ಬರಾಕ್ ಒಬಾಮಾ ಭಾರತದಲ್ಲಿ…ಬಿಳಿಯರ ಕತ್ತಿ ಕರಿಯನ ಕೈಯಲ್ಲಿ!

ಬರಾಕ್ ಒಬಾಮಾ ಭಾರತದಲ್ಲಿ…
ಬಿಳಿಯರ ಕತ್ತಿ ಕರಿಯನ ಕೈಯಲ್ಲಿ!
 ಅಮೆರಿಕರದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬರುತ್ತಿದ್ದಾರೆ. ನವಂಬರ್ 6-9ರ ತನಕ ನಾಲ್ಕು ದಿನಗಳ ಕಾಲ ಅವರು ಭಾರತದ ವಿಬಿಧ ಭಾಗಗಳಲ್ಲಿ ಸಂಚರಿಸಲಿದ್ದಾರೆ. ಕಳೆದ ಒಂದು ವಾರದಿಂದ ಭಾರತದ ಎಲ್ಲಾ ಮಾಧ್ಯಮಗಳಲ್ಲೂ ಇದೇ ಸುದ್ದಿ. ಅವರ ಜೊತೆ 3000 ಜನ ಸಿಬ್ಬಂದಿ ಬರಲಿದ್ದಾರೆ. ಗಾಳಿಯನ್ನು ಬಿಟ್ಟರೆ ಮಿಕ್ಕೆಲ್ಲವನ್ನೂ ಅಮೆರಿಕದಿಂದಲೇ ಹೊತ್ತು ತಂದಿರುವ ಒಬಾಮಾನ ತಂಡ ಹೋದಲ್ಲೆಲ್ಲಾ ಭಾರತದ ಯಾವ ಸೋಂಕೂ ತಗುಲದಂತೆ ಎಚ್ಚರ ವಹಿಸಲಿದೆ. ಒಬಾಮಾ ಭಾರತದಲ್ಲಿ ಇರುವಷ್ಟು ಕಾಲ ಹೆಚ್ಚೂ ಕಡಿಮೆ ಭಾರತದ ಪೊಲೀಸು, ಸೈನ್ಯ ಅಮೆರಿಕದ ಅಧಿಕಾರಿಗಳ ಅಣತಿಗೆ ತಕ್ಕಂತೆ-ಇಲ್ಲವೆ ಸಲಹೆಗೆ ತಕ್ಕಂತೆ ನಡೆದುಕೊಳ್ಳಲಿವೆ. ಭಾರತದ ರಾಷ್ಟ್ರಪತಿ, ಪ್ರಧಾನಿಯನ್ನೂ ಒಳಗೊಂಡಂತೆ ಇಡೀ ಭಾರತದ ಪ್ರಭುತ್ವ, ಮಾಧ್ಯಮ ಅಮೆರಿಕದ ರಾಷ್ಟ್ರಪತಿಯ ಸುತ್ತಾ ಗಿರಕಿ ಹೊಡೆಯಲಿವೆ. ಅಂದರೆ ಹೆಚ್ಚು ಕಡಿಮೆ ಆ ನಾಲ್ಕು ದಿನಗಳು ಭಾರತದ ಅಕ್ಷರಶಃ ಅಮೆರಿಕದ 51ನೇ ಸಂಸ್ಥಾನವಾಗಲಿದೆ.
 ಕೃಷ್ಣ-ಕುಚೇಲರ ಭೇಟಿ:
 ಆದರೆ ಇದೇ ಭಾರತದ ಮಂತ್ರಿಗಳು ಅಮೆರಿಕಕ್ಕೆ ಹೋದರೆ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ತಪಾಸಣೆಗೊಳಗಾಗದೆ ಹೊರಬರುವಂತಿಲ್ಲ. ನಮ್ಮ ಪ್ರಧಾನಿಯೇ ಅಲ್ಲಿಗೆ ಭೇಟಿ ನೀಡಿದರೂ ಅಲ್ಲಿನ ಮಾಧ್ಯಮಗಳು ಒಳಪುಟದ ಮೂಲೆಯೊಂದರಲ್ಲಿ ವರದಿ ಮಾಡುತ್ತವೆಯೇ ವಿನಃ ಯಾವುದೇ ಸಕರ್ಾರವಾಗಲೀ, ಮಾಧ್ಯಮಗಳಾಗಲೀ ವಿಶೇಷ ಸ್ಥಾನಮಾನ ನೀಡುವುದಿಲ್ಲ. ಅಮೆರಿಕದ ಬಹುಸಂಕ್ಯಾತ ಜನರಿಗೆ ಭಾರತ ಎಲ್ಲಿದೆ ಎನ್ನುವುದೂ ಗೊತ್ತಿರುವುದಿಲ್ಲ. ಈ ವಾಸ್ತವಗಳೇ ಅಮೆರಿಕ ಮತ್ತು ಭಾರತದ ನಡುವೆ ಇರುವ ಅಸಮಾನ ಸಂಬಂಧಗಳನ್ನು ಎತ್ತಿ ತೋರಿಸುತ್ತದೆ.
 ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷರು ತಮ್ಮ ದೇಶಕ್ಕೆ ಭೇಟಿ ಕೊಡುವುದನ್ನು ಎಲ್ಲಾ ದೇಶಗಳು ತಮ್ಮ ಸೌಭಾಗ್ಯ ಎಂದೇ ಬಣ್ಣಿಸಿಕೊಳ್ಳುತ್ತವೆ. ಅದೇ ನಿಟ್ಟಿನಲ್ಲಿ ಭಾರತದ ಮಾಧ್ಯಮಗಳು ಒಬಾಮಾ ನಾಲ್ಕು ದಿನಗಳ ಕಾಲ ಭಾರತಕ್ಕೆ ಬೇಟಿ ನೀಡಿರುವುದು ಇಡೀ ಏಷಿಯಾ ದೇಶಗಳಲ್ಲೇ ಅತಿ ದೀರ್ಘವಾದ ಪ್ರವಾಸವೆಂದು ಬಣ್ಣಿಸುತ್ತಿವೆ. ಹೆಚ್ಚು ಕಡಿಮೆ ಕುಚೇಲನ ಮನೆಗೆ ಶ್ರೀ ಕೃಷ್ಣ ಬಂದಂತೆ ಸಂಭ್ರಮಿಸುತಿರುವ ಭಾರತದ ಸಂಸ್ಥೆಗಳು ಕೃಷ್ಣ ಸ್ನೇಹದ ಹೆಸರಲ್ಲಿ ಕುಚೇಲನ ಹತ್ತಿರ ಇದ್ದ ಅವಲಕ್ಕಿಯನ್ನೂ ತಿಂದು ಹೋದ ಎಂಬುದನ್ನು ಮರೆಮಾಚುತ್ತಿವೆ. ಅಮೆರಿಕ ಅಧ್ಯಕ್ಷರು ಭಾರತಕ್ಕೆ ನೀಡುತ್ತಿರುವ ಈ ಸುದೀರ್ಘ ಭೇಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ದಕ್ಕುತ್ತಿರ್ರುವ ಆಥರ್ಿಕ ಸೂಪರ್ ಪವರ್ ಸ್ಥಾನಕ್ಕೆ ಹೆಗ್ಗುರುತೆಂದು ಬಣ್ಣಿಸುತ್ತಿವೆ.
 ದೊಡ್ಡ ಪ್ರಜಾಪ್ರಭುತ್ವ-ಹಳೆಯ ಪ್ರಜಾಪ್ರಭುತ್ವವೆಂಬ ಲೊಳಲೊಟ್ಟೆ:
 ಇದಲ್ಲದೆ ಈ ಭೇಟಿಗೆ ಇನ್ನೂ ಎರದು ವಿಶೇಷಣಗಳೂ ಬೆರೆತುಕೊಂಡಿವೆ. ವಿಶ್ವದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವಗಳ ಸಹಜ ಸಂಗಮ ಎಂಬುದು ಅದರಲ್ಲಿ ಪ್ರಮುಖವಾದದ್ದು. ಅಮೆರಿಕವು ಅತ್ಯಂತ ಹಳೆಯ ಪ್ರಜಾತಂತ್ರವಾಗಿದ್ದರೂ ದೇಶದೊಳಗೆ ಅದು ಎಷ್ಟು ಪ್ರಜಾತಂತ್ರವಾಗಿ ನಡೆದುಕೊಂಡಿದೆಯೆಂಬುದನ್ನು ಪ್ರತಿ ಐವರಲ್ಲಿ ಇಬ್ಬರು ಬೀದಿಯಲ್ಲಿ, ಒಬ್ಬರು ಜೈಲಿನಲ್ಲಿ ಕೊಳೆಯುತ್ತಿರುವ ಅಮೆರಿಕನ್ ಕಪ್ಪು ಜನರನ್ನು ಕೇಳಬೇಕು, ಅಮೆರಿಕದ ದಮನಕಾರಿ  ನೀತಿಗಳನ್ನು ಪ್ರಜಾತಾಂತ್ರಿಕವಾಗಿ ವಿರೋಧಿಸಿದ್ದಕ್ಕಾಗಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಮುಮಿಯಾ ಅಬು ಜಮಾಲ್ರನ್ನು ಕೇಳಬೇಕು. ಸೆಪ್ತೆಂಬರ್ 11, 2001ರ ನಂತರ ಬದುಕುವುದೇ ದುಸ್ತರವಾಗಿರುವ ಅಮೆರಿಕಕ್ಕೆ ವಲಸೆ ಬಂದಿರುವ ಮೆಕ್ಸಿಕನ್ನರನ್ನು, ಏಷಿಯನ್ನರನ್ನೂ ಕೇಳಬೇಕು. ಇನ್ನೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕದ್ದು ಎಂಥಾ ನಾಗರಿಕತೆ ಎಂಬುದನ್ನು ಗುಂತಾನಾಮೋ ಜೈಲಿನಲ್ಲಿ ಊಹಿಸಲಸಾಧ್ಯ ಚಿತ್ರಹಿಂಸೆಗೆ ಗುರಿಯಾಗುತ್ತಿರುವ ಮುಗ್ಧ ಇರಾಕಿ ಖೈದಿಗಳನ್ನೂ, ಇರಾಕಿನ ಪ್ರಜೆಗಳನ್ನೂ, ಅಮೆರಿಕದ ಶಾಂತಿ ಬಾಂಬುಗಳಿಗೆ ಬಲಿಯಾಗುತ್ತಿರುವ ಅಫ್ಘಾನಿಸ್ತಾನದ ಕಂದಮ್ಮಗಳನ್ನೂ, ಹೈಟಿ, ಕೊಲಬಿಯಾ, ರುವಾಂಡಾ ಇನನಿತ್ಯಾದಿ 100 ಕ್ಕೂ ಹೆಚ್ಚು ಬಡದೇಶಗಳ ಜನರನ್ನು ಕೇಳಿದರೆ ಸಾಕು ಈ ಅತ್ಯಂತ ಹಳೆಯ ಪ್ರಜಾತಂತ್ರದ ಅಸಲಿ ಬಂಡವಾಳ ಗೊತ್ತಾಗುತ್ತದೆ. ಇನ್ನೂ ಅತಿ ದೊಡ್ಡ ಪ್ರಜಾತಂತ್ರವಾದ ಭಾರತದ ಕಥೆ ನಮಗೆಲ್ಲಾ ಗೊತ್ತಿರುವುದೇ. ನಮ್ಮ ದೊಡ್ಡತನ ಇರುವುದು ಜನಸಂಖ್ಯೆಯಲ್ಲಿ, ಅತಿ ಹೆಚ್ಚು ಬಡವರನ್ನು ಹೊಂದಿರುವುದರಲ್ಲಿ, ಅತಿ ಹೆಚ್ಚು ವೇಶ್ಯೆಯರು, ಅತಿ ಎಚ್ಚು ಬಾಲ ಕಾಮರ್ಿಕರು, ಬಡವ-ಶ್ರೀಮಂತರ ನಡುವಿನ ಅಸಮಾನತೆ ಹೆಚ್ಚುತ್ತಿರುವುದರಲ್ಲಿ, ದಲಿತ-ಮಹಿಳೆಯರ ಮೇಲೆ ಅರ್ಧ ಗಂಟೆಗೊಂದು ಅತ್ಯಾಚಾರ ಮಾಡುವುದರಲ್ಲಿ, ಬಂದೂಕಿನ ಮೊನೆಯಲ್ಲಿ ಚುನಾವಣೆ ನಡೆಸಿ ಪ್ರಜಾತಂತ್ರವೆಂದು ಬೀಗುವುದರಲ್ಲಿ ಈ ದೊಡ್ಡ ಪ್ರಜಾತಂತ್ರದ ದೊಡ್ಡತನವಿರುವುದು ಗೊತ್ತಿರುವ ವಿಷಯವೇ!
 ಒಬಾಮಾ ಚಂದಮಾಮನೇನಲ್ಲ!:
 ಇದಲ್ಲದೆ ಈ ಬಾರಿಯ ಅಮೆರಿಕದ ಅಧ್ಯಕ್ಷರ ಭೇಟಿಗೆ ಎರಡನೆಯ ಮತು ಅತಿಮುಖ್ಯವಾದ ಮತ್ತೊಂದು ಗ್ಲಾಮರ್ ಸೇರಿಕೊಂಡಿದೆ. ಅದು ಅಧ್ಯಕ್ಷ ಒಬಾಮಾರ ವ್ಯಕ್ತಿತ್ವ! ಅವರು ಅಮೆರಿಕದ ಅಧ್ಯಕ್ಷರಾದ ಪ್ರಪ್ರಥಮ ಕರಿಯ ಮುಸ್ಲಿಂ. ಅಮೆರಿಕ ಸಮಾಜದಲ್ಲಿ ಒಬ್ಬ ಕರಿಯ ಅದು ಮುಸ್ಲಿಂ ಬಿಳಿಯರ ಮತ್ತು ಕರಿಯರ ಇಬ್ಬರ ಓಟುಗಳನ್ನೂ ಪಡೆದು ಅಧ್ಯಕ್ಷನಾದದ್ದು ಸುಲಭದ ಸಂಗತಿಯಲ್ಲ. ವಾಸ್ತವವಾಗಿ ಓಬಾಮಾರವರು ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪಧರ್ಿಸಿದ ಕ್ಷಣದಿಂದ ಮಾಡಿದ ಪ್ರತಿಯೊಂದು ಭಾಷಣಗಳೂ ಅಮೆರಿಕನ್ ಜನರ ಉತ್ಸಾಹವನ್ನು, ಮಾನವೀಯತೆಯನ್ನು, ಶಾಂತಿ-ನೆಮ್ಮದಿಯ ಸಹಜೀವನದ ಆಶಯಗಳನ್ನು ಬಡಿದೆಬ್ಬಿಸುವಂತಿತ್ತು. ಘಜ ಅಚಿಟಿ ಆಠ ಣ ಎಂಬ ಓಬಾಮಾರ ಘೋಷ ವಾಕ್ಯ ಹೊಸ ಅಮೆರಿಕವನ್ನು ಕಟ್ಟಬಹುದೆಂಬ ಭರವಸೆಯನ್ನು ಬಿಳಿಯರು ಮತ್ತು ಕರಿಯರಿಬ್ಬರಲ್ಲೂ ಮೂಡಿಸಿತ್ತು. ಕರಿಯರು ಬಿಳಿಯರ ರೇಸಿಸ್ಟ್ ದುರಭಿಮಾನದಿಂದ ಪಟ್ಟ ಅಪಮಾನಗಳನ್ನು ತನ್ನ ಸ್ವಂತ ಅನುಭವಗಳಿಂದಲೂ ಬಣ್ಣಿಸುತ್ತಾ ಕರಿಯರ ಸ್ವಾಭಿಮಾನಕ್ಕೂ ಮತ್ತು ಬಿಳಿಯರ ಅಂತಃಕರಣಕ್ಕೂ ಏಕಕಾಲದಲ್ಲಿ ಅಪೀಲ್ ಮಾಡಿದ ಒಬಾಮಾ ಭಾಷಣದ ಪರಿ ಅನನ್ಯವಾದದ್ದು. ಆತನ ಹಲವು ಭಾಷಣಗಳನ್ನು ಈಗಲೂ ಅಮೆರಿಕದ ಇತಿಹಾಸದಲ್ಲಿ ಅದ್ಭುತ ಭಾಷಣಗಳನ್ನು ಮಾಡಿದ ಜಾಜರ್್ ವಾಷಿಂಗ್ಟನ್, ಕೆನಡಿ ಇನ್ನಿತ್ಯಾದಿಗಳ ಸಾಲಿನಲ್ಲಿಟ್ಟು ನೋಡಲಾಗುತ್ತದೆ. ಹೀಗೆ ಒಳ ವಿಬೇಧಗಳಿಂದ ಸಾಮಾಜಿಕ ನಿವರ್ಿರ್ಯತೆಯಿಂದ ಬಳಲುತ್ತಿದ್ದ ಅಮೆರಿಕಕ್ಕೆ ಹೊಸ ಚೇತನವನ್ನು ಮತ್ತು ಅಪಾರ ಭರವಸೆಗಳನ್ನು ಹುಟ್ಟಿಸುತ್ತಾ ಒಬಾಮಾ ಅಧ್ಯಕ್ಷರಾದರು.
ಇವೆಲ್ಲಾ ಇತಿಹಾಸ. ಅಧ್ಯಕ್ಷರಾದ ನಂತರವೂ ಶೇ.60ಕ್ಕಿಂತಲೂ ಹೆಚ್ಚಿದ್ದ  ಓಬಾಮರ ಜನಪ್ರಿಯತೆ ಈಗ ಶೇ.40ಕ್ಕಿಂತಲೂ ಕಡಿಮೆಯಾಗಿದೆ. ಕೇವಲ ಬಿಳಿಯರ ನಡುವೆ ಮಾತ್ರವಲ್ಲ. ಕರಿಯರ ನಡುವೆಯೂ ಒಬಾಮಾ ತಿರಸ್ಕರಿಸಲ್ಪಡುತ್ತಿದ್ದಾರೆ. ಈಗ ನಡೆಯಲಿರುವ ಅಮೆರಿಕದ ಸಂಸತ್ ಚುನಾವಣೆಯಲ್ಲಿ ಒಬಾಮಾನ ಡೆಮಾಕ್ರಟಿಕ ಪಕ್ಷಕ್ಕಿಂತ ರಿಪಬ್ಲಿಕನ್ ಪಕ್ಷವೇ ಬಹುಮತ ಪಡೆಯುವ ಸಾಧ್ಯತೆ ಗೋಚರಿಸುತ್ತಿದೆ. ಅದೇ ಸಮಯದಲ್ಲಿ ಅಮೆರಿಕವನ್ನು ನಿಜಕ್ಕೂ ಆಳವ ಕಾಪರ್ೊರೇಟ್ ಉದ್ಯಮಪತಿಗಳ ನಡುವೆ ಒಬಾಮಾನ ಬೆಂಬಲ ಹೆಚ್ಚಾಗುತ್ತದೆ.
ಈ ವಿರುದ್ಧ ಬೆಳವಣಿಗೆ ಸಹಜವೇ ಆಗಿದೆ. ಓಬಾಮಾನ ಭಾಷಣದ ಆಕರ್ಷಣೆ ಮತ್ತು ಆತ ಬಳಸುತಿದ್ದ ರೂಪಕಗಳ ಮಯಕದಲ್ಲಿ ಆತ ನಿಜಕ್ಕೂ ಪ್ರಸ್ತಾಪಿಸುತ್ತಿದ್ದ ಆಥರ್ಿಕ, ಮತ್ತು ವಿದೇಶಾಂಗ ನೀತಿಗಳ ಬಗ್ಗೆ ಹೆಚ್ಚಿನ ಚಚರ್ೆ ನಡೆಯಲೇ ಇಲ್ಲ. ಒಬಾಮ ನೀನು ಚಂದಮಾಮ ಎಂದೆಲ್ಲಾ ವಣರ್ಿಸುವವರು ಮಾಯಾಲೋಕದಲ್ಲಿ ಭ್ರಾಂತಿಗೊಳಗಾಗಲು ಸಿದ್ದರಿರುತ್ತಾರೆಯೇ ವಿನಃ ವಾಸ್ತವದ ಸತ್ಯಕ್ಕೆ ಮುಖಾಮುಖಿಯಾಗಲೂ ಹಿಂಜರಿಯುತ್ತಾರೆ. ಆದ್ದರಿಂದಲೇ ಆಗೆಲ್ಲಾ ಒಬಾಮಾನ ನಿಜವಾದ ರೂಪದ ಬಗ್ಗೆ ಪ್ರಶ್ನೆ ಎತ್ತಿದವರನ್ನೆಲ್ಲಾ ಸಿನಿಕರೆಂದು ಹೀಯಾಳಿಸಿ ದೂರಸರಿಸಿದ್ದರು.
ಮಾತು ಜನರದ್ದು-ನೀತಿ ಕಂಪನಿಗಳದ್ದು:
ವಾಸ್ತವವಾಗಿ ಒಬಾಮಾನ ಆಥರ್ಿಕ ನೀತಿಗಳು ಬುಷ್ನ ಆಥರ್ಿಕ ನೀತಿಗಳಿಂದ ಯಾವರೀತಿಯಿಂದಲೂ ಭಿನ್ನವಿಲ್ಲ. ಉದಾಹರಣೆಗೆ 2008ರಲ್ಲಿ ಹಲವು ಬೃಹತ್ ಬ್ಯಾಂಕುಗಳು ಲಾಭದ ದುರಾಸೆಯಿಂದಾಗಿ ಇಡೀ ಪ್ರಪಂಚದಲ್ಲಿ ಹಣಕಾಸು ಬಿಕ್ಕಟ್ಟನ್ನು ತಂದೊಡ್ಡಿದವು. ಜನರ ಹಣವನ್ನು ಸೂರೆ ಮಾಡಿ ಕೊನೆಗೆ ಕೈಯೆತ್ತಿದವು. ಬಿಕ್ಕಟ್ಟಿನಿಂದ ಹೊರಬರಲು ಎರಡು ದಾರಿಗಳಿದ್ದವು. ಬ್ಯಾಂಕುಗಳ ಮಾಡಿದ ಸುಲಿಗೆಗೆ ಪ್ರತಿಯಾಗಿ ಅವುಗಳ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಜನರಿಗೆ ಹಣ ಪಾವತಿಸುವುದು ಮತ್ತು ಮತ್ತೊಮ್ಮೆ ಈ ರೀತಿ ಬಿಕ್ಕಟ್ಟು ಸಂಭವಿಸದಂತೆ ಹಣಕಾಸು ಕ್ಷೇತ್ರದ ಉದಾರೀಕರಣಕ್ಕೆ ಬ್ರೇಕ್ ಹಾಕುವುದು. ಎರಡನೆಯದು, ರಿಪಬ್ಲಿಕನ್ ಪಕ್ಷ ಹೇಳಿದ್ದು ಸಾರ್ವಜನಿಕ ಹಣದಿಂದ ಈ ಬ್ಯಾಂಕುಗಳು ಮಾಡಿದ ನಷ್ಟವನ್ನು ಭರಿಸಿ ಮತ್ತೆ ಅವನ್ನು ವ್ಯವಹಾರ ನಿರ್ವಹಿಸುವಂತೆ ಮಾಡುವುದು. ಅಥರ್ಾತ್ ಈ ದುರಾಸೆಯ ಬ್ಯಾಂಕರ್ಗಳು ಮಾಡಿದ ನಷ್ಟಕ್ಕೆ ಸಾಮಾನ್ಯ ಜನರನ್ನು ಇನ್ನಷ್ಟು ಬಲಿಪಶು ಮಾಡುವುದು. ಒಬಾಮಾ ಆಡಿದ ಮಾತುಗಳೆಲ್ಲಾ ಮೊದಲ ರೀತಿಯದ್ದು. ತೆಗೆದುಕೊಂಡ ಕ್ರಮಗಳೆಲ್ಲಾ ಎರಡನೆಯ ರೀತಿಯದ್ದು! ಅಂದರೆ ಸಮುದ್ರ ಮಥನವಾದ ನಂತರ ಮೋಹಿನಿ ಅಮೃತ ಹಂಚುವಾಗ ಅನುಸರಿಸಿದ ತಂತ್ರ. ಅಸುರರಿಗೆ ತನ್ನ ಬೆಡಗಿನ ಬಿನ್ನಾಣ ತೋರಿ ಅವರು ಮೋಹಿನಿಯ ಸೌಂದರ್ಯದ ಆಕರ್ಷಣೆಯಿಂದ ಹೊರಬರುವಷ್ಟರಲ್ಲಿ ಅಮೃತವನ್ನೆಲ್ಲಾ ಸುರರಿಗೆ ಉಣಬಡಿಸಿದಂತೆ ಒಬಾಮಾ ತನ್ನ ಮಾತಿನ ಮೋಡಿಯಿಂದ ಜನರು ಹೊರಬರುವಷ್ಟರಲ್ಲಿ ಕಾಪರ್ೊರೇಟ್ ಧಣಿಗಳ ಪರವಾದ ನೀತಿಗಳನ್ನು ಜಾರಿ ಮಾಡಿಯಾಗಿತ್ತು. ಈಗ ಅದರ ಶಾಖವು ಸಾಮಾನ್ಯರಿಗೆ ತಟ್ಟುತ್ತಿರುವುದರಿಂದಲೇ ಒಬಾಮಾನ ಜನಪ್ರಿಯತೆಯೂ ಕುಸಿಯುತ್ತಿದೆ.
ಅದೇ ರೀತಿ ಅಂತರಾಷ್ಟ್ರಿಯ ಮಟ್ಟದಲೂ ಶಾಂತಿ ನೆಲಸಲು ತನ್ನೆಲ್ಲಾ ಪ್ರಯತ್ನ ಮಾಡುವುದಾಗಿಯೂ, ಎಲ್ಲಾ ಗಲಭೆ ಮತ್ತು ಯುದ್ಧ ಪೀಡಿತ ಪ್ರಾಂತ್ಯಗಳಲ್ಲೂ ಹೊಸಬಗೆಯ ಶಾಂತಿ ಸಂಧಾನವನ್ನೂ ಪ್ರಾರಂಭಿಸುವ ಭರವಸೆಯನ್ನೂ ಒಬಾಮಾ ನೀಡಿದ್ದರು. ಆದರೆ 2008ರಲ್ಲಿ ಅವರು ಮಾಡಿದ ಮಧ್ಯಪ್ರಾಚ್ಯ ಪ್ರವಾಸ ಈ ಎಲ್ಲಾ ನಿರೀಕ್ಷೆಗಳಿಗೂ ತಣ್ಣೀರೆರೆಚಿತು. ಅವರು ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಸಂಘರ್ಶದಲ್ಲಿ ಇಸ್ರೇಲ್ ನಡೆಸುತ್ತಿರುವ ಪ್ರಭುತ್ವ ಭಯೋತ್ಪಾದನೆಯನ್ನು ದೇಶ ಸುರಕ್ಷಾ ಕ್ರಮವೆಂದೂ ಮತ್ತು ಪ್ಯಾಲೆಸ್ತೀನಿಯರು ತಮ್ಮ ಸ್ವಾತಂತ್ರ್ಯಕ್ಕಾಗಿ ನಡೆಸುತ್ತಿರುವ ಸಶಸ್ತ್ರ ಹೋರಾಟವನ್ನೂ ಭಯೋತ್ಪಾದನೆಯೆಂದೇ ಬಣ್ಣಿಸಿದರು. ಪ್ಯೇಲೆಸ್ತೀನ್ ಮತ್ತು ಇಸ್ರೇಲ್ ಎಂಬ ಎರಡು ರಾಷ್ಟ್ರಗಳ ನಿಮರ್ಾಣವೇ ಈ ಸಂಘರ್ಷಕ್ಕೆ ಶಾಶ್ವತ ಪರಿಹಾರವೆಂದು ಬಾಯಿಮಾತಿನಲ್ಲಿ ಹೇಳಿದರೂ ಇಸ್ರೇಲ್ಗೆ ಏಕಪಕ್ಷೀಯ ಬೆಂಬಲನೀಡುವುದನ್ನೇನೂ ನಿಲ್ಲಿಸಲಿಲ್ಲ. ಅದೇ ರೀತಿ ಇರಾಕಿನಿಂದ ಸಾಕಷ್ಟು ಸೈನ್ಯ ಹಿಂತೆಗೆದುಕೊಂಡಿದ್ದರೂ ಅಲ್ಲಿನ ಸಕರ್ಾರ ತನ್ನ ಅಣತಿಗೆ ತಕ್ಕಂತೆ ನಡೆಯುವಂತೆ ಮಾಡುವಷ್ಟು ಸೈನ್ಯವನ್ನು ಮತ್ತು ಅಧಿಕಾರದಲ್ಲಿ ತನ್ನ ಏಜೆಂಟರನೂ ಸ್ಥಾಪಿಸಿ ಇರಾಕೀ ಜನರ ಸ್ವಾತಂತ್ರ್ಯ ಆಕಾಂಕ್ಷೆಗೆ ತಣ್ಣೀರೆರೆಚಿದೆ. ಗುಟನಾಮೋ ಖೈದಿಗಳ ಚಿತಹಿಂಸಾ ಶಿಬಿರವನ್ನು ಇನ್ನಿದುವರೆಗೂ ಸಂಪೂರ್ಣ ಮುಚ್ಚಿಲ್ಲ. ಇದಲ್ಲದೆ ವಿಶ್ವದ ಇತರೆಡೆ ಇರುವ ಇನ್ನಿತರ ಯಾವುದೇ ಗುಪ್ತ ಚಿತ್ರಹಿಂಸಾ ಶಿಬಿರಗಳನ್ನು ಮುಚ್ಚುವ ಯೋಚನೆ ತಮಗಿಲ್ಲವೆಂದೂ ತುಂಬಾ ಸ್ಪಷ್ಟವಾದ ಮಾತಿನಲ್ಲಿ ಒಬಾಮಾ ಹೇಳಿದ್ದಾರೆ. ಇದಲದೆ ಅಧ್ಯಕ್ಷೀಯ ಪ್ರಚಾರದಲ್ಲಿ ಅಫ್ಘನಾಸಿತಾನದಿಂದ ಸೈನ್ಯವನ್ನು ವಾಪಸ್ ತೆಗೆದುಕೊಳ್ಳುವ ಮಾತುಗಳನ್ನಾಡಿದ್ದರೂ ಇನ್ನೂ 17,000 ಅಧಿಕ ಸೈನಿಕರನ್ನು ಕಳಿಸಿದ್ದು ಇದೇ ಶಾಂತಿ ಪಕ್ಷಿ ಒಬಾಮನೇ! ಈಗ ಒಂದು ಲೆಕ್ಕಾಚಾರದ ಪ್ರಕಾರ 2001ರಿಂದ ಅಫ್ಘನ್ನಲ್ಲಿ ಒಟ್ಟು 35 ಲಕ್ಷ ಜನರು ಸಾವನ್ನಪ್ಪಿದ್ದಾರೆಂದು ಅಂದಾಜುಮಾಡಲಾಗಿದೆ. ಈ ಮಾರಣಹೋಮಕ್ಕೆ ಒಬಾಮಾನೇ ನೇರವಾದ ಹೊಣೆ.
ಇನ್ನು ಈ ಭೂಗ್ರಹವನ್ನು ಬಂಡವಾಳಶಾಹಿ ಆಕ್ರಮಣದಿಂದ ಉಳಿಸಲು ನಡೆದ ಕೋಪನ್ಹೇಗನ್ ಸಮ್ಮೇಳನದಲ್ಲಿ ಒಬಾಮಾ ನೇತ್ರೂತ್ವದ ಅಮೆರಿಕ ಅಮೆರಿಕದ ಕಾಪರ್ೊರೇಟ್ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಭೂ ಗ್ರಹವನ್ನು ಉಳಿಸಲು ನಡೆದ ಪ್ರಯತ್ನವನ್ನೇ ಹಾಳು ಮಾಡಿತು. ಅದೇ ರೀತಿ ಒಬಾಮಾ ಅಧಿಕಾರಕ್ಕೆ ಬಂದಾಗಿನಿಂದ ನಡೆದ ಎಲ್ಲಾ ಶ್ರೀಮಂತ ರಾಷ್ಟ್ರಗಳ ಸಮ್ಮೇಳನದಲ್ಲೂ ಬಡವರ ಹಿತರಕ್ಷಣೆಯ ಮಾತನಾಡುತ್ತಲೇ ಒಬಾಮಾ ನೇತೃತ್ವದ ಅಮೆರಿಕ ಬಡರಾಷ್ಟ್ರಗಳ ಸಂಪನ್ಮೂಲಗಳನ್ನು ಸುಲಿಯುವ ಮತ್ತು ತನ್ನ ದೇಶದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಹುನ್ನಾರಗಳನ್ನೇ ನಡೆಸುತ್ತಾ ಬಂದಿದೆ. ಇತ್ತೀಚೆಗೆ ನಡೆದ ವಿಶ್ವ ವಾಣಿಜ್ಯ ಸಂಸ್ಥೆಯ ಸಮ್ಧಾನಗಳು ವಫಲವಾಗಲು ಒಬಾಮಾನ ಅಮೆರಿಕ ಬಡದೇಶಗಳ ಹಿತಕ್ಕೆ ಪ್ರತಿಯಾಗಿ ಅಮೆರಿಕನ್ ಉದ್ಯಮಪತಿಗಳ ಹಿತರಕ್ಷಣೆಗೆ ನಿಂತಿದ್ದೇ ಇದಕ್ಕೆ ಕಾರಣವಾಗಿದೆ. ಹೀಗೆ ಬಡದೇಶಗಳ ಬವಣೆಗೆ ಮತ್ತು ಭೂಗ್ರಹದ ಆತಂಕಕ್ಕೆ ನೇರವಾಗಿ ಕಾರಣವಾದ ಅಮೆರಿಕ ಸಾಮ್ರಾಜ್ಯಶಾಹಿಯ ಸಾಮ್ರಾಜ್ಯಶಾಹಿ ನೀತಿಗಳು ಒಬಾಮಾನ ಕಾಲದಲ್ಲೂ ನಿರಾತಂಕವಾಗಿ ಮತ್ತು ಇನ್ನಷ್ಟು ಕ್ರೂರವಾಗಿಯೇ ಸಾಗುತ್ತಿದೆ. ಆದರೆ ಆ ಕ್ರೌರ್ಯಕ್ಕೆ ಒಬಾಮಾನ ಮೋಡಿಮಾಡುವ ಸಿಹಿಯಾದ ಶಾಂತಿಮತ್ತು ಸಾಮಾಜಿಕ ನ್ಯಾಯದ ಮಾತುಗಳ ಲೇಪನ ಮಾಡಲಾಗಿದೆ ಅಷ್ಟೆ! ಇದರಲ್ಲಿ ರಿಪಬ್ಲಿಕನ್ ಪಕ್ಷಕ್ಕಾಗಲೀ, ಡೆಮಾಕ್ರಟಿಕ ಪಕ್ಷಕ್ಕಾಗಲೀ ಯಾವುದೇ ದೊಡ್ಡ ವ್ಯತ್ಯಾಸವಿಲ್ಲ. ಒಬಾಮಾನಿಗೂ ಮತ್ತು ಬುಷ್ಗೂ ಸಾರಾಂಶದಲ್ಲಿ ದೊಡ್ಡ ವ್ಯತ್ಯಾಸವಿಲ್ಲ. ವಿಶ್ವವನ್ನೇ ಲೂಟಿ ಹೊಡೆಯುವ ಕಾಪರ್ೊರೇಟ್ ಖಡ್ಗವನ್ನು ಜನತೆಯ ವಿರುದ್ಧ ಝಳಪಿಸುವ ಹಿರಿಮೆ ಈಗ ಬಿಳಿಯನ ಬದಲಿ ಕರಿಯನಿಗೆ ದಕ್ಕಿದೆ. ಇದನ್ನೇ ಕ್ರಾಂತಿ ಎನ್ನುವವರು ಎಂಥಾ ಬ್ರಾಂತಿಯಲ್ಲಿದರು ಎನ್ನುವುದು ಒಬಾಮಾನ ಕಳೆದ ಮೂರು ವರ್ಷದ ಆಡಳಿತ ಸಾಬೀತು ಪಡಿಸಿದೆ.
ಆದ್ದರಿಂದಲೇ ಬನರ್ಾಡ್ ಶಾಗೆ ಒಮ್ಮೆ ಒಬ್ಬರು ರಷ್ಯಾ ಒಂದೇ ಪಕ್ಷದ ಆಡಳಿತವಿರುದ ಸವರ್ಾಧಿಕಾರ ರಾಷ್ಟ್ರ ಆದರೆ ಅಮೆರಿಕ ಹಾಗಲ್ಲ ಅಲ್ಲವೇ ಎಂದು ಕೇಳಿದಾಗ ಅವರು ಅಮೆರಿಕವೂ ಒಂದೇ ಪಕ್ಷವುಳ್ಳ ಸವರ್ಾಧಿಕಾರಿ ರಾಷ್ಟ್ರವೇ, ಆದರೆ ಪಕ್ಕಾ ಅಮೆರಿಕನ್ ಶೈಲಿಯಲ್ಲಿ ಇನ್ನೊಂದು ಎಕ್ಟ್ರಾ ಪಕ್ಷವನ್ನು ಹೊಂದಿದೆಯಷ್ಟೆ ಎಂದರಂತೆ. ಅಂದರೆ ಸಾರಾಂಶದಲ್ಲಿ ಅಮೆರಿಕದ ರಿಪಬ್ಲಿಕನ್ ಪಕ್ಷಕ್ಕೂ ಡೆಮಾಕ್ರಟಿಕ್ ಪಕ್ಷಕ್ಕೂ ಯಾವುದೇ ವ್ಯತ್ಯಾಸವಿಲ್ಲವೆಂಬುದೇ ಇದರರ್ಥ!
ಭಾರತದ ಭೇಟಿಯ ಹಿಂದಿನ ನೈಜ ಮತ್ತು ಹಿಡನ್ ಅಜೆಂಡಾಗಳು:
ಈಗ ಭಾರತಕ್ಕೆ ಭೇಟಿ ಕೋಡುತ್ತಿರುವುದರ ಹಿಂದೆಯೂ ಒಬಾಮಾನ ಅಮೆರಿಕಕ್ಕೆ ಕೆಲವು ಸ್ಪಷ್ಟ ಸಾಮ್ರಾಜ್ಯಶಾಹಿ ಉದ್ದೇಶಗಳಿವೆ. ಅವು ಪ್ರಧಾನವಾಗಿ ಅಮೆರಿಕದ ಆಥರ್ಿಕ ಮತ್ತು ವ್ಯೂಹಾತ್ಮಕ ಆಸಕ್ತಿಗಳನ್ನು ಹೊಂದಿದೆ. ಭಾರತದ ನೀತಿಗಳನ್ನು ತನ್ನ ಹಿತಾಸಕ್ತಿಗಳಿಗೆ ತಕ್ಕನಾಗಿ ಬಗ್ಗಿಸುವುದೇ ಈ ಭೇಟಿಯ ಹಿಂದಿನ ನಿಜವಾದ ಉದ್ದೆಶವಾಗಿದೆ. ಅದಕ್ಕಾಗಿಯೇ ಒಬಾಮನ ಜೊತೆಗೆ ಅಮೆರಿಕದ 200 ಬೃಹತ್ ಉದ್ಯಮಿಗಳು ಮತ್ತು 300ಕೂಹೆಚ್ಚು ಮಿಲಿಟರಿ ತಜ್ನರು ಮತ್ತು ಅಧಿಕಾರಿಗಳು ಬರುತ್ತಿದ್ದಾರೆ.
ಆಥರ್ಿಕ ಗುಲಾಮಗಿರಿ ಹೆಚ್ಚಿಸುವ ಹೊಸ ಒಪ್ಪಂದಗಳು:
ಮೊದಲನೆಯದಾಗಿ ಆಥರ್ಿಕ ಕ್ಷೇತ್ರದಲ್ಲಿ ಈಗಾಗಲೇ ಭಾರತದ ಇಡೀ ಆಥರ್ಿಕತೆಯನ್ನು ಅಮೆರಿಕದ ಬಹುರಾಷ್ಟ್ರೀಯ ಕಮ್ಪನಿಗಳಿಗೆ ತೆರೆದಿಡಲಾಗಿದೆ. 2005ರಲ್ಲಿ ಅಮೆರಿಕಕ್ಕೆ ಆಗಲೂ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಬೇಟಿ ನೀಡಿದಾಗಲೇ ಭಾರತ-ಅಮೆರಿಕ ವ್ಯೂಹಾತ್ಮಕ ಒಪ್ಪಂದ ನೀತಿಗೆ ಸಹಿ ಹಾಕಲಾಗಿತ್ತು. ಅದರ ಪ್ರಕಾರ ಭಾರತದ ಎಲ್ಲಾ ಆಥರ್ಿಕ ಮತ್ತು ವ್ಯೂಹಾತ್ಮಕ ನಡೆಗಳನ್ನು ಅಮೆರಿಕದ ಒಪ್ಪಿಗೆಯ ಮೇರೆಗೆ ಇಡಲು ಸ್ವತಂತ್ರ ಭಾರತ ಒಪ್ಪಿಗೆ ನೀಡಿತು. ಅದರ ಭಾಗವಾಗಿಯೇ ಭಾರತ ಮತ್ತು ಅಮೆರಿಕಗಳ ಬೃಹತ್ ಉದ್ದಿಮೆಪತಿಗಳ ಜಂಟಿ ಕೂಟವಾದ ಗಖ-ಟಿಜಚಿ ಅಇಔ ಈಠಡಿಣಟ ಕೂಡಾ ಅಸ್ತಿತ್ವಕ್ಕೆ ಬಂದಿತು. ಅದರ ಭಾಗವಾಗಿ ಅಮೆರಿಕದ ಮಾರುಕಟ್ಟೆ ಮತ್ತು ಭಾರತದ ಮಾರುಕಟ್ಟೆಯನ್ನು ಪರಸ್ಪರ ಮುಕ್ತಗೊಳಿಸಿಕೊಳ್ಳುವುದು ಅದರ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲೇ ಅಮೆರಿಕದ ಅಣುಶಕ್ತಿ ಕಂಪನಿಗಳಿಗೆ ಭಾರತದ ಮಾರುಕಟ್ಟೆಯನ್ನು ತೆರೆದಿಡಲು ಭಾರತ ನಾಗರಿಕ ಅಣುಶಕ್ತಿ ಮಸೂದೆಯನ್ನು ಜಾರಿಗೆ ತರಲಾಯಿತು. ಅದು ಸಂಪೂರ್ಣವಾಗಿ ಅಮೆರಿಕನ್ ಕಂಪನಿಗಳ ಹಿತಕಾಯುವಂತಿರುವುದನ್ನು ನಾಗರಿಕ ಅಣುಶಕ್ತಿ ಅವಘಡ ಹೊಣೆಗಾರಿಕೆ ಮಸೂದೆ ಯ (ಅತಟ ಟಿಣಛಿಟಜಚಿಡಿ ಟಚಿಛಟಣಥಿ ಛಟಟ) ಚಚರ್ೆಯಲ್ಲಿ ಸ್ಪಷ್ಟವಾಗಿ ಹೊರಬಂದಿತ್ತು. ಅದರ ಪ್ರಕಾರ ಒಂದು ವೇಳೆ ಅಣುಸ್ಥಾವರಗಳಲ್ಲಿ ಅವಘಡ ಸಂಭವಿಸಿದರೂ ಅದರ ಹೊಣೆಗಾರಿಕೆ ಅಮೆರಿಕನ್ ಕಂಪನಿಗಳದ್ದಲವೆಂಬುದು ಮತ್ತು 300 ಕೋಟಿಗಿಂತ ಹೆಚ್ಚಿನ ಪರಿಹಾರವನ್ನು ಕೇಳದಂತೆ ಮಾಡುವ ಕಾಯ್ದೆಯದು. ಒಂದು ಸ್ವತಂತ್ರ ದೇಶ ಇಂಥಾ ಸಾಮ್ರಾಜ್ಯಶಾಹಿ ಆಸಕ್ತಿಯನ್ನು ರಕ್ಷಿಸುವ ಕಾಯ್ದೆಯನ್ನು ಮಾಡಬಹುದು ಎಂದು ಊಹಿಸಲಾದರೂ ಸಾಧ್ಯವೇ? ಆದರೂ ಅಮೆರಿಕದೊಡನೆ ವ್ಯೂಹಾತ್ಮಕ ಮೈತ್ರಿ ಮಾಡಿಕೊಂಡಿರುವುದರಿಂದ ಇಂಥಾ ಕಾನೂನು ಜಾರಿಗೆಬರುತ್ತಿದೆ. ಸದನದಲ್ಲಿ ಗದ್ದಲವೆದ್ದರಿಂದ ಹಾಲಿ ಈ ಮಸೂದೆ ಕಾನೂನಾಗಿಲ್ಲ. ಆದರೆ ಒಬಾಮಾರವರ ಭೇಟಿಯ ಹಿಂದೆ ಭಾರತವನ್ನು ಈ ಕಾಯ್ದೆ ಜಾರಿಗೆ ತರಲುಮಣಿಸುವ ಉದ್ದೇಶವಿದೆ. ಈಕಾಯಿದೆ ಜಾರಿಗೆ ಬಂದರೂ ಭಾರತವು ಅಮೆರಿಕ ತರಬಯಸಿರುವ ಅಠಟಿತಜಟಿಣಠಟಿ ಠಟಿ ಖಣಠಿಠಿಟಜಟಜಟಿಣಚಿಡಿಥಿ ಅಠಟಠಿಜಟಿಚಿಣಠಟಿ ಜಿಠಡಿ ಓಣಛಿಟಜಚಿಡಿ ಆಚಿಟಚಿರಜ ಗೆ ಸಹಿಹಾಕುವಂತೆ ಒತ್ತಾಯಿಸುವುದೂ ಒಬಾಮಾ ಭೇಟಿಯ ಅಜೆಂಡಾದಲ್ಲಿದೆ. ಈ ಒಪ್ಪಂದದ ಪ್ರಕಾರ ಅಮೆರಿಕನ್ ಅಣುಶಕ್ತಿ ಕಂಪನಿಗಳು ಅವಘಡ ಉಂಟಾದರೆ ಹೆಚ್ಚಿನ ಹೊಣೆಗಾರಿಕೆಯಿಲ್ಲದೆ ಬಚಾವಾಗುವ ಅಂಶಗಳೂ ಸೇರಿಕೊಂಡಿವೆ.
ಅದೇ ರೀತಿ  ಗಖ-ಟಿಜಚಿ ಅಇಔ ಈಠಡಿಣಟ ಕೂಡಾ ಈ ಭೇಟಿಗೆ ಅಜೆಂಡಾವನ್ನು ಸಿದ್ಧಪಡಿಸಿವೆ. ಗಖ – ಟಿಜಚಿ ಖಣಡಿಚಿಣಜರಛಿ ಇಛಿಠಟಿಠಟಛಿ ಕಚಿಡಿಣಟಿಜಡಿಠಿ ಎಂಬ ಈ ದಸ್ತಾವೇಜಿನಲ್ಲಿ ಪ್ರಮುಖವಾಗಿ ಪ್ರಸ್ತಾಪಿತವಾಗಿರುವುದು ಭಾರತದಲಿ ಬಹುರಾಷ್ಟ್ರಿಯ ಕಂಪನಿಗಳ ವಹಿವಾಟು ಜಾಸ್ತಿಯಾಗುತ್ತಿದ್ದಂತೆ ತಗಾದೆಗಳು ಹುಟ್ಟಿಕೊಳ್ಳುತ್ತವಾದ್ದರಿಂದ ಅದನ್ನು ಉದ್ಯಮದ ಹಿತಾಸಕ್ತಿಗೆ ಧಕ್ಕೆಬರದಂತೆ ನಿಭಾಯಿಸಲು ಒಂದು ಆಠಿಣಣಜ ಖಜಣಣಟಜಟಜಟಿಣ ಒಜಛಿಚಿಟಿಟ – ಎಂದರೆ ವಿವಾದ ಪರಿಹಾರ ನಿಯೋಗವನ್ನು ಸ್ಥಾಪಿಸಬೇಕೆಂಬ ಸಲಹೆ ಇದರಲ್ಲಿದೆ. ಮತ್ತು ಆ ನಿಯೋಗ ಹೇಗೆ ಕೆಲಸ ಮಾಡಬೇಕೆಂಬ ಸೂಚನೆಯೂ ಆ ದಸ್ತಾವೇಜಿನಲ್ಲಿದೆ. ಭೂಪಾಲ್ ದುರಂತದ ನಂತರ ಅದಕ್ಕೆಕಾರಣವಾದ ಯೂನಿಯನ್ ಕಾಬರ್ೆಡ್ ಕಂಪನಿಯನ್ನು ಅಮೆರಿಕದ ಡೌ ಎಂಬ ಬೃಹತ್ ಕೆಮಿಕಲ್ ಬಹುರಾಷ್ಟ್ರೀಯ ಕಂಪನಿ ಕೊಡೂಕೊಂಡಿತು. ಈಗ ಭೋಪಾಲ್ನಲ್ಲಿರುವ ಕಂಪನಿಯ ನಿಜವಾದ ಯಜಮಾನನೂ ಇದೇ ಡೌ ಕಂಪನಿಯೇ. ಆದರೆ ಯೂನಿಯನ್ ಕಂಪನಿಯ ಆಸ್ತಿಗಳಿಗೆ ವಾರಸುದಾರನ್ದ ಆ ಕಂಪನಿ ಅದು ಮಾಡಿದ ಅನಾಹುತಗಳಿಗೆ ಮಾತ್ರ ತಾನು ವಾರಸುದಾರನಲ. ಸಕರ್ಾರವೇ ಅದರ ವಾರಸುದಾರನೆಂದು ಪ್ರತಿಪಾದಿಸುತ್ತಿದೆ. ಹೀಗಾಗಿ ಈಗಲೂ ಡೌ ಕಂಪನಿ ಭೋಪಾಲ್ನಲ್ಲಿರುವ ಫ್ಯಾಕ್ಟರಿಯನ್ನು ವಿಷಾನಿಲ ಮತ್ತು ವಿಷತ್ಯಾಜ್ಯ ಮುಕ್ತಗೊಳಿಸುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ನಿರಾಕರಿಸುತ್ತಿದೆ. ಒಬಾಮಾನ  ಭೇಟಿಯಲ್ಲಿ ಭಾರತ ಸಕರ್ಾರ ಸಹಿ ಮಾಡಲು ತಯಾರಾಗಿರುವ ಒಪ್ಪಂದದಲ್ಲಿ ಇಂಥಾ ಹೊಣೆಗಾರಿಕೆಯಿಂದ ಡೌ ನಂಥ ಕಂಪನಿಗಳನ್ನು ಮುಕ್ತಗೊಳಿಸುವ ಪ್ರಸ್ತಾಪವಿದೆ. ಇದನ್ನು ಶಾಂತಿದೂತ, ದಮನಿತರ ಕಣ್ಮಣಿ ಒಬಾಮಾರ ಮಾರ್ಗದರ್ಶನದಲ್ಲೇ ತಯಾರು ಮಾಡಲಾಗಿದೆ.
2000ರಲಿ ಭಾರತಕ್ಕೆ ಕ್ಲಿಂಟನ್ ಭೇಟಿ ಕೊಟ್ಟ ನಂತರ ಭಾರತ-ಅಮೆರಿಕ ನಡುವೆ ವಾಣಿಜ್ಯವುಮೂರುಪಟ್ಟು ಹೆಚ್ಚಿ 44 ಬಿಲಿಯನ್ ಡಾಲರ್ ತಲುಪಿದೆ. ಇದರಲ್ಲಿ ಅರ್ಧಕ್ಕೂ  ಹೆಚ್ಚು ಭಾಗ ಸೇವಾ ಕ್ಷೇತ್ರದ್ದು. ಈ ಅವಧಿಯಲ್ಲಿ ಭಾರತ 22 ಬಿಲಿಯನ್ ಡಾಲರಿನಷ್ಟು ಸೇವೆಗಳನ್ನು (ಮುಖ್ಯವಾಗಿ ಸಾಫ್ಟ್ವೇರ್, ಬಿಪಿಒ ಇತ್ಯಾದಿ) ಅಮೆರಿಕಕ್ಕೆ ರಫ್ತು ಮಾಡಿದೆ. ಇಂದು ಭಾರತದ ಅಮೆರಿಕದ 14ನೇ ಪ್ರಮುಖ ವಾಣಿಜ್ಯ ಪಾಟರ್್ನರ್ ಆಗಿದೆ. ಆದರೆ ಈ ಅಂಕಿಅಂಶಗಳ ನಿಜವಾದ ಅರ್ಥವೇನು. ಅಮೆರಿಕಕ್ಕೆ ಸೇವೆಗಳನ್ನು ರಫ್ತು ಮಾಡಿದೆ ಎಂದರೆ ಪ್ರಧಾನವಾಗಿ ಬಿಪಿಒ ಕ್ಷೇತ್ರವೇ. ಅಂದರೆ ಅಲ್ಲಿ ನಡೆಯುವ ವಹಿವಾಟುಗಳ ಲೆಕ್ಕ ಹಿಡಿಯುವುದು, ಅಕೌಂಟ್ ತಯಾರು ಮಾಡುವುದು, ಗ್ರಾಹಕರಿಗೆ ಸಲಹೆ ಕೊಡುವುದು. ಅಂದರೆ ಅಮೆರಿಕದ ಅಂಗಡಿಯಲ್ಲಿ ಭಾರತಕ್ಕೆ ಕಾರಕೂನನ ಕೆಲಸ ನೀಡಲಾಗಿದೆ.ಅಮೆರಿಕದ ಹಗಲುಗಳಿಗೆ ಭಾರತದ ರಾತ್ರಿಗಳು ಜೀತಮಾಡುತ್ತಿವೆ ಇದನ್ನೇ ಟ್ರೇಡ್ ಇತ್ಯಾದಿ ಹೆಸರಲ್ಲಿ ಸಂಭ್ರಮಿಸಲಾಗುತ್ತಿದೆ. ಈ ವಾಣಿಜ್ಯ ಸಾರಾಂಶದಲ್ಲಿ ಈ ದೇಶದ ಭವಿಷ್ಯವನ್ನುಕಟ್ಟಲು ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ ಬದಲಿಗೆ ಭಾರತವನ್ನು ಅಮೆರಿಕದ ಶಾಶ್ವತ ದಾಸ್ಯಕ್ಕೆ ದೂಡುತ್ತದೆ. ಹಾಗೆಯೇ ಬರಲಿರುವ ಒಬಾಮಾ ಭೇಟಿಯಲ್ಲಿ ಭಾರತದ ಕೃಷಿ, ಆರೋಗ್ಯ, ಶಿಕ್ಷಣ, ಪರಿಸರ, ಮತ್ತು ಶುಭ್ರ ತಂತ್ರಜ್ನಾನ ಕ್ಷೇತ್ರಗಳಲ್ಲಿ ಮತ್ತು ಆಹಾರ ಕ್ಷೇತ್ರಗಳಲ್ಲಿ ಇಂಥಹುದೇ ಹಲವು ಬಗೆಯ ವಸಾಹತುಶಾಹಿ ಒಪ್ಪಂದಗಳಿಗೆ ಸಹಿಹಾಕುವ ಕರಡು ಆಥರ್ಿಕ ಮೈತ್ರಿಯ ಹೆಸರಲ್ಲಿ ಸಿದ್ಧವಾಗಿದೆ.
ಸಾವಿನ ವ್ಯಾಪಾರ:
ಅಮೆರಿಕದ ರಕ್ಷಣಾ ಕ್ಷೇತ್ರಕೆ ನಿಗದಿಯಾಗಿದ್ದ ಬಜೆಟ್ ಅನ್ನು ಇತ್ತೀಚೆಗೆ ಗಮನಾರ್ಹವಾಗಿ ಖಡಿತ ಮಾಡಲಾಗಿದೆ. ಇದು ಅಮೆರಿಕದ ರಕ್ಷಣಾ ವಲಯದ ಕೈಗಾರಿಕೋದ್ಯಮಿಗಳನ್ನು ಮತ್ತು ಶಸ್ತ್ರಾಸ್ತ್ರ ಉದ್ಯಮಿಗಳ ನಿದ್ದೆ ಕೆಡಿಸಿದೆ. ಏಕೆಂದರೆ ಈ ವಲಯದ ಪ್ರಮುಖ ಗಿರಾಕಿ ಅಮೆರಿಕನ್ ಸಕರ್ಾರವೇ. ಈಗ ಅಲ್ಲಿ ಬೇಡಿಕೆ ತಗ್ಗಿದ್ದರಿಂದ ಈ ಉದ್ಯಮಿಗಳು ಭಾರತದಂಥಾ ದೇಶಗಳ ಸಕರ್ಾರದತ್ತ ಮುಖಮಾಡಿದ್ದವು. ಒಬಾಮಾನ ಜೊತೆ ಬರುತ್ತಿರುವ ಉದ್ದಿಮೆಗಳಲ್ಲಿ ಹೆಚ್ಚು ಪಾಲು ಇರುವುದು  ಶಸ್ತ್ರಾಸ್ತ್ರ ಉದ್ಯಮಿಗಳು ಅಥವಾ ಅಣುಶಕ್ತಿ ಉದ್ಯಮಿಗಳು! ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಅತಿ ಹೆಚ್ಚು ರಕ್ಷಣಾ ಮೈತ್ರಿ ಕುದುರಿದೆ. ಕಳೆದ ಕೆಲವು ವರ್ಷಗಳಲ್ಲಿ ಎರಡು ರಾಷ್ಟ್ರಗಳು 50 ಕ್ಕೂ ಹೆಚ್ಚು ಜಂಟಿ ಸೈನಿಕ ಕವಾಯತುಗಳನ್ನು ನಡೆಸಿವೆ. ಇದು ಭಾರತ ಸೈನ್ಯವನ್ನು ಅಮೆರಿಕನ್ ಶಸ್ತ್ರಸ್ತ್ರಗಳಿಗೆ ಗಿರಾಕಿಗಳನ್ನಾಗಿ ಮಾಡಿಕೊಳ್ಳುವ ಕವಾಯತುಗಳೇ ಎನ್ನುವುದರಲ್ಲಿ ಸಂದೇಹವಿಲ್ಲ. ಈಗಾಗಲೇ ಭಾರತವು  ಅ-130ಎ  ಮತ್ತು   ಕ-8 ಯುದ್ಧ ವಿಮಾನಗಳನ್ನೂ ಒಳಗೊಂಡಂತೆ 15,000 ಕೋಟಿ ರೂ ಮೌಲ್ಯದ ಯುದ್ಧ ಸಾಮಗ್ರಿಗಳನ್ನು ಕೊಳ್ಳಲು ಒಪ್ಪಂದವನ್ನು ಸಿದ್ಧಪಡಿಸಿಕೊಂಡಿದೆ. ಎರಡು ಅಮೆರಿಕನ್ ಕಂಪನಿಗಳು ಈಗಾಗಲೇ 126 ಸುಧಾರಿತ ಫೈಟರ್ ವಿಮಾನ ಸರಬರಾಜು ಮಾಡಲು ಬಿಡ್ ಮಾಡಿವೆ. ಇದಲ್ಲದೆ ಅಣುಶಕ್ತಿ ಅವಘಡ ಹೊಣೆಗಾರಿಕೆ ಬಿಲ್ ಒಂದೊಮ್ಮೆ ಅಮೆರಿಕನ್ ಹಿತಾಸಕ್ತಿಗೆ ತಕ್ಕಂತೆ ಭಾರತ ತಿದ್ದುಪಡಿ ಮಾಡಿಕೊಂಡಲ್ಲಿ ಭಾರತ 1,50,000 ಕೋಟಿ  ರೂ. ಮೌಲ್ಯದ ವಹಿವಾಟು ಕೊಡುವ ಬೃಹತ್ ಗಿರಾಕಿಯಾಗಲಿದೆ.
ಬದಲಿಗೆ ಒಬಾಮಾನ್ ಅಮೆರಿಕ ಭಾರತಕ್ಕೇನು ಕೊಡುತ್ತಿದೆ? ಏನೂ ಇಲ್ಲ. ಬದಲಿಗೆ ಭಾರತೀಯರ ವೀಸಾ ಅಜರ್ಿಗೆ 2500 ಡಾಲರ್ ಶುಲ್ಕ ಹೇರುತ್ತಿದೆ. ವೀಸಾ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ. ಅಮೆರಿಕನ್ ಕಂಪನಿಗಳು ಭಾರತದ ಬಿಪಿಒಗಳಿಗೆ ತಮ್ಮ ವಹಿವಾಟನ್ನು ಔಟ್ ಸೋಸರ್್ ಮಾಡುತ್ತಿದ್ದನ್ನು ಖಡಿತಗೊಳಿಸುವ ಯೋಚನೆ ಮಾಡುತ್ತಿದೆ. ಪ್ರಪಂಚದ ಎಲ್ಲಾ ಬಡದೇಶಗಳು ತಮ್ಮ ಮಾರುಕಟ್ಟೆಯನ್ನು ಅಮೆರಿಕಕ್ಕೆ ತೆರೆದಿಡಬೇಕೆಂದು ಕಡ್ಡಾಯ ಮಾಡುತ್ತಿರುವಾಗಲೇ ತನ ಮಾರುಕಟ್ಟೆಗೆ ಮಾತ್ರ ವಿದೇಶೀ ಸರಕುಗಳು ಬರದಂತೆ ಪ್ರೆಟೆಕ್ಷನಿಸ್ಟ್ ನೀತಿಯನ್ನು ಅನುಸರಿಸುತ್ತಿದೆ ನ್ಯಾಯವಾದಿ ಒಬಾಮಾನ ಅಮೆರಿಕ! ತನ್ನ ರೈತರಿಗೆ ಸಬ್ಸಿಡಿ ಕಡಿತ ಮಾಡದೆ, ಭಾರತ ಸಕರ್ಾರ ರೈತರಿಗೆ ಕೊಡುವ ಸಬ್ಸಿಡಿ ಕಡಿಮೆ ಮಾಡಬೇಕೆಂದೂ, ಭಾರತದ ಬಡಜನರ ಕಲ್ಯಾಣಕ್ಕೆ ಮಾಡುತ್ತಿರುವವೆಚ್ಚವನ್ನು ಕಡಿಮೆಮಾಡಬೇಕೆಂದೂ ಕಡ್ಡಾಯ ಮಾಡುತ್ತಿದೆ ಒಬಾಮಾನ ಅಮೆರಿಕ.
ರಾಜಕೀಯ ಸಾಮಂತಗಿರಿ:
ಇದಲ್ಲದೆ ಅಮೆರಿಕದ ಅಜೆಂಡಾದಲ್ಲಿ ಇರುವ ಮತ್ತೊಂದು ಪ್ರಮುಖ ವ್ಯೂಹಾತ್ಮಕ ಅಂಶ ಏಷಿಯಾ ಪ್ರಾಂತ್ಯದಲ್ಲಿ ಭಾರತವನ್ನು ತನ್ನ ಸಾಮ್ರಾಜ್ಯಕ್ಕೆ ನಂಬುಗಸ್ಥ ಸಾಮಂತತನ್ನಾಗಿ ಮಾಡಿಕೊಳ್ಳುವುದು. ಪ್ರಪಂಚದಲ್ಲಿ ಇಂದು ಅಮೆರಿಕದ ಆಥರ್ಿಕ ಮತ್ತು ಸೈನಿಕ ಸಾಮರ್ಥ್ಯಕ್ಕೆ ಪೈಪೋಟಿಯಾಗಿ ನಿಲ್ಲಬಹುದಾದದ್ದು ಚೀನಾ ಮತ್ತು ರಷ್ಯಾ. ಇವೆರಡು ದೇಶಗಳು ತಮ್ಮದೇ ಆದ ಮೈತ್ತ್ರಿಕೂಟವನ್ನು ಮಾಡಿಕೊಂಡಿದೆ. ಏಷಿಯಾ ಪ್ರಾಂತ್ಯದಲ್ಲಿ ಚೀನಾದ ರಾಜಕೀಯ ಪ್ರಾಬಲ್ಯವೂ ವಿಸ್ತರಿಸುತ್ತಿದೆ. ಅದರ ಮೂಲಕ ಅದು ಅಮೆರಿಕದ ಪ್ರಾಬಲ್ಯವನ್ನು ಕಡಿಮೆ ಮಾಡುತ್ತಿರುವುದಲ್ಲದೆ ಅದರ ಆಥರ್ಿಕ ಹಿತಾಸಕ್ತಿಗೂ ಪೆಟ್ಟು ಕೊಡುತ್ತಿದೆ. ಹೀಗಾಗಿ ಆಥರ್ಿಕವಾಗಿ ಚೀನಾವನ್ನು ಮಟ್ಟಹಾಕ ಬೇಕೆಂದರೆ ವಿಸ್ತರಿಸುತ್ತಿರುವ ಅದರ ರಾಜಕೀಯ ಪ್ರಾಬಲ್ಯಕ್ಕೆ ಕತ್ತರಿ ಹಾಕಬೇಕಿದೆ. ಏಷಿಯಾ ಪ್ರಾಂತ್ಯದಲ್ಲಿ ಚೀನಾಗೆ ಪೈಪೋಟಿ ಕೊಡಬಹುದಾದದ್ದು ಭಾರತ. ಅಮೆರಿಕದ ಪರವಾಗಿ ಇರುವುದಕ್ಕೆ ಪ್ರಜಾತಂತ್ರದ ಮುಖವಾಡವೂ ಇದ್ದೇ ಇದೆ. ಹೀಗಾಗಿ ಚೀನಾದ ವಿರುದ್ಧ ಒಂದು ವ್ಯೂಹಾತ್ಮಕ ಮೈತ್ರಿಕೂಟ ರಚಿಸುವುದೂ ಇದರ ಹಿಂದಿನ ಉದ್ದೇಶವಾಗಿದೆ. ಹೀಗಾಗಿಯೇ ಅಮೆರಿಕ ಕಾಶ್ಮೀರದ ವಿಷಯದಲ್ಲಿ ಈವರೆಗೆ ಕಾಶ್ಮೀರಿಗಳ ಪರವಾದ ನಿಲುವು ತೆಗೆದುಕೊಳ್ಳುತ್ತಿಉದ್ದರೂ ಈಗ ತಟಸ್ಥ ನಿಲುವನ್ನು ತೆಗೆದುಕೊಂಡು ಭಾರತದ ವಿಸ್ತರಣಾವಾದಕ್ಕೆ ಪರೋಕ್ಷ ಕುಮ್ಮಕ್ಕು ಮ್ಕೊಡುವ ತೀಮರ್ಾನ ತೆಗೆದುಕೊಂಡಿದೆ. ಇದಲ್ಲದೆ ಜಾಗತಿಕ ಮಟ್ಟದಲ್ಲಿ ಅಮೆರಿಕ-ಇಸ್ರೇಲ್-ಭಾರತವೆಂಬ ಹೊಸ ಕೌಂಟರ್ ಟೆರರಿಸಂ ಮೈತ್ರಿಕೂಟವು ಎಲ್ಲಾ ಜನಹೋರಾಟಗಳನ್ನು ಬಗ್ಗುಬಡೆಯುವ ಅಜೆಂಡಾದೊಂದಿಗೆ ಹುಟ್ಟಿಕೊಳ್ಳುತ್ತಿದೆ. ಹೀಗೆ ಭಾರತದ ಎಲ್ಲಾ ಅಥರ್ಿಕ, ಸೈನಿಕ ಶಕ್ತಿಯನ್ನು ತನ್ನ  ಸಾಮ್ರಾಜ್ಯಶಾಹಿ ಆಸಕ್ತಿಗಳಿಗೆ ತಕ್ಕಂತೆ ಬಗ್ಗಿಸಿಕೊಳ್ಳಲು, ಒಗ್ಗಿಸಿಕೊಳ್ಳಲು ಒಬಾಮಾ ಭಾರತಕ್ಕೆ ಬರುತ್ತಿದ್ದಾನೆ.
ಒಬಾಮಾನ ಅಜೆಂಡಾದಲ್ಲಿ ಇರುವುದು ಈ ಪ್ರಮುಖ ಅಂಶಗಳೇ. ಒಬಾಮಾ ಗಾಂಧಿ ಆಶ್ರಮಕ್ಕೆ, ತಾಜ್ ಹೋಟೆಲ್ ಭೇಟಿ ಕೊಡುತ್ತಿರುವಾಗ ಇಡೀ ಭಾರತ ಒಬಾಮಾನ ಭಾಷಣದ ಮೋಡಿಗೆ ತಲೆದೂಗುತ್ತಿರುವಾಗ ಭಾರತ ಅಮೆರಿಕದ ಸರ್ವತಂತ್ರ ಸ್ವತಂತ್ರ ಆದರೆ ಸಾಮಂತನಾಗುವ ಒಪ್ಪಂದಗಳಿಗೆ ಸಹಿ ಹಾಕುತ್ತಿರುತ್ತದೆ. ಹೀಗೆ ಈ ಒಬಾಮಾನ ಭೇಟಿಯ ಹಿಂದೆ ಪ್ರಜಾತಂತ್ರ, ನ್ಯಾಯ, ವಿಶ್ವಶಾಂತಿಯ ಯಾವುದೇ ಅಜೆಂಡಾಗಳಿಲ್ಲ. ಬಿಳಿಯರ ಖಡ್ಗ ಈಗ ಕರಿಯನ ಕೈಯಲಿದೆ. ಕುವೆಂಪು ಕೇಳಿದ ಮಾತನ್ನೇ ಈಗ ಬೇರೇ ರೀತಿ ಕೇಳಬೇಕಿದೆ.
ಕತ್ತಿ ಬಿಳಿಯದಾದರೆ ಮಾತ್ರ ನೋವೇ?
ಕರಿಯನೇ ಅದನ್ನು ಹದವಾಕಿ ತಿವಿದರೆ ಅದು ಹೂವೆ?

       – ಶಿವಸುಂದರ್

Advertisements

1 ಟಿಪ್ಪಣಿ

 1. Great and well researched article.


Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ನವೆಂಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಕ್ಟೋ   ಡಿಸೆ »
   123456
  78910111213
  14151617181920
  21222324252627
  282930  
 • ವಿಭಾಗಗಳು