ಬೋರ್ ವೆಲ್ನಲ್ಲಿ ನೀರು ಕಂಡ ಕ್ಷಣ

ಬಹುಶ: ಮಲೆನಾಡಿನ ಜನರಿಗೆ ನೀರಿನ ಬವಣೆ ಏನೆಂದು ಗೊತ್ತಿರಲಿಕ್ಕಿಲ್ಲ. ಏಕೆಂದರೆ ಮಳೆ ಆಧಾರಿತ ಬೇಸಾಯ ಮಾಡುವ ಬಯಲು ಸೀಮೆ ಜನರಿಗೆ ನೀರಿನ ಮೌಲ್ಯ ಏನೆಂದು ಗೊತ್ತಿರುತ್ತದೆ. ಅವರಿಗೆ ತಮ್ಮದೇ ಜಮೀನಿನಲ್ಲಿ ತಾವೇ ನಿಂತು ಕೊರೆಸಿದ ಕೊಳವೆ ಬಾವಿಯಲ್ಲಿ ಒಮ್ಮೆಗೆ ನೀರು ಸಿಕ್ಕಿದರೆ ಎಂಥಹ ಖುಷಿಯಾಗುತ್ತದೆ ಗೊತ್ತಾ? ಹೀಗೆ ಪ್ರತಿದಿನವೂ ನೀರಿಗಾಗಿ ಕನಸು ಕಾಣುವ ಬಯಲು ಸೀಮೆ ಅಸಂಖ್ಯಾತ ರೈತರೆಷ್ಟೋ……

ನನಗೆ ಗೊತ್ತಿರುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕುಲುವನಹಳ್ಳಿಯ ಸೂಲಕುಂಟೆಯಲ್ಲಿ ಗಂಗಯ್ಯ ಹಾಗೂ ವೆಂಕಟಪ್ಪ ಎನ್ನುವ ಇಬ್ಬರು ಅಣ್ಣ ತಮ್ಮಂದಿರಿದ್ದರು. ಅವರಿಬ್ಬರಿಗೂ ಅವರ ತಂದೆ ಒಂದು ದೊಡ್ಡ ಬಾವಿ ಕೊರೆಸಿದ್ದರು. ಅವರು ವಿಭಾಗ ಮಾಡಿಕೊಂಡಾಗ ಕುಲುವನಹಳ್ಳಿ ಕೆರೆಯಲ್ಲಿ ನೀರು ತುಂಬಿ ತುಳುಕುತ್ತಿತ್ತು. ಅವರ ಬಾವಿಯಲ್ಲಿ ಯಥೇಚ್ಛ ನೀರಿತ್ತು. ಆದರೆ ವಿಭಾಗದಲ್ಲಿ ಬಾವಿ ದೊಡ್ಡ ಅಣ್ಣನ ಭಾಗಕ್ಕೆ ಬಂತು. ಬಳಿಕ ದಾಯಾದಿ ಮತ್ಸರದಿಂದ ತಮ್ಮನಿಗೆ ಅಣ್ಣ ನೀರು ಕೊಡಲಿಲ್ಲ.  ಇದರಿಂದ ಬೇಸರಗೊಂಡ ತಮ್ಮ ಇದ್ದಬದ್ದ ಹಣವ್ನನೆಲ್ಲಾ ಹೊಂದಿಸಿ ಒಂದು ಬೋರ್ ಕೊರೆಸಿದ ನೀರು ಬಂತು. ಇದರಿಂದ ಬೇಸಿಗೆಯಲ್ಲಿ ಬಾವಿ ನೀರು ಖಾಲಿಯಾತ್ತು. ಅಣ್ಣನ ಕಣ್ಣು ಕೆಂಪಗಾದವು. ತಮ್ಮನ ಬೋರ್ನ ಪ್ರಭಾವದಿಂದ ತಮ್ಮ ಬಾವಿ ಬರಿದಾಯಿತಲ್ಲ ಎಂದು ಆತನೂ ಒಂದು ಬೊರ್ ಕೊರೆಸಿದ. ಅದು ತಮ್ಮನ ಬೋರ್ಗಿಂತ ಆಳವಾಗಿತ್ತು. ಬೇಸಿಗೆಯಲ್ಲಿ ತಮ್ಮನ ಬೋರ್ವೆಲ್ ನೀರಿಲ್ಲದೆ ಬೋರಲು ಬಿತ್ತು. ಇದರಿಂದ ಸುಮ್ಮನಿರದ ತಮ್ಮ ಮತ್ತೊಂದು ಬೋರ್ವೆಲ್ ಕೊರೆಸಿದ ಅದು ಅವರಣ್ಣನಿಗಿಂತ ಆಳವಾಗಿತ್ತು……
ಹೀಗೆ ಜಟಾಪಟಿ ಮೇಲೆ ಅಣ್ಣ ತಮ್ಮಂದಿರು ಒಂದೆರಡು ವರ್ಷಗಳಲ್ಲಿ ಕೊರೆಸಿದ ಬೋರ್ಗಳ ಸಂಖ್ಯೆ ಸುಮಾರು 20. ಇದಕ್ಕಾಗಿ ತಮ್ಮ ಜಮೀನೆಲ್ಲವನ್ನೂ ಇವರಿಬ್ಬರೂ ನೆಲಮಂಗಲದ ಸೇಠ್ ಒಬ್ಬರ ಬಳಿ ಅಡವಿಟ್ಟಿದ್ದರು. ಕಡೆಗೆ ಪಾಪರ್ ಆದರು. ನೀರು ಬರುವುದು ಬೇಸಿಗೆಯಲ್ಲಿ ನಿಂತೇ ಹೋಗಿತ್ತು…..
ಇದು ಸಣ್ಣ ಉದಾಹರಣೆ. ಬಯಲು ಸೀಮೆಯಲ್ಲಿ ಬೋರ್ವೆಲ್ ಕೊರೆಸಿದಾಗ ನೀರು ಸಿಕ್ಕಿತೆಂದರೆ ಆತ ಬದುಕಿದ ಎಂದೇ ಅರ್ಥ. ಅಂಥಹ ಪೈಪೋಟಿ ಇರುತ್ತದೆ ಅಲ್ಲಿ. ಬೊರು ಕೊರೆಸುವ ಮುನ್ನ ಭೂವಿಜ್ಞಾನಿಗಳು ಸಂಪಕರ್ಿಸುತ್ತಾರೆ, ಶಾಸ್ತ್ರ ಕೇಳುತ್ತಾರೆ, ದೇವರಲ್ಲಿ ಹರಕೆ ಹೊರುತ್ತಾರೆ. ಪೂಜೆ ಮಾಡಿಸುತ್ತಾರೆ…….ಹೀಗೆ ಮನೆಮಕ್ಕಳೆಲ್ಲಾ ವಸುಂಧರೆಯ ಒಡಲಿನ ನೀರಿಗಾಗಿ ತರಾವರಿ ಪ್ರಾರ್ಥನೆ ಮಾಡುತ್ತಾರೆ. ಸಾಲ ಸೋಲ ಮಾಡಿ ಬೋರು ಕೊರೆಸುತ್ತಾರೆ. ನೀರು ಸಿಕ್ಕರೆ ಅವರ ಅದೃಷ್ಟ. ಇಲ್ಲವಾದರೆ ನೀರೂ ಇಲ್ಲಾ ಜತೆಗೆ ಸಾಲದ  ಭಾರ. ಬದುಕು ಮೂರಾಬಟ್ಟೆಯಾಗುತ್ತದೆ. ಲಯ ತಪ್ಪುತ್ತದೆ. ಮಧ್ಯಮ ವರ್ಗದ ಜನರೆನೇದರೂ ಈ ಬೋರ್ವೆಲ್ ಕೊರೆಸಲು ಹೋಗಿ ವಿಫಲರಾದರೆ ಮತ್ತೆ ಎತ್ತರಿಸಿಕೊಳ್ಳಲು ವರ್ಷಗಳೇ ಬೇಕಾಗುತ್ತವೆ. ಆದ್ದರಿಂದಲೇ ಬಯಲು ಸೀಮೆ ಜನರಿಗೆ ನೀರೆಂದರೆ ಪಂಚಪ್ರಾಣ…….
ನಾನು ಕೂಡ ನಿನ್ನೆ ರಾತ್ರಿ ಒಂದು ಬೋರ್ವೆಲ್ ಕೊರೆಸಿದೆ. ಬೋರ್ವೆಲ್ ಕೊರೆಯಲು ಲಾರಿ ಬಂತು ಎಂದಾಕ್ಷಣ ಒಂದು ರೀತಿಯ ರೋಮಾಂಚನವಾಗಿತ್ತು. ನಿನ್ನೆ ರಾತ್ರಿ ಆಫೀಸ್ ಮುಗಿಸಿ ಬೆಂಗಳೂರು ಬಿಟ್ಟಾಗ ರಾತ್ರಿ 9 ಗಂಟೆ. ತುಮಕೂರು ತಲುಪಿದಾಗ 10. 30. ಸರಿಯಾಗಿ 11.50 ಕ್ಕೆ ನೀರು ಬಂತೆಂದು ನನ್ನ ಸ್ನೇಹಿತರಾದ ಬಿಜು ಪೋನಾಯಿಸಿದಾಗ ಪಕ್ಕದ ಊರಿನ ಅಕ್ಕನ ಮನೆಯಲ್ಲಿ ಊಟ ಮಾಡುತ್ತಿದ್ದ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ಅಲ್ಲಿಂದ ಓಡೋಡಿ ಬಂದೆ. ಉಕ್ಕಿಬರುತ್ತಿದ್ದ ನೀರನ್ನು ನೋಡಿ ಖುಷಿಪಟ್ಟೆ. ಈ ನೀರು ಕೃಷಿಕರಿಗೆ ಸಿಕ್ಕಿದ್ದರೆ ಅದೆಷ್ಟು ಪರಮಾನಂದ ಪಡುತ್ತಿದ್ದರೋ ಎಂದು ಕಲ್ಪಿಸಿಕೊಂಡೆ. ನಾನೂ ಕೃಷಿಕನಾದರೂ ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ ಈ ಬೋರ್ವೆಲ್ ಕೊರೆಸಿದ್ದೆ. ಬೆಳಗಿನ ಜಾವ 3.30 ರವರೆಗೂ ಅಲ್ಲಿದ್ದು ಬೆಳಿಗ್ಗೆ 7 ಕ್ಕೆ ಬೆಂಗಳೂರಿಗೆ ಬಂದೆ……
ನಾನು ಕೊರೆಸಿದ ಮೊದಲ ಬೋರ್ವೆಲ್ ಫೇಲಾಗಿತ್ತು, ನೀರು ಬಂದಿರಲಿಲ್ಲ. ಆಗ ಆಗಿದ್ದ ನಿರಾಸೆ ಅಷ್ಟಿಷ್ಟಲ್ಲ. ಆನಂತರ ಕೊರೆಸಿದ ಬೋರ್ವೆಲ್ಗಳೆಲ್ಲಾ ಸಕ್ಸಸ್ ಆಗಿದ್ದವು. ಆದರೆ ನಿನ್ನೆಯದು ಸ್ಪೆಷಲ್. ಏಕೆಂದರೆ ಅದು ಇಂಡಸ್ತ್ರಿ ಶುರು ಮಾಡಲು ಕೊರೆಸಿದ ಮೊದಲ ಬೋರ್ವೆಲ್. ಅದು ಸೆಕ್ಸ್ಸ್ ಆಗುವುದು ನನಗೆ ಬೇಕಾಗಿತ್ತು. ಆದ್ದರಿಂದಲೇ ಈ ಬೊರ್ವೆಲ್ನ ಸೆಕ್ಸಸ್ನ್ನು ಸಕತ್ ಎಂಜಾಯ್ ಮಾಡಿದೆ. ಅಲ್ಲಿದ್ದವರಿಗೆಲ್ಲಾ ಟಿಪ್ಸ್ ಹಣ ಹಂಚಿದೆ……..ಸಿಹಿ ತಿನಿಸಿದೆ. ಖುಷಿ ಖುಷಿಯಾಯಿತು…….

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಸೆಪ್ಟೆಂಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಗಸ್ಟ್   ಆಕ್ಟೋ »
   1234
  567891011
  12131415161718
  19202122232425
  2627282930  
 • ವಿಭಾಗಗಳು