ಶೋಭಾ ಕರಂದ್ಲಾಜೆ ವೆಬ್ಸೈಟ್ ಉದ್ಘಾಟನೆ ಫೆ. 25 ರಂದು ಗೋಲ್ಡ್ ಫಿನ್ಚ್ ಹೊಟೇಲ್ನಲ್ಲಿ

ಪರಿಸ್ಥಿತಿಯ ಒತ್ತಡಕ್ಕೆ ಮಣಿದು ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ಶೋಭಾ ಕರಂದ್ಲಾಜೆ, ಈಗ ಜನರ ಜತೆ ನೇರ ಸಂಪರ್ಕ ಇಟ್ಟುಕೊಳ್ಳಲು ತಮ್ಮದೇ ಆದ ವೆಬ್ಸೈಟ್ ಒಂದನ್ನು ಹೊಂದುತ್ತಿದ್ದಾರೆ. ಈ ವೆಬ್ಸೈಟ್ನ ಉದ್ಘಾಟನೆ ಇದೇ ಫೆ 25 ರಂದು ಸಂಜೆ 5 ಗಂಟೆಗೆ ನಡೆಯಲಿದೆ.

Advertisements

ಅಮುದಾ..ಅವ್ವ…ಹೀಗೊಂದು ಬ್ಯೂಟಿಫುಲ್ ಪ್ರೊಫೈಲ್

ನೀನೇನೋ ಹೋಗಿ ಬಿಡುತ್ತೀಯಾ..ಆದರೆ ಇದ್ದು ನಾವೇನು ಮಾಡಬೇಕು. ನೀನು ಬದುಕಲೇಬೇಕು.ನಾವೆಲ್ಲ ನಿನ್ನ ಜೊತೆಗಿದ್ದೇವೆ…

 ಪುಟ್ಟ ಮಗಳ ದಿಟ್ಟನುಡಿ.

ನೇಣಿಗೆ ಶರಣಾಗಲು ಮುಂದಾದ ಅವಳಿಗೆ ಮಗಳ  ಮಾತು ಇನ್ನಿಲ್ಲದಂತೆ ಕಾಡಿ ಬಿಡುತ್ತದೆ.

ಏನೇ ಆಗಲಿ ಬದುಕಿಯೇ ತೀರುತ್ತೇನೆ ಎಂದು ನಿರ್ಧರಿಸುತ್ತಾಳೆ. ಅಷ್ಟು ಧೈರ್ಯ ಅವಳಿಗೆ ಬಂದಿದ್ದೇ ತಡ,  ತನಗಂಟಿಕೊಂಡ ಎಲ್ಲ ಸಂಕಷ್ಟಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತಾಳೆ.

ಅವಳ ಕಷ್ಟವೋ ಸಾಮಾನ್ಯದ್ದಲ್ಲ.

ಗಂಡ ಏಡ್ಸ್ ಗೆ ಬಲಿ..ವಿಧವೆ ಪಟ್ಟದ ಜೊತೆಗೆ ಎಚ್ಐವಿ ಕೂಡ.  ಉತ್ತಮವಾಗಿಯೇ ನಡೆಯುತ್ತಿದ್ದ ಅಕ್ಕಿ ವ್ಯಾಪಾರ ಇದ್ದಕ್ಕಿದ್ದಂತೆ ನಿಂತುಬಿಡುತ್ತದೆ.ಮನೆಗೆ ಬರುತ್ತಿದ್ದ ಸಂಬಂಧಿಕರು,ಆಪ್ತರೆಲ್ಲ ಇವರ ಕಡೆ ತಿರುಗಿ ನೋಡಲೊಲ್ಲರು.

ಏಡ್ಸ್ ನಿಂದ ಸತ್ತವನ ಮಗಳು…. ಶಾಲೆಯ ದಾರಿಗುಂಟ ಇಂಥಹುದೇ ಕುಹಕದ ಮಾತುಗಳು. ಒಂದು ಕಾಲದಲ್ಲಿ ತನಗೆ ಧೈರ್ಯ ಹೇಳಿದ ಮಗಳಿಗೆ ಈಗ ತಾಯಿ ಧೈರ್ಯ ತುಂಬುತ್ತಾಳೆ.

2.

ಬದುಕು ಸಾಗಲೇಬೇಕು.ನಾನು ಫಿಟ್ ಆಗಿದ್ದೀನಿ ಎಂದು ಸುಳ್ಳು ಹೇಳಿ ಕಂಪನಿಯೊಂದರಲ್ಲಿ ಸೆಕ್ಟುರಿಟಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.ನಿತ್ಯದ ಬದುಕಿಗೊಂದು ದಾರಿಯಾಗುತ್ತದೆ.

ತನ್ನ ಜೀವನಕ್ಕೇನೋ ಮಾಡಿಕೊಂಡರೂ ಅವಳ ಮನಸ್ಸು ಮಾತ್ರ ಇನ್ನೇನೋ ಮಾಡಬೇಕು ಎಂದು ಹಾತೊರೆಯುತ್ತದೆ. ಸಮಯಕ್ಕೆ ಸರಿಯಾಗಿ ಸ್ಪ್ಯಾಡ್ ನಲ್ಲಿ ಕೆಲಸ . ಅಲ್ಲಿ ಮತ್ತೊಂದು ಪ್ರಪಂಚದ ಅರಿವಾಗುತ್ತದೆ.ಚಿಕ್ಕಮಕ್ಕಳಿಂದ ಹಿಡಿದು, ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ನೋವಿನ ಮುಂದೆ ತನ್ನ ನೋವು ಏನೂ ಅಲ್ಲ ಎಂಬುದು ಅರಿವಾದಾಗ  ಮತ್ತೆ ಅವಳು ಹಿಂತಿರುಗಿ ನೋಡುವುದಿಲ್ಲ,ಎಚ್ ಐ ವಿ ಹಾಗೂ ಆ ಸಂಬಂಧ ಹುಟ್ಟಿಕೊಂಡಿರುವ ಕಳಂಕ ತಾರತಮ್ಯದ  ಹೋರಾಟದಲ್ಲಿ ತಾನೂ ಭಾಗಿಯಾಗುತ್ತಾಳೆ.. ಜೊತೆಗೆ ಲೈಂಗಿಕ ಕಾರ್ಯಕರ್ತರ ಹಕ್ಕುಗಳಿಗಾಗಿ ಅವಳ ಹೋರಾಟ ಮುಂದುವರಿಯುತ್ತದೆ. ಮಕ್ಕಳ ರಕ್ಷಣೆಗಾಗಿ ಇರುವ  ಸ್ಟಾರ್ ಪಾಲಿಸಿಯನ್ನು ಹೆಚ್ಚು ಹೆಚ್ಚು ಒದಗಿಸುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ.

,ನೋಡನೋಡುತ್ತಲೆ ಮಗಳು ಬಿಕಾಂನಲ್ಲಿ ಅತ್ಯಂತ ಹೆಚ್ಚು ಅಂಕ ತೆಗೆದು ಪಾಸಾಗುತ್ತಾಳೆ. ಬ್ಯಾಂಕೊಂದರಲ್ಲಿ ಒಳ್ಳೇ ಕೆಲಸವೂ ಸಿಗುತ್ತದೆ.ಮೂಗುಮುರಿದ ಸಂಬಂಧಿಕರು ಮತ್ತೆ ಇವಳತ್ತ ನೋಡಲಾರಂಭಿಸುತ್ತಾರೆ. ನಾದಿನಿ ತನ್ನ ಮಗನಿಗಾಗಿ ಇವಳ ಮಗಳನ್ನು ಕೇಳುತ್ತಾಳೆ. ಮದುವೆ ನಡೆಯುತ್ತದೆ.

ಮದುವೆ ಮನೆಯಲ್ಲಿ ಎಚ್ ಐ ವಿ ಗೆ ತುತ್ತಾಗಿರುವ ಸೋದರಿಯರ ಕಿಲಕಿಲ ನಗು. ವಾತಾವರಣದ ತುಂಬ ಕೇಳಿಸತೊಡಗುತ್ತದೆ. ಅವರ ನಗುವಿನಲ್ಲಿ  ಸಂಬಂಧಿಕರ ಮುಗುಳ್ನಗೆಯೂ ಸೇರುತ್ತದೆ.

ಒಂದು ರೀತಿ ಮುರಿದ ಮನಸ್ಸುಗಳು ಮತ್ತೆ ಒಂದಾದಂತೆ. ಅಷ್ಟರ ಮಟ್ಟಿಗೆ  ಬದಲಾವಣೆ ತರುವಲ್ಲಿ ಅವಳು ಯಶಸ್ವಿಯಾಗುತ್ತಾಳೆ.,ಅವಳು ಯಾರು ಅಂತೀರಾ.

ಹೆಸರು ಅಮುದಾ.ಬೆಂಗಳೂರಿನವಳೇ.ಸದ್ಯ, ಅರುಣೋದಯ ನೆಟ್ ವರ್ಕ್ ಆಫ್ ಪಾಸಿಟಿವ್ ಪೀಪಲ್ ಸಂಸ್ಥೆಗೆ ಅಧ್ಯಕ್ಷೆ.ಎಚ್ ಐ ವಿ ಇದೆ ಎಂದು ಗೊತ್ತಾಗಿದ್ದು 2000ರಲ್ಲಿ.ಗಟ್ಟಿ ದೇಹ.ಮುಖದಲ್ಲಿ ಚೆಂದದ ನಗು.ಮನಸ್ಸಲ್ಲಿ ಏನೋ ಸಾಧಿಸಬೇಕೆನ್ನೋ ಛಲ.ಅವಳ ಸೇವಾಮನೋಭಾವನೆಗೆ ಅವ್ವ ಪ್ರಶಸ್ತಿಯೂ ಲಭಿಸಿದೆ..ಎಷ್ಟೋ ಮಂದಿಗೆ ಅವಳು ಪ್ರೀತಿಯ ಅಮ್ಮ ಕೂಡ…ಪರಿಸ್ಥಿತಿ ಮೊದಲಿನಂತಿಲ್ಲ. ಎಚ್ ಐ ವಿ ಯೊಂದಿಗೆ ಗೌರವಯುತ ಜೀವನ ನಡೆಸಲು ಬೇಕಾದಂಥ ಆರೋಗ್ಯಪೂರ್ಣ ಸಮಾಜದ ನಿರ್ಮಾಣವಾಗ್ತಾ ಇದೆ. ಕಳಂಕ ತಾರತಮ್ಯ ಕೂಡ ಮೊದಲಿನಷ್ಟಿಲ್ಲ ಎಂದು ಹೇಳುವಾಗ ಅವಳ ಕಣ್ಣಲ್ಲಿ ಆತ್ಮವಿಶ್ವಾಸ ಜಿನುಗುತ್ತದೆ.

ನನಗೆ ಎಚ್ ಐ ವಿ ಬಂದಿದ್ದು ಒಳ್ಳೆಯದೇ ಆಯ್ತು..ನಾಲ್ಕು ಗೋಡೆಯ ಮಟ್ಟಿಗೆ ಮಾತ್ರ ಸೀಮಿತವಾಗಿದ್ದ ನನ್ನ ಬದುಕು ಇದೀಗ ಹೊರಜಗತ್ತನ್ನು ಕಂಡಿದೆ. ನನ್ನ ಕೈಲಾದಷ್ಟನ್ನು ಮಾಡುವ ಅವಕಾಶ ಲಭಿಸಿದೆ ಎಂದು ನಗುತ್ತಲೇ ಅಮುದಾ ಹೇಳುತ್ತಾಳೆ.

 ಈ ರೀತಿ ಸಾರ್ಥಕ್ಯದ ಜೀವನ ನಡೆಸುತ್ತಿರುವ ಅನೇಕರು ನಮ್ಮೊಂದಿಗಿದ್ದಾರೆ..ಯಾವುದೇ ಪ್ರತಿಫಲ ಬಯಸದೇ ಸಮಾಜ ಕಟ್ಟುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಂಥಹ ಅನೇಕರಿಗೆ ನಮ್ಮ  ಹ್ಯಾಟ್ಸ್ ಆಫ್..

ಶಾರದಾ ನಾಯಕ

ಸಹಾಯಕ ನಿರ್ದೇಶಕರು

ಐಇಸಿ,ಕರ್ನಾಟಕ ಏಡ್ಸ್ ಪ್ರಿವೆನ್ಶನ್ ಸೊಸೈಟಿ

ಆ ದಿನ ಮೇ ಫ್ಲವರ್ ಮೀಡಿಯಾದ ನಮ್ಮ ಶ್ರೀಜಾ ಜನ್ಮದಿನ ಆಚರಿಸಲಾyitu

ಹೊಸ ಫ್ಲಾಟ್: ಇನ್ನು ಮುಂದೆ ಇದು Nanna Mane

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅಂತಾರೆ. ಹಾಗೆ ಮನೆ ಅಂದರೆ ಮೊದಲನೇ ಫ್ಲಾಟನ್ನು ಕಟ್ಟಿಸುತ್ತಾ ಇರುವೆ. ಮನೆ ನಿಮರ್ಾಣ ಹಂತದಲ್ಲಿದ್ದಾಗ ಆಗುವ ತೊಂದರೆ ಅಷ್ಟಿಷ್ಟಲ್ಲ. ಆದ್ದರಿಂದ ನಿಮರ್ಾಣ ಹಂತದಲ್ಲಿರುವಾಗಲೇ ಈ ನನ್ನ ಫ್ಲಾಟ್ನ ಪೋಟೋಗಳನ್ನು ಕ್ಲಿಕ್ಕಿಸಿದ್ದೇನೆ ನೀವೂ ನೋಡಿ. ಎಲ್ಲಾ ಮುಗಿದ ನಂತರ ನೋಡಿದರೆ ಕಷ್ಟ ಸುಖದ ನೆನಪು ಬರುತ್ತದೆ.

ಬೆಂಗಳೂರಿನ ಹೊರವಲಯದ ಗ್ರಾಮೀಣ ಜನರ ಬದುಕು

 • ಪುಟಗಳು

 • Flickr Photos

 • ಫೆಬ್ರವರಿ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಜನ   ಮಾರ್ಚ್ »
   123456
  78910111213
  14151617181920
  21222324252627
  28  
 • ವಿಭಾಗಗಳು