BSK trading company transactions are legal: Balakrishnegowda

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಬಿಎಸ್ಕೆ
ಡೇಟ್: 21-07-2010
ಬೆಂಗಳೂರು

ಆಂಕರ್: ಬಿಎಸ್ಕೆ ಟ್ರೇಡಿಂಗ್ ಕಂಪನಿಯ ಎಲ್ಲಾ ವ್ಯವಹಾರಗಳು ಕಾನೂನು ಬದ್ಧವಾಗಿವೆ. ಜತೆಗೆ ಎಲ್ಲಾ ವಹಿವಾಟುಗಳನ್ನು ಅಕೌಂಟ್ ವಗರ್ಾವಣೆ ಮೂಲಕವೇ ನಡೆಸಲಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪುತ್ರ ಹೆಚ್.ಡಿ. ಬಾಲಕೃಷ್ಣೇಗೌಡ ಸ್ಪಷ್ಟನೆ ನೀಡಿದ್ದಾರೆ. ಗಣಿ ಲಂಚ ಹಗರಣ ಬೆಳಕಿಗೆ ಬಂದ ಸುಮಾರು 3 ವರ್ಷಗಳ ಬಳಿಕ ಬಾಲಕೃಷ್ಣೇಗೌಡರು ಇದೇ ಪ್ರಥಮ ಬಾರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಬಿಎಸ್ಕೆ ಟ್ರೇಡಿಂಗ್ ಕಂಪನಿ ಕನರ್ಾಟಕ ಬ್ಯಾಂಕ್ ಎಸ್ಕೆ ಬ್ಯಾಂಕ್ನಲ್ಲಿ ನಡೆಸಿರುವ ಎಲ್ಲಾ ವ್ಯವಹಾರಗಳು ಕಾನೂನು ಬದ್ಧವಾಗಿವೆ. ಆದರೆ ಜನಾರ್ದನ ರೆಡ್ಡಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಪತ್ರಕರ್ತರನ್ನೇ ದಾರಿ ತಪ್ಪಿಸಿದ್ದಾರೆಂದು ತಿಳಿಸಿದ್ದಾರೆ.

ಫ್ಯಾಕೇಜ್ ಫಾಲೋಸ್……….

ವಾಯ್ಸ್ ಓವರ್:
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ತಾನೆ ಪತ್ರಿಕಾಗೋಷ್ಠಿ ನಡೆಸಿ ಸಚಿವ ಜನಾರ್ದನ ರೆಡ್ಡಿ 2006 ರಲ್ಲೇ ಕನರ್ಾಟಕದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರೆಂದು ಆಪಾದಿಸಿದ್ದರು. ಈ ಆಪಾದನೆಗೆ ಪ್ರತಿಕ್ರಿಯೆ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜನಾರ್ದನರೆಡ್ಡಿ, ಗಣಿ ಲಂಚ ಹಗರಣವನ್ನು ಮತ್ತೆ ಕೆಣಕಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪಡೆದ ಗಣಿ ಲಂಚದ ಮೊದಲ ಕಂತು ಬಾಲಕೃಷ್ಣೇಗೌಡರ ಒಡತನದ ಬಿಎಸ್ಕೆ ಟ್ರೇಡಿಂಗ್ ಕಂಪನಿ ಬ್ಯಾಂಕ್ ವಹಿವಾಟಿನಲ್ಲಿ ದಾಖಲಾಗಿದೆ ಎಂದು ಆಪಾದಿಸಿದ್ದರು. ಈ ಕಂಪನಿಯ ವಹಿವಾಟಿರುವ ಕನರ್ಾಟಕ ಬ್ಯಾಂಕ್ ಅಕೌಂಟ್ನ ಎಲ್ಲಾ ವ್ಯವಹಾರ ನಗದಿನ ಮೂಲಕವೇ ನಡೆದಿದೆ ಎಂದು ಆಪಾದಿಸಿದ್ದರು. ಈ ಸಂಬಂಧ ಇದೇ ಪ್ರಥಮ ಬಾರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಾಲಕೃಷ್ಣೇಗೌಡರು, ತಮ್ಮ ಒಡತನದ ಬಿಎಸ್ಕೆ ಟ್ರೇಡಿಂಗ್ ಕಂಪನಿ ಎಲ್ಲಾ ವ್ಯವಹಾರವನ್ನು ಅಕೌಂಟ್ ವಗರ್ಾವಣೆ ಮೂಲಕವೇ ನಡೆಸಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಆದಾಯ ತೆರಿಗೆ ಇಲಾಖೆ ಸಮ್ಮತಿ ಸೂಚಿಸಿದೆ ಎಂದು ವಿವರಿಸಿದ್ದಾರೆ. ತಮ್ಮದು ಓಡಿ ಅಕೌಂಟಾಗಿದ್ದು ಎಲ್ಲವೂ ಚೆಕ್ ಮೂಲಕವೇ ವಹಿವಾಟು ನಡೆದಿದೆ. ಜನಾರ್ದನ ರೆಡ್ಡಿ ಈ ಬಗ್ಗೆ ಮಾಧ್ಯಮಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆಂದು ದೂರಿದ್ದಾರೆ.
ಬ್ಲ್ಯಾಕ್ ಗೋಲ್ಡ್ ಮೈನ್ನಲ್ಲಿ ಜನಾರ್ದನ ರೆಡ್ಡಿ ಒಡತನದ ಅನಂತಪುರಂ ಮೈನಿಂಗ್ ಕಾಪರ್ೊರೇಷನ್, 2004 ರಿಂದಲೂ ಅಕ್ರಮ ಗಣಿಗಾರಿಕೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಈ ಸಂಬಂಧ ಅರಣ್ಯಾಧಿಕಾರಿ ಪುನತಿ ಶ್ರೀಧರ್ ನೀಡಿರುವ ವರದಿಯೇ ಸಾಕ್ಷಿ ಎಂದಿರುವ ಅವರು, ಅನಂತಪುರಂ ಮೈನಿಂಗ್ ಕಾಪರ್ೊರೇಷನ್ಗೆ ಸೇರಿದ 2006-07 ರ ಆದಾಯ ತೆರಿಗೆ ರಿಟನ್ಸ್ನಲ್ಲಿ ಅಕ್ರಮ ಗಣಿಗರಿಕೆಗೆ ಸಂಬಂಧಿಸಿದಂತೆ ದಾಖಲೆ ಇದೆ ಎಂದು ಆರೋಪಿಸಿದ್ದಾರೆ.

-ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

Advertisements

Leave a comment

No comments yet.

Comments RSS TrackBack Identifier URI

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • Pages

 • Flickr Photos

  Wannabe

  Welcome to the sun

  Mandarin - Aix galericulata

  Gloom

  More Photos
 • July 2010
  S M T W T F S
  « Jun   Aug »
   123
  45678910
  11121314151617
  18192021222324
  25262728293031
 • Categories