ಡ್ಯು ಟು ಟಬರ್ುಲೆನ್ಸ್ ದಿ ಪ್ಲೈಟ್ ಕಂಟ್ರೋಲ್ ವಾಸ್ ಲಾಸ್ಟ್ ಎ ಬಿಟ್…..ವಿ ಟುಕ್ ಬ್ಯಾಕ್ ದಿ ಕಂಟ್ರೋಲ್…

 

ಮಂಗಳೂರಿನಲ್ಲಿ ವಿಮಾನ ಬಿದ್ದ ನಂತರ ಆದ ತಳಮಳಗಳು ನೂರಾರು. ನಾನು ಅಮೆರಿಕಾದಲ್ಲಿ ಒಮ್ಮೆ ಇಂಥದ್ದೇ ಆತಂಕ, ಢವಢವ, ತಳಮಳವನ್ನು ಅನುಭವಿಸಿದ್ದೆ. ಅ ದಿನ ನಾನು ಟೆಕ್ಸಾಸ್ನಿಂದ ಸ್ಯಾಫ್ರಾನ್ಸಿಸ್ಕೋಗೆ ಪ್ರಯಾಣಬೆಳೆಸಿದ್ದೆ. ಟೆಕ್ಸ್ಸ್ ಅಮೆರಿಕಾ ಉತ್ತರ ಭಾಗದ ತುತ್ತ ತುದಿಯಲ್ಲಿದೆ. ಟೆಕ್ಸಾಸ್ನಿಂದ ಸ್ಯಾನ್ಫ್ರಾನ್ಸಿಸ್ಕೋಗೆ ಹೋಗಲು ನೇರ ವಿಮಾನಗಳಿಲ್ಲ. ಸತತ 5 ರಿಂದ 6 ತಾಸು ವಿಮಾನದಲ್ಲಿ ಪ್ರಮಾಣಿಸಿ ಸ್ಯಾನ್ಫ್ರಾನ್ಸಿಸ್ಕೋ ತಲುಪಬೇಕಾgutftde. ಆದ್ದರಿಂದ ನಾನು ಮೊದಲು ಡೆಟ್ರಾಯಿಟ್ಗೆ ತೆರಳಿ ಅಲ್ಲಿಂದ ಪ್ರಮಾಣ ಬೆಳೆಸಬೇಕಾಗಿtu. ಡೆಟ್ರಾಯಿಟ್ಗೆ ತೆರಳುವ ವಿಮಾನ ಮೊದಲು ಚಾರ್ೊಟ್ಗೆ ತೆರಳಿ ಅಲ್ಲಿಂದ ಪಿಟ್ಸ್ಬರ್ಗ ಮೂಲಕ ಡೆಟ್ರಾಯಿಟ್ಗೆ ಪ್ರಯಾಣ ಬೆಳೆಸುತ್ತದೆ. ಅಮೆರಿಕಾದ ಅತ್ಯಂತ ದೊಡ್ಡ ಏರ್ಲೈನರ್ ಕಾಂಟಿನೆಂಟಲ್ ಏರ್ವೇಸ್ಗೆ ಸೇರಿದ ವಿಮಾನ ಅದಾಗಿತ್ತು. ಟೆಕ್ಸಾಸ್ ಬಿಟ್ಟು ಎರಡು ತಾಸು ಪ್ರಮಾಣ ಬೆಳೆಸಿದ ನಂತರ ವಿಮಾನ ಇನ್ನೇನು ಚಾರ್ೊಟ್ ತಲುಪುವುದರಲ್ಲಿತ್ತು. kelagilidu ಮತ್ತೊಂದು ಪ್ಲೈಟ್ ಕ್ಯಾಚ್ ಮಾಡುವ ಧಾವಂತದಲ್ಲಿದ್ದೆ. ನನ್ನ ಲಗ್ಗೇಜು, ಮತ್ತೊಮ್ಮೆ ಡೆಟ್ರಾಯಿಟ್ನ ಮೇಲೆ ಹಾರಿ ಹೋಗುವ ಖುಷಿ, ಪಿಟ್ಸ್ಬರ್ಗನ ಹಿಂದು ದೇವಾಲಯ ಎಲ್ಲಿಯಾದರೂ ಕಾಣಬಹುದೇ, ಅದರ ಪೋಟೋ ಕ್ಲಿಕ್ಕಿಸಬಹುದೇ ಎಂದು ಕಾದಿದ್ದೆ ನಾನು. ಇನ್ನೇನು ವಿಮಾನ ಇಳಿಯಲು ಹತ್ತು ಹೈದಿನೈದು ನಿಮಿಷದ ಹಾದಿ ಇತ್ತು. ಇದ್ದಕ್ಕಿದ್ದಂತೆಯೇ ಆಗಸದಲ್ಲಿ ಏನೇನೂ ಕಾಣಿಸುತ್ತಿಲ್ಲ ಬರೀ ಮೋಡದ ಹಿಂಡು ಎನಿಸತೊಡಗಿತು. ವಿಮಾನ ಎಲ್ಲೋ ಬಿಳಿ ನೊರೆಯಲ್ಲಿ ನುಗ್ಗಿ ಹೋಗುತ್ತಿದೆ ಎಂದೆನಿಸತೊಡಗಿತ್ತು. ಅದರ ಮಜ, ಜತೆಗೆ ಹೀಗೆಕೆಂದು ಮನಸ್ಸು ಯೋಚಿಸುತ್ತಿರುವಾಗಲೇ, ವಿಮಾನ ಇದ್ದಕ್ಕಿದ್ದಂತೆಯೇ ಯಾವುದಕ್ಕೋ ಗುದ್ದ ಅನುಭವವಾಯಿತು. ತುಂಬಾ ಪ್ರಯಾಸಪಟ್ಟು ಮೋಡದಲ್ಲಿ ನುಸುಳಿda ಅನುಭವವಾಯಿತು. ಮರು ಕ್ಷಣದಲ್ಲಿಯೇ ವಿಮಾನ ಹಮ್ಸ್ ಒಂದನ್ನು hatti keಳಗಿಳಿದ ಮತ್ತೊಂದು ಅನುಭವ. ಪ್ರಮಾಣಿಕರು ಬೆಲ್ಟ್ ಧರಿಸಿರಲಿಲ್ಲ. ಮಂಪರು ನಿದ್ದೆಯಿಂದ ಅಗಷ್ಟೇ ಎಚ್ಚೆತ್ತುಕೊಳ್ಳುತ್ತಿದ್ದರು. ಆಗಷ್ಟೇ ಗಗನಸಖಿಯರು ಪ್ರಯಾಣಿಕರು ತಿಂದು ಮುಗಿಸಿ ಮುಂದಿಟ್ಟಿದ್ದ ಆಹಾರದ ಪೊಟ್ಟಣದ ವೆಸ್ಟ್ನ್ನು ಎತ್ತಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಯಾವಾಗ ಸಡನ್ನಾಗಿ ವಿಮಾನ ಮೊದಲಿನ ಪ್ರಮಾಣದ ವೇಗ ಮತ್ತು ದಿಕ್ಕನ್ನು ಬದಲಾಯಿಸಿ ಮುನ್ನುಗ್ಗಿತೋ ವಿಮಾನ ಹಮ್ಸ್ ಹಾರಿದಂತಹ ಅನುಭವವಾಗಿ ಎಲ್ಲರು ಹೋ ಎಂದು ಕೂಗಿಕೊಂಡರು. ಮರು ಕ್ಷಣದಲ್ಲಿ ಮತ್ತೊಮ್ಮೆ ವಿಮಾನ ಮತ್ತೊಂದು ಹಮ್ಸ್ನಿಂದ ಹಾರಿದಂಥಹ ಅವುಭವ. ಪ್ರಯಾಣಿಕರು ಕೂಗಿಕೊಳ್ಳುವಷ್ಟರಲ್ಲಿ ಎಲ್ಲರೂ ಸೀಟ್ನಿಂದ ವಿಮಾನದ ಟಾಪ್ಗೆ ಹಾರಿಸಿದಂಥಹ ಅನುಭವ. ಕುಳಿತಲ್ಲಿಂದ ಎಸೆದ ರಭಸಕ್ಕೆ ಎಲ್ಲರೂ ನೆತ್ತಿ ಬಡಿದುಕೊಂಡರು. ಅದರಲ್ಲಿ ನಾನು ಇದ್ದೆ. ಸೀಟ್ನಿಂದ ಮುಂದೆ ಹಾರಿ ನಾನು ಬಿದ್ದಿದ್ದೆ. ಕಡೆಯ ರೋನಲ್ಲಿ ಕುಳಿತಿದ್ದ ದಢೂತಿ ದೇಹದ ವ್ಯಕ್ತಿ ನೆತ್ತಿಗೆ ಬಡಿದುಕೊಂಡು ಮೂಛರ್ೆ ಹೋದ. ವಿಮಾನದ ತುಂಬೆಲ್ಲಾ ಕೂಗಾಟ, ಕಿರುಚಾಟ. ವಿಮಾನ ಮತ್ತೊಂದು ದಿಕ್ಕಿನಲ್ಲಿ ನುಗ್ಗಿ ಸೀದ ತೊಂಭತ್ತು ಡಿಗ್ರಿಯಲ್ಲಿ ಕೆಳಗಿಳಿದಂಥಹ ಅನುಭವ, ಎಲ್ಲರೂ ಸ್ವಯಂ ಪ್ರೇರಿತರಾಗಿ ಸೇಟ್ ಬೆಲ್ಟ್ ಹಾಕಿಕೊಂಡರು, ಗಗನಸಖಿಯರು ಸುಧಾರಿಸಿಕೊಂಡು ಸಹಾಯ ಮಾಡಿದರು. ಪೈಲೆಟ್ನಿಂದ ಯಾವುದೇ ನಿದರ್ೇಶನವಾಗಲಿ, ಮಾತುಗಳಾಗಲಿ ಬರಲಿಲ್ಲ. ಅಷ್ಟರಲ್ಲಿ ವಿಮಾನ ಜರ್ಕಹೊಡೆಯತೊಡಗಿತು. ಜತೆಗೆ ಅದೇ ವೇಗದಲ್ಲಿ ಕೆಳಗಿಳಿಯತೊಡಗಿತು. ಎಲ್ಲರ ಮುಖದಲ್ಲಿ ದುಗುಡ. ಆತಂಕ. ಒಂದೈದು ನಿಮಿಷ ಕಳೆದ ನಂತದ ಭೂಮಿ ಸ್ಪಷ್ಟವಾಗಿ ಗೋಚರಿಸತೊಡಗಿತು. ಎಲ್ಲರಿಗೂ ಸ್ವಲ್ಪ ನೆಮ್ಮದಿ ಎನಿಸಿತು. ವಿಮಾನ ಲೆವೆಲ್ಗೆ ಬಂತು. ಆದರೆ ಆಗಲೂ ಪೈಲೆಟ್ನಿಂದ ಯಾವುದೇ ಸಂದೇಶ ಇಲ್ಲಾ. ಇನ್ನೇನು ವಿಮಾನ ನಿಲ್ದಾನ ಬಂತು, ಇಳಿಯುತ್ತೇವೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ವಿಮಾನ ಕಂಪಿಸತೊಡಗಿತು. ಶೇಕ್ ಆಗತೊಡಗಿತು. ವಿಮಾನ ಪೈಲೆಟ್ನ ನಿಯಂತ್ರಣದಲ್ಲಿ ಇಲ್ಲಾ ಎಂದೆನಿಸತೊಡಗಿತು. ಮತ್ತೆ ಆತಂಕ ಚೀತ್ಕಾರ ವಿಮಾನದ ಒಡಲಲ್ಲಿ. ಕಡೆಗೆ ಬಂತು ಲ್ಯಾಂಡಿಂಗ್ ಮಾಡಲಾಗುತ್ತಿದೆ ಎಂಬ ಸಂದೇಶ. ನಿಟ್ಟಿಸಿರು ಬಿಡುವಷ್ಟರಲ್ಲಿ ಮತ್ತೆ ಮೇಲೇರತೊಡಗಿತು. ಏನಾಗುತ್ತಿದೆ ಎಂದು ಕೊಳ್ಳುವಷ್ಟರಲ್ಲಿ ಮತ್ತೆ ವಿಮಾನ ಸಾವಿರಾರು ಅಡಿ ಮೇಲಕ್ಕೆ ಹಾರಿ ಮತ್ತೆ 360 ಡಿಗ್ರಿ ಟನರ್್ ತೆಗೆದುಕೊಂಡು ಬಂದು ಮತ್ತೆ ಲ್ಯಾಂಡಿಂಗ್ ಪೊಸಿಷನ್ಗೆ ಬರತೊಡಗಿತು. ಒಂದೆರಡು ನಿಮಿಷದಲ್ಲಿ ವಿಮಾನ ಭೂ ಸ್ಪರ್ಷ ಮಾಡತೊಡಗುತ್ತಿದ್ದಂತೆಯೇ ಮತ್ತೊಮ್ಮೆ ಕರ್ಕಶವಾದ ಶಬ್ದ ಕಿವಿಗಳಿಗೆ ಬಡಿಯಿತು. ವಿಮಾನದ ಶಬ್ದ ಹೆಚ್ಚಾಯಿತು. ಐದಾರು ಬಾರಿ ಜರ್ಕ ಆದ, ಬ್ರೇಕ್ ಹೊಡೆದ ಅವುಭವ ಆದ ನಂತರ ವಿಮಾನ ಒಂದೆರಡು ಕಿಲೋ ಮೀಟರ್ ಮುಂದಕ್ಕೆ ಚಲಿಸಿ ನಿಯಂತ್ರಣಕ್ಕೆ ಬಂತು. ಎಲ್ಲರ ಮುಖದಲ್ಲಿ ನಗೆ ಉಕ್ಕಿತು. ನಿಟ್ಟಿಸಿರು, ದೇವರ ಪ್ರಾರ್ಥನೆ, ಓ ಮೈ ಗಾಡ್ಗಳು ಎಲ್ಲರ ಬಾಯಲ್ಲಿ ಜಾರಿ ಬಿದ್ದವು. ಮುಛರ್ೆ ಬಿದ್ದಿದ್ದ ಪ್ರಮಾಣಿಕ ಎಚ್ಚೆರಗೊಂಡಿದ್ದ, ವಿಮಾನ ಬಂದು ನಿಲ್ಲುವಷ್ಟರಲ್ಲಾಗಲೇ ಆಂಬ್ಯಲೆನ್ಸ್ಗಳು, ಡಾಕ್ಟರ್ಗಳು ಕಾದು ನಿಂತಿದ್ದರು. ಸ್ಟ್ರಚ್ಚರ್ ಸಿದ್ಧವಾಗಿತ್ತು. ಎಲ್ಲಾ ಪ್ರಮಾಣಿಕರು ವಿಮಾನದಿಂದ ಕಳೆಗಿಳಿಯುವಾಗ ಕಾಕ್ಫಿಟ್ನಿಂದ ಪೈಲೆಟ್ ಹೇಳತೊಡಗಿದ: ಡ್ಯು ಟು ಟಬರ್ುಲೆನ್ಸ್ ದಿ ಪ್ಲೈಟ್ ಕಂಟ್ರೋಲ್ ವಾಸ್ ಲಾಸ್ಟ್ ಎ ಬಿಟ್…..ವಿ ಟುಕ್ ಬ್ಯಾಕ್ ದಿ ಕಂಟ್ರೋಲ್…ಬಟ್ ಡ್ಯು ಟು ಕಟ್ಯೂನ್ಯೂಡ್ ಮೈನರ್ ವೆದರ್ ಪ್ರಾಬ್ಲಮ್ಸ್ ವಿ ಮೇಡ್ ದಿ ಬ್ಯಾಡ್ ರಫ್ ಲ್ಯಾಂಡಿಗ್. ವಿ ಸಿನ್ಸಿಯರ್ಲೀ ಎಕ್ಸ್ಪ್ರೆಸ್ ಅವರ್ ರಿಗ್ರಟ್ಸ್ ಫಾರ್ ದಿ ಟ್ರಬಲ್….ಹೀಗೆ ಹೇಳುತ್ತಲೇ ಇದ್ದ. ಈ ಟಬರ್ುಲೆನ್ಸ್, ರಫ್ ಲ್ಯಾಂಡಿಗ್ ಮನೆ ಹಾಳಾಗಲಿ ಎಂದು ಹೆಜ್ಜೆ ಹಾಕತೊಡಗಿದೆ ನಾನು. ಪಕ್ಕದಲ್ಲಿ ಕುಳಿತಿದ್ದ ನನ್ನಂತಹ ಮತ್ತೊಬ್ಬ ದಢೂತಿ ವ್ಯಕ್ತಿ ಒಂದು ಅಚಾನಕ್ ಹಗ್ ನೀಡಿ….. ಬೆಸ್ಟ್ ಆಫ್ ಲಕ್ ನೆಕ್ಸ್ಟ್ ಜನರ್ಿ ಎಂದು ಹೇಳಿ ಹೋದ………ಚಾಲರ್ೊಟ್ಟೆ ವಿಮಾನ ನಿಲ್ದಾಣದ ಒಂದು ಟಮರ್ಿನಲ್ನಿಂದ ಪಿಟ್ಸ್ಬಗರ್್ ಟಮರ್ಿನಲ್ಗೆ ಗಲೇಜ್ ಬ್ಯಾಗ್ ಎಳೆದುಕೊಂಡು ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಮುಂದಿನ ಫ್ಲೈಟ್ ಹತ್ತುಲು ಒಲ್ಲದ ಮನಸ್ಸಿನಿಂದ ಮುನ್ನಡೆದೆ. ರಿಕ್ಕಿ ನೆನಪಿಗೆ ಬಂದ. ಊರು, ಮನೆ, ಸುವಣರ್ಾ ಚಾನೆಲ್ ಎಲ್ಲಾ ನೆನಪಿಗೆ ಬರತೊಡಗಿದವು……….

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಮೇ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಏಪ್ರಿಲ್   ಜೂನ್ »
   1
  2345678
  9101112131415
  16171819202122
  23242526272829
  3031  
 • ವಿಭಾಗಗಳು