ವಿಶ್ವಾಸ ಮತಯಾಚಿಸಲು ರಾಜ್ಯಪಾಲ ಹೆಚ್. ಆರ್. ಭಾರದ್ವಜ್ ನೀಡಿದ್ದ ಆದೇಶkke ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲೆಬಾಗಿದ್ದಾರೆ CM B.S. Yediyurappa get one more chance to prove his confidence vote on 14 Oct


ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಗವರ್ನರ್
ಡೇಟ್: 12- 10 -2010
ಬೆಂಗಳೂರು.

ಆಂಕರ್: ಬರುವ 14 ರಂದು ಹೊಸದಾಗಿ ಮತ್ತೊಮ್ಮೆ ವಿಶ್ವಾಸ ಮತಯಾಚಿಸಲು ರಾಜ್ಯಪಾಲ ಹೆಚ್. ಆರ್. ಭಾರದ್ವಜ್ ನೀಡಿದ್ದ ಆದೇಶ್ಕಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲೆಬಾಗಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳ ಕಾರ್ಯದಶರ್ಿ ರಾಜ್ಯಪಾಲರಿಗೆ ಪತ್ರ ಬರೆದು, ಅಕ್ಟೋಬರ್ 14 ರಂದು 11 ಗಂಟೆಗೆ ವಿಶ್ವಾಸಮತಯಾಚನೆ ಮಾಡಲು ನಿರ್ಧರಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.

ಫ್ಯಾಕೇಜ್ ಫಾಲೋಸ್……. 

ವಾಯ್ಸ್ ಓವರ್ 1: ರಾಜ್ಯ ವಿಧಾನಸಭೆಯನ್ನು ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ನಿನ್ನೆ ತಾನೆ ರಾಷ್ಟ್ರಪತಿಗಳಿಗೆ ರಾಜ್ಯಪಾಲ ಹೆಚ್. ಆರ್. ಭಾರದ್ವಜ್ ವರದಿಯನ್ನು  ಕಳುಹಿಸಿದ್ದರು. ಆದರೆ ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯಪಾಲರು, ತಮ್ಮ ವರದಿಯನ್ನು ಈಗಾಗಲೇ ಕೇಂದ್ರಕ್ಕೆ ಕಳುಹಿಸಿದ್ದರೂ ಮುಖ್ಯಮಂತ್ರಿಗಳಿಗೆ ಮತ್ತೊಂದು ಅವಕಾಶವನ್ನು ನೀಡಿ, ವಿಶ್ವಾಸ ಮತಯಾಚನೆ ಮಾಡುವಂತೆ ಸಲಹೆ ನೀಡಿದ್ದರು. ಇದು ಐಚ್ಛಿಕವಾಗಿದ್ದು ಮುಖ್ಯಮಂತ್ರಿಗಳು ಬಯಸಿದರೆ ವಿಶ್ವಾಸಮತ ಯಾಚಿಸಬಹುದು ಇಲ್ಲವಾದರೆ ಬಿಡಬಹುದು. ಇದೇನೂ ಕಡ್ಡಾಯವಲ್ಲ ಎಂದು ವಿವರಿಸಿದ್ದರು. ಹೀಗೆ ಅವಕಾಶ ನೀಡಿರುವ ಪತ್ರವನ್ನು ಕೇಂದ್ರಕ್ಕೆ ಈಗಾಗಲೇ ಫ್ಯಾಕ್ಸ್ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು. ರಾಜ್ಯಪಾಲರ ಪತ್ರಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಾವು ನಿದೇಶಿಸಿದಂತೆಯೇ ಇದೇ 14 ರಂದು 11 ಗಂಟೆಗೆ ವಿಶ್ವಾಸಮತಯಾಚನೆ ಮಾಡುವುದಾಗಿ, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಬೈಟ್: ಹೆಚ್.ಆರ್. ಭಾರದ್ವಜ್, ರಾಜ್ಯಪಾಲ
ಟಿಸಿಆರ್:

ವಾಯ್ಸ್ ಓವರ್ 2:
ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಬಿಡುಗಡೆ ಮಾಡಿದ ರಾಜ್ಯಪಾಲರು, ನಿನ್ನೆ ತಾನೆ ತಾವು ಮಾಡಿದ ವಿಶ್ವಾಸಮತಯಾಚನೆ ಸಂವಿಧಾನಬದ್ಧವಾಗಿರಲಿಲ್ಲ ಎಂದು ದಾಖಲೆ ಸಮೇತ ವಿವರಿಸಿದ್ದರು. ವಿಶ್ವಾಸಮತಯಾಚನೆ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ನಡೆದ ಘಟನಾವಳಿಗಳ ಧ್ವನಿ ಮುದ್ರಿಕೆ ಆಲಿಸಿ ಈ ನಿಧರ್ಾರಕ್ಕೆ ಬಂದಿರುವುದಾಗಿ ತಿಳಿಸಿದ್ದರು. ರಾಜ್ಯಪಾಲರು ಪತ್ರದಲ್ಲಿ ನೀಡಿದ್ದ ಇತರ ಕಾರಣಗಳು ಇಂತಿವೆ.

          ಗ್ರಾಫಿಕ್ ಪಾಯಿಂಟ್ಸ್:

1. ವಿಶ್ವಾಸಮತಯಾಚನೆ ಭಯದ ವಾತಾವರಣದಲ್ಲಿ ನಡೆದಿದೆ.
2. ಕೇವಲ ಐದು ನಿಮಿಷದಲ್ಲಿ ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿದಿದೆ.
3. ಧ್ವನಿಮತದ ಮೂಲಕ ಮಾಡಲಾಗಿರುವ ವಿಶ್ವಾಸಮತಯಾಚನೆ ನಿಖರವಾಗಿಲ್ಲ.
4. ಯೆಸ್ ಹಾಗೂ ನೋ ಎಂದವರ ನಿಖರ ವಿವರ ಇಲ್ಲಾ.
5. ಸದನದಲ್ಲಿ ವಿಶ್ವಾಸಮತಯಾಚನೆಗೆ ತಾವು ಗಂಭೀರ ಯತ್ನ ಮಾಡಿಲ್ಲ.
6. ಧ್ವನಿಮತದ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಸದನದ ಸದಸ್ಯರಲ್ಲದವರು ಸದನದಲ್ಲಿ ಹಾಜರಿದ್ದರು.

–ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಅಕ್ಟೋಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಸೆಪ್ಟೆಂ   ನವೆಂ »
   12
  3456789
  10111213141516
  17181920212223
  24252627282930
  31  
 • ವಿಭಾಗಗಳು