ಜನಾರ್ದನ ರೆಡ್ಡಿ 2007-08 ನೇ ಸಾಲಿನಲ್ಲಿ 86 ಕೋಟಿ 42 ಲಕ್ಷ ರುಪಾಯಿ ತೆರಿಗೆ ವಂಚನೆ ಮಾಡಿದ್ದಾರೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಡೇಟ್: 27-12-3010 ಬೆಂಗಳೂರು ಆಂಕರ್: ಓಬಳಾಪುರಂ ಗಣಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ 2007-08 ನೇ ಸಾಲಿನಲ್ಲಿ 86 ಕೋಟಿ 42 ಲಕ್ಷ ರುಪಾಯಿ ತೆರಿಗೆ ವಂಚನೆ ಮಾಡಿದ್ದಾರೆಂದು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುವ ಸಲುವಾಗಿ ಸಿದ್ಧಪಡಿಸಿರುವ ಇಲಾಖೆಯ ಆಂತರಿಕ ವರದಿಯ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿವೆ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್ 1; ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡತನದ ಗಣಿ ಕಂಪನಿಗಳ ಮೇಲೆ ಕಳೆದ ಅಕ್ಟೋಬರ್ನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಓಬಳಾಪುರಂ ಮೈನ್ಸ್, ಅನಂತಪುರಂ ಮೈನಿಂಗ್ಕಾಪರ್ೊರೇಷನ್ ಸೇರಿದಂತೆ ರೆಡ್ಡಿಗಳ ಒಡತನ ಹಾಗೂ ಹಿಡಿತದಲ್ಲಿರುವ ಐದು ಕಂಪನಿಗಳ ಆಥರ್ಿಕ ವಹಿವಾಟುಗಳ ಬಗ್ಗೆ ವಶಪಡಿಸಿಕೊಂಡ ಕಾಗದ ಪತ್ರಗಳ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ತನಿಖೆ ಕೈಗೊಂಡಿತ್ತು. ತನಿಖೆ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಕಲೆ ಹಾಕಿರುವ ಮಾಹಿತಿ ಪ್ರಕಾರ, ಜನಾರ್ದನ ರೆಡ್ಡಿ ಒಡತನದ ಓಬಳಾಪುರಂ ಮೈನಿಂಗ್ ಕಾಪರ್ೊರೇಷನ್ 2007-08 ನೇ ಸಾಲಿನಲ್ಲಿ ಒಟ್ಟು 86 ಕೋಟಿ, 42 ಲಕ್ಷ ರುಪಾಯಿ ತೆರಿಗೆ ವಂಚನೆ ಮಾಡಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಸಿದ್ಧಪಡಿಸಿರುವ ಆಂತರಿಕ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿವೆ. (ಗ್ರಾಫಿಕ್ ಪಾಯಿಂಟ್ಸ್: 86 ಕೋಟಿ, 43 ಲಕ್ಷ ತೆರಿಗೆ ವಂಚನೆ, ಓಬಳಾಪುರಂ ಗಣಿ ಮಾಲೀಕ, ಸಚಿವ ಜನಾರ್ದನರೆಡ್ಡಿಯಿಂದ, ಆದಾಯ ತೆರಿಗೆ ಅಧಿಕಾರಿಗಳಿಂದ ಪತ್ತೆ) ದಾಖಲೆಗಳ ಪ್ರಕಾರ, ಸಿಂಗಾಪುರದ ಜಿಎಲ್ಎ ಟ್ರೇಡಿಂಗ್ ಇಂಟರ್ನ್ಯಾಷನಲ್ ಕಂಪನಿ ಜತೆ ಕಬ್ಬಿಣದ ಅದಿರು ಸರಬರಾಜು ಮಾಡುವ ಸಲುವಾಗಿ ಓಎಂಸಿ ಕಂಪನಿ ಜ್ಞಾಪನಾ ಪತ್ರಕ್ಕೆ ಸಹಿ ಹಾಕಿದೆ. ಬಳಿಕ ಜಿಎಲ್ಎಗೆ ಜನಾರ್ದನ ರೆಡ್ಡಿ ನಿದರ್ೇಶಕರಾಗಿ ನೇಮಕಗೊಂಡಿದ್ದಾರೆ. ಆನಂತರ ಓಎಂಸಿ ಕಂಪನಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಜಿಎಲ್ಎ ಕಂಪನಿಗೆ ಉತೃಷ್ಟ ಗುಣಮಟ್ಟದ ಕಬ್ಬಿಣದ ಅದಿರನ್ನು ರಫ್ತು ಮಾಡಿದೆ. ಈ ವ್ಯವಹಾರದಲ್ಲಿ ಕಡಿಮೆ ಇನ್ವಾಯ್ಸ್ ತೋರಿಸಿ ಅಪಾರ ಪ್ರಮಾಣದ ತೆರಿಗೆ ವಂಚಿಸಲಾಗಿದೆ. ಇದರ ಅಂದಾಜು ಸುಮಾರು 86 ಕೋಟಿ, 42 ಲಕ್ಷ ರುಪಾಯಿಗಳೆಂದು ದಾಖಲಿಸಲಾಗಿದೆ. ಆಂಧ್ರದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿರುವ ಈ ಸಂದರ್ಭದಲ್ಲಿಯೇ ಆದಾಯ ತೆರಿಗೆ ಇಲಾಖೆ ಓಬಳಾಪುರಂ ಗಣಿಯಿಂದ ತೆರಿಗೆ ವಂಚನೆ ಆಗಿರುವುದನ್ನು ಪತ್ತೆ ಹಚ್ಚಿದೆ. ಈ ಬೆಳವಣಿಗೆ ಸಚಿವ ಜನಾರ್ದನ ರೆಡ್ಡಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಜನಾರ್ದನ ರೆಡ್ಡಿ ಗಣಿ ವ್ಯವಹಾರಗಳು ಆಂಧ್ರದಲ್ಲೂ ಇರುವುದರಿಂದ ಯಾವುದೇ ಕ್ಷಣದಲ್ಲಿ ಸಿಬಿಐ ಅಧಿಕಾರಿಗಳು, ರೆಡ್ಡಿ ಅವರನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ಸಕರ್ಾರ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. –ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು.

Advertisements

High power committe meeting to be held on Monday to give away private and Govt land

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಎಂ.ಎನ್. ಚಂದ್ರೇಗೌಡ

 ಡೇಟ್; 25-12-2010

 ಬೆಂಗಳೂರು

 ಆಂಕರ್: ಕಳೆದ 15 ವರ್ಷದಿಂದ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗಿ ಕುಂಟುತ್ತಾ ತೆವಳುತ್ತಾ ಸಾಗುತ್ತಿರುವ ಬಿಎಂಐಸಿ ಯೋಜನೆ ಮತ್ತೆ ಸುದ್ದಿಯಲ್ಲಿದೆ. ಕಾರಣ ಈ ಯೋಜನೆಗೆ ಸಂಬಂಧಿಸಿದಂತೆ ಬರುವ ಸೋಮವಾರ ನಡೆಯಲಿರುವ ಉನ್ನತಾಧಿಕಾರ ಸಭೆ. ಫ್ರೇಮ್ವರ್ಕ ಹಾಗೂ ಓಡಿಪಿ ಅಲೈನ್ಮೆಂಟ್ನಲ್ಲಿ ಇಲ್ಲದ ಖಾಸಗಿ ಭೂಮಿಗಳನ್ನು ನೈಸ್ಗೆ ನೀಡಲು ಉನ್ನತಾಧಿಕಾರ ಸಮಿತಿ ತೀಮರ್ಾನ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ಇಡೀ ಸಭೆ ವಿವಾದದ ಕೇಂದ್ರ ಬಿಂದುವಾಗಿದೆ.

ಫ್ಯಾಕೇಜ್ ಫಾಲೋಸ್…………. ವಾಯ್ಸ್ ಓವರ್ 1: ನೈಸ್ ಸಂಸ್ಥೆ ಬೆಂಗಳೂರು ಸುತ್ತ ನಿಮರ್ಿಸುತ್ತಿರುವ ಪೆರಿಫೆರಲ್ ರಸ್ತೆ ಮೂಲ ಒಪ್ಪಂದದಂತೆ ಜಾರಿಯಾಗುತ್ತಿಲ್ಲ ಎಂದು ಈಗಾಗಲೇ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದಶರ್ಿಗಳು ಕೆಐಎಡಿಬಿಗೆ ಪತ್ರ ಬರೆದಿದ್ದಾರೆ. ಹೀಗಿದ್ದರೂ ಗೊಟ್ಟಿಗೆರೆ ಬಳಿಯ ಸವರ್ೇ ನಂ 104/2 ರ ಒಟ್ಟು 13 ಎಕರೆ 06 ಗುಂಟೆ ಖಾಸಗಿ ಜಮೀನೊಂದನ್ನು ವಶಕ್ಕೆ ತೆಗೆದುಕೊಳ್ಳಲು ನೈಸ್ ಸಂಸ್ಥೆ ಮುಂದಾಗಿರುವುದು ತೀವ್ರ ವಿವಾದಕ್ಕೆ ಗುರಿಯಾಗಿದೆ. ಏಕೆಂದರೆ ಈ ಭೂಮಿ ಫ್ರೇಮ್ವರ್ಕ ಹಾಗೂ ಓಡಿಪಿಯ ಎರಡೂ ಅಲೈನ್ಮೆಂಟ್ನಲ್ಲಿ ಇಲ್ಲಾ. ಈ ಸಂಬಂಧ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ 19-10-2010 ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ಫ್ಲೋ….: ಡಾಕ್ಯೂಮೆಂಟ್ ವಿಷುಯಲ್ಸ್….. ಸೊಮವಾರ ಉನ್ನತಾಧಿಕಾರ ಸಮಿತಿ ಮುಂದೆ ಬರಲಿರುವ ಇತರೆ ವಿಷಯಗಳ ವಿವರ ಇಂತಿದೆ. (ಗ್ರಾಫಿಕ್ ಪಾಯಿಂಟ್ಸ್) 1) ಪೆರಿಫೆರಲ್ ರಸ್ತೆ ಲಿಂಕ್ಗೆ ಅಗತ್ಯವಿರುವ ಭೂಮಿ ಹಸ್ತಾಂತರ 2) ಬಿಡದಿ ಬಳಿ ಟೌನ್ಷಿಪ್ಗಾಗಿ 1916 ಎಕರೆ ಭೂಮಿ ಹಸ್ತಾಂತರ 3) ಯೋಜನೆಯ ಎ, ಬಿ, ಸಿ ಸೆಕ್ಷನ್ನಲ್ಲಿ ಬಾಕಿ ಇರುವ ಸಕರ್ಾರಿ ಭೂಮಿ ಹಸ್ತಾಂತರಕ್ಕೆ ಕ್ರಮ 4) ಫ್ರೇಮ್ವರ್ಕ ಅಗ್ರಿಮೆಂಟ್ನಂತೆ ಒಟ್ಟು 14337 ಎಕರೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಿನಾಯ್ತಿ ಕೋರಿಕೆ 5) ರಾಮನಗರ ಹಾಗೂ ಮಂಡ್ಯ ಜಿಲ್ಲೆ ಜಮೀನುಗಳ ಭೂ ಸ್ವಾಧೀನಕ್ಕೆ ಕ್ರಮ 6) 1069 ಎಕರೆ ಖಾಸಗಿ ಭೂಮಿ ಹಾಗೂ 4976 ಎಕರೆ ಸಕರ್ಾರಿ ಭೂಮಿ ಕ್ರಯಕ್ಕೆ ಕ್ರಮ ಕಳೆದ ಬಾರಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರ ಸಮಿತಿ ಸಭೆ ರೈತರನ್ನು ಆಹ್ವಾನಿಸಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಬಾರಿ ಮುಖ್ಯಕಾರ್ಯದಶರ್ಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಗೂ ರೈತರನ್ನು ಆಹ್ವಾನಿಸಿಲ್ಲ. ಈಗಾಗಲೇ ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆ ವ್ಯಕ್ತಪಡಿಸಿರುವ ರೈತರು ಸೋಮವಾರದ ಸಭೆಯನ್ನು ಹೇಗೆ ಸ್ವೀಕರಿಸುತ್ತಾರೆ, ಖಾಸಗಿ ಹಾಗೂ ಸಕರ್ಾರಿ ಭೂಮಿಗಳನ್ನು ಕ್ರಯ ಮಾಡಿಕೊಡುವುದರ ಬಗ್ಗೆ ಹೇಗೆ ಪರತಿಕ್ರಿಯಿಸುತ್ತಾರೆ ಎಂಬುದು ಮಾತ್ರ ತೀವ್ರ ಕುತೂಹಲ ಮೂಡಿಸಿದೆ. –ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್, ಬೆಂಗಳೂರು.

ಪೊಲೀಸರ ಪ್ರಭಾವ, ಕೈತುಂಬಾ ಹಣ, ಜತೆಗೆ ಒಂದಿಷ್ಟು ರೌಡಿಗಳಿದ್ದರೆ ಬೆಂಗಳೂರಿನಲ್ಲಿ ಏನು ಬೇಕಾದರೂ ಮಾಡಬಹುದು

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಲ್ಯಾಂಡ್ ಗ್ರಾಬಿಂಗ್
ಡೇಟ್: 20-12-2010
ಬೆಂಗಳೂರು

ಆಂಕರ್: ಪೊಲೀಸರ ಪ್ರಭಾವ, ಕೈತುಂಬಾ ಹಣ, ಜತೆಗೆ ಒಂದಿಷ್ಟು ರೌಡಿಗಳಿದ್ದರೆ ಬೆಂಗಳೂರಿನಲ್ಲಿ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇಲ್ಲದೆ ನೋಡಿ ಉದಾಹರಣೆ. ಆಂಧ್ರ ಮೂಲದ ಕನ್ಯಾಕುಮಾರಿ ಬಿಲ್ಡರ್ಸ್ ಕಂಪನಿ ಬೆಂಗಳೂರಿನ ರೈತರೊಬ್ಬರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡು ಮಾಲೀಕರನ್ನು ಹೊರದಬ್ಬಿದೆ. ಇಷ್ಟೇ ಅಲ್ಲದೆ ಹೊರದಬ್ಬಿದ ರೈತರ ಪಕ್ಕದಲ್ಲಿದ್ದ ಸಕರ್ಾರಿ ಭೂಮಿಗೂ ಕಾಪೌಂಡ್ ಹಾಕಿ ಗುಳುಂ ಮಾಡಿದೆ. ಈ ಬಗ್ಗೆ ಪೊಲೀಸ್ ಕಮೀಷನರ್, ಆಗ್ನೇಯ ವಿಭಾಗದ ಡಿಸಿಪಿಯವರಿಗೆ ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಫ್ಯಾಕೇಜ್ ಫಾಲೋಸ್…………..

ವಾಯ್ಸ್ ಓವರ್: 

ಇದು ಕಾಡುಬೀಸನಹಳ್ಳಿ. ಬೆಂಗಳೂರು ಪೂರ್ವ ವತರ್ೂರು ಹೋಬಳಿಯಲ್ಲಿರುವ ಗ್ರಾಮ. ಈಗ ಹೆಚ್ಎಎಲ್ ಬಳಿಯ ರಿಂಗ್ ರಸ್ತೆಯಲ್ಲಿದೆ. ಇಲ್ಲೇನಿದ್ದರೂ ಸದ್ಯ ಚದರ ಅಡಿ ಭೂಮಿಗೆ 5 ರಿಂದ 6 ಸಾವಿರ ರುಪಾಯಿ ಬೆಲೆ ಬಾಳುತ್ತದೆ. ಹೀಗಿರುವಾಗ ಆಂಧ್ರ ಮೂಲದ ಕನ್ಯಾಕುಮಾರಿ ಬಿಲ್ಡರ್ಸ್ ಕಂಪನಿ ಅಗ್ರಹಾರದ ಟಿ. ನಾರಾಯಣ ಎಂಬುವರ 14: ಪಿ-6, 17 ಗುಂಟೆ ವಿಸ್ತೀರ್ಣದ ಜಮೀನನ್ನು ಖರೀದಿಸಲು 2003 ರಲ್ಲಿ 50 ಲಕ್ಷ ರುಪಾಯಿಗೆ ಒಪ್ಪಂದ ಮಾಡಿಕೊಳ್ಳುತ್ತದೆ.

(ಗ್ರಾಫಿಕ್ ಪಾಯಿಟ್ಸ್)
ಅ) ಕನ್ಯಾಕುಮಾರಿ ಬಿಲ್ಡರ್ಸ್: ಟಿ. ನಾರಾಯಣ ಜತೆ 17 ಗುಂಟೆ ಜಮೀನು ಖರೀದಿ ಒಪ್ಪಂದ.
ಬ) ಒಟ್ಟು 50 ಲಕ್ಷಕ್ಕೆ ವ್ಯಾಪಾರ ನಿಗದಿ.
ಚ) ಈ ಆಸ್ತಿಯ ನಂ. 14: ಪಿ- 6, ಈ ಜಾಗ ರಿಂಗ್ ರಸ್ತೆಯ ಮತ್ತೊಂದು ಬದಿಯಲ್ಲಿದೆ.

ವಾಯ್ಸ್ ಓವರ್: ಇದಾದ ಬಳಿಕ ಕನ್ಯಾಕುಮಾರಿ ಬಿಲ್ಡರ್ಸ್ನ ಮಾಲೀಕರು, ಟಿ. ನಾರಾಯಣ ಅವರ ಮತ್ತೊಂದು ಆಸ್ತಿ 14: ಪಿ-7, ಸುಮಾರು 17. 5 ಗುಂಟೆ ವಿಸ್ತೀರ್ಣ.  ಇದರ ಮೌಲ್ಯ ಅಂದಾಜು ಕನಿಷ್ಠ 10 ಕೋಟಿ ರುಪಾಯಿ. ಈ ಜಾಗ ಬಿಲ್ಡರ್ಸ್ಗಳ ಆಸ್ತಿ ಪಕ್ಕದಲ್ಲಿರುತ್ತದೆ. ಅದನ್ನು ವಶಪಡಿಸಿಕೊಂಡು ನೀನು ವ್ಯಾಪಾರದ ಒಪ್ಪಂದ ಮಾಡಿಕೊಂಡಿರುವುದು ಪಿ- 6 ಆದರೂ ಅದು ನಮ್ಮ ಕಂಪನಿ ಪಕ್ಕದಲ್ಲೇ ಇದೆ ಎಂದು ವಾದಿಸುತ್ತಾರೆ. ಆನಂತರ ಅಲ್ಲಿದ್ದ ಮನೆ ಒಡೆದು ಹಾಕಿ ಪಕ್ಕದಲ್ಲೇ ಇದ್ದ ಏಳು ಗುಂಟೆ ಅಂದಾಜು 4 ಕೊಟಿ ರುಪಾಯಿ ಬೆಲೆ ಬಾಳುವ ಸಕರ್ಾರಿ ಜಮೀನನ್ನೂ ಸೇರಿಸಿಕೊಂಡು ಕಾಪೌಂಡ್ ಹಾಕುತ್ತಾರೆ. ಇದನ್ನು ಪ್ರಶ್ನಿಸಲು ಹೋದ ಜಮೀನಿನ ಮಾಲೀಕ ಟಿ. ನಾರಾಯಣ ಅವರಿಗೆ 50 ಮಂದಿ ರೌಡಿಗಳ ತಂಡದಿಂದ ಧಮಕಿ ಹಾಕಿಸುತ್ತಾರೆ.
(ಗ್ರಾಫಿಕ್ ಪಾಯಿಂಟ್ಸ್)

ಅ) ಟಿ. ನಾರಾಯಣ ಅವರ ಮತ್ತೊಂದು ಆಸ್ತಿ 14: ಪಿ-7, ವಿಸ್ತೀರ್ಣ 17. 5 ಗುಂಟೆ, ಅಂದಾಜು ಈಗಿನ ಮೌಲ್ಯ 10 ಕೋಟಿ ರುಪಾಯಿ.
ಬ) ಸಕರ್ಾರಿ ಜಮೀನು 7 ಗುಂಟೆ ವಿಸ್ತೀರ್ಣ.
ಚ) ಟಿ. ನಾರಾಯಣಗೆ ರೌಡಿಗಳಿಂದ ಬೆದರಿಕೆ

ವಾಯ್ಸ್ ಓವರ್ 3: ತಮ್ಮ ಒಡತನದ 14: ಪಿ-7 ಆಸ್ತಿಯನ್ನು 14: ಪಿ-6 ಎಂದು ಹೇಳಿಕೊಂಡು ಭೂಮಿ ಲಪಟಾಯಿಸಿರುವುದನ್ನು ಪ್ರಶ್ನಿಸಿ ಟಿ. ನಾರಾಯಣ, ಕೋರ್ಟ ಮೆಟ್ಟಿಲು ಹತ್ತಿದ್ದಾರೆ. ಪೊಲೀಸ್ ಕಮೀಷನರ್ ಹಾಗೂ ಆಗ್ನೇಯ ಡಿಸಿಪಿ, ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕೇಳಿದ್ದಾರೆ. ಆದರೆ ಯಾರೂ ನಾರಾಯಣರಿಗೆ ನ್ಯಾಯ ಕೊಟ್ಟಿಲ್ಲ. ನಾರಾಯಣ ಮಾತ್ರ, ನ್ಯಾಯಕ್ಕಾಗಿ ಈಗ ಎಲ್ಲರ ಕೈಕಾಲು ಹಿಡಿಯುತ್ತಿದ್ದಾರೆ. ಸಕರ್ಾರಿ, ಜಮೀನು, ತನ್ನ ಆಸ್ತಿಗೆ ಲಗತ್ತಾಗಿರುವ ಜಮೀನನ್ನು ಕಬಳಿಸಿರುವ ಕನ್ಯಾಕುಮಾರಿ ಬಿಲ್ಡರ್ಸ್ನ ಮಾಲೀಕರು ಮಾತ್ರ ಗಹ್ಹಿಸಿ ನಗುತ್ತಿದ್ದಾರೆ.

–ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣೆ ಮಾಡುವ ದಂಧೆ

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ಛೇಂಜ್ ಆಫ್ ಲ್ಯಾಂಡ್ ಯೂಸ್
ಡೇಟ್: 18-12-1020
ಬೆಂಗಳೂರು

ಆಂಕರ್: ಬಿಜೆಪಿ ಸಕರ್ಾರ ಬರೀ ಡಿನೋಟಿಫಿಕೇಷನ್ ದಂಧೆಯನ್ನಷ್ಟೇ ಮಾಡುತ್ತಿಲ್ಲ. ಅದೀಗ ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣೆ ಮಾಡುವ ದಂಧೆಯನ್ನೂ ಆರಂಭಿಸಿದೆ. ಇದಕ್ಕೆ ಸಾಕ್ಷಿಯಾಗಿದೆ ಸಮಯ ನ್ಯೂಸ್ಗೆ ಸಿಕ್ಕಿರುವ ದಾಖಲೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಒಂದೇ ದಿನ ಸುಮಾರು 600 ಎಕರೆ ಕೃಷಿ ಭೂಮಿಯನ್ನು ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಬದಲಾವಣೆ ಮಾಡಿ ಸಕರ್ಾರ ಆದೇಶ ಹೊರಡಿಸಿದೆ.

ಫ್ಯಾಕೇಜ್ ಫಾಲೋಸ್………

ವಾಯ್ಸ್ ಓವರ್ 1:
ಬೆಂಗಳೂರು ಸುತ್ತಮುತ್ತ ಅದರಲ್ಲೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಸುಮಾರು 79, 200 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೋದ್ಯಮಿಗಳಾಗಲಿ, ಲ್ಯಾಂಡ್ ಡೆವಲಪರ್ಗಳಾಗಲಿ ನೇರವಾಗಿ ವ್ಯವಸಾಯಗಾರರಿಂದ ಖರೀದಿ ಮಾಡುವಂತಿಲ್ಲ. ಆದ್ದರಿಂದಲೇ ಬಿಐಎಪಿಪಿಎ ಬೆಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಯೊಂದನ್ನು ರೂಪಿಸಿ ವ್ಯವಸಾಯ ವಲಯ, ಹಸಿರು ವಲಯ, ವಸತಿ ವಲಯ, ವಾಣಿಜ್ಯ ವಲಯ, ಕೈಗಾರಿಕಾ ವಲಯ ಹೀಗೆ ಎಲ್ಲ ವಲಯಗನ್ನು ಗುರುತಿಸಿ ಕಾನೂನನ್ನೇ ಮಾಡಿದೆ. ಇದರಿಂದ ಬೆಂಗಳೂರು ಯೋಜಿತವಾಗಿ ಅಭಿವೃದ್ಧಿಯಾಗಬೇಕು ಎಂಬುದು ಇದರ ಹಿಂದಿನ ಉದ್ದೇಶ. ಆದರೆ ಈ ಉದ್ದೇಶ ಕೆಲವು ಕೈಗಾರಿಕೋದ್ಯಮಿಗಳಿಗೆ, ಲ್ಯಾಂಡ್ ಡೆವಲಪರ್ಸ್ಗಳಿಗೆ ನುಂಗಲಾರದ ತುತ್ತು. ಆದ್ದರಿಂದಲೇ ಅವರು ವ್ಯವಸಾಯಗಾರರಿಂದ ನೇರವಾಗಿ ಭೂಮಿ ಖರೀದಿಸಲಾಗದೇ ರೈತರಿಂದಲೇ ಅಜರ್ಿ ಹಾಕಿಸಿ ಅವರ ಭೂಮಿಯನ್ನು ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದಾರೆ. ಆನಂತರ ಅದನ್ನು ರೈತರಿಂದ ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಂಥಹ ಒಂದು ದೊಡ್ಡ ದಂಧೆ ಇತ್ತೀಚೆಗೆ ನಡೆದಿದ್ದು ಸಕರ್ಾರ ಒಂದೇ ದಿನ ಸುಮಾರು 600 ಎಕರೆ ಕೃಷಿ ಭೂಮಿಯನ್ನು ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾಯಿಸಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿ ಸಮಯ ನ್ಯೂಸ್ಗೆ ಲಭ್ಯವಾಗಿದೆ.
ಭೂ ಉಪಯೋಗ ಬದಲಾಗಿರುವ ಭೂಮಿಗಳ ವಿವರ ಇಂತಿದೆ: (ಗ್ರಾಫಿಕ್ ಪಾಯಿಂಟ್ಸ್)
1. ಬೆಂಗಳೂರು ಉತ್ತರ ತಾಲೂಕು ಜಾಲ ಹೋಬಳಿ ಸವರ್ೆ ನಂ. 7, 19 ರಲ್ಲಿ 7 ಎಕರೆ 06 ಗುಂಟೆ
2. ಹೆಸರಘಟ್ಟ ಹೋಬಳಿ: ಸವರ್ೇ ನಂ. 57/3, 57/5 ರಲ್ಲಿ 20 ಎಕರೆ 36.5 ಗುಂಟೆ
3. ದೇವನಹಳ್ಳಿ ತಾಲೂಕು ಕುಂದಾನ ಗ್ರಾಮ: ಸವರ್ೆ 128, 219/1, 2 ರಲ್ಲಿ 20 ಎಕರೆ 29 ಗುಂಟೆ
4. ಜಾಲ ಹೊಬಳಿ ಕುದರೆಗೆರೆ ಗ್ರಾಮ: ಸವರ್ೆ ನಂ 162/ ಪಿ 34 15 ಎಕರೆ 12 ಗುಂಟೆ ಹಾಗೂ ಸವರ್ೇ ನಂ. 49 ರಲ್ಲಿ 28 ಎಕರೆ 18. 5 ಗುಂಟೆ

ಇದು ಸ್ಯಾಂಪಲ್. ಇದಲ್ಲದೆ ಕುಂದಾಣ ಹೋಬಳಿ ಕಾಮೇನಹಳ್ಳಿ, ಹೆಸರಘಟ್ಟ ತಾಲೂಕು ಸಾದೇನಹಳ್ಳಿ, ದೇವನಹಳ್ಳಿ ತಾಲೂಕು ಸಾದೇನಹಳ್ಳಿ, ಜಾಲಹೋಬಳಿ ಪಾಪನಹಳ್ಳಿ, ತುರಹುಣಸೆ ಗ್ರಾಮ, ಕುದರೆಗೆರೆ ಗ್ರಾಮದಲ್ಲಿ ನೂರಾರು ಎಕರೆ ಭೂಮಿ ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣೆ ಆಗಿದೆ.

ಇದು ರೈತರ ಹೆಸರಿನಲ್ಲಿಯೇ ಭೂ ಬದಲಾವಣೆ ಆಗಿದ್ದರೂ ಆನಂತರ ಈ ಭೂಮಿಗಳು ಯಾರ ಪಾಲಾಗಿವೆ? ರೈತರು ಪ್ರತ್ಯೇಕವಾಗಿ 20 ಎಕರೆಗೂ ಹೆಚ್ಚು ಭೂ ಬದಲಾವಣೆ ಮಾಡಿಕೊಂಡು ಏನುಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕಿದೆ. ನಗರಾಭಿವೃದ್ಧಿ ಸಚಿವಾಲಯ, ಮುಖ್ಯಮಂತ್ರಿಗಳ ಸಚಿವಾಲಯ ಈ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

–ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು

ರೆಡ್ಡಿ ಬ್ರದರ್ಸ ದಿವ್ಯ ಮೌನದ ಹಿಂದೆ ಪಕ್ಷ ತೊರೆಯುವ ದೂರಾಲೋಚನೆ

ಆಂಕರ್: ರೆಡ್ಡಿ ಬ್ರದರ್ಸ ದಿವ್ಯ ಮೌನದ ಹಿಂದೆ ಪಕ್ಷ ತೊರೆಯುವ ದೂರಾಲೋಚನೆ ಇದ್ದು ಹೊಸ ವರ್ಷದಲ್ಲಿ ಬಿಜೆಪಿ ತೊರೆದು ಜೆಡಿಯು ಪಕ್ಷ ಸೇರುವರೆಂಬ ದಟ್ಟ ವದಂತಿ ಹಬ್ಬದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆ ಸತತ ಸಂಪರ್ಕದಲ್ಲಿರುವ ರೆಡ್ಡಿ ಬ್ರದರ್ಸ, ಜೆಡಿಯು ಸೇರುವ ಮೂಲಕ ಬಿಜೆಪಿ ಸಖ್ಯವನ್ನು ಉಳಿಸಿಕೊಂಡು ರಾಜ್ಯದಲ್ಲಿ ಕಿಂಗ್ಮೇಕರ್ಸ್ ಆಗಬೇಕೆಂಬ ಹೆಬ್ಬಯಕೆ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲವೆಂದು ರೆಡ್ಡಿ ಬಳಗ ಸ್ಪಷ್ಟಪಡಿಸಿದ್ದು ಇದರಿಂದ ಗೊಂದಲ ಮತ್ತಷ್ಟು ಹೆಚ್ಚಾಗಿದೆ. ಫ್ಯಾಕೇಜ್ ಫಾಲೋಸ್………. ವಾಯ್ಸ್ ಓವರ್: (ಗ್ರಾಫಿಕ್ ಪಾಯಿಂಟ್: ಜೆಡಿಯುನತ್ತ ರೆಡ್ಡಿ ಸಹೋದರರ ಚಿತ್ತ?) ಒಂದು ಕಡೆ ರಾಜ್ಯಪಾಲರ ಕಾಟ. ಮತ್ತೊಂದು ಕಡೆ ಆಂಧ್ರದಲ್ಲಿ ಸಿಬಿಐ ತನಿಖೆ ಗುಮ್ಮ. ಮತ್ತೊಂದು ಕಡೆ ಸಿಎಂ, ರಾಜ್ಯಾಧ್ಯಕ್ಷ ಈಶ್ವರಪ್ಪ ಸೇರಿದಂತೆ ಇಡೀ ಬಿಜೆಪಿ ಪಕ್ಷ ತಮ್ಮೊಂದಿಗಿಲ್ಲ ಎಂಬ ಭಾವ. ಹೀಗೆ ಎಲ್ಲಾ ಮಗ್ಗಲುಗಳಿಂದ ಹೊಡೆತ ತಿನ್ನುತ್ತಿರುವ ಬಳ್ಳಾರಿ ರೆಡ್ಡಿ ಸಹೋದರರಿಗೆ ಕನರ್ಾಟಕದ ಬಿಜೆಪಿಯಲ್ಲಿ ಬಹಳ ದಿನಗಳ ಕಾಲ ಹೀಗೆಯೇ ಮುಂದುವರೆಯಲು ಸಾಧ್ಯವಿಲ್ಲ ಎಂಬ ಭಾವನೆ ಬಂದಿದೆ ಎಂದು ಹೇಳಲಾಗುತ್ತಿದೆ. ಕಳೆದ ನವೆಂಬರ್ನಲ್ಲಿ ಹೈದ್ರಾಬಾದ್ನಲ್ಲಿ ನಡೆಸಿದ ಭಿನ್ನಮತೀಯ ಚಟುವಟಿಕೆ ಸಂದರ್ಭದಲ್ಲಿ ಸುಮಾರು 40 ಮಂದಿ ಬಿಜೆಪಿ ಶಾಸಕರು ಅವರೊಂದಿಗಿದ್ದರು. ಆನಂತರ ಅವರೆಲ್ಲಾ ದೂರವಾದರು. ಈಗ ಕರೆದರೂ ಕೈ ತುಂಬಾ ಕೊಡುತ್ತೇವೆ ಎಂದರೂ ಯಾರೂ ಅವರೆಡೆಗೆ ಧಾವಿಸುತ್ತಿಲ್ಲ. ಆ ಮಟ್ಟಿಗೆ ರೆಡ್ಡಿ ಸಹೋದರರೀಗ ಒಬ್ಬಂಟಿ. ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ತಮ್ಮ ವಿರುದ್ಧ ಪ್ರತಿಯೊಬ್ಬರೂ ದಾಳಿ ನಡೆಸುತ್ತಿದ್ದರೂ ಪಕ್ಷ ತುಟಿ ಪಿಟಿಕ್ ಎನ್ನುತ್ತಿಲ್ಲ. ಇದಕ್ಕೆ ಯಡಿಯೂರಪ್ಪ ಕಾರಣರೋ, ಅಧ್ಯಕ್ಷರು ಕಾರಣರೋ ಅಥವಾ ತಾವೇ ಭರವಸೆ ಶಾಸಕರಿಗೆ ಕೊಟ್ಟಿದ್ದ ಭರವಸೆಗಳನ್ನು ಸರಿಯಾಗಿ ಈಡೇರಿಸದೇ ವಿಶ್ವಾಸ ಕಳೆದುಕೊಂಡೆವೋ ಎಂಬ ಜಿಜ್ಞಾಸೆ ರೆಡ್ಡಿಗಳ ಮನಸ್ಸಿನಲ್ಲಿದೆ. ಈ ಗೊಂದಲಗಳಿಂದ ದೂರವಾಗಲು ತಾವು ಹೇಳಿದ್ದೇ ನಡೆಯುವ, ತಮಗೆ ಬೇಕಾದವರಿಗೆ ಎಲ್ಲವನ್ನೂ ನೀಡಲು ಅವಕಾಶವಿರುವ, ಯಾರ ಹಂಗೂ ಇರದಿರುವ ರಾಜಕೀಯ ವ್ಯವಸ್ಥೆ ಈಗ ಅವರಿಗೆ ಬೇಕಾಗಿದೆಯಂತೆ. ಹೊಸ ಪಕ್ಷ ಕಟ್ಟಿ ಅದು ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಲು ಅವರ ಬಳಿ ಈಗ ವ್ಯವಧಾನ ಇಲ್ಲಾ. ಆದ್ದರಿಂದಲೇ ಅವರು ಸಮತಾ ಪಕ್ಷದ ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ಕುಮಾರ್ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಜೆಡಿಯು ಸೇರಿಕೊಂಡರೆ ಆ ಪಕ್ಷದ ಬಲವರ್ಧನೆಯನ್ನೂ ಮಾಡಬಹುದು. ಚಿಹ್ನೆ ಮತ್ತೊಂದಕ್ಕೆ ಹೊಸ ಪ್ರಯತ್ನ ಮಾಡುವ ಅವಶ್ಯಕತೆ ಇಲ್ಲ. ಜತೆಗೆ ನಿತೀಶ್ ನೀತಿಯಂತೆ ಬಿಜೆಪಿ ಸಖ್ಯವನ್ನೂ ಉಳಿಸಿಕೊಳ್ಳಬಹುದು, ಸ್ವತಂತ್ರವಾಗಿ ಬದುಕಬಹುದು. ರೆಡ್ಡಿ ಬ್ರದರ್ಸ, ನಿತೀಶ್ ಕುಮಾರ್ ಸಂಪರ್ಕದಲ್ಲಿರುವುದನ್ನು ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ. ನಾಡಗೌಡರು ಖಚಿತಪಡಿಸಿದ್ದಾರೆ. ಜನವರಿ 7 ರ ನಂತರ ಈ ಎಲ್ಲಾ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. —ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು.

G category allocation, Former BDA commissioner wrote a letter to Govt long back

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಬಿಡಿಎ ಲೆಟರ್
ಡೇಟ್; 16-12-2010
ಬೆಂಗಳೂರು
ಆಂಕರ್: ಬಿಡಿಎ “ಜಿ” ಕ್ಯಾಟಗರಿ ಸೈಟ್ಗಳನ್ನು ಮನಸೋಇಚ್ಛೆ ಹಂಚಿಕೆ ಮಾಡಬಾರದೆಂದು ಹಿಂದಿನ ಬಿಡಿಎ ಆಯುಕ್ತರೇ ಪತ್ರ ಬರೆದು ಸಕರ್ಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಈ ಹಿಂದಿನ ಬಿಡಿಎ ಆಯುಕ್ತ ಸಿದ್ದಯ್ಯ ಸಕರ್ಾರಕ್ಕೆ ಬರೆದಿರುವ ಪತ್ರ ಸಮಯ ನ್ಯೂಸ್ಗೆ ಲಭ್ಯವಾಗಿದ್ದು ಇರುವುದು 27 ಸೈಟುಗಳು, ನೀವು 127 ಸೈಟುಗಳ ಹಂಚಿಕೆಗೆ ಆದೇಶ ಹೊರಡಿಸಿದರೆ ನಾವು ಹೇಗೆ ಕೆಲಸ ಮಾಡಬೇಕೆಂದು ಪ್ರಶ್ನಿಸಿದ್ದಾರೆ.

ಫ್ಯಾಕೇಜ್ ಫಾಲೋಸ್………

ವಾಯ್ಸ್ ಓವರ್ 1: ಬಿಡಿಎ ಸೈಟುಗಳಿಗೆ ಭಾರಿ ಡಿಮ್ಯಾಂಡೋ ಡಿಮ್ಯಾಂಡ್. ಆದ್ದರಿಂದಲೇ ಕುಮಾರ್ಬಂಗಾರಪ್ಪ ಕೇವಲ 8 ಲಕ್ಷಕ್ಕೆ ಖರೀದಿಸಿದ ಸೈಟ್ನ್ನು ಮೂರೇ ದಿನದಲ್ಲಿ 85ಲಕ್ಷಕ್ಕೆ ಮಾರಾಟವಾಗಿದ್ದು. ಆನಂತರ ಆ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಅದೇ ಸೈಟನ್ನು 1. 2 ಕೋಟಿ ರುಪಾಯಿಗಳಿಗೆ ಮಾರಾಟಮಾಡಿದ್ದು. ಇಂಥಹ ದುಡ್ಡು ತಂದು ಕೋಡುವ ಶಕ್ತಿ ಇರುವ ಜಿ ಕ್ಯಾಟಗರಿ ಸೈಟುಗಳು ಯಾರಿಗೆ ಬೇಡ ಹೇಳಿ. ಆದ್ದರಿಂದಲೇ ಮುಖ್ಯಮಂತ್ರಿಗಳು ತಮ್ಮ ಪುತ್ರ, ಅಳಿಯ, ತಂಗಿ, ಅವರ ಮಗ, ಸೊಸೆ ಹೀಗೆ ಬಂಧು ಬಳಗಕ್ಕೆ ಹಂಚಿಕೆ ಮಾಡಿರುವುದು.
ಹೀಗೆ ಹಂಚಿಕೆ ಮಾಡುವ ಭರದಲ್ಲಿ ಬಿಡಿಯೇ ಬಳಿ ಇದ್ದ ಜಿ ಕ್ಯಾಟಗರಿ 50/80 ಸುತ್ತಳತೆ 27 ನಿವೇಶನಗಳನ್ನು 105 ಮಂದಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಕುಪಿತರಾದ ಆಗಿನ ಬಿಡಿಎ ಆಯುಕ್ತ ಸಕರ್ಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಮನಸೋಇಚ್ಛೆ ಸೈಟು ಹಂಚಿದರೆ ಕೋರ್ಟಗಳಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ಬಹಳ ಹಿಂದೆಯೇ ಸಿದ್ದಯ್ಯ ಎಚ್ಚರಿಸಿದ್ದಾರೆ.
ಆಯುಕ್ತರ ಪ್ರಕಾರ 15. 09. 2008 ರಲ್ಲಿ ಲಭ್ಯವಿದ್ದ ಬಿಡಿಎ ಬಿಡಿ ನಿವೇಶನಗಳ ಸಂಖ್ಯೆ ಹೀಗಿದೆ.
ಗ್ರಾಫಿಕ್ ಪಾಯಿಂಟ್ಸ್:
20/10= 178
30/40= 282
40/60= 106
50/80 27
ಇತರೆ ಅಳತೆ: 07
ಒಟ್ಟು: 600.
ಓಟ್ಟು 600 ಎಲ್ಲಿ ಶೇ 30 ಅಂದರೆ 180 ಸೈಟುಗಳನ್ನು ಮಾತ್ರ ಹಂಚಿಕೆ ಮಾಡಬಹುದು. ಆದರೆ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ 118 ಸೈಟುಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಹೀಗೆ ಹಂಚಿಕೆ ಮಾಡುವ ಭರದಲ್ಲಿ ಇದ್ದ 50/80 ಅಳತೆಯ 27 ಸೈಟುಗಳನ್ನು 105 ಮಂದಿಗೆ ಹಂಚಿಕೆ ಮಾಡಿದ್ದಾರೆ.
ಅಧಿಕಾರಕ್ಕೆ ಬಂದ ಕೇವಲ ನಾಲ್ಕೇ ತಿಂಗಳಿಗೆ ಇಷ್ಟೊಂದು ಪ್ರಮಾಣದಲ್ಲಿ ಹಂಚಿಕೆ ಮಾಡುತ್ತಿರುವುದನ್ನು ಮನಗಂಡ ಆಯಕ್ತರು, ಸಕರ್ಾರ ನಿದೇಶನ ನೀಡಿರುವ ಎಲ್ಲಾ ಪ್ರಕರಣಗಳಲ್ಲಿ ನಿವೇಶನ ಹಂಚಿಕೆ ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ನೀವು ಆದೇಶ ಮಾಡುತ್ತೀರಿ ನಾವು ಹಂಚಲು ಸಾಧ್ಯವಾಗಿದ್ದರೆ ಫಲಾನುಭವಿಗಳು ಕೋರ್ಟಗೆ ಹೋಗುತ್ತಾರೆ. ಆದ್ದರಿಂದ ಈಗಾಗಲೇ ನಿವೇಶನ ಹಂಚಲು ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯಬೇಕೆಂದು ಸಿದ್ದಯ್ಯ ಆಗ್ರಹಿಸಿದ್ದಾರೆ. ಹೀಗೆ ಬಿಡಿಎ ಆಯುಕ್ತರೇ ಎಚ್ಚರಿಸಿದರೂ ಮುಖ್ಯಮಂತ್ರಿಗಳು ಮನಸೋಇಚ್ಛೆ ಬಿಡಿಎ ಬಿಡಿ ನಿವೇಶನಗಳನ್ನು ಹಂಚಿದ್ದೇಕೆ ಎಂಬುದೇ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ.
–ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು

ಹೈಪವರ್ ಕ್ಲಿಯೆರೆನ್ಸ್ ಕಮಿಟಿಯನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಈಗಿನ ಬೃಹತ್ ಕೈಗಾರಿಕಾ ಸಚಿವರು ಹಿಂದೆ ಬಿದ್ದಿಲ್ಲ

 

 ಆಂಕರ್: ಹೈಪವರ್ ಕ್ಲಿಯೆರೆನ್ಸ್ ಕಮಿಟಿಯನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಈಗಿನ ಬೃಹತ್ ಕೈಗಾರಿಕಾ ಸಚಿವರು ಹಿಂದೆ ಬಿದ್ದಿಲ್ಲ. ಸಮಯ ನ್ಯೂಸ್ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಹೈಫವರ್ ಕಮಿಟಿ ಅಧ್ಯಕ್ಷರೂ ಆಗಿರುವ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ತಮ್ಮ ಜಿಲ್ಲೆಯಲ್ಲಿ ಯಾವುದೇ ನೂತನ ಸಕ್ಕರೆ ಕಾಖರ್ಾನೆ ಆರಂಭಿಸಲು ಅವಕಾಶವನ್ನೇ ಕೊಡುವುದಿಲ್ಲ ಎಂಬ ಸುದ್ದಿಗಳು ಹೊರಬಿದ್ದವೆ. ಈ ಸಂಬಂಧ ಕಳೆದ ಹೈವಫರ್ ಕಮಿಟಿ ಸಭೆಯಲ್ಲಿ ಸಚಿವರು ಹಾಗೂ ಉದ್ಯಮಿಯೊಬ್ಬರ ನಡುವೆ ದೊಡ್ಡ ವಾಗ್ವಾದವೇ ನಡೆಯಿತೆಂದು ಮೂಲಗಳು ತಿಳಿಸಿವೆ.

 ವಾಯ್ಸ್ ಓವರ್ 1: ಸ್ವಂತ ಉದ್ದಿಮೆ, ವ್ಯವಹಾರಗಳನ್ನು ಹೊಂದಿರುವ ವ್ಯಕ್ತಿಗಳು ಸಂಪುಟದಲ್ಲಿದ್ದರೆ ಯಾವುದೇ ತೀಮರ್ಾನಗಳನ್ನು ಮುಕ್ತವಾಗಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸ್ವಹಿತಾಸಕ್ತಿಗಳ ತಾಕಲಾಟ ಇದಕ್ಕೆ ಕಾರಣ ಎಂದು ನಿಯಮಗಳು ಹೇಳುತ್ತವೆ. ಈಗಿನ ಬೃಹತ್ ಕೈಗಾರಿಕಾ ಸಚಿವರು ನಿರಾಣಿ ಸಿಮೆಂಟ್ಸ್, ನಿರಾಣಿ ಶುಗರ್ ಉದ್ದಿಮೆ ನಡೆಸುತ್ತಾರೆ. ಮತ್ತೊಂದು ಸಕ್ಕರೆ ಕಾಖರ್ಾನೆಯನ್ನು ಬಿಜಾಪುರದಲ್ಲಿ ಆರಂಭಿಸಲು ತಯಾರಿ ನಡೆಸಿದ್ದಾರೆ. ಹೀಗೆ ಉದ್ಯಮ ವಿಸ್ತರಣೆ ಅಜೆಂಡಾ ಹೊಂದಿರುವ ಸಚಿವರು, ಈಗ ಕೈಗಾರಿಕಾ ಇಲಾಖೆ ಹೈಫವರ್ ಕ್ಲಿಯೆರೆಸ್ಸ್ ಕಮಿಟಿಯ ಅಧ್ಯಕ್ಷರೂ ಹೌದು. ಕಳೆದ ಬಾರಿ ನಡೆದ ಹೈಫವರ್ ಕ್ಲಿಯೆರೆನ್ಸ್ ಕಮಿಟಿ ಸಭೆಯಲ್ಲಿ ಬಿಜಾಪುರ ತಾಲೂಕಿನ ಸಂಗಾಪುರ ಗ್ರಾಮದ ಸವರ್ೆ ನಂ 349/ 3, 385/2 ಹಾಗೂ 370 ರಲ್ಲಿ 2500 ಟಿಸಿಡಿ ಸಾಮಥ್ರ್ಯದ ಸಕ್ಕರೆ ಕಾಖರ್ಾನೆ ಹಾಗೂ 15 ಮೆಗಾವ್ಯಾಟ್ ಸಾಮಥ್ರ್ಯದ ಕೋಜನರೇಷನ್ ಫ್ಲಾಂಟ್ ಆರಂಭಿಸಲು ಬೆಳಗಾವಿಯ ಸೋಮೇಶ್ವರ ಷುಗರ್ಸ್ ಕಾಖರ್ಾನೆಯವರು ಅಜರ್ಿ ಸಲ್ಲಿಸಿದ್ದರು. ಹೈಫವರ್ ಕಮಿಟಿ ಅಧ್ಯಕ್ಷರಾರುವ ಸಚಿವರು, ಈ ಯೋಜನೆಗೆ ತೀವ್ರ ಪ್ರತಿರೋಧ ತೋರಿದರೆಂದು ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಸೋಮೇಶ್ವರ ಕಾಖರ್ಾನೆ ಮಾಲೀಕರಿಗೂ, ಸಚಿವರಿಗೂ ಮಾತಿನ ಚಕಮಕಿ ನಡೆಯಿತೆಂದು ಹೇಳಲಾಗಿದೆ. ಇದೇ ಸಭೆಯಲ್ಲಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನಲ್ಲಿ ರೈತರ ಅನುಮತಿ ಪಡೆಯದೇ ಸಚಿವರ ಒಡೆತನದ ನಿರಾಣಿ ಸಿಮೆಂಟ್ಸ್ನ ಕೈಗಾರಿಕೆ ಹಾಗೂ ಮೈನಿಂಗ್ ಪ್ರದೇಶ್ಕಕೆ ನೂರಾರು ಎಕರೆ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳಲು ತೀಮರ್ಾನಿಸಲಾಯಿತೆಂದು ಹೇಳಲಾಗಿದೆ. ಈ ಬಗ್ಗೆ ಸಮಯ ನ್ಯೂಸ್ಗೆ ದಾಖಲೆಗಳು ಲಭ್ಯವಾಗಿವೆ. .. —ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್, ಬೆಂಗಳೂರು

 • ಪುಟಗಳು

 • Flickr Photos

 • ಡಿಸೆಂಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ನವೆಂ   ಜನ »
   1234
  567891011
  12131415161718
  19202122232425
  262728293031  
 • ವಿಭಾಗಗಳು