ಶಾಂತಿಭೂಷಣ್ affidavit ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿde

ರಿಪೋರ್ಟರ್; ಎಂ.ಎನ್. ಚಂದ್ರೇಗೌಡ ಸ್ಲಗ್: ಸುಪ್ರೀಂಕೋರ್ಟ ಜಸ್ಟೀಸ್ ಡೇಟ್: 17- 09- 2010 ಬೆಂಗಳೂರು ಆಂಕರ್: ಸುಪ್ರೀಂಕೋಟರ್್ನ ಎಂಟು ಮಂದಿ ಮಾಜಿ ಮುಖ್ಯನ್ಯಾಯಮೂತರ್ಿಗಳು ತಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆಂದು ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿಭೂಷಣ್ ಸುಪ್ರೀಂಕೋರ್ಟಗೆ ಪ್ರಮಾಣ ಪತ್ರ ಸಲ್ಲಿಸಿ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದಾರೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಚಾರವನ್ನು ಹೋಗಲಾಡಿಸಲು ಕೇಂದ್ರ ಸಕರ್ಾರ ಕ್ರಮಕೈಗೊಳ್ಳಲೇ ಬೇಕಾದ ಅನಿವಾರ್ಯತೆಯನ್ನು ಶಾಂತಿಭೂಷಣ್ ಸೃಷ್ಟಿಸಿದ್ದಾರೆ. ಫ್ಯಾಕೇಜ್ ಫಾಲೋಸ್………. ವಾಯ್ಸ್ ಓವರ್ 1: ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿಭೂಷಣ್, ಸುಪ್ರೀಂಕೋರ್ಟನ ನಿವೃತ್ತ ಮುಖ್ಯನ್ಯಾಯಮೂತರ್ಿಗಳು ತಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆಂದು ಸುಪ್ರೀಂಕೋಟರ್್ಗೆ ಪ್ರಮಾಣ ಸಲ್ಲಿಸುವ ಮೂಲಕ ದೊಡ್ಡ ರೀತಿಯ ಬಾಂಬನ್ನೇ ಸಿಡಿಸಿದ್ದಾರೆ. ಶಾಂತಿಭೂಷಣ್ರ ಪ್ರಮಾಣ ಪತ್ರ ಯಾವ ಪರಿಣಾಮ ಬೀರಿದೆ ಎಂದರೆ ಇಂದು ಕೇಂದ್ರದ ಕಾನೂನು ಮಂತ್ರಿಯಾಗಲಿ, ರಾಜ್ಯಗಳ ಕಾನೂನು ಮಂತ್ರಿಗಳಾಗಲಿ ಈ ಬಗ್ಗೆ ಪ್ರತಿಕ್ರಿಯಿಸಲು ತಡಬಡಿಸುತ್ತಿದ್ದಾರೆ. ಆರೋಪಕ್ಕೆ ತುತ್ತಾಗಿರುವ ಸುಪ್ರೀಂಕೋರ್ಟನ ಯಾವುದೇ ನಿವೃತ್ತ ನ್ಯಾಯಮೂತರ್ಿಗಳು ಈ ಬಗ್ಗೆ ತುಟಿ ಪಿಟಿಕ್ ಎಂದಿಲ್ಲ. ಶಾಂತಿಭೂಷಣರ ಪ್ರಮಾಣಪತ್ರ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಗೆ ಒಂದು ದೊಡ್ಡ ಹೊಡೆತವನ್ನೇ ನೀಡಿದೆ. ಜತೆಗೆ ನ್ಯಾಯಾಂಗ ವ್ಯವಸ್ಥೆಯ ಘನತೆಗೆ ಧಕ್ಕೆ ತಂದಿದೆ ಎಂದು ಹೇಳಲಾಗುತ್ತಿದೆ. ಬೈಟ್: ಸಂತೋಷ್ ಹೆಗ್ಡೆ, ಸುಪ್ರೀಂಕೋರ್ಟನ ನಿವೃತ್ತ ನ್ಯಾಮಯೂತರ್ಿ ಹಾಗೂ ಲೋಕಾಯುಕ್ತರು ಟಿಸಿಆರ್: ವಾಯ್ಸ್ ಓವರ್ 2: ಹಾಗೆ ನೋಡಿದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇವಲ ಶೇ. 80 ಮಂದಿ ನ್ಯಾಯಾಧೀಶರುಗಳು ಮಾತ್ರ ಪ್ರಾಮಾಣಿಕವಾಗಿ ಕೆಲಸಮಾಡುತ್ತಿದ್ದಾರೆ. ಉಳಿದವರು ನಂಬಿಕೆಗೆ ಅರ್ಹರಂತೆ ಕೆಲಸ ಮಾಡುತ್ತಿಲ್ಲ ಎಂಬ ಮಾತನ್ನು ಈ ಹಿಂದಿನ ಸುಪ್ರೀಂಕೋರ್ಟನ ಮುಖ್ಯ ನ್ಯಾಯಮೂತರ್ಿ ಭರೂಚ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲೇ ಹೇಳಿದ್ದರು. ದೇಶದ ಪ್ರಸಿದ್ಧ ವಕೀಲ ಈ ಹಿಂದಿನ ಕಾನೂನು ಮಂತ್ರಿ ರಾಮ್ಜೇಠ್ಮಲಾನಿ ಸುಪ್ರೀಂಕೋರ್ಟನ ನಿವೃತ್ತ ಮುಖ್ಯ ನ್ಯಾಯಮೂತರ್ಿ ಎ.ಎಸ್. ಆನಂದ್, ತಮ್ಮ ಜನ್ಮ ದಿನಾಂಕವನ್ನು ತಿರುಚಿದ್ದಾರೆಂಬ ನೇರ ಆರೋಪ ಮಾಡಿದ್ದರು. ಕನರ್ಾಟಕದ ಮುಖ್ಯನ್ಯಾಯಮೂತರ್ಿಗಳಾಗಿದ್ದ ಪಿ.ಡಿ. ದಿನಕರನ್ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದವು. ಈ ಹಿಂದಿನ ಸುಪ್ರೀಂಕೋರ್ಟ ನ್ಯಾಮಮೂತರ್ಿ ವಿ. ರಾಮಸ್ವಾಮಿ ವಿರುದ್ಧ ಗುರುತರ ದೂರುಗಳಿದ್ದವು. ಸುಪ್ರೀಂಕೋರ್ಟ ಮುಖ್ಯ ನ್ಯಾಮಮೂತರ್ಿಗಳಾಗಿದ್ದ ಸಬರ್ವಾಲ್ ವಿರುದ್ಧವೂ ದೆಹಲಿಯಲ್ಲಿ ನಡೆದ ವಾಣಿಜ್ಯ ಕಟ್ಟಡಗಳ ನೆಲಸಮ ಕಾಯರ್ಾಚರಣೆಗೆ ಸಂಬಂಧಿಸಿದಂತೆ ದೂರುಗಳಿದ್ದವು. ಹೀಗೆ ಹಲವಾರು ಹಿರಿಯ ನ್ಯಾಯಾಧೀಶರುಗಳ ವಿರುದ್ಧ ಗುರುತರ ಆರೋಪಗಳಿದ್ದರೂ ಇದುವರೆಗೆ ಯಾವುದೇ ಸುಪ್ರೀಂಕೋರ್ಟನ ನ್ಯಾಯಾಧೀಶರನ್ನು ನ್ಯಾಯಾಂಗ ಸೇವೆಯಿಂದ ಹೊರಹಾಕಿದ ಉದಾಹರಣೆಗಲಿಲ್ಲ. ಏಕೆಂದರೆ ಸುಪ್ರೀಂಕೋರ್ಟನ ನ್ಯಾಯಧೀಶರುಗಳನ್ನು ಹೊರಹಾಕಲು ಸಂಸತ್ತಿನ ಪೂರ್ಣ ಪ್ರಮಾಣದ ಬೆಂಬಲ ಬೇಕಾಗಿರುವುದರಿಂದ ಇದು ಕಷ್ಟ ಸಾಧ್ಯದ ಕೆಲಸ. ನ್ಯಾಯಾಧೀಶರುಗಳ ವಿರುದ್ಧ ಆರೋಪಗಳು ಕೇಳಿ ಬಂದಾಗ ಅವರ ವಿರುದ್ಧ ತನಿಖೆ ನಡೆಸಲು ಅಗತ್ಯವಿರುವ ಸಮಕ್ಷ ಪ್ರಾಧಿಕಾರಗಳು ಈಗ ಅಸ್ತಿತ್ವದಲ್ಲಿ ಇಲ್ಲದಿರುವುದು ಇದಕ್ಕೆ ಮತ್ತೊಂದು ಕಾರಣ. ಇಂಥಹ ಪರಿಸ್ಥಿತಿಯಲ್ಲಿ ಶಾಂತಿಭೂಷಣ್ ನ್ಯಾಯಾಧೀಶರುಗಳ ವಿರುದ್ಧ ಅನುಮಾನ ಹುಟ್ಟಿಸುವಂಥಹ ಆರೋಪಗಳನ್ನು ಮಾಡಿದ್ದಾರೆ. ನ್ಯಾಯಾಂಗ ನಿಂದನೆ ಆಪಾದನೆಯಡಿ ಜೈಲಿಗೆ ಹೋಗಲು ಸಿದ್ಧ ಎಂದು ಘೋಷಿಸಿದ್ದಾರೆ. ಆದರೆ ಸುಪ್ರೀಂಕೋಟರ್್ ಶಾಂತಿಭೂಷಣರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವುದು ಅನುಮಾನ. ಏಕೆಂದರೆ ಈ ಹಿಂದೆ ರಾಮ್ಜೇಠ್ಮಲಾನಿ, ನ್ಯಾಯಮೂತರ್ಿ ಎ.ಎಸ್. ಆನಂದ್ ವಿರುದ್ಧ ಪುಸ್ತಕ ಬರೆದಾಗಲೂ ಸುಪ್ರೀಂಕೋರ್ಟ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿರಲಿಲ್ಲ. ಶಾಂತಿಭೂಷಣ್ ಈಗ ಆಪಾದಿಸಿರುವ ಹಲವಾರು ನ್ಯಾಯಾಧೀಶರುಗಳ ಮುಂದೆ ಹತ್ತಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯವಾದಿಗಳಾಗಿ ಹಾಜರಾಗಿದ್ದಾರೆ. ಕೇಂದ್ರದ ಕಾನೂನು ಮಂತ್ರಿಯಾಗಿದ್ದ ಶಾಂತಿಭೂಷಣರನ್ನು ಜೈಲಿಗೆ ಕಳುಹಿಸಿ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಪರಿಶೀಲನೆಗೆ ಒಳಪಡಿಸಿಕೊಳ್ಳಲು ಸುಪ್ರೀಂಕೋರ್ಟ ಮುಂದಾಗುವುದು ಅನುಮಾನ. ಇದೇನೆ ಇದ್ದರೂ ಕೇಂದ್ರ ಸಕರ್ಾರ ಮಾತ್ರ ಶಾಂತಿಭೂಷಣರ ಆಪಾದನೆಗಳನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಅಗತ್ಯ ಕಾನೂನು ರಚಿಸುವ ಅನಿವಾರ್ಯತೆಗೆ ಈಗ ತಳ್ಳಲ್ಪಟ್ಟಿದೆ ಎಂದೇ ಹೇಳಬಹುದಾಗಿದೆ. — ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಸೆಪ್ಟೆಂಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಗಸ್ಟ್   ಆಕ್ಟೋ »
   1234
  567891011
  12131415161718
  19202122232425
  2627282930  
 • ವಿಭಾಗಗಳು