ಹೋಗದೇ ಹೋದರೇ ಒಂದು ದೊಡ್ಡ ಮೊತ್ತದ ಅನುಭವ, ಅವಕಾಶ ಕಳೆದುಕೊಂಡ ಬೇಸರದ ಭಾವ ಮತ್ತಂದು ಕಡೆ

ಮತ್ತೆ ಅಕ್ಕ ಸಮ್ಮೇಳನ ಕಣ್ಮುಂದೆ ಬಂದು ನಿಂತಿದೆ. ಸೆಪ್ಟಂಬರ್ 2, 3, 4 ನ್ಯೂಜಸರ್ಿಯಲ್ಲಿ ಅಕ್ಕ ಸಮ್ಮೇಳನ. ಮನಸ್ಸು ಚಡಪಡಿಸುತ್ತಿದೆ. ಹೋಗಲೋ ಬೇಡವೋ ಎಂಬ ತಲ್ಲಣದ ಭಾವ ನನ್ನನ್ನು ಆವರಿಸಿದೆ. ಆದರೆ ನಾನು ಮೊದಲ ಬಾರಿ ಅಂದರೆ 2008 ರಲ್ಲಿ ಅಕ್ಕ ಸಮ್ಮೇಳನಕ್ಕೆ ಹೋಗುವಾಗ ಇದ್ದ ಕುತೂಹಲ, ಚಡಪಡಿಕೆ ಈಗಿಲ್ಲ. ಈಗ ನನ್ನ ಬಳಿ ಬಹಳ ಮುಖ್ಯವಾಗಿ 10 ವರ್ಷಗಳ ವೀಸಾ ಇದೆ. ಎರಡು ವರ್ಷದ ಹಿಂದೆ ಅಮೆರಿಕಾಗೆ ಹೋಗಲು ಹೊರಟು ನಿಂತಾಗ ಅಮ್ಮ ಇದ್ದರು. ನಾನು ಅಮೆರಿಕಾಗೆ ಹೋಗುವ ವಿಷಯ ಕೇಳಿ ಹಿರಿಹಿರಿ ಹಿಗ್ಗಿದ್ದರು. ಆಗ ವೀಸಾ ಮಾಡಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಮೊದಲ ಬಾರಿ ವೀಸಾ ರಿಜೆಕ್ಟ್ ಆದಾಗಲಂತೂ ನಾನು ಪಟ್ಟ ಯಾತನೆ ಅಷ್ಟಿಷ್ಟಲ್ಲ. ಶಾರಾದಳು ಬೇಜಾರು ಮಾಡಿಕೊಂಡಿದ್ದಳು. 2 ನೇ ಬಾರಿ ವೀಸಾ ಸಂದರ್ಶನಕ್ಕೆ ಹೋಗಲು ನಾನು ನಿರಾಕರಿಸಿದಾಗ ಅವಳೇ ಹುರಿದುಂಬಿಸಿ ಕಳುಹಿಸಿದ್ದಳು. ಭರತ್ ನನಗೆ ಸಹಾಯ ಮಾಡಿದ. ಕಡೆಗೂ ನನಗೆ ವೀಸಾ ಸಿಕ್ಕಿತು. ಭರತ್ಗೆ ನಾನು ಋಣಿ. ಹಾಗೇ ಶಾರದಾಳಿಗೂ ನಾನು ಕೃತಜ್ಞ. ವೀಸಾ ಸಿಕ್ಕ ಖುಷಿಯನ್ನು ಚೆನ್ನೈ ನಗರಕ್ಕೆ ಕೇಳಿಸುವ ಹಾಗೆ ಶಾರದಾಳಿಗೆ ಕೂಗಿ ಹೇಳಿದ್ದೆ. ಆಗ ನಾನು ಸುವಣರ್ಾ ಚಾನೆಲ್ನಲ್ಲಿದ್ದೆ. ಅಮೆರಿಕಾ ಭೂಪಟ, ಅಲ್ಲಿನ ನಗರಗಳ ಲವಲೇಶ ಮಾಹಿತಿಯೂ ಇಲ್ಲದೆ ನಾನು ಆ ಪ್ರವಾಸಕ್ಕೆ ಅಣಿಯಾಗಿದ್ದೆ. ಕೇವಲ ಮೂರು ದಿವಸಕ್ಕೆ ಹೋದವನು 40 ದಿನಗಳ ಕಾಲ ಅಮೆರಿಕಾ ಸುತ್ತಿದ್ದು ನನ್ನ ಬದುಕಿನ ಬಹುದೊಡ್ಡ ಅನುಭವ. ಅಮೆರಿಕಾಗೆ ಕಳೆದ ಬಾರಿ ಹೋದಾಗ ಬಬ್ಬರೇ ಬಬ್ಬರು ಸ್ನೇಹಿತರಿರಲಿಲ್ಲ. ಆದರೆ ಈ ಬಾರಿ ಬರೋಬ್ಬರಿ ನೂರು ಮಂದಿ ಸ್ನೇಹಿತರಿದ್ದಾರೆ. ಎಲ್ಲರೂ ನಮ್ಮ ಮನೆಗೆ ಬನ್ನಿ. ತಮ್ಮ ಮನೆಗೆ ವಿಸಿಟ್ ಮಾಡಿ ಎನ್ನುತ್ತಿದ್ದಾರೆ. ಯಾರ ಮನೆಗೆ ಹೋಗುವುದು ಬಿಡುವುದು ಗೊತ್ತಾಗುತ್ತಿಲ್ಲ. ಏಕೆಂದರೆ ಈ ಬಾರಿ ಯಾರ ಮನೆಗೂ ವಿಸಿಟ್ ಮಾಡದೇ ಒಂದೇ ಸಮನೆ ಅಮೆರಿಕಾದಲ್ಲಿ ನೋಡದೇ ಬಿಟ್ಟಿರುವ ಸ್ಥಳಗಳು, ಕೆನಡಾ ದೇಶವನ್ನು ಸುತ್ತುವ ಆಸೆ. ಈ ಬಾರಿ ಹೆಚ್ಚಿನ ಅಧ್ಯಯನ ಮಾಡಬೇಕು. ಕಳೆದ ಬಾರಿ ತಂದ 11 ಸಾವಿರ ಚಿತ್ರಗಳಿಗಿಂತ ಹೆಚ್ಚು ಚಿತ್ರಗಳನ್ನು ತರಬೇಕೆಂಬ ಬಯಕೆ ಪುಟಿಯುತ್ತಿದೆ. ಅಮೆರಿಕಾಕ್ಕೆ ಬರುವ ಹಟ ಹಿಡಿದಿದ್ದ ರಿಕಿ, ಶಾರದ ಇಬ್ಬರೂ ಈಗ ಬರುವುದಿಲ್ಲ. ನೀವು ಹೋಗಬಹುದು ಎಂದಿದ್ದಾರೆ. ಈಗ ನನ್ನ ಮುಂದಿರುವುದು ಟೈಮ್. ಈಗಷ್ಟೇ ಶುರುವಾಗಿರುವ ಸಮಯ ಚಾನೆಲ್ಲನ್ನು ಬಿಟ್ಟು ಬಹಳ ದಿನಗಳ ಕಾಲ ಅಮೆರಿಕಾದಲ್ಲಿರುವ ಮನಸ್ಸಿಲ್ಲ. ಹೋಗದೇ ಹೋದರೇ ಒಂದು ದೊಡ್ಡ ಮೊತ್ತದ ಅನುಭವ, ಅವಕಾಶ ಕಳೆದುಕೊಂಡ ಬೇಸರದ ಭಾವ ಮತ್ತಂದು ಕಡೆ. ಮನಸ್ಸು ಚಡಪಡಿಸುತ್ತಿದೆ. ಅಮ್ಮ ಇದ್ದಿದರೆ, ಹೀಗೆಂದು ಹೇಳಿದ್ದರೆ ಅಮೆರಿಕಾಗೆ ಹೋಗು ಎಂದೇ ಹೇಳುತ್ತಿದ್ದರೆನಿದಸುತ್ತದೆ. ಅಮ್ಮನಿಲ್ಲದ ಶೂನ್ಯವನ್ನು ರಿಕಿ ತುಂಬಿದ್ದಾನೆ. ಅವನ ಗ್ರಹಿಕೆ, ಅವನ ತಿಳಿವಳಿಕೆ ಅವನ ಪ್ರಗತಿಯನ್ನು ನೋಡುತ್ತಲೇ ಅಮ್ಮನನ್ನು ಮರೆಯುತ್ತಿದ್ದೇನೆ. ಕನಸಿಗೂ ಸಹ ಅಮ್ಮ ಬರುತ್ತಿಲ್ಲ ಎಂದರೆ ಇನ್ನೆಷ್ಟು ನಾನು ಕೆಲಸ, ರಿಕಿಯನ್ನು ಆಕ್ಯುಪೈ ಮಾಡಿಕೊಂಡಿದ್ದೇನೆಂದು ಅರಿವಾಗುತ್ತದೆ. ಇನ್ನು ಉಳಿದಿರುವುದು 15 ದಿನ. ಅಷ್ಟರಲ್ಲಿ ಮನಸ್ಸಿನ ಚಡಪಡಿಕೆಗೊಂದು ಉತ್ತರ ಕಂಡುಕೊಳ್ಳುತ್ತೇನೆ.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಆಗಷ್ಟ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಜುಲೈ   ಸೆಪ್ಟೆಂ »
  1234567
  891011121314
  15161718192021
  22232425262728
  293031  
 • ವಿಭಾಗಗಳು