ಕವಲು: ಹಳಸು ವಿಚಾರಗಳ ತೆವಲೆ? Kavalu Byrappanavarondige samvada on 08-08- 2010

ಕವಲು ಭೈರಪ್ಪನವರ 22 ನೆ ಕೃತಿ, ಧರ್ಮಶ್ರೀಯಿಂದ ಹಿಡಿದು ಆವರಣದವರೆಗೆ ಭೈರಪ್ಪನವರು ಬಹುತೇಕ ಎಲ್ಲಾ ವಿಷಯಗಳನ್ನು, ಅದು ಮಾನವ ಸಂಬಂಧ ಇರಬಹುದು ಅದರಲ್ಲೂ ವಿಶೇಷವಾಗಿ ಗಂಡು ಹೆಣ್ಣಿನ ಸಂಬಂಧ, ಧರ್ಮಗಳ ಸಂಘರ್ಷ, ಮನೋವಿಜ್ಞಾನ ಇರಬಹುದು, ತತ್ವಶಾಸ್ತ್ರ ಇರಬಹುದು, ಪರ್ವದ ಎಲ್ಲಾ ಪೌರಣಿಕ ಕ್ಯಾರೆಟ್ಟರ್ಗಳಿರಬಹದು, ವೈಚಾರಿಕ ಸಿದ್ಧಾಂತಗಳಿರಬಹುದು. ಹೀಗೆ ಎಲ್ಲಾ ವಿಷಯಗಳನ್ನು ಭೈರಪ್ಪ ತಮ್ಮ ಕಾದಂಬರಿಗಳಲ್ಲಿ ಈಗಾಗಲೇ ದಾಖಲಿಸಿದ್ದಾರೆ.

 ಒಂದು ರೀತಿಯಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಅಂಥ ಹೇಳುವಂತೆ ಭೈರಪ್ಪನವರು ಮುಟ್ಟದ ವಿಷಯಗಳು, ಕೆದಕದ ವೈಚಾರಿಕ ಪ್ರಶ್ನೆಗಳು ಬಾಕಿ ಉಳಿದಿಲ್ಲ ಎಂದೇ ಹೇಳಬಹುದು. ಹೀಗೆ ಹಲವು ಹತ್ತು ಪಾತ್ರಗಳನ್ನು ಸೃಷ್ಟಿಸಿ ಆವುಗಳ ಮೂಲಕ ತಮ್ಮ ನಿಲವುಗಳು. ವಿಚಾರಧಾರೆಗಳನ್ನು ಹೇಳುವ, ಅವುಗಳನ್ನು ಅಕ್ಷರ ರೂಪಕ್ಕೆ ಇಳಿಸುವ ಎಸ್. ಎಲ್. ಭೈರಪ್ಪ, ಇಂದು ಡಾ. ಯು.ಆರ್. ಅನಂತಮೂತರ್ಿ, ತೇಜಸ್ವಿಯವರಷ್ಟೇ ಕನ್ನಡ ನಾಡಿನಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಕನ್ನಡ ನಾಡಿನ ಜನರ ಮೇಲೆ ತಮ್ಮ ವೈಚಾರಿಕ ಕಾದಂಬರಿಗಳ ಮೂಲಕ ಅತ್ಯಂತ ಹೆಚ್ಚು ಪ್ರಭಾವ  ಬೀರುವಷ್ಟು ದೊಡ್ಡ ಲೇಖಕರಾಗಿ ಇಂದು ಬೆಳೆದುನಿಂತಿದ್ದಾರೆ.
ಕವಲು ಕಾದಂಬರಿ ಬಿಡುಗಡೆಯಾದ ಕೇವಲ ಒಂದು ತಿಂಗಳಲ್ಲಿ 8 ಬಾರಿ ಮರು ಮುದ್ರಣಗೊಂಡಿದೆ ಎಂದರೆ ಭೈರಪ್ಪನವರ ಪುಸ್ತಕಗಳಿಗೆ ಇರುವ ಬೇಡಿಕೆ, ಅವರಿಗಿರುವ ಅಭಿಮಾನಿ, ಓದುಗ ವರ್ಗ ಎಷ್ಟು ಎಂಬುದಕ್ಕೆ ಸಾಕ್ಷಿಯಾಗಿದೆ.
 ಈ ಕವಲು ಕಾದಂಬರಿಯ ಕಥಾವಸ್ತು, ಅದರೊಳಗಿನ ಪಾತ್ರಗಳು, ಅವುಗಳು ಹೇಳುವ, ಸಾರುವ ಸಂದೇಶಗಳು, ತತ್ವ ಸಿದ್ಧಾಂತ, ಆದರ್ಶ, ಸಮಕಾಲೀನ ಬದುಕಿಗೆ ಈ ಕಾದಂಬರಿ ನೀಡಬಹುದಾದ ಕೊಡುಗೆ, ಜತೆಗೆ ಈಗಿನ ಕಾಲಘಟ್ಟದಲ್ಲಿ ಭೈರಪ್ಪ ದಾಖಲಿಸಿರುವ ಸತ್ಯ, ಆದರ್ಶ, ಬದಲಾವಣೆ, ಇವುಗಳೆಲ್ಲದರ ಬಗ್ಗೆ ಇದೇ 8 ರಂದು ಸಂಜೆ ನಾಲ್ಕು ಗಂಟೆಗೆ ಜಯನಗರ 2 ನೇ ಬ್ಲಾಕ್ನ ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ಸಂವಾದ ಏರ್ಪಡಿಸಲಾಗಿದೆ.
ಈ ಸಂವಾದ ಕಾರ್ಯಕ್ರಮದಲ್ಲಿ ಎಸ್.ಎಸ್. ಭೈರಪ್ಪ ಭಾಗವಹಿಸುತ್ತಾರೆ. ಡಾ. ಎಸ್. ಆರ್. ಲೀಲಾ, ಮೀರಾ ಫಡಕೆ, ಡಾ. ಸುಮತೀಂದ್ರ ನಾಡಿಗ್, ಶತಾವಧಾನಿ ಡಾ. ಆರ್ ಗಣೇಶ್, ಸುರೇಶ್ ಕೃಷ್ಣಮೂತರ್ಿ ಕೃತಿ ಕುರಿತು ಪ್ರಬಂಧ ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ಕವಲಿನ 8 ನೇ ಮುದ್ರಣದ ಪ್ರತಿಗಳ ಬಿಡುಗಡೆಯೂ ಆಗಲಿದೆ.
 
ಸಂವಾದದಲ್ಲಿ ಚಚರ್ೆಗೆ ಒಳಗಾಗಬಹುದಾದ ವಿಷಯಗಳು:

1. ಕವಲು: ಹಳಸು ವಿಚಾರಗಳ ತೆವಲೆ?
2. ಕೇವಲ 8 ಬಾರಿ ಮರು ಮುದ್ರಣವಾಯಿತು ಎಂಬುದು ಕಾದಂಬರಿಯ ಯಶಸ್ಸನ್ನು ಅಳೆಯುವ ಮಾನದಂಡವೇ?
3. ರಸ ಬತ್ತಿ ಹೋಗಿರುವ ವಿಚಾರಗಳ ಪುನರ್ ದಾಖಲೆಯ ತೆವಲು ಕವಲಿನಲ್ಲಾಗಿದೆಯೇ?
4. ಪಶ್ಚಿಮ ಜಗತ್ತಿನ ಪ್ರಭಾವ ನಮ್ಮ ಕೌಟುಂಬಿಕ ವ್ಯವಸ್ಥೆ ಮೇಲೆ ಮಾಡಿರುವ ಪರಿಣಾಮಗಳು.
5. ನಮ್ಮದೆನಿಸಿಕೊಳ್ಳುವ ಮೌಲ್ಯಗಳನ್ನು ಹೇಗೆ ಉಳಿಸಿಕೊಳ್ಳಬೇಕು?
6. ತಂದೆ- ತಾಯಿ- ಮಕ್ಕಳು, ಹಿರಿಯರು, ಮಗ- ಸೊಸೆ, ಗಂಡ- ಹೆಂಡತಿ ಹೀಗೆ ರಕ್ತ ಸಂಬಂಧಗಳು ಈಗ ಸಡಿಲವಾಗುತ್ತಿವೆಯೇ?
8. ವಿಫಲ, ಅನುಕೂಲವಾದಿ ಹಾಗೂ ವಿವಾಹೇತರ ಸಂಬಂಧಗಳ ಸುತ್ತಲಷ್ಟೇ ಭೈರಪ್ಪ ಕಾದಂಬರಿ ಬರೆಯುತ್ತಾರೆ?
9. ಲೈಂಗಿಕ ಸಂಬಂಧಗಳೇ ಮೌಲ್ಯದ ಅಳಿವು, ಉಳಿವನ್ನು ನಿರ್ಧರಿಸುವ ಸಂಗತಿಗಳೇ?
10. ಜಯಕುಮಾರ್, ಪ್ರಭಾಕರ, ವತ್ಸಲೆ, ನಚಿಕೇತ, ಮಂಗಳ, ಇಳಾ, ಪಾತ್ರಗಳ ಗಟ್ಟಿತನ, ಅವುಗಳು ಸಾರುವ ಮೌಲ್ಯದ ಬಗ್ಗೆ ಚಚರ್ೆ ನಡೆಯಲಿದೆ.
11. ಪುರುಷ- ಮಹಿಳೆ ಕಾಮಕ್ಕಾಗಿ ಕಾಂಪ್ರಮೈಸ್ ಆಗುವ ಅನಿವಾರ್ಯತೆ
12. ಶಯನೋತ್ಸವದ ಸನ್ನಿವೇಶಗಳನ್ನೇ ಬಳಸಿ ಲೈಂಗಿಕ ಸಂಗತಿಗಳೇ ಸಮಕಾಲೀನ ಬದುಕು ಎಂದು ಚಿತ್ರಿಸಿರುವುದು ಸರಿಯೇ?
13. ಯಾವುದೇ ಮೌಲ್ಯವನ್ನು ನಿಷ್ಠೆಯಿಂದ ಅನುಸರಿಸಿದರೆ ಉಳಿಸಿಕೊಳ್ಳಲು ಸಾಧ್ಯ. ಆ ಮನಸ್ಸು ನಿಷ್ಠೆ ನಮ್ಮಲ್ಲಿರಬೇಕು ಎಂಬ ಚಿಂತನೆ ಹಿಂದಿರುವ ತರ್ಕ.
14. ದೇಹವಾಂಛೆಯನ್ನು ಮೀರಿದ ಬದುಕು ಇಲ್ಲವೇ? ಸಮಕಾಲೀನ ಬದುಕು, ಮೌಲ್ಯ ಎಂದರೆ ಇಷ್ಟೇನೆ?
15. ಸಮಾಜದ ಕಟ್ಟುಪಾಡುಗಳು ಅತ್ಯಂತ ಕಟ್ಟುನಿಟಾಗಿ ಜಾರಿಯಲ್ಲಿದ್ದ ಸಮಯದಲ್ಲೂ ಕವಲಿನಲ್ಲಿ ಬರುವ ಸಂಬಂಧಗಳು ಇರಲಿಲ್ಲವೆ?
16. ಸಮಕಾಲೀನ ಬದುಕು ಯಾವುದು? ಕವಲು: ನಗರ ಸಂಬಂಧಿತ ಬದುಕಿನಲ್ಲಿ ಹೆಚ್ಚೋ ಗ್ರಾಮೀಣ ಸಂಬಂಧಗಳಲ್ಲಿ ಹೆಚ್ಚೋ?
17. ವಂಶವೃಕ್ಷ, ನಾಯಿ ನೆರಳು, ಗ್ರಹಣ, ಪರ್ವ, ಅಂಚು, ತಂತು, ಸಾರ್ಥ, ಮಂದ್ರ, ಆವರಣದದಂತೆ ಪ್ರಭಾವ ಬೀರಲು ಕವಲು ಸೋತಿತೇ?
18. ಮೂಲಭೂತ ಮೌಲ್ಯಗಳ ಶೋಧನೆ ಈ ಕಾದಂಬರಿಯಲ್ಲಿ ಆಗಿಲ್ಲವೇ?
19. ಸ್ತ್ರೀ ವಿಮೋಚನೆಯ 12 ಮುಖ್ಯ ಸೂತ್ರಗಳು ಯಾವು?
20. ಪಾರಂಪರಿಕ ಕುಟುಂಬ ವ್ಯವಸ್ಥೆ ಮೇಲೆ ಆಧುನಿಕತೆ ಉಂಟು ಮಾಡಿರುವ ಪರಿಣಾಮಗಳು.
21. ವಿವಾಹ, ಕುಟುಂಬಗಳೆಂಬ ಸಾಮಾಜಿಕ ಸಂಸ್ಥೆಗಳನ್ನು ಸ್ತ್ರೀಯನ್ನು ವಂಚಿಸುವ ಸಲುವಾಗಿಯೇ ಕಟ್ಟಲಾಯಿತೇ?
22. ಓದಿದ ಗಂಡಸರೆಲ್ಲಾ ಹೆಂಗಸರಾಗುತ್ತಾರೆ. ಓದಿದ ಹೆಂಗಸರೆಲ್ಲಾ ಗಂಡಸರಾಗುತ್ತಾರೆ ಎಂಬ ಅಭಿಪ್ರಾಯಕ್ಕೆ ಬರಲು ಕಾರಣ?
23. ಸ್ತ್ರೀವಾದಿಗಳ ಆಕ್ಷೇಪಗಳಿಂದ ಕಾದಂಬರಿ ತಪ್ಪಿಸಿಕೊಳ್ಳುವುದೇ?
24. ದ್ಯಾವಕ್ಕ ಮತ್ತು ವೈಜಯಂತಿಯ ಪಾತ್ರ: ಆದರ್ಶವೇ?
25. ಕೌಟುಂಬಿಕ ಮೌಲ್ಯಗಳು ಯಾವುವು?
26. ಕವಲಿನಲ್ಲಿ ಭೈರಪ್ಪ ಮಹಿಳಾ ವಿರೋಧಿ, ಸ್ತ್ರೀ ವಿರೋಧಿಯಾಗಿ ವತರ್ಿಸಿದ್ದಾರೆಯೇ?
27. ಲೈಂಗಿಕ ಅಗತ್ಯ ಪೂರೈಕೆಗೂ ಕೂಡ ಸ್ತ್ರೀಯರು ಪುರುಷರನ್ನು ಅವಲಂಬಿಸಬಾರದು ಎಂಬುದು ಪುರುಷ ವಿರೋಧಿ ಮನಸ್ಥಿತಿಯೇ?
28. ಕವಲಿನಲ್ಲಿ ಹಣೆದಿರುವ ಪಾತ್ರಗಳು ಅವುಗಳ ನಿರೂಪಣಾ ತಂತ್ರ.
29. ಭಾರತೀಯ ಕುಟುಂಬಗಳು ವಿಘಟನೆಯತ್ತ ಸಾಗುತ್ತಿರುವುದನ್ನು ಕವಲು ಎತ್ತಿ ತೋರಿಸುತ್ತದೆಯೇ?
30. ದೊಡ್ಡ ಮಟ್ಟದ ವೈಚಾರಿಕ ವಾಗ್ವಾದಗಳು ಕವಲಿನಲ್ಲಿ ನಡೆದಿಲ್ಲವೆ?
31. ನಾವು ಕಾಣುತ್ತಿರುವ ವರ್ತಮಾನದ ಸತ್ಯಗಳನ್ನೇ ಕಲಾಕೃತಿಯಾಗಿ ಕವಲಿನಲ್ಲಿ ಕಟ್ಟಲಾಗಿದೆಯೇ?

ಹೀಗೆ ಹಲವು ಹತ್ತು ಪ್ರಶ್ನೆಗಳು, ಜಿಜ್ಞಾಸೆಗಳಿಗೆ ಭೈರಪ್ಪ ಉತ್ತರಿಸುತ್ತಾರೆ. ಸಂವಾದಲ್ಲಿ, ಪ್ರಬಂಧ ಮಂಡನೆಯಲ್ಲಿ ಬೆಳಕು ಚೆಲ್ಲಲಾಗುತ್ತದೆ. ತಪ್ಪದೇ ಎಲ್ಲರೂ ಬನ್ನಿ ಒಂದು ಉತ್ಕೃಷ್ಟ, ವೈಚಾರಿಕ ಚಚರ್ೆಗೆ ಸಾಕ್ಷಿಯಾಗಿ.
–ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್ ಚಾನೆಲ್.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಆಗಷ್ಟ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಜುಲೈ   ಸೆಪ್ಟೆಂ »
  1234567
  891011121314
  15161718192021
  22232425262728
  293031  
 • ವಿಭಾಗಗಳು