Konappana Agrahara farmers approches Police for protection


ರಿಪೋರ್ಟರ್; ಎಂ. ಎನ್. ಚಂದ್ರೇಗೌಡ
ಸ್ಲಗ್ : ನೈಸ್- ರೈತರು
ಡೇಟ್: 04- 08-2010
ಬೆಂಗಳೂರು
ಆಂಕರ್: ಬೆಂಗಳೂರಿನ ಕೋನಪ್ಪನ ಅಗ್ರಹಾರದ ಬಳಿ ನೈಸ್ ಸಂಸ್ಥೆ ನಮ್ಮನ್ನು ರಾತ್ರೋರಾತ್ರಿ ಒಕ್ಕಲೆಬ್ಬಿಸಲು ಸಿದ್ಧತೆ ನಡೆಸಿದೆ. ಆದ್ದರಿಂದ ತಮಗೆ ರಕ್ಷಣೆ ನೀಡಬೇಕೆಂದು ಕೋನಪ್ಪನ ಅಗ್ರಹಾರದ ರೈತರು ಪೊಲೀಸರ ಮೊರೆಹೋಗಿದ್ದಾರೆ. ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಮೂಲ ಒಪ್ಪಂದದಲ್ಲಿ ನಮ್ಮ ಜಮೀನುಗಳಿಲ್ಲ. ಜತೆಗೆ ಓಡಿಪಿ ಅಲೈನ್ಮೆಂಟ್ನಲ್ಲೂ ನಮ್ಮ ಜಮೀನುಗಳು ಬರುವುದಿಲ್ಲ. ಹೀಗಿದ್ದರೂ ಪೆರಿಫರಲ್ ರಸ್ತೆ ಕಾಮಗಾರಿ ಮುಗಿದ ನಂತರವೂ ನೈಸ್ ಸಂಸ್ಥೆಗೆ ನಮ್ಮ ಜಮೀನುಗಳೇಕೆ ಬೇಕೆಂದು ರೈತರು ನೋವು ತೋಡಿಕೊಂಡಿದ್ದಾರೆ.

ಫ್ಯಾಕೇಜ್ ಫಾಲೋಸ್…….

ವಾಯ್ಸ್ ಓವರ್: 1:
ಬೆಂಗಳೂರಿನ ಹೊರವಲಯದ ಹೊಸೂರು ಜಂಕ್ಷನ್ ಬಳಿ ಇರುವ ಸಣ್ಣ ಹಳ್ಳಿಯೇ ಕೋನಪ್ಪನ ಅಗ್ರಹಾರ. ಐಟಿ -ಬಿಟಿ ಕಂಪನಿಗಳಿಂದ ಸುತ್ತುವರೆದಿರುವ ಈ ಹಳ್ಳಿಯ ಸುತ್ತಮುತ್ತಲ ಜಮೀನಿನ ಬೆಲೆ ಈಗಿನ ಮಾರುಕಟ್ಟೆಯಲ್ಲಿ ಪ್ರತಿ ಎಕರೆಗೆ 4 ಕೋಟಿ ರುಪಾಯಿ. ಆದರೆ ನೈಸ್ ಕಂಪನಿ ನೋಟಿಸು ನೀಡಿ ಈಗ ಜಾಗ ಖಾಲಿ ಮಾಡಿ ಎಂದು ಕೇಳುತ್ತಿರುವ ರೈತರಿಗೆ ಪ್ರತಿ ಎಕರೆಗೆ ಕೇವಲ 8 ಲಕ್ಷ ರುಪಯಿ ಪರಿಹಾರ ನೀಡಲು ನೈಸ್ ಸಂಸ್ಥೆ ಮುಂದಾಗಿದೆ. ನಾವು ಭೂಮಿ ನೀಡುವುದಿಲ್ಲ ನಮಗೆ ಪರಿಹಾರ ಬೇಡ ಎಂದ ರೈತರಿಗೆ ನೋಟಿಸು ನೀಡಲಾಗಿದೆ. ನಿಮ್ಮ ಪರಿಹಾರ ಮೊತ್ತವನ್ನು ಬ್ಯಾಂಕ್ಗೆ ಕಟ್ಟಲಾಗಿದೆ. ಬೇಕಾದರೆ ತೆಗೆದುಕೊಳ್ಳಿ ಇಲ್ಲವಾದರೆ ಕೋಟರ್್ಗೆ ಹೋಗಿ. ಸದ್ಯಕ್ಕೆ ಜಾಗ ಖಾಲಿ ಮಾಡಿ ಎಂದು ನೋಟೀಸಿನಲ್ಲಿ ಎಚ್ಚರಿಸಲಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಬೈಟ್: ರವಿ ಪ್ರಸಾದ್ ರೆಡ್ಡಿ, ರೈತ

ವಾಯ್ಸ್ ಓವರ್: 2:
ನೈಸ್ ಸಂಸ್ಥೆ ನೀಡಿರುವ ನೋಟಿಸಿಗೆ ಹೆದರಿರುವ ರೈತರು ಈಗ ದಾರಿ ಕಾಣದೆ ಪೊಲೀಸರ ಮೊರೆಹೋಗಿದ್ದಾರೆ. ರಾಜ್ಯ ಗೃಹ ಕಾರ್ಯದಶರ್ಿಗಳಿಗೆ, ಪೊಲೀಸ್ ಆಯುಕ್ತರಿಗೆ ದೂರು ನೀಡಿ ನಮ್ಮನ್ನು ಒಕ್ಕಲೆಬ್ಬಿಸದಂತೆ ರಕ್ಷಣೆ ನೀಡಬೇಕು. ಏಕೆಂದರೆ ನೈಸ್ ಸಂಸ್ಥೆ ನಿಮರ್ಿಸುತ್ತಿರುವ ರಸ್ತೆ ಕಾನೂನು ಬಾಹಿರವಾಗಿದೆ. ಜತೆಗೆ ಮೂಲ ಒಪ್ಪಂದದ ಅಲೈನ್ಮೆಂಟ್ನಲ್ಲಿ ನಮ್ಮ ಜಮೀನುಗಳಿಲ್ಲ. ಓಡಿಪಿ ಅಲೈನ್ಮೆಂಟ್ನಲ್ಲೂ ನಮ್ಮ ಜಮೀನುಗಳು ಪೆರಿಫೆರಲ್ ರಸ್ತೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಿದ್ದರೂ ನಮ್ಮ ಮನೆಗಳು, ಜಮೀನುಗಳು ನೈಸ್ ಸಂಸ್ಥೆಗೆ ಏಕೆ ಬೇಕೆಂದು ರೈತರು ಪ್ರಶ್ನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರು ಬರುವ 7 ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ. 

ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

Leave a comment

No comments yet.

Comments RSS TrackBack Identifier URI

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • Pages

 • Flickr Photos

  Pantorhytes

  White throated Sparrow Inceville Los Liones Canyon 116-2

  Wyoming Sunset

  Sunset over Phewa Lake, Nepal

  More Photos
 • August 2010
  S M T W T F S
  « Jul   Sep »
  1234567
  891011121314
  15161718192021
  22232425262728
  293031  
 • Categories