ರಾಜ್ಯೋತ್ಸವ ಪ್ರಶಸ್ತಿಗಳು: ಸಾಂಸ್ಕೃತಿಕ ಲೋಕದ ಆಪರೇಷನ್ ಕಮಲ!

    By – ಶಿವಸುಂದರ್

ಬಿಜೆಪಿ ಸಕರ್ಾರದ ರಾಜ್ಯೋತ್ಸವ ಪ್ರಶಸ್ತಿಗಳು ಘೋಷಣೆಯಾಗಿದೆ. ಈವರೆಗೆ ಯಾವ ಸಕರ್ಾರವೂ ಯಾವತ್ತೂ ಕೊಟ್ಟಿರದಷ್ಟು ಜನರಿಗೆ -182-ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಹಂಚಲಾಗಿದೆ. ಈ ಪ್ರಶಸ್ತಿಗಳನ್ನು ಕಾಸಿಗೊಂದು-ಕೊಸರಿಗೊಂದು ಎಂದ ಹಂಚಿರುವ ಭರಾಟೆಯನ್ನು ನೋಡಿದರೆ ಶಾಸನಬದ್ಧ ಮಿತಿ ಇಲ್ಲದಿದ್ದರೆ ಯಡಿಯೂರಪ್ಪನವರು ಮಂತ್ರಿಗಿರಿಯನ್ನೂ ಇದೇ ರೀತಿ 120 ಜನರಿಗೂ ಹಂಚಿ ತಮ್ಮ ಸಕರ್ಾರವನ್ನು ಭದ್ರಗೊಳಿಸಿಕೊಳ್ಳುತ್ತಿದ್ದರೇನೋ?
 ಇದು ತಮಾಷೆಯ ಮಾತೇನಲ್ಲ. ಯಡಿಯೂಪ್ಪನವರ ಬಿಜೆಪಿ ಸಕರ್ಾರ ಮಂತ್ರಿಗಿರಿಯನ್ನು, ನಿಗಮ-ಬೋಡರ್್ಗಳ ಅಧ್ಯಕ್ಷ ಸ್ಥಾನವನ್ನೂ, ಸದಸ್ಯ ಸ್ಥಾನಗಳನ್ನೂ ಮತ್ತು ಇಂಥಾ ಪ್ರಶಸ್ತಿಗಳನ್ನು ಎಲ್ಲವನ್ನೂ ತನ್ನ ಸಕರ್ಾರದ ಉಳಿವಿಗೆ ಕೊಡುವ ಲಂಚವೆಂದೇ ಪರಿಗಣಿಸಿದೆ. ಹಾಗೆ ನೋಡಿದರೆ ಹಿಂದಿನ ಬಹುಪಾಲು ಸಕರ್ಾರಗಳೂ ಸಹ ನಡೆದುಕೊಂಡು ಬಂದಿದ್ದು ಹೀಗೆ. ಇದೊಂದು ಪ್ರಜಾತಾಂತ್ರಿಕ ರಿವಾಜುಗಳ ಮತ್ತು ಸಂಸ್ಥೆಗಳ ಅಧಃಪತನವೇ. ಆದರೆ ಬಿಜೆಪಿ ಸಕರ್ಾರದ ಹೆಗ್ಗಳಿಕೆಯೇನೆಂದರೆ ಎಲ್ಲ ಬಗೆಯ ರಾಜಕೀಯ ಮತ್ತು ನೈತಿಕ ಅಧಃಪತನಗಳನ್ನು ಪಾತಾಳಕ್ಕೆ ಮುಟ್ಟಿಸಿದ್ದು ಮತ್ತು ಅದರಲ್ಲಿ ತಪ್ಪೇನೂ ಇಲ್ಲವೆಂದು ಭಂಡತನದಿಂದ ನಡೆದುಕೊಂಡು ಅದನ್ನು ಸಾರ್ವಜನಿಕವಾಗಿ ದಕ್ಕಿಸಿಕೊಳ್ಳುತ್ತಿರುವುದು. ಹೀಗಾಗಿ ಬಿಜೆಪಿ ಹಯಾಮಿನಲ್ಲಿ ಭ್ರಷ್ಟತನವು ಸಾಧನೆಗೂ, ಭಂಡತನವೂ ಧೈರ್ಯಕ್ಕೂ ಸಂವಾದಿಯಾಗಿ ಬಳಸಲ್ಪಡುತ್ತಿದೆ. ಉದಾಹರಣೆಗೆ ಈವರೆಗೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುತ್ತಿದ್ದವರು ಕನಿಷ್ಟ ಯಾವುದಾದರೂ ಒಂದು ರಾಜಕೀಯ ಮೌಲ್ಯದ ಅಥವಾ ನೈತಿಕ ಮೌಲ್ಯದ ನೆಪವನ್ನಾದರೂ ಕೊಡುತ್ತಿದ್ದರು. ಏಕೆಂದರೆ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಮತ್ತು ಮೌಲ್ಯಗಳು ಮುಖ್ಯವಾಗಿದ್ದವು. ಆದರೆ ಬಿಜೆಪಿ ಆಪರೇಷನ್ ಕಮಲ ಪ್ರಾರಂಭಿಸಿದ ಮೇಲೆ ಯಾವುದೇ ಎಗ್ಗೂ ಸಿಗ್ಗೂ ಇಲ್ಲದೆ ವಿರೋಧ ಪಕ್ಷದಲ್ಲಿದ್ದರೆ ಅಭಿವೃದ್ಧಿ ಸಾಧ್ಯ ಇಲ್ಲವಾದ್ದರಿಂದ ಆಡಳಿತ ಪಕ್ಷ ಸೇರಿಕೊಂಡೆ ಎಂದು ಬಹಿರಂಗವಾಗಿಯೇ ಭಂಡತನ ತೋರಿಸಲು ಪ್ರಾರಂಭಿಸಿದರು. ಇನ್ನೂ ರೇಣುಕಾಚಾರ್ಯರಂಥವರ ವಿಷಯವಂತೂ ಬೇಡವೇ ಬೇಡ!
 ಹಾಗೆ ನೋಡಿದರೆ ರಾಜಕೀಯ ಕ್ಷೇತ್ರಕ್ಕಿಂತಲೂ ಮುಂಚೆ ಆಪರೇಷನ್ ಕಮಲ ನಡೆದದ್ದು ಸಾಂಸ್ಕೃತಿಕ ಕ್ಷೇತ್ರದಲ್ಲಿ.  ಜೆಡಿಎಸ್-ಬಿಜೆಪಿ ಕಾಲದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿ ಹೊಡೆದುಕೊಂಡಿದ್ದ ಪ್ರಗತಿಪರ ಮತ್ತು ದಲಿತ ಕವಿ ಸಿದ್ದಲಿಂಗಯ್ಯನವರು. ಬಿಜೆಪಿ ಅಧಿಕಾರಕ್ಕೆ ಬಂದಾಗ ತಾತ್ವಿಕ ನೆಲೆಯಲ್ಲಿ ರಾಜೀನಾಮೆ ಕೊಡುವುದರ ಬದಲು ಅದೇ ರಾತ್ರಿ ತತ್ವಾಂತರ ಮಾಡಿ  ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷಗಿರಿ ಪಡೆದುಕೊಂಡು ಬಿಟ್ಟರು. ಅದಕ್ಕೆ ಅವರು ಕೊಟ್ಟ ಸಮಜಾಯಿಷಿ ಅಧಿಕಾರವಿದ್ದರೆ ಕನ್ನಡ ಸೇವೆ ಮಾಡಬಹುದು ಎಂಬುದು! ಆಪರೇಷನ್ ಕಮಲದ ಫಲಾನುಭವಿಗಳ ಭಾಷೆಗೂ, ಈ ಭಾಷೆಗೂ ಏನಾದರೂ ವ್ಯತ್ಯಾಸವಿದೆಯೇ?
ಇನ್ನೂ ಹೇಳಬೇಕೆಂದರೆ ಜೆಡಿಎಸ್-ಬಿಜೆಪಿ ಪಕ್ಷಗಳು ಜಂಟಿಯಾಗಿ ಅಧಿಕಾರ ನಡೆಸುವಾಗಲೇ ಸಾಂಸ್ಕೃತಿಕ ಕ್ಷೇತ್ರದ ಆಪರೇಷನ್ ಕಮಲದ ಸೂಚನೆಗಳು ಸಿಕ್ಕಿದ್ದವು. ಕನರ್ಾಟಕದಲ್ಲಿ ಬಿಜೆಪಿ ಅಧಿಕಾರ ಪಡೆಯುವ ಕನಸನ್ನೇ ಕಾಣದ ಹೊತ್ತಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದ ಜೆಡಿಎಸ್ ಬಗ್ಗೆ ಪ್ರಾರಂಭದಲ್ಲಿ ಎಲ್ಲಾ ಪ್ರಗತಿಪರ ಬುದ್ಧಿಜೀವಿ ಮತ್ತು ಸಾಹಿತಿಗಳಿಗೂ ಸಿಟ್ಟಿತ್ತು.
ಆದರೆ ಈ ಸಿಟ್ಟಿಗೆ ಆಳವಾದ ತಾತ್ವಿಕ ನೆಲೆಯನ್ನಾಗಲೀ ಅಥವಾ ಬದ್ಧತೆಯಾಗಲೀ ಇರಲಿಲ್ಲವೆಂಬುದು ಬಹಳ ಬೇಗ ಸಾಬೀತಾಗುತ್ತಾ ಹೋಯಿತು. ಅದೇ ಸಮಯದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಸಮ್ಮೇಳನ ನಡೆಯುವುದಿತ್ತು. ಆಗ ಅದರ ಸಂಘಟಕರು ಈ ಬಿಜೆಪಿ ಮಿಶ್ರಿತ ಸಕರ್ಾರದ ಅಡಿಯಲ್ಲಿರುವ ಯಾವುದೇ ಅಕಾಡೆಮಿ, ಸಮಿತಿಗಳಿಗೆ ಬಂಡಾಯದ ಸದಸ್ಯರು ಇದ್ದರೆ ರಾಜೀನಾಮೆ ಕೊಟ್ಟು ಹೊರಬರಬೇಕೆಂದೂ, ತೀಮರ್ಾನ ತೆಗೆದುಕೊಂಡ ನಂತರವೇ ಶಿವಮೊಗ್ಗದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಸಮ್ಮೆಳನ ನಡೆದಿತ್ತು. ಮುಂದೆ ಈ ಬಿಜೆಪಿ ಮಿಶ್ರಿತ ಸಕರ್ಾರಕ್ಕೆ ಯಾವ ಬಗೆಯ ಪ್ರತಿರೋಧ ವ್ಯಕ್ತಪಡಿಸಬೇಕೆಂಬ ಬಗ್ಗೆ ತದನಂತರದಲ್ಲಿ ತೀಮರ್ಾನ ತೆಗೆದುಕೊಳ್ಳಬೇಕೆಂದು ತೀಮರ್ಾನವಾಯಿತಾದರೂ ಆ ಬಗ್ಗೆ ಸಭೆಯೇ ನಡೆಯಲಿಲ್ಲ. ಬದಲಿಗೆ ಹಲವಾರು ಬಂಡಾಯ ಸಾಹಿತಿಗಳು ನಿಧಾನವಾಗಿ ಮೆದುವಾಗತೊಡಗಿದರು. ಕಬ್ಬಿಣ ಕಾದಾಗ ಮೆದುವಾಗುತ್ತದೆ. ಪ್ರಗತಿಪರ ಸಾಹಿತಿಗಳು ಒಳಗೆ ಕಾವನ್ನು ಕಳೆದುಕೊಂಡಾಗ ಮೆದುವಾಗುತ್ತಾರೆ. ರಾಜಿಗೆ ಹದವಾಗುತ್ತಾರೆ. ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ಬಿಜೆಪಿ ಮೆದುಳಿನ ಮತ್ತು ಜೆಡಿಎಸ್ ದೇಹದ ಸಕರ್ಾರ ಕೂಡಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಪರೇಷನ್ ಕಮಲವನ್ನು ಪ್ರಾರಂಭಿಸಿದರು.
ಕೀತರ್ಿಯ ಅನಸ್ತೇಷಿಯಾ ಕುಡಿದು ಮಯಕದಲ್ಲಿದ್ದವರ ಮೇಲೆ ಆಪರೇಷನ್ ಸುಲಭವಾಗಿಯೇ ನಡೆಯುತ್ತದೆ. ಹಲವಾರು ಪ್ರಗತಿಪರರು ಬಿಜೆಪಿ ಮಿಶ್ರಿತ ಸಕರ್ಾರದ ಅಡಿಯಲ್ಲಿರುವ ಹಲವು ಅಕಾಡೆಮಿಗಳಿಗೆ, ಸಮಿತಿಗಳಿಗೆ ಸದಸ್ಯರಾದರು. ಇನ್ನೂ ಹಲವರು ರಾಜ್ಯೋತ್ಸವ ಪ್ರಶಸ್ತಿಯ ಫಲಾನುಭವಿಗಳಾದರು. ಆ ವೇಳೆಗಾಗಲೇ ರಾಜ್ಯೋತ್ಸವ ಪ್ರಶಸ್ತಿಗೆ ಹಣದ ಜೊತೆಗೆ 20 ಗ್ರಾಂ ಚಿನ್ನದ ಮತ್ತು ಅಗ್ಗದ ಬೆಲೆಯ ಸೈಟಿನ ಪ್ರಲೋಭನೆಯೂ ಹತ್ತಿಕೊಂಡಿತ್ತು. ಹೀಗಾಗಿ ಪ್ರಶಸ್ತಿಯ ನಿರಾಕರಣೆ ಈ ಪ್ರಲೋಭನೆಯನ್ನೂ ಮೀರುವ ಬದ್ಧತೆಯನ್ನು ಕೇಳುತ್ತಿತ್ತು. ಹಲವಾರು ಜನ ಈ ಅಗ್ನಿ ಪರೀಕ್ಷೆಯನ್ನು ದಾಟಲು ಆಗಲಿಲ್ಲ. ಅಷ್ಟು ಮಾತ್ರವಲ್ಲ. ತಾವು ಸಕರ್ಾರದ ಅಮಿಷಗಳನ್ನು ಒಪ್ಪಿಕೊಂಡಿದ್ದಕೆ ಚಿತ್ರವಿಚಿತ್ರ ಕಾರಣಗಳನ್ನು ಕೊಡಲು ಪ್ರಾರಂಭಿಸಿದರು. ನಾವೂ ಒಳಗೆ ಹೋಗಲಿಲ್ಲ ಎಂದರೆ ಅವರು ತಮಗೆ ಬೇಕಾದವರನ್ನೇ ತುಂಬಿಕೊಳ್ಳುತ್ತಾರೆ. ಆಗ ಪ್ರಗತಿಪರ ವಾತಾವರಣ ಸೃಷ್ಟಿಸುವುದು ಇನ್ನಷ್ಟು ಕಷ್ಟವಾಗುತ್ತದೆ. ಹೀಗಾಗಿ ಒಳಗ್ಗೆ ಹೋಗಿ ಅಂಥಾ ಕೋಮುವಾದೀಕರಣವನ್ನು ತಡೆಗಟ್ಟುವುದು ಸಹ ಒಂದು ಕೋಮುವಾದಿ ವಿರೋಧಿ ಹೋರಾಟವೇ ಹೀಗಿತ್ತು ಅವರ ತರ್ಕ ಸರಣಿ. ಅವಕಾಶವಾದಕ್ಕೂ ಹೋರಾಟದ ಖದರನ್ನು ಕೊಡುವ  ಭಂಡತನ ಆಗಲೇ ಪ್ರಾರಂಭವಾಗಿತ್ತು. ಆದರೆ ಒಳಗೆ ನಡೆಯುತ್ತಿದ್ದ ಕೋಮುವಾದೀಕರಣವನ್ನು ಇವರು ಹೋರಾಡಿ ತಡೆದದ್ದಕ್ಕಂತೂ ಇದುವರೆಗೆ ಏನೂ ಪುರಾವೆಗಳು ಸಿಕ್ಕಿಲ್ಲ. ಹಾಗೆಯೇ ಅಕಾಡೆಮಿ ಇತ್ಯಾದಿಗಳು ಸಕರ್ಾರವಲ್ಲ. ಅವಕ್ಕೆ ಸಾಪೇಕ್ಷವಾದ ಸ್ವಾತಂತ್ರ್ಯವಿರುತ್ತದೆ. ಆದ್ದರಿಂದ ಸಕರ್ಾರ ಸೇರುವುದು ಮತ್ತು ಅಕಾಡೆಮಿಗಳನ್ನು ಸೇರುವುದು ಎರಡೂ ಒಂದೇ ಅಲ್ಲ ಎಂಬ ವಾದಗಳೂ ಹುಟ್ಟಿಕೊಂಡವು. ಅವೆಲ್ಲವೂ ಎಂಥಾ ಪೇಲವ ವಾದಗಳಾಗಿತ್ತೆಂದರೆ ಅದನ್ನು ಅವರೇ ಕೈಬಿಟ್ಟರು. ಅದೇನೇ ಇರಲಿ ಇವರೆಲ್ಲರೂ ಬಿಜೆಪಿ ಮಿಶ್ರಿತ ಸಕರ್ಾರದ ಪರೋಕ್ಷ ಭಾಗೀದಾರರೇ ಆಗಿ ಬಿಜೆಪಿ ಮಿಶ್ರಿತ ಸಕರ್ಾರಕ್ಕೆ ಮಾನ್ಯತೆಯನ್ನು ತಂದುಕೊಟ್ಟದ್ದಂತೂ ನಿಜ.
ಇದರರ್ಥ ಅವರೆಲ್ಲಾ ಕೋಮುವಾದಿಗಳಾಗಿ ಹೋದರೂ ಎಂದೇನೂ ಅಲ್ಲ. ಏಕೆಂದರೆ ಇವರಲ್ಲಿ ಹಲವರು ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬಂದ ನಂತರ ಅದರ ವಿರುದ್ಧ ನಿರಂತರ ಸಂಘರ್ಷದಲ್ಲಿ ತೊಡಗಿದ್ದಾರೆ. ಆದರೆ ಆಗ ಸಕರ್ಾರದ ಭಾಗವಾಗುವಾಗ ಅವರು ಒದಗಿಸಿದ ತರ್ಕ ಮತ್ತು ಅವರ ಭಾಗೀದಾರಿಕೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಂಚಿನಲ್ಲಿ ಇರಬೇಕಿದ್ದ ಬಿಜೆಪಿ ಸಿದ್ಧಾತಗಳಿಗೆ ಯಾವುದೋ ಒಂದು ಬಗೆಯ ಮನ್ನಣೆಯನ್ನು ತಂದುಜೊಟ್ಟಿದ್ದಂತೂ ನಿಜ. ಈಗ ಹಿಂತಿರುಗಿ ನೋಡಿದಾಗಲಾದರೂ ಈ ಅಂಶವನ್ನು ಒಪ್ಪಿಕೊಳ್ಳಲೇಬೇಕು.
ಹೀಗೆ ಬಿಜೆಪಿ ಸಕರ್ಾರವೇ ಅಧಿಕಾರಕ್ಕೆ ಬರುವ ವೇಳೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನ್ನ ಹಳಸಿತ್ತು. ನಾಯಿ ಹಸಿದಿತ್ತು. ಆಪರೇಷನ್ ಕಮಲದಂಥಾ ಪ್ರಜಾತಂತ್ರದ ಬಹಿರಂಗ ಅತ್ಯಾಚಾರವೂ ನ್ಯಾಯಸಮ್ಮತವಾಗಿ ಹೋಗಿದ್ದು ಬಿಜೆಪಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಇರಬೇಕಿದ್ದ ಕೆಂಡದಂಥ ಕಾವು ಹೀಗೆ ತಣ್ಣಗಾಗುತ್ತಾ ಬರುತ್ತಿದ್ದರಿಂದಲೇ ಅಲ್ಲವೇ? ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬಂದಮೇಲೆ ಕನ್ನಡದ ಸಾಂಸ್ಕೃತಿಕ ಕ್ಷೇತ್ರದ ಮೇಲೆ ಎರಡು ಬಗೆಯ ದಾಳಿಯನ್ನು ನಡೆಸುತ್ತಿದೆ. ಒಂದು-ಅತ್ಯಂತ ನಿರ್ಲಜ್ಜವಾಗಿ ಬ್ರಾಹ್ಮಣ-ಲಿಂಗಾಯತ ಜಾತಿಗಳನ್ನು ಮೆರೆಸುತ್ತಿದೆ. ಮತ್ತು ಬ್ರಾಹ್ಮಣೀಯ ಮತ್ತು ಹಿಂದೂ ಕೋಮುವಾದೀ ಮೌಲ್ಯಗಳನ್ನು ಬಿತ್ತುವ ಸಾಹಿತಿಗಳಿಗೆ ಸಕಲ ಸಕರ್ಾರಿ ಮಯರ್ಾದೆಯನ್ನೂ ನೀಡಿ ಸಾರ್ವಜನಿಕ ಮಾನ್ಯತೆಯನ್ನು ದಕ್ಕಿಸಿಕೊಡುತ್ತಿದೆ. ಎರಡನೆಯದಾಗಿ ಪ್ರಗತಿಪರ ವತರ್ುಲದಲ್ಲಿ ಕೊಳ್ಳಬಲ್ಲ, ಮೌನವಾಗಿಸಬಲ್ಲ ಸರಕುಗಳನ್ನು ಹುಡುಕಿ ಎಷ್ಟು ಬೆಲೆ ತೆತ್ತಾದರೂ ಕೊಂಡುಕೊಳ್ಳುತ್ತಿದೆ. ಆ ಮೂಲಕ ಮೇಲ್ಜಾತಿ ಮತ್ತು ಮೇಲ್ವರ್ಗದ ತನ್ನ ರಥಕ್ಕೆ ಕೆಳವರ್ಗದ ಚಕ್ರಗಳನ್ನು ಜೋಡಿಸಿಕೊಂಡು ಹಿಂದೂತ್ವದ ಸಾರೋಟನ್ನು ತಯಾರು ಮಾಡಿಕೊಂಡಿದೆ. ಈ ಹುನ್ನಾರಕ್ಕೆ ರಾಜ್ಯೋತ್ಸವ ಪ್ರಶಸ್ತಿಗಳೂ ಸಹ ಒಂದು ಸಾಧನವಾಗಿದೆ.
ಈ ಹುನ್ನಾರವನ್ನು ನಮ್ಮ ಸಾಂಸ್ಕೃತಿಕ ಲೋಕದ ಪ್ರಗತಿಪರ ಗಣ್ಯರು ಅರ್ಥಮಾಡಿಕೊಳ್ಳಬೇಕಿತ್ತು. ಆದರೆ ಹತ್ತು ಹಲವು ಕಾರಣಗಳನ್ನು ಮುಂದೆ ಮಾಡಿಕೊಂಡು ಹಲವರು ಈ ಪ್ರಶಸ್ತಿಯನ್ನು ಆ ಮೂಲಕ ಬಿಜೆಪಿ ಸಕರ್ಾರದ ಮೆಹರ್ಬಾನಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೆಲವರಿಗೆ ಈ ಪ್ರಶಸ್ತಿ ನಿರಾಕರಿಸಲಾಗದಷ್ಟು ಮೌಲಿಕವಾದದ್ದು. ಲೌಕಿಕವಾದದ್ದು. ಏಕೆಂದರೆ ಈಗಾಗಲೇ ಹೇಳಿದಂತೆ ಪ್ರತಿ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಒಂದು ಲಕ್ಷ ನಗದು, 20 ಗ್ರಾಂ ಚಿನ್ನ, ಮತ್ತು ಅಗ್ಗದ ಬೆಲೆಯಲ್ಲಿ ಸೈಟನ್ನು ಪ್ರಾಧಾನ್ಯತೆ ನೀಡಿ ನೀಡಲಾಗುತ್ತದೆ. ಈ ಸೈಟುಗಳು ಕೋಟ್ಯಾಂತರ ರೂ ಬೆಲೆ ಬಾಳುವುದಾಗಿದ್ದು ಹಲವು ರಿಯಲ್ ಎಸ್ಟೇಟ್ ಲಾಬಿಗಳೇ ಮುಂದೆ ನಿಂತು ಪ್ರಶಸ್ತಿ ವಿಜೇತರು ಸೈಟಿಗಾಗಿ ತುಂಬಬೇಕಾದ ಹಣವನ್ನು ತುಂಬುತ್ತಾರೆ. ನಂತರ ಇನ್ನಷ್ಟು ಹಣಕೊಟ್ಟು ಅವರಿಂದ ಕೊಂಡುಕೊಂಡು ಕೋಟ್ಯಾಂತರ ರೂಪಾಯಿಗೆ ಮಾರಿಕೊಳ್ಳುತ್ತಾರೆ. ಹೀಗಾಗಿ ರಾಜ್ಯೋತ್ಸವ ಪ್ರಶಸ್ತಿ ಹಲವರ ಭಾಗ್ಯದ ಬಾಗಿಲನ್ನು ತೆರೆಯುವುದರಿಂದ ಮೌಲಿಕ ಕಾರಣಗಳಿಗಾಗಿ ಅದನ್ನು ತಿರಸ್ಕರಿಸುವಷ್ಟು ಬದ್ಧತೆ ಬಯಸುವುದು ದುರಾಸೆಯೇ ಆಗಿಬಿಡಬಹುದು.
ಪ್ರಶಸ್ಸಿ ಪಡೆದುಕೊಳ್ಳುತ್ತಿರುವ ಎಲ್ಲಾ ಪ್ರಗತಿಪರರೂ ಇದೇ ಕೆಟಗರಿಯವರೇನಲ್ಲ. ಹಣಕ್ಕೆ ಅಥವಾ ಲೋಭಕ್ಕೆ ತಮ್ಮನ್ನು ತಾವು ಮಾರಿಕೊಳ್ಳದ ಪ್ರಗತಿಪರರೂ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರ ವಾದ ಇನ್ನೂ ವಿಚಿತ್ರ. ಮಿಕ್ಕೆಲ್ಲಾ ವಿಷಯಗಳಲ್ಲೂ ಸಕರ್ಾರವೆಂದರೆ ಬಿಜೆಪಿ ಸಕರ್ಾರ -ಕೋಮುವಾದಿ ಸಕರ್ಾರ ಎಂದೇ ಪರಿಗಣಿಸುವ ಇವರು ಪ್ರಶಸ್ತಿಗಳ ಸಂದರ್ಭ ಬಂದಾಗ ವಿಚಿತ್ರ ಗೊಂದಲಕ್ಕೊಳಗಾಗುತ್ತಾರೆ. ಸಕರ್ಾರ ಅಂದರೆ ಅದು ಎಲ್ಲರ ಸಕರ್ಾರ. ಅದು ಕೊಡುತ್ತಿರುವುದು ಜನರ ದುಡ್ಡು. ಹೀಗಾಗಿ ಸಕರ್ಾರದ ಪ್ರಶಸ್ತಿ ಎಂದರೆ ಬಿಜೆಪಿ ಕೊಡುತ್ತಿರುವ ಪ್ರಶಸ್ತಿ ಎಂದೇನೂ ಅರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂಬ ವಾದವನ್ನು ಅವರು ಮುಂದಿಡುತ್ತಾರೆ. ಸಕರ್ಾರ ತೆಗೆದುಕೊಳ್ಳುವ ಪ್ರತಿ ನಿಧರ್ಾರದ ಹಿಂದೆಯೂ ಅದರ ಸಿದ್ಧಾಂತ ಕೆಲಸ ಮಾಡುತ್ತದೆ ಎಂದು ಮಿಕ್ಕ ಸಂದರ್ಭದಲ್ಲಿ ಇದೇ ವಿದ್ವಾಂಸರೇ ಪಾಠ ಹೇಳುತ್ತಾರೆ. ಆದರೆ ಪ್ರಶಸ್ತಿಯ ವಿಷಯಕ್ಕೆ ಬಂದಾಗ ಮಾತ್ರ ಅದರ ಸಿದ್ಧಾಂತ ಪಕ್ಕಕ್ಕೆ ಸರಿದು ಮೌಲ್ಯಗಳು ಕೆಲಸ ಮಾಡುತ್ತವೆ ಎಂದು ಹೇಗೆ ಭಾವಿಸಿಕೊಳ್ಳಬಹುದು?
ಇನ್ನು ಕೆಲವರು ತಮಗಿಂತ ದೊಡ್ಡವರು ಪ್ರಶಸ್ತಿ ತಿರಸ್ಕರಿಸಿದರೆ ಅದು ಸಕರ್ಾರದ ಗಟ್ಟಿ ಮೈಚರ್ಮವನ್ನು ತಾಗಬಹುದು. ಆದರೆ ತಮ್ಮಂಥವರು ತಿರಸ್ಕರಿಸಿದರೆ ತಾನೇ ಆಗುವ ಪ್ರಯೋಜನವೇನು ಎಂದು ಕೇಳುತ್ತಾರೆ. ಆದರೆ ಇಲ್ಲಿ ಪ್ರಶಸ್ತಿಯ ನಿರಾಕರಣೆ ಮಾಡುವುದು ಸಕರ್ಾರವನ್ನು ಪರಿವತರ್ಿಸಲಲ್ಲ. ತಾವು ಬದಲಾಗದಂತೆ ನೋಡಿಕೊಳ್ಳಲು ಎಂಬುದನ್ನು ಮರೆಯುತ್ತಾರೆ. ಅಷ್ಟು ಮಾತ್ರವಲ್ಲ. ಮೌಲ್ಯಗಳಿಗೆ ಬದ್ಧರಾಗಿ ಪ್ರಶಸ್ತಿಯನ್ನು ತಿರಸ್ಕರಿಸುವುದು ಒಂದು ಆದರ್ಶಯುತ ಮೌಲ್ಯ. ಇದು ಸಕರ್ಾರದ ಮೇಲೆ ಏನೇ ಪ್ರಭಾವ ಬೀರದಿದ್ದರೂ ಸಮಾಜದ ಮೇಲೆ ಸತ್ಪರಿಣಾಮವನ್ನು ಬೀರುತ್ತದೆ. ಸರ್ವತ್ರ ಭ್ರಷ್ಟಾಚಾರ ಮತ್ತು ನೈತಿಕ ಅಧಃಪತನಗಳೇ ಕಾಣುತ್ತಿರುವಾಗ ಸಮಾಜದ ನೈತಿಕತೆ ಮೈಕೊಡವಿ ಮೇಲೇಳಲು ಇಂಥಾ ಮಾದರಿಗಳು ಬೇಕಾಗುತ್ತವೆ. ಹೀಗಾಗಿಯೇ ನಾವು ಸಣ್ಣವರು ಎಂಬ ಇಂಥಾ ಗಣ್ಯರ ಮಾತುಗಳೂ ಈ ಸಂದರ್ಭದಲ್ಲಿ ಏಕೋ ವಿನಯ ಅಥವಾ ಸಜ್ಜನಿಕೆಯ ಮಾತಾಗಿ ಕೇಳುವುದೇ ಇಲ್ಲ.
ಸಕರ್ಾರ ಎಲ್ಲರ ಸಕರ್ಾರವಾಗಬೇಕು ಎಂಬುದು ಆಶಯ. ವಾಸ್ತವವಲ್ಲ. ಸಕರ್ಾರಗಳು ತಾವು ಪ್ರತಿನಿಧಿಸುವ ವರ್ಗ, ಜಾತಿ, ಸಮುದಾಯಗಳ ಸಕರ್ಾರವೇ ಆಗಿರುತ್ತದೆ. ಬಿಜೆಪಿ ಸಕರ್ಾರ ಮೇಲ್ಜಾತಿ ಮತ್ತು ಮೇಲ್ವರ್ಗಗಳನ್ನು ಪ್ರತಿನಿಧಿಸುವ ಬ್ರಾಹ್ಮಣವಾದಿ ಕೋಮುವಾದಿ ಸಕರ್ಾರವೇ ಆಗಿರುತ್ತದೆ. ಅದು ನವಂಬರ್ನಲ್ಲಿ ಮಾತ್ರ ಬೇರೆಯಾಗುವುದಿಲ್ಲ. ಅದು ಕೊಡುವುದು ಜನರ ದುಡ್ಡನ್ನೇ! ಆದರೆ ಆ ದುಡ್ಡನ್ನು ಅದು ತನ್ನ ಅಜೆಂಡಾಗಳಿಗೆ ತಕ್ಕಂತೆ ವಿನಿಯೋಗಿಸುತ್ತದೆ. ಬಜೆಟ್ ರೂಪಿಸುವಾಗಲೂ ಅಷ್ಟೆ. ಪ್ರಶಸ್ತಿ ನೀಡುವಾಗಲೂ ಮತ್ತು ಪ್ರಶಸ್ತಿ ವಿಜೇತರ ಸಂಖ್ಯೆಯನ್ನು ಹೆಚ್ಚಿಸುವಾಗಲೂ ಅಷ್ಟೆ..  ಅಲ್ಲಿ ಕೆಲಸ ಮಾಡುವುದು ಬಿಜೆಪಿ ಸಿದ್ದಾಂತವೇ. ಪ್ರಶಸ್ತಿ ಆಯ್ಕೆಗಾಗಿ ರೂಪಿಸಿದ ಪ್ರಕ್ರಿಯೆಯಲ್ಲಿಯೇ ಇದು ಅಂತರ್ಗತವಾಗಿರುತ್ತದೆ. ಹೀಗಾಗಿ ಪ್ರಶಸ್ತಿ ಕೊಡುವುದು ಸಕರ್ಾರವೇ ಎಂಬುದು ನಿಜವಾದರೂ ಅದು ಬಿಜೆಪಿ ಸಕರ್ಾರ ಎಂಬುದನ್ನು ಮರೆಯಬಾರದು. ಆದರೆ ತನ್ನ ನಾಟಕಗಳಿಗೆ ಒಳ ಉದ್ದೇಶವನ್ನು ಮರೆಮಾಚುವ ಮುಖವಾಡವನ್ನು ಧರಿಸುವಲ್ಲಿ ಪರಿಣಿತವಾಗಿರುವ ಬಿಜೆಪಿ ಸಕರ್ಾರ ತನ್ನ ಈ ಉದ್ದೇಶ ಬಟಾಬಯಲಾಗದಿರಲೆಂದೇ ಕೆಲವು ಉತ್ತಮರಿಗೂ ಪ್ರಶಸ್ತಿಯನ್ನು ಕೊಡುತ್ತದೆ. ಕೊಟ್ಟಿದೆ. ಆದರೆ ಇದು ಅವರ ಜನಪರತೆಗೆ ಮತ್ತು ವಿದ್ವತ್ತಿಗೆ ಅಥವಾ ಸಾಧನೆಗೆ ನೀಡಿರುವ ಮನ್ನಣೆಯಲ್ಲ. ಬದಲಿಗೆ ತನ್ನ ಕೋಮುವಾದಿ ಹುನ್ನಾರಗಳು ಕಾಣಿಸದಂತೆ ಹಾಕಿಕೊಂಡಿರುವ ಮುಖವಾಡಗಳು.
ನಮ್ಮ ಶ್ರೇಷ್ಠ ಮನಸ್ಸುಗಳು ಪ್ರಶಸ್ತಿಯ ಸಂದರ್ಭದಲ್ಲಿ ಸರಿಯಾದ ನಿಲುವನ್ನು ತೆಗೆದುಕೊಳ್ಳದೆ ಬಿಜೆಪಿಯ ಮುಖವಾಡಗಳಂತೆ ಬಳಕೆಯಾಗಿಬಿಡುತ್ತಿರುವುದು ಈ ನಾಡಿನ ಸಾಂಸ್ಕೃತಿಕ ದುರಂತ.
 ಕೇವಲ ಬಿಜೆಪಿ ಪಕ್ಷದ ಸಕರ್ಾರ ಎಂದೇನಲ್ಲ. ಎಲ್ಲಾ ಪ್ರಭುತ್ವಗಳು ್ಲ ಪ್ರಶಸ್ತಿ, ಪದವಿ ನೀಡುವ ಮೂಲಕ ಸಾಂಸ್ಕೃತಿಕ ಲೋಕದಲ್ಲಿ ಇದೇ ರಾಜಕಾರಣವನ್ನು ಮಾಡುತ್ತವೆ. ಹೀಗಾಗಿ ಆಂಧ್ರದಂಥಾ ಕಡೆಗಳಲ್ಲಿ ಪ್ರಗತಿಪರ ಸಾಹಿತಿಗಳು ಪ್ರಭುತ್ವದಿಂದ ಗಾವುದ ದೂರವನ್ನು ಉಳಿಸಿಕೊಂಡಿರುತ್ತವೆ. ಜನರಿಗೆ ಹತ್ತಿರವಿರಬೇಕು. ಪ್ರಭುತ್ವಕ್ಕೆ ದೂರವಿರಬೇಕು ಎಂಬುದು ಅಂಥವರು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಏಕೆಂದರೆ ಸಾಮಾಜಿಕ ಜೀವನದಲ್ಲಿ ಪ್ರಭುತ್ವಗಳು ಮೇಲ್ವರ್ಗ ಮತ್ತು ಮೇಲ್ಜಾತಿಗಳ ಪರವಾಗಿ ನಿಂತು ನಾಡಿನ ಜನತೆಯ ಮೇಲೆ ನಡೆಸುತ್ತಿರುವ ಅನ್ಯಾಯಗಳನ್ನು ಕಂಡ ನಂತರ ಅಂಥಾ ಪ್ರಭುತ್ವಕ್ಕೆ ಕಲಾ ಪೋಷಕ ಸ್ಥಾನವನ್ನು ಕೊಡುವುದು ಕೊಲೆಗಾರನಿಗೆ ಸನ್ಮಾನ ಮಾಡಿದಂತೆ ಎಂಬುದು ಅವರುಗಳ ನಿಲುವು. ಹೀಗಾಗಿ ಅಲ್ಲಿ ಇಂಥಾ ನೈಚ್ಯಾನುಸಂಧಾನಗಳು ಸಂಭವಿಸುವುದೇ ಇಲ್ಲ. ಅದಕ್ಕೆ ಕಾರಣ ಸ್ಪಷ್ಟ. ಅವರು ಪ್ರಭುತ್ವಕ್ಕೆ ದೂರ. ಕಷ್ಟಜೀವಿಗಳಿಗೆ ಹತ್ತಿರ. ನಮ್ಮಲ್ಲಿ???
 ಇಷ್ಟಾಗಿಯೂ ಕನ್ನಡ ಸಂದರ್ಭದಲ್ಲಿ ಈ ಹಿಂದೆ ಹಿರಿಯ ಎಡಪಂಥೀಯ ಚಿಂತಕರಾದ ಜಿ. ರಾಮಕೃಷ್ಣರವರು, ಇದೀಗ ನೃಪತುಂಗ ಪ್ರಶಸ್ತಿಯನ್ನು ನಿರಾಕರಿಸಿರುವ ಹಿರಿಯ ಚಿಂತಕ ದೇವನೂರು ಮಹಾದೇವರವರು ನಮ್ಮ ಮುಂದಿದ್ದಾರೆ. ಅದೇ ಲಿಸ್ಟಿನಲ್ಲಿ ಪ್ರಸ್ತುತ ರಾಜ್ಯೋತ್ಸವ ಪ್ರಶಸ್ತಿಯನ್ನು ತನಗೆ ನೀಡಲಾಗುತ್ತಿದೆ ಎಂಬ ಸೂಚನೆ ಸಿಕ್ಕೊಡನೆ ಪ್ರಶಸ್ತಿ ಬೇಡವೆಂದು ಸಕರ್ಾರಕ್ಕೆ ಪತ್ರ ಬರೆದ ಕನ್ನಡಪ್ರಭದ ಸದ್ಯದ ಸಂಪಾದಕ ಶಿವಸುಬ್ರಹ್ಮಣರವರೂ ಸೇರುತ್ತಾರೆ. ಆದರೂ ಇಂಥವರು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರು.
 ಆದ್ದರಿಂದಲೇ ಈ ಸಂದರ್ಭದಲ್ಲಿ ಇಂಗ್ಲೀಷ್ ಕವಿ ಯೇಟ್ಸ್ ಹೇಳುವ ಮಾತೇ ಮತ್ತೆ ಮತ್ತೆ ಜ್ನಾಪಕಕ್ಕೆ ಬರುತ್ತದೆ; ಖಿಜ ಛಜಣ ಟಚಿಛಿಞ ಚಿಟಟ ಛಿಠಟಿತಛಿಣಠಟಿ, ತಿಟಜ ಣಜ ತಿಠಡಿಣ ಚಿಡಿಜ ಜಿಣಟಟ ಠಜಿ ಠಿಚಿಠಟಿಚಿಣಜ ಟಿಣಜಟಿಣಥಿ (ಉತ್ತಮರು ಎಲ್ಲಾ ಬಗೆಯ ನಂಬಿಕೆಗಳನ್ನು ಕಳೆದುಕೊಂಡಿದ್ದರೆ, ದುಷ್ಟರು ಭಾವೋನ್ಮತ್ತ ತೀವ್ರತೆಯನ್ನು ತುಂಬಿಕೊಂಡಿದ್ದಾರೆ.)

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ನವೆಂಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಕ್ಟೋ   ಡಿಸೆ »
   123456
  78910111213
  14151617181920
  21222324252627
  282930  
 • ವಿಭಾಗಗಳು