ಸಿದ್ದರಾಮಯ್ಯನವರ ವರ್ತನೆಗೆ ಕಾಂಗ್ರೆಸ್ ಪಕ್ಷದಲ್ಲಿಯೇ ತೀವ್ರ ಖಂಡನೆ

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ ಸ್ಲಗ್; ಸಿದ್ದರಾಮಯ್ಯ ಡೇಟ್: 18- 09- 2010 ಬೆಂಗಳೂರು ಆಂಕರ್: ಕಾಂಗ್ರೆಸ್ ಹೈಕಮಾಂಡನ್ನು ಸಂಪಕರ್ಿಸದೇ ವಿಧಾನಸಭೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯನವರ ವರ್ತನೆಗೆ ಕಾಂಗ್ರೆಸ್ ಪಕ್ಷದಲ್ಲಿಯೇ ತೀವ್ರ ಖಂಡನೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಉಪ ಚುನಾವಣೆಯಲ್ಲಿ ಪಕ್ಷಕ್ಕಾದ ಸೋಲನ್ನು ಧೈರ್ಯವಾಗಿ ಎದುರಿಸದೇ ದಿಢೀರನೆ ರಾಜೀನಾಮೆ ಪ್ರಕಟಿಸುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆಂಬ ಅಭಿಪ್ರಾಯವನ್ನು ಪಕ್ಷದ ಹಿರಿಯ ನಾಯಕರು ಕಾಂಗ್ರೆಸ್ ಹೈಕಮಾಂಡ್ಗೆ ರವಾನಿಸಿದ್ದಾರೆಂದು ಹೇಳಲಾಗಿದೆ. ಫ್ಯಾಕೇಜ್ ಫಾಲೋಸ್…………. ವಾಯ್ಸ್ ಓವರ್ 1: ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯನವರನ್ನು ಸಂಪಕರ್ಿಸಿ ಜೆಡಿಎಸ್ಗೆ ಆಹ್ವಾನಿಸುವ ಮಾತಕತೆ ನಡೆಸಿದ್ದಾರೆಂಬ ದಟ್ಟವದಂತಿ ರಾಜಕೀಯ ವಲಯದಲ್ಲಿ ಹಬ್ಬಿದೆ. ಇದರ ಬೆನ್ನಹಿಂದೆಯೇ ಸಿದ್ದರಾಮಯ್ಯನವರ ರಾಜೀನಾಮೆ ನಡೆಯ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿಯೇ ತೀವ್ರ ಖಂಡನೆ ವ್ಯಕ್ತವಾಗಿದೆ ಎಂದು ಆ ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ರಾಜಕೀಯವಾಗಿ ಯಾವುದೇ ಪರಿಣಾಮ ಬೀರದ ಉಪ ಚುನಾವಣೆಯ ಫಲಿತಾಂಶ ಹೊರ ಬಿದ್ದ ನಂತರ ಹೈಕಮಾಂಡ್ ಜತೆ ಸಮಾಲೋಚಿಸದೇ ದಿಢೀರನೆ ಸಿದ್ದರಾಮಯ್ಯ, ರಾಜೀನಾಮೆ ಪ್ರಕಟಿಸಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ. ಜತೆಗೆ ಸೋಲಿಗೆ ಕಾರಣಗಳನ್ನು ಹುಡುಕದೇ ಸೋಲೊಪ್ಪಿಕೊಳ್ಳುವ ಮೂಲಕ ಪಕ್ಷದ ಕಾರ್ಯಕರ್ತರ ನೈತಿಕ ಬಲ ಕುಂದುವಂತೆ ಮಾಡಿದ್ದಾರೆಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಹೈಕಮಾಂಡ್ಗೆ ಮೌಖಿಕ ದೂರು ನೀಡಿದ್ದಾರೆಂದು ಹೇಳಲಾಗಿದೆ. ತಮ್ಮ ರಾಜೀನಾಮೆ ವಿಷಯದ ಬಗ್ಗೆ ಹೈಕಮಾಂಡ್ ಜತೆ ಚಚರ್ಿಸಲು ಇದೇ 20 ರಂದು ಸಿದ್ದರಾಮಯ್ಯ ದೆಹಲಿಗೆ ತೆರಳಿದಾಗ, ಈ ಬಗ್ಗೆ ಹೈಕಮಾಂಡ್ ಸಿದ್ದರಾಮಯ್ಯನವರಿಂದ ವಿವರಣೆ ಪಡೆಯಬೇಕೆಂದು ಕನರ್ಾಟಕವನ್ನು ಪ್ರತಿನಿಧಿಸುವ ದೆಹಲಿ ಮಟ್ಟದ ಹಿರಿಯ ನಾಯಕರು ಪಟ್ಟುಹಿಡಿದಿದ್ದಾರೆಂದು ಮೂಲಗಳು ತಿಳಿಸಿವೆ. ಈ ನಡುವೆ ಪ್ರತಿಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಲವು ನಾಯಕರು, ಸಿದ್ದರಾಮಯ್ಯನವರ ರಾಜೀನಾಮೆಯನ್ನು ಅಂಗೀಕರಿಸುವಂತೆ ಹೈಕಮಾಂಡ್ನ್ನು ಒತ್ತಾಯಿಸುವ ಕೆಲಸಕ್ಕೂ ಕೈಹಾಕಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಇಂದು ಮಧ್ಯಾಹ್ನ ಸಿದ್ದರಾಮಯ್ಯನವರಿಗೆ ಹೈಕಮಾಂಡ್ನಿಂದ ದೂರವಾಣಿ ಕರೆ ಬಂದಿದ್ದು ಅವರ ರಾಜೀನಾಮೆಯನ್ನು ಅಂಗೀಕರಿಸದಿರಲು ಹೈಕಮಾಂಡ್ ತೀಮರ್ಾನಿಸಿದೆ ಎಂಬ ಮಾಹಿತಿಯನ್ನು ಕರೆ ಮಾಡಿದರವರು ನೀಡಿದರೆಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸಿದ್ದು ರಾಜೀನಾಮೆ ಘಟನೆ ದಿನೇ ದಿನೇ ಹಲವು ಬಣ್ಣಗಳನ್ನು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ವಿರೋಧಿಸುವವರು ಹಾಗೂ ಬೆಂಬಲಿಸುತ್ತಿರುವವರ ನಡುವಿನ ಶೀಥಲ ಸಮರವಾಗಿ ರಾಜೀನಾಮೆ ಘಟನೆ ಪರಿವರ್ತನೆಯಾಗುತ್ತಿದೆ. ಸಿದ್ದರಾಮಯ್ಯ ದಿಢೀರನೆ ರಾಜೀನಾಮೆ ಪ್ರಕಟಿಸಿ ಹೈಕಮಾಂಡ್ ಭೇಟಿ ಅವಕಾಶ ಸೃಷ್ಟಿಸಿಕೊಂಡು ಯಾವ ರಾಜಕೀಯ ದಾಳಗಳನ್ನು ಉರುಳಿಸಲಿದ್ದಾರೆ ಎಂಬ ಕುತೂಹಲವೂ ಈಗ ಹೆಚ್ಚಾಗಿದೆ. -ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಸೆಪ್ಟೆಂಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಗಸ್ಟ್   ಆಕ್ಟೋ »
   1234
  567891011
  12131415161718
  19202122232425
  2627282930  
 • ವಿಭಾಗಗಳು