ಇಂದು ಅಕ್ಕ 6 ನೇ ಕನ್ನಡ ಸಮ್ಮೇಳನ: 3, 4 ಹಾಗೂ 5

 ಇಂದು ಸೆಪ್ಟಂಬರ್ 4 ನೇ ತಾರೀಖು ನಮಗೆ. ಅಮೆರಿಕಾದಲ್ಲಿ ಇನ್ನೂ 3 ನೇ ದಿನದ ಬೆಳಗಿನ ಜಾವ ಈಗ. ಇಂದು ಸಂಜೆ ಅಂದರೆ ಅಲ್ಲಿ ಬೆಳಿಗ್ಗೆ 7. 30 ಕ್ಕೆ ಮುಖ್ಯಮಂತ್ರಿಗಳು ಅಕ್ಕ 6 ನೇ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಅಮೆರಿಕಾದ 50 ರಾಜ್ಯಗಳಲಿರುವ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಇಲ್ಲಿಗೆ ಆಗಮಿಸಲಿದ್ದಾರೆ. ತಮ್ಮಂತೆ ಬದುಕು ಕಟ್ಟಿಕೊಳ್ಳಲು ಸಾವಿರಾರು ಕಿ.ಮೀ ಬಂದಿರುವ ಸಾವಿರಾರು ಕನ್ನಡಿಗರನ್ನು ಕಂಡು ಸಂಭ್ರಮಿಸಲಿದ್ದಾರೆ. ನಿಜವಾಗಿಯೂ ಅದೊಂದು ದೊಡ್ಡ ಸಂಭ್ರಮ…..ಆಚರಣೆ….. ಅಮೆರಿಕಾದ 50 ರಾಜ್ಯಗಳಲ್ಲಿ ಚದುರಿ ಹೋಗಿರುವ ಕನ್ನಡಿಗರನ್ನು ನೋಡುವ ಸೌಭಾಗ್ಯ ಇಲ್ಲಿಂದ ಅಕ್ಕ ಸಮ್ಮೇಳನಕ್ಕೆ ತೆರಳಿರುವ ಸಾವಿರಾರು ಕನ್ನಡಿಗರಿಗೆ ಲಭಿಸಲಿದೆ. ನ್ಯೂಜಸರ್ಿಯ ಎಡಿಸನ್ನ ಬೀದಿಗಳಲ್ಲಿ ಕನ್ನಡಿಗರ ಅದ್ಭುತ ಮೆರವಣಿಗೆ ನಡೆಯುತ್ತದೆ. ಸಾವಿರಾರು ಕನ್ನಡಿಗರು ಈ ಕನ್ನಡದ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡದ ತೇರನ್ನೆಳೆಯಲಿದ್ದಾರೆ. ಅಮೆರಿಕಾದ ಸುಮಾರು 35 ಕ್ಕೂ ಹೆಚ್ಚು ಕೂಟದ ಸದಸ್ಯರು ತಮ್ಮ ತಮ್ಮ ಕೂಟಗಳ ಬ್ಯಾನರ್ಗಳನ್ನಿಡಿದು, ಕನ್ನಡ ನಾಡಿನ ಕಲೆ, ಸಾಹಿತ್ಯ, ಪರಂಪರೆ ಸಾರುವ ಧಿರಿಸುಗಳನ್ನು ಧರಿಸಿ, ವೇಷ ಭೂಷಣಗಳನ್ನು ತೊಟ್ಟು ಅಮೆರಿಕಾದ ನೆಲದಲ್ಲಿ ಕನ್ನಡದ ಕಹಳೆ ಊದಲಿದ್ದಾರೆ. ಆ ಮೂಲಕ ಕನ್ನಡ, ನಾಡು, ಭಾಷೆ, ಪರಂಪರೆಯನ್ನು ಅನ್ಯರ ನೆಲದಲ್ಲೂ ಊಳಿಸಿಕೊಂಡು ಬೆಳಸಿಕೊಂಡು ಹೋಗುವ ಪ್ರತಿಜ್ಞೆ ಮಾಡಲಿದ್ದಾರೆ. ಆನಂತರ ಪ್ರತಿಯೊಂದು ತಂಡದ ಸದಸ್ಯರು, ಮುಖ್ಯ ಸಭಾಂಗಣದ ವೇದಿಕೆಗೆ ಬಂದು ನಾಟಕ, ಹಾಡು, ಕುಣಿತ, ಪದಗಳನ್ನು ಹಾಡಿ, ಏಕಪಾತ್ರ ಅಭಿನಯಗಳನ್ನು ಮಾಡಿ, ಒಂದೊಂದು ರೀತಿಯ ಪ್ರದರ್ಶನಗಳನ್ನು ನೀಡಿ ಎಲ್ಲರನ್ನೂ ರಂಜಿಸಲಿದ್ದಾರೆ. ತಮ್ಮ ಇರುವಿಕೆಯನ್ನು ಜಗತ್ತಿಗೆ ಸಾರಲಿದ್ದಾರೆ. ಆನಂತರ ಉಳಿದ ಎರಡು ದಿನ ನೂರಾರು ಕಾರ್ಯಕ್ರಮಗಳು ಅಲ್ಲಿ ನಡೆಯುತ್ತವೆ. ಬ್ಯುಸಿನೆಸ್ ಫೋರಂನಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಚಚರ್ೆ, ಕಲೆ, ಸಂಸ್ಕೃತಿ, ಭಾಷೆಯನ್ನು ಉಳಿಸಿ ಬೆಳೆಸುವ, ಮನರಂಜನಾ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತವೆ. ಫ್ಯಾಷನ್ ಷೋ, ಸಿಂಗಲ್ಸ್ ಮೀಟ್, ಪುಸ್ತಕ ಬಿಡುಗಡೆ, ಸನ್ಮಾನ ಕಾರ್ಯಕ್ರಮಗಳು ಅಲ್ಲಿruttave.

Leave a comment

No comments yet.

Comments RSS TrackBack Identifier URI

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • Pages

 • Flickr Photos

  Rainy Day

  In the city

  Armadillo

  Silent Killers

  More Photos
 • September 2010
  S M T W T F S
  « Aug   Oct »
   1234
  567891011
  12131415161718
  19202122232425
  2627282930  
 • Categories