ಮೊದಲ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ರಣರಂಗವಾಗಿದ್ದ ವಿಧಾನಸಭೆ ಇಂದು ಶಾಂತಿಯ ತೋಟ

ರಿಪೊರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಅಧಿವೇಶನ
ಡೇಟ್: 14- 10- 2010
ಬೆಂಗಳೂರು

ಆಂಕರ್: ಮೊದಲ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ರಣರಂಗವಾಗಿದ್ದ ವಿಧಾನಸಭೆ ಇಂದು ಶಾಂತಿಯ ತೋಟದಂತಿತ್ತು. ವಿಧಾನಸೌಧದ ಹೊರಗಡೆ ಪೊಲೀಸರ ಸರ್ಪಗಾವಲಿದ್ದರೆ ಒಳಗಡೆ ಎಲ್ಲೆಲ್ಲಿಯೂ ಮಾರ್ಷಲ್ಗಳ ಹದ್ದಿನ ಪಹರೆ. ಅನರ್ಹಗೊಂಡ ಸದಸ್ಯರು ವಿಧಾನಸೌಧದ ಪ್ರವೇಶಿಸದಂತೆ ತಡೆಯುವ ಸಲುವಾಗಿ ಪ್ರತಿಯೊಬ್ಬ ಶಾಸಕರು ತಮ್ಮ ವಾಹನಗಳನ್ನು ಪ್ರವೇಶ ದ್ವಾರದ ಬಳಿಯೇ ಬಿಟ್ಟು ಕಾಲ್ನಡಿಗೆಯಲ್ಲೇ ವಿಧಾನಸೌಧ ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.

ಫ್ಯಾಕೇಜ್ ಫಾಲೋಸ್…………….

ವಾಯ್ಸ್ ಓವರ್ 1: ಇದೇ 11 ರಂದು ನಡೆದ ಮೊದಲ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಅನರ್ಹಗೊಂಡ ಸದಸ್ಯರು ವಿಧಾನಸಭೆ ಪ್ರವೇಶಿಸಿದ್ದರು. ಜೆಡಿಎಸ್ ಶಾಸಕರ ವಾಹನದಲ್ಲಿ ಅನರ್ಹಗೊಂಡ ಪಕ್ಷೇತರ ಶಾಸಕರು ಆಗಮಿಸಿದ್ದರು. ಆನಂತರ ಮಾರ್ಷಲ್ಗಳ ಜತೆ ವಿಧಾನಸಭೆಯ ಮೊಗಸಾಲೆ ಪ್ರವೇಶಿಸಿ ತಮ್ಮ ಉಗ್ರಾವತಾರ ತೋರಿಸಿದ್ದರು. ಇದರಿಂದ ಇಡೀ ಕಲಾಪ ಗೊಂದಲದ ಗೂಡಾಗಿ ವಿಶ್ವಾಸಮತ ಯಾಚನೆ ದಾರಿ ತಪ್ಪಿತ್ತು. ಮೊದಲ ಬಾರಿ ಆದ ಭದ್ರತಾ ವೈಫಲ್ಯವನ್ನು ಮನಗಂಡಿದ್ದ ಪೊಲೀಸರು ಈ ಬಾರಿ ಭರ್ಜರಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಶಾಸಕರು ವಿಧಾನಸೌಧದ ಪಶ್ವಿಮ ಗೇಟ್ ಬಳಿ ತಮ್ಮ ವಾಹನಗಳನ್ನು ಬಿಟ್ಟು ಅಲ್ಲಿಂದ ಕಾಲ್ನಡಿಗೆಯಲ್ಲಿ ವಿಧಾನಸಭೆ ಪ್ರವೇಶಿಸುವಂತೆ ನೋಡಿಕೊಳ್ಳಲಾಗಿತ್ತು. ಇದರಿಂದ ಅನರ್ಹಗೊಂಡ ಸದಸ್ಯರು ವಿಧಾನಸಭೆ ಪ್ರವೇಶಿಸುವ ಮುನ್ನವೇ ಅವರನ್ನು ತಡೆಯುವ ಆಲೋಚನೆ ಈ ಕ್ರಮದ ಹಿಂದಿತ್ತು.
ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಮೊದಲು ವಿಧಾನಸೌಧ ಪ್ರವೇಶಿಸಿದ್ದು ಬಿಜೆಪಿ ಶಾಸಕರು, ಆನಂತರ ಆಗಮಿಸಿದ್ದು ಕಾಂಗ್ರೆಸ್ ಶಾಸಕರು. ಅವರ ಹಿಂದೆಯೇ ಜೆಡಿಎಸ್ ಶಾಸಕರು ಬಂದರು. ಬಿಜೆಪಿ ರಾಜ್ಯಾಧ್ಯಕ್ಷ ಇಮದು ಕೇಸರಿ ಶಾಲು ಹೊದ್ದು ವಿಧಾನಸಭೇ ಪ್ರವೇಶಿಸಿದ್ದು ವಿಶೇಷವಾಗಿತ್ತು. ಶಾಸಕ ಸುರೇಶ್ ಬಾಬು ಜತೆ ಪಕ್ಷೇತರ ಶಾಸಕ ವತರ್ೂರ್ ಪ್ರಕಾಶ್ ವಿಧಾನಸಭೆ ಪ್ರವೇಶಿಸಿದರು. ಎಲ್ಲರೂ ಪಶ್ವಿಮ ದ್ವಾರದಲ್ಲಿ ತಮ್ಮ ಹಾಜರಿ ಸಂಖ್ಯೆ ಪಡೆದೇ ಒಳ ಪ್ರವೇಶಿಸುವುದನ್ನು ಕಡ್ಡಾಯ ಮಾಡಲಾಗಿತ್ತು.
ವಿಧಾನಸಭೆ ಆಗಮಿಸಿದ ಆಡಳಿತ ಪಕ್ಷದ ಶಾಸಕರು ಸಾಲು ಸಾಲಾಗಿ ನಿಂತು ವಿಧಾನಸಭೆಯ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿದರು. ಕೊಪ್ಪಳ ಜಿಲ್ಲೆ ಯಲಬುಗರ್ಾ ಶಾಸಕ ಈಶಣ್ಣ ಗುಲಗಣ್ಣನವರ್ ಪಾಶ್ವವಾಯು ಪೀಡಿತರಾಗಿದ್ದರೂ ಹಾಜರಿ ಪುಸ್ತಕಕ್ಕೆ ಸಹಿ ಹಾಕುವಾಗ ಲವಲವಿಕೆಯಿಂದ ಇದ್ದರು. ಒಳಗೆ ಬಂದ ಕಾಂಗ್ರೆಸ್ ಶಾಸಕರು, ಮೊದಲು ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡರು. ಆನಂತರ ಮತದಾನದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ತಲೆ ಎಣಿಕೆ ನಡೆಯಬೇಕೆಂಬ ಮನವಿಯನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗಲೇ ಸಲ್ಲಿಸಿದ್ದರು.
ಸದನ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಎದ್ದುನಿಂತು, ಕೋರ್ಟನಲ್ಲಿ ಅನರ್ಹಗೊಂಡ ಶಾಸಕರ ಪ್ರಕರಣ ಬಾಕಿ ಇರುವುದರಿಂದ ವಿಶ್ವಾಸಮತ ಯಾಚನೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಲು ಎದ್ದುನಿಂತ ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣನವರಿಗೆ ಸ್ಪೀಕರ್ ಅವಕಾಶ ನೀಡಲಿಲ್ಲ. ಸಿದ್ದರಾಮಯ್ಯನವರ ಮನವಿಯನ್ನು ತಿರಸ್ಕರಿಸಿರುವುದಾಗಿ ತಕ್ಷಣವೇ ರೂಲಿಂಗ್ ನೀಡಿದ ಸ್ಪೀಕರ್, ವಿಶ್ವಾಸ ಗೊತ್ತುವಳಿಯನ್ನು ಮಂಡಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿಗಳು ಗೊತ್ತುವಳಿ ಮಂಡಿಸುತ್ತಿದ್ದಂತೆಯೇ ಧ್ವನಿ ಮತಕ್ಕೆ ಹಾಕಿಸದರು. ಆನಂತರ ಶಾಸಕರ ತಲೆ ಎಣಿಕೆ ನಡೆಯಿತು. ಮೊದಲು ಆಡಳಿತ ಪಕ್ಷದವರ ತಲೆ ಎಣಿಕೆ ಮಾಡಲಾಯಿತು. ಅವರಿಗೆ 106 ಮತಗಳು ದೊರೆತವು. ಪಕ್ಷೇತರ ಶಾಸಕ ವತರ್ೂರ್ ಪ್ರಕಾಶ್ಗೆ ಆಡಳಿತ ಪಕ್ಷದ ಆಲಿನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಕಾಂಗ್ರೆಸ್, ಜೆಡಿಎಸ್ ಶಾಸಕರ ತಲೆ ಎಣಿಕೆಯಾದಾಗ ದೊರೆತಿದ್ದು 100 ಮತಗಳು. ಸ್ಪೀಕರ್ ಕೆ.ಜಿ. ಬೋಪಯ್ಯ ವಿಶ್ವಾಸ ಮತಯಾಚನೆಯ ರೂಲಿಂಗ್ ನೀಡಲು ಮುಂದಾದಾಗ ಪ್ರತಿಪಕ್ಷದ ನಾಯಕರು, ರೂಲಿಂಗ್ ನೀಡದಂತೆ ತಡೆಹಿಡಿಯಬೇಕು. ಕೋರ್ಟ ಆದೇಶ ಬರುವವರೆಗೂ ಕಾಯಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸದನದಲ್ಲಿ ಕೋಲಾಹಲ ಉಂಟಾಯಿತು. ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಿದ ಸ್ಪೀಕರ್, ವಿಧಾನಸಭೆ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ವಿಶ್ವಾಸ ವ್ಯಕ್ತಪಡಿಸಿದೆ ಎಂದು ಪ್ರಕಟಿಸಿ ಸದನವನ್ನು ಅನಿದರ್ಿಷ್ಟಾವಧಿಗೆ ಮುಂದೂಡಿದರು.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಅಕ್ಟೋಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಸೆಪ್ಟೆಂ   ನವೆಂ »
   12
  3456789
  10111213141516
  17181920212223
  24252627282930
  31  
 • ವಿಭಾಗಗಳು