ಸಮಯ ಚಾನೆಲ್ ಕಾಂಗ್ರೆಸ್ ಪಕ್ಷದ್ದಲ್ಲ, ಪತ್ರಿಕಾ ಧರ್ಮ ಎತ್ತಿ ಹಿಡಿಯಲು ಶಾಸಕತ್ವ, ಉದ್ದಿಮೆ ತ್ಯಾಗ ಮಾಡಲು ಸಿದ್ಧ: ಸತೀಶ್ ಜಾರಕಿಹೊಳಿ

 

ಬೆಂಗಳೂರು: ಸಮಯ ಚಾನೆಲ್ ಬಡವರು, ಶೋಷಿತರು ಹಾಗೂ ಸಮಸ್ಯೆಗಳ ಪರ ಎಂದು ಘೋಷಿಸಿರುವ ಸಮಯ ಚಾನೆಲ್ನ ಮುಖ್ಯ ವ್ಯವಸ್ಥಾಪಕ ನಿದರ್ೇಶಕರಾದ ಸತೀಶ್ ಜಾರಕಿಹೊಳಿ, ಈ ಚಾನೆಲ್ ಕಾಂಗ್ರೆಸ್ ಪಕ್ಷದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಸಮಯ ಚಾನೆಲ್ನ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಯ ಚಾನೆಲ್ ಆರಂಭಿಸಿರುವ ಉದ್ದೇಶ, ಅವರಿಗಿರುವ ಸಾಮಾಜಿಕ ಕಳಕಳಿ, ಪತ್ರಿಕಾ ಧರ್ಮ ಪರಿಪಾಲನೆ, ಚಾನೆಲ್ಗಿರುವ ಗುರಿ.. ಹೀಗೆ ಎಲ್ಲ ವಿವರಗಳನ್ನು ನೀಡಿದರು. ತಾನು ಕಾಂಗ್ರೆಸ್ನಿಂದ ಶಾಸಕನಾಗಿದ್ದೇನೆ ಎಂಬ ಮಾತ್ರಕ್ಕೆ ಈ ಚಾನೆಲ್ ಕಾಂಗ್ರೆಸ್ ಪಕ್ಷದ್ದಲ್ಲ. ಇದು ಪಕ್ಷಾತೀತವಾಗಿದ್ದು ಸದಾ ಶೋಷಿತರು, ಸಮಸ್ಯೆಗಳ ಪರ ಚಾನೆಲ್ ಕೆಲಸ ಮಾಡಲಿದೆ ಎಂದು ತಿಳಿಸಿದರು. ಪತ್ರಕರ್ತರು ರಾಜಕಾರಣಿಗಳನ್ನು ಬಿಟ್ಟು ಅಧಿಕಾರಿಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಹೆಚ್ಚು ಗಮನಹರಿಸಿ ವರದಿಮಾಡಬೇಕೆಂದು ಕಿವಿ ಮಾತು ಹೇಳಿದ ಅವರು, ಶಾಸಕರಿಗೆ ಕೇವಲ ಭತ್ಯೆ ಹೆಚ್ಚಿಸಿದರೆ ಅದು ದೊಡ್ಡ ಸುದ್ದಿಯಾಗುತ್ತದೆ ಆದರೆ ಐಎಎಸ್, ಕೆಎಎಸ್ ಅಧಿಕಾರಿಗಳ ಕಳಪೆ ಆಡಳಿತ ಎಲ್ಲೂ ಮಾಧ್ಯಮದ ಕಣ್ಣಿಗೆ ಬೀಳುವುದಿಲ್ಲ. ಅವರ ನಿಷ್ಕ್ರಿಯತೆ ಎಂದೂ ಸುದ್ದಿಯಾಗುವುದಿಲ್ಲ ಎಂದರು. ತಿಂಗಳಿಗೆ ಬರುವ 40 ಸಾವಿರ ಸಂಬಳದಲ್ಲಿ ಶಾಸಕರು ಹೇಗೆ ಬದುಕು ಸಾಗಿಸಬೇಕೆಂದು ಪ್ರಶ್ನಿಸಿದರು. ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರು, ಮುಖ್ಯಮಂತ್ರಿಗಳು ಸೇರಿದಂತೆ ಯಾವುದೇ ಮಂತ್ರಿಗಳ ಮಾತುಗಳನ್ನು ಅಧಿಕಾರಶಾಹಿ ಕೇಳುವುದಿಲ್ಲ ಎನ್ನುತ್ತಾರೆ. ಆದರೆ ಪ್ರತಿಪಕ್ಷದ ನಾಯಕರು ಅಧಿಕಾರಕ್ಕೆ ಬಂದಾಗ ಮತ್ತೆ ಆಡಳಿತ ಪಕ್ಷದಲ್ಲಿದ್ದ ನಾಯಕರು ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತು ಮತ್ತೆ ಅದೇ ಮಾತನಾಡುತ್ತಾರೆ. ಈ ಮಾತುಗಳನ್ನು ಕೇಳಿ ರೋಸಿಹೋಗಿದೆ. ಈ ಬಗ್ಗೆ ಮಾಧ್ಯಮಗಳು ಹೆಚ್ಚು ಗಮನಹರಿಸಿ ಸತ್ಯವನ್ನು ಬಹಿರಂಗಗೊಳಿಸಬೇಕಾಗಿದೆ ಎಂದು ಜಾರಕಿಹೊಳಿ ಅಭಿಪ್ರಾಯಪಟ್ಟರು. ತಾವು ಗೋಕಾಕ್ನ ಪುರಸಭೆಯನ್ನು ಮುನ್ನಡೆಸುತ್ತಿದ್ದಾಗ ಹೊಸದಾಗಿ ನಿಮರ್ಿಸಲಾಗಿದ್ದ ರಸ್ತೆಗೆ ತಿಳಿಯದೇ ಹಾನಿ ಉಂಟುಮಾಡಿದ್ದ ತಮ್ಮ ತಂದೆಯವರಿಗೆ 30 ಸಾವಿರ ದಂಡ ವಿಧಿಸಿದ್ದಾಗಿ ತಿಳಿಸಿ ತಾವು ಸದಾ ನ್ಯಾಯ, ಸತ್ಯದ ಪರವಾಗಿದ್ದು, ನಿಷ್ಠೂರವಾದಿಯಾಗಿದ್ದೇನೆ. ವ್ಯವಸ್ಥೆಯೊಂದಿಗೆ ಎಂದಿಗೂ ರಾಜೀ ಮಾಡಿಕೊಳ್ಳುವುದಿಲ್ಲ ಎಂದರು. 1995 ರಿಂದಲೂ ತಮಗೆ ಒಂದು ಚಾನೆಲ್ ಆರಂಭಿಸುವ ಕನಸಿತ್ತು. ಆದರೆ ತಾಂತ್ರಿಕ ಅಡಚಣೆಗಳು ಹಾಗೂ ಮಾಹಿತಿ ಕೊರತೆಯಿಂದ ಇದು ಸಾಧ್ಯವಾಗಿರಲಿಲ್ಲ. ಈಗ ಆಥರ್ಿಕವಾಗಿ ಸದೃಢವಾಗಿದ್ದು ಇನ್ನೂ ಮೂರರಿಂದ ನಾಲ್ಕು ಛಾನೆಲ್ ಆರಂಭಿಸುವ ಗುರಿಹೊಂದಿರುವುದಾಗಿ ತಿಳಿಸಿದರು. ಕನರ್ಾಟಕ ಸಮಾಚಾರ್ ಅಧವಾ ಕನರ್ಾಟಕ samaya ಎಂಬ ದಿನ ಪತ್ರಿಕೆಯನ್ನು ಆರಂಭಿಸುವುದು ತಮ್ಮ ಗುರಿಗಳಲ್ಲಿ ಒಂದು ಎಂದು ಅವರು ತಿಳಿಸಿದರು. ನನಗೊಂದು ಬದುಕಿನ ಹಿನ್ನೆಲೆ ಇದೆ ಎಂದು ತಿಳಿಸಿದ ಅವರು, ಟಿಆರ್ಪಿ ರೇಸ್ನಲ್ಲಿ ನಮ್ಮ ಚಾನೆಲ್ ಪಾಲ್ಗಳ್ಳುವುದಿಲ್ಲ. ಆದರೆ ನಮ್ಮ ಜನಪರ ಗಟ್ಟಿ ಸುದ್ದಿಗಳ ಮೂಲಕವೇ ಇತರ ಚಾನೆಲ್ಗಳನ್ನು ಸಮಯ ಚಾನೆಲ್ ಹಿಂದಿಕ್ಕಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸಮಯ ಚಾನೆಲ್ನ ಮಾತೃ ಸಂಸ್ಥೆ ಸತೀಶ್ ಶುಗರ್ಸ್ನ ಅಧ್ಯಕ್ಷ ಪೃಥ್ವಿರಾಜ್, ಕಾಪರ್ೊರೇಟ್ ಪ್ಲಾನಿಂಗ್ನ ಜಿಎಂ ಸಿದ್ದು ವಡಣ್ಣವರ್, ನಿದರ್ೇಕರಾದ ಪ್ರದೀಪ್ ಇಂಡಿ, ಉಪಾಧ್ಯಕ್ಷರಾದ ಕ್ಯಾಪ್ಟನ್ ಯೋಗಾನಂದ್ ಮಳೀಮಠ್, ಸಲಹೆಗಾರರಾದ ಆನಂದ್ ರಾಜ್ ಅರಸ್ ಉಪಸ್ಥಿತರಿಸ್ದರು. ಸಮಯ ಚಾನೆಲ್ನ ಮುನ್ನೂರೈವತ್ತಕ್ಕೂ ಹೆಚ್ಚು ಸಿಬ್ಬಂದಿ ಹಾಜರಿದ್ದರು.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಜೂನ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಮೇ   ಜುಲೈ »
   12345
  6789101112
  13141516171819
  20212223242526
  27282930  
 • ವಿಭಾಗಗಳು