ಚೆಕ್ ಅಂಡ್ ಕೌಂಟರ್ ಚೆಕ್, ಪೊಲಿಟಿಕಲ್ reporting na ಮೂಲಮಂtra

ಟಿವಿ ಮಾಧ್ಯಮದ ರಾಜಕೀಯ ವರದಿಗಾರಿಗೆ ಈಗ ಅತ್ಯಂತ ಸವಾಲಿನ ಕೆಲಸ. ಏಕೆಂದರೆ ಕ್ಷಣ ಕ್ಷಣಕ್ಕೆ ಬದಲಾಗುವ ರಾಜಕೀಯ ಘಟನೆಗಳಿಂದ ರಾಜಕೀಯ ವರದಿಗಾರಿಗೆ ಅತ್ಯಂತ ಕಠಿಣ ಆದರೆ ಸ್ವಲ್ಪ ಬುದ್ಧವಂತಿಕೆ, ಮುತುವಜರ್ಿ ವಹಿಸಿಸದರೆ ಇದು ಅತ್ಯಂತ ಸರಳ. ರಾಜಕೀಯ ವರದಿಗಾರಿಕೆ ಮಾಡಲು ಮೊದಲು ಸಂಪರ್ಕಗಳು ಮುಖ್ಯ, ಆನಂತರ ಎಲ್ಲಾ ನಾಯಕರ ಸಾಮಾನ್ಯ ಪರಿಚಯ ಇರಬೇಕು. ಜತೆಗೆ ಘಟನೆಗಳನ್ನು “ರೀಡ್” ಮಾಡುವ ಸಾಮಥ್ರ್ಯ ಇರಬೇಕು. ಚೆಕ್ ಅಂಡ್ ಕೌಂಟರ್ ಚೆಕ್ ಮೂಲ ಮಂತ್ರ ಪಾಲಿಸಿದರೆ ಎಲ್ಲವೂ ಸುಲಭ, ಸಲೀಸು… ಉದಾಹರಣೆಗೆ: ಸಿದ್ದರಾಮಯ್ಯ- ಹೆಚ್.ಡಿ. ರೇವಣ್ಣ ಭೇಟಿ, ಇಬ್ರಾಹಿಂ ಮನೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಭೇಟಿ…..ಪದೇ ಪದೇ ಕಾಂಗ್ರೆಸ್, ಜೆಡಿಎಸ್ ನಾಯಕರಿಂದ ರಾಜ್ಯಪಾಲರ ಭೇಟಿ….ಹೀಗೆ ಪ್ರತಿಯೊಂದು ಭೇಟಿಯ ಹಿಂದಿನ ಉದ್ದೇಶ ಜತೆಗೆ ಅಂದಿನ ರಾಜಕೀಯ ಪರಿಸ್ಥಿತಿಯನ್ನು ಅಳೆಯುವ ಸಾಮಥ್ರ್ಯ ಇದ್ದರೆ ಸುಲಭವಾಗಿ ರಾಜಕೀಯ ವರದಿಗಾರಿಕೆ ಮಾಡಬಹುದು. ಇಲ್ಲದಿದ್ದರೆ ಇದೊಂದು ಕಬ್ಬಿಣದ ಕಡಲೆ ಕಾಯಿಯೇ ಸರಿ. ಇಲ್ಲದಿದ್ದರೆ ಇದೊಂದು ಐಟಿ ಅಥವಾ ಸಿಬಿಐ ರೈಡ್ನಂಥಹ ಸುದ್ದಿಯಾಗಿ ಒಂದೆರಡು ದಿನದಲ್ಲಿ ಸತ್ತು ಹೋಗುತ್ತದೆ. ರಾಜಕೀಯ ವರದಿ ಮಾಡಲು ಮೊದಲು ಫವರ್ ಸೆಂಟರ್ಗಳನ್ನು ಗುರುತಿಸಬೇಕು. 1) ಮುಖ್ಯಮಂತ್ರಿ: 2) ಪ್ರತಿಪಕ್ಷದ ನಾಯಕರು: 3) ಈಗಿನ ಸ್ಥಿತಿಯಲ್ಲಿ ಹೆಚ್.ಡಿ. ರೇವಣ್ಣಗಿಂತ ಹೆಚ್.ಡಿ. ಕುಮಾರಸ್ವಾಮಿಯೇ ಸುದ್ದಿಯ ಅಧಿಕ ಕೇಂದ್ರ ಬಿಂದು: 4) ಸಚಿವರು : 5) ಶಾಸಕರು : 6) ದೆಹಲಿ ಚಟುವಟಿಕೆಗಳು…: 7) ಆಯಾ ಪಕ್ಷಗಳ ಅಧ್ಯಕ್ಷರು, ಉದಾಹರಣೆಗೆ ಈಶ್ವರಪ್ಪ, ಕುಮಾರಸ್ವಾಮಿ, ದೇವೇಗೌಡ, ಡಾ. ಜಿ. ಪರಮೇಶ್ವರ್ ಉಳಿದ ಪಕ್ಷಗಳ ಅಧ್ಯಕ್ಷರ ಮೇಲೂ ನಿಗಾ ಇರಬೇಕು ಆದರೆ ಪ್ರತಿದಿನ ಅಂಥಹ ಅಟೆನ್ಷನ್ ನೀಡಬೇಕಾಗಿಲ್ಲ: 8) ಕಾವೇರಿ, ಕೃಷ್ಣ, ಮಹದಾಯಿತಂಥಹ ನದಿಗಳ ವಿಚಾರಗಳು ಅದರಲ್ಲೂ ಅಂತರರಾಜ್ಯ ನದಿ, ಗಡಿ, ಭಾಷೆಯ ವಿಷಯಗಳಿಗೆ ಸಂಬಂಧಿಸಿದಂತೆ ಇರುವ ವಿಚಾರಕ್ಕೆ ಸದಾ ಗಮನ ಇರಲೇಬೇಕು. ಯಾವ ಘಳಿಗೆಯಲ್ಲಿ ಬೇಕಾದರೂ ನಿಮಗೆ ಸುದ್ದಿ ಡೆವಲಪ್ ಆಗಬಹುದು. 9) ದಂಡಾವತಿ, ಒಳ ನಾಡಿನ ನೀರಾವರಿ, ವಿದ್ಯುತ್ ಯೋಜನೆಗಳು, ಏತ ನೀರಾವರಿ ಯೋಜನೆಗಳ ಬಗ್ಗೆಯೂ ಗಮನವಿರಬೇಕು ಆದರೆ ಪ್ರತಿದಿನ ಅದರ ಹಿಂದಿರುವ ಅವಶ್ಯಕತೆ ಇರುವುದಿಲ್ಲ. 10) ಭಿನ್ನಮತ ಇದ್ದರೆ, ಭಿನ್ನಾಭಿಪ್ರಾಯಗಳನ್ನು ಹೊಂದಿರುವ ನಾಯಕರು, ಶಾಸಕರಿದ್ದರೆ ಅವರ ಮೇಲೆ ನಿಗಾ ಇರಿಸಲೇಬೇಕು. ಅವರ ಓಡಾಡ, ಭೇಟಿ, ಪತ್ರಿಕಾಗೋಷ್ಠಿ ಎಲ್ಲವುದರ ಮೇಲೆ ನಿಗಾ ಇರಬೇಕು. ಮುಖ್ಯಮಂತ್ರಿಯ ಮನೆ ಬಳಿ ಬೆಳಿಗ್ಗೆ 8 ಗಂಟೆಯೊಳಗೆ ಒಂದು ಕ್ಯಾಮರಾ ಯುನಿಟ್ ಸದಾ ಇರಲೇಬೇಕು. ಏಕೆಂದರೆ ಪ್ರತಿದಿನ ಅಲ್ಲಿಂದಲೇ ಮೊದಲು ಸುದ್ದಿಹೊರಡುವುದು. ಯಾರು ಅವರನ್ನು ಭೇಟಿ ಮಾಡಲು ಬಂದರು? ಅವರೇಕೆ ಅಲ್ಲಿದ್ದರು? ಮುಖ್ಯಮಂತ್ರಿಗಳು ಅವರಿಗೆ ಅಪಾಯಂಟ್ಮೆಂಟ್ ನೀಡಿದ್ದರೆ ಇಲ್ಲವೆ, ಅವರೇನು ಮುಖ್ಯಮಂತ್ರಿಗಳ ಬಳಿ ಚಚರ್ಿಸಿದರು. ಅವರು ನಡೆಸಿದ ವಿಚಾರ ವಿನಿಮಯ ಸದಾ ಸುದ್ದಿಯಾಗುತ್ತದೆ. ಮುಖ್ಯಮಂತ್ರಿಗಳು ನೀಡುವ ಎಲ್ಲಾ ಪ್ರತಿಕ್ರಿಯೆಗಳು ಸದಾ ಸುದ್ದಿಯಾಗುತ್ತದೆ. ಆದ್ದರಿಂದ ಬೆಳಿಗ್ಗೆ ಅವರ ಮನೆ ಬಳಿ ಒಂದು ಯುನಿಟ್ ಇರಲೇಬೇಕು. ಯಾವುದೇ ಘಟನೆಗಳಿಗೆ, ಪ್ರತಿಪಕ್ಷದ ನಾಯಕರ ಹೇಳಿಕೆಗಳಿಗೆ, ಪ್ರಕಟಣೆಗಳಿಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದರೆ ಮುಗಿಯಿತು ಅದು ಸುದ್ದಿಯಾಗುತ್ತದೆ. ಅಂಥಹ ಸೀನಿಯರ್ ಅಲ್ಲದಿದ್ದರೂ ಸ್ವಲ್ಪ ಶಿಸ್ತಿನಿಂದ ಇರುವ ಬೇಗ ಎದ್ದು ಆಫೀಸಿಗೆ ಬರುವ ಸುಳ್ಳುಹೇಳದಿರುವ ವರದಿಗಾರರನ್ನು ಮುಖ್ಯಮಂತ್ರಿಗಳ ಹಿಂದೆ ಬಿಟ್ಟರೆ ಸಲೀಸಾಗಿ ಸುದ್ದಿ ಮಿಸ್ ಆಗದಂತೆ ನೋಡಿಕೊಳ್ಳಬಹುದು. ಬೆಳಿಗ್ಗೆ ಎದ್ದು ಬರುವ ವರದಿಗಾರ ಬೇಗ ಮನೆಗೆ ಹೋದರೂ ಪರ್ವಾಗಿರಲ್ಲ. ಏಕೆಂದರೆ ವರದಿಗಾರರು ಬೆಳಿಗ್ಗೆ ಎದ್ದು ಬರುವುದು ದೊಡ್ಡ ಕಷ್ಟದ ಕೆಲಸ. ಎಲ್ಲರಿಗೂ ಮನೆ ಕೆಲಸಗಳಿರುತ್ತವೆ. ರಾಜಕೀಯ ವರದಿಗಾರಿಕೆಯಲ್ಲಿ ಮುಖ್ಯವಾಗಿರುವುದು ವಿಧಾನಸೌಧ ಅಂದರೆ ಶಕ್ತಿ ಕೇಂದ್ರದ ವರದಿಗಾರಿಕೆ: ಈಗಿನ ಪದ್ಧತಿಯಂತೆ ವಿಧಾನಸೌಧಕ್ಕೆ ತೆರಳುವ ಪತ್ರಕರ್ತರು ಸಚಿವಾಲಯದಲ್ಲಿ ರುವ ಮಂತ್ರಿಗಳನ್ನು ಕಂಡು ಮಾತನಾಡಿಸಿ ಸುದ್ದಿ ಬರೆಯುತ್ತಾರೆ. ಇದರಲ್ಲಿ ಬೆಳಿಗ್ಗೆ 12 ಗಂಟೆಗೆ ಸಂಜೆ 4. 30 ಕ್ಕೆ 2 ರೌಂಡ್ಗಳಿರುತ್ತವೆ. ರೌಂಡ್ಸ್ಗೆ ತೆರಳುವ ಪತ್ರಕರ್ತರು ವಿಧಾನಸೌಧದ 2 ನೇ ಹಾಗೂ 3 ನೇ ಮಹಡಿಗಳಲ್ಲಿ ರೌಂಡ್ ಹಾಕುತ್ತಾರೆ. ಎಲ್ಲಾ ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರತಿನಿಧಿಗಳು ಈ ರೌಂಡ್ಸ್ನಲ್ಲಿ ಇರುತ್ತಾರೆ. ಯಾರಾದರೂ ಮಂತ್ರಿಗಳು ಅವರ ಕಾಯರ್ಾಲಯಗಳಿಲ್ಲಿ ಇದ್ದರೆ ಮಾತನಾಡಿಸುತ್ತಾರೆ. ಇಲ್ಲದಿದ್ದರೆ ಗ್ರೌಂಡ್ ಫ್ಲೋರಿನಲ್ಲಿರುವ ಟ್ರಾನ್ಸ್ಫರ್ಸ್ ವಿಭಾಗಕ್ಕೆ ಭೇಟಿ ಕೊಟ್ಟು ಯಾವುದಾದರೂ ಟ್ರಾನ್ಸ್ಫರ್ಸ್ಗಳಾಗಿದ್ದರೆ ನೋಡಿಕೊಂಡು ವಾಪಸ್ಸಾಗುತ್ತಾರೆ. ಟ್ರಾನ್ಸ್ಫರ್ ವಿಭಾಗಕ್ಕೆ ನಿಮ್ಮ ಈಮೇಲ್ ಐಡಿ ಕೊಟ್ಟರೆ ಒಮ್ಮೆಮ್ಮೆ ಅವರೇ ಟ್ರಾನ್ಸ್ಫರ್ ಆದ ಸುದ್ದಿಗಳನ್ನು ಮೇಲ್ ಮಾಡುತ್ತಾರೆ. ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದಶರ್ಿ ಪ್ರತಿದಿನ ರಾತ್ರಿ 9 ಗಂಟೆ ನಂತರ ಮುಖ್ಯಮಂತ್ರಿಗಳ ನಾಳೆ ಕಾರ್ಯಕ್ರಮದ ಬಗ್ಗೆ ನಿಮಗೆ ಮೇಲ್ ಮೂಲಕ ಎಸ್ಎಂಎಸ್ ಮೂಲಕ ಮಾಹಿತಿ ನೀಡುತ್ತಾರೆ. ಕೆಲವೊಮ್ಮೆ ನಾವೇ ಅಜರ್ೆಂಟಿದ್ದರೆ ಪೋನ್ಮಾಡಿ ಕೇಳಿಕೊಳ್ಳಬಹುದು. ಅವರು ಕಳುಹಿಸುವ ಎಸ್ಎಂಎಸ್ನಿಂದ ಮುಖ್ಯಮಂತ್ರಿಗಳ ಚಲನವನಲನದ ಬಗ್ಗೆ ಮಾಹಿತಿ ಸಿಗುತ್ತದೆ. ಕೆಲವೊಮ್ಮೆ ತುತರ್ು ಪತ್ರಿಕಾಗೋಷ್ಠಿಗಳಿದ್ದಾಗ ಮೊಬೈಲ್ನಲ್ಲಿ ಕರೆ ಮಾಡಿ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದಶರ್ಿಗಳ ಕಚೇರಿ ಸುದ್ದಿಮುಟ್ಟಿಸುತ್ತದೆ. ನಾಳಿನ ಕಾರ್ಯಕ್ರಮದಲ್ಲಿ ಸಚಿವ ಸಂಪುಟ ಸಭೆ, ಬೇರೆ ಯಾವುದೇ ಸಭೆಗಳಿದ್ದರೆ ನಾವುಗಳು ಕರ್ಟನ್ ರೈಸರ್ ಸ್ಟೋರಿಗಳನ್ನು ಮಾಡಿ ಸುದ್ದಿ ಏರ್ ಮಾಡಬಹುದು. ಅಥವಾ ಸ್ಕ್ರಾಲ್ ನ್ಯೂಸ್ ಹಾಕಬಹುದು. ಉದಾಹರಣೆಗೆ ಕಾವೇರಿ ನೀರಿನ ಬಗ್ಗೆ ಸರ್ವ ಪಕ್ಷಗಳ ಸಭೆ ಕರೆದರೆ ಆ ಸಭೆ ಆಗುವವರೆಗೆ ಸುದ್ದಿ ಓಡಿಸಬಹುದು. ಯಾರು ಪಾಲ್ಗೊಳ್ಳುತ್ತಾರೆ ಇಲ್ಲಾ, ಏನು ಚಚರ್ಿಸಬಹುದು, ನೀರು ಬಿಡುತ್ತಾರಾ, ಕಾನೂನಿನ ತೊಡಕುಗಳಿವೆಯೇ ಹೇಗೆ ಎಂಬ ಬಗ್ಗೆ ಸುದ್ದಿ ಹಾಕಬಹುದು. ಸಚಿವ ಸಂಪುಟ ಸಭೆ ನಡೆದರೆ ಸಭೆಗೂ ಮುನ್ನ ಯಾವ ವಿಷಯಗಳ ಬಗ್ಗೆ ಚಚರ್ೆ ನಡೆಯಬಹುದು, ತೀಮರ್ಾನ ತೆಗೆದುಕೊಳ್ಳುವ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲುವ ವರದಿ ನೀಡಬೇಕು. ಸಚಿವ ಸಂಪುಟ ಸಭೆ ನಂತರ ಬ್ರೀಫ್ ಮಾಡಲಾಗುತ್ತದೆ. ಅದು ಎಷ್ಟು ಗಂಟೆಗೆ ಎಂಬುದನ್ನು ಮೊದಲೇ ಮಾಧ್ಯಮ ಮಿತ್ರರಿಗೆ ತಿಳಿಸಲಾಗುತ್ತದೆ. ವರದಿಗಾರರು ಚುರುಕು ಬುದ್ಧಿ ಉಳ್ಳವರಾಗಿದ್ದರೆ ಸಭೆ ನಂತರ ಹೊರಬಂದವರನ್ನು ಕೇಳಿಕೊಂಡು ತಕ್ಷಣವೇ ಸುದ್ದಿ ನೀಡಬಹುದು. ಇಲ್ಲವಾದರೆ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳುವ ತನಕ ಕಾಯಬಹುದು. ಇತ್ತೀಚಿನ ದಿನಗಳಲ್ಲಿ ನಾಯಕರ ನಡುವಿನ ಭಿನ್ನಮತ, ಭಿನ್ನಾಭಿಪ್ರಾಯಗಳು ಹೆಚ್ಚಾಗಿರುವುದರಿಂದ ಕ್ಯಾಬಿನೆಟ್ ಸಭೆ ನಡೆಯುವ ವೇಳೆ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ನಮಗೆ ಗೋಚರಿಸುತ್ತವೆ. ಉದಾಹರಣೆಗೆ ಸಚಿವ ಸಂಪುಟ ನಡೆಯುತ್ತಿದ್ದ ವೇಳೆಯಲ್ಲಿಯೇ ಸಚಿವ ಜನಾರ್ದನರೆಡ್ಡಿ ಹೊರಬಂದರೆನ್ನಿ ತಕ್ಷಣವೇ ಅಲ್ಲಿರುವ ಪತ್ರಕರ್ತ ಎಚ್ಚೆತ್ತುಕೊಳ್ಳಬೇಕು. ಅವರು ಹೊರಬಂದಿದ್ದು ಏಕೆ, ಒಳಗೆ ಏನು ಚಚರ್ೆ ನಡೆಯಿತು. ಮಾತಿನ ಚಕಮಕಿ ಆಯಿತೇ, ಯಾರು ಏನು ಹೇಳಿದರು, ಮಾತಿನ ಚಕಮಕಿ ಯಾರ ನಡುವೆ ನಡೆಯಿತು? ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ತೀಮರ್ಾನಗಳ ಹಿಂದೆ ನಡೆದಿರಬಹುದಾದ ಚಚರ್ೆ, ಮಾತಿನ ಚಕಮಕಿ ಇವುಗಳ ಬಗ್ಗೆ ನಿಮ್ಮ ಕಾಂಟಾಕ್ಟ್ ಬಳಿಸಿ ಸುದ್ದಿ ನೀಡಿದರೆ ಜನ ಕುತೂಹಲದಿಂದ ವೀಕ್ಷಿಸುತ್ತಾರೆ. ಇತರ ವರದಿಗಾರರಿಗಿಂತ ನೀವು ಭಿನ್ನವಾಗುತ್ತೀರಿ. ಕೇವಲ ಬ್ರಿಫಿಂಗ್ನಲ್ಲಿ ಹೇಳಿದನ್ನು ಕೇಳಿಕೊಂಡು ಬಂದರೆ ಏನೂ ಪ್ರಯೊಜನ ವಾಗುವುದಿಲ್ಲ. ಪ್ರತಿಯೊಂದು ಕ್ಯಾಬಿನೆಟ್ ತೀಮರ್ಾನದ ಹಿಂದೆ ಲೆಕ್ಕಾಚಾರಗಳಿರುತ್ತವೆ. ಅವುಗಳ ಹಿಂದೆ ಸ್ಕಾಂಡಲ್ ಆಗುವಂಥಹ ಸ್ಫೋಟಕ ಸುದ್ದಿಗಳಿರುತ್ತವೆ. ಅವುಗಳನ್ನು ಗ್ರಹಿಸಿ ಬರೆದರೆ ಅದ್ಭುತ ವರದಿಗಳಾಗುತ್ತವೆ. ಉದಾಹರಣೆಗೆ 2009ನ ರ ನವೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿಗಳು, ಬಳ್ಳಾರಿ ಜಿಲ್ಲೆಯ ಡಿಸಿ, ಎಸ್ಪಿ ಸೇರಿದಂತೆ ವಿವಿಧ ಇಲಾಖೆಗಳ 57 ಮಂದಿಯನ್ನು, ಅದರಲ್ಲೂ ರೆಡ್ಡಿ ಬಳಗಕ್ಕೆ ನಿಷ್ಠರಾಗಿದ್ದ ಅಧಿಕಾರಿಗಳನ್ನು ವಗರ್ಾವಣೆ ಮಾಡಿದ್ದರು. ಆದರೆ ಬಳಿಕ ನಡೆದ ಭಿನ್ನಮತೀಯ ಚಟುವಟಿಕೆಗಳ ನಂತರ ವಗರ್ಾವಣೆಯಾದರವರನ್ನು ಅಲ್ಲಿಗೆ ವಾಪಸ್ ವಗರ್ಾಯಿಸಲಾಯಿತು. ಬಳಿಕ ಕ್ಯಾಬಿನೆಟ್ ಸಭೆಯಲ್ಲಿ ಈ ಹಿಂದೆ ಬಳ್ಳಾರಿ ಗಣಿ ದೊರೆಗಳ ಮೇಲೆ ಹಾಕಲಾಗಿದ್ದ ಕೆಲವು ಕ್ರಿಮಿನಲ್ ಕೇಸ್ಗಳನ್ನು ವಾಪಸ್ ತೆಗೆದುಕೊಳ್ಳಲಾಗಿತ್ತು. ಹೀಗೆ ಪ್ರತಿಯೊಂದು ಕ್ಯಾಬಿನೆಟ್ ತೀಮರ್ಾನಗಳ ಹಿಂದೆ ಒಂದೊಂದು ಲೆಕ್ಕಾಚಾರಗಳಿರುತ್ತವೆ. ಒತ್ತಡದ ತೀಮರ್ಾನಗಳಿರುತ್ತವೆ. ಅವುಗಳನ್ನು ಗ್ರಹಿಸಿ ಬರೆದರೆ ಸುದ್ದಿ ಹಿಟ್ ಆಗುತ್ತದೆ. ಸುದ್ದಿಯನ್ನು ಕೇಳೋಣ ಎಂದೆನಿಸುತ್ತದೆ. ಇಲ್ಲವಾದರೆ ಎಲ್ಲರಂತೆ ಪ್ರೆಸ್ಮೀಟ್ ಕವರ್ ಮಾಡಿದ ಸುದ್ದಿ ನೀಡಿದಂತಾಗುತ್ತದೆ. 17 ಶಾಸಕರ ಬಂಡಾಯ, ಅನರ್ಹತೆ, ಪಕ್ಷಾಂತರದಂಥಹ ಎಪಿಸೋಡ್ಗಳ ಘಟನೆಗಳನ್ನು ವರದಿ ಮಾಡುವಾಗ ಮೈಯೆಲ್ಲಾ ಕಣ್ಣಾಗಿಟ್ಟುಕೊಂಡು ಸುದ್ದಿ ನೀಡಬೇಕಾಗುತ್ತದೆ. ವಿಶ್ವಾಸಮತಯಾಚನೆಯಂಥಹ ಸುಕ್ಷ್ಮ ವಿಷಯಗಳನ್ನು ವರದಿಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಕಾನೂನಿನ ವಿಷಯ ಅದರಲ್ಲೂ ಸಂವಿಧಾನದ ಪರಿಚ್ಘೇದಗಳನ್ನು ಉಲ್ಲೇಖಿಸುವ ವಿಷಯಗಳಿದ್ದಾಗ ಮತ್ತಷ್ಟು ಎಚ್ಚರವಾಗಿರಬೇಕಾಗುತ್ತದೆ. ಸುದ್ದಿಗಳು ಪ್ಲಾಂಟ್ ಆಗದಂತೆ ಎಚ್ಚರವಹಿಸಿ, ಚೆಕ್ ಅಂಡ್ ಕೌಂಟರ್ ಚೆಕ್ಮಾಡಿ ಸುದ್ದಿ ನೀಡುವುದು ಮಸ್ಟ್. ಕಾಂಗ್ರೆಸ್ನ ಶಾಸಕರು ಪೂನಾ ರೆಸಾರ್ಟನಲ್ಲಿ, ಜೆಡಿಎಸ್ನ ಶಾಸಕರು ಈಗಲ್ಟನ್ನಲ್ಲಿ, ಬಂಡಾಯ ಶಾಸಕರು ಚೆನ್ನೈನಲ್ಲಿ ಜತೆಗೆ ಬಿಜೆಪಿ ಶಾಸಕರು ಗೋಲ್ಡನ್ ಪಾಮ್ಸ್ ರೆಸಾರ್ಟನಲ್ಲಿದ್ದಾಗ ಬಹಳ ಎಚ್ಚರಿಕೆ ವಹಿಸಿ ಸುದ್ದಿ ನೀಡಬೇಕಾಗುತ್ತದೆ. ಈ ನಾಲ್ಕೂ ಕಡೆ ನಿಗಾವಹಿಸಿ ಚೆಕ್ ಅಂಡ್ ಕೌಂಟರ್ ಚೆಕ್ ಮಾಡಿ ಸುದ್ದಿ ನೀಡಬೇಕು. ಸುಮ್ಮನೆ ಸುದ್ದಿ ಪ್ಲಾಂಟ್ ಮಾಡುವವರ ಹುನ್ನಾರಕ್ಕೆ ಬಲಿಯಾಗಬಾರದು. ಉದಾಹರಣೆಗೆ, ಕುಣಿಗಲ್ನ ಶಾಸಕ ರಾಮಸ್ವಾಮಿಗೌಡ ಬಿಜೆಪಿ ಸೇರಿದ ಎಂದು ಪೊಲೀಸ್ ಕಮೀಷನರ್ ಕಚೇರಿ ಎದುರಿಗಿರುವ ಚಾನೆಲ್ನವರು ಬಿತ್ತರಿಸಿದರು. ಆದರೆ ಕುಣಿಗಲ್ ಶಾಸಕ ರಾಮಸ್ವಾಮಿಗೌಡ ನಮ್ಮ ಚಾನೆಲ್ನ ಸ್ಟುಡಿಯೋದಲ್ಲಿ ಕುಳಿತಿದ್ದರು. ಆ ಸುದ್ದಿ ತಪ್ಪಾಯಿತಲ್ಲವೇ? ಕ್ರೆಡಿಬಲಿಟಿ ಹೋಯಿತಲ್ಲವೆ? ಸುದ್ದಿ ಮೊಡಲು ನೀಡಬೇಕೆಂಬ ಹಟಕ್ಕ ಬಿದ್ದರೆ ಹೀಗೇಯೇ ಆಗುತ್ತದೆ. ಒಮ್ಮೆ ಚೆಕ್ ಮಾಡಬೇಕು. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದಿಟ್ಟುಕೊಳ್ಳಿ, ಆಗ ಅವರ ನಾಯಕರಿಗಾಗಲಿ, ಅವರ ಹತ್ತಿರದವರಿಗಾಗಲಿ ಪೋನಾಯಿಸಿ ತಿಳಿದುಕೊಳ್ಳಬೇಕು. ಒಂದಾದರೂ ಸೋರ್ಸ ಕನ್ಫರ್ಮ ಮಾಡಿದರೆ ಒಳ್ಳೆಯದು. ಒಂದು ತೀಮರ್ಾನಕ್ಕೆ ಬರಬೇಕಾದರೆ ಕನಿಷ್ಠ ನಾಲ್ಕು ಚೆಕ್ ಅಂಡ್ ಕೌಂಟರ್ ಚೆಕ್ ಮಾಡಲೇ ಬೇಕು. ಆಗ ಮಾತ್ರ ಸತ್ಯದ ಹತ್ತಿರಕ್ಕೆ ನಾವು ಹೋಗುತ್ತೇವೆ. ವೀಕ್ಷಕರಿಗೆ ಸತ್ಯವನ್ನು ಹೇಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸ್ಪಷ್ಟನೆ ನೀಡುತ್ತಲೇ ಇರಬೇಕಾಗುತ್ತದೆ. ಬಂಡಾಯ ಶಾಸಕರು ಚೆನ್ನೈನಿಂದ ಕೊಚ್ಚಿನ್ಗೆ, ಕೊಚ್ಚನ್ನಿಂದ ಮುಂಬೈಗೆ, ಮುಂಬೈನಿಂದ ಗೋವಾ ರೆಸಾಟರ್್ಗೆ ಹೋದಾಗಲಂತೂ ಸುದ್ದಿ ನೀಡುವುದು ಒಂದು ಸವಾಲಿನ ಸಂಗತಿಯೇ ಆಗಿರುತ್ತದೆ. ಬಂಡಾಯ ಶಾಸಕರ ಸಂಖ್ಯೆ, ಬಂಡಾಯ ಶಾಸಕರ ಗುರಿ, ಬೇಡಿಕೆ, ಎಷ್ಟು ಮಂದಿ ಇದ್ದಾರೆ, ಅವರು ಮುಂದೆ ಎಲ್ಲಿಗೆ ಹೋಗುತ್ತಾರೆ, ಸಂಧಾನ, ಸಂಧಾನಕಾರರಾಗಿ ತೆರಳುವವರು ಯಾರು? ಸಂಧಾನದ ಪ್ರಗತಿ……ಪ್ರತಿಯೊಂದನ್ನು ವರದಿ ಮಾಡುವಾಗ ನಮಗಿರುವ ಸಂಪರ್ಕದ ಮೇಲೆ ಖಚಿತ ಸುದ್ದಿ ನೀಡಬೇಕಾಗುತ್ತದೆ. ಇಲ್ಲಿ ಸಂಪ್ರದಾಯಕ ವರದಿಗಾರಿಕೆ ಸಾಧ್ಯವಿಲ್ಲ. ಅವರು ಹೀಗೆ ಹೇಳಿದರು. ಅವರು ಹೀಗೆ ಪ್ರತಿಕ್ರಿಯಿಸಿದರು ರೀತಿಯಲ್ಲಿ ವರದಿ ಮಾಡಲು ಇಲ್ಲಿ ಸಾಧ್ಯವಿಲ್ಲ. ಹತ್ತು ಸೆಕೆಂಡಿನ ವಿಷುಯಲ್ಸ್ ಸಿಕ್ಕಿದರೆ ಸಾಕೆಂದು ಪರದಾಡಬೇಕಾಗುತ್ತದೆ. ಅಂಥಹ ಸಂದರ್ಭದಲ್ಲಿ ನಿಮ್ಮ ಕಾಂಟಾಕ್ಟ್ ಅಷ್ಟೇ ಕೆಲಸಮಾಡಬಲ್ಲದು. ಇಲ್ಲಿ ಯಾರ ಶಿಫಾರಸ್ಸು ನಡೆಯುವುದಿಲ್ಲ. ಎಷ್ಟೇ ರೋಪ್ ಹಾಕಿದರೂ ಕೇಳಿಸಿಕೊಳ್ಳುವರಿರುವುದಿಲ್ಲ. ನಿಮ್ಮ ಸಂಪರ್ಕವಷ್ಟೇ ಚಾನೆಲ್ಗೆ ಸುದ್ದಿ ತರಬರದಲ್ಲಷ್ಟೇ. ಎಲ್ಲರಿಗೂ ಕೈಕೊಟ್ಟು ಹೋದ ಬಂಡಾಯ ಶಾಸಕರು ನಿಮ್ಮ ಪೋನ್ ಕರೆಗಳನ್ನು ಸ್ವೀಕರಿಸುವುದಿಲ್ಲ. ಯಾರ ಸಂಪರ್ಕಕ್ಕೂ ಸಿಕ್ಕುವುದಿಲ್ಲ. ಬೇರೆ ಸಿಮ್ ಖರೀದಿಸಿ ಗುಪ್ತಚರ ಇಲಾಖೆಯ ಕಣ್ ತಪ್ಪಿಸಿ ಓಡಾಡುತ್ತಿರುತ್ತಾರೆ. ಆಗ ನೀವು ಬಂಡಾಯ ಶಾಸಕರ ಆಪ್ತರು, ಅವರ ಸಂಬಂಧಿಕರ ಜತೆ ಸಂಪರ್ಕ ಬೆಳೆಸಿ ವರದಿ ನೀಡಬೇಕಾಗುತ್ತದೆ. ಅಪ್ಪಿ ತಪ್ಪಿ ಪೊನ್ಗೆ ಸಿಕ್ಕ ಅವರ ವರ್ತನೆ ಆಧರಿಸಿ ವರದಿ ನೀಡಬೇಕಾಗುತ್ತದೆ. ಒಮ್ಮೊಮ್ಮೆ ರಾಜಕೀಯ ಧುರೀಣರೇ ನಮಗೆ ಪೋನಾಯಿಸಿ ಸುದ್ದಿ ಕೇಳುತ್ತಿರುತ್ತಾರೆ. ಸುದ್ದಿಯ ತುತ್ತ ತುದಿಯಲ್ಲಿ ಕುಳಿತ ನಿಮಗೆ ಆಗ ಆಗುವ ಅಷ್ಟಿಷ್ಟಲ್ಲ. ಆದರೆ ಅದರಲ್ಲೆ ಮೈಮರೆಯಬಾರದು. ಚೆನ್ನೈನ ಏರ್ಪೋರ್ಟನಲ್ಲಿ ಜನಾರ್ದನ ರೆಡ್ಡಿ ಏನು ಮಾತುಕತೆ ನಡೆಸಿದರು? ಆರ್. ಅಶೋಕ್, ಬಸವರಾಜ ಬೊಮ್ಮಯಿ ಸಂಧಾನದ ಮಾತುಕತೆ ಮುರಿದುಬಿದ್ದು ಬರಿಗೈಯಲ್ಲಿ ವಾಪಸ್ಸಾಗಳು ಕಾರಣಗಳೆನು ಎಂಬ ಒಳನೊಟದ ಸುದ್ದಿಗಳನ್ನು ಇಂಥಹ ಸಂದರ್ಭದಲ್ಲಿ ನೀಡಿದರೆ ಹಿಟ್ ಆಗುತ್ತವೆ. ಅಂಥಹ ಸುದ್ದಿಗಳನ್ನು ನೀಡಲು ಜರ್ನಲಿಸಂನ ಕ್ಲಾಸ್ನಲ್ಲಿ ಕಲಿಯುವ ಥಿಯರಿ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಇಲ್ಲಿ ನಿಮ್ಮ ಸಂಪರ್ಕವೇ ನಿಮಗೆ ಶ್ರೀರಕ್ಷೆಯಾಗಿರುತ್ತದೆ. ಘಟನೆಗಳನ್ನು ರೀಡಿಂಗ್ ಮಾಡುವ ನಿಮ್ಮ ಸಾಮಥ್ರ್ಯವಷ್ಟೇ ನಿಮಗೆ ಸುದ್ದಿ ತಂದುಕೊಡಬಲ್ಲದು. ಆರ್. ಅಶೋಕ್, ರೆಡ್ಡಿ ಮಾತುಕತೆ ವಿಫಲವಾಯಿತೆಂದರೆ ಬಂಡಾಯ ಶಾಸಕರ ಗುರಿ ಬೇರೆಯೇ ಇದೆ. ಮರುದಿನ ಬೆಳಿಗ್ಗೆ ಜೆಡಿಎಸ್ನ ಜಮೀರ್ ಅಹಮದ್, ಪುಟ್ಟಣ್ಣ ಚೆನ್ನೈನಲ್ಲಿ ಕಾಣಿಸಿಕೊಂಡ ತಕ್ಷಣ ನಮಗೆ ಈ ಬಂಡಾಯ ಶಾಸಕರ ಹಿಂದೆ ಜೆಡಿಎಸ್ ನಾಯಕರಿದ್ದಾರೆ ಎಂಬ ಅರಿವಾಗಬೇಕಾಗುತ್ತದೆ. ಅವರ ಮುಂದಿನ ನಡೆ, ಅವರೇನು ಅಲ್ಲಿ ಮಾಡುತ್ತಾರೆ. ಅವರ ಗುರಿ, ಮುಂದೇನು ಎಂಬ ಬಗ್ಗೆ ನಮ್ಮ ದೃಷ್ಟಿ ಹರಿಯಬೇಕಗುತ್ತದೆ. ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಇರುವ ಹೆಚ್. ಡಿ. ಕುಮಾರಸ್ವಾಮಿ ಗೆಸ್ಟ್ಹೌಸ್ನ ಚಟುವಟಿಕೆಗಳ ಮೇಲೆ ತೀವ್ರ ನಿಗ ಇಡಬೇಕಾಗುತ್ತದೆ. ಈಗೆಲ್ಲಾ ಮುರ್ನಾಲ್ಕು ಓಬಿ ವ್ಯಾನ್ಗಳಿರುವುದರಿಂದ ಪ್ರತಿಯೊಂದು ಘಟನೆಗಳನ್ನು, ಕಾರ್ಯಕ್ರಮಗಳನ್ನು, ಪ್ರೆಸ್ಮೀಟ್ಗಳನ್ನು ಲೈವ್ ಪ್ರಸಾರ ಮಾಡಬಹುದು. ಆದರೆ ಹೆಚ್ಡಿಕೆ ಮಾಧ್ಯಮಗಳಿಗೆ ನೀಡುವ ಹೇಳಿಕೆಗಳೇ ಬೇರೆ. ಅವರ ಲೆಕ್ಕಾಚಾರಗಳೇ ಬೇರೆ ಇರುತ್ತವೆ. ವಿಶ್ವಾಸಮತಯಾಚನೆಯಂಥಹ ಸಂದಿಗ್ಧ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತಮ್ಮ ಹೇಲಿಕೆಗಳ ಮೂಲಕ ನಾಯಕರು ನೀಡುವ ಹೇಳಿಕೆಗಳೇ ಬೇರೆ ಇರುತ್ತವೆ ಆವರು ಮಾಡುವ ಕೆಲಸಗಳೇ ಬೇರೆ ಇರುತ್ತವೆ. ಆಗ ರಾಜಕೀಯ ವರದಿ ಮಾಡುವವರು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಚೆನ್ನೈನಿಂದ ನರೇಂದ್ರ ಸ್ವಾಮಿ, ಆನಂದ್ ಅಸ್ನೋಟಿಕರ್ ಇಬ್ಬರೂ ಪುಟ್ಟಣ್ಣ ಹಾಗೂ ಜಮೀರ್ ಜತೆ ಬೆಂಗಳೂರಿಗೆ ಹೊರಟರೆಂದರೆ ಅದರ ಹಿಂದೆ ಕುಮಾರಸ್ವಾಮಿ ಕೈ ಕೆಲಸ ಇದೆ ಎಂಬುದನ್ನು ಕೂಡಲೇ ಗ್ರಹಿಸಬೇಕಾಗುತ್ತದೆ. ಎಂ.ಸಿ. ನಾಣಯ್ಯ, ಹೆಚ್ಡಿಕೆ ರಾಜಭವನಕ್ಕೆ ಭೇಟಿ ನೀಡಿದರು. ಚೆನ್ನೈನಿಂದ ಬಂದ ಶಾಸಕರು ಅವರ ಜತೆ ಒಳಗೆ ಹೋದರು ಎಂದಾಕ್ಷಣ ನೀವು, ಏಕೆ, ಏನು, ಯಾವ ವಿಷಯ ಇರಬಹುದು ಎಂಬುದನ್ನು ರೀಡ್ ಮಾಡಬೇಕಾಗುತ್ತದೆ. ರಾಜಭವನದಿಂದ ಸುದ್ದಿಗಳು ಅಷ್ಟು ಸುಲಭವಾಗಿ ಸಿಕ್ಕುವುದಿಲ್ಲ. ಆಗ ರಾರಜಕೀಯ ವರದಿಗಾರರ ಕಾಂಟಾಕ್ಟ್ಗಳೇ ಹೆಚ್ಚು ಕೆಲಸಕ್ಕೆ ಬರುತ್ತದೆ. ಸಾಂಪ್ರದಾಯಕ ವರದಿಗಾರಿಕೆ ಇಲ್ಲಿ ನಡೆಯುವುದಿಲ್ಲ. ಮೊದ ಮೊದಲು ಕಾಂಗ್ರೆಸ್ ನಾಯಕರು ಬಂಡಾಯಕ್ಕೂ ನಮಗೂ ಏನೂ ಸಂಬಂಧ ಇಲ್ಲಾ ಎಂದರು. ಕಡೆಗೆ ತಮ್ಮ ಶಾಸಕರನ್ನು ರೆಸಾರ್ಟಗೆ ಕರೆದೊಯ್ದರು. ಸಿಎಂ ಇಬ್ರಾಹಿಂ ಮನೆಯಲ್ಲಿ ಹೆಚ್ಡಿಕೆ- ಸಿದ್ದು ಭೇಟಿ ದಿನವೇ ಈ ಎಲ್ಲಾ ರಾಜಕೀಯ ಘಟನೆಗಳ ಬ್ಲೂಪ್ರಿಂಟ್ ರೆಡಿಯಾಗಿತ್ತು ಎಂಬುದನ್ನು ನಾವು ತಕ್ಷಣವೇ ಗ್ರಹಿಸಬೇಕಾಗುತ್ತದೆ. ಇಲ್ಲದಿದ್ದರೆ ಸುದ್ದಿಯ ತುತ್ತ ತುದಿಯಲ್ಲಿ ಕುಳಿತು ವರದಿಗಾರ ಗಹಗಹಿಸಿ ನಗಲು ಸಾಧ್ಯವಿಲ್ಲ. ಘಟನೆಗಳ ರೀಡಿಂಗ್ ಕೆಪಾಸಿಟಿ ಇಲ್ಲದಿದ್ದರೆ ನಾಯಕರು ಹೇಳುವುದನ್ನು ಬರದುಕೊಂಡು, ಬೈಟ್ಹಿಡಿದುಕೊಂಡು ಬರಬೇಕಾಗುತ್ತದೆ. ಇದೊಂದು ಸೌಹಾರ್ದ ಭೇಟಿ, ಆರೋಗ್ಯ ವಿಚಾರಿಸಲು ಹೋಗಿದ್ದೆ, ಉಭಯಕುಶಲೋಪರಿ ಭೇಟಿ ಎಂದಷ್ಟೇ ನಾವು ಬರೆಯಬೇಕಾಗುತ್ತದೆ. ಬಹುಷ: ಇತ್ತೀಚೆಗೆ ನಡೆದ ಎರಡೂ ವಿಶ್ವಾಸಮತಯಾಚನೆಯ ಹಿಂದಿನ- ಮುಂದಿನ ಕಠಿಣವಾದ ರಾಜಕೀಯ ಪರಿಸ್ಥಿತಿ ಈ ಹಿಂದೆ ಎಂದೂ ರಾಜ್ಯ ಕಂಡಿರಲಿಲ್ಲ. ತುತರ್ು ಪರಿಸ್ಥಿತಿ ಬಿಟ್ಟರೆ ರಾಜಕೀಯ ವರದಿಗಾರರು ಎದುರಿಸಿದ ಅತ್ಯಂತ ಕಠಿಣ ರಾಜಕೀಯ ಘಟನೆಗಳು ಇವುಗಳೇ ಎಂದೆನಿಸುತ್ತದೆ ನನಗೆ. ಏಕೆಂದರೆ ಹಿಂದೆ ಹೀಗೆ ಮೂರು ಪಕ್ಷಗಳ ಸಮಾನ ಭರಾಟೆ ಇರಲಿಲ್ಲ. ಇಷ್ಟೊಂದು ಕ್ಷಿಪ್ರ ಗತಿಯ ರಾಜಕೀಯ ಬೆಳವಣಿಗೆಗಳು ನಡೆದಿರಲಿಲ್ಲ. ಇಷ್ಟೊಂದು ಅಸ್ಪಷ್ಟ ರಾಜಕೀಯ ಘಟನಾವಳಿಗಳು ನಡೆದಿರಲಿಲ್ಲ. ಇದಕ್ಕಿಂತ ಉಗ್ರ ಭಿನ್ನಮತದ ಘಟನೆಗಳು ಈ ಹಿಂದೆ ನಡೆದಿದ್ದವು. ಹಗರಣ, ಸಕರ್ಾರವನ್ನು ಬೀಳಿಸುವಂಥಹ ಪ್ರಕರಣಗಳು ನಡೆದಿದ್ದವು. ಆದರೆ ಇಷ್ಟೊಂದು ಅಸ್ಪಷ್ಟತೆ, ಪ್ರತಿ ನಿಮಿಷದ ಡೆವಲಪ್ಮೆಂಟ್ಗಳಿರಲಿಲ್ಲ. ಪ್ರತಿಯೊಬ್ಬ ಎಂಎಲ್ಎಗಳ ಮೇಲೆ ಎಲೆಕ್ಟ್ರಾನಿಕ್ ಮಾಧ್ಯಮ ಕಣ್ಣಿಡುವ ಪ್ರಸಂಗ ಒದಗಿ ಬಂದಿರಲಿಲ್ಲ ಎಂದೇ ಭಾವಿಸುತ್ತೇನೆ. ಗೋವಾದ ರೆಸಾಟರ್್ನಲ್ಲಿ ಬಂಡಾಯ ಶಾಸಕರು ತಂಗಿದ್ದ ಹೊಟೇಲ್ಗೆ ಜನಾರ್ದನರೆಡ್ಡಿ ಆಗಮಿಸಿದಾಗಲಂತೂ ಒಂದು ಸಿನೆಮಾದಂತೆಯೇ ರಾಜಕೀಯ ಘಟನೆಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಿತ್ತರಿಸಲಾಯಿತು. ಮುಂದುವರೆಯುವುದು…………………………

2 ಟಿಪ್ಪಣಿಗಳು


Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ನವೆಂಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಕ್ಟೋ   ಡಿಸೆ »
   123456
  78910111213
  14151617181920
  21222324252627
  282930  
 • ವಿಭಾಗಗಳು