ಈ ಪೆಂಟಗನ್. ಅದೊಂದು ಗರ್ವ, ಪ್ರತಿಷ್ಠೆ, ನನಗ್ಯಾರು ಎದುರಿಲ್ಲವೆಂಬ ಅಮೆರಿಕಾ ಮದದ ಸಂಕೇತ

ಆಂಕರ್: ಸೆಪ್ಟೆಂಬರ್ ಬಂತೆಂದರೆ ನಮಗೆಲ್ಲಾ ತಟ್ಟನೆ ನೆನಪಾಗುವುದು ಅಮೆರಿಕಾ ವಲ್ರ್ಡ ಟ್ರೇಡ್ ಸೆಂಟರ್ ಮೇಲೆ ನಡೆದ ವಿಮಾನಗಳ ದಾಳಿ. ಸುಮಾರು ನಾಲ್ಕು ಭಯೋತ್ಪಾದಕರ ತಂಡಗಳು ನಾಲ್ಕು ವಿಮಾನಗಳನ್ನು ಅಪಹರಿಸಿ ಅಮೆರಿಕಾದ ಪ್ರತಿಷ್ಠೆಯ ಸಂಕೇತಗಳಾಗಿದ್ದ ವಲ್ರ್ಟ ಟ್ರೇಡ್ ಸೆಂಟರ್ ಅವಳಿ ಕೇಂದ್ರಗಳೂ ಹಾಗೂ ಅಮೆರಿಕಾದ ಶಕ್ತಿ ಕೇಂದ್ರ ಎಂದೇ ಕರೆಯಲಾಗುವ ರಕ್ಷಣಾ ಇಲಾಖೆಯ ಪೆಂಟಗನ್ ಕಟ್ಟಡಕ್ಕೆ ಡಿಕ್ಕಿ ಹೊಡೆಸಿದ್ದರು. ಮತ್ತೊಂದು ವಿಮಾನ ಪೆನ್ಸಿಲ್ವೆನಿಯಾದಲ್ಲಿ ಧರೆಗುರುಳಿ ಬಿದ್ದಿತ್ತು. ಈ ವಿಧ್ವಂಸಕ ಕೃತ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಪೆಂಟಗನ್ ಒಂದರಲ್ಲೇ ಒಟ್ಟು 184 ಮಂದಿ ಅಸುನೀಗಿದ್ದರು. ನಮ್ಮ ಪ್ರತಿನಿಧಿ ಎಂ.ಎನ್. ಚಂದ್ರೇಗೌಡ ಇತ್ತೀಚೆಗೆ ಪೆಂಟಗನ್ ಕಟ್ಟಡಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಮೃತಪಟ್ಟರ ನೆನಪಿಗಾಗಿ ನಿಮರ್ಿಸಲಾಗಿರುವ ಸ್ಮಾರಕವನ್ನು ಚಿತ್ರಿಸಿಕೊಂಡು ಬಂದಿದ್ದಾರೆ. ಬನ್ನಿ ಈ ವಿಶೇಷ ಕಾರ್ಯಕ್ರಮವನ್ನು ಈಗ ನೋಡೋಣ…………………

ಪೆಂಟಗನ್ ಎಂದರೆ ಅದು ವಿಶ್ವದ ಸೂಪರ್ ಫವರ್, ಬಲಾಢ್ಯ ಅಮೆರಿಕಾದ ಮಿಲಿಟರಿ ಶಕ್ತಿ ಸಂಕೇತ. ಅದೊಂದು ಯಾರಿಗೂ ಭೇದಿಸಲಾಗದಂಥಹ ಚಕ್ರವ್ಯೂಹದಂಥಹ ಕಟ್ಟಡ. ಐದು ಮುಖಗಳ ಈ ಕಟ್ಟದೊಳಗೆ ಹೊಕ್ಕರೆ ಹೇಗೆ ಹೊರಬಹುದೆಂಬುದು ಸಾಮಾನ್ಯರಿಗೆ ತಿಳಿಯುವುದಿಲ್ಲ. 1941 ರಲ್ಲಿ ಅಂದರೆ 2 ನೇ ಮಹಾಯುದ್ಧಕ್ಕೂ ಮುನ್ನ ಕಟ್ಟಲಾದ ಈ ಕಟ್ಟದದ ವಿಸ್ತಾರ ಬರೋಬರಿ ಸುಮಾರು 34 ಎಕರೆ. ವಿಶ್ವದ ಯಾವುದೇ ದೇಶದಲ್ಲಿ ಮಿಲಿಟರಿ ಇಲಾಖೆಯ ಕಟ್ಟಡವೊಂದು ಇಷ್ಟು ದೊಡ್ಡದಾಗಿಲ್ಲ ಎಂದರೆ, ಈ ಕಟ್ಟಡದ ಅಗಾಧತೆ ಅಂದರೆ ಉದ್ದ ಅಗಲ ಗಾತ್ರವನ್ನು ಅರಿಯಬಹುದು. ಭೂಮಿಯ ಒಳಗೆ 2 ಮಹಡಿಗಳು, ಭೂಮಿಯ ಹೊರಗೆ 5 ಮಹಡಿಗಳಿರುವ ಈ ಕಟ್ಟಡದಲ್ಲಿ ಅಮೆರಿಕಾ ಮಾಡಿದ ಎಲ್ಲಾ ಯುದ್ಧಗಳ ರಹಸ್ಯ ದಾಖಲೆಗಳಿವೆ. ಮೊದಲ ಮಹಾಯುದ್ಧ, ಎರಡನೇ ಮಹಾಯುದ್ಧ, ಜತೆಗೆ 1967 ರ ವಿಯಟ್ನಾಂ ಯುದ್ಧ, ಕುವೈತ್, ಇರಾಕ್, ಆಫ್ಘಾನಿಸ್ತಾನ ಹೀಗೆ ಎಲ್ಲಾ ಯುದ್ಧಗಳ ರಹಸ್ಯ ವಿವರಗಳು, ಅಂತಿಮ ತೀಮರ್ಾನ ತೆಗೆದುಕೊಂಡ ರಹಸ್ಯ ದಾಖಲೆಗಳೆಲ್ಲಾ ಇಲ್ಲಿವೆ. ಯಾವ ಯುದ್ಧದಲ್ಲಿ ಎಷ್ಟು ಮಂದಿ ಸತ್ತರು, ಅವರಲ್ಲಿ ಮಹಿಳೆಯರೆಷ್ಟು, ಪುರುಷರೆಷ್ಟು, ಅಸುಗೂಸುಗಳೆಷ್ಟು, ವೃದ್ಧರೆಷ್ಟು, ಬಳಸಿದ ಬಾಂಬ್ಗಳು, ಎಷ್ಟು ಟನ್ ಸಿಡಿ ಮದ್ದುಗಳ ಸಿಡಿಸಲಾಯಿತು ? ಹೀಗೆ ನಾನಾ ಬಗೆಯ ಯುದ್ಧದ ವಿವರಗಳು ಇಲ್ಲಿ ಲಭ್ಯ.

ಅಮೆರಿಕಾದ ಸೇನಾ ನೆಲೆಗಳು, ಆ ದೇಶ ಹೊಂದಿರುವ ಅಣು ಸಿಡಿ ತೆಲೆಗಳು, ಅವುಗಳ ಕಂಟ್ರೋಲ್ ಸಿಸ್ಟಮ್ಗಳು, ಪ್ರಪಂಚದ ವಿವಿಧ ದೇಶಗಳಲ್ಲಿರುವ ಅಮೆರಿಕಾ ಸೇನೆಗಳ ವಿವರಗಳು. ಅಮೆರಿಕಾ ಬೆಂಬಲಿಸುವ ನಾನಾ ದೇಶಗಳ ರಾಜಕೀಯ, ಬಂಡುಕೋರ ಬಣಗಳು, ಅಮೆರಿಕಾ ಶತ್ರು ದೇಶಗಳ ನಾಯಕರು, ಅಲ್ಲಿನ ಮಿಲಿಟರಿ ಅಧಿಕಾರಿಗಳ ರಹಸ್ಯ ಮಾಹಿತಿಗಳು ಪೆಂಟಗನ್ನಲ್ಲಿ ಬೆಚ್ಚಗೆ ಕುಳಿತಿವೆ. ಇರಾಕ್ ಮೇಲೆ ಅನಗತ್ಯ ಯುದ್ಧ ಸಾರಲು ಕಾರಣವಾದ ಅಂಶಗಳು, ಅದಕ್ಕೂ ಮುನ್ನ ಅಮೆರಿಕಾ ಗೃಹ ಕಾರ್ಯದಶರ್ಿ ರಮ್ಸ್ಫರ್ಡ ನಡೆಸಿದ ರಹಸ್ಯ ಸಭೆಯ ವಿವರಗಳು ಈ ಪೆಂಟಗನ್ನಲ್ಲೇ ಅವಿತು ಕುಳಿತಿವೆ. ವಿಶ್ವದ ಯಾವುದೇ ದೇಶ, ಅಮೆರಿಕಾದ ಮೇಲೆ ದಂಡೆತ್ತಿ ಬರಲು ಆಲೋಚಿಸುತ್ತಿದೆ ಎಂದುಕೊಳ್ಳುವಾಗಲೇ ಆ ಮಾಹಿತಿ ಪೆಂಟಗನ್ನಲ್ಲಿ ಇರುತ್ತದೆ ಎಂದರೆ ಸೂಪರ್ ಫವರ್ ಅಮೆರಿಕಾದ ಪೆಂಟಗನ್ ಕಟ್ಟಡದ ಶಕ್ತಿಯನ್ನು ನಾವು ಊಹಿಸಿಕೊಳ್ಳಬಹುದು. ಅಲ್ಲಿನ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವ ಸೇನೆಯ ಎಲ್ಲಾ ಹಿರಿಯ ಅಧಿಕಾರಿಗಳು ಸೇರಿದಂತೆ ಅಲ್ಲಿ ಕೆಲಸ ಮಾಡುವ 40 ಸಾವಿರ ಮಂದಿಯನ್ನು ಹೊರತುಪಡಿಸಿ, ಸುಮಾರು 180 ದೇಶಗಳಲ್ಲಿರುವ ಅಮೆರಿಕಾದ ಗುಪ್ತಚರ ಇಲಾಖೆ ಏಜೆಂಟ್ಗಳು, ಸ್ಪೈಗಳು, ವಾಯುಪಡೆ, ಸೇನಾಪಡೆ ಹಾಗೂ ನೌಕಾಪಡೆಯ ಎಲ್ಲ ವಿವರಗಳ ನೆಲೆ ಈ ಪೆಂಟಗನ್. ಅದೊಂದು ಗರ್ವ, ಪ್ರತಿಷ್ಠೆ, ನನಗ್ಯಾರು ಎದುರಿಲ್ಲವೆಂಬ ಅಮೆರಿಕಾದ ಅಖಿಲ ವೈಭವ ಮದದ ಸಂಕೇತ.

ಆದರೆ ಇಂಥಹ ಕಟ್ಟಡದ ಮೇಲೆ ದಾಳಿ ಮಾಡುವುದೆಂದರೆ ಸುಲಭದ ಮಾತೆ?

ಅದು ಸೆಪ್ಟಂಬರ್ 11 ರ ಬೆಳಿಗ್ಗೆ 8. 30. ವಜರ್ಿನಿಯಾ ರಾಜ್ಯದ ಅಲರ್ಿಂಗ್ಟನ್ ಜಿಲ್ಲೆಗೆ ಸೇರಿರುವ ಅಮೆರಿಕಾ ರಾಜಧಾನಿ ವಾಷಿಂಗ್ಟನ್ ಡಿಸಿಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಶ್ವಿಮ ಕರಾವಳಿಯ ಲಾಸ್ ಏಂಜಲೀಸ್ ನಗರಕ್ಕೆ ತೆರಳಲು ಅಮೆರಿಕಾ ಏರ್ಲೈನ್ಸ್ನ ಬೋಯಿಂಗ್ 77 ವಿಮಾನ ತೆರಳಲು ಸಿದ್ಧವಾಗಿತ್ತು. ಅದರಲ್ಲಿ ಒಟ್ಟು 64 ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ 6 ಮಂದಿ ಭಯೋತ್ಪಾದಕರು ಪ್ರಯಾಣಿಕರು ಮಾರುವೇಷದಲ್ಲಿದ್ದರು. 3 ರಿಂದ 71 ರ ಹರೆಯದ 20 ಕ್ಕೂ ಹೆಚ್ಚು ಮಹಿಳೆಯರು, ಮೂರು ವರ್ಷದ ಒಂದು ಮಗು ಅವರಲ್ಲಿ ಸೇರಿದ್ದರು. ಅವರೆಲ್ಲಾ ಲಾಸ್ ಏಂಜಲೀಸ್ ನಗರಕ್ಕೆ ತೆರಳುವ ಉತ್ಸಾಹದಲ್ಲಿದ್ದರು. ವಿಮಾನ ಟೇಕ್ ಆಫ್ ಆಗಿ ಪೆಂಟಗನ್ ಕಟ್ಟಡದ ಮೇಲೆ ಹಾರಿಯೇ ಗಗನಕ್ಕೆ ಚಿಮ್ಮಿ ಆಗಸದಲ್ಲಿ ಲೀನವಾಯಿತು. ವಿಮಾನದ ಸಿಬ್ಬಂದಿ ರೋಟೀನ್ ಬ್ರೀಪಿಂಗ್ ಮುಗಿಸಿ ಇನ್ನೇನು ಬ್ರೇಕ್ ಫಾಸ್ಟ್ ತರಲು ಕಾರ್ಯ ಮಗ್ನರಾಗರುವಾಗಲೇ ಪ್ರಯಾಣಿಕರ ಸೋಗಿನಲ್ಲಿದ್ದ 6 ಮಂದಿ ಭಯೋತ್ಪಾದಕರು ಎದ್ದು ನಿಂತು ವಿಮಾನದ ಸಿಬ್ಬಂದಿಯನ್ನು ಬೆದರಿಸಿದರು. ಕ್ಷಣಾರ್ಧದಲ್ಲಿ ಪೈಲೆಟ್ಗಳು ಕುಳಿತುಕೊಳ್ಳುವ ಕಾಕ್ಫಿಟ್ನ್ನು ಹೊಕ್ಕು ಬೋಯಿಂಗ್ನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಏನಾಗುತ್ತಿದೆ ಎಂದು ಪ್ರಮಾಣಿಕರು ಯೋಚಿಸುತ್ತಿರುವಾಗಲೇ 8. 50 ಕ್ಕೆ ವಿಮಾನ ಇದ್ದಕ್ಕಿದ್ದಂತೆಯೇ 360 ಡಿಗ್ರಿ ಟನರ್್ ತೆಗೆದುಕೊಂಡಿತು.
ವಾಷಿಂಗ್ಟನ್ ಡಿಸಿ ವಿಮಾನ ನಿಲ್ದಾಣದ ರೆಡಾರ್ ವಿಮಾನ 360 ಡಿಗ್ರಿ ಟನರ್್ ತೆಗೆದುಕೊಂಡಿದ್ದನ್ನು ಗಮನಿಸಿತು. ವಿಮಾನ ಮತ್ತೆ ವಾಷಿಂಗ್ಟನ್ಗೆ ಡಿಸಿಯತ್ತ ವಾಪಸ್ ಆಗುವುದನ್ನು ಸಿಬ್ಬಂದಿ ಗ್ರಹಿಸಿದರು. ಆದರೆ ವಿಮಾನ ನಿಲ್ದಾಣದ ಸಿಬ್ಬಂದಿ ಈ ಬಗ್ಗೆ ಪೈಲೆಟ್ಗಳನ್ನು ಪ್ರಶ್ನಿಸುವ ಮುನ್ನವೇ ಭಯೋತ್ಪಾದಕರು ವಿಮಾನದ ಎಲ್ಲಾ ಸಿಗ್ನಲ್ ಟ್ರಾನ್ಸ್ಫಾಂಡರ್ಗಳನ್ನು ಸ್ವಿಚ್ ಆಫ್ ಮಾಡಿದ್ದರು.

ಮುಂದೆ ನಡೆದಿದ್ದೇ ಪೆಂಟಗನ್ ಕಟ್ಟಡದ ಮೇಲಿನ ಪೈಶಾಚಿಕ ದಾಳಿ……………………..
ಅಸಲಿಗೆ ಭಯೋತ್ಪಾದಕರ ಗುರಿ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದ ಮೇಲೆ ದಾಳಿ ನಡೆಸುವುದಾಗಿತ್ತು. ಆದರೆ ಶ್ವೇತ ಭವನದ ಸುತ್ತ, ಅಮೆರಿಕಾ ಮಾನ್ಯುಮೆಂಟ್ ಕಟ್ಟಡ ಸೇರಿದಂತೆ ನೂರಾರು ಕಟ್ಟಡಗಳು ಆ ಕಟ್ಟಡವನ್ನು ಸುತ್ತುವರೆದಿರುವುದರಿಂದ ವಿಮಾನವನ್ನು ತೀರ ಕೆಳಮಟ್ಟದಲ್ಲಿ ಹಾರಿಸಿ ಶ್ವೇತಭವನಕ್ಕೆ ಡಿಕ್ಕಿಹೊಡೆಸುವುದು ಅವರಿಗೆ ಕಷ್ಟವೆನಿಸಿತ್ತು. ಆದ್ದರಿಂದಲೇ ಅವರು ಪೆಂಟಗನ್ ಕಟ್ಟಡವನ್ನು ಗುರಿಯಾಗಿಸಿಕೊಂಡಿದ್ದರು. ಪಶ್ಚಿಮ ಭಾಗದಲ್ಲಿ ಯಾವುದೇ ಕಟ್ಟಡಗಳು ಪೆಂಟಗನ್ನನ್ನು ಸುತ್ತುವರೆದಿಲ್ಲ. ಇದನ್ನು ಸದುಪಯೂಪಡಿಸಿಕೊಂಡ ಭಯೋತ್ಪಾದಕರು, ಮೊದಲೇ ಯೋಜಿಸಿದಂತೆ ಪೆಂಟಗನ್ನ ಪಶ್ಚಿಮ ಭಾಗದಲ್ಲಿ ವಿಮಾನವನ್ನು ತೀರ ಕೆಳಮಟ್ಟದಲ್ಲಿ ಹಾರಿಸಿ ಬೆಳಿಗ್ಗೆ 9. 37 ಕ್ಕೆ ಪೆಂಟಗನ್ಗೆ ಡಿಕ್ಕಿ ಹೊಡೆಸಿದರು. ವಿಮಾನ ತೀರ ಕೆಳಮಟ್ಟದಲ್ಲಿ ಹಾರುವಾಗ ಎದುರಿಗೆ ಸಿಕ್ಕ ಮರಗಿಡಗಳು, ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಪೆಂಟಗನ್ನ ಪಶ್ಚಿಮ ಭಾಗಕ್ಕೆ ಅಪ್ಪಳಿಸಿತ್ತು. ಲಾಸ್ ಏಜಂಲೀಸ್ಗೆ ಹಾರುವ ಕನಸುಹೊತ್ತು ಕುಳಿತಿದ್ದ ಸುಮಾರು 64 ಪ್ರಮಾಣಿಕರು ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಗಿದ್ದರು. ಅವರ ಜತೆ 6 ಮಂದಿ ಭಯೋತ್ಪಾದಕರು ಪ್ರಾಣ  ಬಿಟ್ಟಿದ್ದರು.
ಪೆಂಟಗನ್ನ ಕಟ್ಟಡದಲ್ಲಿ ಕುಳಿತು ಕೆಲಸಮಾಡುತ್ತಿದ್ದ 125 ಮಂದಿ, ವಿಮಾನ ಅಪ್ಪಳಿಸಿದ ತೀವ್ರತೆಯನ್ನು ಅರಿತುಕೊಳ್ಳುವಷ್ಟರಲ್ಲಿ ಸುಟ್ಟು ಕರಕಲಾಗಿದ್ದರು. ಇಡೀ ಕಟ್ಟಡ ಧಗಧಗನೆ ಹತ್ತಿ ಉರಿಯತೊಡಗಿತ್ತು. ವಿಮಾನದಲ್ಲಿದ್ದ ಸಾವಿರಾರು ಲೀಟರ್ ಬಿಳಿಯ ಪೆಟ್ರೋಲ್ ಕ್ಷಣಾರ್ಧದಲ್ಲಿ ಪೆಂಟಗನ್ನ ಪಶ್ಚಿಮ ಭಾಗವನ್ನು ಆವರಿಸಿಕೊಂಡಿತ್ತು. ಕೆಲವು ಮಂದಿ ಕುಳಿತಲ್ಲೇ ಸುಟ್ಟು ಕರಗಿಹೊದರು. ನೂರಾರು ಮಂದಿ ಗಾಯಗೊಂಡರು. ಸಾವಿರಾರು ಮಂದಿ ತಮ್ಮ ಸಹೊದ್ಯೋಗಿಗಳು ಸುಟ್ಟು ಕರಕಲಾಗುವುದನ್ನು ಕಂಡು ಕಣ್ಣೀರಿಟ್ಟರು. ಪೆಂಟಗನ್ನ ಸುತ್ತುವರೆದಿದ್ದ ಭದ್ರತಾ ಸಿಬ್ಬಂದಿಯಾಗಲಿ, ರೆಡಾರ್ ವ್ಯವಸ್ಥೆಯಾಗಲಿ, ಅಲ್ಲಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಏನೂ ಮಾಡದ ಸ್ಥಿತಿಗೆ ತಳ್ಳಲ್ಪಟ್ಟಿದ್ದರು.

ಹೀಗೆ ವಿಮಾನದ ಬಿಳಿ ಪೆಟ್ರೋಲ್ ಹಾಗೂ ಡಿಕ್ಕಿ ತೆಗೆದುಕೊಂಡ ಒಟ್ಟು ಆಹುತಿ ಬರೋಬರಿ 189 ಮಂದಿ. ಅವರಲ್ಲಿ 5 ಮಂದಿ ಭಯೋತ್ಪಾದಕರಿದ್ದರು. ಅಷ್ಟರಲ್ಲಿ ನ್ಯೂಯಾಕರ್್ನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕೇಂದ್ರಗಳೂ ಧರೆಗುರುಳಿದ್ದವು. ಅಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದರು. ಇತ್ತ ಆಪ್ಘಾನಿಸ್ತಾನದಲ್ಲಿ ಕುಳಿತಿದ್ದ ಆಲ್ಖೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಮಾತ್ರ ತಣ್ಣಗೇ ಒಳಗೇ ನಕ್ಕಿದ್ದ. ಭಯೋತ್ಪಾದಕರ ಬಂಕರ್ಗಳಲ್ಲಿ ಹಬ್ಬದ ವಾತಾವರಣವಿತ್ತು ಅಮೆರಿಕಾದಲ್ಲಿ ಶೋಕದ ವಾತಾವರಣವಿತ್ತು. ಇಡೀ ವಿಶ್ವವೇ ಮೊಮ್ಮಲ ಮರುಗಿತ್ತು…….

ಹೀಗೆ ತಮ್ಮದಲ್ಲದ ತಪ್ಪಿಗೆ ಬಲಿಯಾದವರ ನೆನಪಿಗಾಗಿಯೇ ಪೆಂಟಗನ್ನ ಪಶ್ಚಿಮ ಭಾಗದಲ್ಲಿ ಸ್ಮಾರಕ ನಿಮರ್ಿಸಲಾಗಿದೆ. ಆಗಿನ ಅಮೆರಿಕಾ ಅಧ್ಯಕ್ಷ ಜಾಜರ್್ ಡಬ್ಲೂ ಬುಷ್ ಈ ಸ್ಮಾರಕ ನಿಮರ್ಿಸಲು ಆದೇಶಿಸಿದ್ದರು. ಸುಮಾರು 7 ವರ್ಷಗಳ ಕಾಲ ಈ ಪೆಂಟಗನ್ ಸ್ಮಾರಕವನ್ನು ನಿಮರ್ಿಸಲಾಯಿತು. 2008, ಸೆಪ್ಟೆಂಬರ್ 11 ರಂದು ಇದನ್ನು ದೇಶಕ್ಕೆ ಸಮಪರ್ಿಸಲಾಯಿತು. ಸುಮಾರು 25 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊದಲ ಬಾರಿಗೆ ಸ್ಮಾರಕಗಳ ದರ್ಶನ ಪಡೆದರು. ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ಅಕಾಲಿಕ ಸಾವಿಗೀಡಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಲ್ಲಿಂದ ಅಮೆರಿಕಾ ಬದಲಾಯಿತು……….
 
ಪ್ರತಿದಿನ ಇಲ್ಲಿಗೆ ಕನಿಷ್ಠ 10 ಸಾವಿರ ಮಂದಿ ಭೇಟಿ ನೀಡುತ್ತಾರೆ. ತಮ್ಮನ್ನಗಲಿದ ಬಂಧು ಬಾಂಧವರಿಗಾಗಿ ಕಂಬನಿ ಮಿಡಿಯುತ್ತಾರೆ. ಅವರು ಆಸೆಪಡುತ್ತಿದ್ದ ಸಿಹಿ ತಿಂಡಿಗಳನ್ನು ತಂದು ಅಲ್ಲಿಡುತ್ತಾರೆ. ಅವರಿಗಿಷ್ಟವಾದ ಗಿಫ್ಟ್ಗಳು,ಹುಗುಚ್ಘಗಳನ್ನಿಟ್ಟು ಗೌರವ ಸಲ್ಲಿಸುತ್ತಾರೆ. ಸ್ಮಾರಕಗಳ ಮುಂದೆ ನಿಂತು ಧ್ಯಾನಿಸುತ್ತಾರೆ. ಪೆಂಟಗನ್ ಕಟ್ಟಡದೆಡೆಗೆ ನೋಡಿ ಭಾರದ ಉಸಿರುಬಿಡುತ್ತಾರೆ. ಕೆಲಸ ಮಾಡಲು ಕಚೇರಿಗೆ ಬಂದ, ಅಣ್ಣ, ತಮ್ಮಂದಿರು, ಅಕ್ಕ ತಗ್ಗಿಯರು ಬಂಧುಗಳು ಇನ್ನೆಂದೂ ಬಾರದ ಲೋಕಕ್ಕೆ ತೆರಳಿದ ಬಗ್ಗೆ ವಿಷಾದಿಸುತ್ತಾರೆ. ಅಲ್ಲೊಂದು ಮೌನದ ಅಣೆಕಟ್ಟೆ ಇರುತ್ತದೆ. ಅದರಲ್ಲಿ ದು:ಖ ತುಂಬಿರುತ್ತದೆ.
ನೂರಾರು ಮಿಲಿಟರಿ ಅಧಿಕಾರಿಗಳು, ಸತ್ತವರ ಬಂಧುಗಳು ಇಲ್ಲಿಗೆ ಭೇಟಿ ನೀಡಿ ತಮ್ಮನ್ನಗಲಿದ ಹತ್ತಿರದ ಸಂಬಂಧಿಗಳ ಜನ್ಮ ದಿನವನ್ನು ಆಚರಿಸುತ್ತಾರೆ. ಅವರಿಗಿಷ್ಟವಾಗುತ್ತಿದ್ದ ವಸ್ತುಗಳನ್ನು ಸ್ಮಾರಕದ ಮೇಲಿರಿಸುತ್ತಾರೆ. ಯಾಂತ್ರೀಕೃತ ಬದುಕು ಸಾಗಿಸುವ ಅಮೆರಿಕಾ ಜನರಲ್ಲೂ ಭಾವನೆಗಳಿವೆ ಎಂಬುದು ಅಲ್ಲಿ ಒಂದು ಕ್ಷಣ ನಿಂತರೆ ಅರ್ಥವಾಗುತ್ತದೆ. ಸ್ಮಾರಕದ ಹೊರಭಾಗದಲ್ಲಿ ಸಾವಿಗೀಡಾದವರ ಜನ್ಮ ದಿನಾಂಕವನ್ನು ನಮೂದಿಸಿ ದೊಡ್ಡ ಬೋರ್ಡ ನಿಮರ್ಿಸಲಾಗಿದೆ. ಅಲ್ಲಿಗೆ ಭೇಟಿ ನೀಡಿದವರು ಮೃತಪಟ್ಟವರ ಜನ್ಮದಿನಾಂಕವನ್ನು ನೋಡಿ, ಸ್ಮಾರಕಗಳನ್ನು ಗುರುತುಹಿಡಿಯಲು ವ್ಯವಸ್ಥೆ ಮಾಡಲಾಗಿದೆ. ಸ್ಮಾರಕದ ಮಂದೆ ನಿಂತು ಕತ್ತೆತ್ತಿದರೆ ಆಗಸದಲ್ಲಿ ಪಟೊನಿಕ್ ನದಿ ತೀರದಿಂದ ಆಗಸಕ್ಕೆ ಹಾರುವ ವಿಮಾನಗಳ ದಂಡೇ ಕಣ್ಣಿಗೆ ಬೀಳುತ್ತವೆ. 20 ಸೆಕೆಂಡ್ಗೊಂದು ವಿಮಾನ ಗಗನಕ್ಕೆ ಚಿಮ್ಮುತ್ತವೆ.

ಇಲ್ಲಿ ಸುಮಾರು 4 ತಾಸು ಕಳೆದು ನಾನು ಸಹ ಮರುಕ ಪಟ್ಟೆ. ಅಲ್ಲಿ ಬಂದವರಿಂದ ಮಾಹಿತಿ ಪಡೆದೆ. ಸ್ಮಾರಕದ ಬಳಿ ಬರೆದಿರುವ ಪ್ರಾಣ ಕಳೆದುಕೊಂಡವರ ಒಂದೊಂದೆ ಹೆಸರುಗಳನ್ನು ಓದುತ್ತಾ ಎಣಿಸುತ್ತಾ ಬಂದೆ. ಆ ಮೂರು ವರ್ಷದ ಮಗುವಿನ ಹೆಸರನ್ನು ಕಂಡು ವ್ಯಾಕುಲಗೊಂಡೆ. ಪೆಂಟಗನ್ನ ಒಳಗೆ ಕುಳಿತು ಕೆಲಸಮಾಡುತ್ತಾ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಅಲ್ಲಿ ನಿಮರ್ಿಸಿರುವ ಸ್ಮಾರಕಗಳ ಮುಖಗಳನ್ನು ಪೂರ್ವಕ್ಕೆ, ವಿಮಾನದಲ್ಲಿ ಪ್ರಯಾಣಿಸಿ ಮೃತಪಟ್ಟವರ ಸ್ಮಾರಕಗಳ ಮುಖಗಳನ್ನು ಪಶ್ಚಿಮಾಭಿಮುಖಗೊಳಿಸಲಾಗಿದೆ. ಅಲ್ಲಿ ಪ್ರತಿದಿನವೂ ಸ್ವಚ್ಘತಾ ಕಾರ್ಯ ನಡೆಯುತ್ತದೆ………..ಈಗ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರತಿ ಅರ್ಧ ತಾಸಿಗೊಮ್ಮೆ ಮಿಲಿಟರಿ ಹೆಲಿಕ್ಯಾಪ್ಟರ್ಗಳು ಅಲ್ಲಿ ಸುತ್ತುಹಾಕುತ್ತವೆ…………….

–M.N. Chandregowda

Samaya News,

Bangalore

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಸೆಪ್ಟೆಂಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಗಸ್ಟ್   ಆಕ್ಟೋ »
   1234
  567891011
  12131415161718
  19202122232425
  2627282930  
 • ವಿಭಾಗಗಳು