ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ತೀವ್ರ ಅಸಮಾಧಾನ

[
ರಿಪೋರ್ಟರ್; ಎಂ.ಎನ್. ಚಂದ್ರೇಗೌಡ
ಸ್ಲಗ್: ಎ.ಟಿ. ರಾಮಸ್ವಾಮಿ
ಫೈಲ್ ನಂ:
ಡೇಟ್: 30 -04 – 2010

ಆಂಕರ್: ಲೋಕಾಯುಕ್ತರ ಶಿಫಾರಸ್ಸುಗಳನ್ನೇ ಕಾಲ ಕಸದಂತೆ ನೋಡುತ್ತಿರುವ ಸಕರ್ಾರ, ತಮ್ಮ ನೇತೃತ್ವದ ಸಮಿತಿ ಸಕರ್ಾರಿ ಭೂ ಒತ್ತುವರಿ ಕುರಿತಂತೆ ನೀಡಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಯ ಛಾನೆಲ್ ಜತೆ ಮಾತನಾಡಿದ ಅವರು, ಬಿಜೆಪಿ ಸಕರ್ಾರ ಭೂಗಳ್ಳರಿಗೆ ರಕ್ಷಣೆ ನೀಡಿದೆ ಎಂದು ಆರೋಪಿಸಿದ್ದಾರೆ.

ಫ್ಯಾಕೇಜ್ ಫಾಲೋಸ್…………..

ವಾಯ್ಸ್ ಓವರ್ 1: 2006 ರಲ್ಲಿ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸಕರ್ಾರ ಅಸ್ತಿತ್ವದಲ್ಲಿದ್ದಾಗ ಬೆಂಗಳೂರು ಸುತ್ತಮುತ್ತ ಸಕರ್ಾರಿ ಭೂಒತ್ತುವರಿ ಪ್ರಕರಣಗಳನ್ನು ಪತ್ತೆಹಚ್ಚಲು ಶಾಸಕ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ಜಂಟಿ ಸದನ ಸಮಿತಿಯೊಂದನ್ನು ರಚಿಸಿತ್ತು. ಈ ಜಂಟಿ ಸದನ ಸಮಿತಿಗೆ 14 ಮಂದಿ ಎಂಎಲ್ಎಗಳು, 6 ಮಂದಿ ಎಂಎಲ್ಸಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಈ ಸಮಿತಿ 2007 ರಲ್ಲಿ ಸಕರ್ಾರಕ್ಕೆ ತನ್ನ ವರದಿ ಸಲ್ಲಿಸಿ, ಬೆಂಗಳೂರು ಸುತ್ತ ಮುತ್ತ ಸುಮಾರು 40 ಸಾವಿರ ಎಕರೆ ಕಂದಾಯ, ಅರಣ್ಯ, ಪಶು ಸಂಗೋಪನಾ ಇಲಾಖೆ ಸೇರಿದಂತೆ ಬಿಡಿಎ, ಬಿಬಿಎಂಪಿ ಹಾಗೂ ಕೆಎಚ್ಬಿಗೆ ಸಂಬಂಧಿಸಿದ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ ಪ್ರಭಾವಿ ರಾಜಕೀಯ ಮುಖಂಡರು ಭಾಗಿಯಾಗಿದ್ದಾರೆಂದು  ವರದಿ ನೀಡಿ, ಭೂ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಸಕರ್ಾರಿ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ರಾಜಕಾರಣಿಗಳ ಜತೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಿ ಜೈಲಿಗೆ ಹಾಕಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೆ ಇಲ್ಲಿಯವರೆಗೆ ಕೇವಲ ಬೆರಳೆಣಿಕೆಯಷ್ಟು ಸಣ್ಣ ಪುಟ್ಟ ಭೂ ಕಬಳಿಕೆದಾರರ ವಿರುದ್ಧ ಮಾತ್ರ ಕ್ರಮಜರುಗಿಸಲಾಗಿದೆ. ಕೋಟ್ಯಂತರ ರುಪಾಯಿ ಮೌಲ್ಯದ ಸಕರ್ಾರಿ ಭೂಮಿ ಕಬಳಿಸಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಕರ್ಾರ ಮುಂದಾಗದಿರುವುದು ಬೇಸರ ತರಿಸಿದೆ. ಲೋಕಾಯುಕ್ತರ ಶಿಫಾರಸ್ಸುಗಳಿಗೆ ಬೆಲೆಕೊಡದ ಸಕರ್ಾರ, ಜಂಟಿ ಸದನ ಸಮಿತಿ ವರದಿಗೆ ಬೆಲೆ ಕೊಡಲಿದೆಯೇ ಎಂದು ಮಾಜಿ ಎ.ಟಿ. ರಾಮಸ್ವಾಮಿ ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೈಟ್: ಎ.ಟಿ. ರಾಮಸ್ವಾಮಿ, ಮಾಜಿ ಶಾಸಕ ಹಾಗೂ ಜಂಟಿ ಸದನ ಸಮಿತಿ ಅಧ್ಯಕ್ಷ
ಟಿಸಿಆರ್:  

ವಾಯ್ಸ್ ಓವರ್ 2: ಸಕರ್ಾರವೇನೋ ಭೂಕಬಳಿಕೆದಾರರ ವಿರುದ್ಧ ಕ್ರಮ ಜರುಗಿಸಲು ಕಾರ್ಯಪಡೆಯೊಂದನ್ನು ರಚಿಸಿದೆ. ಆದರೆ ಆ ಪಡೆಗೆ ಯಾವುದೇ ಅಧಿಕಾರ ನೀಡಿಲ್ಲ. ದೊಡ್ಡ ದೊಡ್ಡ ಭೂಕಬಳಿಕೆದಾರರ ವಿರುದ್ಧ ಕ್ರಮಕೈಗೊಳ್ಳಲು ಸಕರ್ಾರಕ್ಕೆ ಹಿಂಜರಿಕೆ. ಇಡೀ ವ್ಯವಸ್ಥೆ ಬೇಲಿಯೇ ಎದ್ದು ಹೊಲ ಮೇಯ್ದಂತಿದೆ. ಈ ಭ್ರಷ್ಟ ವ್ಯವಸ್ಥೆಯನ್ನು ಕಂಡು ಭ್ರಮನಿರಸನಗೊಂಡಿದ್ದೇನೆ. ಮುಂದಿನ ಪೀಳಿಗೆಯನ್ನು ಇಂಥಹ ಭ್ರಷ್ಟ ವ್ಯವಸ್ಥೆ ಕುರಿತಂತೆ ಎಚ್ಚರಿಸುವುದು ಹೇಗೆ ಎಂಬುದೇ ತನ್ನ ಚಿಂತೆ ಎಂದು ರಾಮಸ್ವಾಮಿ ಅಲವತ್ತುಗೊಂಡಿದ್ದಾರೆ.

ಬೈಟ್: ಎ.ಟಿ. ರಾಮಸ್ವಾಮಿ, ಮಾಜಿ ಶಾಸಕ
ಟಿಸಿಆರ್:
ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ವರದಿ ಶಿಫಾರಸ್ಸಿನಂತೆ ಭೂಕಬಳಿಕೆದಾರರನ್ನು ಶಿಕ್ಷೆಗೆ ಗುರಿಪಡಿಸಲು ನೂತನ ಕಾಯ್ದೆಯೊಂದನ್ನು ಜಾರಿಗೊಳಿಸಲು ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸಕರ್ಾರ ಕ್ರಮಕೈಗೊಂಡಿತ್ತು. ಇದೇ ಸಕರ್ಾರ 8 ಸಾವಿರ ಎಕರೆಗೂ ಹೆಚ್ಚು ಒತ್ತುವರಿ ಭೂಮಿಯನ್ನು ಮುಟ್ಟುಗೋಲು ಸಹ ಹಾಕಿಕೊಂಡಿತ್ತು. ಆದರೆ ಬಿಜೆಪಿ ಸಕರ್ಾರ ಈ ಬಗ್ಗೆ ಚಕಾರ ಸಹ ಎತ್ತುತ್ತಿಲ್ಲ. ಆದ್ದರಿಂದ ಸಕರ್ಾರ ಭೂಕಬಳಿಕೆದಾರರಿಗೆ ರಕ್ಷಣೆ ನೀಡಿದೆ ಎಂದು ರಾಮಸ್ವಾಮಿ ಆರೋಪಿಸಿದ್ದಾರೆ,

ಪಿಟುಸಿ, ಎಂ.ಎನ್. ಚಂದ್ರೇಗೌಡ, samaya ನ್ಯೂಸ್ ಬೆಂಗಳೂರು

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಏಪ್ರಿಲ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಮಾರ್ಚ್   ಮೇ »
   123
  45678910
  11121314151617
  18192021222324
  252627282930  
 • ವಿಭಾಗಗಳು