ಕಡೆಯದಾಗಿ ದಿವಾಕರ್ ಬಳಿ ಮತ್ತೊಮ್ಮೆ ನಾನು ಕ್ಷಮೆಯಾಚಿಸುತ್ತೇನೆ………………………………

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ಇಬ್ರಾಹಿಂ
ಡೇಟ್: 24-10-2010
ಬೆಂಗಳೂರು

ನಿನ್ನೆ ನಡೆದ ಘಟನೆ ರಾಜಕಾರಣಿಗಳ ಮತ್ತೊಂದು ವಿಕೃತ ಮುಖವನ್ನು ನನಗೆ ಪರಿಚಯಿಸಿದೆ. ನಿನ್ನೆ ನಾವು ಹೈಕಮಾಂಡ್ ರಾಜಕಾರಣದ ಬಗ್ಗೆ ಚಚರ್ಿಸಲು ತೀಮರ್ಾನಿಸಿ ಸಂಜೆ 5 ತಿಂದ 6.30 ರವರೆಗೆ ಚಚರ್ೆ ನಡೆಸುವುದೆಂದು ತೀಮರ್ಾನಿಸಿದ್ದೆವು. ಅದಕ್ಕಾಗಿ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ, ಮುಖ್ಯಮಂತ್ರಿಗಳ ರಾಜಿಕೀಯ ಕಾರ್ಯದಶರ್ಿ ದಿವಾಕರ್, ಅನರ್ಹಗೊಂಡಿರುವ ಶಾಸಕ ಶಿವರಾಜ್ ತಂಗಡಗಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾಯದಶರ್ಿ ಬಿ.ಜಿ. ಪುಟ್ಟಸ್ವಾಮಿಯವರನ್ನು ಆಹ್ವಾನಿಸಿದ್ದೆವು. ಹೈಕಮಾಂಡ್ ರಾಜಕಾರಣ ಪ್ರಾದೇಶಿಕ ನಾಯಕರನ್ನು ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ಮೂಲೆಗುಂಪು ಮಾಡುತ್ತಿರುವ, ನಮ್ಮ ಸ್ವಾಭಿಮಾನಿ, ವರ್ಚಸ್ವಿ ನಾಯಕರು ಹೈಕಮಾಂಡ್ನ ಗುಲಾಮಗಿರಿ ರಾಜಕಾರಣಕ್ಕೆ ಬಲಿಯಾಗಿ ಸ್ವಂತಿಕೆ ಕಳೆದುಕೊಳ್ಳುತ್ತಿರವ ಬಗ್ಗೆ ನಮ್ಮ ನೈಜ ಕಳಕಳ ವ್ಯಕ್ತಪಡಿಸುವ ಹಂಬಲ ನನಗಿತ್ತು. ಇದಕ್ಕಾಗಿ ಸಿಎಂ ಇಬ್ರಾಹಿಂರಂಥಹ ಹಿರಿಯ ರಾಜಕಾರಣಿ, ಜತೆಗೆ ರಾಜಕೀಯ ಇತಿಹಾಸದ ಬಗ್ಗೆ ಸಾಕಷ್ಟು ಹೋಂವರ್ಕ ಮಾಡಿರುವ ದಿವಾಕರ್ ಅವರಿಗೆ ಮೊದಲೇ ಈ ವಿಷಯ ತಿಳಿಸಿ, ಹಿಟ್ಲರನ ಕಾಲದಲ್ಲಿ ಹುಟ್ಟಿದ ಹೈಕಮಾಂಡ್ ಎನ್ನುವ ಅಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯ ಬಗ್ಗೆ ಚಚರ್ಿಸಲು ಸಿದ್ಧನಾಗಿದ್ದೆ. ಜತೆಗೆ ಭಿನ್ನ ನಡೆ ತೋರಿಸಿ ಇಂದು ಬೀದಿಗೆ ಬಿದ್ದಿರುವ ಮಾಜಿ ಸಚಿವ ಶಿವರಾಜ್ ತಂಗಡಿಯವರ ಈಗಿನ ಮನಸ್ಥತಿ, ರಾಜಕಾರಣದಲ್ಲಿರುವ ಗರ್ಭಗುಡಿ ಸಂಸ್ಕೃತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಜನರ ಮುಂದಿಡಬೇಕು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶರ್ಿಗಳಿಂದ ಸಕರ್ಾರದ ಕಾರ್ಯವೈಖರಿ ಬಗ್ಗೆ ಸ್ಪಷ್ಟನೆ ಪಡೆಯಬೇಕು. ಯಾವುದೇ ಘಟನೆಗಳಿಗೆ ಪ್ರತಿಕ್ರಿಯಿಸದೇ ಕಾಲ ತಳ್ಳುತ್ತಿರುವ ಸಕರ್ಾರ, ಅದರ ಪ್ರತಿನಿಧಿಗಳ ವರ್ತನೆಯ ಬಗ್ಗೆ ಬೆಳಕು ಚೆಲ್ಲಬೇಕು ಎಂಬುದು ನನ್ನ ಚಚರ್ೆಯ ಹಿಂದಿನ ಉದ್ದೇಶವಾಗಿತ್ತು. ಸಕರ್ಾರದ ನಡೆಯನ್ನು ಸದಾ ತಮ್ಮ ಮೊನಚು ಮಾತುಗಳಿಂದ ಚುಚ್ಚುವ ವೈಎಸ್ವಿ ದತ್ತಾರನ್ನು ಆಹ್ವಾನಿಸಿ ಚಚರ್ೆಗೆ ಮತ್ತಷ್ಟು ರಂಗುತರಲು ನಿರ್ಧರಿಸಲಾಗಿತ್ತು.

5 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಶಿಸ್ತಿನ ಸಿಪಾಯಿಯಾಗಿರುವ ದಿವಾಕರ್ ಹತ್ತು ನಿಮಿಷ ಮೊದಲೇ ಬಂದು ಸ್ಟುಡಿಯೋದಲ್ಲಿ ಆಸೀನರಾಗಿದ್ದರು. ಸದಾ ಕೇಳಿದ ಸಮಯಕ್ಕೆ ಸರಿಯಾಗಿ ಬರುವ, ಒಪ್ಪಿಕೊಂಡ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ತಪ್ಪಿಸದೇ ಬರುವ ದಿವಾಕರ್ ಬಗ್ಗೆ ನನಗೊಂದು ಅಭಿಮಾನ. ಏಕೆಂದರೆ ಒಪ್ಪಿಕೊಂಡ ಸಮಯಕ್ಕೆ ಬರದೇ, ಬರುವುದಿಲ್ಲವೆಂದು ತಿಳಿಸುವ ಸೌಜನ್ಯವನ್ನು ತೋರದ ವೈಎಸ್ವಿ ದತ್ತಾರಿಗಿಂತ ದಿವಾಕರ್ ಅತ್ಯತ್ತಮ ವ್ಯಕ್ತಿ. ಅವರು ಒಂದು ರೀತಿಯಲ್ಲಿ ನಮಗೆ ಅಪತ್ಬಾಂಧವ. ಎಷ್ಟೋ ಕಾರ್ಯಕ್ರಮಗಳಿಗೆ ಇನ್ನು 30 ನಿಮಿಷವಿರುವಂತೆ ಹೇಳಿದಾಗಲೂ ಒಂದು ಚೂರು ಬೇಸರಿಸಿಕೊಳ್ಳದೇ ಬಂತು ಕಾರ್ಯಕ್ರಮ ನಡೆಸಲು ನೆರವಾಗುವ ದಿವಾಕರ್ ನಿಜಕ್ಕೂ ಯಾವುದೇ ವಿಷಯದ ಬಗ್ಗೆ ಮಾತನಾಡುವ ಆಳದ ಜ್ಞಾನವಿರುವ ವ್ಯಕ್ತಿ. ಆದ್ದರಿಂದಲೇ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದಾರೆ.

ಹೀಗಿದ್ದಾಗ ನಾವೆಲ್ಲಾ ಕಡೆಯ ಕ್ಷಣದ ಸಿದ್ಧತೆಯಲ್ಲಿದ್ದಾಗಲೇ ಸಿಎಂ ಇಬ್ರಾಹಿಂ ಅವರಿಂದ ಬಂತು ಕರೆ. ಮತ್ತೆ ಯಾರು ಬರುತ್ತಾರೆ. ಇವರೆಲ್ಲಾ ಬರುತ್ತಾರೆ ಎಂದಾಗಲೇ ಹೇ ಎಲ್ಲಾದರೂ ಉಂಟೇ ಈ ಚಿಲ್ಲರೆ ಜನರ ಜತೆ ನಾನು ಕುಳಿತುಕೊಳ್ಳುವುದೇ ಎಂಬ ಕೊಂಕು ನುಡಿ ಆ ಕಡೆಯಿಂದ. ತಕ್ಷಣವೇ ಶಿವರಾಜ್ ತಂಗಡಗಿ ಹೇಗಿದ್ರೂ 10 ನಿಮಿಷ ಲೇಟಾಗಿ ಬರುತ್ತೇನೆ ಎನ್ನುತ್ತಿದ್ದಾರೆ ಅವರಿಗೆ ಬೇಡ ಎಂದು ಹೇಳುತ್ತೇವೆ ಎಂದು ಹೇಳಿ ಬನ್ನಿ ಎಂದೆವು. ಪುಟ್ಟಸ್ವಾಮಿ ಅವರನ್ನು ಮತ್ತೊಂದು ಸ್ಟುಡಿಯೋದಲ್ಲಿ ಕುಳಿತುಕೊಳ್ಳುವಂತೆ ಮಾಡಿ, ದಿವಾಕರ್, ಇಬ್ರಾಹಿಂ ಇಬ್ಬರನ್ನೇ ಸ್ಟುಡಿಯೋದಲ್ಲಿ ಕುಳಿತುಕೊಳ್ಳುವಂತೆ ಮಾಡೋಣ ಎಂದು ನಿರ್ಣಯಿಸಿದೆವು. ಹೇಗಿದ್ದರೂ ದಿವಾಕರ್ ಕುಳಿತಿಕೊಂಡಿದ್ದಾರೆ. ಇಬ್ರಾಹಿಂ ಬಂದವರೆ ನೇರವಾಗಿ ಸ್ಟುಡಿಯೋಗೆ ಬರಲಿ ಎಂದು ನಾನೂ ಸಿದ್ಧವಾಗಿ ಕುಳಿತೆ. ಬ್ಲೇಸರ್ ಹಾಕಿ, ಈಪಿ ಸಿಕ್ಕಿಸಿ ಕುಳಿತೆ. ದಿವಾಕರ್ ಮಾತನಾಡಲು ಸಿದ್ಧಪಡಿಸಿಕೊಂಡಿರುವ ಟಿಪ್ಪಣಿಗಳ ಬಗ್ಗೆ ಕಾರ್ಯಕ್ರಮ ಆರಂಭಕ್ಕೆ ಮೊದಲು ಒಂದೆರಡು ವಿಷಯಗಳನ್ನು ಹಂಚಿಕೊಂಡರು. ಅಷ್ಟರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಪೋನೋದೊಂದಿಗೆ ಕಾರ್ಯಕ್ರಮ ಆರಂಭಿಸಲು ನಿರ್ಧರಿಸಿ ಪಿಸಿಆರ್ಗೆ ಅವರ ಪೋನ್ ನಂಬರ್ ನೀಡಿ ಸಿದ್ಧನಾದೆ. ಇಬ್ರಾಹಿಂ ಎಂಟ್ರಿಯಾಯಿತು, ಇನ್ನೇನು ಕಾರ್ಯಕ್ರಮ ಆರಂಭ ಮಾಡಬೇಕು ಎಂದು ಪಿಸಿಆರ್ನ ಆಜ್ಞೆಗಾಗಿ ಕಾದು ಕುಳಿತಿದ್ದ ನನಗೆ ಶಾಕ್ ಕಾದಿತ್ತು.
 
ಸ್ಟುಡಿಯೋ ಒಳಗೆ ಬಂದ ಇಬ್ರಾಹಿಂ ಸಾಹೇಬರು, ಕಿಟಕಿ ಗಾಜಿನಲ್ಲಿ ಇಣುಕಿ ನೋಡಿ ದಿವಾಕರ್ ಇರುವುದನ್ನು ಗಮನಿಸಿ ಅವರ ಪಕ್ಕದಲ್ಲಿ ನಾನು ಕುಳಿತುಕೊಳ್ಳುವುದಿಲ್ಲ ಎಂದು ಹೇಳಿ ಹಿಂದಕ್ಕೆ ನಡೆದರು. ಹಬೀಬ್ ದಂಡಿ ಕೈ ಸನ್ನೆ ಮಾಡಿ ನನ್ನನ್ನು ಹೊರಕರೆದರು. ನನಗೆ ಅರ್ಥವಾಯಿತು ವಿಷಯ. ಹಿಂದೆ ಇದೇ ರೀತಿ ಆರ್.ವಿ. ದೇಶಪಾಂಡೆ ಹೀಗೆಯೇ ಸ್ಟುಡಿಯೋದಲ್ಲಿ ಕುಳಿತಿದ್ದ ಇದೇ ಪುಟ್ಟಸ್ವಾಮಿ ಅವರನ್ನು ಹೊರಕಳುಹಿಸಿದ್ದರು. ಅನಂತರ ಅವರೊಬ್ಬರೆ ಮಾತನಾಡಿದ್ದರು. ನನಗೆ ವಿಷಯ ಅರ್ಥವಾಗುತ್ತಿದ್ದರಂತೆಯೇ ಇಬ್ರಾಹಿಂ  ಅವರನ್ನು ಹಿಂಬಾಲಿಸಿದೆ. ನಂತರ ಅವರನ್ನು ಮಾತನಾಡಿಸಿ ಛೇಂಬರ್ ಒಂದರಲ್ಲಿ ಕುಳಿತುಕೊಳ್ಳುವಂತೆ ಮಾಡಿ ಮನವೊಲಿಸಲು ಯತ್ನಿಸಿದೆ. ಏ ಈ ಚಿಲ್ಲರೆಗಳ ಜತೆ ನಾನು ಕುಳಿತುಕೊಳ್ಳುವುದೇ………. ನಾನೆಲ್ಲಿ ಆವರೆಲ್ಲಿ ಎಂದರು ಇಬ್ರಾಹಿಂ,…….ಅವರ ಪಕ್ಕದಲ್ಲಿ ಕುಳಿತ ಬೆನ್ನೆಲುಬು ಇಲ್ಲದ Journalist obba ಕಿಸಕ್ಕನೆ ನಕ್ಕ…..ಇಬ್ರಾಹಿಂ ಅಹಂ ಇನ್ನೂ ಹೆಚ್ಚಾಯಿತು……ಕಡೆಗೆ ದಿವಾಕರ್ ಅವರನ್ನು ಮತ್ತೊಂದು ಸ್ಟುಡಿಯೋದಲ್ಲಿ ಕೂರಿಸಲಾಗುವುದೆಂದು ತಿಳಿಸಿ ಮನವೊಲಿಸಲು ಯತ್ನಿಸಿದೆವು. ಆದರೆ ಅವರೂ ಒಪ್ಪಲಿಲ್ಲ. ಪುಟ್ಟಸ್ವಾಮಿ, ದಿವಾಕರ್ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಇಲ್ಲವಾದರೆ ನಾನು ಇನ್ನೊಮ್ಮೆ ಬರುತ್ತೇನೆ ಎಂದರು ಇಬ್ರಾಹಿಂ ಸಾಹೇಬರು.

ಕಡೆಗೆ ಒಲ್ಲದ ಮನಸ್ಸಿನಿಂದ ದಿವಾಕರ್ ಅವರಿಗೆ ಬೇರೆ ಸ್ಟುಡಿಯೋದಲ್ಲಿ ಕುಳಿತುಕೊಳ್ಳುವಂತೆ ವಿನಂತಿಸಲಾಯಿತು. ಸ್ವಾಭಿಮಾನಿ ದಿವಾಕರ್ ಒಪ್ಪಲಿಲ್ಲ. ನನಗೆ, ನನ್ನ ಪಕ್ಷಕ್ಕೆ ಮಾಡುವ ಅವಮಾನ ಇದು ಎಂದರು. ಅದು ನಿಜವೂ ಆಗಿತ್ತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಜತೆ ಕುಳಿತುಕೊಳ್ಳಲು ಇಬ್ರಾಹಿಂ ಸುತಾರಾಂ ಒಪ್ಪಲಿಲ್ಲ. ಬೇರೆ ಸ್ಟುಡಿಯೋದಲ್ಲಿ ಕುಳಿತುಕೊಂಡು ಲೈವ್ಗೆ ಬರಲು ದಿವಾಕರ್ ಸಿದ್ಧರಾಗಲಿಲ್ಲ. ಕಡೆಗೆ ಪ್ರೋಗ್ರಾಂ ಕ್ಯಾನ್ಸಲ್ ಮಾಡಿ ಎಂದರು ದಿವಾಕರ್. ಅದನ್ನು ಮಾಡಲು ನಾವು ಸಿದ್ಧರಿರಲಿಲ್ಲ.
ಕಡೆಗೆ ದಿವಾಕರ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ಹೊರನಡೆದರು. ಇಬ್ರಾಹಿಂ ಒಳಗೆ ಬಂದರು. ಕಾರ್ಯಕ್ರಮವನ್ನು 45 ನಿಮಿಷಗಳ ಕಾಲ ನಡೆಸಿದೆವು…………….

ಕಾರ್ಯಕ್ರಮದ ನಂತರ ನನ್ನ ಮನಸ್ಸು ಭಾರವಾಯಿತು. ಇಬ್ರಾಹಿಂ ವರ್ತನೆ, ರಾಜಕಾರಣಿಗಳ ಮನೋಧರ್ಮದ ಬಗ್ಗೆ ನನಗೆ ಜಿಗುಪ್ಸೆ ಉಂಟಾಯಿತು.

1) ಹೀಗೆಕೇ ಈ ರಾಜಕಾರಣಿಗಳು ಅನ್ನಿಸಿತು.
2) ದಿವಾಕರ್ ಅಸ್ಪೃಶ್ಯರೇ? ಸರಿಯಾಗಿ ಓದಿಕೊಂಡು ಸ್ಥಾನಮಾನಗಳನ್ನು ಪಡೆದ ದಿವಾಕರ್ಗೆ ಈ ಟ್ರೀಟ್ಮೆಂಟ್ ಆದರೆ ಸಾಮಾನ್ಯರ ಗತಿ ಏನು ಎನ್ನಿಸಿತು?
3) ವರ್ಷಕ್ಕೆ ಒಂದು ಕಾರ್ಯಕ್ರಮವಾದರೆ ಇಬ್ರಾಹಿಂರ ಲೆವೆಲ್ನ ರಾಜಕರಾಣಿಗಳನ್ನೇ ಹುಡುಕಿ ತರಬಹುದು. ಇಂದಿನ ರಾಜಕೀಯ ಸಂದಿಗ್ಧತೆಯಲ್ಲಿ ಪ್ರತಿದಿನ ಚಚರ್ಾ ಕಾರ್ಯಕ್ರಮಗಳಿರುತ್ತವೆ. ಪ್ರತಿಯೊಬ್ಬರೂ ಬ್ಯುಸಿಯಾಗಿರುತ್ತಾರೆ. ಐದಾರು ಚಾನೆಲ್ನವರು ಐದಾರು ಚಚರ್ೆ ಏರ್ಪಡಿಸಿರುತ್ತಾರೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ನಾಯಕರು ಬೇಕಾಗಿರುತ್ತಾರೆ. ಇಂಥಹ ಸಂದರ್ಭದಲ್ಲಿ ಈ ರಾಜಕಾರಣಿಗಳಿಗೆ ನಾವು ಸದಾ ಜೋಡಿಗಳನ್ನು ಹುಡುಕುವುದು ಹೇಗೆ?

4) ಜನತಂತ್ರ ವ್ಯವಸ್ಥೆಯಲ್ಲಿ ಪ್ರಧಾನಿಯ ಓಟು, ಸೋನಿಯಾ ಗಾಂಧಿ ಓಟು, ಇಬ್ರಾಹಿಂ ಓಟಿನ ಬೆಲೆಗೂ ಭಿಕ್ಷೆ ಬೇಡುವ ವ್ಯಕ್ತಿಯ ಓಟಿನ ಬೆಲೆಗೂ ಯಾವುದೇ ವ್ಯತ್ಯಸ ಇರುವುದಿಲ್ಲ. ಹೀಗಿದ್ದರೂ ಯಾವುದೇ ವಿದ್ಯಾರ್ಹತೆ ಇಲ್ಲದೆ ರಾಜಕಾರಣಕ್ಕೆ ಧುಮುಕಿ ಮಂತ್ರಿ, ಮುಖ್ಯಮಂತ್ರಿಗಲಾಗುವ ಜನಕ್ಕೆ ಇತರ ಸಾಮಾನ್ಯರನ್ನು ಕಂಡರೆ ತಾತ್ಸಾರ ಏಕೆ ಎನ್ನುವ ಪ್ರಶ್ನೆ ನನ್ನನ್ನು ಕಾಡಿತು.

5) ದಿವಾಕರ್ 24 ತಾಸಿನ ರಾಜಕಾರಣಿಯಾಗಿಲ್ಲದಿರಬಹುದು. ಆದರೆ ಅವರಿಗೊಂದು ಅಕಾದೆಮಿಕ್ ಕ್ವಾಲಿಫಿಕೇಷನ್ ಇದೆ. ಸಕರ್ಾರಕ್ಕೆ ಕಾನೂನು ಸಲಹೆ ಗಾರರಾಗಿದ್ದಾರೆ. ನಾವೇನು ಮುತ್ತಪ್ಪ ರೈ ಕರೆ ತಂದು ಪ್ರಜಾತಂತ್ರದ ಬಗ್ಗೆ ಚಚರ್ೆಯಲ್ಲಿ ಪಾಲ್ಗೊಳ್ಳಬೇಕೆಂದು ಇಬ್ರಾಹಿಂ ಅವರಿಗೆ ಕೇಳಿರಲಿಲ್ಲ. ಸಕರ್ಾರದ ಮುಂಚೂಣಿಯಲ್ಲಿದ್ದು ಒಳಹೊರಗನ್ನು ಬಲ್ಲ, ಮುಖ್ಯಮಂತ್ರಿಗೆ ಕಾನೂನಿನ ಬಗ್ಗೆ ಸಲಹೆ ನೀಡುವ ವ್ಯಕ್ತಿಯನ್ನು ಕರೆದು ನೇರ ಉತ್ತರ ಪಡೆಯಲು ಬಯಸಿದ್ದೆವು.

6) ಇಬ್ರಾಹಿಂ ಎತ್ತಿದ ಮುಖ್ಯನ್ಯಾಯಾಧೀಶರ ವರ್ತನೆ ಬಗ್ಗೆ ದಿವಾಕರ್ ಸಮರ್ಪಕವಾಗಿ ಉತ್ತರ ಕೊಡಬಲ್ಲವರಾಗಿದ್ದರು. ಹೀಗಿದ್ದರೂ ಇಬ್ರಾಹಿಂ ವರ್ತನೆ ಮನಸ್ಸನ್ನು ಕಸಿವಿಸಿಗೊಳಿಸಿತು.

7) ಚಚರ್ೆಯಲ್ಲಿ ಪಾಲ್ಗಳ್ಳಲು ತಮಗೆ ಬೇಕಾದವರಿಗೆ, ಮನೆ ಮಂದಿಗೆ ತಿಳಿಸಿ, ತಮ್ಮ ಸಹಾಯಕರೊಂದಿಗೆ ಸ್ಟುಡಿಯೋಗೆ ಆಗಮಿಸಿದ್ದ ದಿವಾಕರ್, ಯಾವುದೇ ಕಾರಣವಿಲ್ಲದೆ, ಅಂತಸ್ತಿನ ಮದಕ್ಕೆ ಸಿಕ್ಕಿದ ವ್ಯಕ್ತಿಯೊಬ್ಬರ ವರ್ತನೆಯಿಂದ ಹೊರಗೋಗಬೇಕಾದಾಗ ಮುಜುಗರ ಅನುಭವಿಸಿದ್ದಾರೆ. ಆ ಕ್ಷಣ ಅವರ ಮನಸ್ಸಿನಲ್ಲಾದ ಸಂಘರ್ಷಕ್ಕೆ, ಸಹಾಯಕರ ಮುಂದೆ ಸಣ್ಣವರಾಗಿ ಹೊರಹೋಗಬೇಕಾದ ಸಂದಿಗ್ಧಕ್ಕೆ ಸಿಕ್ಕಿ ಒದ್ದಾಡಿದ ದಿವಾಕರ್ ಬಳಿ ನಾನು ಕ್ಷಮೆಯಾಚಿಸುತ್ತೇನೆ.

8) ಇಬ್ರಾಹಿಂ ಅವರೇ ಇಂಥಹ ನಿಮ್ಮ ಮದವೇ ನಿಮ್ಮನ್ನು ಇಂದಿನ ಸ್ಥಿತಿಗೆ ನೂಕಲ್ಪಟ್ಟಿದೆ ಎಂಬುದನ್ನು ಮರೆಯದಿರಿ. ಯಾವ ನಾಯಕ ಒಬ್ಬ ಸಾಮಾನ್ಯನನ್ನು ಗೌರವಿಸುವುದಿಲ್ಲವೋ  ಅಲ್ಲಿನವರೆಗೆ ಆತ ಜನಮುಖಿಯಾಗಿ ಬದುಕಲು ಸಾಧ್ಯವಿಲ್ಲ ಎಂಬುದು ತಿಳಿದಿರಲಿ. ಜನತಂತ್ರದಲ್ಲಿ ಇಬ್ರಾಹಿಂರ ಓಟಿಗೇನೂ ಕೋಟಿ ಓಟುಗಳ ಬೆಲೆಯಿಲ್ಲ. ನಿಮ್ಮದೂ ಒಂದೇ ಓಟಿನ ಬೆಲೆ. ಹುಟ್ಟಿದಾಗಲೇ ನೀವೇನೂ ಕೇಂದ್ರದ ವಿಮಾನಯಾನ ಖಾತೆ ಸಚಿವರಾಗಿ ಹುಟ್ಟಿರಲಿಲ್ಲ. ನೀವು ಹಂತ ಹಂತವಾಗಿ ಬೆಳೆದು ಮೇಲಕ್ಕೆ ಹೋದವರೇ. ಹೀಗೆ ಮೇಲೆ ಹೋದವರು ಕೆಳಗಿನಿಂದ ಬೆಳೆಯುತ್ತಾ ಬರುವವರನ್ನು ಗೌರವಿಸುವುದು ಬೇಡ, ಒಬ್ಬ ಸಾಮಾನ್ಯನನ್ನು ಕಂಡಂತೆ ವತರ್ಿಸಿದ್ದರೆ ಸಾಕಿತ್ತು. ಮನುಷ್ಯ ದ್ವೇಷಿಯಂತೆ ವತರ್ಿಸಬಾರದಿತ್ತು. ವತರ್ೂರ್ ಪ್ರಕಾಶ್ ನಿಮ್ಮಂತೆ ವತರ್ಿಸಿದ್ದರೆ ನನಗೇನೂ ಬೇಸರ ಇರುತ್ತಿರಲಿಲ್ಲ. ಆದರೆ ನಿಮ್ಮಂಥಹ ಬಸವ, ಸರ್ವಜ್ಞ, ದಾಸರ ವಚನಗಳನ್ನು ಬಲ್ಲ ವ್ಯಕ್ತಿ ಹೀಗೆ ವತರ್ಿಸಿದ್ದು ನನಗೆ ಬೇಸರ ತಂದಿತ್ತು.
9) ಹಿಂದೆ ನಾನು ಸುವಣರ್ಾ ಚಾನೆಲ್ನಲ್ಲಿದ್ದಾಗ ಹೀಗೆಯೇ ಹಿರಿಯ ಪತ್ರಕರ್ತ ಭಾಸ್ಕರ್ ಹೆಗಡೆಯವರನ್ನು ಚಚರ್ಾ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದ್ದೆ. ಆಗಲೂ ಇದೇ ದೇಶಪಾಂಡೆಯವರು ಹೆಗಡೆ ಕುರಿತು ಇಂಥದ್ದೇ ಮಾತನಾಡಿದ್ದರು. ಆಗಲೂ ನನಗನ್ನಿಸಿದ್ದು ಸಂದರ್ಶನ ನೀಡಲು ಪತ್ರಕರ್ತ ಬೇಕು. ಆದರೆ ಚಚರ್ೆಗೆ ಮಾತ್ರ ಅವರು ಬೇಡ…..ಎಂಥಃ ಮನೋಧರ್ಮ……
10) ನಾವು ನಡೆಸುವುದು ಚಚರ್ೆ. ವಾದವಲ್ಲ. ಚಚೆಯಲ್ಲಿ ಅವರವರ ಅಭಿಪ್ರಾಯ ಹೇಳಬೇಕೆ ಹೊರತು, ಅವನು ಯಾರು, ಯಾವ ಜಾತಿ, ಅಂತಸ್ತು, ಹಿನ್ನಲೆ ಇವೆಲ್ಲಾ ಮುಖ್ಯ ಆಗುವುದಿಲ್ಲ. ನೀವು ಎನು ಮಾತನಾಡುತ್ತೀರ ಎನ್ನುವುದರ ಬಗ್ಗೆ ಜನ ನಿರ್ಣಯಿಸುತ್ತಾರೆ. ಮುಖ್ಯಮಂತ್ರಿಯೇ ಬಂದರೂ ಆತ ಸತ್ಯಕ್ಕೆ ದೂರವಾದ ಮಾತುಗಳನ್ನು ಹೇಳುತ್ತಿದ್ದಾನೆ ಎನ್ನಿಸಿದೊಡನೆ ವೀಕ್ಷಕ ಆತನ ಮಾತನ್ನು ಕೇಳದೇ ಚಾನೆಲ್ ಬದಾಯಿಸುತ್ತಾನೆ. ಒಂದು ತಿಳಿದಿರಲಿ ಒಬಾಮಾ, ಇಂದಿರಾ, ಮನ್ಮೋಹನ್, ವಾಜಪೇಯಿ, ದೇವೇಗೌಡ ಯಾರೂ ರಾತ್ರೋರಾತ್ರಿ ನಾಯಕರಾದವರಲ್ಲ. ಎಲ್ಲರೂ ಹಂತ ಹಂತವಾಗಿ ಬೆಳೆದು ಮೇಲಕ್ಕೆ ಬಂದವರೇ………ಆದ್ದರಿಂದ ನೀವು ಬೆಳೆದವರು, ಬೆಳೆಯುವವರನ್ನು ಕಂಡು ಎಂದಿಗೂ ಮೂಗೂ ಮುರಿಯಬೇಡಿ. ಕನಿಷ್ಠ ಅವರನ್ನು ಸಹಿಸದಿದ್ದರೆ ಪರವಾಗಿಲ್ಲ ಒಮ್ಮೆ ಅವರನ್ನು ಮಾತನಾಡಿಸಿ ಹೊರನಡೆದುಬಿಡಿ….ನೀವು ದೊಡ್ಡ ಮನುಷ್ಯರಾಗುತ್ತಿರಾ… ಇಲ್ಲವಾದರೆ ಬೇರೆಯವರ ದೃಷ್ಟಿಯಲ್ಲಿ ತುಂಬಾ ಸಣ್ಣವರಾಗುತ್ತೀರ. ಇದೇ ದಿವಾಕರ್, ಪುಟ್ಟಸ್ವಾಮಿ ನಾಳೆ ಎಂಎಲ್ಎ ಗಳಾದರೆ ನೀವೆ ಸಮ್ಮಿಶ್ರ ಸಕರ್ಾರದ ಮುಖ್ಯಮಂತ್ರಿಯಾಗಬೇಕಾದ ಪ್ರಸಂಗ ಬಂದರೆ ಇವರ ಜತೆ ಕುಳಿತುಕೊಳ್ಳುವುದಿಲ್ಲ. ಇವರ ಓಟು ನನಗೆ ಬೇಡ ಎನ್ನುತ್ತೀರಾ? ಆಗ ಇಂಥವರ ತೂಕ ಗೊತ್ತಾಗುತ್ತದೆ. ಅದೇ ಜನತಂತ್ರದ ಶಕ್ತಿ ಎಂಬುದನ್ನು ಮರೆಯದಿರಿ.

ರಾಜರಾರಣಿಗಳೇ ನಿಮಗೊಂದು ವಿಷಯ ತಿಳಿದಿರಲಿ. ಸಣ್ಣ ಮೀನು ದೊಡ್ಡ ಮೀನನ್ನು ತಿನ್ನುತ್ತದೆಯಂತೆ. ದೊಡ್ಡ ಮೀನನ್ನು ಮತ್ತೊಂದು ದೊಡ್ಡ ಮೀನು ನುಂಗುತ್ತದೆ ಗೊತ್ತಲ್ಲ. ಇವತ್ತು ದಿವಾಕರ್ ಜತೆ ಇಬ್ರಾಹಿಂ ಕುಳಿತುಕೊಳ್ಳುವುದಿಲ್ಲ ಎಂದರೆ ನಾಳೆ ಈಶ್ವರಪ್ಪ ಇದೇ ಇಬ್ರಾಹಿಂ ಜತೆ ಕುಳಿತುಕೊಳ್ಳುವುದಿಲ್ಲ ಎನ್ನುತ್ತಾರೆ. ಯಡಿಯೂರಪ್ಪನವರು, ಇಬ್ರಾಹಿಂ, ಡಿಕೆಶಿ ಎದುರು ಬರುವುದಿಲ್ಲ ಎನ್ನುತ್ತಾರೆ. ಉಗ್ರಪ್ಪನ ಎದುರು ಯಾರೂಬ್ಬರೂ ಬರುವುದಿಲ್ಲ ಎನ್ನುತ್ತಾರೆ. ಹೀಗೆ ಒಬ್ಬ ನಾಯಕ ಮತ್ತೊಬ್ಬ ನಾಯಕನನ್ನು ಮುಜುಗರಕ್ಕೆ ಈಡುಮಾಡಿದಾಗ ಅನುಭವಿಸುವ ತಳಮಳವನ್ನು ಅನುಭವಿಸಿದರೆ ಅವರಿಗವರಿಗೆ ಗೊತ್ತಾಗುತ್ತದೆ.

ಬರಾಕ್ ಒಮಾಬನಿಗೆ ಮನಹೋಹನ್ ಕೂಡ ಏನೂ ಅಲ್ಲ. ಮನ್ಮೋಹನ್ ಕೂಡ 187 ದೇಶದ ಪ್ರಧಾನಿಗಳಲ್ಲಿ ಒಬ್ಬ. ಭಾರತ 187 ದೇಶಗಳ ಬಡತನದ ಪಟ್ಟಿಯಲ್ಲಿ ಬಹಳ ಕೆಳಗೆ ಇದೇ ಎಂಬುದನ್ನು ಮರೆಯಬೇಡಿ. ಹಾಗಿದ್ದರೂ ಒಬಮಾ ಭಾರತಕ್ಕೆ ಬರುತ್ತಿದ್ದಾನೆ. ಬಡತನದಲ್ಲಿಯೇ ತನ್ನ ತನವನ್ನು ಭಾರತ ಉಳಿಸಿಕೊಂಡಿದೆ ಎಂಬುದನ್ನು ತಿಳಿದುಕೊಂಡು ಬರುತ್ತಿದ್ದಾನೆ ಆತ. ಬಡತನದ ನಡುವೆಯೂ ಭಾರತೀಯರ ಮಕ್ಕಳು ಅಮೆರಿಕನ್ನಿರಿಗಿಂತ ಬುದ್ಧಿವಂತರು. ಆರೋಗ್ಯ ಕ್ಷೇತ್ರದಲ್ಲಿ, ಐಡಿ, ಬಿಟಿಯಲ್ಲಿ ಭಾರತ ನಮಗಿಂತ ಮುಂದಿದೆ  ಎಂಬ ಸಣ್ಣ ಜ್ಞಾನ ಆತನಿಗಿದೆ. ಯಾರು ಈ ಶ್ರೇಣಿಕೃತ ಸಾಮಾಜಿಕ ಸ್ಯವಸ್ಥೆಯಲ್ಲಿ ತಲಾತಲಾಂತರಗಳಿಂದ ತುಳಿತಕ್ಕೆ, ದಮನಕ್ಕೆ ಒಳಗಾದವರ ಪರವಾಗಿ ಹೋರಾಡಿದ ಗಾಂಧಿ, ಅಂಬೇಡ್ಕರ್ ಹುಟ್ಟಿ ನಡೆದಾಡಿದ ನಾಡಿನಲ್ಲಿ ಬದುಕುತ್ತಿರುವ ರಾಜಕಾರಣಿಗಳೇ ಬಿಡಿ ನಿಮ್ಮ ದರ್ಪ. ಸಾಮಾನ್ಯರಾಗಿ ಬದುಕಿ ಮೊದಲು. ಆನಂತರ ನೀವು ಅಸಾಮಾನ್ಯ ಎಂಬುದನ್ನು ಸಾಮಾನ್ಯರು ಗುರುತಿಸುತ್ತಾನೆ. ನೀವೇ ಸ್ವಯಂ ಘೋಷಿತ ಅಸಾಮಾನ್ಯರಂತೆ ವತರ್ಿಸಿದರೆ ಜನತಂತ್ರದ ಹೊಡೆತಕ್ಕೆ ಸಿಕ್ಕಿ ನುಚ್ಚು ನೂರಾಗುತ್ತೀರಿ. ಎಚ್ಚರಿಕೆ……………

ಕಡೆಯದಾಗಿ ದಿವಾಕರ್ ಬಳಿ ಮತ್ತೊಮ್ಮೆ ನಾನು ಕ್ಷಮೆಯಾಚಿಸುತ್ತೇನೆ………………………………

Advertisements

5 ಟಿಪ್ಪಣಿಗಳು

 1. ಎಂತ ಹೊಲಸು ರಾಜಕಾರಣಿಗಳು. ಅಂತವರನ್ನ ಮತ್ತೆ ಮತ್ತೆ ಕರೆದು ಮಣೆ ಹಾಕುತ್ತೀರ ನೀವು. ಅವರನ್ನು ಇಗ್ನೋರ್ ಮಾಡಬೇಕು. ಆಗಲೇ ಅವರಿಗೆ ಬುದ್ದಿ ಬರೋದು.

  ಅಹಂಕಾರಕ್ಕೆ ಉದಾಸೀನವೇ ಮದ್ದು

 2. ಅಂತಹ ಕಾರ್ಯಕ್ರಮವನ್ನು ನೀವು ಕ್ಯಾನ್ಸಲ್ ಮಾಡಿದ್ದರೆ ಚೆನ್ನಾಗಿರ್ತಿತ್ತು ಅಥವಾ ಇಬ್ರಾಹಿಂ ವರ್ತನೆಯನ್ನು ಬ್ರೇಕಿಂಗ್ ನ್ಯೂಸ್ ನಲ್ಲಿ ಹಾಕಿದ್ರೆ ನಿಮ್ಮ ಚಾನಲ್ ಗೆ ಟಿಆರ್ಪಿ ಬರ್ತಿತ್ತು ನೋಡಿ. ಎಂತಾ ಚಾನ್ಸ್ ಮಿಸ್ ಮಾಡಿದ್ರಿ.. ಒಳ್ಳೇ ಅವಕಾಶ ಇತ್ತು. ಆದ್ರೆ ನಿಮ್ದು ಕಾಂಗ್ರೇಸ್ ಚಾನಲ್ ಅಂತ ಕೇಳ್ದೆ. ಸೋ ಈ ರೀತಿ ಡಿಸಿಷನ್ ತಗೊಂಡ್ರೆ ನಿಮ್ಮ ಕೆಲ್ಸಕ್ಕೆ ಕುತ್ತು ಬರತ್ತೆ.

  ಇನ್ನಾದ್ರು ಇಂತಹ ಚಿಲ್ರೆ ರಾಜಕಾರಣಿಗಳನ್ನ ಕರೀಬೇಡ್ರಿ. ದಿನಾ ಇಂತವರ ಮುಖ ನೋಡಿ ಬೇಜಾರಾಗಿದೆ. ಏನಾದ್ರು ಹೊಸತು ನೀಡಿ.. ಅದೇ ದೇವೇಗೌಡ, ಅವ್ರ ಮಕ್ಳು, ಸಿದ್ದು, ದೇಶ್ಪಾಂಡೆ, ಡಿಕೆಶಿ, ಯಡ್ಯೂರಪ್ಪ, ಚರ್ಚೆನಲ್ಲಿ ಏನೇನೋ ಅಸಂಬದ್ದ/ಇನ್ನೊಬ್ಬರಿಗೆ ಮಾತಾಡಲು ಅವಕಾಶ ಕೊಡದೇ ಕೂಗಾಡುವ ವೈಸ್ವಿ ದತ್ತ ಇವ್ರನ್ನೆಲ್ಲಾ ನೋಡಿ ನೋಡಿ ವಾಕರಿಕೆ ಬಂದಿದೆ.

  ಯಾರನ್ನೂ ನಂಬೋಕಾಗಲ್ಲ. ಎಲ್ಲರೂ ಒಂದೇ ದೋಣಿ ಕಳ್ಳರ ತರ ಕಾಣ್ತಾರೆ. ಎಲ್ಲರೂ ಸೂಟ್ಕೇಸ್ ಗೋಸ್ಕರನೇ ರಾಜಕೀಯಕ್ಕೆ ಬರೋರು (ಎಲ್ಲೋ ಒಂದಿಬ್ಬರು ಅಪವಾದ)

  ಎಲೆಮರೆಯ ಕಾಯಂತೆ ದೇಶ ಸೇವೆ ಮಾಡುವವರ ಕುರಿತು ಹೆಚ್ಚು ಪ್ರಚಾರ ನೀಡಿ. ಸಕಾರಾತ್ಮಕ ವಿಷಯಕ್ಕೆ ಮನ್ನಣೆ ಕೊಡಿ.

  ಜನ ಚೈಂಜ್ ಕೇಳ್ತಾಯಿದ್ದಾರೆ

 3. ಭೇಷ್!
  ಇಂಥ ಕೆಚ್ಚೆದೆಯ ಬರಹಗಾರರದೇ ಕೊರತೆ ಇದೆ ನಮ್ಮೀ ನಾಡಿನಲ್ಲಿ.
  ಆದರೂ, ರಾಜಕಾರಣಿಗಳ ಮಾತಿಗೆ ಒಪ್ಪಿಗೆ ನೀಡಿ ಅವರಿಗೆ ಬೇಕಾದ ರೀತಿಯಲ್ಲೇ ಕಾರ್ಯಕ್ರಮ ನಡೆಸಿ ಪೂರೈಸಿದ್ದು, ಅದೇಕೋ ಸರಿಬರಲಿಲ್ಲ. ನೀವೀಗ ಕ್ಷಮೆ ಯಾಚಿಸಿದರೂ, ಆ ರಾಜಕಾರಣಿಗಿಂತ ನಿಮ್ಮಿಂದಲೇ ಶ್ರೀ ದಿವಾಕರ್ ಅವರಿಗೆ ಅಪಮಾನ ಜಾಸ್ತಿ ಆಗಿದೆಯೇನೋ ಎಂದು ಅನಿಸುತ್ತಿದೆ ನನಗೆ.
  ಕಾರ್ಯಕ್ರಮವನ್ನೇ ರದ್ದು ಮಾಡುವ ಕೆಚ್ಚೆದೆ ತೋರಬೇಕಾಗಿದೆ.
  ಸಮಯವನ್ನು ತುಂಬಲು ಬದಲೀ ವ್ಯವಸ್ಥೆಯನ್ನು ಮೊದಲೇ ಮಾಡಿಕೊಂಡಿರಬೇಕಾಗುತ್ತದೆ.
  ಇಲ್ಲವಾದರೆ ಇಂಥ ಘಟನೆಗಳ, ನಡವಳಿಕೆಗಳ ಪುನರಾವರ್ತನೆ ಆಗುತ್ತಲೇ ಇರುತ್ತವೆ.


Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಅಕ್ಟೋಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಸೆಪ್ಟೆಂ   ನವೆಂ »
   12
  3456789
  10111213141516
  17181920212223
  24252627282930
  31  
 • ವಿಭಾಗಗಳು