ಬೆಂಗಳೂರು ಸುತ್ತಮುತ್ತ ಕೈಗಾರಿಕಾ ಅಭಿವೃದ್ಧಿಗಾಗಿ ಸಕರ್ಾರ ವಶಪಡಿಸಿಕೊಂಡ ಜಮೀನುಗಳ ಪರಿಹಾರ ವಿತರಣೆಯಲ್ಲಿ ಭಾರಿ ಅವ್ಯವಹಾರ

ರಿಪೋರ್ಟರ್; ಎಂ.ಎನ್, ಚಂದ್ರೇಗೌಡ
ಸ್ಲಗ್: ಸಂಗೊಳ್ಳಿ ರಿಪೋರ್ಟ
ಡೇಟ್: 28- 09- 2010
ಬೆಂಗಳೂರು
ಆಂಕರ್: ಬೆಂಗಳೂರು ಸುತ್ತಮುತ್ತ ಕೈಗಾರಿಕಾ ಅಭಿವೃದ್ಧಿಗಾಗಿ ಸಕರ್ಾರ ವಶಪಡಿಸಿಕೊಂಡ ಜಮೀನುಗಳ ಪರಿಹಾರ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ್ಯಾಯಮೂತರ್ಿ ಎನ್.ಎಸ್. ಸಂಗೊಳ್ಳಿ ವರದಿ ಸಲ್ಲಿಸಿದ್ದಾರೆ. ಸಂಗೊಳ್ಳಿ ವರದಿಯ ಪ್ರತಿ ಸಮಯ ನ್ಯೂಸ್ಗೆ ಲಭ್ಯವಾಗಿದ್ದು ಕೇವಲ 2008 ಜುಲೈನಿಂದ 2009 ರ ಜುಲೈವರೆಗೆ ಕೆಐಎಡಿಬಿ 775 ಕೋಟಿ ರು ಪರಿಹಾರ ವಿತರಣೆ ಮಾಡಿದ್ದು ಇದರಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ತಮ್ಮ ತನಿಖಾ ವರದಿಯಲ್ಲಿ ದಾಖಲಿಸಿದ್ದಾರೆ.
ಫ್ಯಾಕೇಜ್ ಫಾಲೋಸ್………………

ವಾಯ್ಸ್ ಓವರ್ 1;
ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಎಲೆಕ್ಟ್ರಾನಿಕ್ ಹಾರ್ಡವೇರ್ ಪಾರ್ಕ ನಿಮರ್ಾಣಕ್ಕೆ ಸಕರ್ಾರ, 859 ಕ್ಕೂ ಹೆಚ್ಚು ಎಕರೆ ಖಾಸಗಿ ಹಾಗೂ ಸಕರ್ಾರಿ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳಲು 2008 ರಲ್ಲಿಯೇ ಅಧಿಸೂಚನೆ ಹೊರಡಿಸಿತ್ತು. ಬಳಿಕ 2008 ರಿಂದ 2009 ಜುಲೈವರೆಗೆ ಈ ಭೂಮಿಗಳ ಮಾಲೀಕರಿಗೆ ಸುಮಾರು 775 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಪರಿಹಾರವಾಗಿ ವಿತರಿಸಿತ್ತು. ಆದರೆ ಪರಿಹಾರ ಧನ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರು ಕೇಳಿ ಬಂದಿರುವ ಹಿನ್ನಲೆಯಲ್ಲಿ ಕೆಐಎಡಿಬಿ ಮುಖ್ಯಕಾರ್ಯ ನಿವರ್ಾಹಕ ಅಧಿಕಾರಿ ಶ್ಯಾಮ್ಭಟ್, ನ್ಯಾಯಮೂತರ್ಿ ಎನ್.ಎಸ್. ಸಂಗೊಳ್ಳಿ ನೇತೃತ್ವದ ಏಕ ಸದಸ್ಯ ಸಮಿತಿ ರಚಿಸಿ, ಲಭ್ಯವಿರುವ  ಕಡತಗಳ ಪರಿಶೀಲಿಸಿ ವರದಿ ನೀಡುವಂತೆ ಕೋರಿದ್ದರು. ಅದರಂತೆ ಸಂಗೊಳ್ಳಿ ಈಗ ಸಕರ್ಾರಕ್ಕೆ ತಮ್ಮ ವರದಿ ಸಲ್ಲಿಸಿದ್ದು ಕೆಐಎಡಿಬಿ ಭೂ ಪರಿಹಾರ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ವರದಿ ನೀಡಿದ್ದಾರೆ. 

ವರದಿಯ ಮುಖ್ಯಾಂಶಗಳು ಇಂತಿವೆ: (ಗ್ರಾಫಿಕ್ಸ್ ಪಾಯಿಂಟ್ಸ್ ಬೋಲ್ಡ್ ಲೆಟರ್ನಲ್ಲಿ- ಗ್ರಾಫಿಕ್ ಪ್ಲೇಟ್ ಮಾಡಿಸಿ) 
1. ಖಾಸಗಿ, ಗ್ರಾಂಟ್ ಆದ ಭೂಮಿ ಹಾಗೂ ಗೋಮಾಳಗಳನ್ನು ಸವರ್ೆ ಮಾಡಿಸದೇ ಕೋಟ್ಯಾಂತರ ರುಪಾಯಿ ಪಾವತಿ.
2. ಸಕರ್ಾರದ ಅನುಮೋದನೆ ಪಡೆಯದೇ ಪರಿಹಾರ ಧನ ವಿತರಣೆ.
3. ಕೋರ್ಟಗಳನ್ನಿ ವ್ಯಾಜ್ಯವಿದ್ದರೂ ಪರಿಹಾರ ಧನ ಪಾವತಿ.
4. ಭೂಸ್ವಾಧೀನದ ನೋಟಿಫಿಕೇಷನ್ನಿನಲ್ಲಿ ಹೆಸರಿಲ್ಲದ ರೈತರಿಗೆ ಪರಿಹಾರ ವಿತರಣೆ. ಹತ್ತಾರು ಪ್ರಕರಣಗಳಲ್ಲಿ ಹೆಸರಿರುವವರಿಗೆ ಪರಿಹಾರ ನೀಡಿಲ್ಲ.
5. ಕೆಐಎಡಿಬಿ ಮುಖ್ಯ ಕಾರ್ಯ ನಿವರ್ಾಹಣಾ ಅಧಿಕಾರಿ, ಕಾರ್ಯನಿರ್ವಾಹಕ ಸದಸ್ಯರು, ವಿಶೇಷ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೇ ಪರಿಹಾರ ವಿತರಣೆ.

ಅಕ್ರಮ ನಡೆದಿರುವ ಮುಖ್ಯ ಪ್ರಕರಣಗಳ ವಿವರ ಇಂತಿದೆ: (ಯೂಸ್ ರೆಡ್ ಬೊಲ್ಡ್ ಲೆಟರ್ಸ್ ಇನ್ ಗ್ರಾಫಿಕ್ ಪ್ಲೇಟ್)

ಎ) ಅರೆಬಿನ್ನಮಂಗಲ ಗ್ರಾಮ: ಸವರ್ೆ ನಂ: 73/4 – 15 ಗುಂಟೆ: 74/5/ 17 ಗುಂಟೆ : ಅಧಿಸೂಚನೆಯಲ್ಲಿ ರೈತ ಮಿನಿಯಪ್ಪನ ಹೆಸರು ಇದ್ದರೂ ಪರಿಹಾರವನ್ನು ಬೇರೆಯವರಿಗೆ ವಿತರಿಸಲಾಗಿದೆ.
2. ಸವರ್ೆ ನಂ: 96: 2 ಎಕರೆ 39 ಗುಂಟೆ: ನ್ಯಾಯಾಲಯದ ತಡೆಯಾಜ್ಞೆ ಇದ್ದರೂ 1, 28, 65000 ಪರಿಹಾರ ವಿತರಣೆ : ರಾಮಕೃಷ್ಣ ಭೂಸ್ವಾಧೀನ ಅಧಿಕಾರಿ
3. ಸವರ್ೆ ನಂ. 66: ವಿಸ್ತೀರ್ಣ: 2-14 ಗುಂಟೆ: ಕೋದಂಡಸ್ವಾಮಿ ದೇವರು ಹೆಸರಿನಲ್ಲಿ ಖಾತೆ ಇದೆ, ಆದರೆ ಪರಿಹಾರ 1, 15, 75000 ರುಪಾಯಿ ನಾಗರಾಜ ಎಂಬುವವರಿಗೆ ಪಾವತಿ.
ಬಿ) ಸಿಂಗಹಳ್ಳಿ ಗ್ರಾಮ:
ಗೋಮಾಳ ಜಮೀನು: ಸವರ್ೆ ನಂ: 32/6, 32/1, 32/4 ಎ, 32/2, 32/4 : ಒಟ್ಟು 9 ಎಕರೆ 17 ಗುಂಟೆ: 2003 ಮೇ ತಿಂಗಳಲ್ಲಿ ನೀಡಿರುವ ಸಾಗುವಳಿ ಚೀಟಿ ಆಧರಿಸಿ 10 ಜನರಿಗೆ ಒಟ್ಟು 5 ಕೋಟಿ 37 ಲಕ್ಷ ಪಾವತಿ, ಇದು ಕ್ರಮಬದ್ಧ ಅಲ್ಲ: ಸಂಗೊಳ್ಳಿ ಷರಾ.

ಸಿ) ಹೂವಿನಾಯಕನಹಳ್ಳಿ ಗ್ರಾಮ:
ಸವರ್ೆ ನಂ: 78/1, ಭಾಸ್ಕರ ರಾಜು ಖಾತೆದಾರ, ಆದರೆ ನರಸಿಂಹಮೂತರ್ಿ ಎಂಬುವವರಿಗೆ 82 ಲಕ್ಷ 25 ಸಾವಿರ ಪರಿಹಾರ ವಿತರಣೆ:
ಸವರ್ೇ ನಂ; 78/1, ಪಿ 1 ಎ : 10 ಗುಂಟಿಎ ಜಮೀನಿಗೆ 50 ಲಕ್ಷ 50 ಸಾವಿರ ರು ಸತ್ಯನಾರಾಯಣ ಕಾನೇಹಾಳಗೆ ಪಾವತಿ: ಆದರೆ ಇವರ ಹೆಸರು ಅಧಿಸೂಚನೆಯಲ್ಲಿ ಇಲ್ಲಾ.

ಡಿ) ಅರೇಬಿನ್ನಮಂಗಲ ಗ್ರಾಮ: ಸವರ್ೆ ನಂ: 8/2, 8/3 : ಖಾತೆ ದಾರ ರತ್ನಮ್ಮ/ ಎಂ. ರಾಮಪ್ಪರಿಗೆ: 27/07/ 09 ರಂದು 1 ಕೋಟಿ, 51 ಲಕ್ಷ 90 ಸಾವಿರ ಪಾವತಿ: ಮಾನ್ಯ ಮಂತ್ರಿಗಳ ಟಿಪ್ಪಣಿ ಇದೆ:
ಸವರ್ೆ ನಂ: 73/4 ರಲ್ಲಿ 15 ಗುಂಟೆ, 73/5 ರಲ್ಲಿ 17 ಗುಂಟೆ, ಒಟ್ಟು 32 ಗುಂಟೆಗೆ 4960000 ಪಾವತಿ: ಖಾತೆದಾರ ಮುನಿಯಪ್ಪ ಇದ್ದರೂ ಬೇರೆಯವರಿಗೆ ಹಣ ಸಂದಾಯವಾಗಿದೆ.
ಸವರ್ೆ ನಂ: 66, 2 ಎಕರೆ 14 ಗುಂಟೆ: ಕೋದಂಡದೇವರು ಖಾತೆದಾರ: ದಿ. 06-08- 2007 ರಂದು ತಹಸೀಲ್ದಾರರು ಈ ಜಮೀನನ್ನು ನಾಗರಾಜಯ್ಯ ಮತ್ತು ಇನ್ನೊಬ್ಬರಿಗೆ ಮಂಜೂರು ಮಾಡುತ್ತಾರೆ. ಲ್ಯಾಂಡ್ ಗ್ರಾಂಟ್ ನಿಮಯ ಪಾಲಿಸಿಲ್ಲ. ಸಂದಾಯವಾದ ಹಣ 1 ಕೋಟಿ 57 ಲಕ್ಷ ರುಪಾಯಿ.

ಇದಲ್ಲದೆ ಜೊನ್ನಹಳ್ಳಿ, ಗ್ರಾಮದಲ್ಲಿ ಅಧಿಸೂಚನೆ ಹೊರಡಿಸಿದ ದಿನವೇ ಕ್ರಮಮಾಡಿಸಿದ ಜಮೀನಿಗೆ 23, 37500 ಲಕ್ಷ ರುಪಾಯಿ ಪಾವತಿ. ಸವರ್ೆ ನಂ: 131/1, ವಿಸ್ತೀರ್ಣ: 17 ಗುಂಟೆ.

ದಿನಾಂಕ 09-01- 2007 ರಂದು ಅಧಿಸೂಚನೆ ಹೊರಡಿಸಿದ ನಂತರ ಎಂ. ರಮೇಶ್ ಎಂಬುವರು ಕೊಂಡಪ್ಪನವರ ಮಕ್ಕಳಾದ ವೆಂಕಟಲಕ್ಷಮ್ಮ, ನಾಗಮ್ಮ, ರಾಮಕೃಷ್ಣರಿಂದ ಜಮೀನು ಖರೀದಿ ಮಾಡಿರುತ್ತಾರೆ. ಇದು ಕ್ರಮಬದ್ಧ ಅಲ್ಲದಿದ್ದರೂ ಪರಿಹಾರದ ಹಣ ಪಾವತಿಸಲಾಗಿದೆ. ಜತೆಗೆ ಇದೇ ಗ್ರಾಮದ ಹಲವವರಿಗೆ ಜಮೀನುಗಳನ್ನು ಅಳತೆ ಮಾಡಿಸದೇ ತಹಸೀಲ್ದಾರರ ಆರ್ಟಿಸಿ ವರದಿ ಆಧರಿಸಿ ಪರಿಹಾರ ನೀಡಲಾಗಿದೆ. ಇದು ಸಹ ದೊಡ್ಡ ಲೋಪ.

ಕವಡೆ ದಾಸನಹಳ್ಳಿಯಲ್ಲಿ ಅಧಿಸೂಚನೆಯಲ್ಲಿ ಹೆಸರು ಇಲ್ಲದ ಸೊನ್ನಪ್ಪ ಮೈಲನಹಲ್ಳಿ ಮುನಿಸ್ವಾಮಿಗೆ ಒಂದು 1 ಕೋಟಿ, ನಾರಾಯಣಮ್ಮ ಎಂಬುವರಿಗೆ 2 ಕೋಟಿ 20 ಲಕ್ಷ ಪಾವತಿಸಲಾಗಿದೆ. ಇವರ ಜಮೀನುಗಳ ಸವರ್ೆಯನ್ನು ಕಾರ್ಯ ಮಾಡಿಸಿಲ್ಲ.

ಭಟ್ರಮಾರನಹಳ್ಳಿ, ಗೊಲ್ಲಹಳ್ಳಿ, ಬಂಡಿಕೊಡಿಗೆ ಪಾಳ್ಯ, ಸಿಂಗೆನಹಳ್ಳಿ, ಹೂವಿನನಾಯಕನಹಳ್ಳಿಯಲ್ಲಿ ಜಮೀನುಗಳ ಅಳತೆ ಮಾಡಿಸದೆಯೇ ಕೋಟ್ಯಾಂತರ ರುಪಾಯಿ ಹಣಪಾವತಿಸಲಾಗಿದೆ. ಜತೆಗೆ ಅಧಿಸೂಚನೆಯಲ್ಲಿ ಹೆಸರಿಲ್ಲದ ಹತ್ತಾರು ಜನರಿಗೆ ಕೋಟ್ಯಾಂತರ ರುಪಾಯಿ ಸಂದಾಯವಾಗಿದೆ. ಸಾಗುವಳಿ ಚೀಟಿ ಇಲ್ಲದ, ದಿನಾಂಕಗಳು ಸ್ಪಷ್ಟವಾಗಿ ನಮೂದಿಸದ ಪ್ರಕರಣಗಳಿಗೂ ಹಣ ಪಾವತಿಸಲಾಗಿದೆ. ಗೋಮಾಳ ಗ್ರಾಂಟ್ ಆಗಿರುವವರಿಂದ ಸೂಕ್ತ ದಾಖಲೆ ಪಡೆಯದೇ, ಯಾರಿಗೆ ಎಷ್ಟು, ಅವರ ಜಮೀನಿನ ವಿಸ್ತೀರ್ಣ ಎಷ್ಟು ಎಂಬುದನ್ನು ಪರಿಶೀಲಿಸದೇ ಕೇವಲ ಅಫಿಡವಿಟ್ಗಳನ್ನು ಪಡೆದು ಹಣ ಸಂದಾಯಮಾಡಲಾಗಿದೆ.

ಸಿಂಗಹಳ್ಳಿಯಲ್ಲಿ ಸವರ್ೆ ನಂ: 177/ ಪಿ 25 : ಕ್ಷೇತ್ರ 4 ಎಕರೆ: 2 ಕೋಟಿ 80 ಲಕ್ಷ ರುಪಾಯಿಯನ್ನು ಮುನಿಯಪ್ಪ ಬಿನ್ ದುರ್ಗಪ್ಪ ಎಂಬುವವರಿಗೆ ಅಧಿಸೂಚನೆಯಲ್ಲಿ ಹೆಸರು ಇಲ್ಲದಿದ್ದರೂ 03- 08- 2009 ರಂದು ಸಂದಾಯಮಾಡಲಾಗಿದೆ. ಇದೇ ಗ್ರಾಮದ ಮತ್ತೊಂದು ಸವರ್ೆ ನಂನಲ್ಲಿ ಮತ್ತೊಂದು ಐಟಂನಲ್ಲಿ ಇದೇ ವ್ಯಕ್ತಿಗೆ ಆತ ನಿಧನ ಹೊಂಡಿದ್ದರೂ ಮರಣ ಪ್ರಮಾಣ ಪತ್ರ ಪಡೆಯದೇ ಸುಮಾರು 4 ಎಕರೆ 37 ಗುಂಟೆ ಜಮೀನಿಗೆ, ಭೂಸ್ವಾಧೀನ ಪಡಿಸಿಕೊಳ್ಳದಿದ್ದರೂ ಸಾಗುವಳಿ ಚೀಟಿ ಇಲ್ಲದೇ, 2 ಕೋಟಿ 80 ಲಕ್ಷ ರುಪಾಯಿ ಪರಿಹಾರ ನೀಡಲಾಗಿದೆ. ಈ ಪ್ರಕರಣದಲ್ಲಿ ಜಿ.ಸಿ. ಅನಿಲಕುಮಾರ್ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದರು.

ಬಂಡಕೊಡಗೇನಹಳ್ಳಿಯ ಸವರ್ೇ ನಂ: 151 ರಲ್ಲಿ ಜಮೀನುಗಳ ಪೋಡಿ ದುರಸ್ತಿ ತಾಳೆ ಮಾಡದೇ 2 ಕೋಟಿ 64 ಲಕ್ಷ ರುಪಾಯಿಗಳನ್ನು ನಂದೀಶ್ವರರೆಡ್ಡಿ ಬಿನ್ ಶ್ರೀನಿವಾಸರೆಡ್ಡಿ ಎಂಬುವವರಿಗೆ ಪಾವತಿ ಮಾಡಲಾಗಿದೆ.
ಇದಲ್ಲದೆ ಬಹುಮುಖ್ಯವಾಗಿ ಬಂಡಿಕೊಡಗೇನಹಳ್ಳಿ ಸವರ್ೆ ನಂ: 40 /ಪಿ 07 : ವಿಸ್ತೀರ್ಣ: 3 ಎಕರೆ : ಇಟಾಸ್ಕಾ ಕಂಪನಿ ಕಡಿಮೆ ಹಣ ನೀಡುವಂತೆ ಕೇಳಿದ್ದರೂ ಅದನ್ನು ತಿರಸ್ಕರಿಸಿ ಕೆಐಎಡಿಬಿ ಮಂಡಳಿ ಗೊತ್ತುಪಡಿಸಿದ ದರದಲ್ಲಿ ಹಣ ಸಂದಾಯವಾಗಿದೆ. ಡಿ. ಚಿಕ್ಕಹನುಮಯ್ಯ ಮತ್ತು ಮಕ್ಕಳು 02-07- 2004 ರಂದು ಸಿ. ಕೃಷ್ಣಪ್ಪ ಎಂಬುವವರಿಗೆ ಕ್ರಯಕ್ಕೆ ಕೊಟ್ಟಿರುತ್ತಾರೆ. ಒಟ್ಟು 2 ಕೋಟಿ 79 ಲಕ್ಷ ಪಾವತಿಯಾಗಿರುತ್ತದೆ. ಬಂಡಿಕೊಡಗೇಹಳ್ಳಿ ಗ್ರಾಮದ ಗೋಮಾಳವನ್ನು ಸವರ್ೆ ಮಾಡಿಸದೇ ಕೋಟ್ಯಾಮತರ ರುಪಾಯಿ ಹಣ ಪಾವತಿಸಲಾಗಿದೆ ಎಂದು ಎನ್.ಎಸ್. ಸಂಗೊಳ್ಳಿ ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ. ಇಷ್ಟೆಲ್ಲಾ ದಾಖಲೆಗಳನ್ನು ಒಳಗೊಂಡ 53 ಪುಟಗಳ ವರದಿಯನ್ನು 19-12- 2009 ರಂದು ಸಕರ್ಾರಕ್ಕೆ ಸಲ್ಲಿಸಲಾಗಿದ್ದರೂ ಸಕರ್ಾರ ಯಾವುದೇ ಕ್ರಮಕೈಗೊಳ್ಳದೇ ಕಣ್ಣುಮುಚ್ಚಿ ಕುಳಿತಿರುವುದು ಏಕೆ ಎಂಬುದು ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

–ಎಂ.ಎನ್. ಚಂದ್ರೇಗೌಡ,
ಸಮಯ ನ್ಯೂಸ್
ಬೆಂಗಳೂರು

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಸೆಪ್ಟೆಂಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಗಸ್ಟ್   ಆಕ್ಟೋ »
   1234
  567891011
  12131415161718
  19202122232425
  2627282930  
 • ವಿಭಾಗಗಳು