ಅವಕಾಶಗಳ ಅಮರಾವತಿ ಅಮೆರಿಕಾ

ಅಮೆರಿಕಾ………..ಅಮೆರಿಕಾ………….

ಸ್ಲಗ್: ಅಮೆರಿಕಾ ಪ್ರವಾಸ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ

ಡೇಟ್: 20 -02- 09

 ಬೆಂಗಳೂರು

 ಆಂಕರ್: ಅವಕಾಶಗಳ ಅಮರಾವತಿ ಅಮೆರಿಕಾ ಅಂತಾರೆ. ಅಂಥಹ ಅಮೆರಿಕಾಕ್ಕೆ ಈಗ ಹೋಗಿ ಬರುವವರ ಸಂಖ್ಯೆ ಸಾವಿರಾರು. ಹೀಗೆ ಇತ್ತೀಚೆಗೆ ಹೋಗಿ ಬಂದವರಲ್ಲಿ ನಮ್ಮ ಸಹೊದ್ಯೋಗಿ ಎಂ. ಎನ್. ಚಂದ್ರೇಗೌಡ ಸಹ ಒಬ್ಬರು. ಅವರು ಬೆಂಗಳೂರಿನಿಂದ ಹೊರಟು ಅಮೆರಿಕಾ ತುಂಬಾ ಓಡಾಡಿ ಬರುವಷ್ಟರಲ್ಲಿ ಸುತ್ತಿದ್ದು ಬರೋಬರಿ 54 ಸಾವಿರ ಕಿಲೋ ಮೀಟರ್. ಭಾರತಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗಿರುವ ಅಮೆರಿಕಾದ ಎಲ್ಲಾ ಪ್ರಮುಖ ನಗರಗಳ ಸುತ್ತುವುದು ಅಷ್ಟು ಸುಲಭದ ಕೆಲಸವಲ್ಲ. ಅಮೆರಿಕಾದ ಪೂರ್ವದಿಂದ ಪಶ್ಚಿಮ ಕರಾವಳಿಯವರೆಗೆ ತಲುಪಲು ಬರೋಬರಿ 10 ಗಂಟೆ ವಿಮಾನ ಪ್ರಯಾಣ ಮಾಡಬೇಕಾಗುತ್ತದೆ. ಒಂಟಿತನ, ಅಪರಿಚಿತ ಊರು, ಬೇರೆ ಭಾಷೆ, ಇಷ್ಟವಾಗದ ಊಟ, ಜತೆಗೆ ಯಮಭಾರದ ಲಗೇಜು ಹೊತ್ತು ಸಾವಿರಾರು ಮೈಲಿ ಓಡಾಡಿ ಬಂದಿದ್ದಾರೆ ಚಂದ್ರೇಗೌಡ. ಹೀಗೆ ಓಡಾಡಿ ಬಂದ ಅವರು ಅಮೆರಿಕಾದ ಕೆಲವು ಅದ್ಭುತ ಸ್ಥಳಗಳನ್ನು, ವ್ಯಕ್ತಿಗಳನ್ನು ಚಿತ್ರಿಸಿಕೊಂಡು ಬಂದಿದ್ದಾರೆ. ಬನ್ನಿ ಅವುಗಳಲ್ಲಿ ಈಗ ಡಿಸ್ನಿ ವರ್ಡನಲ್ಲಿರುವ ಸೀವಡರ್್ ನೋಡೋಣ……………..

 ಫ್ಯಾಕೇಜ್ ಫಾಲೋಸ್……………..

ವಾಯ್ಸ್ ಓವರ್ 1: “ಸೀವಡರ್್”………….ಮಕ್ಕಳಿಗೆ ಸಿಹಿಯಾದ…. ದೊಡ್ಡವರಿಗೆ ಖುಷಿಕೊಡುವ ಅದ್ಭುತ ತಾಣ ಇದು. ಅಮೆರಿಕಾದ ಉತ್ತರ ತುದಿಯಲ್ಲಿರುವ ಫ್ಲೋರಿಡಾ ರಾಜ್ಯದ ಅಲರ್ಾಂಡೊನಲ್ಲಿದೆ ಸೀವಡರ್್………….ಪ್ರತಿದಿನ ಇಲ್ಲಿಗೆ ಬರೋಬರಿ ಒಂದು ಲಕ್ಷ ಜನ ಭೇಟಿ ನೀಡುತ್ತಾರೆ. ಅವರಲ್ಲಿ ಮಕ್ಕಳೇ ಅಧಿಕ. ಏಕೆಂದರೆ ಮಕ್ಕಳಿಗಾಗಿಯೇ ವಾಲ್ಟ್ ಡಿಸ್ನಿ ಸುಮಾರು 50 ವರ್ಷಗಳ ಹಿಂದೆ ವಿಶೇಷವಾಗಿ ನಿಮರ್ಿಸಿದ ತಾಣ. ಪ್ರತಿ ವರ್ಷ ಈ ತಾಣ ಗಳಿಸುವ ಆದಾಯ 100 ಕೋಟಿಗೂ ಅಧಿಕ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಈ ಸೀವಡರ್್ ಮಾಯಾನಗರಿಯಲ್ಲಿ ಹಲವಾರು ಬಗೆಯ ಥೀಮ್ ಪಾಕರ್್ಗಳಿವೆ. ಕನಿಷ್ಠ ಒಂದು ವಾರವಾದರೂ ಬೇಕು ಎಲ್ಲಾ ಥೀಮ್ ಪಾಕರ್್ಗಳನ್ನು ಒಮ್ಮೆ ನೋಡಲು. ಅದರಲ್ಲಿ ನಾನು ಆಯ್ದು ಕೊಂಡಿದ್ದು ಸೀವಡರ್್ನ ರೈಡ್. ಡಿಸ್ನಿ ವಲ್ರ್ಡವರೆಗೂ ಪ್ರವಾಸಿಗರು ಬೇರೆ ವಾಹನಗಳಲ್ಲಿ ಬಂದರೆ ಅಲ್ಲಿಂದ ಒಂದೊಂದು ರೈಡ್ಗಳಿಗೆ ಮಾನೋ ರೈಲಿನಲ್ಲಿ, ವಿಶೇಷವಾದ ಬಸ್ಗಳಲ್ಲಿ ಅವರನ್ನು ಕರೆದೊಯ್ಯಲಾಗುತ್ತದೆ. 70 ಡಾಲರ್ ತೆತ್ತು ಟಿಕೆಟ್ ಪಡೆದರೆ ಕಾಲ ಕಳೆದು ಹೋಗುವುದೇ ಗೊತ್ತಾಗುವುದೇ ಇಲ್ಲಾ ಇಲ್ಲಿ. ಸೀವಡರ್್ನಲ್ಲಿ ನಾನು ಮೊದಲು ಹೊಕ್ಕಿದ್ದು ಡಾಲ್ಫಿನ್ ಷೋಗೆ….ಅದೊಂದು ಅದ್ಭುತ ಲೋಕ…ಢಾಲ್ಫಿನ್ಗಳು ಮನುಷ್ಯನ ಮಾತು ಕೇಳುವ.. ಮನುಷ್ಯ ಅವುಗಳಿಮದ ಕೆಲಸ ತೆಗೆಯುವ ಪ್ರದರ್ಶನ ಅದು…………………….. ಕ್ಯಾಸೆಟ್ ನಂ. ಎಂಡಿ6 3143 ಫ್ಲೋ……..ಟಿಸಿಆರ್: 00: 50: 05 ಟು 00: 59: 45……………. ಢಾಲ್ಫಿನ್ಗಳು ಮನುಷ್ಯರಂತೆ ವತರ್ಿಸುತ್ತವೆ. ಕುಣಿಯುತ್ತವೆ, ಕುಪ್ಪಳಿಸುತ್ತವೆ. ಆಕಳಿಸುತ್ತವೆ. ಪೈಲ್ವಾನರು ಗುಂಡಿನ ತೂಕವನ್ನು ಎತ್ತಿದಂತೆ, ಟ್ರೈನರ್ಗಳನ್ನು ಹೊತ್ತು ಮೇಲಕ್ಕೆ ಚಿಮ್ಮುತ್ತವೆ. ಢಾಲ್ಫಿನ್ಗಳ ಮೈದಡವಿ ಬಾಯಿತುಂಬಾ ಸಣ್ಣ ಮೀನುಗಳ ಆಹಾರ ಹಾಕಿದರೆ ಮತ್ತೊಂದು ಸಾಹಸ ಮಾಡಲು ಅಣಿಯಾಗುತ್ತವೆ. ಟ್ರೈನರ್ಗಳಿಗೆ ಸವಾರಿ ಮಾಡಲು ಅವಕಾಶ ಮಾಡಿಕೊಡುತ್ತವೆ. ಡೈ ಹೊಡೆಯಲು ಸೂಚಿಸಿದರೆ ಡೈ ಹೊಡೆದು ಮತ್ತೊಂದು ಕಡೆ ಏಳುತ್ತವೆ. ಮುತಿಯ ತುದಿಗೆ ಮನುಷ್ಯನನ್ನು ನಿಲ್ಲಿಸಿಕೊಂಡು ರಾಕೆಟ್ನಂತೆ ಮೇಲೆಳುತ್ತವೆ. ಪ್ರೇಕ್ಷಕರತ್ತ ನೀರು ಚಿಮ್ಮಿಸಿ ಚಿಣ್ಣರು ಚೀರಾಡುವಂತೆ ಮಾಡುತ್ತವೆ. ಢಾಲ್ಫಿನ್ಗಳ ಇಡೀ ಷೋ ಮನುಷ್ಯ ಜಲಚರಗಳಿಗೂ ಮಾತುಕಲಿಸಬಲ್ಲ. ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲಾ ಎನಿಸುತ್ತದೆ. ಭಕ್ಷಣೆ ಬಳಸುವ ಜಲಚರಗಳು ಮಾತು ಕಲಿಯಬಲ್ಲವಾ? ಮನುಷ್ಯನಂತೆ ವೃತ್ತಿಪರತೆ ಮೆರೆಯಬಲ್ಲವಾ? ಎಂದು ಸೋಜಿಗ ಮೂಡುತ್ತದೆ. ಮಕ್ಕಳ ಜತೆ ದೊಡ್ಡವರಿಗೂ ಈ ಷೋ ಖುಷಿಕೊಡುತ್ತದೆ. ಷೋ ನೋಡಿದ ನಂತರ 30 ಕೋಟಿಗೂ ಹೆಚ್ಚು ಮಕ್ಕಳಿರುವ ಭಾರತದಲ್ಲೇಕೆ ಇಂಥದ್ದೊಂದು ಕಿನ್ನರ ಲೋಕ ನಿಮರ್ಿಸಲು ಸಾಧ್ಯವಾಲಿಲ್ಲ ಎಂದು ಚಡಪಡಿಕೆ ಶುರುವಾಗುತ್ತದೆ. ನಮ್ಮ ದೇಶದ ಕೋಟ್ಯಂತರ ಜನ ಇಂಥಹ ಷೋ ನೋಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಲ್ಲ ಎಂದು ಮನಸ್ಸು ಭಾರವಾಗುತ್ತದೆ. ಷೋ ಮುಗಿದ ನಂತರ ಟ್ರೇನರ್ಗಳು ಹೊರಬಂದು ನಿಲ್ಲುತ್ತಾರೆ. ಮಕ್ಕಳು ಅವರ ಆಟೋಗ್ರಾಫ್ಗಾಗಿ ಕೈಚಾಚುತ್ತಾರೆ…………. ವಿಶ್ವ ಹೇಗೆ ವಿಕಾಸವಾಯಿತೆಂದು ತಿಳಿಸುವ ಗೋಳಾಕೃತಿಯ ಎಫಿಕಾಟ್ ಸೆಂಟರ್ನಲ್ಲೊಂದು ಸುತ್ತುಹಾಕಿ ಹೊರಬಂದರೆ ವಿಶ್ವದ ಎಲ್ಲಾ ದೇಶಗಳ ಸಂಸ್ಕತಿಯನ್ನು ಪರಿಚಯಿಸುವ ಸ್ಟಾಲ್ಗಳು ಅಲ್ಲಿವೆ. ಅಲ್ಲಿರುವ ಸಣ್ಣ ಬೋಟ್ನಲ್ಲಿ ಕುಳಿತರೆ ಥೀಮ್ ಪಾಕರ್್ನ ಯಾವುದೇ ಸ್ಟಾಲ್ಗಳಿಗೆ ಪ್ರಮಾಣ ಮಾಡಬಹುದಾಗಿದೆ. ಅಲ್ಲಿ ಆಯಾ ದೇಶದ ಕಲಾವಿದರು ಅವರ ಸ್ಟಾಲ್ಗಳ ಮುಂದೆ ಪ್ರದರ್ಶನ ನೀಡುತ್ತಾರೆ. ಜಪಾನ್, ಚೀನಾ, ರಷ್ಯಾ ಹೀಗೆ ವಿಶ್ವದ ಇಲ್ಲಾ ದೇಶಗಳ ಕಲಾವಿದರು ಇಲ್ಲಿ ಪ್ರದರ್ಶನ ನೀಡುತ್ತಾರೆ. ಅಲ್ಲಿ ಪುಟ್ಟ ಮಸ್ಕಟ್ ದೇಶದ ಕಲಾವಿದೆ ಪ್ರದಶರ್ಿಸಿದ ನೃತ್ಯ ದ ತುಣುಕು ಇಲ್ಲಿದೆ ನೋಡಿ. ಆಕೆಯ ಸರಳ, ಸುಂದರ ನೃತ್ಯ ಮೈ ಮರೆಸುತ್ತದೆ. ಆನಂತರ ನೆರೆಯ ಚೀನಾ ದೇಶದ ಹುಡುಗಿ ಒಂದೇ ಚಕ್ರದ ಸೈಕಲ್ ಮೇಲೆರಿ ಸರ್ಕಸ್ ಮಾಡಿ ಮುದಗೊಳಿಸುತ್ತಾಳೆ. ಚೀನಿಯರು ಕಸರತ್ತು ಮಾಡುವುದರಲ್ಲಿ ಎತ್ತಿದ ಕೈ ಎಂದು ಸಾಬೀತು ಮಾಡುತ್ತಾಳೆ. ಆಂಕರ್: ಸೀವಡರ್್ನಲ್ಲಿ ಒಂದು ಸ್ಟಾಲ್ನಿಂದ ಮತ್ತೊಂದು ಸ್ಟಾಲ್ಗೆ ನಡೆದಾಡಲು ಮಕ್ಕಳಿಗೆ ಧಣಿವಾಗುತ್ತದೆ. ಆದ್ದರಿಂದ ಅಲ್ಲಿ ದೊರೆಯುವ ಬ್ಯಾಟರಿ ಚಾಲಿತ ಸೈಕಲ್ಗಳನ್ನು ಬಾಡಿಗೆ ಪಡೆದು ಮಕ್ಕಳನ್ನು ಅಲ್ಲೆಲ್ಲಾ ಸುತ್ತಾಡಿಸಬಹುದಾಗಿದೆ. ಅಲ್ಲಿರುವ ಬೋಟ್ನಲ್ಲಿ ದೊಡ್ಡವರು ಸುತ್ತಾಡಬಹುದಾಗಿದೆ. ಈಗ ಒಂದು ಬ್ರೇಕ್ ತೆಗೆದುಕೊಳ್ಳೋಣ…………..ಮುಂದಿನ ಭಾಗದಲ್ಲಿ ನೀವು ವೇಲ್ಗಳ ಪ್ರದರ್ಶನವನ್ನು ನೋಡಬಹುದಾಗಿದೆ. ಈಗ ಒಂದು ಬ್ರೇಕ್. ಆಂಕರ್: ಢಾಲ್ಫಿನ್ಗಳಂತೆಯೇ ವೇಲ್ಗಳೂ ಅದ್ಭುತ ಪ್ರದರ್ಶನ ನೀಡುತ್ತವೆ. ಬನ್ನಿ ಅವುಗಳು ಮಾಡುವ ಕಸರತ್ತು ಏನು ಎಂಬುದನ್ನು ಈಗ ನೋಡೋಣ. ವಾಯ್ಸ್ ಓವರ್ 2: ಚೀನಿ ಬೆಡಗಿಯ ಸರ್ಕಸ್ ನೋಡಿ ಮುಂದೆ ಬಂದರೆ ಎದುರಾಗುತ್ತದೆ ಶಾಮೂ ಅಡ್ವೆಂಚರ್ ಷೋ ಪ್ರಸಶರ್ಿಸುವ ಮತ್ತೊಂದು ಥೀಮ್ ಪಾಕರ್್…………..ಡಾಲ್ಫಿನ್ಗಳಿಗಿಂತಲೂ ಬಲಿಷ್ಠವಾಗಿರುವ ವೇಲ್ಗಳ ಪ್ರರ್ದಶನ ಇದು. …. ಕನಿಷ್ಠ ಅರ್ಧ ಗಂಟೆಗೂ ಮುನ್ನವೇ ಇಂಥಹ ತೀಮ್ ಪಾಕರ್್ಗಳಲ್ಲಿ ಜನ ಬಂದು ಕಾದು ಕುಳಿತುಕೊಳ್ಳುತ್ತಾರೆ. ಷೋ ಆರಂಭವಾದ ನಂತರ ಯಾರಿಗೂ ಪ್ರವೇಶವಿಲ್ಲ ಇಲ್ಲಿ. ಗೇಟ್ ಬಂದ್ ಆಗುತ್ತದೆ. ಮತ್ತೊಂದು ಲೋಕ ತೆರೆದುಕೊಳ್ಳುತ್ತದೆ. ಟಿಸಿಆರ್: ಎಂಟು ನಿಮಿಷಗಳ ಷೋ………ಫ್ಲೋ……. ಡಾಲ್ಫಿನ್ಗಳ ಸಾಹಸದ ಚೇಷ್ಟೆಯನ್ನು ಇಲ್ಲಿ ವೇಲ್ಗಳೂ ಮಾಡುತ್ತವೆ. ಕಪ್ಪು ಬಿಳುಪಿನ ದೊಡ್ಡ ವೇಲ್ಗಳು ಕಣ್ಣುಗಳಿಗೆ ಮತ್ತಷ್ಟು ಮುದ ನೀಡುತ್ತವೆ ಇಲ್ಲಿ. ತಿಳಿ ನೀಲಿ ಬಣ್ಣದ ಕೊಳ ಮನಸ್ಸಿಗೆ ಆಹ್ಲಾದಕರ ಎನಿಸುತ್ತದೆ. ಬಣ್ಣದ ಉಡುಪು ತೊಟ್ಟ ಟ್ರೇನರ್ಗಳು ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಯಮಭಾರದ ವೇಲ್ಗಳು ಒಮ್ಮೆ ಕುಪ್ಪಳಿಸಿ ನೆಗೆದರೆ ನೀರು ಕೊಳದಿಂದ ತುಳುಕುತ್ತದೆ. ಟ್ರೇನರ್ಗಳನ್ನು ಮೈಮೇಲೆ ಹೊತ್ತು ಕೊಳವನ್ನು ಸುತ್ತುಹಾಕುವ ವೇಲ್ಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸುತ್ತಾರೆ. ಶಾಮೂ ಶಾಮೂ ಎಂದು ಕೂಗಿ ಹುರಿದುಂಬಿಸುತ್ತಾರೆ. ಡಾಲ್ಫಿನ್ಗಳಂತೆ ವೇಲ್ಗಳಿಗೆ ಒಂದಿಡಿ ಬಿಗಿ ಅಪ್ಪುಗೆ, ಬಾಯಿಗೊಂದು ಚೂರು ಆಹಾರ ಬಿದ್ದರೆ ಕೊಳದ ತುಂಬೆಲ್ಲಾ ಮೆರವಣಿಗೆ ಹೋಗುತ್ತವೆ. ಗಗನಕ್ಕೆ ಚಿಮ್ಮಿ…ಅಬ್ಬಾ ಎಂದು ಬಾಯ್ತೆರೆಯುವಂತೆ ಮಾಡುತ್ತವೆ. ಮುಳುಗು ಹಾಕುತ್ತವೆ. ಕೊಳದ ಫೋಟರ್ಿಗೋಗೆ ನೆಗೆದು ನಾನು ನಿಮ್ಮೆಡೆಗೆ ಬರಲು ಸಿದ್ಧ ಎನ್ನುತ್ತವೆ. ಅಬ್ಬಾ ಇದನ್ನೆಲ್ಲಾ ಜಲಚರಗಳೇ ಮಾಡುತ್ತವೆಯೇ? ಹೇಗೆ ಇವುಗಳಿಗೆ ಟ್ರೇನಿಂಗ್ ನೀಡಲಾಗುತ್ತದೆ? ಎಷ್ಟು ದಿನ ಟ್ರೇನಿಂಗ್ ನೀಡಲು ಕಾಲಾವಧಿ ಬೇಕು ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಪ್ರೇಕ್ಷಕರಿಗೆ ನೋಡಲು ಅನುಕೂಲವಾಗುವಂತೆ ದೊಡ್ಡ ಡಿಎಸ್ಪ್ಲೇ ಬೋರ್ಡಗಳನ್ನು ಅಲ್ಲಿ ಹಾಕಲಾಗಿದೆ. ಕೊಳದ ಒಳಗೇ ಕ್ಯಾಮರಾ ಜಲಚರಗಳ ಚಲನವಲನಗಳೆಲ್ಲಾ ಪರದೆಯ ಮೇಲೆ ಮೂಡುತ್ತದೆ.ಕಡೆಗೆ ವೇಲ್ಗಳಿಗೆ ವಂದಿಸುವುದರೊಂದಿಗೆ ಷೋ ಮುಗಿಯುತ್ತದೆ. ಆಂಕರ್: ಸೀವಡರ್್ನ ತುಂಬೆಲ್ಲಾ ವ್ಯಾಪಾರ ಮಳಿಗೆಗಳಿರುತ್ತವೆ. ಅಲ್ಲಿ ಸೀ ವಡರ್್ನ ಜಲಚರಗಳು ಅಲ್ಲಿರುವ ಥೀಮ್ ಪಾಕರ್್ಗಳನ್ನು ನೆನಪಿನ ಕಾಣಿಕೆಗಳು ಹೆಚ್ಚು ಮಾರಾಟಕ್ಕಿರುತ್ತವೆ. ಜತೆಗೆ ಅಲ್ಲಿ ಪ್ರವಾಸಿಗರು ಸುಲಭವಾಗಿ ಗೆಲ್ಲುವಂತಹ ಕ್ರೀಡೆಗಳಿರುತ್ತವೆ. ಅವುಗಳನ್ನು ಗೆದ್ದರೆ ಪೆಗ್ವಿನ್, ಢಾಲ್ಫಿನ್ ಗೊಂಬೆಗಳೆಲ್ಲಾ ಉಚಿತವಾಗಿ ದೊರೆಯುತ್ತವೆ. ಈಗ ಮತ್ತೊಂದು ಬ್ರೇಕ್…… ಆಂಕರ್: ಈಗ ನೀವು ಪೆಗ್ವಿನ್ಗಳ ಗುಹೆಗೆ ಭೇಟಿ ನೀಡಲಿದ್ದೀರಿ. ಮೈಕೊರೆಯುವ ಚಳಿ ಇಲ್ಲಿ. ಮೂವಿಂಗ್ ಸ್ಟೆಪ್ಸ್ ಮೇಲೆ ನಿಂತಾಗ ಬಹಳ ಜಾಗರೂಕರಗಿರಬೇಕಾಗತ್ತದೆ ಇಲ್ಲಿ. ಏಕೆಂದರೆ ಬಹಳಷ್ಟು ಮಂದಿ ಪೆಗ್ವಿನ್ಗಳನ್ನು ನೋಡುತ್ತಾ ನಿಲ್ಲುತ್ತಾರೆ. ಸ್ಟೆಪ್ಸ್ ಚೆಲಿಸುವುದನ್ನು ಮರೆಯುತ್ತಾರೆ. ಇದರಿಂದ ಮುಗ್ಗರಿಸುತ್ತಾರೆ. ಆನಂತರ ನಾನು ಹೊಕ್ಕಿದ್ದು ಅಂಟಾರ್ಕಟಿಕದಲ್ಲಿ ವಾಸಿಸುವ ಪೆಗ್ವಿನ್ಗಳ ಗುಹೆ ಜನರ್ಿ ಟು ಅಟ್ಲಾಂಟೀಸ್…….. ಟಿಸಿಆರ್: 0ಹೆಚ್: 11 ಟು…..28 ಹಿಮಚ್ಛಾದಿತ ಪ್ರದೇಶದಲ್ಲಿ ವಾಸಿಸುವ ಪೆಗ್ವಿನ್ಗಳಿಗಾಗಿ ಸೃಷ್ಟಿಯಾಗಿದೆ ಈ ಲೋಕ. ಒಳಗೆ ಹೋದರೆ ಮೈ ನಡುಗಿಸುವ ಚಳಿ. ಆದರೆ ಪೆಗ್ವಿನ್ಗಳ ಹಿಂಡನ್ನು ನೋಡುತ್ತಿದ್ದಂತೆಯೇ ಚಳಿ ಮಾಯವಾಗುತ್ತದೆ. ಪೆಗ್ವಿನ್ಗಳ ಅಪ್ಪ, ಅಮ್ಮ, ತಮ್ಮ ತಂಗಿ ಹೀಗೆ ಎಲ್ಲರೂ ಗುಂಪು ಗುಂಪಾಗಿ ನಿಂತು ಸ್ಮೈಲ್ ನೀಡುತ್ತವೆ ಇಲ್ಲಿ. ಪೆಗವಿನ್ ಚಲನಚಿತ್ರ ನೋಡಿದ ಮಕ್ಕಳಂತೂ ಇಲ್ಲಿ ಮೈ ಮರೆಯುತ್ತಾರೆ. ಇಲ್ಲಿರುವ ಮೂವಿಂಗ್ ಸ್ಟೇರ್ ಮೇಲೆ ನಿಂತಾಗ ಜಾಗರೂಕತೆ ವಹಿಸಬೇಕಾಗುತ್ತದೆ. ಪೆಗ್ವಿನ್ಗಳ ಸಂಸಾರ ನೋಡಿ ಮಯಮರೆತರೆ ಜಾರಿ ಬೀಳುತ್ತೇವೆ ಇಲ್ಲಿ. ಈ ರೈಡ್ ಮುಗಿದ ನಂತರ ನಾನು ಏರಿದ್ದು ಸ್ಕೈ ಟವರ್ಗೆ………ಈ ಟವರ್ ಸುತ್ತುತ್ತಾ ಮೇಲೆರುತ್ತದೆ. ಇಡೀ ಸೀವಡರ್್ನ ಪಕ್ಷಿ ನೋಟ ಸ್ಕೈವಡರ್್ ನೆತ್ತಿಯಿಂದ ಕಾಣುತ್ತದೆ. ದೂರದಲ್ಲಿ ಸುರುಳಿಯಾಕಾರದ ಕ್ರಾಕರ್ ಆಟದ ತಾಣ ಕಣ್ಣಿಗೆ ಬೀಳುತ್ತದೆ. ಫ್ಲೋ……ಟಿಸಿಆರ್: ಸೀವಡರ್್ನಲ್ಲಿರುವ ಸೀ—ಲಯನ್ಗಳು ವಿಶಿಷ್ಟ. ಇಲ್ಲಿರುವ ಸೀ ಲಯನ್ಗಳು ಮನುಷ್ಯರೊಂದಿಗೆ ಮಾತನಾಡಲು ಯತ್ನಿಸುತ್ತವೆ. ಹಸಿವಾದಾಗ ಕೂಗುಹಾಕುತ್ತವೆ. ಮಕ್ಕಳು, ಸೀ ಲಯನ್ಗಳಂತೆಯೇ ಕೂಗಿ ಎಂಜಾಯ್ ಮಾಡುತ್ತವೆ. ಸೀವಡರ್್ನಲ್ಲಿರುವ ಜಲಚರಗಳ ಪ್ರಭೇದಗಳು ಚಿತ್ರ, ವಿಚಿತ್ರ. ತರಾವರಿ ಸಮುದ್ರದ ತಳದಲ್ಲಿರುವ ಜಲಚರಗಳು ಕಾಣಸಿಗುತ್ತವೆ ಇಲ್ಲಿ. ಅವುಗಳಿಗೆಲ್ಲಾ ಜೀವವಿದೆ ಎಂಬುದೇ ಆಶ್ಚರ್ಯ ಹುಟ್ಟಿಸುತ್ತದೆ. ವಿವಿಧ ಬಗೆಯ ಮೀನುಗಳು ಮಾರ್ಚಫಾಸ್ಟ್ ಮಾಡುತ್ತವೆ ಇಲ್ಲಿ. ಫ್ಲೋ…………..ಬುಡ್ವೈಸರ್ ಬೀರ್ನ ಬ್ರಿವರಿ ಇಲ್ಲೇ ಇರುವುದರಿಂದ ಭಾರಿ ಕುದುರೆಗಳ ಪ್ರದರ್ಶನವೂ ಇಲ್ಲಿ ನಡೆಯುತ್ತದೆ. ಕಡೆಯಲ್ಲಿ ಇಲ್ಲಿ ಕಂಡದ್ದು ಮತ್ತೊಬ್ಬಳು ಚೀನಾ ಹುಡುಗಿಯೊಬ್ಬಳ ಕಸರತ್ತಿನ ಪ್ರದರ್ಶನ. ನಾಸಿಕದ ಮೇಲೆ ಕೆಂಪು ಪಾನೀಯದ ಗಾಜಿನ ಕಪ್ಗಳ ಹೊತ್ತು ಆಕೆ ಪ್ರದಶರ್ಿಸಿದ ಏಕಾಗ್ರತೆಯ ಪ್ರದರ್ಶನ ನೆರೆದಿದ್ದವರ ಮನಸೂರೆಗೊಡಿತ್ತು. ಸೀವಡರ್್ ಹಾಗೂ ಎಪಿಕಾಟ್ಸೆಂಟರ್ನ ತೀಮ್ ಪಾಕರ್್ನಲ್ಲಿ ನೂರು ಕೋಟಿ ಜನರಿರುವ ಭಾರತದ ಸಂಸ್ಕೃತಿ ಪ್ರದಶರ್ಿಸುವ ಮಳಿಗೆ ಇಲ್ಲದಿದ್ದುದು ಬೇಸರ ಮೂಡಿಸಿತ್ತು ನನಗೆ. ಹೀಗೆ ಸೀವಡರ್್ನ್ನು ಒಂದು ಸುತ್ತು ಹಾಕಿಬರುವಷ್ಟರಲ್ಲಿ ಒಂದು ದಿನ ಮುಗಿದು ಹೋಗಿದ್ದು ಗೊತ್ತೇ ಆಗಲಿಲ್ಲ ………. ಮುಂದಿನ ವಾರ ಲಾಸ್ ಏಂಜಲೀಸ್ನಲ್ಲಿರುವ ಯೂನಿವರ್ಸಲ್ ಸ್ಟುಡಿಯೋಸ್ಗೆ ಭೇಟಿ ನೀಡಲಿದ್ದೀರಿ ನೀವು. ಹೇಗೆ ಹಾಲಿವುಡ್ ಸಿನಿಮಾಗಳಲ್ಲಿ ಸ್ಡಂಟ್ಗಳನ್ನು ಮಾಡಲಾಗುತ್ತದೆ. ಘಾಡ್ಜಿಲ್ಲಾ, ಜುರಾಸಿಕ್ ಪಾರ್ಕ ಸಿನಿಮಾಗಳನ್ನು ಹೇಗೆ ಶೂಟ್ ಮಾಡಲಾಯಿತು. ಹಾಲಿವುಡ್ ಸ್ಟುಡಿಯೋಗಳು ಯಾವ ರೀತಿ ಸಿದ್ಧವಾಗಿರುತ್ತವೆ. ಅಲ್ಲಿನ ಸೆಟ್ಗಳು, ಬೆವಲರ್ಿನ ಐಷಾರಾಮಿ ಭಂಗಲೆಗಳ ಬಗ್ಗೆ ಎಂ.ಎನ್. ಚಂದ್ರೇಗೌಡ ಹೆಚ್ಚಿನ ವಿವರ ನೀಡಲಿದ್ದಾರೆ. ವಾರ ಗ್ರ್ಯಾಂಡ್ ಕ್ಯಾನಿಯನ್ನನ್ನು ನೋಡಲಿದ್ದೀರಿ……………ಅದೊಂದು ಅದ್ಭುತ ದೃಶ್ಯ ಕಾವ್ಯ. ಕೋಟ್ಯಂತರ ವರ್ಷಗಳ ಹಿಂದೆ ಈ ಗ್ರ್ಯಾಂಡ್ ಕ್ಯಾನಿಯನ್ ಹೇಗೆ ಸೃಷ್ಟಿಯಾತೆಂಬುದು ಈಗಲೂ ನಿಗೂಢ. ಭೂಮಿಯ ಒಡಲು ಕಿಲೋಮೀಟರ್ಗಟ್ಟಲೆ ಕೊರದುಕೊಂಡು ಹೋಗಿದೆ ಇಲ್ಲಿ. ಗ್ರ್ಯಾಂಡ್ ಕ್ಯಾನಿಯನ್ನ ವಿಸ್ತಾರ ನೂರಾರು ಕಿಲೋಮೀಟರ್. ಬನ್ನಿ ಈ ಬಗ್ಗೆ ಚಂದ್ರೇಗೌಡ ನಿಮಗೆ ಹೆಚ್ಚಿನ ವಿವರ ನೀಡಲಿದ್ದಾರೆ……..

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಏಪ್ರಿಲ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಮಾರ್ಚ್   ಮೇ »
   123
  45678910
  11121314151617
  18192021222324
  252627282930  
 • ವಿಭಾಗಗಳು