BJP high command divides over Reddy brothers

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್:

ಬಿಜೆಪಿ ಹೈ ಕಮಾಂಡ್ ಡೇಟ್: 27-07-2010 ಬೆಂಗಳೂರು. ಆಂಕರ್: ಬಳ್ಳಾರಿಯ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಬಿಜೆಪಿ ಹೈಕಮಾಂಡ್ನಲ್ಲೇ ಪರ – ವಿರೋಧಿ ಗುಂಪುಗಳಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಒಂದು ಕಡೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ರೆಡ್ಡಿ ಬ್ರದರ್ಸಗಳನ್ನು ಕೈಬಿಡಲು ಆಸಕ್ತಿ ತೋರಿದ್ದರೆ, ಸುಷ್ಮಾ ಸ್ವರಾಜ್ ಬಣ ಯಾವುದೇ ಕಾರಣಕ್ಕೂ ರೆಡಿ ಬ್ರದರ್ಸಗಳ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ರಾಜಕೀಯ ಕೆಸೆರೆರಚಾಟ ಮತ್ತೊಮ್ಮೆ ಬೆಂಗಳೂರು ಬಿಟ್ಟು ಈಗ ದೆಹಲಿಗೆ ಸ್ಥಳಾಂತರವಾದಂತಾಗಿದೆ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್ 1: ಕಾಂಗ್ರೆಸ್ನ ಪಾದಯಾತ್ರೆಯಿಂದ ಕಂಗೆಟ್ಟು ದೆಹಲಿ ಸೇರಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೇಗಾದರೂ ಮಾಡಿ ಕಾಂಗ್ರೆಸ್ನ ಪಾದಯಾತ್ರೆಗೆ ತಕ್ಕ ರಾಜಕೀಯ ಪರಿಹಾರ ಕಂಡುಕೊಳ್ಳಬೇಕೆಂದು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಅವರ ಜತೆ ಅವರ ನಿಕಟವತರ್ಿ ಸಚಿವರು, ಬೆರಳೆಣಿಕೆಯ ಶಾಸಕರು ದೆಹಲಿಗೆ ಆಗಮಿಸಿದ್ದಾರೆ. ಇನ್ನೂ ಹಲವಾರು ಮಂದಿ ಶಾಸಕರು ಇಂದು ರಾತ್ರಿ ದೆಹಲಿಗೆ ತೆರಳುವ ಸಾಧ್ಯತೆಯೂ ಇದೆ. ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಇತ್ತೀಚೆಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿಯವರನ್ನು ಭೇಟಿ ಮಾಡಿದ್ದಾಗ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಡದಿದ್ದರೆ ಕನರ್ಾಟಕದಲ್ಲಿ ಪಕ್ಷದ ವರ್ಚಸ್ಸಿಗೆ ಭಾರಿ ಹೊಡೆತ ಬೀಳಲಿದೆ. ಆದ್ದರಿಂದ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಡಲು ತಮ್ಮ ಅನುಮತಿ ಬೇಕೆಂದು ಆಡ್ವಾಣಿಯವರಲ್ಲಿ ಮನವಿ ಮಾಡಿದರೆಂದು ಉನ್ನತ ಮೂಲಗಳು ತಿಳಿಸಿವೆ. ಇದಕ್ಕೆ ಆಡ್ವಾಣಿ ಸಮ್ಮತಿ ಸೂಚಿಸಿದ ಕೂಡಲೇ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಇದಕ್ಕೆ ಬಿಲ್ಕುಲ್ ಒಪ್ಪಿಗೆ ಇಲ್ಲವೆಂದು, ಬಿಜೆಪಿ ಕನರ್ಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರೆಡ್ಡಿ ಸಹೋದರ ಕೊಡುಗೆಯೇ ಕಾರಣ. ಆದ್ದರಿಂದ ಅಂಥಹ ದುಸ್ಸಾಹಸಕ್ಕೆ ಕೈಹಾಕಬಾರೆದೆಂದು ಮುಖ್ಯಮಂತ್ರಿಗಳಿಗೆ ಸೂಚಿಸಿದರೆಂದು ಮೂಲಗಳು ತಿಳಿಸಿವೆ. ಸುಷ್ಮಾ ಅವರ ನಿಲವಿಗೆ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಂಸದ ಅನಂತ್ಕುಮಾರ್ ಸಹ ಧನಿಗೂಡಿಸಿದ್ದಾರೆಂದು ಹೇಳಲಾಗಿದೆ. ಹೀಗೆ ರೆಡ್ಡಿ ಸಹೋದರರ ಕೈಬಿಡುವ ಬಗ್ಗೆ ಬಿಜೆಪಿ ಹೈಕಮಾಂಡ್ನಲ್ಲೇ ಪರ ವಿರೋಧ ಉಂಟಾದ ಕೂಡಲೇ ರಾಜ್ಯದ ನಾಯಕರಲ್ಲಿಯೂ ಈ ಬಗ್ಗೆ ಪರ ವಿರೋಧದ ಗುಂಪುಗಳು ಸೃಷ್ಟಿಯಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬೈಟ್; ಆರ್. ಅಶೋಕ್, ಸಾರಿಗೆ ಸಚಿವ ಟಿಸಿಆರ್: ವಾಯ್ಸ್ ಓವರ್ 2: ಹೇಗಿದ್ದರೂ ರೆಡ್ಡಿ ಸಹೋದರರ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡೋಣ. ಅಷ್ಟರಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಪರಿಣಾಮ ಎಲ್ಲವೂ ಗೊತ್ತಾಗಲಿದೆ ಎಂದು ಸ್ವಲ್ಪ ದಿನ ಕಾದು ನೋಡಲು ಉಭಯ ಬಣಗಳ ನಾಯಕರು ತೀಮರ್ಾನಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈಗ ರೆಡ್ಡಿ ಸಹೋದರರನ್ನು ಕೈಬಿಟ್ಟು ಬೀಸುವ ದೊಣ್ಣೆಗೆ ತಪ್ಪಿಸಿಕೊಳ್ಳಬೇಕು. ಮುಂದೆ ಲೋಕಾಯುಕ್ತ ತನಿಖೆ ಮುಗಿದ ನಂತರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಅಭಯವನ್ನು ಮುಖ್ಯಮಂತ್ರಿಗಳು ನೀಡಿದರೆಂದು ಮೂಲಗಳು ತಿಳಿಸಿವೆ. ಹೀಗಿದ್ದರೂ ಮುಖ್ಯಮಂತ್ರಿಗಳು ಇನ್ನೂ ಅಲ್ಲೇ ಠಿಕಾಣಿ ಹೂಡಿರುವುದು, ಅವರಿಗೆ ನಿಕಟರಾಗಿರುವ ಉತ್ತರ ಕನರ್ಾಟಕದ ಹಲವಾರು ಶಾಸಕರನ್ನು ಇಂದು ರಾತ್ರಿ ಹಾಗೂ ನಾಳೆ ಬೆಳಿಗ್ಗೆ ದೆಹಲಿಗೆ ಕರೆಸಿಕೊಳ್ಳುತ್ತಿರುವುದು ತೀವ್ರ ಕುತೂಕಲ ಕೆರಳಿಸಿದೆ. ದೆಹಲಿ ಮತ್ತೊಮ್ಮೆ ರೆಡ್ಡಿ ಮತ್ತು ಯಡಿಯೂರಪ್ಪನವರ ಶಕ್ತಿ ಪ್ರದರ್ಶನಕ್ಕೆ ವೇದಿಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರ

Leave a comment

No comments yet.

Comments RSS TrackBack Identifier URI

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • Pages

 • Flickr Photos

  Rainy Day

  In the city

  Armadillo

  Silent Killers

  More Photos
 • July 2010
  S M T W T F S
  « Jun   Aug »
   123
  45678910
  11121314151617
  18192021222324
  25262728293031
 • Categories