ಕೆಪಿಸಿಸಿ ಅಧ್ಯಕ್ಷರಾಗಿ ಡಾ. ಜಿ. ಪರಮೇಶ್ವರ್ ನೇಮಕದ ಹಿಂದೆ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಕೆಲಸ ಮಾಡಿದ್ದಾರೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ

ಡೇಟ್: 26-10-2010

 ಬೆಂಗಳೂರು

ಆಂಕರ್: ಕೆಪಿಸಿಸಿ ಅಧ್ಯಕ್ಷರಾಗಿ ಡಾ. ಜಿ. ಪರಮೇಶ್ವರ್ ನೇಮಕದ ಹಿಂದೆ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಕೆಲಸ ಮಾಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ. ಪರಮೇಶ್ವರ್ರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ರಾಜ್ಯ ರಾಜಕೀಯದ ಮೇಲೆ ಕೃಷ್ಣ ಮತ್ತೊಮ್ಮೆ ಹಿಡಿತ ಸಾಧಿಸಲು ಹೊರಟಿದ್ದಾರೆಂದು ಹೇಳಲಾಗುತ್ತಿದೆ. ಫ್ಯಾಕೇಜ್ ಫಾಲೋಸ್………… ವಾಯ್ಸ್ ಓವರ್ 1: ನಾಯಕರ ಗುಂಪುಗಾರಿಕೆಯಿಂದ ಒಡೆದ ಮನೆಯಂತಾಗಿರುವ ಪ್ರದೇಶ ಕಾಂಗ್ರೆಸ್ ಪಕ್ಷವನ್ನು ನೂತನ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಗೆ ಮುನ್ನಡೆಸುತ್ತಾರೆ ಎಂಬುದೇ ಈಗ ರಾಜ್ಯ ರಾಜಕೀಯ ವಲಯದಲ್ಲಿ ಚಚರ್ೆಯಾಗುತ್ತಿರುವ ವಿಷಯ. ಯಾವುದೇ ವಿವಾದಗಳನ್ನು ಮೈಗಂಟಿಸಿಕೊಳ್ಳದ, ಸುಶಿಕ್ಷಿತ, ದೂರದಶರ್ಿತ್ವವಿರುವ ವ್ಯಕ್ತಿಯನ್ನು ಪ್ರದೇಶ ಕಾಂಗ್ರೆಸ್ ಗಾದಿಗೆ ತರುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಹೊಸ ಪ್ರಯೋಗಕ್ಕೆ ಚಾಲನೆ ನೀಡಿದೆ. ಕೇಂದ್ರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಲ್ಲಿಕಾಜರ್ುನ ಖಗರ್ೆ, ಕೆ.ಎಚ್. ಮುನಿಯಪ್ಪ ಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ವಿಧಾನಪರಿಷತ್ ಪ್ರತಿಪಕ್ಷದ ನಾಯಕಿ ಮೋಟಮ್ಮ ದಲಿತ ವರ್ಗಕ್ಕೆ ಸೇರಿದವರಾಗಿದ್ದಾರೆ. ಹೀಗಿದ್ದರೂ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಮತ್ತೊಬ್ಬ ದಲಿತರಿಗೆ ಅದರಲ್ಲೂ ಪರಿಶಿಷ್ಟ ಜಾತಿಯ ಬಲಗೈ ಪಂಗಡಕ್ಕೆ ಸೇರಿದ ನಾಯಕನಿಗೆ ನೀಡಿರುವುದು ಕೆಪಿಸಿಸಿ ಆಕಾಂಕ್ಷಿಗಳಾಗಿದ್ದವರಲ್ಲಿ ಆಶ್ವರ್ಯ ಉಂಟುಮಾಡಿದೆ. ಈ ನೇಮಕದ ಹಿಂದೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಕೆಲಸಮಾಡಿದ್ದಾರೆಂದು ಹೇಳಲಾಗುತ್ತಿದೆ. ಜೆಡಿಎಸ್ನ ವರಿಷ್ಠ ದೇವೇಗೌಡರೊಂದಿಗೆ ರಾಜೀಮಾಡಿಕೊಳ್ಳದ, ಯಾವುದೇ ವಿವಾದಗಳಿಗೆ ಸಿಕ್ಕದ, ಸುಶಿಕ್ಷಿತ ಜತೆಗೆ ಯುವ ನಾಯಕರಾಗಿರುವ ಡಾ. ಜಿ. ಪರಮೇಶ್ವರ್ ಹೆಸರನ್ನು ಎಸ್.ಎಂ. ಕೃಷ್ಣ ಅವರೇ ಸೂಚಿಸಿದ್ದರೆಂದು ಮೂಲಗಳು ತಿಳಿಸಿವೆ. ಆರ್.ವಿ. ದೇಶಪಾಂಡೆ ಅಧ್ಯಕ್ಷರಾದ ನಂತರ ರಾಜ್ಯ ರಾಜಕೀಯದಿಂದ ಬಹುದೂರ ಉಳಿದಿದ್ದ ಎಸ್.ಎಂ. ಕೃಷ್ಣ, ತಮಗೆ ನಿಷ್ಠರಾಗಿದ್ದ ಡಾ. ಜಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾದ ಮೇಲಾದರೂ ರಾಜ್ಯ ರಾಜಕೀಯದ ಕಡೆ ಇಣುಕಿ ನೋಡಲಿದ್ದಾರೆಯೇ? ಪರಮೇಶ್ವರ್ ಮೂಲಕ ಮತ್ತೊಮ್ಮೆ ಪ್ರದೇಶ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಬಾರಿ ಯಡಿಯೂರಪ್ಪನವರಿಗೆ ಸಡ್ಡು ಹೊಡೆಯಲು ಲಿಂಗಾಯಿತರೊಬ್ಬರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ ಎಂಬ ವದಂತಿಯ ನಡುವೆ ದಲಿತ ನಾಯಕರೊಬ್ಬರು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ನ ಈ ನಡೆ ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ದೂರವಾಗಿರುವ ಲಿಂಗಾಯಿತ ಸಮುದಾಯವನ್ನು ಮತ್ತಷ್ಟು ದೂರಮಾಡಲಿದೆಯಾ ಹೇಗೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಾಗಿದೆ. —ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಅಕ್ಟೋಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಸೆಪ್ಟೆಂ   ನವೆಂ »
   12
  3456789
  10111213141516
  17181920212223
  24252627282930
  31  
 • ವಿಭಾಗಗಳು