ಈ ತಿಂಗಳ 18 ರಂದು ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸುವ ಸಾಧ್ಯತೆ

ttt

uuu

ಆಂಕರ್:
ಈ ತಿಂಗಳ 18 ರಂದು ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸುವ ಸಾಧ್ಯತೆ ಇದ್ದು ಈ ಬಾರಿ ಶತಯಗತಾಯ ಸಂಪುಟದಲ್ಲಿ ಸ್ಥಾನ ಪಡೆಯಲು ಹಲವು ಮಂದಿ ತೆರೆಮರೆಯಲ್ಲಿ ಯತ್ನ ಮುಂದುವರೆಸಿದ್ದರೆ ಮತ್ತೆ ಕೆಲವು ಸಚಿವರು ಶತಾಯಗತಾಯ ಸಂಪುಟದಲ್ಲಿ ಉಳಿದುಕೊಳ್ಳಲು ಹೆಣಗಾಡುತ್ತಿದ್ದಾರೆ. ಇನ್ನೊಂದೆಡೆ ಈ ಬಾರಿ ಮಹಿಳೆಯೊಬ್ಬರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆ ಸ್ಥಾನ ಪಡೆದುಕೊಳ್ಳಲು ದೆಹಲಿ ಮಟ್ಟದಲ್ಲಿ ಲಾಬಿಗಳು ತೀವ್ರಗೊಂಡಿವೆ. 

ಫ್ಯಾಕೇಜ್ ಫಾಲೋಸ್………….

ವಾಯ್ಸ್ ಓವರ್ :
ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳ 18 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಬಿಜೆಪಿ ಆಂತರಿಕ ಮೂಲಗಳು ತಿಳಿಸಿದ್ದು ಮಾಜಿ ಸಚಿವ ವಿ. ಸೋಮಣ್ಣ ಹಾಗೂ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸಚಿವ ಸಂಪುಟ ಸೇರುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇವರುಗಳಿಗೆ ಪೈಪೋಟಿ ನೀಡಿ ಆ ಸ್ಥಾನಗಳನ್ನು ಪಡೆಯಲು ಮಾಜಿ ಸಚಿವ ಡಿ. ಎಚ್. ಶಂಕರ್ಮೂತರ್ಿ ಹಾಗೂ ವಿಧಾನಪಡಿಷತ್ ಸದಸ್ಯೆ ವಿಮಲಾಗೌಡ ತೀವ್ರ ಯತ್ನ ನಡೆಸಿದ್ದಾರೆ. ರಾಜ್ಯ ಮಟ್ಟದ ನಾಯಕರನ್ನು ಬದಿಗಿರಿಸಿ ದೆಹಲಿ ಮಟ್ಟದ ನಾಯಕರಿಂದ ಈ ಬಾರಿ ಸಂಪುಟದಲ್ಲಿ ಸ್ಥಾನ ಪಡೆಯಲು ಈ ಇಬ್ಬರೂ ನಾಯಕರು ಒತ್ತಡ ಹೇರಿದ್ದಾರೆಂದು ಬಿಜೆಪಿ ಆಂತರಿಕ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪನವರ ಸಲಹೆಯಂತೆ ಮುಖ್ಯಮಂತ್ರಿಗಳು “ಕಾಮರಾಜ್” ಸೂತ್ರದಂತೆ ಎಲ್ಲ ಸಚಿವರ ರಾಜೀನಾಮೆ ಪಡೆದು ಪೂರ್ಣ ಪ್ರಮಾಣದ ಸಚಿವ ಸಂಪುಟ ಪುನರ್ರಚನೆಗೆ ಕೈಹಾಕಿದರೆ ಗತಿಯೇನು ಎಂದು ಹಲವು ಸಚಿವರು ಆತಂಕಕ್ಕೆ ಒಳಗಾಗಿದ್ದಾರೆಂದು ಮೂಲಗಳು ತಿಳಿಸಿವೆ. ಈ ಬಾರಿ ಶತಾಯಗತಾಯ ಸಚಿವ ಸಂಪುಟದಲ್ಲಿ ಉಳಿದುಕೊಳ್ಳಲು ಸಮಾಜ ಕಲ್ಯಾನ ಸಚಿವ ಡಿ. ಸುಧಾಕರ್, ಮಹಿಳೆ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಸಚಿವ ನರೇಂದ್ರ ಸ್ವಾಮಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ತೀವ್ರ ಲಾಬಿ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿಯೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ಶಿಷ್ಯ ನರೇಂದ್ರ ಸ್ವಾಮಿ ಕಳೆದ 2 ವರ್ಷದಿಂದ ಸುಮ್ಮನಿದ್ದು ಏಕಾಏಕಿ ಬಿಜೆಪಿ ಸೇರುವ ಇರಾದೆ ವ್ಯಕ್ತಪಡಿಸಿದ್ದಾರೆ.
ವಾಯ್ಸ್ ಓವರ್:
ಮತ್ತೊಂದಡೆ ಅನಂತ್ಕುಮಾರ್ ಬಣ ಸಚಿವ ಸಂಪುಟ ವಿಸ್ತರಣೆಗೆ ಒತ್ತಾಯಿಸುತ್ತಿದ್ದು ಇತ್ತೀಚೆಗೆ ವಿಧಾನಪರಿಷತ್ ಸದಸ್ಯರಾದ ಸಿ.ಎಚ್. ವಿಜಯಶಂಕರ್ನ್ನು ಮಂತ್ರಿ ಮಾಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಯಾವುದೇ ಕಾರಣಕ್ಕೂ ಶೋಭಾ ಸಂಪುಟಕ್ಕೆ ಮರಳಬಾರದೆಂದು ಇದೇ ಬಣ ಷರತ್ತು ಸಹ ವಿಧಿಸಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕುರುಬ ಸಮುದಾಯಕ್ಕೆ ಸೇರಿದ ಈಶ್ವರಪ್ಪನವರ ಬೆಂಬಲವೂ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಸಂಪುಟ ವಿಸ್ತರಣೆ ಯಾವುದೇ ರೀತಿಯ ಗೊಂದಲ, ಭಿನ್ನಾಭಿಪ್ರಾಯ, ಭಿನ್ನಮತಕ್ಕೆ ಕಾರಣವಾಗಬಾರದೆಂದು ಮುಖ್ಯಮಂತ್ರಿಗಳು, ಅಳೆದು ತೂಗಿ, ಎಲ್ಲರನ್ನೂ ವಿಶ್ವಸಕ್ಕೆ ತೆಗೆದುಕೊಂಡು ಮುನ್ನಡೆಯಲು ಉದ್ದೇಶಪುರ್ವಕವಾಗಿ ಸಂಪುಟ ವಿಸ್ತರಣೆ ವಿಳಂಬಮಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಈ ಬಾರಿ ಮೈಸೂರಿನ ಎ. ರಾಮ್ದಾಸ್, ಶಂಕರಲಿಂಗೇಗೌಡ, ಆನೇಕಲ್ನ ಎ. ನಾರಾಯಣಸ್ವಾಮಿ ಅವರುಗಳು ಕೆರಳದಂತೆ ನೋಡಿಕೊಂಡು ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿಗಳು ಆಲೋಚಿಸಿದ್ದಾರೆಂದು ಮೂಲಗಳು ತಿಳಿಸಿವೆ. ನಾಳೆಯಿಂದ ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು ಅಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹಿರಿಯ ನಾಯಕರ ನಡುವೆ ಹೆಚ್ಚಿನ ವಿಚಾರವಿನಿಮಯ ನಡೆಯುವ ಸಾಧ್ಯತೆ ಇದೆ.

ಎಂ. ಎನ್. ಚಂದ್ರೇಗೌಡ,
ಸಮಯ ನ್ಯೂಸ್,
ಬೆಂಗಳೂರು

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಜೂನ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಮೇ   ಜುಲೈ »
   12345
  6789101112
  13141516171819
  20212223242526
  27282930  
 • ವಿಭಾಗಗಳು