ಸಾರಿಗೆ ಸಚಿವ ಆರ್. ಅಶೋಕ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿ ಹೊರಹೊಮ್ಮಿರುವುದು

ಆಂಕರ್: ಬಿಬಿಎಂಪಿ ಚುನಾವಣೆಯಿಂದ ಸಾರಿಗೆ ಸಚಿವ ಆರ್. ಅಶೋಕ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿ ಹೊರಹೊಮ್ಮಿರುವುದು ಬಿಜೆಪಿಯಲ್ಲಿ ಆಂತರಿಕವಾಗಿ ತಳಮಳಗಳನ್ನು ಸೃಷ್ಟಿಸದೇ ಹೋದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಹಿರಿಯ ನಾಯಕರಲ್ಲಿ ನಡುಕವನ್ನು ಉಂಟುಮಾಡಿದೆ. ತಮ್ಮ ಪಕ್ಷದ ಪರಂಪರಾಗತ ಮತಗಳನ್ನು ಅಶೋಕ್ ಮುಂಬರುವ ಚುನಾವಣೆಗಳಲ್ಲಿ ಎಲ್ಲಿ ಕಸಿದುಬಿಡುವರೋ ಎಂಬ ಆತಂಕ ಈ ಪಕ್ಷಗಳ ನಾಯಕರಲ್ಲಿ ಈಗ ಮನೆ ಮಾಡಿದೆ. ಫ್ಯಾಕೇಜ್ ಫಾಲೋಸ್…………… ವಾಯ್ಸ್ ಓವರ್ 1: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮಲು ರಾಜಕಾರಣದಲ್ಲಿ ನಾಲ್ಕು ದಶಕಗಳೇ ಬೇಕಾಯಿತಂತೆ. ಆದಿ ಚುಂಚನಗಿರಿ ಬಾಲಗಂಗಾಧರ ಸ್ವಾಮೀಜಿ 1994 ರಲ್ಲಿ ಕಬ್ಬನ್ಪಾಕರ್್ನಲ್ಲಿ Chinnappa Reddy ಆಯೋಗದ ವರದಿ ಜಾರಿ ವಿರುದ್ಧ ಬೃಹತ್ ಸಾರ್ವಜನಿಕ ಸಭೆ ಆಯೋಜಿಸಿದ್ದರು. ಆ ಸಭೆಯಲ್ಲಿ ದೇವೇಗೌಡರು ಮುಂದಿನ ಒಕ್ಕಲಿಗ ನಾಯಕರೆಂದು ಘೋಷಿಸಿದರು. ಆನಂತರವೇ ದೇವೇಗೌಡರು ರಾಜಕೀಯದಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದರು. ಆನಂತರವೇ 1995 ರಲ್ಲಿ ಮುಖ್ಯಮಂತ್ರಿ, ಆನಂತರ ಪ್ರಧಾನಮಂತ್ರಿಯೂ ಆದರು. ಎಸ್. ಬಂಗಾರಪ್ಪ ಮುಖ್ಯಮಂತ್ರಿಗಾದಿಯಿಂದ ಕೆಳಗಿಳಿದ ನಂತರ ಎಸ್. ಎಂ.ಕೃಷ್ಣರಿಗೆ ಕಾಂಗ್ರೆಸ್ ಪಕ್ಷ ಕೈಕೊಟ್ಟಿತು. 1999 ರಲ್ಲಿ ತಿರುಗಿ ಬಿದ್ದ ಒಕ್ಕಲಿಗ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿ ಕೃಷ್ಣರನ್ನು ಮುಖ್ಯಮಾಂತ್ರಿಯಾಗುವಂತೆ ನೋಡಿಕೊಂಡಿತು. ಈ ಹಿನ್ನೆಲೆಯಲ್ಲಿಯೇ ಆರ್. ಆಶೋಕ್ಗೆ ಶತಾಯಗತಾಯ ಒಮ್ಮೆ ಒಕ್ಕಲಿಗ ಸಮುದಾಯದ ಪ್ರಬಲ ನಾಯಕನೆಂದು ಕರೆಯಿಸಿಕೊಳ್ಳಬೇಕೆಂಬ ಅದಮ್ಯ ಆಸೆಯಿದೆ. ಆ ಮೂಲಕ ಒಕ್ಕಲಿಗ ಸಮುದಾಯ ತಮ್ಮ ಬೆನ್ನ ಹಿಂದೆ ಇದೆ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ಗೆ ರವಾನಿಸುವುದು ಅವರ ಉದ್ದೇಶವಾಗಿದೆ. ರಾಜಕೀಯ ಕೋಟಾ ವಿಷಯ ಬಂದಾಗ ಪ್ರಬಲ ಒಕ್ಕಲಿಗ ಜಾತಿ ಹೆಸರಿನಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳಬೇಕೆಂಬ ಲೆಕ್ಕಾಚಾರವೂ ಅವರಿಗಿದೆ. ಕಾಂಗ್ರೆಸ್ನಲ್ಲಿ ಸದ್ಯಕ್ಕೆ ಡಿ.ಕೆ. ಶಿವಕುಮಾರ್, ಜೆಡಿಎಸ್ನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಬಿಟ್ಟರೆ ಆಧಿಕಾರದಲ್ಲಿರುವ ಬಿಜೆಪಿಯಲ್ಲಿ ಈಗ ಪ್ರಬಲ ಒಕ್ಕಲಿಗ ನಾಯಕ ಆರ್. ಅಶೋಕೇ ಆಗಿದ್ದಾರೆ. ಇದಕ್ಕೆ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದ ಒಕ್ಕಲಿಗ ಸಮುದಾಯದ ಅಭ್ಯಥರ್ಿಗಳೇ ಸಾಕ್ಷಿಯಾಗಿ ನಿಂತಿದ್ದಾರೆ. ಬಾರಿ ಕಡಿಮೆ ಅವಧಿಯಲ್ಲಿ ಈ ಮಟ್ಟಕ್ಕೆ ಆಶೋಕ್ ಬೆಳೆದಿರುವುದು ಬೇರೆ ಪಕ್ಷದ ನಾಯಕರಿಗೆ ಸಹಿಸಲಾಗದ ಸತ್ಯವಾಗಿದೆ. ಬೈಟ್: ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಂಮಂತ್ರಿ ಟಿಸಿಆರ್: ನಗರ ಕೇಂದ್ರಿತ ಮತದಾರರ ಒಲವನ್ನು ಗಳಿಸಿಕೊಂಡಿರುವ ಆರ್. ಆಶೋಕ್, ಮುಂಬರುವ ಗ್ರಾಮೀಣ ಭಾಗದ ಚುನಾವಣೆಗಳಲ್ಲಿ ತಮ್ಮ ಅದೃಷ್ಷ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಒಕ್ಕಲಿಗರ ಗಂಡು ಮೆಟ್ಟಿದ ನಾಡು ಮಂಡ್ಯದ ಉಸ್ತುವಾರಿ ವಹಿಸಿಕೊಂಡಿರುವ ಅವರು, ಮಂಡ್ಯದಲ್ಲಿ ಶತಾಯಗತಾಯ ಬಿಜೆಪಿ ಬಾವುಟ ಹಾರಿಸಲು ಶತ ಪ್ರಯತ್ನ ಮಾಡಲಿದ್ದಾರೆ. ಇದೇ ಸಂದರ್ಭವನ್ನು ಕಾಯುತ್ತಿರುವ ಹೆಚ್.ಡಿ. ಕುಮಾರಸ್ವಾಮಿ, ಮಂಡ್ಯದಲ್ಲಿ ಅಶೋಕ್ಗೆ ಮುಖಭಂಗವಾಗುವಂತೆ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬೈಟ್: ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಟಿಸಿಆರ್: ಜೆಡಿಎಸ್, ಕಾಂಗ್ರೆಸ್ನಲ್ಲಿ ಮಾದೇಗೌಡ, ನಾಗೇಗೌಡ, ಬಚ್ಚೇಗೌಡ, ಬೈರೇಗೌಡ, ವೈ.ಕೆ. ರಾಮಯ್ಯ, ಪುಟ್ಟಸ್ವಾಮಿಗೌಡ, ಚಂದ್ರಶೇಖರಮೂತರ್ಿ, ಬಿ.ಎಲ್. ಶಂಕರ್, ಹೆಚ್.ಸಿ. ಶ್ರೀಕಂಠಯ್ಯ, ವೆಂಕಟಗಿರಿಗೌಡರಂಥ ಘಟಾನುಘಟಿ ನಾಯಕನ್ನು ರಾಜಕೀಯವಾಗಿ ಮುಗಿಸಿ ಹಾಕಿದ ದಾಖಲೆ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ, ಆರ್. ಅಶೋಕ್ ಸವಾಲಗಬಲ್ಲರೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಮಂಡ್ಯದಲ್ಲಿ ಅಶೋಕ್ ರಾಜಕೀಯ ಗೆದ್ದರೆ ದೇವೇಗೌಡರನ್ನೇ ಮಣಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇಲ್ಲದಿದ್ದರೆ ಇವರೆಲ್ಲರ ಪಟ್ಟಿಗೆ ಅಶೋಕ್ ಸೇರಲಿದ್ದಾರೆ ಜತೆಗೆ ಬೆಂಗಳೂರಿಗಷ್ಟೇ ಸೀಮಿತವಾಗಲಿದ್ದಾರೆ.

Advertisements

1 ಟಿಪ್ಪಣಿ

 1. you r right…!
  9845625193


Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಏಪ್ರಿಲ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಮಾರ್ಚ್   ಮೇ »
   123
  45678910
  11121314151617
  18192021222324
  252627282930  
 • ವಿಭಾಗಗಳು