Ad Revenue sharing by diffrent Kannada Channels since 2005

           
           
Billing of Major Kannada Channels      
  Financial Year  
Channel 2005-06 2006-07 2007-08 2008-09  
Udaya 83 84 88 104  
E TV Kannada 65 78 69 61  
Zee Kannada NA 3.5 9 27  
Suvarna NA NA 4.18 10.5  
Kasthuri NA NA 4 9.8  
U 2 2.45 2.89 3.4 3.8  
TV 9 Kannada NA 3.5 7 17  
Udaya Movies 12 14 16.5 19  
Udaya Varthagelu 0.182 0.185 0.186 0.187  
Suvarna news NA NA 0 1  
           
* figures in croes          
           
Advertisements

ಮದುವೆಯಾದ ನಂತರ ಸತ್ಯ – ಸ್ಟೀವ್ ಬಂದು ನೆಲೆಸಿದ್ದು ಪೆನ್ಸಿಲ್ವೆನಿಯಾ ರಾಜ್ಯದ ಐರಿ ಎಂಬಲ್ಲಿನ ಗ್ರ್ಯಾಂಡ್ ವ್ಯಾಲಿಗೆ.What a nice day ! Grand Valley Hero and Heroine Satya and Steev has come to Bangalore

ಸ್ಲಗ್: ಸತ್ಯ ಲಿಂಗರಾಜು
ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಡೇಟ್: 05- 03- 09
ಬೆಂಗಳೂರು
ಆಂಕರ್: ವೀಕ್ಷಕರೇ ಈ ವಾರವೂ ನಾವು ಬೆವಲರ್ಿ ಹಿಲ್ಸ್ನ ಹಾಲಿವುಡ್ ಸ್ಟಾರ್ಗಳ ಭಂಗಲೆಗಳನ್ನು ತೋರಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಾವು ಈ ವಾರ  ಬಹಳ ಕುತೂಹಲ ಕೆರಳಿಸುವ ಅಂತಾರಾಷ್ಟ್ರೀಯ ಲವ್ ಸ್ಟೋರಿಯೊಂದನ್ನು ಪರಿಚಯಿಸಲಿದ್ದೇವೆ ನಿಮಗೆ. ನಮ್ಮ ಎಂ.ಎನ್. ಚಂದ್ರೇಗೌಡ ಇದಕ್ಕಾಗಿ ಪೆನ್ಸಿಲ್ವೆನಿಯಾ ರಾಜ್ಯದ ಗ್ರಾಂಡ್ವ್ಯಾಲಿಗೆ ತೆರಳಿ ಈ ಸ್ಟೋರಿಯನ್ನು ಚಿತ್ರಿಸಿಕೊಂಡು ಬಂದಿದ್ದಾರೆ. “ಐರಿ” ಎಂಬ ನಗರದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿದೆ ಈ ಊರು. ಆ ಊರ ಹೊರಗಿನ ಹಸಿರು ಸಿರಿಯ ನಡುವೆ ತಲೆ ಎತ್ತಿದೆ ಒಂದು ಪುಟ್ಟ ಮನೆ ಇದೆ. ಅದರಲ್ಲಿದೆ ಇಬ್ಬರು ಸದಸ್ಯರ ಒಂದು ಪುಟ್ಟ ಕುಟುಂಬವಿದೆ. ಆ ಕುಟುಂಬದ ಸದಸ್ಯರು ಸತ್ಯ ಮತ್ತು ಸ್ಟೀವ್……………ಇವರಿಬ್ಬರೂ ಮದುವೆಯಾಗಿದ್ದು ಇಳಿ ವಯಸ್ಸಿನಲ್ಲಿ. ಮೋಸ, ಕಪಟ, ಅಸೂಯೆ ಗಳಿಲ್ಲದ, ಒಲವೇ ನಮ್ಮ ಬದುಕೆನ್ನುವ ಈ ದಂಪತಿಗಳ ಜೀವನ ಪ್ರತಿಯೊಬ್ಬರಿಗೂ ಆದರ್ಶಮಯವೆನಿಸುತ್ತದೆ. ಬನ್ನಿ ಅವರ ಊರಿಗೆ ಹೋಗೋಣ ಅವರು ಬದುಕುವ ಪರಿಯನ್ನು ನೋಡಿಕೊಂಡು ಬರೋಣ……………………………..

ವಾಯ್ಸ್ ಓವರ್ 1: ಸತ್ಯ ಲಿಂಗರಾಜು- ಸ್ಟೀವನ್ ಜೋಡಿ ನನಗೆ ಪರಿಚಯವಾಗಿದ್ದು ಶಿಕಾಗೋದಲ್ಲಿ ನಡೆದ 5 ನೇ ಅಕ್ಕ ಸಮ್ಮೇಳನದಲ್ಲಿ. ಅಂತಾರಾಷ್ಟ್ರೀಯ ಮದುವೆಗಳ ಬಗ್ಗೆ ಸ್ಟೋರಿ ಮಾಡಲು ನಾನು ಹುಡುಕಾಟದಲ್ಲಿದ್ದಾಗ ಕಣ್ಣಿಗೆ ಬಿದ್ದವರೇ ಸತ್ಯ ಹಾಗೂ ಸ್ಟೀವ್. ಇಬ್ಬರೂ ಐವತ್ತು ದಾಟಿದವರೇ. ನಾನು ಸಹಜವಾಗಿ ಅವರನ್ನು ಮಾತನಾಡಿಸಿದೆ. ನಿಮ್ಮದು ಅಂತರ ಧಮರ್ಿಯ ಮದುವೆಯೇ ಎಂದೆ. ಹೌದು ಎಂದು ತಲೆಯಾಡಿಸಿದರು ಸತ್ಯ. ಯುವಕರಲ್ಲದ ಇವರಿಬ್ಬರಲ್ಲಿ ಅಂದೆಂಥಹ ವಿಶೇಷ ಸ್ಟೋರಿ ಇರುತ್ತದೆ ಅಯ್ಯೋ ಎಂದುಕೊಳ್ಳುತ್ತಿರುವಾಗಲೇ ಸ್ಟೀವ್ ಹೇಳಿದ ಮಾತುಗಳು ನನ್ನನ್ನು  ತುಂಬಾ ಇಂಪ್ರೆಸ್ ಮಾಡಿದವು. ಸತ್ಯ ಅವರ ವ್ಯಕ್ತಿತ್ವ, ಮದುವೆ, ದಾಂಪತ್ಯ ಜೀವನ, ಬದುಕಿನ ಬಗ್ಗೆ ಸ್ಟೀವ್ ಹೇಳಿದ ಮಾತುಗಳು ಈ ದಂಪತಿಗಳ ಬಗ್ಗೆ ನನಗೆ ಕುತೂಹಲವನ್ನು ಹೆಚ್ಚಿಸಿತು.
ಬೈಟ್ಗಳು:
1)
2)
ಆನಂತರ ತನಗೆ ಗ್ರಾಮೀಣ ಅಮೆರಿಕಾ ನೋಡಲು ಆಸಕ್ತಿ ಇದ್ದರೆ ತಮ್ಮ ಮನೆಗೆ ಬರಬಹುದೆಂದು ಸತ್ಯ ಆಹ್ವಾನ ನೀಡಿದರು. ಜತೆಗೆ ಈ ಮೇಲ್ ಐಡಿ, ಮೊಬೈಲ್ ನಂಬರ್ ಸಹ ನೀಡಿದರು. ಅಮೆರಿಕಾದಲ್ಲಿ ಮುಟ್ಟಿದರೆ ಮುನಿಯಂತಿರುವ ಆಮೀಶ್ ಜನಾಂಗದ ಬಗ್ಗೆ ತಿಳಿಸಿದ್ದರು. ಈ ದಂಪತಿಗಳ ಜತೆ ಸತತ ಸಂಪರ್ಕದಲ್ಲಿದ್ದ ತಾನು ಶಿಕಾಗೋ, ಇಂಡಿಯಾನ ಪೊಲೀಸ್, ಡೆಟ್ರಾಯಿಟ್ ನೋಡಿದ ನಂತರ ಸತ್ಯ ನೀಡಿದ್ದ ಆಹ್ವಾನವನ್ನು ನೆನಪು ಮಾಡಿಕೊಂಡು ಪೋನಾಯಿಸಿದೆ. ಆ ಕಡೆಯಿಂದ ಸತ್ಯ ನನ್ನ ಗುರುತು ಹಿಡಿದರು. ಅವರ ಊರಿಗೆ ಬರುವಂತೆ ಮತ್ತೊಮ್ಮೆ ಆಹ್ವಾನ ನೀಡಿದರು. ಐರಿ ವಿಮಾನ ನಿಲ್ದಾಣದ ಬಗ್ಗೆಯೂ ಮಾಹಿತಿ ನೀಡಿದರು. ಆದರೆ ಐರಿಯ ಹೆಸರು ಮೊದಲಿಗೆ ನನ್ನ ತಲೆಗೆ ಹೋಗಲಿಲ್ಲ. ಆದರೆ ಹೋಗಲು ಒಪ್ಪಿದೆ. ತಾನು ಪ್ರಯಾಣಿಸುವ ಬಸ್ ಬೆಳಗಿನ ಜಾವ 2 ಗಂಟೆಗೆ ಐರಿ ನಗರವನ್ನು ತಲುಪುವ ಬಗ್ಗೆ ಅವರಿಬ್ಬಿಗೂ ಮಾಹಿತಿ ನೀಡಿದೆ. ಓಕೆ ವಿ ವಿಲ್ ಕಮ್ ಟು ದಿ ಬಸ್ ಸ್ಟೇಷನ್ ಟು ಪಿಕ್ ಯೂ ಅಪ್ ಎಂದರು ಸತ್ಯ.

ಡೆಟ್ರಾಯಿಟ್ನಿಂದ ಪ್ರಯಾಣ ಬೆಳೆಸಿ ರಾತ್ರಿ 2 ಗಂಟೆಗೆ ಐರಿ ತಲುಪಿ ಬಸ್ನಿಂದ ಕೆಳಕ್ಕಿಳಿಯುವಷ್ಟರಾಗಲೇ ಸತ್ಯ- ಸ್ಟೀವ್ ಆ ಸರಿ ಹೊತ್ತಿನಲ್ಲಿ ನನಗಾಗಿ ಕಾದು ನಿಂತಿದ್ದರು. ಬಳಿಕ ಅವರ ಕಾರಿನಲ್ಲಿ ಗ್ರ್ಯಾಂಡ್ ವ್ಯಾಲಿಗೆ ಆರಂಭವಾಯಿತು ನಮ್ಮ ಪ್ರಮಾಣ. ಸ್ಟೀವ್ ನನ್ನನ್ನು ಗುರುತು ಹಿಡಿದು ಹಾಯ್ ಹೇಳಿದರು. ಮಾರ್ಗ ಮಧ್ಯದಲ್ಲಿ ಅಮೆರಿಕಾದಾದ್ಯಂತ ಇರುವ ಮೆಕ್ಡೊನಾಲ್ಡ್ ಸ್ಟಾಲ್ ಬಳಿ ಕಾರು ನಿಲ್ಲಿಸಿ ಟೀ, ಕಾಫಿ ಖರೀಸಿದಿದರು ಸತ್ಯ. ಅವರ ಮನೆ ತಲುಪಿದಾಗ ಬೆಳಿಗ್ಗೆ 4 ಗಂಟೆ.
ಬೆಳಿಗ್ಗೆ ಎಚ್ಚರಗೊಂಡಾಗ ತಾನೇನು ಊಟಿಯಲ್ಲಿದ್ದೇನೆಯೇ ಎಂದೆನಿಸಿತು ಒಂದು ಕ್ಷಣ. ಅಷ್ಟು ಸೊಗಸಾಗಿತ್ತು ಗ್ರ್ಯಾಂಡ್ ವ್ಯಾಲಿಯ ವಾತಾವರಣ. ಸುತ್ತಲೂ ಗಿಡ , ಮರ ಬಳ್ಳಿಗಳು. ಎಲ್ಲವನ್ನೂ ಮುತ್ತಿಕೊಂಡು ಮುತ್ತಿಡುತ್ತಿದ್ದ ಮಂಜು. ಮನೆಯ ಮುಂದೊಂದು ಕೊಳ. ನಿಶ್ಯಬ್ದ. ಜುಯ್ಗುಡುವ ಕಾಡಿನ ವಾತಾವರಣ……ವಾರೆವ್ಹಾ……….ಎಂದಿತು ಮನಸ್ಸು. ಬೆಳಿಗ್ಗೆ ಏಳುವ ವೇಳೆಗಾಗಲೇ ಸತ್ಯ – ಸ್ಟೀವ್ ಬ್ಯುಸಿಯಾಗಿದ್ದರು. ಸತ್ಯ ಮಸಲಾದೋಸೆಯ ತಯಾರಿಯಲ್ಲಿದ್ದರೆ ಸ್ಟೀವ್ ಮನೆಯ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದರು.

ಸತ್ಯರ ಮನೆ ತುಂಬಾ ಕಣ್ಣಾಡಿಸಿದಾಗ ಕಂಡಿದ್ದು ಅವರ ಮದುವೆಯ ಪೋಟೋಗಳು. ಲಕ್ಷಾಂತರ ಡಾಲರ್ ಸುರಿದು ಕಟ್ಟಿದ ಮನೆಯ ಡೆಕ್ ಇನ್ನೂ ಪೂರ್ಣವಾಗಿರಲಿಲ್ಲ. ಮನೆಯ ಹಾಲ್ನ ಒಳಾಂಗಣ ಅಚ್ಚುಕಟ್ಟಾಗಿತ್ತು. ಮರದ ಮನೆಯಲ್ಲಿ ಒಳಾಂಗನ ಅಷ್ಟು ಅಷ್ಷುಕಟ್ಟಾಗಿ ಮೂಡಬರಬಹುದೆಂದು ತಾನೂ ಎಣಿಸಿರಲಿಲ್ಲ. ತುಂಬಾ ಕಷ್ಟಪಟ್ಟು ಹಣ ಹೊಂದಿಸಿ ಈ ಮನೆಯನ್ನು ನಿಮರ್ಾಣ ಮಾಡಲಾಯಿತಂತೆ. ಮನೆ ನಿಮರ್ಾಣದ ಸಂಪೂರ್ಣ ಜವಾಬ್ದಾರಿಯನ್ನು ಸ್ಟಿವ್ ಹೊತ್ತಿದ್ದರಂತೆ. ಹಣ ಸಕಾಗದೇ ಡೆಕ್ನ ನಿಮರ್ಾಣ ಹಾಗೇ ಉಳಿದ ಕಾರಣ ಸ್ಟೀವ್ ಪ್ರತಿದಿನ ಕೆಲಸ ಮಾಡಿ ಅದನ್ನು ಪೂರ್ಣಗೊಳಿಸಲು ಯತ್ನಿಸುತ್ತಿರುವುದು ನನ್ನ ಗಮನಕ್ಕೆ ಬಂತು. ಇಡೀ ಮನೆಯ ನಿಮರ್ಾಣದಲ್ಲಿ ಸ್ಟೀವ್ ಅವರ ಶ್ರಮ, ಮುತುವಜರ್ಿ ಎದ್ದು ಕಾಣುತ್ತಿತ್ತು. 

    
ಸತ್ಯ ಲಿಂಗರಾಜು ವೃತ್ತಿಯಲ್ಲಿ ಮಕ್ಕಳ ವೈದ್ಯೆ. ಸುಮಾರು 40 ವರ್ಷಗಳ ಹಿಂದೆ ಸತ್ಯ, ಅಮೆರಿಕಾದ ಪಿಟ್ಸ್ಬಗರ್್ನಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದರು. ಅಲ್ಲಿಗೆ ತಮ್ಮ ಪುಟ್ಟ ಮಗುವನ್ನು ತೋರಿಸಲು ಬರುತ್ತಿದ್ದವರೇ ಸ್ಟೀವ್…..ಇವರು ಯುರೋಪ್ನ ಸ್ಲೊವೊಕಿಯಾದ ಪ್ರಜೆ. ಅಮೆರಿಕಾಗೆ ಬಂದ ಇವರ ತಂದೆ ತಾಯಿ ಆನಂತರ ತವರಿಗೆ ಮರಳಲಿಲ್ಲ. ಅಮೆರಿಕಾದಲ್ಲೇ ಹುಟ್ಟಿ ಬೆಳೆದು ಕೆಲಸದಲ್ಲಿದ್ದ ಸ್ಟೀವ್, ಮೊದಲಿಗೆ ಬಿಳಿ ಹುಡುಗಿಯೊಬ್ಬಳನ್ನು ಮದುವೆಯಾಗಿದ್ದರು. ಸಣ್ಣ ಮಗುವೂ ಇತ್ತು. ಮಗು ಸಣ್ಣದಿರುವಾಗಲೇ ಸ್ಟೀವ್ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದಾರೆ. ಮಗುವನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಸ್ಟೀವ್ ಮೇಲೆ ಬಿದ್ದಿದೆ. ಈ ಸಂದರ್ಭದಲ್ಲಿಯೇ ಸತ್ಯ ಹಾಗೂ ಸ್ಟೀವ್ ಭೇಟಿ ನಡೆದಿದೆ. ಆಸ್ಪತ್ರೆಗೆ ತಮ್ಮ ಮಗುವನ್ನು ತೋರಿಸಲು ತೆರಳುತ್ತಿದ್ದ ಸ್ಟೀವ್ ಹಾಗೂ ಸತ್ಯ ನಡುವೆ ಭೇಟಿ ಹೆಚ್ಚಾದಂತೆಲ್ಲಾ ಸ್ನೇಹ ಬೆಳೆದಿದೆ. ಸ್ನೇಹ ಬೆಳೆದಂತೆಲ್ಲಾ ಪ್ರೀತಿ ಚಿಗುರೊಡೆದಿದೆ. ಒಂದು ದಿನ ಸ್ಟೀವ್, ಸತ್ಯ ಅವರ ಮುಂದೆ ಪರಸ್ಪರ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದರಂತೆ.
ಅಲ್ಲಿನಯವರೆಗೆ ಮದುವೆಯಾಗುವ ಯೋಚನೆಯನ್ನೇ ಕೈಬಿಟ್ಟಿದ್ದ ಸತ್ಯ, ಮದುವೆಯಾಗಿ ಒಂದು ಸಣ್ಣ ಮಗುವನ್ನು ಹೊಂದಿದ್ದ ಸ್ಟೀವ್ರನ್ನು ಮದುವೆಯಾಗಲು ಆ ಕ್ಷಣದಲ್ಲಿ ಒಪ್ಪಿಗೆ ನೀಡಿಯೇ ಬಿಟ್ಟರಂತೆ. ಸತ್ಯ ಅವರ ನಿಧರ್ಾರದ ಬಗ್ಗೆ ಅವರ ಮನೆಯಲ್ಲಿ ಎಷ್ಟೇ ವಿರೋಧ ವ್ಯಕ್ತವಾದರೂ ಒಂದು ಮಗುವಿದ್ದ, ಅಷ್ಟೊಂದು ಅನುಕೂಲರಸ್ಥರಲ್ಲದ ಸ್ಟೀವ್ರನ್ನು ಹಿಂದು ಸಂಪ್ರದಾಯದಂತೆ ವರಿಸಿ ಸತ್ಯ ಲಿಂಗರಾಜು ಸತ್ಯ ಸ್ಟೀವ್ ಆಗಿಯೇ ಬಿಟ್ಟರಂತೆ. ಒಡ ಹುಟ್ಟಿದವರ, ಸ್ನೇಹಿತೆಯರ ಸಮಕ್ಷಮ ಎರಡು ಅಂತರ ಧರ್ಮಗಳ ನಡುವಿನ ಅಂತಾರಾಷ್ಟ್ರೀಯ ಮದುವೆ ನಡೆದೇ ಹೋಯಿತಂತೆ……………………..
ಆಂಕರ್: ಸ್ಟೀವ್ಗೆ ಹೃದಯ ಸಂಬಂಧಿ ಕಾಯಿಲೆ ಇದೆ. ತುಂಬಾ ಆಯಾಸವಾದರೆ ಸ್ಟೀವ್ಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸ್ಟೀವ್ಗೆ ಹೆಚ್ಚು ಹೊತ್ತು ಕಾರು ಚಲಾಯಿಸಲು ಸತ್ಯ ಅವಕಾಶ ನೀಡುವುದಿಲ್ಲ. ಅಮೆರಿಕಾದ ಗ್ರಾಮೀಣ ಪ್ರದೇಶದಲ್ಲಿ ನೂರಾರು ಕಿಲೋಮೀಟರ್ ಕಾರು ಚಲಾಯಿಸುವಾಗ ಸತ್ಯ ಹಾಗೂ ಸ್ಟೀವ್ ಪರಸ್ಪರ ಕೈ ಬದಲಾಯಿಸಿಕೊಂಡರು. ಸ್ಟೀವ್ ಡೆಮಾಕ್ರಟಿಕ್ ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದಾರೆ. ಅವರ ಮುಂದೆ ಬರಾಕ್ ಒಬಾಮಾರನ್ನು ಹೊಗಳುವುದನ್ನು ಸ್ಟೀವ್ ಸಹಿಸುವುದಿಲ್ಲವಂತೆ. ಆದ್ದರಿಂದ ಚಂದ್ರೇಗೌಡರಿಗೆ ಜಾಜರ್್ ಬುಷ್ ಅವರನ್ನು ಟೀಕಿಸಿ ಸ್ಟೀವ್ ಮುಂದೆ ಏನನ್ನೂ ಮಾತಾಡದಂತೆ ಸತ್ಯ ಕಿವಿ ಮಾತು ಹೇಳಿದರಂತೆ. ಜಾನ್ ಮೆಕೆನ್ನನ್ನು ಚಂದ್ರೇಗೌಡ ಹೊಗಳಿದಾಗ ಸ್ಟೀವ್ ಮುಖ ಅರಳಿತಂತೆ. ಈಗ ಇನ್ನೊಂದು ಬ್ರೇಕ್ ತೆಗೆದುಕೊಳ್ಳೋಣ, ಮುಂದಿನ ಭಾಗದಲ್ಲಿ ಸತ್ಯ- ಸ್ಟೀವ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯೋಣ.

ಆಂಕರ್: ವೆಲ್ಕಮ್ ಬ್ಯಾಕ್……ಈಗ ಸತ್ಯ – ಸ್ಟೀವ್ ಪರಸ್ಪರ ಮದುವೆಯಾದ ನಂತರ ಎಲ್ಲಿಗೆ ಹೋಗಿ ನೆಲೆಸಿದರು, ಹೇಗೆ ದೈನಂದಿನ ಬದುಕನ್ನು ಸಾಗಿಸುತ್ತಿದ್ದಾರೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ವಾಯ್ಸ್ ಓವರ್ 2:
ಹೀಗೆ ಮದುವೆಯಾದ ನಂತರ ಸತ್ಯ – ಸ್ಟೀವ್ ಬಂದು ನೆಲೆಸಿದ್ದು ಪೆನ್ಸಿಲ್ವೆನಿಯಾ ರಾಜ್ಯದ ಐರಿ ಎಂಬಲ್ಲಿನ ಗ್ರ್ಯಾಂಡ್ ವ್ಯಾಲಿಗೆ. ಇಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿದ್ದ ಸುಮಾರು 30 ಎಕರೆ ಜಮೀನನ್ನು ಖರೀದಿಸಿದ, ಸ್ಟೀವ್ ಅಲ್ಲೊಂದು ಕನಸು ಕಂಡಿದ್ದಾರೆ. ಸತ್ಯ ಅವರ ಜತೆ ಒಲವೇ ನಮ್ಮ ಬದುಕೆಂಬಂತೆ ಜೀವನ ಸಾಗಿಸಿದ್ದಾರೆ. ತಮ್ಮ ಜಮೀನಿನಲ್ಲಿದ್ದ ಮರಗಳನ್ನು ಕಟಾವ್ ಮಾಡಿಸಿ ಮನೆ ಕಟ್ಟಲು ಬಳಸಿದ್ದಾರೆ. ತಮ್ಮಲ್ಲಿದ್ದ ಅಳಿದುಳಿದ ಹಣವನ್ನು ಮನೆ ನಿಮರ್ಿಸಲು ವ್ಯಯ ಮಾಡಿದ್ದಾರೆ. ಆನಂತರ ಶುರುವಾಗಿದೆ ಇವರಿಬ್ಬರ ಆದರ್ಶದ ಬದುಕು………………..

ಬೈಟ್: ಸತ್ಯ ಸ್ಟೀವ್, ಅಮೆರಿಕಾದ ಕನ್ನಡತಿ
ಟಿಸಿಆರ್:
ವಾಯ್ಸ್ ಓವರ್ 2: 65 ರ ಹರೆಯದ ಸ್ಟೀವ್, 54 ರ ಹರೆಯದ ಸತ್ಯ ನಡುವೆ ಸುಮಾರು 14 ವರ್ಷಗಳ ದಾಂಪತ್ಯ ಜೀವನದಲ್ಲಿ ಒಮ್ಮೆಯೂ ಕದನ ನಡೆದಿಲ್ಲ. ಪರಸ್ಪರ ಅಪನಂಬಿಕೆ ಇಲ್ಲ ಇವರಿಬ್ಬರಲ್ಲಿ. ಅಸ್ಥಿರ ಭಾವನೆಗಳಿಲ್ಲ ಇವರಿಬ್ಬರ ನಡುವೆ. ಪರಸ್ಪರ ದೂಷಣೆ, ಕಿರುಚಾಟ, ಚೀರಾಟ ನಡೆದ ನೆನಪೇ ಇಲ್ಲವಂತೆ ಇವರಿಬ್ಬರಿಗೆ. ಸ್ಟೀವ್ – ಸತ್ಯರಿಗೆ ಎಂದೂ ಲೈಫ್ ಬೋರ್ ಎಂದು ಅನ್ನಿಸಿಯೇ ಇಲ್ಲವಂತೆ………….ಅಂಥಹ ಅದ್ಭುತ ಹೊಂದಾಣಿಕೆ ಇವರಿಬ್ಬರ ನಡುವೆ.
ಸತ್ಯ ಅವರ ಬಗ್ಗೆ ಕೇಳಿದರೆ ಸ್ಟೀವ್ ಭಾವುಕರಾಗುತ್ತಾರೆ. ಸತ್ಯ ನಿಜವಾದ ಅರ್ಥದಲ್ಲಿ ಸ್ಟೀವ್ಗೆ ಸಾಥಿಯಾ ಆಗಿದ್ದಾರೆಂದು ಅವರೇ ಹೇಳಿಕೊಳ್ಳುತ್ತಾರೆ. ಇದನ್ನು ಹೇಳಿಕೊಳ್ಳಬೇಕಾದರೆ ಸ್ಟೀವ್ ಕೆನ್ನೆಯ ಮೇಲೆ ಆನಂದ ಬಾಷ್ಪ ಜಿನುಗುತ್ತದೆ. ಸತ್ಯ ನಿಜವಾದ ಅರ್ಥದಲ್ಲಿ ಸಾಥಿಯಾ ಆಗಿದ್ದಾರೆ ಎನ್ನುತ್ತಾರೆ ಸ್ಟೀವ್.

ಬೈಟ್; ಸ್ಟೀವ್, ಅಮೆರಿಕಾ ಪ್ರಜೆ
 
ಸ್ಟೀವ್ನ ಆಸ್ತಿಯಲ್ಲಿ ತನಗೆಂದೂ, ಏನೂ ಬೇಡ ಎನ್ನುತ್ತಾರೆ ಸತ್ಯ. ಸ್ಟೀವ್ರ ಆಸ್ತಿಯಲ್ಲಿ ತನಗೆ ಯಾವುದೇ ಪಾಲು ಬೇಡವೆಂದು ಅವರು ಈಗಾಗಲೇ ಬರೆದುಕೊಟ್ಟಿದ್ದಾರೆ. ಸ್ಟೀವ್ನ ಮಗನನ್ನೇ ತಮ್ಮ ಮಗನೆಂದು ಸಾಕಿ ದೊಡ್ಡವನನ್ನಾಗಿ ಮಾಡಿದ್ದಾರೆ.

ಇಬ್ಬರೂ ಪರಸ್ಪರರ ಧಾಮರ್ಿಕ ಆಚರಣೆಗಳನ್ನು ಗೌರವಿಸುತ್ತಾರೆ. ಒಬ್ಬರು ಮತ್ತೊಬ್ಬರ ನಂಬಿಕೆ ಅಭಿಪ್ರಾಯಗಳಿಗೆ ಗೌರವ ಕೊಡುತ್ತಾರೆ. ಆಹಾರ ಪದ್ಧತಿಯನ್ನು ಇಷ್ಟಪಡುತ್ತಾರೆ. ಇಬ್ಬರಲ್ಲೂ ಯಾವುದೇ ರೀತಿಯ ಚಡಪಡಿಕೆ, ಬೇಸರದ ಭಾವನೆಯನ್ನು, ಅವಸರದ ನಡವಳಿಕೆಯನ್ನು ಅವರಲ್ಲಿ ನಾನು ಗಮನಿಸಲು ಸಾಧ್ಯವೇ ಆಗಲಿಲ್ಲ.
ಬೈಟ್: ಸ್ಟೀವ್……………
ಬೆಳಿಗ್ಗೆ ಎದ್ದರೆ ಮನೆ ಕಟ್ಟಲು ಇವರಿಬ್ಬರೇ ಕೆಲಸಕ್ಕಿಳಿಯುತ್ತಾರೆ. ಸತ್ಯ ಟೇಪ್ ಹಿಡಿದು ನಿಂತರೆ ಸ್ಟೀವ್ ಅಲಗೆಗಳನ್ನು ಕಟ್ ಮಾಡುತ್ತಾರೆ. ಸಂಜೆಯಾದರೆ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಊಟ ಮಾಡುವ ಮುನ್ನ ತನಗೆ ಅನ್ನ ನೀಡಿದ ದೇವರಿಗೆ ಸ್ಟೀವ್ ವಂದಿಸುತ್ತಾರೆ.

ಬೈಟ್ ಹಾಗೂ ಪ್ರಾರ್ಥನೆ ಫ್ಲೋ………..
ಸತ್ಯ ಅವರಿಗೆ ಮಕ್ಕಳೆಂದರೆ ಬಹಳ ಇಷ್ಟವಂತೆ. ಕಪ್ಪು ಬಣ್ಣದ ನನ್ನೊಂದಿಗೆ ಅಮೆರಿಕಾದ ಮಕ್ಕಳು ಹೇಗೆ ಹೊಂದಿಕೊಳ್ಳುತ್ತಾರೆಂದು ಸತ್ಯರಿಗೆ ಅನುಮಾನವಿತ್ತಂತೆ. ಆದರೆ ಇಲ್ಲಿನ ಬಿಳಿ ವರ್ಣದ ಮಕ್ಕಳು ನನ್ನೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡರೆನ್ನುತ್ತಾರೆ ಸತ್ಯ. ಸತ್ಯ – ಸ್ಟೀವ್ ಬಿಡುವಾದಾಗ ನೆರೆಹೊರೆಯವರ ಮನೆಗಳಿಗೆ ಭೇಟಿ ನೀಡುತ್ತಾರೆ. ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.

ಬೈಟ್: ಸ್ಟೀವ್, ಅಮೆರಿಕಾ ಪ್ರಜೆ
ಟಿಸಿಆರ್:

ಸತ್ಯರ ಮನೆಯಲ್ಲಿ ಕನ್ನಡದ ಮಸಾಲೆ ದೋಸೆ ಬೇಯುತ್ತದೆ. ಹೊಲದಲ್ಲಿ ಟಮೋಟೋ, ಮೂಲಂಗಿ ಬೆಳೆಯುತ್ತವೆ. ಸಾವಯವ ಗೊಬ್ಬರ ಸಿದ್ಧವಾಗುತ್ತದೆ.  ಸತ್ಯ -ಸ್ಟೀವ್ರ ಮನೆಯ ಗೋಡಾನ್ ಷೆಡ್ನ ಒಳ ಹೊಕ್ಕರೆ ಗನ್ಗಳ ಖಜಾನೆಯೇ ಇದೆ. ಬೇಟೆ ಆಡುವುದನ್ನು, ಟಕರ್ಿ ಕೋಳಿಗಳನ್ನು ಬೇಟೆಯಾಡಲು ಯಾವ ರೀತಿಯ ತಂತ್ರ ಮಾಡುತ್ತೇನೆಂದು ಸ್ಟೀವ್ ವಿವರಿಸುತ್ತಾರೆ. ಟಕರ್ಿ ಕೋಳಿಗಳನ್ನು ಆಕಷರ್ಿಸಲು ಯಾವ ರೀತಿಯ ಶಬ್ದ ಮಾಡಬೇಕಾಗುತ್ತದೆ ಎಂಬುದನ್ನು ಅವರೆ ಮಾಡಿ ತೋರಿಸುತ್ತಾರೆ.
ಫ್ಲೋ…………….
ಟಿಸಿಆರ್:

ಆಂಕರ್; ನೋಡಿದಿರಲ್ಲಾ ಸ್ಟೀವ್ ಎಷ್ಟು ಕ್ರಿಯೆಟೀವ್ ಅಂತ. ಟಕರ್ಿ ಕೋಳಿಗಳನ್ನು ಬೇಟೆಯಡುವುದರಲ್ಲಿ ಸ್ಟೀವ್ ಎತ್ತಿದ ಕೈ ಅಂತೆ. ಜತೆಗೆ ಮೀನು ಹಿಡಿಯುವುದರಲ್ಲೂ ಸ್ಟೀವ್ಗೆ ಹೆಚ್ಚಿನ ಆಸಕ್ತಿಯಂತೆ. ಮೀನು ಹಿಡಿಯಲು ಅವರು ಹತ್ತಾರು ಕಿಲೋಮೀಟರ್ ದೂರ ಇರುವ ಕ್ಯೋನಿ ಡ್ಯಾಂಗೆ ಹಲವಾರು ಬಾರಿ ಹೋಗಿ ಬಂದಿದ್ದಾರಂತೆ. ಹೆಚ್ಚು ಮೀನುಗಳನ್ನು ಹಿಡಿದರೆ ಸ್ಟೀವ್ ಅವುಗಳನ್ನು ನೆರೆಹೊರೆಯವರಿಗೆ ನೀಡುತ್ತಾರಂತೆ. ಬನ್ನಿ ಈಗ ಮತ್ತೊಂದು ಬ್ರೇಕ್ ತೆಗೆದುಕೊಳ್ಳೋಣ. ಮುಂದಿನ ಭಾಗದಲ್ಲಿ ಸ್ಟೀವ್ ಆಧುನಿಕ ಕೃಷಿ ಪುಪಕರಣಗಳನ್ನು ಹೇಗೆ ಬಳಸುತ್ತಾರೆಂದು ನೋಡೋಣ.

ಆಂಕರ್: ವೀಕ್ಷಕರೆ ವೆಲ್ಕಮ್ ಬ್ಯಾಕ್…ಈ ಭಾಗದಲ್ಲಿ ನೀವು ಸ್ಟೀವ್ ಆಧುನಿಕ ಯಂತ್ರವನ್ನು ಬಳಸಿ ಸೌದೆ ಸೀಳುವುದನ್ನು ನೊಡುತ್ತೀರಿ. ಜತೆಗೆ ಗ್ರಾಮೀಣ ಅಮೆರಿಕಾ ಹೇಗಿದೆ, ಅಲ್ಲಿರುವ ಸೆಲ್ಪ್ ಸವರ್ಿಸಿಂಗ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಿದ್ದಾರೆ ನಮ್ಮ ಚಂದ್ರೇಗೌಡ.

 
ವಾಯ್ಸ್ ಓವರ್ 3:
ಸ್ಟೀವ್ 65 ರ ಹರೆಯದಲ್ಲೂ ಯುವಕನಂತೆ ಕೆಲಸ ಮಾಡುತ್ತಾರೆ. ಸೌದೆ ಹೊಡೆಯುತ್ತಾರೆ. ತಮ್ಮಲ್ಲಿರುವ ಆಧುನಿಕ ಸೌದೆ ಹೊಡೆಯುವ ಯಂತ್ರವನ್ನು ಅವರು ಬಳಸಿ ತೋರಿಸಿದರು. ನಿಮ್ಮ ರೈತರಿಗೂ ಈ ಯಂತ್ರದ ಬಗ್ಗೆ ಮಾಹಿತಿ ನೀಡಿ ಎಂದರು ಸ್ಟೀವ್. ಚಿಕ್ಕ ಚೊಕ್ಕ ಸಾಮಿಲ್ ಯಂತ್ರವನ್ನು ತಮ್ಮ ಕಾರಿನ ಕೊಂಡಿಗೆ ಸಿಕ್ಕಿಸಿಕೊಂಡು ತಂದು ಸೌದೆಯನ್ನು ಹೇಗೆ ಸೀಳುವುದೆಂದು ತೋಡಿಸಿಯೇ ಬಿಟ್ಟರು. ನಿಮ್ಮ ರೈತರಿಗೆ ಈ ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿ ಎಂದು ಅವರು ನನಗೆ ಸಲಹೆ ನೀಡಿದರು. ಆ ಯಂತ್ರದ ಡೀಲರ್ ಬಳಿಗೂ ನನ್ನನ್ನು ಕರೆದೊಯ್ದಿದ್ದರು. ಸ್ಟೀವ್ರ ಈ ಪರೋಪಕಾರಿ ಗುಣ ನನಗೆ ಮೆಚ್ಚುಗೆಯಾಯಿತು.

ಫ್ಲೋ……………..

ಬಿಡುವಾದಾಗ ಸ್ಟೀವ್ ತಮ್ಮ ಹೊಲದಲ್ಲಿರುವ ಗೋಡಾನ್ ಶೆಡ್ಗಳನ್ನು ಹೊಕ್ಕು ಎಲ್ಲವನ್ನು ಸ್ಚಚ್ಛಗೊಳಿಸುತ್ತಾರೆ. ಅವರ ಗೋಡಾನ್ ಷಡ್ನ ಒಳ ಹೊಕ್ಕರೆ  ಅದೇ ಒಂದು ಪ್ರಪಂಚದಂತೆ ಗೋಚರಿಸುತ್ತದೆ. ಅದೊಂದು ಮೆಕಾನಿಕ್ ಷಾಪ್ನಂತೆ ಕಾಣುತ್ತದೆ ಮೊದಲಿಗೆ. ಅಲ್ಲಿ ಆಯಿಲ್, ಮೆಷಿನ್ ಟೂಲ್ಸ್… ಹೀಗೆ ದೊಡ್ಡ ಸಂಗ್ರಹವೇ ಇದೆ. ಸ್ಟೀವ್ ತಮ್ಮ ಮನೆ ಡಾಗ್ ಜತೆ ಮಾತಾಡ್ತಾರೆ, ಅದರ ಮೈದಡವಿ ಮುದ್ದಾಡುತ್ತಾರೆ. ವಾಕಿಂಗ್ಗೆ ಹೋಗುತ್ತಾರೆ. ಮನೆ ಮುಂದೆ ಬೆಳೆದು ಕಿರಿಕಿರಿ ಮಾಡುವ ಕಳೆಯನ್ನು ಕಟ್ ಮಾಡುತ್ತಾರೆ. ಚಚರ್ಿನ ಸಾರ್ವಜನಿಕ ಕೆಲಸ ಮಾಡುತ್ತಾರೆ. ಪೋಸ್ಟ್ ಆಫೀಸಿಗೆ ಹೋಗಿ ಪತ್ರಗಳ ಬಗ್ಗೆ ವಿಚಾರಿಸಿಕೊಂಡು ಬರುತ್ತಾರೆ. ಇದೇ ಸಂದರ್ಭದಲ್ಲಿ ನಿಮಗೆ ಆಸಕ್ತಿ ಇದ್ದರೆ ಅಮೆರಿಕಾದ ಗ್ರಾಮೀಣ ಪ್ರದೇಶದ ಪೋಸ್ಟ್ ಆಫೀಸುಗಳು ಹೇಗಿರ್ತವೆ, ಅಲ್ಲಿ ಏನು ಸೌಲಭ್ಯ ಇರುತ್ತದೆ ಎಂಬುದನ್ನೂ ನೀವು ನೋಡಬಹುದು ಇಲ್ಲಿ.
ಊರಿನ ಪ್ರತಿಯೊಬ್ಬರಿಗೂ ಪ್ರತ್ಯೇಕ ಲಾಕರ್ ಇರುತ್ತದೆ ಇಲ್ಲಿ. ಜನರ ಹೆಸರಿಗೆ ಬಂದ ಪತ್ರಗಳನ್ನು ಅವರವರ ಹೆಸರಿನಲ್ಲಿರುವ ಲಾಕರ್ಗಳ ಒಳಗೆ ಡ್ರಾಪ್ ಮಾಡುತ್ತಾರೆ ಇಲ್ಲಿ. ಜನರು ಅವರ ಲಾಕರ್ನ ಬೀಗ ತೆಗೆದು ಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ.

ಬೈಟ್:

ಸ್ಟೀವ್ ಬಿಡುವುದಾಗ ಮಡದಿ ಸತ್ಯರಿಗೆ ಟ್ರ್ಯಾಕ್ಟರ್ ಕಲಿಸುತ್ತಾರೆ. ಫ್ಲೋ……………ನಮ್ಮ ರೈತರಂತೆ ಅವರು ಗೊಬ್ಬರ ತಿರುವಾಕುತ್ತಾರೆ. ಇದಕ್ಕಾಗಿ ಅವರು ಅಮೆರಿಕಾದಲ್ಲಿ ಲಭ್ಯವಿರುವ ಆಧುನಿಕ ಯಂತ್ರಗಳನ್ನು ಬಳಸುತ್ತಾರೆ. ಸ್ಟೀವ್ ವ್ಯವಸಾಯ ಮಾಡುವುದನ್ನು ನೋಡಿದಾಗ ಅರೆರೆ ನಮ್ಮ ರೈತರಿಗೆ ಇಂಥಹ ಆಧುನಿಕ ಯಂತ್ರಗಳ ಸೌಲಭ್ಯಗಳು ದೊರಕುತ್ತಿಲ್ಲವಲ್ಲಾ  ಎಂದು ವ್ಯಥೆ ಯಾಗುತ್ತದೆ. ನಮ್ಮ ಶ್ರೀಮಂತ ರೈತರ ಬಳಿ ಹಣವಿದ್ದರೂ ತಂತ್ರಜ್ಞಾನ ಲಭ್ಯವಿಲ್ಲ ಎಂದು ಮನಸ್ಸಿನಲ್ಲಿ ಚಡಪಡಿಕೆ ಶುರುವಾಗುತ್ತದೆ.

ಸತ್ಯ – ಸ್ಟೀವ್ ನನ್ನನ್ನು ಹಳ್ಳಿಗಾಡೊಂದರ ರೈತರ ಮಾರುಕಟ್ಟೆಗೆ ಕರೆದೊಯ್ದಿದ್ದರು. ಅಲ್ಲಿರುವ ಆಮೀಶ್ ಜನರು, ಕೋಳಿ ಫಾರಂನ್ನು ತೋರಿಸಿದರು. ಅಲ್ಲಿರುವ ಕ್ಯೋನಿ ಡ್ಯಾಂನ್ನು ಪರಿಚಯ ಮಾಡಿಕೊಟ್ಟರು. ಕ್ಯೋನಿ ಡ್ಯಾಂನಿಂದ ನೀರು ದುಮ್ಮಿಕ್ಕಿ ಹೊರ ಹೊರಬರುವುದನ್ನು ಆನಂತರ ಅದು ವಿಶಾಲವಾಗಿ ಹರಿದು ಹೋಗುವುದನ್ನು ಗಮನಿಸಿದೆ ನಾನು. ಕ್ಯೋನಿ ಡ್ಯಾಂನ ಉದ್ದಗಲಕ್ಕೂ ನನ್ನನ್ನು ಕರೆದೊಯ್ದರು ಸ್ಟೀವ್. ಅಲ್ಲಿನ ಜನರು ಲೈಫನ್ನು ಬೋಟ್ಗಳಲ್ಲೇ ಹೇಗೆ ಎಂಜಾಯ್ ಮಾಡುತ್ತಾರೆ ಎಂಬುದನ್ನು ವಿವರಿಸಿದರು. ನದಿಯ ದಂಡೆಗಳಲ್ಲಿ ಮೊಬೈಲ್ ಷೆಡ್ಗಳನ್ನು ನಿಮರ್ಿಸಿಕೊಂಡು ಜನ ರಜಾ ದಿನಗಳಲ್ಲಿ ಅಲ್ಲಿ  ಹೇಗೆ ಬಂದು ನೆಲೆಸುತ್ತಾರೆ. ಹೇಗೆ ಲೈಫ್ ಎಂಜಾಯ್ ಮಾಡುತ್ತಾರೆ ಎಂಬ ವಿವರಗಳನ್ನು ನೀಡಿದರು. ಗ್ರ್ಯಾಂಡ್ ವ್ಯಾಲಿಯಲ್ಲಿ ಇರುವ ಸ್ವ ಸಹಾಯ ಪದ್ಧತಿ ಬಗ್ಗೆ ವಿವರಣೆ ನೀಡಿದರು. ಅಲ್ಲಿ ರೈತರು ತಾವು ಬೆಳೆದ ತರಕಾರಿ ಮೊಟ್ಟೆಯನ್ನು ನಿಗದಿತ ಸ್ಥಳಗಳಲ್ಲಿ ಮಾರಾಟಕ್ಕೆ ಇಟ್ಟಿರುತ್ತಾರೆ. ಸಾರ್ವಜನಿಕರು ತಾವಾಗಿಯೇ ಅಲ್ಲಿ ತರಕಾರಿ ತೂಕ ಮಾಡಿಕೊಂಡು ನಂತರ ಹಣವನ್ನು ಬಾಕ್ಸ್ ಒಂದರಲ್ಲಿ ಹಾಕಿ ಹೋಗುತ್ತಾರೆ. ಇದರಿಂದ ರೈತರೊಬ್ಬರು ತರಕಾರಿ ಮಾರಾಟ ಮಾಡಲು ದಿನವಿಡೀ ಕೆಲಸ ಕಾರ್ಯ ಬಿಟ್ಟು ಕುಳಿತುಕೊಳ್ಳಬೇಕಾಗಿಲ್ಲ ಎಂದರು ಸತ್ಯ. ಆಗ ನಮ್ಮಲ್ಲಿ ಜನ ತರಕಾರಿ ಮಾರಲು ದಿನವಿಡೀ ಕುಳಿತುಕೊಳ್ಳುವುದು ಕಣ್ಣ ಮುಂದೆ ಬಂತು ನನಗೆ.
ನಾವುಗಳು ಸತ್ಯ – ಸ್ಟೀವ್ ಅವರ ಆತ್ಮೀಯ ಗೆಳೆಯರೊಬ್ಬರ ಮೋಟಲ್ಗೆ ಒಂದಕ್ಕೆ ಹೋಗಿದ್ದೆವು. ಮೋಟಲ್ಗಳೆಂದರೆ ಅವು ಹೊಟೇಲ್ಗಳೇ ಆದರೂ ಅಲ್ಲಿ ಮಲಗಲು ಮಾತ್ರ ವ್ಯವಸ್ಥೆ ಇರುತ್ತದೆ. ಈ ಮೋಟೆಲ್ಗಳು ಸಾಮಾನ್ಯವಾಗಿ ಹೈವೇ ಪಕ್ಕದಲ್ಲಿರುತ್ತವೆ. ಜತೆಗೆ ಕಡಿಮೆ ಬೆಲೆಗೆ ದೊರಕುತ್ತವೆ. ಅಲ್ಲಿನ ರೆಸ್ಟೋರೆಂಟ್ನ ಮಾಲೀಕರು ನನ್ನೊಂದಿಗೆ ಮಾತನಾಡಿದರು.
ಬೈಟ್;
ಟಿಸಿಆರ್:
ಸ್ಟೀವ್ ಅವರ ಸ್ನೇಹಿತರ ಮನೆಗೆ ಹೋದಾಗ ಅವರು ಸಾಕಿದ್ದ ಕುದುರೆಗಳು ಅವರ ಮಾತುಗಳನ್ನು ಕೇಳುತ್ತಿದ್ದ ದೃಶ್ಯ ನನಗೆ ಕುತೂಹಲ ಕೆರಳಿಸಿತ್ತು. ಅವುಗಳ ಮಾಲೀಕರು ಕೂಗಿದರೆ ರಿಯಾಕ್ಟ್ ಮಾಡುತ್ತಿದ್ದವು. ನನಗೆ ಕೇವಲ ಶ್ವಾನ, ಢಾಲ್ಫಿನ್ ಹಾಗೂ ವೇಲ್ಗಳು ಮನುಷ್ಯನ ಮಾತು ಕೇಳುತ್ತವೆ ಎಂದುಕೊಂಡಿದ್ದೇ. ಆದರೆ ಕುದುರೆಗಳು ಮಾತು ಕೇಳುತ್ತವೆ ಎಂಬುದು ಆದಿನ ಮನವರಿಕೆ ಆಯಿತು.
 
ನಮ್ಮಲ್ಲಿ ನೆರೆಹೊರೆಯವರು ತಮ್ಮ ಜಮೀನುಳಿಗೆ ಕಾಲಿಡುವುದನ್ನು ಜನ ಸಹಿಸುವುದಿಲ್ಲ. ಆದರೆ ಸ್ಟೀವ್ ನೆರೆಹೊರೆಯವರಿಗೆ ತಮ್ಮ ಕೊಳದಲ್ಲಿ ಮೀನು ಹಿಡಿಯಲು ಅವಕಾಶ ಮಾಡಿಕೊಡುತ್ತಾರೆ. ಅವರ ಮಕ್ಕಳು ತಮ್ಮ ಹೊಲದಲ್ಲಿ ಆಡುವುನ್ನು, ಚೇಷ್ಟೆ ಮಾಡುವುದನ್ನು ಕಂಡು ಖುಷಿಪಡುತ್ತಾರೆ. ಯಾರಿಗೂ ತೊಂದರೆ ಕೊಡದ, ಅಸೂಯೆ, ಸಿಟ್ಟು, ಕೋಪ, ಆಸೆ ಬುರುಕುತನವಿಲ್ಲದ ಈ ದಂಪತಿಗಳು ಇತರರಿಗೆ ಆದರ್ಶವಲ್ಲವೇ? ಸಾವಿರಾರು ಕಿಲೋಮೀಟರ್ ದೂರ ಹಾರಿ ಹೋಗಿ ಏಕಾಂಗಿಯಾಗಿ ಸ್ಟೀವ್ರ ಕೈಹಿಡಿದ ಸತ್ಯರ, ಜೀವನದಲ್ಲಿ ಪ್ರೀತಿಯ ನದಿಯನ್ನು ಹರಿಸಿದ, ಒಲವಿನ ಸೌಧವನ್ನು ನಿಮರ್ಿಸಿದ, ಸ್ಥಿರ ಭಾವನೆಗಳ ಅಣೆಕಟ್ಟೆಯನ್ನು ಕಟ್ಟಿ ಕೊಟ್ಟ ಸ್ಟೀವ್ಗೆ ಒಂದು ದೊಡ್ಡ ಹ್ಯಾಟ್ಸ್ ಅಪ್ ಎಂದಿತು ಮನಸ್ಸು. ಆದ್ದರಿಂದಲೇ ಸತ್ಯ- ಸ್ಟೀವ್ ದಾಂಪತ್ಯ ಜೀವನವನ್ನು ನಾನು ಒಂದು ಆದರ್ಶಕ್ಕೆ ಹೋಲಿಸಿದೆ.

 
 
   
.

Wish u happy, prosperous UGADAI, MNC recollects Lasvegas, Hoover dam

Rahul Dravid to campaign for AIDS awareness

Matte Nenapadaru Vivek Rai, what’s up at your side sir? Khushiyayitu nimma reply noodi

Star singer Gurukiran celebrates his daughter Shravya’s birthday, Sharada with Priyanka Upendra

Dharwad Mayur resortnalli Muttappa Rai meets MNC

 • ಪುಟಗಳು

 • Flickr Photos

 • ಮಾರ್ಚ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಫೆಬ್ರ   ಏಪ್ರಿಲ್ »
   123456
  78910111213
  14151617181920
  21222324252627
  28293031  
 • ವಿಭಾಗಗಳು