ವಿಜಯ ಮಲ್ಯ ಬೆಂಬಲಿಸಲು ಬಿಜೆಪಿ ಶಾಸಕರಲ್ಲಿ ಈಗ ತೀವ್ರ ಪೈಪೋಟಿ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಕ್ಯಾಮರಾಮನ್: ಫೈಲ್ ನೇಮ್: ಡೇಟ್: 14- 06- 2010 ಬೆಂಗಳೂರು: ಆಂಕರ್: ಇದೇ 17 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮದ್ಯದ ದೊರೆ ವಿಜಯ ಮಲ್ಯರನ್ನು ಬೆಂಬಲಿಸಲು ಬಿಜೆಪಿ ಶಾಸಕರಲ್ಲಿ ಈಗ ತೀವ್ರ ಪೈಪೋಟಿ ಉಂಟಾಗಿದೆ. ಇದರಿಂದ ಮಲ್ಯರಿಗೆ ಓಟು ಹಾಕುವವರನ್ನು ನಿರ್ಧರಿಸಲು ಸಮಿತಿಯೊಂದನ್ನು ರಚಿಸುವ ಮಟ್ಟಿಗೆ ಶಾಸಕರ ನಡುವಿನ ಪೈಪೋಟಿ ಭಿನ್ನಾಬಿಪ್ರಾಯಗಳನ್ನು ಸೃಷ್ಟಿಸಿದೆ. ಏಕೆಂದರೆ ಈ ಬಾರಿ ಮದ್ಯದ ದೊರೆಗೆ ಮತ ನೀಡುವವರಿಗೆ ಭಾರಿ ಮೊತ್ತದ ಉಡುಗೊರೆಗಳು ಸಿಗುವುದು ಖಾತ್ರಿ ಇರುವುದರಿಂದ ಓಟುಹಾಕಲು ಮುಗಿಬಿದ್ದಿರುವ ಶಾಸಕರನ್ನು ನಿಭಾಯಿಸುವುದೇ ಈಗ ಕಮಲದ ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ವಾಯ್ಸ್ ಓವರ್: ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷಗಳ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ವೆಂಕಯ್ಯನಾಯ್ಡು, ಆಯನೂರ್ ಮಂಜುನಾಥ್, ಆಸ್ಕರ್ ಫನರ್ಾಂಡೀಸ್ ಗೆಲವು ನಿಚ್ಚಳವಾಗಿದೆ. ಆದರೆ ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್ನ ಟಿವಿ ಮಾರುತಿ ಹಾಗೂ ಪಕ್ಷೇತರರಾಗಿ ಸ್ಪಧರ್ಿಸಿರುವ ವಿಜಯ್ ಮಲ್ಯ ನಡುವೆ ಸ್ಪಧರ್ೆ ಏರ್ಪಟ್ಟಿದ್ದರೂ ಕಾಂಗ್ರೆಸ್ನ ಟಿವಿ ಮಾರುತಿ ತಮ್ಮ ಪಕ್ಷದ ಮತಗಳನ್ನು ಹೊರತುಪಡಿಸಿ ಪಕ್ಷೇತರ ಅಥವಾ ಬಿಜೆಪಿ ಶಾಸಕರ ಮತಗಳನ್ನು ಪಡೆದುಕೊಳ್ಳುವುದು ಈಗ ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಪಕ್ಷೇತರರಾಗಿ ಆಯ್ಕೆಯಾಗಿ ಮಂತ್ರಿಗಳಾಗಿರುವವರು ಸಚಿವ ಸಂಪುಟ ಪುನರ್ರಚನೆ ಕಸರತ್ತು ಜಾರಿಯಲ್ಲಿರುವಾಗ ತಮ್ಮ ಮತಗಳನ್ನು ಬೇರೆಯವರಿಗೆ ನೀಡಿ ಮುಖ್ಯಮಂತ್ರಿಗಳ ಕೆಂಗಣ್ಣಿಗೆ ಗುರಿಯಾಗಲು ಸಿದ್ಧರಿಲ್ಲ. ಮತ್ತೊಂದೆಡೆ ಕಾಂಗ್ರೆಸ್ನ್ನು ರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ಅಭ್ಯಥರ್ಿಗೆ ಬೆಂಬಲ ನೀಡುವುದು ಸಾಧ್ಯವಿಲ್ಲದ ಮಾತು. ಹೀಗಿರುವಾಗ ಈಗಾಗಲೇ ಜೆಡಿಎಸ್ ಬೆಂಬಲದ ಜತೆ ವತರ್ೂರ್ ಪ್ರಕಾಶ್ ಮತ್ತೊಂದು ಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಭಯ ಪಡೆದಿರುವ ವಿಜಯ್ ಮಲ್ಯ ಗೆಲವು ಈ ಬಾರಿ ಸುಲಭ ಎಂದೇ ಎಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಲ್ಯರಿಗೆ ಬೆಂಬಲ ನೀಡಲು ನಿರ್ಧರಿಸಿರುವ ಬಿಜೆಪಿಯಲ್ಲಿ ಈಗ ಹೆಚ್ಚುವರಿ 32 ಮತಗಳಿವೆ. ಮಲ್ಯರ ಸರಳ ಗೆಲವಿಗೆ ಬೇಕಾಗಿರುವುದು ಕೇವಲ 17 ಮತಗಳು. ಹೆಚ್ಚುವರಿ 32 ಮಂದಿ ಶಾಸಕರಲ್ಲಿ ಯಾವ್ಯಾವ 17 ಮಂದಿ ಶಾಸಕರಿಗೆ ಮಲ್ಯರಿಗೆ ಮತ ಹಾಕಲು ಸೂಚಿಸಬೇಕು ಎಂಬುದೇ ಈಗ ಬಿಜೆಪಿ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಮದ್ಯದ ದೊರೆಗೆ ಮತ ನೀಡಿದರೆ ಈ ಭಾರಿ ಭರ್ಜರಿ ಉಡುಗೊರೆಗಳು ದೊರಕುವುದರಿಂದ ಮತ ಹಾಕಲು ತಾಮುಂದು ನಾ ಮುಂದು ಎಂದು ಬಿಜೆಪಿ ಶಾಸಕರು ಪಕ್ಷದ ನಾಯಕರಿಗೆ ಮುಗಿಬಿದ್ದಿದ್ದಾರೆ. ತಮಗೆ ಮತಹಾಕಲು ಸೂಚಿಸಬೇಕೆಂದು, ಅವಕಾಶ ನೀಡಬೇಕೆಂದು ಬೆನ್ನು ಬಿದ್ದಿರುವ ಶಾಸಕರನ್ನು ನಿಭಾಯಿಸುವುದೇ ಈಗ ಬಿಜೆಪಿ ನಾಯಕರಿಗೆ ಕಷ್ಟವಾಗಿದ್ದು ಈ ಪರಿಸ್ಥಿತಿಯನ್ನು ನಿಭಾಯಿಸಲು ಸಮಿತಿಯೊಂದನ್ನು ರಚಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಧರಿಸಿದ್ದು ಆನಂತರ ಅಧಿಕೃತವಾಗಿ ಮಲ್ಯರನ್ನು ಬೆಂಬಲಿಸುವ ನಿಧರ್ಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಯಾವ ಶಾಸಕರು ಮಲ್ಯರಿಗೆ ಮತ ನೀಡಬೇku  ಜತೆಗೆ ಮತದಾನದ ಸಮಯದಲ್ಲಿ ವಿಪ್ ಜಾರಿಗೊಳಿಸಬೇಕೇ ಬೇಡವೇ ಎಂba bagge ಬಿಜೆಪಿ ನಾಯಕರು ನಿರ್ಧರಿಸಲಿದ್ದಾರೆ.

–ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಜೂನ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಮೇ   ಜುಲೈ »
   12345
  6789101112
  13141516171819
  20212223242526
  27282930  
 • ವಿಭಾಗಗಳು