Tomorrow is SAMAYA 24 hours news channel launch

ಸತೀಶ್ ಜಾರಕಿಹೊಳಿ ಅವರಿಗೆ ಪತ್ರಕರ್ತನಾಗಬೇಕು, ಪತ್ರಿಕೆ ನಡೆಸಬೇಕು, ಸುದ್ದಿವಾಹಿನಿ ಮಾಡಬೇಕೆಂಬುದು ಬಹುದಿನಗಳ ಕನಸು. ಅವರು ಪ್ರಬುದ್ಧರಾದ ನಂತರ ಪದೇ ಪದೇ ಅವರ ಮನಸ್ಸಿನಲ್ಲಿ ಹೆಪ್ಪುಗಟ್ಟಿದ್ದು ಸುದ್ದಿವಾಹಿನಿ ಆರಂಭಿಸಬೇಕು ಆ ಮೂಲಕ ಈ ನಾಡಿಗೊಂದು ಕೊಡುಗೆ ನೀಡಬೇಕು ಎಂಬ ಹಪಹಪಿಕೆ. ಆ ವಾಹಿನಿ ತುಳಿತಕ್ಕೊಳಗಾದವರ, ಶೋಷಣೆಗೊಳಗಾದವರ ಧ್ವನಿಯಾಗಬೇಕು. ಮುಂಬೈ ಕನರ್ಾಟಕದ ಅತ್ಯಂತ ಹಿಂದುಳಿದ ಗೋಕಾಕ್ನಲ್ಲಿ ಹುಟ್ಟಿ ಬೆಳೆದ ಅವರಿಗೆ ಪತ್ರಿಕೋದ್ಯಮ, ಮಾಧ್ಯಮ ರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ತುಡಿತ ಸದಾ ಇತ್ತು. ಆದ್ದರಿಂದಲೇ ಅವರು ಸುಮಾರು 15 ವರ್ಷಗಳ ಹಿಂದೆ ಆರಂಭಿಸಿದ್ದು ಗೋಕಾಕ್ ಟೈಮ್ಸ್. ಆದರೆ ಕೆಲವೇ ದಿನಗಳಲ್ಲಿ ಪತ್ರಿಕೆಗಳಲ್ಲಿ ಹೇಳಲಾಗದ್ದನ್ನು ಸುದ್ದಿವಾಹಿನಿ ತೋರಿಸಬಲ್ಲದು ಎಂದೆನಿಸಿತು. ಆ ಘಳಿಗೆಯಿಂದಲೇ ಆ ತುಡಿತ ಹೆಚ್ಚಾಯಿತು. ಆದರೆ ಆಗಿದ್ದ ತಾಂತ್ರಿಕ ತೊಡಕುಗಳು, ಅಗತ್ಯವಿದ್ದ ಮಾರ್ಗದರ್ಶನ, ಎದುರಾದ ಹಣಕಾಸಿನ ತೊಂದರೆಯಿಂದ ಅದು ಆಗ ಸಾಧ್ಯವಾಗಲಿಲ್ಲ.
ರಾಜಕಾರಣದ ಜತೆಗೆ ಪತ್ರಿಕೋದ್ಯಮದ ಒಳ ಹೊರಗನ್ನು ಬಲ್ಲ ಅವರಿಗೆ ಪ್ರಸ್ತುತ ವ್ಯವಸ್ಥೆಯಲ್ಲಿರುವ ಸ್ವಜನ ಪಕ್ಷಪಾತ, ಭ್ರಷ್ಟಚಾರ, ಆಶಾಡಭೂತಿತನ, ಅನ್ಯಾಯ, ಅಕ್ರಮ, ವಂಚನೆಗಳನ್ನು ಕಂಡು ರೋಸಿ ಹೋಗಿದ್ದರು. ಇವುಗಳೆಲ್ಲವುದರ ವಿರುದ್ಧ ಧ್ವನಿ ಎತ್ತುವ ಸಲುವಾಗಿಯೇ ಜನ್ಮತಳೆದಿದ್ದು ಸಮಯ ಚಾನೆಲ್.

Advertisements

ಸಮಯ ಚಾನೆಲ್ ಕಾಂಗ್ರೆಸ್ ಪಕ್ಷದ್ದಲ್ಲ, ಪತ್ರಿಕಾ ಧರ್ಮ ಎತ್ತಿ ಹಿಡಿಯಲು ಶಾಸಕತ್ವ, ಉದ್ದಿಮೆ ತ್ಯಾಗ ಮಾಡಲು ಸಿದ್ಧ: ಸತೀಶ್ ಜಾರಕಿಹೊಳಿ

 

ಬೆಂಗಳೂರು: ಸಮಯ ಚಾನೆಲ್ ಬಡವರು, ಶೋಷಿತರು ಹಾಗೂ ಸಮಸ್ಯೆಗಳ ಪರ ಎಂದು ಘೋಷಿಸಿರುವ ಸಮಯ ಚಾನೆಲ್ನ ಮುಖ್ಯ ವ್ಯವಸ್ಥಾಪಕ ನಿದರ್ೇಶಕರಾದ ಸತೀಶ್ ಜಾರಕಿಹೊಳಿ, ಈ ಚಾನೆಲ್ ಕಾಂಗ್ರೆಸ್ ಪಕ್ಷದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಸಮಯ ಚಾನೆಲ್ನ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಯ ಚಾನೆಲ್ ಆರಂಭಿಸಿರುವ ಉದ್ದೇಶ, ಅವರಿಗಿರುವ ಸಾಮಾಜಿಕ ಕಳಕಳಿ, ಪತ್ರಿಕಾ ಧರ್ಮ ಪರಿಪಾಲನೆ, ಚಾನೆಲ್ಗಿರುವ ಗುರಿ.. ಹೀಗೆ ಎಲ್ಲ ವಿವರಗಳನ್ನು ನೀಡಿದರು. ತಾನು ಕಾಂಗ್ರೆಸ್ನಿಂದ ಶಾಸಕನಾಗಿದ್ದೇನೆ ಎಂಬ ಮಾತ್ರಕ್ಕೆ ಈ ಚಾನೆಲ್ ಕಾಂಗ್ರೆಸ್ ಪಕ್ಷದ್ದಲ್ಲ. ಇದು ಪಕ್ಷಾತೀತವಾಗಿದ್ದು ಸದಾ ಶೋಷಿತರು, ಸಮಸ್ಯೆಗಳ ಪರ ಚಾನೆಲ್ ಕೆಲಸ ಮಾಡಲಿದೆ ಎಂದು ತಿಳಿಸಿದರು. ಪತ್ರಕರ್ತರು ರಾಜಕಾರಣಿಗಳನ್ನು ಬಿಟ್ಟು ಅಧಿಕಾರಿಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಹೆಚ್ಚು ಗಮನಹರಿಸಿ ವರದಿಮಾಡಬೇಕೆಂದು ಕಿವಿ ಮಾತು ಹೇಳಿದ ಅವರು, ಶಾಸಕರಿಗೆ ಕೇವಲ ಭತ್ಯೆ ಹೆಚ್ಚಿಸಿದರೆ ಅದು ದೊಡ್ಡ ಸುದ್ದಿಯಾಗುತ್ತದೆ ಆದರೆ ಐಎಎಸ್, ಕೆಎಎಸ್ ಅಧಿಕಾರಿಗಳ ಕಳಪೆ ಆಡಳಿತ ಎಲ್ಲೂ ಮಾಧ್ಯಮದ ಕಣ್ಣಿಗೆ ಬೀಳುವುದಿಲ್ಲ. ಅವರ ನಿಷ್ಕ್ರಿಯತೆ ಎಂದೂ ಸುದ್ದಿಯಾಗುವುದಿಲ್ಲ ಎಂದರು. ತಿಂಗಳಿಗೆ ಬರುವ 40 ಸಾವಿರ ಸಂಬಳದಲ್ಲಿ ಶಾಸಕರು ಹೇಗೆ ಬದುಕು ಸಾಗಿಸಬೇಕೆಂದು ಪ್ರಶ್ನಿಸಿದರು. ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರು, ಮುಖ್ಯಮಂತ್ರಿಗಳು ಸೇರಿದಂತೆ ಯಾವುದೇ ಮಂತ್ರಿಗಳ ಮಾತುಗಳನ್ನು ಅಧಿಕಾರಶಾಹಿ ಕೇಳುವುದಿಲ್ಲ ಎನ್ನುತ್ತಾರೆ. ಆದರೆ ಪ್ರತಿಪಕ್ಷದ ನಾಯಕರು ಅಧಿಕಾರಕ್ಕೆ ಬಂದಾಗ ಮತ್ತೆ ಆಡಳಿತ ಪಕ್ಷದಲ್ಲಿದ್ದ ನಾಯಕರು ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತು ಮತ್ತೆ ಅದೇ ಮಾತನಾಡುತ್ತಾರೆ. ಈ ಮಾತುಗಳನ್ನು ಕೇಳಿ ರೋಸಿಹೋಗಿದೆ. ಈ ಬಗ್ಗೆ ಮಾಧ್ಯಮಗಳು ಹೆಚ್ಚು ಗಮನಹರಿಸಿ ಸತ್ಯವನ್ನು ಬಹಿರಂಗಗೊಳಿಸಬೇಕಾಗಿದೆ ಎಂದು ಜಾರಕಿಹೊಳಿ ಅಭಿಪ್ರಾಯಪಟ್ಟರು. ತಾವು ಗೋಕಾಕ್ನ ಪುರಸಭೆಯನ್ನು ಮುನ್ನಡೆಸುತ್ತಿದ್ದಾಗ ಹೊಸದಾಗಿ ನಿಮರ್ಿಸಲಾಗಿದ್ದ ರಸ್ತೆಗೆ ತಿಳಿಯದೇ ಹಾನಿ ಉಂಟುಮಾಡಿದ್ದ ತಮ್ಮ ತಂದೆಯವರಿಗೆ 30 ಸಾವಿರ ದಂಡ ವಿಧಿಸಿದ್ದಾಗಿ ತಿಳಿಸಿ ತಾವು ಸದಾ ನ್ಯಾಯ, ಸತ್ಯದ ಪರವಾಗಿದ್ದು, ನಿಷ್ಠೂರವಾದಿಯಾಗಿದ್ದೇನೆ. ವ್ಯವಸ್ಥೆಯೊಂದಿಗೆ ಎಂದಿಗೂ ರಾಜೀ ಮಾಡಿಕೊಳ್ಳುವುದಿಲ್ಲ ಎಂದರು. 1995 ರಿಂದಲೂ ತಮಗೆ ಒಂದು ಚಾನೆಲ್ ಆರಂಭಿಸುವ ಕನಸಿತ್ತು. ಆದರೆ ತಾಂತ್ರಿಕ ಅಡಚಣೆಗಳು ಹಾಗೂ ಮಾಹಿತಿ ಕೊರತೆಯಿಂದ ಇದು ಸಾಧ್ಯವಾಗಿರಲಿಲ್ಲ. ಈಗ ಆಥರ್ಿಕವಾಗಿ ಸದೃಢವಾಗಿದ್ದು ಇನ್ನೂ ಮೂರರಿಂದ ನಾಲ್ಕು ಛಾನೆಲ್ ಆರಂಭಿಸುವ ಗುರಿಹೊಂದಿರುವುದಾಗಿ ತಿಳಿಸಿದರು. ಕನರ್ಾಟಕ ಸಮಾಚಾರ್ ಅಧವಾ ಕನರ್ಾಟಕ samaya ಎಂಬ ದಿನ ಪತ್ರಿಕೆಯನ್ನು ಆರಂಭಿಸುವುದು ತಮ್ಮ ಗುರಿಗಳಲ್ಲಿ ಒಂದು ಎಂದು ಅವರು ತಿಳಿಸಿದರು. ನನಗೊಂದು ಬದುಕಿನ ಹಿನ್ನೆಲೆ ಇದೆ ಎಂದು ತಿಳಿಸಿದ ಅವರು, ಟಿಆರ್ಪಿ ರೇಸ್ನಲ್ಲಿ ನಮ್ಮ ಚಾನೆಲ್ ಪಾಲ್ಗಳ್ಳುವುದಿಲ್ಲ. ಆದರೆ ನಮ್ಮ ಜನಪರ ಗಟ್ಟಿ ಸುದ್ದಿಗಳ ಮೂಲಕವೇ ಇತರ ಚಾನೆಲ್ಗಳನ್ನು ಸಮಯ ಚಾನೆಲ್ ಹಿಂದಿಕ್ಕಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸಮಯ ಚಾನೆಲ್ನ ಮಾತೃ ಸಂಸ್ಥೆ ಸತೀಶ್ ಶುಗರ್ಸ್ನ ಅಧ್ಯಕ್ಷ ಪೃಥ್ವಿರಾಜ್, ಕಾಪರ್ೊರೇಟ್ ಪ್ಲಾನಿಂಗ್ನ ಜಿಎಂ ಸಿದ್ದು ವಡಣ್ಣವರ್, ನಿದರ್ೇಕರಾದ ಪ್ರದೀಪ್ ಇಂಡಿ, ಉಪಾಧ್ಯಕ್ಷರಾದ ಕ್ಯಾಪ್ಟನ್ ಯೋಗಾನಂದ್ ಮಳೀಮಠ್, ಸಲಹೆಗಾರರಾದ ಆನಂದ್ ರಾಜ್ ಅರಸ್ ಉಪಸ್ಥಿತರಿಸ್ದರು. ಸಮಯ ಚಾನೆಲ್ನ ಮುನ್ನೂರೈವತ್ತಕ್ಕೂ ಹೆಚ್ಚು ಸಿಬ್ಬಂದಿ ಹಾಜರಿದ್ದರು.

ವಿಜಯ ಮಲ್ಯ ಬೆಂಬಲಿಸಲು ಬಿಜೆಪಿ ಶಾಸಕರಲ್ಲಿ ಈಗ ತೀವ್ರ ಪೈಪೋಟಿ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಕ್ಯಾಮರಾಮನ್: ಫೈಲ್ ನೇಮ್: ಡೇಟ್: 14- 06- 2010 ಬೆಂಗಳೂರು: ಆಂಕರ್: ಇದೇ 17 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮದ್ಯದ ದೊರೆ ವಿಜಯ ಮಲ್ಯರನ್ನು ಬೆಂಬಲಿಸಲು ಬಿಜೆಪಿ ಶಾಸಕರಲ್ಲಿ ಈಗ ತೀವ್ರ ಪೈಪೋಟಿ ಉಂಟಾಗಿದೆ. ಇದರಿಂದ ಮಲ್ಯರಿಗೆ ಓಟು ಹಾಕುವವರನ್ನು ನಿರ್ಧರಿಸಲು ಸಮಿತಿಯೊಂದನ್ನು ರಚಿಸುವ ಮಟ್ಟಿಗೆ ಶಾಸಕರ ನಡುವಿನ ಪೈಪೋಟಿ ಭಿನ್ನಾಬಿಪ್ರಾಯಗಳನ್ನು ಸೃಷ್ಟಿಸಿದೆ. ಏಕೆಂದರೆ ಈ ಬಾರಿ ಮದ್ಯದ ದೊರೆಗೆ ಮತ ನೀಡುವವರಿಗೆ ಭಾರಿ ಮೊತ್ತದ ಉಡುಗೊರೆಗಳು ಸಿಗುವುದು ಖಾತ್ರಿ ಇರುವುದರಿಂದ ಓಟುಹಾಕಲು ಮುಗಿಬಿದ್ದಿರುವ ಶಾಸಕರನ್ನು ನಿಭಾಯಿಸುವುದೇ ಈಗ ಕಮಲದ ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ವಾಯ್ಸ್ ಓವರ್: ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷಗಳ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ವೆಂಕಯ್ಯನಾಯ್ಡು, ಆಯನೂರ್ ಮಂಜುನಾಥ್, ಆಸ್ಕರ್ ಫನರ್ಾಂಡೀಸ್ ಗೆಲವು ನಿಚ್ಚಳವಾಗಿದೆ. ಆದರೆ ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್ನ ಟಿವಿ ಮಾರುತಿ ಹಾಗೂ ಪಕ್ಷೇತರರಾಗಿ ಸ್ಪಧರ್ಿಸಿರುವ ವಿಜಯ್ ಮಲ್ಯ ನಡುವೆ ಸ್ಪಧರ್ೆ ಏರ್ಪಟ್ಟಿದ್ದರೂ ಕಾಂಗ್ರೆಸ್ನ ಟಿವಿ ಮಾರುತಿ ತಮ್ಮ ಪಕ್ಷದ ಮತಗಳನ್ನು ಹೊರತುಪಡಿಸಿ ಪಕ್ಷೇತರ ಅಥವಾ ಬಿಜೆಪಿ ಶಾಸಕರ ಮತಗಳನ್ನು ಪಡೆದುಕೊಳ್ಳುವುದು ಈಗ ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಪಕ್ಷೇತರರಾಗಿ ಆಯ್ಕೆಯಾಗಿ ಮಂತ್ರಿಗಳಾಗಿರುವವರು ಸಚಿವ ಸಂಪುಟ ಪುನರ್ರಚನೆ ಕಸರತ್ತು ಜಾರಿಯಲ್ಲಿರುವಾಗ ತಮ್ಮ ಮತಗಳನ್ನು ಬೇರೆಯವರಿಗೆ ನೀಡಿ ಮುಖ್ಯಮಂತ್ರಿಗಳ ಕೆಂಗಣ್ಣಿಗೆ ಗುರಿಯಾಗಲು ಸಿದ್ಧರಿಲ್ಲ. ಮತ್ತೊಂದೆಡೆ ಕಾಂಗ್ರೆಸ್ನ್ನು ರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ಅಭ್ಯಥರ್ಿಗೆ ಬೆಂಬಲ ನೀಡುವುದು ಸಾಧ್ಯವಿಲ್ಲದ ಮಾತು. ಹೀಗಿರುವಾಗ ಈಗಾಗಲೇ ಜೆಡಿಎಸ್ ಬೆಂಬಲದ ಜತೆ ವತರ್ೂರ್ ಪ್ರಕಾಶ್ ಮತ್ತೊಂದು ಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಭಯ ಪಡೆದಿರುವ ವಿಜಯ್ ಮಲ್ಯ ಗೆಲವು ಈ ಬಾರಿ ಸುಲಭ ಎಂದೇ ಎಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಲ್ಯರಿಗೆ ಬೆಂಬಲ ನೀಡಲು ನಿರ್ಧರಿಸಿರುವ ಬಿಜೆಪಿಯಲ್ಲಿ ಈಗ ಹೆಚ್ಚುವರಿ 32 ಮತಗಳಿವೆ. ಮಲ್ಯರ ಸರಳ ಗೆಲವಿಗೆ ಬೇಕಾಗಿರುವುದು ಕೇವಲ 17 ಮತಗಳು. ಹೆಚ್ಚುವರಿ 32 ಮಂದಿ ಶಾಸಕರಲ್ಲಿ ಯಾವ್ಯಾವ 17 ಮಂದಿ ಶಾಸಕರಿಗೆ ಮಲ್ಯರಿಗೆ ಮತ ಹಾಕಲು ಸೂಚಿಸಬೇಕು ಎಂಬುದೇ ಈಗ ಬಿಜೆಪಿ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಮದ್ಯದ ದೊರೆಗೆ ಮತ ನೀಡಿದರೆ ಈ ಭಾರಿ ಭರ್ಜರಿ ಉಡುಗೊರೆಗಳು ದೊರಕುವುದರಿಂದ ಮತ ಹಾಕಲು ತಾಮುಂದು ನಾ ಮುಂದು ಎಂದು ಬಿಜೆಪಿ ಶಾಸಕರು ಪಕ್ಷದ ನಾಯಕರಿಗೆ ಮುಗಿಬಿದ್ದಿದ್ದಾರೆ. ತಮಗೆ ಮತಹಾಕಲು ಸೂಚಿಸಬೇಕೆಂದು, ಅವಕಾಶ ನೀಡಬೇಕೆಂದು ಬೆನ್ನು ಬಿದ್ದಿರುವ ಶಾಸಕರನ್ನು ನಿಭಾಯಿಸುವುದೇ ಈಗ ಬಿಜೆಪಿ ನಾಯಕರಿಗೆ ಕಷ್ಟವಾಗಿದ್ದು ಈ ಪರಿಸ್ಥಿತಿಯನ್ನು ನಿಭಾಯಿಸಲು ಸಮಿತಿಯೊಂದನ್ನು ರಚಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಧರಿಸಿದ್ದು ಆನಂತರ ಅಧಿಕೃತವಾಗಿ ಮಲ್ಯರನ್ನು ಬೆಂಬಲಿಸುವ ನಿಧರ್ಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಯಾವ ಶಾಸಕರು ಮಲ್ಯರಿಗೆ ಮತ ನೀಡಬೇku  ಜತೆಗೆ ಮತದಾನದ ಸಮಯದಲ್ಲಿ ವಿಪ್ ಜಾರಿಗೊಳಿಸಬೇಕೇ ಬೇಡವೇ ಎಂba bagge ಬಿಜೆಪಿ ನಾಯಕರು ನಿರ್ಧರಿಸಲಿದ್ದಾರೆ.

–ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು.

Haradanhalliyalli Chandregowda

Nayana Manohara channarayapattana
Arakalagudina circle
Gooroor Dam

MNC at Goooroor dam

This is H.D. Devegowda’s house where he was born and brought up since 1933, May 18. Recently this old house was demolished to reconstruct.

Haradanahlli shop

H.C. lokesh Maduve

Devegodaru kattisuttiruva shiva temple in Haradanahalli

Haradanahalliyalli Devegowdaru badavarige kattisikodalu mundagiruva manegalu

Bandipurada Kadina safari

yyy
yyy

Cheeta sighted

ಶಿಸ್ತಿನ ಕಣಜ ಗೋಕಾಕ್ನ ಸತೀಶ್ ಅಕಾದೆಮಿ, ಈಗ ಪತ್ರಕರ್ತರ ತರಬೇತಿ ಕೇಂದ್ರವೂ ಹೌದು

Tungabhadreya Baridada odalu, Hosapete – Ganidhoolina pete

Ilakllina Quarry

Ilakallina Minorities Prayer Darga

Basaveshwara on Lorry? no he is on a stage at a circle

Lokapurada Mahadwara

Nava Bagalakoteya circle

 • ಪುಟಗಳು

 • Flickr Photos

 • ಜೂನ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಮೇ   ಜುಲೈ »
   12345
  6789101112
  13141516171819
  20212223242526
  27282930  
 • ವಿಭಾಗಗಳು