SC court upheld High court order, war memorial survives


ಬೆಂಗಳೂರಿನ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನದಲ್ಲಿ ರಾಷ್ಷ್ರೀಯ ಸೈನಿಕ ಸ್ಮಾರಕ ನಿಮರ್ಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ರಜಾ ಅಜರ್ಿಯನ್ನು ಸುಪ್ರೀಕೋರ್ಟ ಇಂದು ವಜಾ ಮಾಡಿದೆ. ಈ ಹಿಂದೆ ಹೈಕೋರ್ಟ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ, ಸೈನಿಕ ಸ್ಮಾರಕ ನಿಮರ್ಿಸಲು ಇನ್ನು ಮುಂದೆ ಯಾವುದೇ ಅಡಚಣೆ ಉಂಟುಮಾಡಬಾರದೆಂದು ನಿದರ್ೇಶನ ನೀಡಿದೆ.
ಕೃಷ್ಣ ಅಪಾರ್ಟಮೆಂಟ್ ಮಾಲೀಕರ ಅಸೋಸಿಯೇಷನ್ಸ್ ಈ ಹಿಂದೆ ಹೈಕೋರ್ಟನ ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋಟರ್್ಗೆ ಅಜರ್ಿ ಸಲ್ಲಿಸಿತ್ತು. ಕನರ್ಾಟಕ ಉದ್ಯಾನವನಗಳ ಕಾಯ್ದೆಯನ್ನು ಉಲ್ಲಂಘಿಸಿ ಸೈನಿಕ ಸ್ಮಾರಕ ನಿಮರ್ಿಸಲು ಅನುಮತಿಕೊಡಲಾಗಿದೆ. ಟಂಡರ್ ಕರೆಯಲಾಗದೆ ಕಾಮಗಾರಿ ಕೈಗೊಳ್ಳಲಾಗಿದೆ. ಜತೆಗೆ ಖಾಸಗಿಯವರಿಗೆ ಉದ್ಯಾನವನದ ಭೂಮಿಯನ್ನು ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ವಾದಿಸಲಾಗಿತ್ತು. ಈ ಅಜರ್ಿಯನ್ನು ಸುಪ್ರೀಂಕೋರ್ಟ ಇಂದು ವಜಾಮಾಡಿ ಹೈಕೋರ್ಟನ ವಿಭಾಗೀಯ ಪೀಠದ ತೀರ್ಪನ್ನು ಎತ್ತಿಹಿಡಿದಿದೆ.

Advertisements

ಕಡೆಗೂ ಬೆಗ್ಗರ್ಸ್ ಕಾಲೋನಿಯ ನಿರಾಶ್ರಿತರ ಶಿಬಿರವನ್ನು ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಮುನ್ನಡೆಸಲು ಸಕರ್ಾರda teermana

ಕಡೆಗೂ ಬೆಗ್ಗರ್ಸ್ ಕಾಲೋನಿಯ ನಿರಾಶ್ರಿತರ ಶಿಬಿರವನ್ನು ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಮುನ್ನಡೆಸಲು ಸಕರ್ಾರ ತೀಮರ್ಾನಿಸಿದ್ದು ಈ ಸಂಬಂಧ ಭಿಕ್ಷುಕರನ್ನು ಹೇಗೆ ನೋಡಿಕೊಳ್ಳಬಹುದೆಂಬ ಬಗ್ಗೆ ವಿವರವಾದ ಪ್ರಸ್ತಾವಣೆ ಸಲ್ಲಿಸುವಂತೆ ಬೆಂಗಳೂರಿನ ಹೊರವಲಯದಲ್ಲಿರುವ ಕಡಂಬಮ್ಸ್ ಸಂಸ್ಥೆಗೆ ಮನವಿ ಮಾಡಿದೆ. ಕಡಂಬಮ್ಸ್ ಸಂಸ್ಥೆ ಕೂಡಲೇ ಸಕರ್ಾರದ ಮನವಿಗೆ ಸ್ಪಂದಿಸಿದ್ದು ಭಿಕ್ಷುಕರ ನಿರಾಶ್ರಿತರ ಕೇಂದ್ರವ…ನ್ನು ಹೇಗೆ ಮುನ್ನಡೆಸಬಹುದು. ಆಲ್ಲಿರುವವರನ್ನು ಹೇಗೆ ಆರೋಗ್ಯಕರವಾಗಿ ನೋಡಿಕೊಳ್ಳಬಹುದೆಂಬ ಬಗ್ಗೆ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Harangi water for KRS reservoir, inflow increased


ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ಕೆಆರ್ಎಸ್
ಡೇಟ್: 25-=08- 2010
ಬೆಂಗಳೂರು

ಆಂಕರ್: ಹಾರಂಗಿ ಜಲಾಶಯದಿಂದ 6 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಟ್ಟಿರುವುದರಿಂದ ಕೆಆರ್ಎಸ್ ಜಲಾಶಯಕ್ಕೆ ಹರಿದುಬರುವ ಒಳನೀರಿನ ಪ್ರಮಾಣ ನಿನ್ನೆಯಿಂದ ಹೆಚ್ಚಾಗಿದೆ. ಪ್ರತಿದಿನ ಕೆಆರ್ಎಸ್ಗೆ 8297 ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಸುಮಾರು 4906 ಕ್ಯೂಸೆಕ್ಸ್ ನೀರನ್ನು ಕಾವೇರಿ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಹರಿಸಲಾಗುತ್ತಿದೆ ಎಂದು ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.

ಫ್ಯಾಕೇಜ್ ಫಾಲೋಸ್…..

ತಮಿಳುನಾಡಿಗೆ ಆಗಸ್ಟ್ನ ಕೋಟಾದ ಕಾವೇರಿ ನೀರನ್ನು ಕೂಡಲೇ ಬಿಡುಗಡೆ ಮಾಡಿಸಲು ಕಾವೇರಿ ನದಿ ನೀರು ಪ್ರಾಧಿಕಾರದ ಸಭೆ ಕರೆಯಬೇಕೆಂದು ತಮಿಳುನಾಡು ಈಗಾಗಲೇ ಕೇಂದ್ರ ಜಲಸಂಪನ್ಮೂಲ ಇಲಾಖೆಯನ್ನು ಒತ್ತಾಯಿಸಿದೆ. ಆದರೆ ರಾಜ್ಯದ ಕೊಡಗು ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 2000 ಸಾವಿರ ಮಿಲಿಮೀಟರ್ ಮಳೆ ಕಡೆಮೆಯಾಗಿರುವುದರಿಂದ ಕೆಆರ್ಎಸ್ಗೆ ಹರಿದುಬರುವ ನೀರಿನ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಕಡಿಮೆ ಯಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ಬಾರಿ ಆಗಸ್ಟ್ ಅಂತ್ಯದ ವೇಳೆಗೆ ಕೊಡಗಿನ ಕಾವೇರಿ ಜಲಾನಯನ ಪ್ರದೇಶದಲ್ಲಿ 4500 ಮಿಲಿಮೀಟರ್ ಮಳೆಯಾಗಿತ್ತು. ಆದರೆ ಈ ಬಾರಿ ಕೇಲವ 1471 ಮಿಲಿಮೀಟರ್ ಮಳೆಯಾಗಿದೆ. ಇದರಿಂದ ಸುಮರು 2000 ಮಿಲಿ ಮೀಟರ್ ಮಳೆ ಕೊರತೆ ಉಂಟಾಗಿದೆ. ಆದ್ದರಿಂದಲೇ ಕೆಆರ್ಎಸ್ಗೆ ಹರಿದುಬರುವ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಿದೆ ಜಲಸಂಪನ್ಮೂಲ ಇಲಾಖೆ ಮೂಲಗಳು ಖಚಿತಪಡಿಸಿವೆ.  
ಕೆಆರ್ಎಸ್ ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮಥ್ರ್ಯ 49. 45 ಟಿಎಂಸಿಎಫ್ಟಿ. ಈಗ ಲಭ್ಯವಿರುವ ನೀರಿನ ಪ್ರಮಾಣ 31. 84 ಟಿಎಂಸಿಎಫ್ಟಿ. ಕೆಆರ್ಎಸ್ನಿಂದ ಅಣೆಕಟ್ಟೆ ನಾಲೆಗಳಾದ ಚಿಕ್ಕದೇವರಾಯನಾಲೆ, ಮಿಜರ್ಾ ಇಸ್ಮಾಯಿಲ್ ನಾಲೆ, ಬಂಗಾರದೊಡ್ಡಿ ನಾಲೆ, ದೇವರಾಯ ನಾಲೆ ಹಾಗೂ ರಾಂಸ್ವಾಮಿ ನಾಲೆಗೆ ಒಟ್ಟು 1281 ಕ್ಯೂಸೆಕ್ಸ್ ನೀರನ್ನು ಕೆಆರ್ಎಸ್ನಿಂದ ಹರಿದು ಬಿಡಲಾಗುತ್ತಿದೆ. ವಿಶ್ವೇಶ್ವರಯ್ಯ ನಾಲೆ, ದೇವರಾಜ್ ಅರಸು, ಆರ್ಡಿ ಎಲ್ಎಲ್ ಬಲದಂಡೆ, ಎಡದಂಡೆ ಕಾಲುವೆಗೆ ಒಟ್ಟು 3635 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
–ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
 ಬೆಂಗಳೂರು.

MNC with Mrs Upendra, Katherine KAARA School

NICE ಹಣಕಾಸು ವ್ಯವಹಾರಗಳ ವಿವರಗಳನ್ನು ಕೇಳಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾರ್ಯಕಲಾಪವನ್ನು ಮುಂದೂಡುವಂತೆ ನಿದರ್ೇಶನ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಡೇಟ್: 23-08- 2010 ಬೆಂಗಳೂರು ಆಂಕರ್: ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ನೈಸ್ ಕಂಪನಿ ಇದುವರೆಗೆ ನಡೆಸಿರುವ ಹಣಕಾಸು ವ್ಯವಹಾರಗಳ ವಿವರಗಳನ್ನು ಕೇಳಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾರ್ಯಕಲಾಪವನ್ನು ಮುಂದೂಡುವಂತೆ ನಿದರ್ೇಶನ ನೀಡಲಾಗಿದೆ. ಸಮಿತಿಯ ಕಾರ್ಯಕಲಾಪ ಸ್ಥಗಿತಗೊಳಿಸಲು ಯಾರು ನಿದರ್ೇಶನ ನೀಡಿದ್ದಾರೆಂಬ ಪ್ರಶ್ನೆಗೆ ಉತ್ತರಿಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರಾಕರಿಸಿದೆ. ಬಿಎಂಐಸಿ ಯೋಜನೆ ಪ್ರಕರಣಗಳು ಸುಪ್ರೀಂಕೋರ್ಟನಲ್ಲಿ ಬಾಕಿ ಇರುವುದರಿಂದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೈಸ್ ಕಂಪನಿ ಹಣಕಾಸಿನ ವಿವರಗಳ ಬಗ್ಗೆ ಚಚರ್ೆ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ತೀಮರ್ಾನಕ್ಕೆ ಬರಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ. ಫ್ಯಾಕೇಜ್ ಫಾಲೋಸ್………… ವಾಯ್ಸ್ ಓವರ್ 1: ಬಿಎಂಐಸಿ ಯೋಜನೆ ಜಾರಿಗಾಗಿ ಬ್ಯಾಂಕ್ಗಳಿಂದ ಹಣಕಾಸಿನ ಸೌಲಭ್ಯ ಪಡೆಯಲು ನೈಸ್ ಕಂಪನಿಗೆ ಸಕರ್ಾರ ಗ್ಯಾರಂಟಿ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ನಡೆದಿರುವ ಹಣಕಾಸಿನ ವಿವರಗಳನ್ನು ಸಲ್ಲಿಸುವಂತೆ ಬಿಎಂಐಸಿಪಿಎ ಹಾಗೂ ನೈಸ್ ಕಂಪನಿಗೆ ನೋಟಿಸು ಜಾರಿಗೊಳಿಸಿತ್ತು. ಈ ನೋಟಿಸು ಜಾರಿಯಾದ ಕೇವಲ ಬೆರಳೆಣಿಕೆ ದಿನಗಳಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈ ಬಗ್ಗೆ ಯಾವುದೇ ಕಾರ್ಯಕಲಾಪ ನಡೆಸದಂತೆ ನಿದರ್ೇಶನ ನೀಡಲಾಗಿದೆ. ಸಮಿತಿಯ ಕಾರ್ಯಕಲಾವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದೂಡಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ. ಬೈಟ್: ಟಿ.ಬಿ. ಜಯಚಂದ್ರ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕ್ಲಿಪ್: ಟಿಸಿಆರ್: 02: 30 ಟು 3: 20 ವಾಯ್ಸ್ ಓವರ್ 2: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕಾರ್ಯಕಲಾಪ ಸ್ಥಗಿತಗೊಳಿಸಲು ಯಾರು ನಿದರ್ೇಶನ ನೀಡಿದ್ದಾರೆಂಬ ಬಗ್ಗೆ ವಿವರ ನೀಡಲು ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕರೂ ಆಗಿರುವ ಟಿ.ಬಿ. ಜಯಚಂದ್ರ ನಿರಾಕರಿಸಿದ್ದಾರೆ. ಆದರೆ ಈ ಬಗ್ಗೆ ಸಿaಜಿ ಅಭಿಪ್ರಾಯ ಪಡೆಯಲಾಗಿದೆ. ಸಿaಜಿ ಕಾರ್ಯಕಲಾಪ ನಡೆಸಬಹುದೆಂದು ತಿಳಿಸಿದ್ದಾರೆ. ಜಿ-2 ಹಗರಣದ ಬಗ್ಗೆ ಕೇಂದ್ರ ಸಚಿವ ರಾಜಾ ಅವರ ಮೇಲೆ ಆರೋಪಗಳಿದ್ದರೂ ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈ ಸಂಬಂಧ ವಿಚಾರಣೆ ಕಾರ್ಯಕಲಾಪ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಬೈಟ್: ಟಿ.ಬಿ. ಜಯಚಂದ್ರ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಟಿಸಿಆರ್: 03: 28 ಟು 03; 54 ವಾಯ್ಸ್ ಓವರ್ 3: 1995 ರಲ್ಲಿ ಬಿಎಂಐಸಿ ಯೋಜನೆ ರಾಜ್ಯದಲ್ಲಿ ಜಾರಿಯಾದಾಗಿನಿಂದ ಇದುವರೆಗೆ ಯಾವುದೇ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ನೈಸ್ ಕಂಪನಿ ವಿಚಾರಕ್ಕೆ ಕೈಹಾಕಿರಲಿಲ್ಲ. ಆದರೆ ಜಯಚಂದ್ರ ನೇತೃತ್ವದ ಸಮಿತಿ ಈ ಕೆಲಸಕ್ಕೆ ಕೈಹಾಕಿತ್ತು. ಈಗ ಸಮಿತಿಯ ಕಾರ್ಯಕಲಾಪವನ್ನು ಸ್ಥಗಿತಗೊಳಿಸಿರುವುದರಿಂದ ಬಿಎಂಐಸಿ ಯೋಜನೆಯ ಹಣಕಾಸಿನ ವ್ಯವಹಾರಗಳ ಬಗ್ಗೆ ಯಾರೂ ಪ್ರಶ್ನಿಸದ ಪರಿಸ್ಥಿತಿ ಉಂಟಾಗಿದೆ. –ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರ

An open letter to Law Minister S. Sureshkumar..ಕಾನೂನು ಸಚಿವ ಎಸ್. ಸುರೇಶ್ಕುಮಾರ್ಗೊಂದು ಬಹಿರಂಗ ಪತ್ರ:

ಕಾನೂನು ಸಚಿವ ಎಸ್. ಸುರೇಶ್ಕುಮಾರ್ಗೊಂದು ಬಹಿರಂಗ ಪತ್ರ:

ಸುರೇಶ್ಕುಮಾರ್ ಅವರೇ ತಾವು ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಬರೆಯುತ್ತಿರವ ಲೇಖನಗಳು ನಿಜಕ್ಕೂ ಮಾನವೀಯವಾಗಿವೆ. ನಿಮ್ಮ ಸೂಕ್ಷಮತಿ, ಕಳಕಳಿ ಹಾಗೂ ಸಹೃದಯತೆಗೆ ಸಾಕ್ಷಿಯಾಗಿವೆ. ಇತ್ತೀಚೆಗೆ ತಾವು ನಮ್ಮ ರಾಜ್ಯದ ಮುಖ್ಯಕಾರ್ಯದಶರ್ಿಗಳ ಬಗ್ಗೆ ಬರೆದ ಲೇಖನ ಮನಮಿಡಿಯುವಂತಿತ್ತು. ಬೇರೆಯವರು ಅನುಕರಿಸುವಂತಿತ್ತು. ಹಿರಿಯರಾಗಿ ಎಸ್.ವಿ. ರಂಗನಾಥ್ ದೊಡ್ಡ ಆದರ್ಶವನ್ನು ಸೃಷ್ಟಿಸಿ ಒಂದು ಪರಂಪರೆಯನ್ನೇ ಹುಟ್ಟುಹಾಕಿದ ಅನುಭವವಾಯಿತು. ಅವರ ಕಾರ್ಯದಕ್ಷತೆ, ನೆನಪಿನ ಶಕ್ತಿ, ಪ್ರಾಮಾಣಿಕತೆಯನ್ನು ತಾವು ಗುತರ್ಿಸಿದ್ದು ನಿಜಕ್ಕೂ ಎಲ್ಲರ ಕಣ್ತೆರೆಸುವಂತಿತ್ತು. ನಿಮಗೆ ಹ್ಯಾಟ್ಸ್ ಆಫ್, ನಿಮಗೆ ನನ್ನ ಸಾವಿ ಸಾವಿರ ಸಲ್ಯೂಟ್ಗಳು ಹಾಗೂ ಅಭಿನಂದನೆಗಳು.

ಆದರೆ ಎಸ್.ವಿ. ರಂಗನಾಥ್ ಬಗ್ಗೆ ನಾನು ಕೆಲವು ಮಾತುಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಇದೇ ಬಿಎಂಐಸಿ ಯೋಜನೆಗೆ ಸಕರ್ಾರ ಹಾಗೂ ನೈಸ್ ಸಮೂಹದ ಸಂಸ್ಥೆಗಳ ಜತೆ ಒಡಂಬಡಿಕೆಗೆ 1995 ರಲ್ಲಿ ಅಂದರೆ ಸುಮಾರು 15 ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡ ಹಾಗೂ ಆಗಿನ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಸಹಿ ಹಾಕಿದಾಗ ಫೈಲು ಹಿಡಿದು ನಿಂತಿದ್ದವರು ಇದೇ ಎಸ್.ವಿ. ರಂಗನಾಥ್ ರವರು. ಆಗಲೂ ಅವರು ಆಗಿನ ಮುಖ್ಯಮಂತ್ರಿಗಳಿಗೆ ಕಾರ್ಯದಶರ್ಿಯಾಗಿದ್ದರು. ಆಗಿನಿಂದ ಇಲ್ಲಿಯವರೆಗೆನ ಅಂದರೆ ಪಟೇಲ್, ಕೃಷ್ಣ, ಧರಂಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ ಹೀಗೆ ಬಹುತೇಕ ಎಲ್ಲ ಮುಖ್ಯಮಂತ್ರಿಗಳಿಗೂ ಎಸ್.ವಿ. ರಂಗನಾಥ್ ಒಂದಲ್ಲ ಒಂದು ರೀತಿಯ ಕಾರ್ಯದಶರ್ಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಹೀಗಿರುವಾಗ ನೈಸ್ ಸಂಸ್ಥೆ ಜತೆ ಸಕರ್ಾರ ಒಡಂಬಡಿಕೆಗೆ ಸಹಿ ಹಾಕಿದ ವಿವರಗಳು ರಂಗನಾಥ್ಗೆ ಗೊತ್ತಿಲ್ಲವೆ? ಸುಮಾರು 5000 ಎಕರೆ ಸಕರ್ಾರಿ ಭೂಮಿಯನ್ನು ಸಕರ್ಾರ ನೈಸ್ ಸಂಸ್ಥೆಗೆ ಕ್ರಯ ಮಾಡಿಕೊಡಲು ಸಿದ್ಧ ಎಂದು ಸುಪ್ರೀಂಕೋರ್ಟಗೆ ಸಕರ್ಾರ ಅಫಿಡವಿಟ್ ಸಲ್ಲಿಸಿದಾಗ, ರಾಜ್ಯದ ಆಸ್ತಿಯನ್ನು ಬೇರೆಯವರಿಗೆ ಶಾಶ್ವತವಾಗಿ ಪರಭಾರೆ ಮಾಡುವುದನ್ನು ತಡೆಯುವ ಹಕ್ಕು ಒಬ್ಬ ಮುಖ್ಯಕಾರ್ಯದಶರ್ಿಯಾಗಿ ಎಸ್.ವಿ. ರಂಗನಾಥ್ಗೆ ಇರಲಿಲ್ಲವೇ? ಮೂಲ ಒಪ್ಪಂದದ ರಸ್ತೆ ಅಲೈನ್ಮೆಂಟ್ನಂತೆ ಸವರ್ೆ ಇಲಾಖೆ ಸ್ಕೆಚ್, ಎಂಜಿಯರಿಂಗ್ ಡಿಸೈನ್, ಜತೆಗೆ ಅಲೈನ್ಮೆಂಟನ್ನು ಗುರುತಿಸಿ ಭೂಸ್ವಾಧೀನಕ್ಕೆ ಒಳಗಾಗುವ ಎಲ್ಲಾ ಜಮೀನುಗಳ ಸವರ್ೆ ನಂಬರ್ಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಆಗಿನ ಡಿಸಿ ಅನೀಸ್ ಸಿರಾಜ್, ಎಲ್ಲಾ ಡಿಸಿಗಳಿಗೆ ಕಳುಹಿಸಿದ್ದ ಸುತ್ತೋಲೆಗಳು ಮುಂದಿರುವಾಗ, ಸಚಿವ ಸಂಪುಟದ ಒಪ್ಪಿಗೆ ಇಲ್ಲದೆ, ಲೋಕೋಪಯೋಗಿ, ಕೃಷಿ, ಆಥರ್ಿಕ ಇಲಾಖೆಗಳ ಅನುಮತಿ ಪಡೆಯದೇ, ರಾಜ್ಯಪಾಲರ ಅನುಮತಿ ಪಡೆಯದೇ ಕೇವಲ ಷಡ್ಯೂಲ್ಗಳನ್ನು ಬದಲಾಯಿಸಿ ಕಾಂಗ್ರೆಸ್ ಸಕರ್ಾರ ಹೊರಡಿಸಿದ ಆದೇಶವನ್ನು ರಂಗನಾಥ್ ಒಪ್ಪುವುದಾದರೂ ಹೇಗೆ? ಕಾಂಗ್ರೆಸ್ ಸಕರ್ಾರ ಹೋದಮೇಲಾದರೂ ಈ ಬಗ್ಗೆ ಆಂತರಿಕವಾಗಿಯಾದರೂ ಧ್ವನಿ ಎತ್ತಬಹುದಿತ್ತಲ್ಲವೇ?

1977 ರ ಕನರ್ಾಟಕ ಬ್ಯುಸಿನೆಸ್ ಟ್ರಾನ್ಸ್ಆಕ್ಷನ್ ರೂಲ್ ಪ್ರಕಾರ, ಹಲವಾರು ಇಲಾಖೆಗಳ ಮುಖ್ಯಸ್ಥರೊಂದಿಗೆ ಚಚರ್ಿಸಿ, ಆಥರ್ಿಕ ಇಲಾಖೆ ಸಾಧಕ ಬಾಧಕಗಳನ್ನು ಪರಾಮಶರ್ಿಸಿದ ನಂತರ ಒಮ್ಮೆ ಸಕರ್ಾರ ಮಾಡಿಕೊಂಡ ಒಪ್ಪಂದವನ್ನು ಮುರಿಯಲು ಮತ್ತೆ ಅದೇ ಇಲಾಖೆಗಳ ಮುಖ್ಯಸ್ಥರ ಸಭೆ ನಡೆಸಬೇಕು. ಆಥರ್ಿಕ ಇಲಾಖೆಯ ಅನುಮತಿ ಪಡೆಯಬೇಕು. ಪರಿಸರ ಇಲಾಖೆಯೊಂದಿಗೆ ಚಚರ್ಿಸಬೇಕು. ಸಚಿವ ಸಂಪುಟದಲ್ಲಿ ಈ ಬಗ್ಗೆ ಚಚರ್ೆ ನಡೆಯಬೇಕು. ವಿಧಾನಮಂಡಲದಲ್ಲಿ ಚಚರ್ೆಯಾಗಬೇಕು. ಆನಂತರ ಕಾನೂನಿಗೆ ತಿದ್ದುಪಡಿ ತಂದು ರಾಜ್ಯಪಾಲರ ಅನುಮತಿ ಪಡೆದು ಒಡಂಬಡಿಕೆಯನ್ನು ಬದಲಾಯಿಸಬೇಕು. ಜತೆಗೆ ತಿದ್ದುಪಡಿಯನ್ನು ತರಬೇಕು. ಆದರೆ ಇದ್ಯಾವುದನ್ನು ಮಾಡದೇ ಮೂಲ ಒಪ್ಪಂದದಂತೆ ಜಾರಿ ಮಾಡುವುದಾಗಿ ತಿಳಿಸಿ ಕೇವಲ ರಸ್ತೆ ಅಲೈನ್ಮೆಂಟ್ಗಳ ಷಡ್ಯೂಲ್ಗಳನ್ನಷ್ಟೇ ಬದಲಾಯಿಸಿ ಜಾರಿಗೆ ತಂದ ಓಡಿಪಿ ಯೋಜನೆಯನ್ನು ಯಾರಾದರೂ ಒಪ್ಪಲು ಸಾಧ್ಯವೇ?

ಅಂಥಹ ಓಡಿಪಿ ಅನೈನ್ಮೆಂಟನ್ನು ಒಪ್ಪಲು ಸಾಧ್ಯವಿಲ್ಲ. ನಾವು ಈಗಾಗಲೇ ಮೂಲ ಒಪ್ಪಂದದ ಅಲೈನ್ಮೆಂಟ್ ಪ್ರಕಾರ ರಸ್ತೆ ಮಾಡುವುದಾಗಿ ತಿಳಿಸಿ ರಸ್ತೆ ಹಾದು ಹೋಗುವ ಊರುಗಳು, ಅಲ್ಲಿನ ಜಮೀನುಗಳ ಆರ್ಟಿಸಿ ವಿವರಗಳನ್ನು ಹೈಕೋರ್ಟಗೆ (ಸೋಮಶೇಖರರೆಡ್ಡಿ ಕೇಸ್ 1997) ಸಲ್ಲಿಸಿದ್ದೆವು. ಆದ್ದರಿಂದ ಓಡಿಪಿ ಅಲೈನ್ಮೆಂಟ್ಗೂ, ಮೂಲ ಒಪ್ಪಂದದ ಅಲೈನ್ಮೆಂಟಗೂ ಅಜಗಜಾಂತರ ಅಂತರವಿದೆ ಎಂದು ಲೋಕೋಪಯೋಗಿ ಕಾರ್ಯದಶರ್ಿ ಅಗವಾನೆ ಅಫಿಡವಿಟ್ಟನ್ನೇ ಸಲ್ಲಿಸಿದ್ದರು. ಹಲವಾರು ಬಾರಿ ರೈತ ಮುಖಂಡರು ಎಸ್.ವಿ. ರಂಗನಾಥ್ ಅವರನ್ನು ಭೇಟಿಮಾಡಿ ಈ ಬಗ್ಗೆ ಅವರ ಗಮನ ಸೆಳೆದಿದ್ದರು. ನೈಸ್ ಕಂಪನಿ ಮಾಡುತ್ತಿರುವ ಅವ್ಯವಹಾರಗಳನ್ನು ಅವರ ಗಮನಕ್ಕೆ ತಂದಿದ್ದರು.
ಬಿಡಿ ಆಗೇನೂ ಎಸ್.ವಿ. ರಂಗನಾಥ್ಗೆ ಹೆಚ್ಚಿನ ಅಧಿಕಾರ ಇರಲಿಲ್ಲ. ಆದರೆ ಈಗ ಅವರು ಮುಖ್ಯಕಾರ್ಯದಶರ್ಿಯಾಗಿದ್ದಾರೆ. ಈಗಲಾದರೂ ಅವರು ಸಕರ್ಾರ ಸುಪ್ರೀಂಕೋರ್ಟಗೆ ಸಲ್ಲಿಸಿರುವ ಅಫಿಡವಿಟ್ನ್ನು ತಡೆಯಬಹುದಿತ್ತಲ್ಲವೇ? ಏನಿದೆ ಆ ಅಫಿಡವಿಟ್ನಲ್ಲಿ? ಸ್ಮಶಾನ, ಗುಂಡುತೋಪು, ಎಸ್ಸಿ/ಎಸ್ಟಿ ಜನರು ಸಾಗುವಳಿ ಮಾಡುತ್ತಿದ್ದ ಭೂಮಿ, ನೂರಾರು ಕೆರೆ ಕಟ್ಟೆಗಳು, ಜತೆಗೆ ಲಿಂಕ್ ರಸ್ತೆಗೆ ಬೇಕಾಗಿರುವ 138 ಎಕರೆ ಕೆರೆ ಅಂಗಳದ ಭೂಮಿಯನ್ನು ಸಕರ್ಾರ ಕೂಡಲೇ ನೈಸ್ ಸಂಸ್ಥೆಗೆ ನೀಡಲಿದೆ ಎಂದು ಹೇಳುತ್ತದೆ ಆ ಆಫಿಡವಿಟ್. ಈ ಜಮೀನುಗಳನ್ನು ಕೊಡುತ್ತಿರುವುದು ಲೀಸ್ ಮೇಲಲ್ಲ. ಸಂಪೂರ್ಣ ಕ್ರಯಕ್ಕೆ. ಎಸ್.ವಿ. ರಂಗನಾಥರೇ, ನೀವು ಮುಖ್ಯಕಾರ್ಯದಶರ್ಿಗಳು, ನಿಮಗೆ ಗೊತ್ತಿದೆ ನೀವೆ ಸಾಕ್ಷಿ ಸಹ, ಆಗಿನ ಒಪ್ಪಂದವನ್ನು ನೆನಪಿಸಿಕೊಳ್ಳಿ. 5000 ಸಾವಿರ ಸಕರ್ಾರಿ ಭೂಮಿಯನ್ನು ಕೊಡಲು ಒಪ್ಪಿದ್ದು ಕೇವಲ 30 ವರ್ಷಕ್ಕೆ ಗುತ್ತಿಗೆಗೆ. ಅದೂ ಒಂದು ಎಕರೆಗೆ ಒಂದು ವರ್ಷಕ್ಕೆ 10 ರುಪಾಯಿ ಬಾಡಿಗೆ. ಉಳಿದ 15193 ಎಕರೆ ಭೂಮಿಯನ್ನು ನೈಸ್ ಕಂಪನಿ ಮೂವತ್ತು ವರ್ಷಗಳ ನಂತರ ಹಿಂತಿರುಗಿಸಬೇಕು. ಕೇವಲ ಟೌನ್ಷಿಪ್ನಲ್ಲಿ ಮಾತ್ರ ಶೇ. 45 ರಷ್ಟನ್ನು ಮಾriಕೊಳ್ಳಲು ನೈಸ್ಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ ರಸ್ತೆ haagu raste ಬದಿಯ ಜಮೀನನ್ನು ಸಕರ್ಾರಕ್ಕೆ ಸಂಪೂರ್ಣವಾಗಿ ಹಿಂತಿರುಗಿಸಬೇಕೆಂಬ ಒಪ್ಪಂದವಾಗಿತ್ತು,

ಹೀಗಿದ್ದರೂ ನೈಸ್ ಕಂಪನಿಗೆ ಇಂದು ಕೆಐಎಡಿಬಿ ಖಾಸಗಿ ಹಾಗೂ ಸಕರ್ಾರಿ ಭೂಮಿಯನ್ನು ಕ್ರಯ ಮಾಡಿಕೊಡುತ್ತಿದೆ. ಬೂಟ್ ಒಪ್ಪಂದ ಎಂದರೇನು? ಬಿಲ್ಡ್- ಆಪರೇಟ್-ಓನ್- ಅಂಡ್ ಟ್ರಾನ್ಸ್ಫರ್. ಆದರೆ ಈಗ ನಡೆಯುತ್ತಿರುವುದೇನು? ಟ್ರಾನ್ಸ್ಫರ್ನ ವಿಷಯವೇ ಇಲ್ಲಾ. ಎಲ್ಲಾ ಕ್ರಯ ಮಾಡಿಕೊಡಲಾಗುತ್ತಿದೆ. ಒಮ್ಮೆ ನೈಸ್ ಸಂಸ್ಥೆ ಕ್ರಯಕ್ಕೆ ಪಡೆದ ಭೂಮಿಯನ್ನು ವಾಪಸ್ ಪಡೆಯಲು ಸಾಧ್ಯವೇ?
 
ಇದನ್ನು ನೀವು ಒಬ್ಬ ಮುಖ್ಯಕಾರ್ಯದಶರ್ಿಯಾಗಿ ಹೇಗೆ ಸಹಿಸಿಕೊಂಡಿದ್ದೀರಿ. ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿಗೆ ಸುಪ್ರೀಂಕೋಟರ್್ನಲ್ಲಿ ಓಡಿಪಿ ಅಲೈನ್ಮೆಂಟ್ನಂತೆ ರಸ್ತೆ ಮಾಡಲು ನಮ್ಮ ಒಪ್ಪಿಗೆ ಇದೆ ಎಂದು ಅಫಿಡವಿಟ್ ಸಲ್ಲಿಸಲು ಹೇಗೆ ಅನುಮತಿ ಕೊಟ್ಟಿರಿ ನೀವು? ಬೆಂಗಳೂರು ಸುತ್ತ ಪೆರಿಫರಲ್ ರಸ್ತೆ ನಿಮರ್ಿಸಲು ಬಿಡಿಎ ಮಾಡಿದ್ದ ರಸ್ತೆ ಅಲೈನ್ಮೆಂಟ್ ಯೋಜನೆಯನ್ನು ನೈಸ್ ಸಂಸ್ಥೆ ತನ್ನದಾಗಿಸಿಕೊಳ್ಳಲು, ಇದರಿಂದ ನೈಸ್ ಕಂಪನಿ ಇನ್ನಷ್ಟು ಬೆಂಗಳೂರು ಸಮೀಪ ಬರಲು ಹೇಗೆ ಅವಕಾಶ ಮಾಡಿಕೊಟ್ಟಿರಿ? ಮೂಲ ಒಪ್ಪಂದ ರಸ್ತೆ ಅಲೈನ್ಮೆಂಟ್ಗೆ ಅನುಗುಣವಾಗಿ ಸಕರ್ಾರ 1998 ರಲ್ಲಿ ಸುಮಾರು 20193 ಎಕರೆ ಭೂಸ್ವಾಧೀನಕ್ಕೆ ನೋಟಿಫಿಕೇಶನ್ ಹೊರಡಿಸಿದೆ. ಆಗಿನಿಂದಲೂ ಭೂಸ್ವಾಧೀನಕ್ಕೆ ಒಳಗಾಗಿರುವ ರೈತರು, ತಮ್ಮ ಜಮೀನುಗಳನ್ನು ಮಾರುವಂತೆಯೂ ಇಲ್ಲಾ. ಅಥವಾ ಬಳಸುವಂತೆಯೂ ಇಲ್ಲಾ. ಕಳೆದ 12 ವರ್ಷದಿಂದ ಅವರು ಅನುಭವಿಸುತ್ತಿರುವ ನೋವನ್ನು ನೀವು ಗಮನಿಸಿದ್ದೀರಾ. 12 ವರ್ಷದ ಹಿಂದೆ ನೀವು ಘೋಷಿಸಿದ್ದ ಎಕರೆಗೆ 80 ಸಾವಿರ ರುಪಾಯಿ ಪರಿಹಾರವನ್ನೇ ಈಗಲೂ ನೀಡಲು ಮುಂದಾಗುತ್ತಿದ್ದೀರಾ ಇದು ನ್ಯಾಯವೇ?

ಬಿಎಂಐಸಿ ಯೋಜನೆ ಜಾರಿಗೊಳಿಸುವ ಮುನ್ನ ಆಗಿನ ಸಕರ್ಾರ, ಆರ್ ಅಂಡ್ ಆರ್ ಫ್ಯಾಕೇಜ್ ಪ್ರಕಟಿಸಿ ಕಾನೂನಿನ ರೂಪದಲ್ಲಿ ಆದೇಶ ಹೊರಡಿಸಿತ್ತು. ಆರ್ ಅಂಡ್ ಆರ್ ಎಂದರೆ ರಿಯಾಬಿಲಿಟೇಷನ್ ಅಂಡ್ ರಿಸೆಟ್ಲ್ಮೆಂಟ್ ಪ್ಯಾಕೇಜ್ ಎಂದು. ಭೂಸ್ವಾಧೀನಕ್ಕೆ ಒಳಗಾಗುವ ರೈತರನ್ನು ಗೌರವದಿಂದ ಕಾಣಬೇಕು. ಅವನ್ನು ಒಕ್ಕಲೆಬ್ಬಿಸುವ ಮುನ್ನ ಅವರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಕನಿಷ್ಠ ಮೂರು ತಿಂಗಳು ಮುಂಚಿತವಾಗಿ ಅವರಿಗೆ ಲಿಖಿತ ನೋಟಿಸು ನೀಡಬೇಕು ಎಂಬುದು ಆರ್ ಅಂಡ್ ಆರ್ ಫ್ಯಾಕೇಜ್ನ  ಮುಖ್ಯ ಉದ್ದೇಶ. ಆದರೆ ನೀವು ನಮ್ಮ ರೈತರನ್ನು ಹೇಗೆ ಒಕ್ಕಲೆಬ್ಬಿಸುತ್ತಿದ್ದೀರಿ? ರಾತ್ರೋ ರಾತ್ರಿ ಬುಲ್ಡೋಜರ್ಗಳನ್ನು ತಂದು ಅವರನ್ನು ಹೊರಹಾಕಿ ರಸ್ತೆ ಮಾಡುತ್ತಿದ್ದೀರಿ. ಅವರಿಗೆ ನೋಟಿಸು ನೀಡುವುದಿರಲಿ ಕನಿಷ್ಠ ಅವರಿಗೆ ಗೌರವವನ್ನು ನೀಡುತ್ತಿಲ್ಲ. ಮುಖ್ಯಕಾರ್ಯದಶರ್ಿಯವರ ಅಸಾಧಾರಣ ಜ್ಞಾಪಕ ಶಕ್ತಿಗೆ ಆರ್ ಅಂಡ್ ಫಾಕೇಜ್ ಹೊಳೆಯುತ್ತಿಲ್ಲವೇ?
ಕಾನೂನು ಸಚಿವರೇ ಎಂದಾದರೂ ನೀವು ನೈಸ್ ಸಂಸ್ಥೆ ಬೆಂಗಳೂರು ಸಮೀಪ ಎಷ್ಟು ಸಾವಿರ ಎಕರೆ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಗಮನಿಸಿದ್ದೀರಾ? ಬೆಂಗಳೂರು ಸುತ್ತ 90 ಮೀಟರ್ ಅಗಲದ 41 ಕಿಲೋಮೀಟರ್ ಪೆರಿಫರಲ್ ರಸ್ತೆ, 8 ರಿಂದ 9 ಕಿಮೀ ಲಿಂಕ್ ರಸ್ತೆ ನಿಮರ್ಿಸಲು ಗರಿಷ್ಠ ಎಂದರೆ 1000 ಎಕರೆ ಭೂಮಿ ಸಾಕು. ಆದರೆ ಈಗಾಗಲೇ ನೈಸ್ ಬಳಿ 2800 ಹೆಚ್ಚು ಎಕರೆ ಭೂಮಿ ಇದೆ ಎಂಬುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಬೆಂಗಳೂರು ಸುತ್ತ ಒಂದು ಎಕರೆಗೆ ಕನಿಷ್ಠ ಎಂದರೂ 5 ಕೋಟಿಯಿಂದ ಹಿಡಿದು ಪೂರ್ವದಲ್ಲಿ 25 ಕೋಟಿವರೆಗೂ ಬೆಲೆ ಇದೆ. ಹಾಗಾದರೆ ಬೆಂಗಳೂರು ಸುತ್ತ ಒಂದರಲ್ಲೆ ನೈಸ್ಗೆ ಎಷ್ಟು ಸಾವಿರ ಕೋಟಿ ರು ಮೌಲ್ಯದ ಭೂಮಿ ಸಿಕ್ಕಿದೆ ಎಂಬುದನ್ನು ನೀವೇ ಲೆಕ್ಕಹಾಕಿ.
ನಿಜ ನೀವು ಹೇಳುತ್ತೀರಿ. ಇದು ದೇವೇಗೌಡರ ಪಾಪದ ಕೂಸು. ಕಾಂಗ್ರೆಸ್ ಸಕರ್ಾರ ಮಾಡಿದ ತಪ್ಪು. ಸುಪ್ರೀಂಕೋರ್ಟ ಆದೇಶ ಇದೆ. ಹೀಗೆ ನೂರಾರು ಸಬೂಬುಗಳನ್ನು ನೀವು ಕೊಡುತ್ತೀರಿ ಒಪ್ಪಿಕೊಳ್ಳೋಣ. ಸುಪ್ರೀಂಕೋರ್ಟ ಸಹ ಸೋಮಶೇಖರರೆಡ್ಡಿ ಪ್ರಕರಣದಲ್ಲಿ ತೀಮರ್ಾನವಾಗಿರುವಂತೆಯೇ, ಮೂಲ ಒಪ್ಪಂದದ ಅಲೈನ್ಮೆಂಟ್ ಪ್ರಕಾರವೇ ರಸ್ತೆ ನಿಮರ್ಿಸಿ ಎಂದು ಹೇಳುತ್ತಿದೆ. ಆದರೆ ಮೂಲ ಒಪ್ಪಂದದ ಅಲೈನ್ಮೆಂಟ್ನಲ್ಲಿ ಷಡ್ಯೂಲ್ಗಳನ್ನು ಬದಲಾಯಿಸಲಾಗಿದೆ. ಇದಕ್ಕೆ ಕಾನೂನಿನ ಪಾವಿತ್ರ್ಯತೆ ಇಲ್ಲಾ ಎಂಬುದನ್ನು ತಾವು ಗಮನಿಸಿಲ್ಲವೇ? ಹೀಗಿರುವಾಗ ಬಿಎಂಐಸಿ ಯೋಜನೆಯನ್ನು ಜಾರಿಗೊಳಸಲು ಹುಟ್ಟುಹಾಕಿದ ಬಿಎಂಐಸಿಪಿಎ ಸಕರ್ಾರಿ ಸಂಸ್ಥೆ, ಸಕರ್ಾರಿ ಅಧಿಕಾರಿ ಅಗವಾನೆ ಜತೆಗೆ ಮಾಜಿ ಅಡ್ವೊಕೇಟ್ ಜನರಲ್ ಉದಯ್ಹೊಳ್ಳ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಮೂಲ ಒಪ್ಪಂದವನ್ನು ಉಲ್ಲಂಘಿಸಿ ಬಿಎಂಐಸಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿಲ್ಲವೇ? ಹೀಗಿದ್ದರೂ ನೀವು ಕೆರೆ ಅಂಗಳಗಳನ್ನು ಯಾವುದೇ ಕಾರಣಕ್ಕೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ನೀಡಬಾರದೆಂದು ಹೈಕೋರ್ಟನ ಆದೇಶವಿದ್ದರೂ, ಈ ಬಗ್ಗೆ ಈ ಹಿಂದಿನ ಕಂದಾಯ ಇಲಾಖೆ ಕಾರ್ಯದಶರ್ಿ ಎಸ್.ಎಂ. ಜಾಮ್ದಾರ್ ಎಚ್ಚರಿಸಿದ್ದರೂ 138 ಎಕರೆ ಕೆರೆ ಅಂಗಳವನ್ನು ಕ್ರಯ ಮಾಡಿಕೊಡಲು ಮುಂದಾಗಿದ್ದೀರಿ ನೀವು. ಎಸ್ಸಿ ಎಸ್ಟಿಗಳನ್ನು ಒಕ್ಕಲೆಬ್ಬಿಸಬೇಕಾದರೆ ನೀವು ರಾಜ್ಯಪಾಲದ ಅನುಮತಿ ಪಡೆಯಬೇಕು. ಆದರೆ ಸಕರ್ಾರಿ ಜಮೀನಿನಲ್ಲಿ ಒಕ್ಕಲತನ ಮಾಡುತ್ತಿರುವ ಎಸ್ಸಿ/ಎಸ್ಟಿಗಳನ್ನು ಒಕ್ಕಲೆಬ್ಬಿಸಲು ನೈಸ್ಗೆ ಪರವಾನಗಿ ನೀಡಿದ್ದೀರಿ.
ದೇವೇಗೌಡರು ಮೂಲ ಒಪ್ಪಂದ ಮಾಡಿಕೊಂಡಾಗ, ಬೆಂಗಳೂರು ಸುತ್ತ ಒಂದೇ ಒಂದು ಕೆರೆಯೂ ರಸ್ತೆ ಅನೈನ್ಮೆಂಟ್ಗೆ ಸಿಕ್ಕುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಸಕರ್ಾರ ಮಾಡಿದ  ಓಡಿಪಿ ರಸ್ತೆ ಅಲೈನ್ಮೆಂಟ್ನಿಂದ ಸುಮಾರು 24 ಕೆರೆಗಳು ನೈಸ್ ರಸ್ತೆಗೆ ಬಲಿಯಾಗುತ್ತಿವೆ. ನೈಸ್ ಕಂಪನಿಗೆ ರಸ್ತೆ ನಿಮರ್ಾಣಕ್ಕೆ ಕೇವಲ 90 ಮೀಟರ್ ಅಗತ್ಯವಿದ್ದರೂ ಅದು ಮನಸೋಇಚ್ಘೆ ರಸ್ತೆ ಅಕ್ಕಪಕ್ಕದ ಜಮೀನುಗಳನ್ನು ಅಕ್ವೈರ್ ಮಾಡಿಸುತ್ತಿದೆ. ಸುಪ್ರೀಂಕೋರ್ಟನಲ್ಲಿ ಕೇಸ್ ಇದ್ದರೂ ಇನ್ಫೋಸಿಸ್, ಶೋಭಾ ಡೆವಲಪರಸ್ ಸೇರಿದಂತೆ ಸುಮಾರು 8 ಕಂಪನಿಗಳಿಗೆ ಸಕರ್ಾರ ಮೂಲ ಒಪ್ಪಂದದ ರಸ್ತೆ ಅಲೈನ್ಮೆಂಟ್ಗೆ ಅನುಗುಣವಾಗಿ ಭೂಸ್ವಾಧೀನ ಮಾಡಿಕೊಂಡಿದ್ದ ಭೂಮಿಯನ್ನು ಮಾರಾಟ ಮಾಡಿದೆ.
ಇವೆಲ್ಲವನ್ನೂ ಮುಖ್ಯಕಾರ್ಯದಶರ್ಿಯವರು ಗಮನಿಸಿಲ್ಲವೇ? ಮುಖ್ಯಕಾರ್ಯದಶರ್ಿಯವರ ಕಾರ್ಯಕ್ಷಮತೆ, ಪ್ರಾಮಾಣಿಕತೆ, ಮೊನಚಾದ ನೆನಪಿನ ಶಕ್ತಿ, ಕಂಪ್ಯೂಟರ್ ಗುಣ ಇಲ್ಲಿ ಕೆಲಸಮಾಡದಿರುವುದು ಕಾನೂನು ಸಚಿವರ ಗಮನಕ್ಕೆ ಬಂದಿಲ್ಲವೆ?
ಕಾನೂನು ಸಚಿವರೇ, ಕಾಂಗ್ರೆಸ್ ಸಕರ್ಾರ ಮಾಡಿದ ತಪ್ಪಿದು ನಾವೇನು ಮಾಡೋಣ ಎನ್ನಬೇಡಿ. ಒಂದು ಸಕರ್ಾರ ಮಾಡಿದ ತಪ್ಪನ್ನು ನೀವು ರೆಕ್ಟಿಫೈ ಮಾಡಬೇಕು. ರ್ಯಾಟಿಫೈ  ಮಾಡಬಾರದು. ಅದಕ್ಕಾಗಿಯೇ ಜನ ನಿಮ್ಮನ್ನು ಆರಿಸಿ ಕಳುಸಿದ್ದಾರೆ. ಜನಪ್ರತಿನಿಧಿಗಳು ತಪ್ಪುಮಾಡುತ್ತಾರೆಂದೇ ರಾಜ್ಯದ ಸಂಪತ್ತು, ಸಾರ್ವಜನಿಕರ ಆಸ್ತಿಪಾಸ್ತಿಯನ್ನು ಕಾಪಾಡಲು ಮುಖ್ಯಕಾರ್ಯದಶರ್ಿಯವರಿದ್ದಾರೆ. ಇಬ್ಬರೂ ಈಗಲಾದರೂ ದಕ್ಷತೆಯಿಂದ ಕೆಲಸಮಾಡುತ್ತೀರೆದಂದು ನಿರೀಕ್ಷಿಸುತ್ತೇನೆ.

—ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್,
ಬೆಂಗಳೂರ

Minister D. Sudhakar Khathe changed, Govinda Karajol is new social welfare minister

                             

Samaja Kalyana sachiva D. Sudhakar Kathe changed. Dharmika Datti khate given to D. Sudhakar.

 • ಪುಟಗಳು

 • Flickr Photos

 • ಆಗಷ್ಟ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಜುಲೈ   ಸೆಪ್ಟೆಂ »
  1234567
  891011121314
  15161718192021
  22232425262728
  293031  
 • ವಿಭಾಗಗಳು