ಸ್ಕಾಚನ್ನು ಹೊಟ್ಟೆಗೆ ಸ್ವಲ್ಪ ಸುಡುವಷ್ಟು ಸುರಿದುಕೊಂಡಿದ್ದರು. ಆನಂತರ ಶುರುವಾಯಿತು ನಮ್ಮ ಕೊಳದ ಸುತ್ತೆಲ್ಲಾ ಜಾಲಿ ರೈಡ್.
ಕೊಳದ ಸುತ್ತ ಮನೆ ಕಟ್ಟಿಕೊಂಡಿರುವವರೆಲ್ಲಾ ಹೀಗೆಯೇ ಬೇಜಾರಾದಾಗ ಬೋಟ್ ರೈಡ್ ಮಾಡುತ್ತಾರಂತೆ. ಜತೆಯಲ್ಲಿ ಸ್ಕಾಚ್ ಇದ್ದೇ ಇರುತ್ತದೆ. ಆ ಬೋಟ್ಗಳಲ್ಲಿ ಗುಂಡು ಇಟ್ಟುಕೊಳ್ಳಲು ಅಲ್ಲಲ್ಲಿ ಗುಳಿಗಳನ್ನು ನಿಮರ್ಿಸಿ ಜಾಗಮಾಡಲಾಗಿರುತ್ತದೆ. ಅಲ್ಲಿದ್ದ ಪ್ರತಿಯೊಂದು ವಿಶಾಲವಾದ ಭಂಗಲೆಗಳ ಹಿಂಬಂದಿಯಲ್ಲಿ ಒಂದೊಂದು ಸ್ಪೀಡ್ ಬೋಟ್ಗಳಿದ್ದವು. ಇಡೀ ಕೊಳದಲ್ಲಿ ಒಂದು ಸಣ್ಣ ಪೇಪರ್ ಪೀಸ್ ಸಹ ಬಿದ್ದಿರಲಿಲ್ಲ ಅಲ್ಲಿ. ಅಲ್ಲಿನ ನಿವಾಸಿಗಳು ಅಷ್ಟೊಂದು ಕೇರ್ ತೆಗೆದುಕೊಂಡಿದ್ದರು.

ಅಲ್ಲಿಂದ ಬಂದ ನಂತರ 5 ನೇ ಅಕ್ಕ ಸಮ್ಮೇಳನ ಅಧ್ಯಕ್ಷರಾಗಿದ್ದ ರಮೇಶ್ ಗೌಡರ ಮನೆಯಲ್ಲಿ ಆಯೋಜಿಸಿದ್ದ ಗುಂಡಿನ ಪಾಟರ್ಿಗೆ ಹೋಗಿದ್ದೆವು ನಾವುಗಳು. ಇನ್ನೂ ಮದುವೆಯಾಗದ ರಮೇಶ್ ಗೌಡರೂ ಭರ್ಜರಿ ಮನೆ ನಿಮರ್ಿಸಿಕೊಂಡಿದ್ದರು. ಬೇಸ್ಮೆಂಟ್ನಲ್ಲಿದ್ದ ಬಾರ್, ಅಲ್ಲಿದ್ದ ಚಿತ್ರ ವಿಚಿತ್ರಾಕೃತಿಯ ವಿಸ್ಕಿ ಬಾಟಲ್ಗಳು ನನಗೆ ಕುತೂಹಲ ಮೂಡಿಸಿದ್ದವು. ರಮೇಶ್ಗೌಡರ ಮ್ಯಾರಥಾನ್ ಓಟದ ಪೋಟೋ ಅಲ್ಲಿತ್ತು. ಮಧ್ಯರಾತ್ರಿವರೆಗೂ ಡೆಟ್ರಾಯಿಟ್ನ ಸ್ನೇಹಿತರೆಲ್ಲೆರ ಜತೆ ಹರಟಿದೆ. ಕಾಂಗ್ರೆಸ್ ಕಾಯರ್ಾಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ನೇಹಿತ ದಯಾ ಅಡಪ, ಮಾಜಿ ಅಡ್ವೋಕೇಟ್ ಜನರಲ್ ಆಚಾರ್ಯ ಅವರ ಪುತ್ರ ಎಲ್ಲರೂ ಅಲ್ಲಿದ್ದರು. ಆನಂತರ ಬಂದು ಆ ರಾತ್ರಿ ಅಮರನಾಥ ಗೌಡರ ಮನೆಯಲ್ಲಿ ಮಲಗಿದೆ ನಾನು. ಗೌಡರ ಮನೆಯ ಒಳಾಂಗಣವೂ ಅಷ್ಟೇ ಅದ್ಭುತವಾಗಿದೆ. ಅವರ ಮನೆಯ ಗ್ಯಾರೇಜ್ ಡೋರ್ನ್ನು ರಿಮೋಟ್ ಕಂಟ್ರೋಲ್ ಬಳಸಿ ಎತ್ತಬಹುದಾಗಿದೆ ಇಳಿಸಬಹುದಾಗಿದೆ. 

ಮಾರನೇ ದಿನ ಡೆಟ್ರಾಯಿಟ್ ನಗರಕ್ಕೆ ಹೊಂದಿಕೊಂಡಿರುವ ಕೆನಡಾ ದೇಶಕ್ಕೆ ಹೋಗಲು ಮನಸ್ಸು ಮಾಡಿದೆ. ಕೆನಡಾ ಹಾಗೂ ಅಮೆರಿಕಾ ದೇಶಗಳನ್ನು ಬೇರ್ಪಡಿಸುತ್ತದೆ ಅಲ್ಲಿ ಹರಿಯುವ ಡೆಟ್ರಾಯಿಟ್ ನದಿ. ಒಂದು ಕಡೆ ಅಮೆರಿಕಾ ಇದ್ದರೆ ಮತ್ತೊಂದು ಕಡೆ ಕೆನಡಾ. ಪರಸ್ಪರ ಈ ಎರಡು ದೇಶಗಳನ್ನು ಬೇರ್ಪಡಿಸಿ ಇಲ್ಲಿ ಹರಿಯುತ್ತದೆ ಡೆಟ್ರಾಯಿಟ್ ನದಿ. ಎರಡು ದೇಶಗಳನ್ನು ಬೇರ್ಪಡಿಸಿ ಹರಿಯುವ ಉದ್ದನೆಯ ನದಿ ಎಂದರೆ ಇದೆ. ಜತೆಗೆ ಉಭಯ ದೇಶಗಳ ದಂಡೆಯಲ್ಲಿ ಭಾರಿ ಅಭಿವೃದ್ಧಿಯಾಗಿರುವುದೂ ಇಲ್ಲೆ. ಇಂಥಹ ಸ್ಥಳ ಮತ್ತೆಲ್ಲೂ ಕಾಣಲು ಸಿಗುವುದಿಲ್ಲ ನಮಗೆ. ಅಮೆರಿಕಾ ದಂಡೆಯಲ್ಲಿ ವಾಕ್ ಮಾಡಲು ಖುಷಿಯಾಗುತ್ತದೆ. ಅಲ್ಲಿನ ನೀರಿನ ಕಾರಂಜಿ ಸಂಜೆ ಸಮಯದಲ್ಲಿ ಮುದ ನೀಡುತ್ತದೆ. ಈ ಕಡೆ ದಂಡೆಯಲ್ಲಿ ನಿಂತು ನೋಡಿದರೆ ಕ್ಯಾಮರಾ ಕಣ್ಣಿಗೆ ಕೆನಡಾ ಸಿಕ್ಕಿ ಬೀಳುತ್ತದೆ. ಅಮೆರಿಕಾ ದಂಡೆಯಲ್ಲೇ ಇದೆ ಜನರಲ್ ಮೋಟರ್ಸ್ ಟವರ್. ಈ ಟವರ್ನಲ್ಲಿದೆ ಕೆನಡಾ ಎಂಬಸಿ ಕಚೇರಿ. ಬಿಟ್ಟರೆ ಈ ಕಡೆಯಿಂದ ಆ ಕಡೆ ಈಜಿ ದಡ ಮುಟ್ಟಬಹುದು. ಆದರೆ ಈ ಕಡೆಯಿಂದ ಆ ಕಡೆ ಹೋಗಲು ವೀಸಾ ಇರಲೇ ಬೇಕು. ಕೆನಡಾಗೆ ಹೋಗಲು ವೀಸಾ ಬಯಸಿ ಎರಡು ಬಾರಿ ಅಜರ್ಿ ಹಾಕಿದೆ ಇಲ್ಲಿ ನಾನು. ಕೆನಡಾದ ಟೊರೆಂಟೋ ನಗರಕ್ಕೆ ತೆರಳಿ ಅಲ್ಲಿ ಆಂಗ್ಲ ಪತ್ರಿಕೆ ನಡೆಸುತ್ತಿರುವ ಹಿರಿಯ ಪತ್ರಕರ್ತ ನಾಗರಾಜ್ ಅವರನ್ನು ಭೇಟಿ ಮಾಡುವುದು ನನ್ನ ಉದ್ದೇಶವಾಗಿತ್ತು. ಅವರಿಂದ ಆಹ್ವಾನ ಪತ್ರ ಪಡೆಯಲು ಯತ್ನಿಸಿದೆ. ಆದರೆ ಎರಡೂ ಬಾರಿಯೂ ವೀಸಾ ನೀಡಲು ಅಲ್ಲಿನ ಅಧಿಕಾರಿಗಳು ನಿರಾಕರಿಸಿದರು. ಎರಡೇ ಎರಡು ದಿನಕ್ಕೆ ಟೂರಿಸ್ಟ್ ವೀಸಾ ನೀಡಿರೆಂದು ಬೇಡಿದರೂ ಅಲ್ಲಿನ ಅಧಿಕಾರಿಗಳು ನಿರಾಕರಿಸಿದರವರು. 200 ಡಾಲರ್ ಫೀ ಮಾತ್ರ ಕಿತ್ತುಕೊಂಡರು. ಜಿಎಂ ಟವರ್ನ ನೆತ್ತಿಯ ಮೇಲೆ ಹಾದುಹೋಗುತ್ತದೆ ಸ್ಕೈ ಬಸ್. ಈ ಬಸ್ನಲ್ಲಿ ಎರಡು ಡಾಲರ್ ಟಿಕೆಟ್ ಪಡೆದು ಕುಳಿತರೆ ನಗರದ ತುಂಬೆಲ್ಲಾ ರೌಂಡ್ ಹಾಕುತ್ತದೆ ಅದು. ಆ ಕ್ಲಕ್ಕಿಸಿದ ಕೆಲವು ಪೋಟೋಗಳಿ ಇಲ್ಲಿವೆ ನೋಡಿ. ಡೆಟ್ರಾಯಿಟ್ನ ಕೆಲವು ಬೀದಿಗಳಲ್ಲಿ ಓಡಾಡಿ ತೆಗೆದ ಚಿತ್ರಗಳು ಇಲ್ಲಿವೆ ನೋಡಿ. ಡೆಟ್ರಾಯಿಟ್ನಲ್ಲಿ ರಾತ್ರಿಯೆಲ್ಲಾ ತೆರೆದಿರುವ ಹೈಟೆಕ್ ಜಿಮ್ಗಳಿವೆ. ಈ ಜಿಮ್ಗಳಲ್ಲಿ ದಿನದ ಯಾವುದೇ ಗಳಿಗೆಯಲ್ಲಿ ಹೋಗಿ ನೀವು ವ್ಯಾಯಾಮ ಮಾಡಬಹುದು. ಒಂದೇ ಬಾರಿಗೆ ಐದು ನೂರು ಜನ ವ್ಯಾಯಾಮ ಮಾಡುವಷ್ಟು ವಿಶಾಲವಾಗಿರುತ್ತವೆ ಈ ಜಿಮ್ಗಳು. ಇಲ್ಲಿ ಮಹಿಳೆಯರಿಗೆ 24 ತಾಸಿನ ಭದ್ರತೆ, ಗೈಡೆನ್ಸ್ ಸಿಗುತ್ತದೆ. ಸದಸ್ಯತ್ವ ಇರುವವರಿಗೆ ಮಾತ್ರ ಇಲ್ಲಿ ಒಳ ಪ್ರವೇಶಿಸಲು ಅವಕಾಶ.
 
ಅಮೆರಿಕಾ ತುದಿಯಲ್ಲಿ ನಿಂತು ನೋಡಿದರೆ ಕೆನಡಾದ ಸೀಸರ್ಸ್ ಬಿಲ್ಡಿಂಗ್ ಕೈ ಬೀಸಿ ಕರೆಯುತ್ತದೆ. ಇಷ್ಟೊಂದು ದೂರ ಬಂದು ಕೆನಡವನ್ನು ಸ್ಪಶರ್ಿಸಲು ಸಾಧ್ಯವಾಗಲಿಲ್ಲವಲ್ಲ ಎಂದೆನಿತ್ತು. ಜತೆಗೆ ವೀಸಾ ರಿಜೆಕ್ಟ್ ಆಗಿದ್ದಕ್ಕೆ ನಿರಾಸೆ, ಬೇಸರವಾಗಿತ್ತು. ಇಲ್ಲಿಂದ ವಾಪಸ್ ಹೊರಟು ಹೋಗಲೇ ಎನ್ನಿಸಿತ್ತು. ಇದೆಲ್ಲಾ ಬೇಸರ ಕಳೆದಿದ್ದು ನಯಾಗರ ಫಾಲ್ಸ್ ನೋಡಿದ ನಂತರ.
ಆಂಕರ್ : ಅಮರನಾಥಗೌಡರು ಮನೆಗೆ ಬಂದ ಅತಿಥಿಗಳ ಬಗ್ಗೆ ಎಷ್ಟು ಕಾಳಜಿ ತೋರುತ್ತಾರೆಂದರೆ ಚಂದ್ರೇಗೌಡರು ಡೆಟ್ರಾಯಿಟ್ನಿಂದ ಪ್ರಮಾಣ ಬೆಳಸಿ ಐರಿ ತಲುಪುವವರೆಗೆ ಅಂದರೆ ಸರಿಹೊತ್ತಿನವರೆಗೂ ಪೋನ್ ಮಾಡಿ ಚಂದ್ರೇಗೌಡರು ನಿಗದಿತ ಸ್ಥಳವನ್ನು ತಲುಪಿದರಾ, ಹೇಗೆ ಎಂದು ವಿಚಾರಿಸುತ್ತಿದ್ದರಂತೆ. ಚಂದ್ರೇಗೌಡರು ವಾಪಸ್ ಬರುವವರೆಗೂ ಅಮರನಾಥಗೌಡರು ಪೋನಾಯಿಸಿ ಎಲ್ಲಿದ್ದೀರಾ ಹೇಗಿದ್ದೀರಾ ಎಂದು ವಿಚಾರಿಸುತ್ತಲೇ ಇದ್ದರಂತೆ. ಈಗ ಮತ್ತೊಂದು ಬ್ರೇಕ್ ತೆಗೆದುಕೊಳ್ಳೋಣ. ಮುಂದಿನ ಭಾಗದಲ್ಲಿ ಅಮರನಾಥಗೌಡರ ಕಚೇರಿಗೆ ಭೇಟಿ ನೀಡೋಣ.
ಆಂಕರ್: ಡೆಟ್ರಾಯಿಟ್ನಲ್ಲಿ ರಾಘವೇಂದ್ರ ರಾಜು ಹಾಗೂ ಕೃಷ್ಣಾನಂದರದು ಅದ್ಭುತವಾದ ಜೋಡಿ. ರಾಘವೇಂದ್ರ ರಾಜು ಏನನ್ನಾದರೂ ಖರೀದಿ ಮಾಡಲು ಮುಂದಾದರೆ ಕೃಷ್ಣಾನಂದ್ ಅದಕ್ಕೆ ಕಲ್ಲು ಹಾಕುತ್ತಿದ್ದರಂತೆ. ಅದಕ್ಕಾಗಿ ಅಮರನಾಥಗೌಡರಿಗೆ ತಮಗೆ ಬೇಕಾದ್ದನ್ನು ಕೊಡಿಸಬೇಕೆಂದು ರಾಜು ದುಂಬಲು ಬೀಳುತ್ತಿದ್ದರು. ಯಾವ ಕಾಫಿಯನ್ನು, ಹೇಗೆ ಖರೀದಿ ಮಾಡಬೇಕೆಂದು ರಾಜು ಗೌಡರಿಂದ ಚೀಟಿ ಬರೆಸಿಕೊಂಡಿದ್ದರು. ಬನ್ನಿ ಈಗ ಗೌಡರ ಕಚೇರಿಗೆ ಭೇಟಿ ನೀಡೊಣ.

ವಾಯ್ಸ್ ಓವರ್ 3:

ಇದಾದ ನಂತರ ಡೆಟ್ರಾಯಿಟ್ ಬಿಡುವ ದಿನ ನಾನು ಅಮರನಾಥಗೌಡರ ಕಚೇರಿಗೆ ಹೋಗಿದ್ದೆ ನಾನು. ಗೌಡರ ಮಸರ್ಿಡಿಸ್ ಬೆಂಜ್ ಕಾರು ಮಿಂಚುತ್ತಿತ್ತು ಅಲ್ಲಿ. ರಾಘವೇಂದ್ರ ಡೋರ್ ತೆಗೆದು ಯೂ ಆರ್ ವೆಲ್ಕಮ್ ಎಂದು ಪೋಸು ನೀಡಿದರು. ಅಮರನಾಥಗೌಡರ ಕಚೇರಿಯನ್ನು ಪರಿಚಯಿಸಿದರು. ಫಮರ್ಿಗ್ಟನ್ ಹಿಲ್ಸ್ನಲ್ಲಿರುವ ಅಮರನಾಥಗೌಡರ ಕಚೇರಿಯಲ್ಲಿ ಆರು ಮಂದಿ ಅಟಾನರ್ಿಗಳು, 14 ಮಂದಿ ಸಹಾಯಕರು ಕೆಲಸ ಮಾಡುತ್ತಾರೆ. ಗೌಡರು ತಮ್ಮ ಎಲ್ಲ ಸಹೊದ್ಯೋಗಿಗಳನ್ನು ಪರಿಚಯ ಮಾಡಿಕೊಟ್ಟರು. ಅವರಲ್ಲಿ ತನಗೆ ಕುತೂಹಲ ಮೂಡಿಸಿದ್ದು ಜೆಫ್ ವೈಸ್ ಬಗರ್್. ಇವರು ಗೌಡರಷ್ಟೇ ಪ್ರಖ್ಯಾತ ಅಟಾನರ್ಿ. ಅಮರನಾಥಗೌಡರ ನಗುವನ್ನು ತುಂಬಾ ಇಷ್ಟಪಡುವ ಜೆಫ್, ತನಗೊಂದು ಚಿಕ್ಕ ಇಟರ್ವ್ಯೂ ಒಂದನ್ನೂ ನೀಡಿದರು. ಧಾಮರ್ಿಕ ಅಲ್ಪ ಸಂಖ್ಯಾತರಿಗೆ ಅದರಲ್ಲೂ ಭಾರತೀಯರಿಗೆ ರಾಜಕೀಯ ಮೀಸಲಾತಿ ಅಗತ್ಯವಿದೆ ಎಂದು ಒಪ್ಪಿಕೊಂಡರು.

ಬೈಟ್; ಜೆಫ್, ಅಟಾನರ್ಿ
ಟಿಸಿಆರ್:
ಜೆಫ್ಗೂ ಮುನ್ನ ಅಮರನಾಥಗೌಡರು ಅಮೆರಿಕಾದಲ್ಲಿರುವ ಭಾರತೀಯರ ಬಗ್ಗೆ ಮಾತನಾಡಿದ್ದರು.

ಬೈಟ್; ಅಮರನಾಥಗೌಡ, ಅಕ್ಕ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರು.

ಅಟಾನರ್ಿ ಜೆಫ್ ತಮ್ಮ ಕಚೇರಿಯಲ್ಲಿದ್ದ ಹಲವಾರು ಚಿತ್ರ ಪಟಗಳು, ಮೊಮೆಂಟೋಗಳನ್ನು ತೋರಿಸಿ ಅವುಗಳಲ್ಲಿ ಯಾವುದು ಅವರಿಗೆ ಇಷ್ಟವಾದ ವಸ್ತು ಮತ್ತು ಏಕೆ ಇರಬಹುದೆಂದು ಪ್ರಶ್ನೆಗಳನ್ನು ಹಾಕಿದರು. ನಾವುಗಳೆಲ್ಲಾ ಒಂದೊಂದು ವಸ್ತುಗಳನ್ನು ತೋರಿಸಿದೆವು. ಆದರೆ ಅವರೇ ಅವರಿಗೆ ಕಪ್ಪು ಬಿಳಪು ಪೋಟೋ ಒಂದನ್ನು ತೋರಿಸಿದರು. ಅದು ಏಕೆ ಇಷ್ಟವಾಯಿತೆಂದು ವಿವರಿಸಿದರು. ಅದು ನ್ಯೂಯಾಕರ್್ ನಗರವನ್ನು ಪರಿಚಯಿಸುವ ಪೋಟೋ. ಅದು ಏಕೆ ಇಷ್ಟವೆಂದು ತಿಳಿಸಿದರು.

ಬೈಟ್: ಜೆಫ್ ವೈಸ್ಬಗರ್್, ಅಟಾನರ್ಿ
ಟಿಸಿಆರ್:
ಡೆಟ್ರಾಯಿಟ್ನಲ್ಲಿರುವ ಉಡುಪಿ ಹೊಟೇಲ್ನಲ್ಲಿ ಎಲ್ಲರೊಂದಿಗೆ ಊಟ ಮಾಡಿದ ನಂತರ ಚಂದ್ರೇಗೌಡ ಡೆಟ್ರಾಯಿಟ್ನಿಂದ ಹೊರಟರು. ಅಲ್ಲಿಂದ ಅವರು ಗ್ರೇಹೌಂಡ್ ಬಸ್ನಲ್ಲಿ ಐರಿಗೆ ಪ್ರಯಾಣ ಬೆಳೆಸಿದರು.

ಆಂಕರ್: ವೀಕ್ಷಕರೇ ಮುಂದಿನ ವಾರ ನಿಮಗೆ ವಿಶ್ವದ ಅದ್ಭುತಗಳಲ್ಲಿ ಒಂದಾದ ನಯಾಗರ ಜಲಪಾತವನ್ನು ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇವೆ. ಸಾವಿರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ನಯಾಗರ ಜಲಧಾರೆಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಂಥಹ ಅದ್ಭುತ ಆ ತಾಣ ಅದು. ಬನ್ನಿ ನಯಾಗರವನ್ನು ಅಷ್ಟೇ ಅದ್ಭುತವಾಗಿ ಚಿತ್ರಿಸಿಕೊಂಡು ಬಂದಿದ್ದಾರೆ ಚಂದ್ರೇಗೌಡ. ಮುಂದಿನ ವರ ಅವರು ಅದನ್ನು ನಿಮಗೆ ಪರಿಚಯ ಮಾಡಿಕೊಡಲಿದ್ದಾರೆ……………….

Hai Rickku, Mimmu

ಹೊಸ ವರ್ಷದ ಆಚರಣೆ ನಡೆಯಿತು ಫಾಮ್ ಮೆಡೋಸ್ನಲ್ಲಿ

 • ಪುಟಗಳು

 • Flickr Photos

 • ಜನವರಿ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಡಿಸೆ   ಫೆಬ್ರ »
   12
  3456789
  10111213141516
  17181920212223
  24252627282930
  31  
 • ವಿಭಾಗಗಳು