BMIC- the biggest scandal on the earth, a dip inside the scandal

ನೈಸ್ ಅಥವಾ ಬಿಎಂಐಸಿ ಯೋಜನೆ: ಬಿಎಂಐಸಿ ಯೋಜನೆ ಕುರಿತಂತೆ ನಾನು ಪೂವರ್ಾಗ್ರಹ ಪೀಡಿತನಾಗಿಲ್ಲ. ಏಕೆಂದರೆ ಈ ಯೋಜನೆ ವಿರುದ್ಧ ನಾನೆಂದೂ ಅಲ್ಲ. ಆದರೆ ಈ ಯೋಜನೆ ಹೆಸರಿನಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಕೋಟಿ ರುಪಾಯಿ ಬೆಲೆ ಬಾಳುವ ಅಮಾಯಕ ರೈತರ ಜಮೀನುಗಳನ್ನು ಬಲವಂತದಿಂದ ಕಿತ್ತುಕೊಳ್ಳುತ್ತಿರುವವರ ವಿರುದ್ಧ ಈ ನನ್ನ ಧ್ವನಿ. ನನಗೆ ಗೊತ್ತಿದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಈ ಯೋಜನೆ ವಿರುದ್ಧ 2004 ರಿಂದ ಈಚೆಗೆ ಹೋರಾಡುತ್ತಾ ಬಂದಿದ್ದರೂ ಅವರು ಈ ಪ್ರಕರಣದಲ್ಲಿ ರೈತರು, ಸಕರ್ಾರಕ್ಕೆ ಆಗಿರುವ ಅನ್ಯಾಯವನ್ನು ಸರಿಯಾಗಿ ಮಾಧ್ಯಮಕ್ಕೆ, ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ ಎಂಬುದು ನನ್ನ ಅಭಿಪ್ರಾಯ. ಆದರೆ ಅವರ ಹೋರಾಟ, ಈ ಯೋಜನೆ ಬಗ್ಗೆ ಅವರಿಗಿರುವ ಕಾಳಜಿಯಲ್ಲಿ ನನಗೆ ಯಾವುದೇ ಅನುಮಾನ ಇಲ್ಲ. ಬೆಂಗಳೂರು ಮೈಸೂರು ನಡುವೆ ಅಗಲವಾದ ದೊಡ್ಡ ರಸ್ತೆ ನಿಮರ್ಿಸಬೇಕೆಂಬುದು ಆಗಿನ ಮುಖ್ಯಮಂತ್ರಿ ದಿವಂಗತ ನಿಜಲಿಂಗಪ್ಪನವರ ಕನಸು. ಹೀಗೆ ಮುಖ್ಯಮಂತ್ರಿಯೊಬ್ಬರ ಮನಸ್ಸಿನಲ್ಲಿ ಚಿಗುರೊಡೆದ ಆಲೋಚನೆ ಸಾಕಾರಗೊಂಡಿದ್ದು 1995 ರಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ದೇವೇಗೌಡರಿಗೆ. ನಿಜವಾಗಿಯೂ ಅವರಿಗೆ ಈ ರಾಜ್ಯದ ಬಗ್ಗೆ, ಅದರ ಅಭಿವೃದ್ಧಿ ಬಗ್ಗೆ ಕಾಳಜಿ ಇತ್ತು ದೂರದೃಷ್ಟಿಯೂ ಹೆಚ್ಚಾಗಿತ್ತು. ಆದ್ದರಿಂದಲೇ ಅವರು ಆಗ ತಾನೆ ದೇಶಕ್ಕೆ ಪರಿಚಯವಾಗಿದ್ದ ಆಥರ್ಿಕ ಉದಾರೀಕರಣ, ಜಾಗತೀಕರಣದ ಭಾಗವಾಗಿಯೇ ಬಂದ ಬೂಟ್ (ಬಿಲ್ಟ್, ಓನ್, ಆಪರೇಟ್, ಟ್ರಾನ್ಸ್ಫರ್) ವ್ಯವಸ್ಥೆಯಡಿ ಬೆಂಗಳೂರು ಮೈಸೂರಿನ ನಡುವೆ ಆರು ಪಥದ ರಸ್ತೆ ನಿಮರ್ಾಣಕ್ಕೆ ಕೈ ಹಾಕಿದರು. ಈಗಿರುವ ರಸ್ತೆಯನ್ನೇ ಅಗಲೀಕರಣ ಮಾಡುವ ಇರಾದೆ ಅವರಿಗೆ ಬಂದರೂ ಈಗಾಗಲೇ ರಸ್ತೆ ಬದಿ ಸಾಕಷ್ಟು ಅಭಿವೃದ್ಧಿಯಾಗಿರುವ ರಾಮನಗರ, ಚನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣವನ್ನು ಒಡೆಯುವುದು ಅವರಿಗೆ ಇಷ್ಟವಿರಲಿಲ್ಲ. ಆ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ನಡುವೆ ಆರು ಪಥದ ರಸ್ತೆ ನಿಮರ್ಿಸಲು ಬಂದಿದ್ದೇ ನೈಸ್ ಕಂಪನಿಗಳ ಸಮೂಹ ಅಥರ್ಾತ್, ಸ್ಯಾಬ್ ಇಂಟರ್ ನ್ಯಾಷನಲ್ ಹಾಗೂ ಕಲ್ಯಾಣಿ ಗ್ರೂಪ್ ಆಫ್ ಕಂಪನಿಗಳು. ಅಮೆರಿಕಾದ ಮೆಸಾಚುಟೆಸ್ನ ಆಗಿನ ಗವರ್ನರ್ ವಿಲಿಯಮ್ ವೆಲ್ಡ್ ಮತ್ತು ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ದೇವೇಗೌಡರು 1995 ರ ಫೆಬ್ರವರಿಯಲ್ಲಿ ಈ ಯೋಜನೆಗೆ ಅಂಕಿತ ಹಾಕಿದ್ದರು. ಹೀಗೆ ಶುರುವಾದ ಈ ಯೋಜನೆ ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ನೈಸ್ ಕಂಪನಿ ಹಣ ತೊಡಗಿಸಿ ರಸ್ತೆ ನಿಮರ್ಾಣಮಾಡಿ ಆನಂತರ ಈ ರಸ್ತೆಯನ್ನು ಸಕರ್ಾರಕ್ಕೆ ಹಿಂತಿರುಗಿಸುವುದೆಂದು ಒಪ್ಪಂದವಾಗಿತ್ತು. ಜೆ.ಹೆಚ್. ಪಟೇಲರ ಕಾಲದಲ್ಲಿ ಈ ಬಗ್ಗೆ ಇನ್ನಷ್ಟು ವಿವರಗಳನ್ನು ಸೇರಿಸಿ ಯೋಜನೆ ಹೇಗಿರಬೇಕು, ಹೇಗೆ ಜಾರಿಯಾಗಬೇಕು, ಎಲ್ಲಿರಬೇಕು, ಎಷ್ಟಿರಬೇಕೆಂದು ಜಂತೆಗೆ ಯಾವ ಜಮೀನುಗಳನ್ನು ಈ ಯೋಜನೆ ಜಾರಿಗೊಳಿಸಲು ಬಳಸಬೇಕೆಂದು ಸವರ್ೆ ಮಾಡಿಸಿ, ರಸ್ತೆ ಅಲೈನ್ಮೆಂಟ್ನ್ನು ಸ್ಪಷ್ಟವಾಗಿ ವಿವರಿಸಿ ಫ್ರೇಮ್ ವರ್ಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆಗಲೂ ಅಶೋಕ್ ಖೇಣಿ ಇರಾದೆ, ಸಕರ್ಾರದ ಇರಾದೆ ಎರಡೂ ಬೆಂಗಳೂರು- ಮೈಸೂರಿನ ನಡುವೆ ಅದ್ಭುತವಾದ ಆರು ಪಥಗಳ ರಸ್ತೆ ನಿಮರ್ಿಸಿ ಲಕ್ಷಾಂತರ ಜನರಿಗೆ ಅನುಕೂಲ ಮಾಡುವುದಾಗಿತ್ತು. ಆದರೆ ಯಾವಾಗ 1999 ಡಿಸೆಂಬರ್ನಲ್ಲಿ ಜೆ.ಎಚ್. ಪಟೇಲ್ ಸಕರ್ಾರ ಹೋಗಿ ಎಸ್.ಎಂ. ಕೃಷ್ಣ ಸಕರ್ಾರ ಬಂತೋ ಆಗ ಈ ಯೋಜನೆ ದಾರಿ ತಪ್ಪಲು ಶುರುವಾಯಿತು. ಆಗಿನ ಲೋಕೋಪಹೋಗಿ ಇಲಾಖೆ ಪ್ರಧಾನ ಕಾರ್ಯದಶರ್ಿಯಾಗಿದ್ದ ಸಿ.ಆರ್. ರಮೇಶ್, ಆಗಿನ ಸಕರ್ಾರದ ಪ್ರಧಾನ ಕಾರ್ಯದಶರ್ಿಯಾಗಿದ್ದ ಬಿ.ಎಸ್. ಪಾಟೀಲ್ ಇವರ ಜತೆ ಸೇರಿಕೊಂಡ ಕಾಂಗ್ರೆಸ್ನ ಹಿರಿಯ ಮುಖಂಡrobfbru,  ಕೆಪಿಸಿಸಿ…..nice ಮುಖ್ಯಸ್ಥ ಅಶೋಕ್ ಖೇಣಿ ಜತೆ ಕೈ ಜೋಡಿಸಿದರ ಫಲವಾಗಿ ಈ ಯೋಜನೆ ದಾರಿ ತಪ್ಪಲು ಕಾರಣವಾಯಿತು. ಏಕೆಂದರೆ 2004 ರ ಬಿಎಂಐಸಿಪಿ ಅಧ್ಯಕ್ಷರಾಗಿದ್ದ (ಡಿ), ಹಳೆಯ ಫ್ರೇಮ್ವರ್ಕ ಒಪ್ಪಂದದ ರಸ್ತೆ ಅಲೈನ್ಮೆಂಟನ್ನು ಬದಲಾಯಿಸಿ ಹೊಸ ಓಡಿಪಿ ಯೋಜನೆಯನ್ನು ಜಾರಿಗೊಳಿಸಿ ಅದರ ಪ್ರಕಾರ ಬೆಂಗಳೂರು ಸುತ್ತ ನೈಸ್ ಫೆರಿಫೆರಲ್ ರಸ್ತೆ ನಿಮರ್ಾಣ ಮಾಡಲು ಅವಕಾಶ ಮಾಡಿಕೊಟ್ಟರು. ಈ ರಸ್ತೆ 1995 ರ ಜನವರಿಯಲ್ಲಿಯೇ ಬೆಂಗಳೂರು ಸುತ್ತ ನಿಮರ್ಿಸಲು ನಿರ್ಧರಿಸಿದ್ದ ಬಿಡಿಎ ಔಟರ್ ಪೆರಿಫೆರಲ್ ರಸ್ತೆಯಿಂದ ಸುಮಾರು 2 ಕಿಲೋಮೀಟರ್ ರೆಡಿಯಸ್ನಲ್ಲಿ ನೈಸ್ ಪೆರಿಫೆರಲ್ ರಸ್ತೆ ಹಾದು ನಿಮರ್ಾಣವಾಗಬೇಕಾಗಿತ್ತು. ಆದರೆ ರಾಜಕಾರಣಿ, ಸಕರ್ಾರಿ ಅಧಿಕಾರಿಗಳು ಜತೆಗೆ ನೈಸ್ ಕಂಪನಿ ಮುಖ್ಯಸ್ಥರ ದುಷ್ಟಕೂಟ ಯಾವಾಗ ಸೃಷ್ಟಿಯಾಯಿತೋ ಆವಾಗ ಬೆಂಗಳೂರಿನ ದಕ್ಷಿಣ ಭಾಗದ ಬಿಡಿಎಯ ಔಟರ್ ರಿಂಗ್ ರಸ್ತೆಯನ್ನೇ ನೈಸ್ ಪೆರಿಫರಲ್ ರಸ್ತೆಯನ್ನಾಗಿ ಕನ್ವಟರ್್ ಮಾಡಿಕೊಡಲಾಯಿತು. ಇದರ ಪರಿಣಾಮ ಬೆಂಗಳೂರಿನ ಸಮೀಪವೇ ನೈಸ್ ಕಂಪನಿಗೆ ಸಾವಿರಾರು ಎಕರೆ ಭೂಮಿ ಸಿಕ್ಕುವಂತಾಯಿತು. ಇದರ ರುಚಿ ಹತ್ತಿದ ಕೂಡಲೇ ಅಶೋಕ್ ಖೇಣಿ, ಬೆಂಗಳೂರಿನಿಂದ ಮೈಸೂರಿಗೆ ರಸ್ತೆ ನಿಮರ್ಿಸುವುದನ್ನು ಮರೆತು ಕೇವಲ ಬೆಂಗಳೂರಿನ ಸುತ್ತ ಪೆರಿಫೆರಲ್ ರಸ್ತೆ ನಿಮರ್ಾಣದಲ್ಲಿಯೇ ಕಾಲ ಕಳೆದರು. ಮೂಲ ಒಪ್ಪಂದ ಆದ ನಂತರ ಜೆ.ಎಚ್. ಪಟೇಲರ ಕಾಲದಲ್ಲಿಯೇ ಸುಮಾರು 20193 ಎಕರೆ ರೈತರ ಭೂಮಿ ಸ್ವಾಧೀನಕ್ಕೆ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಈ ಸಂದರ್ಭದಲ್ಲಿ ಪೆರಿಫರಲ್ ರಸ್ತೆ ಮೂಲ ಅಲೈನ್ಮೆಂಟ್ ಎಲ್ಲಿ ಬರುತ್ತದೆ, ಈ ರಸ್ತೆಗೆ ಯಾವ ಯಾವ ಹಳ್ಳಿಗಳ ಜಮೀನನ್ನು ವಶಪಡಿಸಿಕೊಳ್ಳಬೇಕು, ಸವರ್ೆ ನಂಬರ್ಗಳು ಯಾವುವು ಎಂಬುದನ್ನೆಲ್ಲಾ ವಿವರಿಸಲಾಗಿತ್ತು. 2004 ರಲ್ಲಿ ಆದ ಓಡಿಪಿ ಪ್ಲಾನ್ನಲ್ಲಿ ಪೆರಿಫರಲ್ ರಸ್ತೆ ಅಲೈನ್ಮೆಂಟನ್ನು ಬದಲಾಯಿಸಿದ ನಂತರ ಈ ಹಿಂದಿನ ಮೂಲ ಒಪ್ಪಂದದ ಅಲೈನ್ಮೆಂಟ್ಗೆ ಅನುಗುಣವಾಗಿ ಹೊರಡಿಸಿದ್ದ ಭೂಸ್ವಾಧೀನದ ನೋಟಿಫಿಕೇಷನನ್ನು ಸಕರ್ಾರ ರದ್ದುಗೊಳಿಸಲಿಲ್ಲ. ಪರಿಣಾಮ 1998 ರಿಂದ ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುವಂತೆಯೂ ಇಲ್ಲಾ ಅಥವಾ ಅಭಿವೃದ್ಧಿಪಡಿಸುವಂತಿಲ್ಲ ಎಂಬ ಪರಿಸ್ಥಿತಿ ನಿಮರ್ಾಣವಾಯಿತು. ಸಾವಿರಾರು ಮಂದಿ ರೈತರು, ಭೂಸ್ವಾಧೀನ ಪ್ರಕ್ರಿಯೆಯನ್ನು ಎದುರಿಸಲಾಗದೇ ಮಧ್ಯವತರ್ಿಗಳಿಗೆ ತಮ್ಮ ಭೂಮಿಯನ್ನು ಬರೆದುಕೊಟ್ಟು ಕೈತೊಳೆದುಕೊಂಡು ಊರುಬಿಟ್ಟರು. ದುರಂತದ ಸಂಗತಿಯೆಂದರೆ ನೈಸ್ ಕಂಪನಿಯಲ್ಲಿ ಕೆಲಸ ಮಾಡುವ ಹತ್ತಾರು ಮಂದಿ ಹೆಸರಿನಲ್ಲಿ ನೈಸ್ ಕಂಪನಿಯೇ ಹೀಗೆ ನೋಟಿಫಿಕೇಷನ್ ಹೊರಡಿಸಿದ ರೈತರ ಜಮೀನನ್ನು ಖರೀದಿಸಿದ್ದು. ಇದು ಮೂಲ ಒಪ್ಪಂದದ ಅಲೈನ್ಮೆಂಟ್ ರಸ್ತೆಗೆ ಜಮೀನು ಕಳೆದುಕೊಂಡ ರೈತರಿಗಷ್ಟೇ ಸೀಮಿತವಾಗಲಿಲ್ಲ ಇದು. ಓಡಿಪಿ ಪ್ಲಾನ್ನಲ್ಲಿ ಪೆರಿಫೆರಲ್ ರಸ್ತೆ ಅನೈನ್ಮೆಂಟ್ ಬದಲಾಯಿಸಿದ ನಂತರ ಹೊರಡಿಸಲಾದ ಭೂಸ್ವಾಧೀನ ನೋಟಿಫಿಕೇಷನ್ನಿಂದಲೂ ಸಾವಿರಾರು ಮಂದಿ ರೈತರು ಮಧ್ಯವತರ್ಿಳಿಗೆ ತಮ್ಮ ಜಮೀನುಗಳನ್ನು ಮಾರಿಕೊಂಡು ಊರು ಬಿಟ್ಟರು. ಇಲ್ಲೂ ನೈಸ್ ಕಂಪನಿ ಕೆಲಸಗಾರರೇ ಮಧ್ಯವತರ್ಿಗಳ ರೈತರ ಜಮೀನು ಖರೀದಿಸಿದ್ದು ಮತ್ತೊಂದು ದುರಂತ. ಇದಕ್ಕೆ ಕೆಐಎಡಿಬಿ ನೋ ಅಬ್ಜಕ್ಷನ್ ಸಟರ್ಿಫಿಕೇಶನ್ ನೀಡಿದ್ದು ಮಹಾ ಪಾಪ, ಜತೆಗೆ ದ್ರೋಹವೂ ಕೂಡ. ಹೀಗೆ ಎರಡೆರಡು ಬಾರಿ ನೈಸ್ ಸಂಸ್ಥೆ ಬೆಂಗಳೂರು ಸುತ್ತಮುತ್ತ ನಿಮರ್ಿಸಲು ಹೊರಟ ಪೆರಿಫೆರಲ್ ರಸ್ತೆಗೆ ರೈತರು ಜಮೀನು ಕಳೆದುಕೊಂಡರು. ಈ ಜಮೀನುಗಳಿಗೆ ಸಿಕ್ಕಿದ್ದು ಕೇವಲ ಬಿಡಿಗಾಸು. ಅಂದರೆ ಪ್ರತಿ ಎಕರೆಗೆ ಸಿಕ್ಕಿದ್ದು ಕೇಬಲ 80 ಸಾವಿರ ರುಪಾಯಿ. ಈ ದುರಂತದ ಮತ್ತೊಂದು ಭಾಗ ಎಂದರೆ 1998 ರಲ್ಲಿ ಪೆರಿಫರಲ್ ರಸ್ತೆ ನಿಮರ್ಾಣಕ್ಕಾಗಿ ಸಕರ್ಾರ ರೈತರ ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಹೊರಡಿಸಿತು. ಆಗ ಘೋಷಿಸಿದ್ದು ಪ್ರತಿ ಎಕರೆಗೆ 80 ಸಾವಿರ. ಆದರೆ ನೋಟಿಫಿಕೇಷನ್ ಹೊರಡಿಸಿದ ದಿನದಿಂದ ಇಲ್ಲಿನವರೆಗೆ ಸಾವಿರಾರು ರೈತರ ಜಮೀನುಗಳನ್ನು ಕೆಐಎಡಿಬಿ ಇನ್ನೂ ತನ್ನ ವಶಕ್ಕೆ ತೆಗೆದುಕೊಂಡಿಲ್ಲ. ರೈತರು ಈಗಲೂ 80 ಸಾವಿರ ರುಪಾಯಿಗೆ ಈ ಜಮೀನುಗಳನ್ನು ಅದರಲ್ಲೂ ಬೆಂಗಳೂರು ಸುತ್ತಮುತ್ತಲ ಜಮೀನನ್ನು ಕೆಐಎಡಿಬಿ ಮೂಲಕ ನೈಸ್ ಕಂಪನಿಗೆ ಬಿಟ್ಟುಕೊಡಬೇಕಾಗಿದೆ. ಈ ಜಮೀನುಗಳ ಮೌಲ್ಯವೇ ಸಾವಿರಾರು ಕೋಟಿ ರುಪಾಯಿಗಳು. ಹೀಗೆ ಮೂಲ ಒಪ್ಪಂದ ಉಲ್ಲಂಘನೆ ಮಾಡಿ, ಸಕರ್ಾರಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪೆರಿಫೆರಲ್ ರಸ್ತೆ ನಿಮರ್ಿಸಲು ಹೊರಟ ನೈಸ್ ಕಂಪನಿಗೆ ಆದ ದುಲರ್ಾಭಗಳು ನೂರಾರು. 2004 ರ ಎಸ್.ಎಂ. ಕೃಷ್ಣ ಸಕರ್ಾರದ ಅವಧಿಯಲ್ಲಿ ಆದ ಓಡಿಪಿ ಪ್ಲಾನ್ನಲ್ಲಿ ಮೂಲ ಅಲೈನ್ಮೆಂಟ್ನ್ನು ಬದಲಾಯಿಸಿದ ನಂತರ ಯಾವ ಸವರ್ೆ ನಂಬರ್ಗಳನ್ನು ಹೊಸ ಅಲೈನ್ಮೆಂಟ್ ರಸ್ತೆಗೆ ಬಳಸಲಾಗುತ್ತದೆ ಎಂದು ಸಕರ್ಾರ ಸ್ಪಷ್ಟಪಡಿಸಲಿಲ್ಲ. ಇದರ ಪರಿಣಮ ನೈಸ್ ಕಂಪನಿ ಕಂಡ ಕಂಡ ಜಮೀನುಗಳಿಗೆ ಕೆಐಎಡಿಬಿ ಮೂಲಕ ನೋಟಿಫಿಕೇಷನ್ ಹೊರಡಿಸಿತು. 91 ಮೀಟರ್ ಅಗಲದ ರಸ್ತೆ ನಿಮರ್ಾಣಕ್ಕೆ ಅಗತ್ಯವಿರುವ ಭೂಮಿಯನ್ನು ಹೊರತುಪಡಿಸಿ ರಸ್ತೆ ಅಲೈನ್ಮೆಂಟ್ನ ಸುತ್ತಮುತ್ತ ಸಿಗುವ ಭೂಮಿಗಳನ್ನು ಕೆಐಎಡಿಬಿ ಮೂಲಕ ನೈಸ್ ಸಂಸ್ಥೆ ವಶಕ್ಕೆ ತೆಗೆದುಕೊಂಡಿದೆ. ಪೆರಿಫರಲ್ ರಸ್ತೆ ಅಕ್ಕ ಪಕ್ಕ ನೀವು ನೈಸ್ ಸಂಸ್ಥೆ ಕಾಪೌಂಡ್ ಹಾಕಿರುವ ಜಾಗಗಳನ್ನು ನೀವು ಗಮನಿಸಬಹುದು. ಇದರಿಂದ ಒಂದು ಸ್ಪಷ್ಟವಾಗುತ್ತದೆ ನೈಸ್ ಕಂಪನಿ ರಸ್ತೆ ನಿಮರ್ಾಣ ಮಾಡುವುದನ್ನು ಬಿಟ್ಟು ಇಲ್ಲಿ ರಿಯಲ್ ಎಸ್ಟೇಟ್ ದಂಧೆಗಿಳಿಯಿತು. ಎಸ್.ಎಂ. ಕೃಷ್ಣ ಸಕರ್ಾರ ಇದ್ದಾಗ ಭೂಸ್ವಾಧೀನ ಪಡಿಸಿಕೊಳ್ಳಲಾದ ರೈತರ ಜಮೀನುಗಳನ್ನು ಕ್ರಯ ಮಾಡಿಸಿಕೊಳ್ಳುವ ಅವಕಾಶ ಪಡೆದ ನೈಸ್ ಕಂಪನಿ ಈಗ ರೈತರ ಯಾವುದೇ ಜಮೀನು ಕಂಡರೂ ಅದಕ್ಕೆ ಕೆಐಎಡಿಬಿಗೆ ಹೇಳಿ ನೋಟಿಫಿಕೇಷನ್ ಹೊರಡಿಸಿ ಆ ಜಮೀನುಗಳನ್ನು ವಶಪಡಿಸಿಕೊಮಡು ತನ್ನ ಹೆಸರಿಗೆ ಕ್ರಮ ಮಾಡಿಸಿಕೊಳ್ಳುವ ಕೆಲಸದಲ್ಲಿ ನಿರತವಾಗಿದೆ. ಈಗಾಗಲೇ ಅದು ಬೆಂಗಳೂರಿನ ಸುತ್ತಮುತ್ತ 1438 ಎಕರೆ ಭೂಮಿಯನ್ನು ಸಕರ್ಾರ ಅಂದರೆ ಕೆಐಎಡಿಬಿಯಿಂದ ಕ್ರಮ ಮಾಡಿಸಿಕೊಂಡಿದೆ. ಜತೆಗೆ ಈ ಜಮೀನುಗಳಿಗೆ ಕೋಟ್ಯಾಂತರ ರುಪಾಯಿ ನೋಂದಣಿ ಶುಲ್ಕ ರಿಯಾಯಿತಿಯನ್ನೂ ಪಡೆದುಕೊಂಡಿದೆ.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಜುಲೈ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಜೂನ್   ಆಗಸ್ಟ್ »
   123
  45678910
  11121314151617
  18192021222324
  25262728293031
 • ವಿಭಾಗಗಳು