ಬಿಎಂಐಸಿಪಿ ಪುನರ್ವಸತಿ ಮತ್ತು ಪುನರ್ಸ್ಥಾಪನೆ ಪ್ಯಾಕೇಜ್ನ ಸ್ಪಷ್ಟ ಉಲ್ಲಂಘನೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಆರ್ಡರ್ ವಯೊಲೇಷನ್ ಕ್ಯಾಮರಾಮನ್: ಫೈಲ್: ಡೇಟ್: ಟಿಸಿಆರ್: ಆಂಕರ್: ನೈಸ್ ರಸ್ತೆ ನಿಮರ್ಾಣಕ್ಕಾಗಿ ಮೊನ್ನೆ ತಾನೆ ಪಟ್ಟಾಭಿರಾಮನ್ಗೆ ಸೇರಿದ ಭೂಮಿಯನ್ನು ವಶಪಡಿಸಿಕೊಂಡಿರುವ ಕ್ರಮ 1999 ರಲ್ಲಿ ಆಗಿನ ಸಕರ್ಾರ ಹೊರಡಿಸಿದ್ದ ಬಿಎಂಐಸಿಪಿ ಪುನರ್ವಸತಿ ಮತ್ತು ಪುನರ್ಸ್ಥಾಪನೆ ಪ್ಯಾಕೇಜ್ನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಬಿಎಂಐಸಿ ಯೋಜನೆ ಸಂತ್ರಸ್ಥರ ಪರಿಹಾರ ಜಾರಿಗಾಗಿಯೇ ಪ್ರತ್ಯೇಕವಾಗಿ ಹೊರಡಿಸಿದ್ದ ಸಕರ್ಾರಿ ಆದೇಶದ ಪ್ರತಿ ಸಮಯ ನ್ಯೂಸ್ಗೆ ಲಭ್ಯವಾಗಿದೆ. ಈ ಸಕರ್ಾರಿ ಆಜ್ಞೆಯಲ್ಲಿ ನೈಸ್ ರಸ್ತೆಗಾಗಿ ಭೂಮಿಯನ್ನು ವಶಪಡಿಸಿಕೊಳ್ಳುವಾಗ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು ಜತೆಗೆ ಸಂತ್ರಸ್ತರ ಪುನರ್ವಸತಿಯನ್ನು ಹೇಗೆ ಕೈಗೊಳ್ಳಬೇಕೆಂದು ವಿವರವಾಗಿ ದಾಖಲಿಸಲಾಗಿದೆ. ಫ್ಯಾಕೇಜ್….ಫಾಲೋಸ್……. ವಾಯ್ಸ್ ಓವರ್: ಅದು 1995 ರಲ್ಲಿ ಆಗಿನ ಹೆಚ್.ಡಿ. ದೇವೇಗೌಡರ ಸಕರ್ಾರ ನೈಸ್ ಸಮೂಹದ ಕಂಪನಿಗಳ ಜತೆ ಬಿಎಂಐಸಿ ಯೋಜನೆಗಾಗಿ ಒಪ್ಪಂದ ಮಾಡಿಕೊಳ್ಳುತ್ತದೆ. ಆನಂತರ ಜೆ.ಎಚ್. ಪಟೇಲ್ ಸಕರ್ಾರ ನೈಸ್ ಸಂಸ್ಥೆ ಜತೆ ಮೂಲ ಒಪ್ಪಂದಕ್ಕೆ ಸಹಿ ಹಾಕುತ್ತದೆ. ಇದರ ಬೆನ್ನಹಿಂದೆಯೇ ಬಿಎಂಐಸಿ ಯೋಜನೆಯಿಂದ ಸಂತ್ರಸ್ಥರಾದವರಿಗೆ ನೈಸ್ ಕಂಪನಿ ಹೇಗೆ ಪುನರ್ವಸತಿ ಕಲ್ಪಿಸಿಕೊಡಬೇಕು, ಹೇಗೆ ಒಕ್ಕಲೆಬ್ಬಿಸಿದವರನ್ನು ಪುನರ್ ಪ್ರತಿಷ್ಠಾಪಿಸಬೇಕೆಂಬ ಬಗ್ಗೆ ಸಕರ್ಾರ ಷರತ್ತುಗಳನ್ನು ವಿಧಿಸುತ್ತದೆ. ಇದಕ್ಕೆ ನೈಸ್ ಕಂಪನಿಯೂ ಸಮ್ಮತಿ ಸೂಚಿಸಿದ ನಂತರ 20. 11. 1999 ರಲ್ಲಿ ಅದು ಸಕರ್ಾರಿ ಆದೇಶವಾಗಿ ಹೊರಬೀಳುತ್ತದೆ. ಈ ಆದೇಶದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಹೇಗೆ ಪುನರ್ವಸತಿ ಕಲ್ಪಿಸಬೇಕು. ಸಕರ್ಾರಿ ಭೂಮಿ ಸ್ವಾಧೀನದಲ್ಲಿರುವವರಿಗೆ ಯಾವ ರೀತಿ ಪರಿಹಾರ ಕೊಡಬೇಕು. ಜತೆಗೆ 20 ಕ್ಕಿಂತ ಹೆಚ್ಚು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಿದಾಗ ಹೇಗೆ ಅವರನ್ನು ಪುನರ್ಸ್ಥಪಿಸಬೇಕೆಂಬ ಬಗ್ಗೆ ಸ್ಪಷ್ಟ ನಿಯಮಗಳನ್ನು ರೂಪಿಸಲಾಗಿದೆ. ಜತಗೆ ಯಾವುದೇ ನಿವಾಸಿಗಳನ್ನು ಒಕ್ಕಲೆಬ್ಬಿಸುವಾಗ ಕೆಐಎಡಿಬಿ ನಿಯಮದ ಜತೆ ಬಿಎಂಐಸಿಪಿ ಪುನರ್ವಸತಿ ನಿಯಮದಲ್ಲೂ ಕನಿಷ್ಠ 90 ದಿನಗಳ ನೋಟೀಸು ನೀಡಬೇಕು. ಸ್ಥಳಾಂತರಗೊಳ್ಳುವವರಿಗೆ ಸೂಕ್ತ ಪರಿಹಾರದ ಜತೆ ಮಾರ್ಗರ್ದನ ನೀಡಿ ಅವರನ್ನು ಸ್ಥಳಾಂತರಿಸಬೇಕೆಂದೂ ನಮೂದಿಸಲಾಗಿದೆ. ಈ ಸಂಬಂಧ 2001 ರಲ್ಲಿ ತಿದ್ದುಪಡಿ ಮಾಡಲಾದ ಪುನರ್ವಸತಿ ಮತ್ತು ಪುನರ್ಸ್ಥಾಪನೆ ಆದೇಶದ ಕ್ಲಾಸ್ 1.5.3.3. ಎ ಕಾಲಂನಲ್ಲೂ ಸಹ ಉಲ್ಲೇಖವಿದೆ. ಹೀಗಿದ್ದಾಗಲೂ ನೈಸ್ ಕಂಪನಿ ಆಣತಿ ಮೇರೆಗೆ ಕೆಐಎಡಿಬಿ ಪಟ್ಟಾಭಿರಾಮನ್ಗೆ ಯಾವುದೇ ಲಿಖಿತ ನೋಟಸು ನೀಡದೇ ಅವರನ್ನು ಒಕ್ಕಲೆಬ್ಬಿಸಿದೆ. ಇದು ಸಕರ್ಾರದ ಆದೇಶವನ್ನು ಸಕರ್ಾರಿ ಸಂಸ್ಥೆಯೊಂದು ಮುರಿದಿರುವುದಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಸಕರ್ಾರ ಈಗಲಾದರೂ ಪ್ರತಿಕ್ರಿಯಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಜತೆಗೆ ಮೂಲ ಒಪ್ಪಂದದ ಅಲೈನ್ಮೆಂಟ್ ಬದಲಾಯಿಸಿ ಫೆರಿಫರಲ್ ರಸ್ತೆ ನಿಮರ್ಾಣದ ಹೆಸರಿನಲ್ಲಿ ಬೆಂಗಳೂರು ಸುತ್ತಮುತ್ತ ಕೋಟ್ಯಂತರ ರುಪಾಯಿ ಮೌಲ್ಯದ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ಅಶೋಕ್ ಖೇಣಿ, ರಸ್ತೆ ನಿಮರ್ಿಸಲು ತಾನು ಯಾವುದೇ ಮಟ್ಟಕ್ಕೂ ಇಳಿಯಲು ಸಿದ್ಧ ಎಂಬುದನ್ನು ಈ ಘಟನೆ ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟಂತಿದೆ. –ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್, ಬೆಂಗಳೂರು

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಜುಲೈ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಜೂನ್   ಆಗಸ್ಟ್ »
   123
  45678910
  11121314151617
  18192021222324
  25262728293031
 • ವಿಭಾಗಗಳು