ಗ್ರ್ಯಾಂಡ್ ಕ್ಯಾನಿಯನ್, ಇದೊಂದು ದೃಶ್ಯ ಕಾವ್ಯ.

ಸ್ಲಗ್: ಗ್ರ್ಯಾಂಡ್ ಕ್ಯಾನಿಯನ್
ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಡೇಟ್: 30 – 03 – 09
ಬೆಂಗಳೂರು

ಆಂಕರ್: ಅಮೆರಿಕಾದಲ್ಲಿ ನಯಾಗರಕ್ಕಿಂತ ಅದ್ಭುತ ಸ್ಥಳವೆಂದರೆ ಗ್ರ್ಯಾಂಡ್ ಕ್ಯಾನಿಯನ್. ಇಂಥಹ ಸ್ಥಳ ವಿಶ್ವದ ಯಾವುದೇ ಭಾಗದಲ್ಲಿ ನೋಡಲು ಸಿಗಲಾರದು ನಿಮಗೆ. ಇದೊಂದು ದೃಶ್ಯ ಕಾವ್ಯ. ಕೋಟ್ಯಂತರ ವರ್ಷಗಳ ಹಿಂದೆ ಕಲಾಕಾರನೊಬ್ಬ ಭಾರಿ ಜತನದಿಂದ ಭೂಮಿಯನ್ನು ಕೊರೆದು ಕೊರೆದು ಕಡದಂತಿಗೆ ಈ ಗ್ರ್ಯಾಂಡ್ ಕ್ಯಾನಿಯನ್.  ಸುಮಾರು ಎರಡು ಬಿಲಿಯನ್ ವರ್ಷಗಳ ಹಿಂದೆ ಈ ಕ್ಯಾನಿಯನ್ ಸೃಷ್ಟಿಯಾಗಿರಬಹುದೆಂದು ವಿಜ್ಞಾನಿಗಳ ಊಹೆ. ಸುಮಾರು 466 ಚದರ ಕಿಲೋ ಮೀಟರ್ ಹಬ್ಬಿರುವ ಗ್ರ್ಯಾಂಡ್ ಕ್ಯಾನಿಯನ್ ನೋಡಲು ಕಣ್ಣುಗಳಿಗೆ ಹಬ್ಬ. ಈ ಸ್ಥಳವನ್ನು ನಮ್ಮ ಚಂದ್ರೇಗೌಡ, ಹೆಲಿಕ್ಯಾಪ್ಟರ್ ಏರಿ, ಬಸ್ಸುಗಳಲ್ಲಿ ಸಂಚರಿಸಿ ಸುತ್ತಿಬಂದಿದ್ದಾರೆ. ಭೂರಮೆಯ ಶೃಂಗಾರದಂತಿರುವ ಗ್ರ್ಯಾಂಡ್ ಕ್ಯಾನಿಯನ್ನನ್ನು ಈಗ ಗೌಡರು ಪರಿಚಯ ಮಾಡಿಕೊಡಲಿದ್ದಾರೆ………………

ವಾಯ್ಸ್ ಓವರ್:
ಗ್ರ್ಯಾಂಡ್ ಕ್ಯಾನಿಯನ್ ಎಂದಾಕ್ಷಣ ಅಮೆರಿಕಾದಲ್ಲಿ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಗ್ರ್ಯಾಂಡ್ನ್ನು ನೋಡುವುದೆಂದರೆ ಅಲ್ಲಿ ಒಂದು ವಿಶೇಷ ಸಂಗತಿ ಎಂದು ಪರಿಗಣಿಸಲಾಗುತ್ತದೆ. ಅಂಥಹ ಅದ್ಭುತ ತಾಣ ಅದು. ಕೊಲರ್ಯಾಡೋ ನದಿ ಕೋಟ್ಯಾಂತರ ವರ್ಷಗಳ ಹಿಂದೆ ಭೂಮಿಯ ಒಡಲನ್ನು ಕೊರೆದು ಕೊರದು ಈ ಕ್ಯಾನಿಯನ್ ಸೃಷ್ಟಿಯಾಗಿದೆ ಎಂದು ಜನ ನಂಬಿದ್ದಾರೆ. ಆದರೆ ವಿಜ್ಞಾನಿಗಳು ಮಾತ್ರ ಈ ತಾಣ ಹೇಗೆ ಸೃಷ್ಟಿಯಾಯಿತೆಂದು ಇನ್ನೂ ಸಂಶೋಧನೆಯಲ್ಲಿಯೇ ನಿರತರಾಗಿದ್ದಾರೆ. ಏಕೆಂದರೆ ನದಿಯೊಂದು ಹರಿದರೆ ಒಂದೇ ದಿಕ್ಕಿನಲ್ಲಿ ಭೂಮಿಯನ್ನು ಕೊರೆದುಕೊಂಡು ಹೋಗಬೇಕು. ಆದರೆ ಗ್ರ್ಯಾಂಡ್ ಕ್ಯಾನಿಯನ್ ನಾಲ್ಕೂ ದಿಕ್ಕುಗಳಲ್ಲಿ ಕೊರೆದುಕೊಂಡು ಹೋಗಿದೆ. ಅದು ಕಿಲೋ ಮೀಟರುಗಟ್ಟಲೆ. ಒಂದೊಂದು ಸ್ಥಳದಲ್ಲಿ ಭೂಮಿ 5, 10 ಕೆಲವು ಕಡೆ 21 ಕಿಲೋ ಮೀಟರ್ ಕೊರೆದುಕೊಂಡು ಹೋಗಿದೆ. ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್ ಈ ಸ್ಥಳವನ್ನು ಶೂಟ್ ಮಾಡಲು 2 ವರ್ಷ ತೆಗೆದುಕೊಂಡಿದೆ ಎಂದರೆ ಈ ಸ್ಥಳದ ಅಗಾಧತೆ ಅರ್ಥವಾಗುತ್ತದೆ. ಇದುವರೆಗೆ ಗ್ರ್ಯಾಂಡ್ ಕ್ಯಾನಿಯನ್ನ ಎಲ್ಲ ಸ್ಥಳಗಳಿಗೆ ಯಾರಿಂದಲೂ ಭೇಟಿ ನೀಡಲು ಸಾಧ್ಯವಾಗಿಲ್ಲ. ಅಂಥಹ ಕ್ಲಿಷ್ಟ, ದುರ್ಗಮ ಈ ಕ್ಯಾನಿಯನ್………ಈ ಕ್ಯಾನಿಯನ್ನನ್ನು ನಮ್ಮ ಕುವೆಂಪು, ಮಾಸ್ತಿ, ಬೇಂದ್ರೆ ಯಂಥವರು ನೋಡಿದ್ದರೆ ಎಂಥಹ ಅದ್ಭುತ ಕಾವ್ಯಗಳನ್ನು ರಚಿಸುತ್ತಿದ್ದರೋ, ನಮ್ಮ ಸಾಹಿತ್ಯ ಲೋಕ ಮತ್ತಷ್ಟು ಶ್ರೀಮಂತವಾಗುತ್ತಿತ್ತೆನೋ ಎಂದೆನಿಸುತ್ತದೆ ಒಂದು ಕ್ಷಣ. ಅದೊಂದು ಭೂರಮೆಯ ಶೃಂಗಾರವೇ ಸರಿ……………..ಅದೊಂದು ದೃಶ್ಯ ಕಾವ್ಯವೇ ಸರಿ…………………
ಗ್ರ್ಯಾಂಡ್ ಕ್ಯಾನಿಯನ್ನನ್ನು ಬಸ್ನಲ್ಲಿ ನೋಡಲೋ, ಹೆಲಿಕ್ಯಾಪ್ಟರ್ನಲ್ಲಿ ನೋಡಲೋ ಎಂಬ ಜಿಜ್ಞಾಸೆ ಮೊದಲಿಗೆ ನನಗಿತ್ತು. ಕಡೆಗೆ ಬಸ್ಸು, ಹೆಲಿಕ್ಯಾಪ್ಟರ್ ಎರಡರಲ್ಲೂ ನೋಡುವುದೆಂದು ತೀಮರ್ಾನಿಸಿ ಒಂದು ಪ್ಯಾಕೇಜ್ ಟೂರನ್ನು ಆಯ್ದುಕೊಂಡೆ. ಲಾಸ್ ವೆಗಾಸ್ನಿಂದ ಎಲ್ಲ ಟೂರ್ಗಳು ಆರಂಭವಾಗುತ್ತವೆ.
ನಯಾಗರಕ್ಕೆ ಜೀವಂತಿಕೆ ಇದ್ದರೆ ಗ್ರ್ಯಾಂಡ್ ತನ್ನ ಗಂಭೀರತೆಯಿಂದಲೇ ಮಾತನಾಡುತ್ತದೆ. ಈ ಸ್ಥಳ ಲಾಸ್ ವೆಗಾಸ್ನಿಂದ 600 ನೂರು ಕಿಲೋ ಮೀಟರ್ ದೂರದಲ್ಲಿದೆ. 
 

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಏಪ್ರಿಲ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಮಾರ್ಚ್   ಮೇ »
   123
  45678910
  11121314151617
  18192021222324
  252627282930  
 • ವಿಭಾಗಗಳು