78 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ಕೇವಲ 50 ಲಕ್ಷ ರುಪಾಯಿಗೆ ಮಾರಾಟ

ರಿಪೋರ್ಟರ್; ಎಂ. ಎನ್. ಚಂದ್ರೇಗೌಡ ಸ್ಲಗ್: ಕಾನ್ಕಾರ್ಡ ಡೇಟ್; 17-11-2010 ಬೆಂಗಳೂರು

ಆಂಕರ್: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸ್ವಜನ ಪಕ್ಷಪಾತದ ಒಂದೊಂದೇ ಪ್ರಕರಣಗಳು ಹೊರಬೀಳುತ್ತಿರುವಾಗಲೇ, ಅವರು ಉಪ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಬೆಂಗಳೂರಿನ ಕಾಡುಗೋಡಿ ಬಳಿ ಕಾನ್ಕಾರ್ಡ ಇಂಡಿಯಾ ಲಿಮಿಟೆಡ್ ಕಂಪನಿಗೆ ನಿಯಮಗಳನ್ನು ಗಾಳಿಗೆ ತೂರಿ 78 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ಕೇವಲ 50 ಲಕ್ಷ ರುಪಾಯಿಗೆ ಮಾರಾಟ ಮಾಡಿರುವ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿದೆ. ಸಕರ್ಾರದ ಏಕಗವಾಕ್ಷಿ ಸಮಿತಿಯಾಗಲಿ, ಉನ್ನತ ಮಟ್ಟದ ಸಮಿತಿಯಾಗಲಿ ಕಾನ್ಕಾಡರ್್ ಕಂಪನಿ ಯೋಜನೆಗೆ ಒಪ್ಪಿಗೆ ನೀಡುವ ಮುನ್ನವೇ ಸಕರ್ಾರ ಈ ಕಂಪನಿಗೆ ಭೂ ಮಂಜೂರಾತಿಗೆ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಆಗಿನ ಬೃಹತ್ ಕೈಗಾರಿಕಾ ಸಚಿವರು ಭಾಗಿಯಾಗಿರುವ ಸಾಧ್ಯತೆಯೇ ಹೆಚ್ಚಾಗಿದೆ.

 ಬೆಂಗಳೂರಿನ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಕಾನ್ಕಾರ್ಡ ಇಂಡಿಯಾ ಕಂಪನಿ, ಕಾಡುಗೊಡಿ ಬಳಿ 78 ಎಕರೆ ಭೂಮಿ ಬೇಕೆಂದು ಕೆಐಎಡಿಬಿಗೆ ಸಮ್ಮಿಶ್ರ ಸಕರ್ಾರ ಅಸ್ತಿತ್ವದಲ್ಲಿದ್ದಾಗ ಅಜರ್ಿ ಸಲ್ಲಿಸಿತ್ತು. ಆಗ ಕಟ್ಟಾ ಸುಬ್ರಮಣ್ಯನಾಯ್ಡು ಬೃಹತ್ ಕೈಗಾರಿಕಾ ಸಚಿವರಾಗಿದ್ದರು. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಬಿ. ಎಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಆಗ ಬೆಂಗಳೂರಿನ ಕಾಡುಗೋಡಿ ಕೈಗಾರಿಕಾ ಪ್ರದೇಶದಲ್ಲಿ ಪ್ರತಿ ಎಕರೆಗೆ ಕನಿಷ್ಠ 1 ಕೋಟಿ ರುಪಾಯಿ ಬೆಲೆ ಇತ್ತು. ಹೀಗಿದ್ದಾಗ್ಯೂ ಕಾನ್ಕಾಡ್ ಕಂಪನಿಗೆ ಪ್ರತಿ ಎಕರೆಗೆ ಕೇವಲ 50 ಲಕ್ಷ ರುಪಾಯಿ ಬೆಲೆಗೆ ಸುಮಾರು 78 ಎಕರೆ ಭೂಮಿಯನ್ನು ನೀಡುವಂತೆ ಕೆಐಎಡಿಬಿಗೆ ಸಕರ್ಾರ ಆದೇಶ ನೀಡಿದೆ. ಸಕರ್ಾರದ ಈ ಆದೇಶ 26. 05. 2007 ರಂದು ಹೊರಬಿದ್ದದೆ. ಆನಂತರ 27. 07. 2007 ರಂದು ಸಕರ್ಾರದ ಉನ್ನತ ಮಟ್ಟದ ಸಮಿತಿ ಕಾನ್ಕಾಡ್ ಇಂಡಿಯಾ ಕಂಪನಿಯ ಯೋಜನೆಗೆ ದಿನಾಂಕ 27. 07. 2010 ರಂದು ಮಂಜೂರಾತಿ ನೀಡಿದೆ. ಅಲ್ಲದೆ ಉನ್ನತ ಮಟ್ಟದ ಸಮಿತಿ ಆಗಿನ ಬೃಹತ್ ಕೈಗಾರಿಕಾ ಸಚಿವರ ಆದೇಶದ ಮೇರೆಗೆ ಭೂ ಮಂಜೂರಾತಿ ಮಾಡಿರುವುದಾಗಿ ದಾಖಲೆಗಳಲ್ಲಿ ನಮೂದಿಸಿದೆ. ಜಿತೇಂದ್ರ ವಿವರ್ಾನಿ ಹಾಗೂ ನರ್ಪತ್ ಸಿಂಗ್ ಚೋರಾರಿಯ ಒಡತನದ ಕಾನ್ಕಾಡರ್್ ಕಂಪನಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸಕರ್ಾರದ ಏಕಗವಾಕ್ಷಿ ಏಜೆನ್ಸಿ ಹಾಗೂ ಉನ್ನತ ಮಟ್ಟದ ಭೂಮಂಜೂರಾತಿ ಸಮಿತಿ ಅನುಮೋದನೆ ಪಡೆಯದೇ ತಾರಾತುರಿಯಲ್ಲಿ ಸಕರ್ಾರ ಭೂ ಮಂಜೂರಾತಿ ಆದೇಶ ಹೊರಡಿಸಿದ್ದೇಕೆ? ಈ ಕಂಪನಿಗೆ ಪ್ರತಿ ಎಕರೆಗೆ ಕೇವಲ 50 ಲಕ್ಷ ರುಪಾಯಿ ನಿಗದಿ ಪಡಿಸಿದವರ್ಯಾರು? ಕೆಐಎಡಿಬಿ ಭೂಮಂಜೂರಾತಿ ನಿಯಮಗಳನ್ನು ಗಾಳಿಗೆ ತೂರಿ ಆಗಿನ ಬೃಹತ್ ಕೈಗಾರಿಕಾ ಸಚಿವರು ಪ್ರತಿ ಎಕರೆಗೆ 50 ಲಕ್ಷ ದರ ನಿಗದಿಪಡಿಸಿದ್ದೇಕೆ ಎಂಬುದೇ ಈಗ ಸಾರ್ವಜನಿಕರ ಮುಂದಿರುವ ಪ್ರಶ್ನೆ. ಆಗಿನ ಮುಖ್ಯಮಂತ್ರಿಗಳ ಗಮನಕ್ಕೆ ತಾರದೇ ಈ ವ್ಯವಹಾರ ನಡೆದಿದ್ದು ಹೇಗೆ ಎಂಬುದೇ ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿದೆ.

–ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು.

 1. ಕಂಪನಿ ಹೆಸರು : ಕಾಣ್ಕಾಡರ್್ ಇಂಡಿಯಾ 2. ಮಾಲೀಕರ ಹೆಸರು: ಜಿತೇಂದ್ರ ವಿವರ್ಾನಿ ಹಾಗೂ ನರ್ಪತ್ಸಿಂಗ್ ಚೋರಾರಿಯಾ 3. ವಿಳಾಸ: ಎಂಬಸಿ ಪಾಯಿಂಟ್ ನಂ; 150, ಇನ್ಫ್ಯಾಂಟ್ರಿ ರಸ್ತೆ. 4. ಮಂಜೂರಾದ ಸ್ಥಳ: ಕಾಡುಗೋಡಿ, ಪ್ಲಾಟ್ ನಂ: 6. ಸವೇ ನಂ. 1, ಬ್ಲಾಕ್ ನಂ: 73, ಕಾಡುಗೋಡಿ ಪ್ಲಾಂಟೇಷನ್ ವಿಲೇಜ್, ಬಿದರಹಳ್ಳಿ ಹೋಬಳಿ, ಬೆಂಗಳೂರು ಪೂರ್ವ ತಾಲೂಕು. 5. 02. 04. 2007 ರಂದು ಅಜರ್ಿ ಸಲ್ಲಿಕೆ 6. 26. 05. 2007 ರಂದು 78 ಎಕರೆ ಭೂಮಿ ನೀಡಲು ಸಕರ್ಾರಿ ಆದೇಶ 7. 27. 07. 2007 ರಂದು ಉನ್ನತ ಮಟ್ಟದ ಸಮಿತಿಯಿಂದ ಈ ಯೋಜನೆಗೆ ಒಪ್ಪಿಗೆ 8. 1902. 57 ಕೋಟಿ ಬಂಡವಾಳ ಹೂಡಿಕೆ, ಐಟಿ/ ಐಟಿಇಎಸ್ ಗಾಗಿ ಎಸ್ಇಜೆಡ್ ನಿಮರ್ಾಣ. 9. 68 ಸಾವಿರ ಜನರಿಗೆ ಉದ್ಯೋಗ ಸೃಷ್ಟಿ 10. 07. 06. 2007 ರಲ್ಲಿ ಕಂಪನಿಗೆ ಲೀಸ್ ಕಮ್ ಸೇಲ್ ಡೀಡ್ ಮಾಡಿಕೊಡಲಾಗಿದೆ.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ನವೆಂಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಕ್ಟೋ   ಡಿಸೆ »
   123456
  78910111213
  14151617181920
  21222324252627
  282930  
 • ವಿಭಾಗಗಳು