ಹೆಚ್.ಡಿ. ದೇವೇಗೌಡ, ವಿಧಾನಸಭೆಯ ಮೊಗಸಾಲೆಗೆ ದಿಢೀರನೆ ಭೇಟಿ ನೀಡಿ ದೊಡ್ಡ ಲಾಭವನ್ನೇ ಜೋಳಿಗೆಗೆ ಇಳಿಸಿಕೊಂಡು ಹೋಗಿದ್ದಾರೆ

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ದೇವೇಗೌಡ
ಡೇಟ್: 14- 7- 2010
ಬೆಂಗಳೂರು.

ಆಂಕರ್: ಪ್ರಸಕ್ತ ವಿಧಾನಸಭೆಯ ಬಿಕ್ಕಟ್ಟಿನಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಲೆಕ್ಕಾಚಾರ ನಡೆದಿರುವಾಗಲೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ವಿಧಾನಸಭೆಯ ಮೊಗಸಾಲೆಗೆ ದಿಢೀರನೆ ಭೇಟಿ ನೀಡಿ ದೊಡ್ಡ ಲಾಭವನ್ನೇ ಜೋಳಿಗೆಗೆ ಇಳಿಸಿಕೊಂಡು ಹೋಗಿದ್ದಾರೆ. ಏಕೆಂದರೆ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಗಲಿನ ಮೇಲೆ ಕೈ ಹಾಕುವ ಮೂಲಕ ಅವರು ಹಲವಾರು ರಾಜಕೀಯ ದಾಳಗಳನ್ನು ಉರುಳಿಸಿದ್ದಾರೆ.

ವಾಯ್ಸ್ ಓವರ್ 1:

ಜೆಡಿಎಸ್ ಪಕ್ಷಕ್ಕೆ ಮುಂಬರುವ ಚುನಾವಣೆಗಳಲ್ಲಿ ತನ್ನ ನೆಲೆಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದು ದೊಡ್ಡ ಚಿಂತೆಯಾಗಿತ್ತು. ಒಂದು ಕಡೆ ಕುಮಾರಸ್ವಾಮಿ ಅನಾರೋಗ್ಯ, ಮತ್ತೊಂದು ಕಡೆ ರಾಜ್ಯವಿಡೀ ಚಲಾವಣೆಯಾಗದ ನಾಣ್ಯದಂತಾಗಿರುವ ದೇವೇಗೌಡರ ವರ್ಚಸ್ಸು, ಮತ್ತೊಂದು ಕಡೆ ಖಾಲಿಯಾಗಿರುವ ಪಕ್ಷದ ಖಜಾನೆ. ಜತೆಗೆ ಪಕ್ಷದಿಂದ ದೂರವಾಗಿರುವ ಲಿಂಗಾಯಿತ, ಕುರುಬ ಸಮುದಾಯವನ್ನು ಹೇಗೆ ಓಲೈಸುವುದು ಎಂಬುದು ಜೆಡಿಎಸ್ಗೆ ಬಿಡಿಸಲಾಗದ ಕಗ್ಗಂಟಾಗಿತ್ತು. ಆದ್ದರಿಂದಲೇ ಜೆಡಿಎಸ್ ಮುಂದಾಲೋಚನೆ ಮಾಡಿ ಹೊಸ ಕಾಂಬಿನೇಷನ್ಗೆ ಹುಡುಕಾಡತೊಡಗಿತ್ತು. ಇದರ ಮೊದಲ ಭಾಗವೇ ಸಿದ್ದರಾಮಯ್ಯನವರನ್ನು ಹೇಗಾದರೂ ಮಾಡಿ ಒಲಿಸಿಕೊಳ್ಳುವುದು ಜೆಡಿಎಸ್ಗೆ ಬೇಕಾಗಿತ್ತು.

ಬೈಟ್ 1; ಎಂ. ಸಿ. ನಾಣಯ್ಯ, ಜೆಡಿಎಸ್ ನಾಯಕ
ಟಿಸಿಆರ್:

ವಾಯ್ಸ್ ಓವರ್ 2:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ಗಳಿಸಿದ್ದು ಕೇವಲ 28 ಸ್ಥಾನಗಳು, ಅದಕ್ಕೂ ಮುನ್ನ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅದು ಗಳಿಸಿದ್ದು 58 ಸ್ಥಾನ. ಬಿಬಿಎಂಪಿ ಚುನಾವಣೆಯಲ್ಲಿ ಗಳಿಸಿದ್ದು ಕೇವಲ 15 ಸ್ಥಾನ. ಹೀಗೆ ಸಾಲು ಸಾಲಾಗಿ ಬಂದ ಚುನಾವಣೆಗಳಲ್ಲಿ ಶಕ್ತಿಗುಂದುತ್ತಾ ಬಂದಿರುವ ಜೆಡಿಎಸ್ಗೆ ಮುಂಬರುವ ಚುನಾವಣೆಗಳನ್ನು ಎದುರಿಸುವುದು ಹೇಗೆ ಎಂಬುದೇ ಚಿಂತೆ. ಒಂದು ಕಡೆ ಲಿಂಗಾಯಿತ ಸಮುದಾಯ ಸಂಪೂರ್ಣವಾಗಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದರೆ, ಕುರುಬ ಸಮುದಾಯ ಕಾಂಗ್ರೆಸ್ ಜತೆಗಿದೆ. ಇದಲ್ಲದೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ಗೆ ಚುನಾವಣಾ ಸಮಯದಲ್ಲಿ ಅಗತ್ಯ ಆಥರ್ಿಕ ನೆರವು ನೀಡಲು ಈಗ ಜನರಿದ್ದಾರೆ. ಹೀಗಿರುವಾಗ ಯಾವ ಕಾಂಬಿನೇಷನ್ ಇಟ್ಟುಕೊಂಡು ಮುಂದಿನ ಚುನಾವಣೆಗಳನ್ನು ಎದುರಿಸುವುದು. ಅದರಲ್ಲೂ ದೂರದ ವಿಧಾನಸಭಾ ಚುನಾವಣೆಯನ್ನು ಹೇಗೆ ಎದುರಿಸುವುದು ಎಂಬುದೇ ಜೆಡಿಎಸ್ಗಿರುವ ಚಿಂತೆಯ ಮೂಲ. 

ಬೈಟ್ 2: ಮರಿತಿಬ್ಬೇಗೌಡ, ವಿಧಾನಪರಿಷತ್ ಸದಸ್ಯ ಅಥವಾ ಸಂದೇಶ್ ನಾಗರಾಜ್, ಜೆಡಿಎಸ್ ಮುಖಂಡ 
ಟಿಸಿಆರ್:
ವಾಯ್ಸ್ ಓವರ್ 2:

ಜೆಡಿಎಸ್ನ ವರಿಷ್ಠರಿಗೆ ಈ ಚಿಂತೆ ಯಾವಾಗ ಕಾಡಲು ಶುರುವಾಯ್ತೋ ಆಗಿನಿಂದಲೇ ಸಿದ್ದರಾಮಯ್ಯನವರ ಜತೆ ಸಖ್ಯವನ್ನು ಹೆಚ್ಚಿಸಿಕೊಳ್ಳಲು ತಮ್ಮ ಪುತ್ರ ಹೆಚ್.ಡಿ. ರೇವಣ್ಣನವರಿಗೆ ದೊಡ್ಡ ಗೌಡರು ಹಸಿರು ನಿಶಾನೆ ತೋರಿದ್ದರು. ಆದ್ದರಿಂದಲೇ ಜೆಡಿಎಸ್ ಮುಖಂಡ ಹೆಚ್.ಡಿ. ರೇವಣ್ಣ- ಸಿದ್ದರಾಮಯ್ಯನವರ ಭೇಟಿ ಮೈಸೂರಿನಲ್ಲಿ ಪದೇ ಪದೇ ನಡೆಯುತ್ತಿತ್ತು.
ಈ ಭೇಟಿ ಸಂದರ್ಭದಲ್ಲಿ ಮುಂದಿನ ಚುನಾಚಣೆಯ ನೀಲಿ ನಕ್ಷೆ ತಯಾರಾಗುತ್ತಿದೆ ಎಂದೇ ಉನ್ನತ ಮೂಲಗಳು ತಿಳಿಸಿದ್ದವು. ಸಿದ್ದರಾಮಯ್ಯವನರ್ನು ಭೇಟಿ ಮಾಡಲು ಕೇವಲ ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಗೌಡರು, ನಿನ್ನೆ ಸಿಕ್ಕಿದ್ದ ಅವಕಾಶವನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಸಿದ್ದು ಹೆಗಲ ಮೇಲೆ ಕೈ ಹಾಕುವ ಮೂಲಕ ಜನತಾಪರಿವಾರ ಒಂದಾಗಲು ತುಂಬಾ ಎಡರುತೊಡರುಗಳೇನು ಇಲ್ಲಾ ಎಂಬ ಸಂದೇಶವನ್ನು ಕಳುಹಿಸಿರುವ ಗೌಡರು, ಸಿದ್ದು ಮುಖ್ಯಮಂತ್ರಿಯಾದರೆ ತಮ್ಮದೇನು ಅಭ್ಯಂತರವೇನೂ ಇಲ್ಲಾ  ಎಂಬ ಮತ್ತೊಂದು ಸಂದೇಶವನ್ನು ರಾಜ್ಯ ರಾಜಕೀಯಕ್ಕೆ ಕಳುಹಿಸಿದ್ದಾರೆ. ಈ ಮೂಲಕ ತಮ್ಮ ಮೇಲೆ ಕುರುಬ ಸಮುದಾಯಕ್ಕಿದ್ದ ಕಹಿಯನ್ನೂ ಗೌಡರು ಕೊಂಚ ತಗ್ಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಒಂದೇ ಕಲ್ಲಿನಲ್ಲಿ ಹಲವಾರು ಹಕ್ಕಿಗಳನ್ನು ಗೌಡರು ಹೊಡೆದು ಉರುಳಿಸಿದ್ದಾರೆ.   

–ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಜುಲೈ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಜೂನ್   ಆಗಸ್ಟ್ »
   123
  45678910
  11121314151617
  18192021222324
  25262728293031
 • ವಿಭಾಗಗಳು