ಯಡಿಯೂರಪ್ಪ ಬದಲಾಯಿಸಿ ಅವರ ಸ್ಥಾನದಲ್ಲಿ ಮತ್ತೊಬ್ಬರನ್ನು ನೇಮಕ ಮಾಡಲು ಬಿಜೆಪಿ ಹೈಕಮಾಂಡ್ ಚಿಂತನೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಹೈಕಮಾಂಡ್- ಈಶ್ವರಪ್ಪ
ಡೇಟ್: 04- 10 -2010
ಬೆಂಗಳೂರು

ಆಂಕರ್: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಬದಲಾಯಿಸಿ ಅವರ ಸ್ಥಾನದಲ್ಲಿ ಮತ್ತೊಬ್ಬರನ್ನು ನೇಮಕ ಮಾಡಲು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ಈಗಾಗಲೇ ಆರಂಭವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ಗೆ ಕ್ಷಣ, ಕ್ಷಣದ ವರದಿ ರವಾನೆಯಾಗುತ್ತಿದ್ದು ಒಂದೆರಡು ದಿನದಲ್ಲಿ ಬಿಜೆಪಿ ಹೈಕಮಾಂಡ್ನ ನಾಯಕರು ಬೆಂಗಳೂರಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆಂದು ಹೇಳಲಾಗುತ್ತಿದೆ.

ಫ್ಯಾಕೇಜ್ ಫಾಲೋಸ್…………

ವಾಯ್ಸ್ ಓವರ್:
ಆಡಿಕೊಳ್ಳುವವರ ಮುಂದೆ ಎಡವಿ ಬಿದ್ದಂತ ಪರಿಸ್ಥಿತಿ ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬಂದಿದೆ. ಒಂದು ಕಡೆ ಸಚಿವ ಸಂಪುಟ ವಿಸ್ತರಣೆ ನಂತರ ಕುದಿಯುತ್ತಿರುವ ಅತೃಪ್ತ ಶಾಸಕರ ಒಂದು ಬಣ. ಮತ್ತೊಂದು ಕಡೆ ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ಹಲ್ಲುಕಡಿಯುತ್ತಾ ಕುಳಿತಿರುವ ರೆಡ್ಡಿ ಬಳಗ. ಮತ್ತೊಂದು ಕಡೆ ತಮ್ಮನ್ನು ವಿನಾಕಾರಣ ಸಂಪುಟದಿಂದ ಕೈಬಿಟ್ಟರೆಂದು ಬುಸುಗುಡುತ್ತಿರುವ ರಾಮಚಂದ್ರಗೌಡ, ಲಿಂಬಾವಳಿ, ಗೂಳಿಹಟ್ಟಿ ಶೇಖರ್ ಹಾಗೂ ಅವರ ಅನುಯಾಯಿಗಳು. ಇನ್ನೊಂದು ಕಡೆ ಸೋಮಣ್ಣ, ಶೋಭಾರಿಗೆ ಪ್ರಾಶಸ್ತ್ಯ ನೀಡುವುದನ್ನು ಸಹಿಸದ ಆರ್. ಅಶೋಕ್, ಜತೆಗೆ ಅವರ ಬೆಂಗಳೂರು ಶಾಸಕರ ಪಡೆ. ತಮ್ಮ ಆಕ್ಷೇಪಣೆಯನ್ನು ಲೆಕ್ಕಿಸದೇ ಸಚಿವ ಸಂಪುಟ ವಿಸ್ತರಿಸಿ ಮೀಸೆ ತಿರುವಿದ ಸಿಎಂ ಮೇಲೆ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ತಹತಹಿಸುತ್ತಿರುವ ಅನಂತ್ಕುಮಾರ್ ಹಾಗೂ ಅವರ ತಂಡ. ಇವೆಲ್ಲದರ ನಡುವೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಡಿನೋಟೀಫಿಕೇಷನ್ನ ಆಪಾದನೆಗಳ ಸುರಿಮಳೆ. ಮತ್ತೊಂದು ಕಡೆ ಕೆಐಎಡಿಬಿ ಹಗರಣದ ಒಳ ಸುಳಿ. ಹೀಗೆ ಪ್ರತಿದಿನ ಆಪಾದನೆಗಳು, ನಿಂದನೆಗಳಿಗೆ ಸಿಕ್ಕಿ ತಮ್ಮ ಹಾಗೂ ಸಕರ್ಾರದ ವರ್ಚಸ್ಸನ್ನು ಹಾಳುಮಾಡಿಕೊಳ್ಳುತ್ತಿರವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಬದಲಾಯಿಸಿ ಮತ್ತೊಬ್ಬರನ್ನು ಅವರ ಸ್ಥಾನಕ್ಕೆ ತರಲು ಬಿಜೆಪಿ ಹೈಕಮಾಂಡ್ ಈಗ ಚಿಂತನೆ ಆರಂಭಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳನ್ನು ಸಮಥರ್ಿಸಿ ಹೇಳಿಕೆ ನೀಡಬಾರದೆಂದು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪನವರಿಗೆ ಮೇಲಿನಿಂದ ಸೂಚನೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಅಶಿಸ್ತನ್ನು ಸಹಿಸದೇ ಪಕ್ಷದ ವಿರುದ್ಧ ಮಾತನಾಡಿದವರ ವಿರುದ್ಧ ಗೂಳಿಯಂತೆ ಮೇಲೆರಗುತ್ತಿದ್ದ ಕೆ.ಎಸ್. ಈಶ್ವರಪ್ಪ ಈಗ ಕಾಣೆಯಾದಂತವರಾಗಿದ್ದಾರೆ. ಪ್ರತಿಪಕ್ಷದ ನಾಯಕರು ಮುಖ್ಯಮಂತ್ರಿಗಳನ್ನು ಹಾದಿಬೀದಿಯಲ್ಲಿ ಆಪಾದಿಸಿ ಲೇವಡಿ ಮಾಡುತ್ತಿದ್ದರೂ ಕೆ.ಎಸ್. ಈಶ್ವರಪ್ಪ ಇದುವರೆಗೆ ಮುಖ್ಯಂಮಂತ್ರಿಗಳು ಹಾಗೂ ಕಟ್ಟಾ ಮೇಲಿನ ಆಪಾದನೆಗಳ ಬಗ್ಗೆ ತುಟಿಕ್ಪಿಟಿಕ್ ಅಂದಿಲ್ಲ. ನಿನ್ನೆ ಸಂಜೆ ಕೇಂದ್ರದ ನಾಯಕರ ಸೂಚನೆ ಮೇರೆಗೆ ಆರ್ಎಸ್ಎಸ್ ನಾಯಕರನ್ನು ಭೇಟಿ ಮಾಡಿದ್ದ ಈಶ್ವರಪ್ಪ, ಮುಂದೇನು ಮಾಡಬೇಕೆಂಬ ಬಗ್ಗೆ ಆರ್ಎಸ್ಎಸ್ ನಾಯಕರ ಜತೆ ಚಚರ್ಿಸಿದ್ದಾರೆಂದು ಮೂಲಗಳು ತಿಳಿಸಿವೆ. ಬಿಜೆಪಿ ಹೈಕಮಾಂಡ್ ನಾಯಕರ ಆಗಮನದ ನಂತರ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳಲಿವೆ.

—ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

1 ಟಿಪ್ಪಣಿ

 1. ಈವಗಲಾದ್ರು ಕರ್ನಾಟಕದ ನಸಿಬು ತೆಗೆಯುತ್ತಾ…???


Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಅಕ್ಟೋಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಸೆಪ್ಟೆಂ   ನವೆಂ »
   12
  3456789
  10111213141516
  17181920212223
  24252627282930
  31  
 • ವಿಭಾಗಗಳು