JDS opposes Rajiv Gandhi VV shifting

 

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ ಸ್ಲಗ್: ರಾಜೀವ್ ವಿವಿ ಡೇಟ್; 28-07- 2010 ಬೆಂಗಳೂರು ಆಂಕರ್: ಆಗಸ್ಟ್ 15 ರೊಳಗೆ ರಾಜೀವ್ಗಾಂಧಿ ವಿವಿ ಸ್ಥಳಾಂತರಿಸುವುದಿಲ್ಲವೆಂದು ಸಕರ್ಾರ ಸ್ಪಷ್ಟನೆ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಜೆಡಿಎಸ್ ಎಚ್ಚರಿಸಿದೆ. ಯಾವುದೇ ಕಾರಣಕ್ಕೂ ರಾಜೀವ್ಗಾಂಧಿ ವೈದ್ಯಕೀಯ ವಿವಿಯನ್ನು ರಾಮನಗರದಿಂದ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ ಎಂದು ಅದು ಘೋಷಿಸಿದೆ. ಫ್ಯಾಕೇಜ್ ಫಾಲೋಸ್…. ಸುಮಾರು 300 ಕೋಟಿ ರುಪಾಯಿ ವೆಚ್ಚದ ರಾಜೀವ್ಗಾಂಧಿ ವಿವಿಯನ್ನು ರಾಮನಗರದಲ್ಲಿ ಸ್ಥಾಪಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕ್ರಮ ಕೈಗೊಂಡಿದ್ದರು. ಆದರೆ ಆನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸಕರ್ಾರ ರಾಜೀವ್ ಗಾಂಧಿ ವಿವಿಯನ್ನು ರಾಮನಗರದಿಂದ ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿತ್ತು. ಈ ವಿಷಯ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ನಡುವೆ ತೀವ್ರ ಮಾತಿನ ಚಕಮಕಿಗೂ ಕಾರಣವಾಗಿತ್ತು. ಆನಂತರ ರಾಜೀವ್ ಗಾಂಧಿ ವಿವಿಯನ್ನು ರಾಮನಗರದಲ್ಲಿಯೇ ಸ್ಥಾಪಿಸಲು ಸಕರ್ಾರ ಒಪ್ಪಿಕೊಂಡಿತ್ತು. ಆದರೆ ದಿಢೀರನೆ ಕಳೆದ 7 ರಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ಕಾರ್ಯದಶರ್ಿ ಐ.ಎಂ. ವಿಠ್ಠಲಮೂತರ್ಿ ನೇತೃತ್ವದ ಸಭೆ ರಾಜೀವ್ ಗಾಂಧಿ ವಿವಿಯನ್ನು ರಾಮನಗರದ ಅರ್ಚಕರಹಳ್ಳಿಯಿಂದ ಕೆಂಗೇರಿಯ ಬಳಿಯ ಭೀಮನ ಕುಪ್ಪೆ ಗ್ರಾಮಕ್ಕೆ ಸ್ಥಳಾಂತರಿಸಲು ತೀಮರ್ಾನ ತೆಗೆದುಕೊಂಡಿತ್ತು. ಈ ಕ್ರಮ ಮತ್ತೆ ಜೆಡಿಎಸ್ ನಾಯಕರನ್ನು ಕೆರಳುವಂತೆ ಮಾಡಿದೆ. ಜತೆಗೆ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡರು ತಮ್ಮ ಗಮನಕ್ಕೆ ತಾರದೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿಕೆ ನೀಡಿರುವುದು ಸ್ಥಳಾಂತರದ ವಿಷಯದಲ್ಲಿ ಸಕರ್ಾರಕ್ಕೇ ಗೊಂದಲವಿದೆ ಎಂಬಂತಾಗಿದೆ. ಆದ್ದರಿಂದಲೇ ಆಗಸ್ಟ್ 15ರೊಳಗೆ ಈ ಬಗ್ಗೆ ಸಕರ್ಾರ ಸ್ಪಷ್ಟನೆ ನೀಡಬೇಕೆಂದು ಜೆಡಿಎಸ್ ಆಗ್ರಹಿಸಿದೆ. ಬೈಟ್; ಹೆಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ ಟಿಸಿಆರ್: ವಾಯ್ಸ್ ಓವರ್ 2: ಒಂದು ವೇಳೆ ಸಕರ್ಾರ ಈ ಗೊಂದಲವನ್ನು ಬಗೆಹರಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಗಸ್ಟ್ 15 ರಂದು ಧ್ವಜಾರೋಹಣಕ್ಕೆ ಅವಕಾಶ ಕೊಡುವುದಿಲ್ಲ. ಜತೆಗೆ ಜೆಡಿಎಸ್ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದೆಂದು ಬಾಲಕೃಷ್ಣ ಎಚ್ಚರಿಸಿದ್ದಾರೆ.

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಜುಲೈ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಜೂನ್   ಆಗಸ್ಟ್ »
   123
  45678910
  11121314151617
  18192021222324
  25262728293031
 • ವಿಭಾಗಗಳು